Saturday, August 8, 2026
Saturday, August 8, 2026
Home Blog Page 143

Bharat Scouts and Guides ಹೃದಯ ಕ್ರಿಯೆ ನಿಂತಾಕ್ಷಣ ಸಿಪಿಆರ್ ಮಾಡುವ ಕ್ರಮಗಳ ಬಗ್ಗೆ ಎಲ್ಲರಲ್ಲೂ ಅರಿವಿರಲಿ- ಡಾ.ಬಿ.ವಿ.ಚಂಪಾ

0

Bharat Scouts and Guides ಹೃದಯ ಮತ್ತು ಉಸಿರಾಟ ನಿಲ್ಲಿಸಿದಾಗ ತಕ್ಷಣ ನೀಡುವ ತುರ್ತು ಚಿಕಿತ್ಸೆ ಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್ ( ಸಿಪಿಆರ್ ) ಆಗಿದೆ. ಇದು ವ್ಯಕ್ತಿಯ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಸಿಮ್ಸ್ ಶಿವಮೊಗ್ಗ ಅರಿವಳಿಕೆ ವಿಭಾಗ ಮುಖ್ಯಸ್ಥೆ, ಪ್ರಾಧ್ಯಾಪಕಿ ಡಾ. ಬಿ.ವಿ.ಚಂಪಾ ಹೇಳಿದರು.

ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿ ಪ್ರತಿಕ್ರಿಯಿಸದಿದ್ದರೆ, ಉಸಿರಾಟ ಇಲ್ಲದಿದ್ದರೆ, ಹೃದಯ ಬಡಿತ ಕಾಣದಿದ್ದರೆ ಸಿಪಿಆರ್ ಮಾಡಬೇಕು. ಮೊದಲು ವ್ಯಕ್ತಿಯನ್ನು ಸಮತಟ್ಟಾದ ಸ್ಥಳದಲ್ಲಿ ಮಲಗಿಸಬೇಕು. ಎದೆ ಮಧ್ಯದಲ್ಲಿ ಕೈಗಳನ್ನು ಇಟ್ಟು ಒತ್ತಡ ನೀಡಬೇಕು. ನಿಮಿಷಕ್ಕೆ 100–120 ಬಾರಿ ಒತ್ತಡ ಹಾಕಬೇಕು. ಒತ್ತಡದ ಆಳ 5–6 ಸೆಂ.ಮೀ ಇರಬೇಕು. 30 ಚೆಸ್ಟ್ ಕಂಪ್ರೆಸನ್, 2 ಬಾರಿ ರೆಸ್ಕೂö್ಯ ಬ್ರಿಥ್ ಟೇಕ್ ಮಾಡಬೇಕು. ಆಂಬುಲೆನ್ಸ್ ಬರುವವರೆಗೆ ಮುಂದುವರಿಸಬೇಕು. ತಕ್ಷಣ ಸಿಪಿಆರ್ ಪ್ರಾರಂಭಿಸಿದರೆ ಜೀವ ಉಳಿಯುವ ಸಾಧ್ಯತೆ ಹೆಚ್ಚು. ಎಂದು ತಿಳಿಸಿದರು.

ಸಹ ಪ್ರಾಧ್ಯಾಪಕಿ ಡಾ ಯಶೋಧ ವಿ, ಶಿಕಾರಿಪುರ ತಾಲೂಕು ಅರಿವಳಿಕೆ ತಜ್ಞ ಡಾ ವಿನಯ್, ಡಾ ತೇಜಸ್, ಡಾ ಅಭಿಷೇಕ್, ಶುಶ್ರೂಷಾಧಿಕಾರಿ ಗಣೇಶ್ , ಸಿಬ್ಬಂದಿ ವರ್ಗ, ದರ್ಶನ್ ಹಾಗೂ ಸಚಿನ್ ಹಾಜರಿದ್ದರು

Bharat Scouts and Guides ಸಂಯೋಜಕ ರಾಜೇಶ್ ವಿ ಅವಲಕ್ಕಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ ವಂದಿಸಿದರು. ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್, ಸಹಾಯಕ ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ ಕಾನೂರ್, ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಹಿರಿಯ ಗೈಡರ್ ಶಾಂತಮ್ಮ, ಹಿರಿಯ ಸ್ಕೌಟರ್ ರುದ್ರಪ್ಪ ಚೀಲೂರ್, ಎನ್. ಡಿ. ಆರ್. ಎಫ್. ತಂಡದ ಮುಖ್ಯಸ್ಥ ವಿವೇಕ್ ಮತ್ತು ಇತರೆ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ 162 ವಿದ್ಯಾರ್ಥಿಗಳು ಭಾಗವಹಿಸಿದ್ದರು.

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

0

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ, ಎಸ್. ವಿ. ಬಡಾವಣೆ, ಮೆಸ್ಕಾಂ ಕಛೇರಿಯಲ್ಲಿ ಏಪ್ರಿಲ್- 07 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.

MESCOM ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9480841339.

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

0

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ ಶವ ಪತ್ತೆಯಾಗಿದೆ. ಆತನ ಚಹರೆ 5.3 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋದಿ ಮೈಬಣ್ಣ, ದುಂಡುಮುಖ ಹೊಂದಿದ್ದು, ಮೈಮೇಲೆ ಬಟ್ಟೆಗಳಿರುವುದಿಲ್ಲ.

ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Sharada Pooryanayak ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞವೈದ್ಯರ ವರ್ಗಾವಣೆ ಅವೈಜ್ಞಾನಿಕ- ಶಾಸಕಿ ಶಾರದಾ ಪೂರ್ಯಾನಾಯಕ್

0

Sharada Pooryanayak ಶಿವಮೊಗ್ಗ ತಾಲೂಕು ಹೊಳಲೂರು, ಆಯನೂರು ಹಾಗೂ ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರನ್ನು ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿದ್ದು ಇದನ್ನ ಖಂಡಿಸಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ವತಿಯಿಂದ ಇಂದು ಶಿವಮೊಗ್ಗ ಜಿಲ್ಲಾ ಡಿಸಿ ಕಚೇರಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ಹಾಗೂ ಕಾರ್ಯನಿರ್ವಹಿಸುತ್ತಿದ್ದ ವೈದ್ಯರನ್ನು ಮರು ನಿಯೋಜನೆ ಮಾಡುವಂತೆ ಮನವಿ ಪತ್ರವನ್ನು ಡಿಸಿ ಅವರಿಗೆ ಜೆಡಿಎಸ್ ಪಕ್ಷದ ಮುಖಂಡರ ಸಮ್ಮುಖದಲ್ಲಿ ನೀಡಲಾಯಿತು.

Sharada Pooryanayak ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಾಮಕೃಷ್ಣರವರು, ಜೆಡಿಎಸ್ ಗ್ರಾಮಾಂತರದ ಅಧ್ಯಕ್ಷರಾದ ಕಾಸೆಟ್ಟಿ ಸತೀಶ್ ರವರು,ಜೆಡಿಎಸ್ ಗ್ರಾಮಾಂತರದ ಕಾರ್ಯಾಧ್ಯಕ್ಷರಾದ ಸೋಮಿನಕೊಪ್ಪ ಕಾಂತರಾಜ್ ಅವರು ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Priyank Kharge ಕುಡಿಯುವ ನೀರಿನ ತುರ್ತು ಕಮಗಾರಿಗೆ ಎಲ್ಲ ಜಿಲ್ಲೆಗಳಿಗೆ ₹60 ಕೋಟಿ ಹಂಚಿಕೆ- ಪ್ರಿಯಾಂಕ್ ಖರ್ಗೆ.

0

Priyank Kharge ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ನಮ್ಮ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

◆ ರಾಜ್ಯದ 20 ಜಿಲ್ಲೆಗಳ 60 ತಾಲ್ಲೂಕುಗಳಲ್ಲಿನ 324 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಇವುಗಳ ಪೈಕಿ 76 ಗ್ರಾಮಗಳಿಗೆ 76 ಟ್ಯಾಂಕರ್‌ಗಳ ಮುಖಾಂತರ ಹಾಗೂ 248 ಗ್ರಾಮಗಳಿಗೆ 280 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ.

◆ ತುರ್ತು ಕಾಮಗಾರಿಗಳನ್ನು ನಿರ್ವಹಿಸಲು ಈಗಾಗಲೇ 60 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ, ಮಾರ್ಚ್ 2026ರಲ್ಲಿ ಟಾಸ್ಕ್ ಫೋರ್ಸಿನಡಿ ಮುಂದುವರೆದ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಹೆಚ್ಚುವರಿಯಾಗಿ 48 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ 14.50 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.

◆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ನಿರಾತಂಕವಾಗಿರಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿಗಳ ಸಿಇಒಗಳು ಸೇರಿದಂತೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳು ನಿರಂತರವಾಗಿ ನಿಗಾ ಇರಿಸಿದ್ದು ಪರಿಶೀಲನ ಸಭೆಗಳನ್ನು ನಡೆಸುತ್ತಿದ್ದಾರೆ, ಆದ್ಯತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಮೀಣ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

◆ ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಲ್ಲಿನ ಎಲ್ಲಾ ಕುಡಿಯುವ ನೀರಿನ ಮೂಲಗಳ ಸಂಭಾವ್ಯ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಗುಣಮಟ್ಟದಲ್ಲಿ ಅನುಮಾನ ಕಂಡುಬಂದ ನೀರಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಮರುಪರೀಕ್ಷೆಗೆ ಒಳಪಡಿಸಿ ಗುಣಮಟ್ಟವನ್ನು ಖಚಿತಪಡಿಸಿಕೊಂಡು ಕಲುಷಿತ ನೀರಿಗೆ ಪರ್ಯಾಯವಾಗಿ ಇತರೆ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Priyank Kharge ◆ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಜಲಮೂಲಗಳು ಬತ್ತಿಹೋಗುವುದರಿಂದ ಹಾಗೂ ಕೊಳವೆ ಬಾವಿಗಳ ಇಳುವರಿ ಕಡಿಮೆಯಾಗುತ್ತಿರುವುದರಿಂದ ಕೆಲವೊಂದು ಜನವಸತಿ ಪ್ರದೇಶಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ತುರ್ತಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ.

◆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯುವುದು
◆ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡುವುದು
◆ ಕೊಳವೆ ಬಾವಿಗಳನ್ನು ಫ್ಲಶಿಂಗ್‌ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಲಭ್ಯತೆ ಖಾತರಿಪಡಿಸಿಕೊಳ್ಳುವುದು
◆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೊಳವೆಬಾವಿಗಳನ್ನು ಕೊರೆಯುವುದು
◆ ಪ್ರತಿ 2ನೇ ಹಾಗೂ 4ನೇ ಸೋಮವಾರದಂದು ಪಿಡಿಒಗಳೊಂದಿಗೆ ಜಿ.ಪಂ ಸಿಇಒಗಳು ಕುಡಿಯುವ ನೀರಿನ ಕುರಿತು ಸಭೆ
◆ 24/7 ಕಂಟ್ರೋಲ್‌ ರೂಮ್‌ ಮತ್ತು ಕ್ಷಿಪ್ರ ಕಾರ್ಯಪಡೆ ರಚನೆ
ಇವು ನಮ್ಮ ಇಲಾಖೆ ಕೈಗೊಂಡಿರುವ ತುರ್ತು ಕ್ರಮಗಳು.

Babu Jagjivanram ಆಹಾರ ಸ್ವಾವಲಂಬನೆಯತ್ತ ದೇಶ ಮುನ್ನಡೆಸಿದ ಬಾಬು ಜಗಜೀವನರಾಂ ಕೊಡುಗೆ ಸ್ಮರಣೀಯ- ಬಿ.ವೈ.ರಾಘವೇಂದ್ರ.

0

Babu Jagjivanram  ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್‌ ರಾಮ್‌ ಅವರ ಜನ್ಮದಿನದ ಸ್ಮರಣೆಗಳು.

ಭಾರತದ ಹಸಿರು ಕ್ರಾಂತಿಯ ಹರಿಕಾರರಾಗಿ ದೇಶವನ್ನು ಆಹಾರ ಸ್ವಾವಲಂಬನೆಯತ್ತ ಮುನ್ನಡೆಸಿದ ಇವರ ಸಾಧನೆ ಸದಾ ಸ್ಮರಣೀಯ.

Babu Jagjivanram  ಸಾಮಾಜಿಕ ಸಮಾನತೆ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಇವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪ.

ಶಿವಮೊಗ್ಗದಲ್ಲಿ ವಿಶಿಷ್ಟವಾಗಿ ನಡೆದ ವಿದ್ಯಾ ಸಂಗಮ

0

ನ್ಯೂಸ್ 18 ನೆಟ್ ವರ್ಕ್ ಮತ್ತು Ad6 advertising ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 4ರ ಶನಿವಾರದಂದು ಶಿವಮೊಗ್ಗದ ಪೊಲೀಸ್ ಸಭಾಭವನದಲ್ಲಿ ನಡೆದ ವಿದ್ಯಾ ಸಂಗಮ ಕಾರ್ಯಕ್ರಮದಲ್ಲಿ ಎಂಡಿಎಫ್ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ರಾಜ್ಯದ ನಾನಾ ಭಾಗಗಳಿಂದ ಸುಮಾರು 35ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ವಿವಿಧ ಪದವಿಗಳ , ಉನ್ನತ ಶಿಕ್ಷಣದ ಸಂಸ್ಥೆಗಳು ಪ್ರತಿನಿಧಿಗಳು ಭಾಗವಹಿಸಿ ಸ್ನಾತಕೋತ್ತರ ಪದವಿ ಶಿಕ್ಷಣದ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸಿಇಟಿ ಮಾಕ್ ಟೆಸ್ಟ್ ನಡೆಸಲಾಯಿತು. ಎಲ್ ಬಿ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಹಾಲಿ ಎಂ ಡಿ ಎಫ್ ನಿರ್ದೇಶಕರಾಗಿರುವ ನ್ಯೂಸ್ 18 ನೆಟ್ವರ್ಕ್ ನ ಎಡಿಟೋರಿಯಲ್ ಚೀಫ್ ದಕ್ಷಿಣ ಭಾರತದ ಮುಖ್ಯಸ್ಥ ಡಿ.ಪಿ.ಸತೀಶ್ , ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ಎಚ್ ಎಮ್ ಶಿವಕುಮಾರ್ ಹಾಗೂ ಇತರ ಪದಾಧಿಕಾರಿಗಳು ಮತ್ತು ಕಾಲೇಜಿನ ಪ್ರಾಚಾರ್ಯರಾದ ಡಾ ಜಗದೀಶ್ ಎಂ ಭಂಡಾರಿ ಅವರುಗಳ ಮಾರ್ಗದರ್ಶನದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನ್ಯೂ ಸ್ 18 ಜಿಲ್ಲಾ ವರದಿಗಾರ ವಿನಯ್ ಪುರದಾಳು ಉಪನ್ಯಾಸಕ ವರ್ಗದ ಶ್ರೀಮತಿ ರೇಖಾ ಜಿ, ಕುಮಾರಿ ಶಾರಿಕಾ ಮತ್ತು ಅನುಷಾ ಭಾಗವಹಿಸಿದ್ದರು.

2026 ನೆ ವಾರ್ಷಿಕ ” ಡಾ.ಬಾಬು ಜಗಜೀವನ ರಾಂ ಪ್ರಶಸ್ತಿ ಘೋಷಣೆ. ಐವರು ಸಾಧಕರಿಗೆ ಗೌರವ

0

ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆ ಯ ಸುಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನ ರಾಮ್ ಪ್ರಶಸ್ತಿಯನ್ನು ಘೋಷಿಸಿದೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಮತ್ತು ಕಲೆ, ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಐವರು ಗಣ್ಯರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಚಿಸಲಾಗಿದ್ದ ಉನ್ನತ ಮಟ್ಟದ ಆಯ್ಕೆ ಸಮಿತಿಯು ಶಿಫಾರಸು ಮಾಡಿದ ಅರ್ಹ ಸಾಧಕರ ಪಟ್ಟಿಗೆ ಸರ್ಕಾರವು ಅನುಮೋದನೆ ನೀಡಿ 2026 ನೇ ಮಾರ್ಚ್ 31 ರಂದು ಆದೇಶ ಹೊರಡಿಸಿದೆ.

ಪ್ರಶಸ್ತಿ ಪುರಸ್ಕøತರಿಗೆ ತಲಾ ರೂ. 5.00 ಲಕ್ಷ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.

ಪ್ರಶಸ್ತಿ ಪುರಸ್ಕøತರ ವಿವರ:

ಶ್ರೀಮತಿ ಚಂದ್ರಮ್ಮ (ಬೆಂಗಳೂರು ಕೇಂದ್ರ):

ಬೆಂಗಳೂರಿನ ಭುವನೇಶ್ವರಿ ನಗರದ ನಿವಾಸಿಯಾದ ಇವರು, ಸಂಘಟನೆ, ಸಾಮಾಜಿಕ ಹೋರಾಟ ಹಾಗೂ ಭೂ ಆಂದೋಲನ ಕ್ಷೇತ್ರಗಳಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಶ್ರೀ ಡಿಂಗ್ರಿ ನರಸಪ್ಪ (ಕಲಬುರಗಿ ವಿಭಾಗ):

ರಾಯಚೂರು ಜಿಲ್ಲೆಯ ಆಶಾಪುರ ನಿವಾಸಿಯಾದ ಇವರು, ಜಾನಪದ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಕೊಡುಗೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶ್ರೀ ಸರಜೂ ಕಾಟ್ಕರ್ (ಬೆಳಗಾವಿ ವಿಭಾಗ) :

ಬೆಳಗಾವಿಯ ಮಹಾಂತೇಶನಗರದ ನಿವಾಸಿಯಾದ ಇವರು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸಾಧಕರಾಗಿದ್ದಾರೆ.

ಶ್ರೀ ನಾರಾಯಣ (ಮೈಸೂರು ವಿಭಾಗ) :

ಮೈಸೂರಿನ ಮಾಜಿ ಮೇಯರ್ ಆಗಿರುವ ಇವರು, ಆಡಳಿತ ಮತ್ತು ಸಮಾಜ ಸೇವೆಯಲ್ಲಿನ ತಮ್ಮ ದಕ್ಷ ಹಾಗೂ ಜನಪರ ಕಾರ್ಯಗಳಿಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀ ನರಸೀಯಪ್ಪ (ಬೆಂಗಳೂರು ವಿಭಾಗ) :

ತುಮಕೂರಿನ ಮಾಜಿ ನಗರಸಭೆ ಸದಸ್ಯರಾದ ಇವರು, ಜನಸಾಮಾನ್ಯರ ಪರವಾದ ಹೋರಾಟ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಆಯ್ಕೆಯಾಗಿದ್ದಾರೆ.

ಸಮಾರಂಭದ ವಿವರ:

ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನವಾದ ಏಪ್ರಿಲ್ 05, 2026 ರಂದು ಬೆಂಗಳೂರಿನ ವಿಧಾನಸೌಧ ಪೂರ್ವ ದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗುವ ವಿಶೇಷ ಕಾರ್ಯಕ್ರಮದಲ್ಲಿ ಈ ಎಲ್ಲಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N. Channabasappa ನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗಬಾರದು- ಎಸ್.ಎನ್.ಚನ್ನಬಸಪ್ಪ

0

S.N. Channabasappa ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ: ನೀರು ಸರಬರಾಜು ವ್ಯತ್ಯಯ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ.

“ನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗಬಾರದು. ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಮಸ್ಯೆ ಬಗೆಹರಿಸಬೇಕು,” ಎಂದು ನಿರ್ದೇಶಿಸಿದರು.

ಶಾಸಕರ ಸೂಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಧಿಕಾರಿಗಳು, ಮುಂದಿನ ಎರಡು ದಿನಗಳಲ್ಲಿ ನೀರು ಸರಬರಾಜಿನಲ್ಲಿ ಉಂಟಾಗಿರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ.

S.N. Channabasappa ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಪ್ರಭಾಕರ್ ಪಿ, ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.

ಎಲೆಕ್ಟ್ರಿಕ್ ವಾಹನಗಳ ಮೇಲೆ ವಿಧಿಸಿರುವ ತೆರಿಗೆಗೆ ವಿನಾಯಿತಿ ನೀಡದಿದ್ದರೆ ತೀವ್ರ ಪ್ರತಿಭಟನಾ ಕ್ರಮ- ಎನ್.ಕೆ.ಜಗದೀಶ್

0

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿಧಿಸಿರುವ ಸರ್ಕಾರದ ಕ್ರಮವನ್ನು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್.ಕೆ ತೀವ್ರವಾಗಿ ಖಂಡಿಸಿದ್ದಾರೆ.

ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕಾದ ಸಮಯದಲ್ಲಿ ಸರ್ಕಾರವೇ ಅವುಗಳ ಮೇಲೆ ಹೆಚ್ಚುವರಿ ತೆರಿಗೆ ಭಾರ ಹಾಕುತ್ತಿರುವುದು ದುಃಖಕರ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ. ಶುದ್ಧ ಇಂಧನದ ಬಳಕೆಯನ್ನು ಪ್ರೋತ್ಸಾಹಿಸಬೇಕಾದ ಸಂದರ್ಭದಲ್ಲಿ ಇಂತಹ ಕ್ರಮಗಳು ರಾಜ್ಯದ ಪರಿಸರ ನೀತಿಗೆ ಹಿನ್ನಡೆಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ತಾಳಲಾಗದೆ ತೆರಿಗೆಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, “ಗ್ಯಾರಂಟಿಗಳ ಹೆಸರಿನಲ್ಲಿ ಭರವಸೆ ನೀಡಿದ ಸರ್ಕಾರವೇ ಈಗ ಜನರ ಮೇಲೆ ಹೆಚ್ಚುವರಿ ಬಾಧೆ ಹಾಕುತ್ತಿದೆ” ಎಂದು ಟೀಕಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ಲೈಫ್‌ಟೈಮ್ ಟ್ಯಾಕ್ಸ್ ವಿಧಿಸುವುದು ಜನಸಾಮಾನ್ಯರಿಗೆ, ವಿಶೇಷವಾಗಿ ಮಧ್ಯಮ ವರ್ಗಕ್ಕೆ ಆರ್ಥಿಕ ಒತ್ತಡ ಉಂಟುಮಾಡಲಿದೆ. ಇದರಿಂದ ಹಸಿರು ತಂತ್ರಜ್ಞಾನಗಳ ಸ್ವೀಕಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಇದಲ್ಲದೆ, ಈ ಕ್ರಮದಿಂದ ಜನರು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳತ್ತ ಮುಖ ಮಾಡುವ ಪರಿಸ್ಥಿತಿ ಉಂಟಾಗಬಹುದು. ಇದು ಪರಿಸರ ಸಂರಕ್ಷಣೆಯ ಗುರಿಗಳಿಗೆ ವಿರುದ್ಧವಾಗಿದ್ದು, ಸರ್ಕಾರದ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ ಎಂದು ಜಗದೀಶ್ ಎನ್.ಕೆ ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಬದಲು ತೆರಿಗೆ ಸಂಗ್ರಹಣೆಯತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಅವರು ದೂರಿದ್ದು, ರಸ್ತೆ, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಸೇರಿದಂತೆ ಅನೇಕ ಮೂಲಭೂತ ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.

“ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರುಳುಗೊಳಿಸಿ, ನಂತರ ತೆರಿಗೆಗಳ ಮೂಲಕ ಅವರ ಮೇಲೆಯೇ ಹೊರೆ ಹಾಕುವ ನೀತಿ ಅನುಸರಿಸಲಾಗುತ್ತಿದೆ” ಎಂದು ಕಟುವಾಗಿ ಟೀಕಿಸಿರುವ ಅವರು, ಸರ್ಕಾರ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತಕ್ಷಣ ಪುನರ್‌ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ವಿಧಿಸಿರುವ ತೆರಿಗೆಗೆ ಸರ್ಕಾರ ವಿನಾಯಿತಿ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ ಎಚ್ಚರಿಕೆ ನೀಡಿದ್ದಾರೆ. ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿರುವ ಈ ಕ್ರಮವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು, ಇಲ್ಲವಾದರೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.