Friday, March 20, 2026
Friday, March 20, 2026
Home Blog Page 1470

ಹರ್ ಘರ್ ತಿರಂಗಾಪ್ರಮಾಣ ಪತ್ರ ಪಡೆಯುವ ಕ್ರಮ ಹೇಗೆ?

0

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ದೇಶದಾದ್ಯಂತ ಮನೆ ಮನೆ ತ್ರಿವರ್ಣ ಧ್ವಜ ಹಾರಿಸಿ, ಜನತೆ ಸಂಭ್ರಮಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿದ್ದು, 76ನೇ ವರ್ಷದ ಸಂಭ್ರಮಾಚರಣೆಗೂ ಮುನ್ನ ದೇಶದ ಜನತೆಗೆ ತ್ರಿವರ್ಣ ಧ್ವಜಾರೋಹಣದ ಮಹತ್ವ ತಿಳಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಯಶಸ್ವಿಯಾಗಿದೆ.

ಹರ್ ಘರ್ ತಿರಂಗಾ ಹೆಸರಿನ ಅಭಿಯಾನವನ್ನು ಆಗಸ್ಟ್ 13 ರಿಂದ 15ರ ತನಕ ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಾರಿಗೊಳಿಸಲಾಗಿತ್ತು. ಆದರೆ, ಅನೇಕರಿಗೆ ತಮ್ಮ ಮನೆ ಮೇಲೆ ತ್ರಿವರ್ಣ ಬಾವುಟ ಹಾರಿಸಲು ಸಾಧ್ಯವಾಗದ ಕಾರಣ, ವರ್ಚ್ಯುಯಲ್ ಆಗಿ ಬಾವುಟ ಹಾರಾಟ ಮಾಡಿ ಸಂಭ್ರಮಿಸಲು ಅವಕಾಶ ಒದಗಿಸಲಾಗಿದೆ.

ಹರ್ ಘರ್ ತಿರಂಗಾ ಅಭಿಯಾನ ಯಶಸ್ಸಿಗಾಗಿ ಪ್ರತ್ಯೇಕ ವೆಬ್ ತಾಣವನ್ನು ಸರ್ಕಾರ ರೂಪಿಸಿ, ಜನತೆಗೆ ನೀಡಿದ್ದು, ಭಾರತದ ರಾಷ್ಟ್ರಧ್ವಜವನ್ನು ವರ್ಚ್ಯುಯಲ್ ಆಗಿ ಕೋಟ್ಯಂತರ ಮಾಡಿ ಹಾರಿಸಿ ಸಂಭ್ರಮಿಸಿದ್ದಾರೆ. ವಿವಿಧ ವೇದಿಕೆಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತಾಗಿದೆ. ಈ ರೀತಿ ವರ್ಚ್ಯುಯಲ್ ಅಭಿಯಾನದಲ್ಲಿ ಪಾಲ್ಗೊಂಡವರು ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

ಇದಕ್ಕಾಗಿ ವೆಬ್ ಸೈಟ್ ನಲ್ಲಿ ಹಾರಾಡುವ ತಿರಂಗಾದ ಜೊತೆಗೆ ಒಂದು ಸೆಲ್ಫಿ ಸಾಕು.

ಹರ್ ಘರ್ ತಿರಂಗಾ ಪ್ರಮಾಣ ಪತ್ರ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?

ಹರ್ ಘರ್ ತಿರಂಗಾ ವೆಬ್ ತಾಣಕ್ಕೆ ಭೇಟಿ ಕೊಡಿ.
ವೆಬ್ ತಾಣದ ಮುಖಪುಟದಲ್ಲಿ ಕಾಣುವ Pin A Flag ಕ್ಲಿಕ್ ಮಾಡಿ
ಇದಕ್ಕೂ ಮುನ್ನ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ನಂತರ Next ಕ್ಲಿಕ್ ಮಾಡಿ
ನಿಮ್ಮ location ತಿಳಿಯಲು ಅನುಮತಿ ಕೋರಲಾಗುತ್ತದೆ. ಮ್ಯಾಪ್ ನೋಡಿ ನೀವು ನೆಲೆಸಿದ ಸ್ಥಳವನ್ನು ಸರಿಯಾಗಿ ಮಾರ್ಕ್ ಮಾಡಿ.

ಬಾವುಟವನ್ನು ಪಿನ್ ಮಾಡಿ, ಪಾಪ್ ಅಪ್ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕೆ ಧನ್ಯವಾದ ಎಂಬ ಸಂದೇಶ ಬರಲಿದೆ.

ಡೌನ್ ಲೋಡ್ ಕ್ಲಿಕ್ ಮಾಡಿ ಸೇವ್ ಮಾಡಿಕೊಳ್ಳಿ. ಇದು PNG ಮಾದರಿಯಲ್ಲಿರಲಿ.

ದೇಶದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವವನ್ನು ಗುರುತಿಸಲು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು. ಭಾರತೀಯ ಜನರು ರಾಷ್ಟ್ರಧ್ವಜವನ್ನು ಮನೆ ತಂದು ‘ಹರ್ ಘರ್ ತಿರಂಗ’ ಅಭಿಯಾನದ ಭಾಗವಾಗಲು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಈ ಕಾರ್ಯಕ್ರಮವು ಎಲ್ಲೆಡೆ ಭಾರತೀಯರನ್ನು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೇರೇಪಿಸುತ್ತದೆ. ಕಾರ್ಯಕ್ರಮದ ಉದ್ದೇಶವು ರಾಷ್ಟ್ರಧ್ವಜದೊಂದಿಗಿನ ಸಂಬಂಧವನ್ನು ಕೇವಲ ಔಪಚಾರಿಕ ಅಥವಾ ಸಾಂಸ್ಥಿಕವಾಗಿ ಇಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿ ಸಂಭ್ರಮಿಸುವುದಾಗಿದೆ.

ಆಜಾದಿ ಕಾ ಅಮೃತ್ ಮಹೋತ್ಸವದ ಅಧಿಕೃತ ಆಚರಣೆಯು ಮಾರ್ಚ್ 12, 2021 ರಂದು ಪ್ರಾರಂಭವಾಯಿತು. ಇದು ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ 75 ವಾರಗಳ ಕೌಂಟ್‌ಡೌನ್ ಅನ್ನು ಪ್ರಾರಂಭಿಸಿತು.

ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ದೇಶದ ಸಾಮರ್ಥ್ಯ ಹಾಳುಮಾಡುತ್ತಿವೆ- ಪ್ರಧಾನಿ

0

ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ಕಾಂಗ್ರೆಸ್ ಗೆ ಪರೋಕ್ಷವಾಗಿ ತಿವಿದಿದೆ. ಭ್ರಷ್ಟಾಚಾರ, ವಂಶ ಆಳ್ವಿಕೆ ಭಾರತದ 2 ದೊಡ್ಡ ಸವಾಲುಗಳಾಗಿವೆ ಎಂದು ಹೇಳಿದ್ದಾರೆ.

ಸತತ 9ನೇ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ.
ಭ್ರಷ್ಟಾಚಾರಕ್ಕೆ ಇದೂ ಒಂದುಕಾರಣವಾಗುತ್ತಿದೆ ಎಂದರು.

ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ. ಭ್ರಷ್ಟಾಚಾರಕ್ಕೆ ಇದೂ ಒಂದುಕಾರಣವಾಗುತ್ತಿದೆ. ಪರಿವಾರವಾದದಿಂದಲೂ ನಾವು ಬಿಡಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು. ರಾಜಕಾರಣದಲ್ಲಿಯೂ ಪರಿವಾರವಾದವು ಪರಿವಾರ ಭದ್ರಪಡಿಸಿಕೊಳ್ಳಲು ಯತ್ನಿಸುತ್ತದೆಯೇ ಹೊರತು ದೇಶದ ಅಭಿವೃದ್ಧಿಗೆ ಗಮನ ಕೊಡುವುದಿಲ್ಲ. ಬನ್ನಿ, ಭಾರತದ ರಾಜಕಾರಣವನ್ನು ಶುದ್ಧೀಕರಣಗೊಳಿಸಲು ನಾವು ದೇಶದ ಪರಿವಾರವಾದವನ್ನು ಕೊನೆಗಾಣಿಸೋಣ. ಇದು ಇಂದಿನ ಅನಿವಾರ್ಯತೆ ಎಂದರು.

ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿಸಂಘರ್ಷಕ್ಕೆ ಆಸ್ಪದ ಬೇಡ-ಶ್ರೀಸುಬುಧೇಂದ್ರ ತೀರ್ಥರು

0

ಒಬ್ಬರಿಂದ ಒತ್ತಾಯಪೂರಕವಾಗಿ ಧರ್ಮಾಚರಣೆ ಮಾಡಿಸುವುದು ಸರಿಯಲ್ಲ. ಇನ್ನೊಬ್ಬರ ಧರ್ಮದ ಬಗ್ಗೆ ಅಗೌರವ ತೋರಿಸದೇ ನಮ್ಮ ಧರ್ಮ ಆಚರಿಸಬೇಕು. ಇದನ್ನು ಎಲ್ಲರೂ ಅರ್ಥೈಸಿಕೊಂಡು ಸೌಹಾರ್ದವಾಗಿ ಬಾಳಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

ಮಂತ್ರಾಲಯದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಸ್ವಾಮಿಗಳವರ 351ನೇ ಉತ್ತರಾರಾಧನೆ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ನಾವೆಲ್ಲ ಹಿಂದೂಗಳು. ಸನಾತನ ಭಾರತೀಯ ಹಿಂದೂ ಸಂಸ್ಕೃತಿ ಆಚರಿಸಬೇಕು. ಅವರವರಿಗೆ ಅವರ ಧರ್ಮವೇ ಶ್ರೇಷ್ಠ. ದೇಶದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ. ಪ್ರತಿಯೊಬ್ಬರೂ ಜಾತಿ, ಕೋಮು ಸಂಘರ್ಷಗಳಿಗೆ ಆಸ್ಪದ ನೀಡದೇ ಸೌಹಾರ್ದತೆಯಿಂದ ಜೀವನ ನಡೆಸಬೇಕು. ಭಕ್ತರು ಬೇಡಿದ ವರಗಳನ್ನು ನೀಡುವ ಕರುಣಾಮಯಿ ಶ್ರೀ ರಾಘವೇಂದ್ರ ಸ್ವಾಮಿಗಳು. ವಿಶ್ವದ ಮೂಲೆ ಮೂಲೆಗಳಲ್ಲಿ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಶ್ರೀ ಗುರುರಾಯರು ಪರಿಹರಿಸಿದ್ದಾರೆ. ಅದಕ್ಕೆ ಭಕ್ತರ ಅನುಭವಗಳೇ ಸಾಕ್ಷಿ. ಇದೇ ಕಾರಣಕ್ಕೆ ರಾಯರು ವಿಶ್ವಗುರುವಾಗಿದ್ದಾರೆ. ಶ್ರೀರಾಯರು ಬೃಂದಾನವಸ್ಥರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ಇಂಥ ಗುರುಗಳ ಅನುಗ್ರಹ ಎಲ್ಲರಿಗೂ ಸಿಗುವಂತಾಗಲಿ ಎಂದರು.

ಕೋವಿಡ್‌ ಸಂಕಷ್ಟದಿಂದ ಎರಡು ವರ್ಷ ಆರಾಧನಾ ಮಹೋತ್ಸವ ಸರಳವಾಗಿ ಆಚರಣೆ ಮಾಡಲಾಗಿತ್ತು. ಈಗ ಮತ್ತೆ ಪರಿಸ್ಥಿತಿ ಸುಧಾರಿಸಿದ್ದು, ಮೊದಲಿನ ವೈಭವದಲ್ಲಿ ರಾಯರ ಆರಾಧನೆ ನಡೆದಿದೆ. ಮತ್ತೆ ಇಂಥ ಸಂಕಷ್ಟದ ದಿನಗಳು ಬಾರದಿರಲಿ ಎಂದು ಎಲ್ಲರೂ ಹಾರೈಸೋಣ. ಶ್ರೀಮಠದ ಮುಂದಿನ ಮಧ್ವಮಾರ್ಗದ ಕೆಲಸ ಶೇ.40ರಷ್ಟು ಮಾತ್ರ ಮುಗಿದಿದೆ. ಈಗ ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದು, ಅದು ಮುಗಿದ ಮೇಲೆ ನೋಡುವ ಸೊಬಗು ಇನ್ನೂ ಅದ್ದೂರಿಯಾಗಿರಲಿದೆ. ಸನಾತನ ಹಿಂದೂ ಧರ್ಮದ ಪ್ರಚಾರಕ್ಕಾಗಿ ಮ್ಯೂಸಿಯಂ ಎರಡನೇ ಕಟ್ಟಡ ನಿರ್ಮಿಸಲಾಗಿದೆ. ಶ್ರೀಮಠದಿಂದ ಕಾಶಿ, ಪ್ರಯಾಗ, ಅಯೋಧ್ಯೆಯಂಥ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪೀಠಾಧಿಪತಿಗಳಾಗಿ 10 ವರ್ಷ ಮುಗಿಸುತ್ತಿರುವ ಕಾರಣ ಸೆ.5ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ರಾಯರಿಗೆ ಸಮರ್ಪಿಸಿದ ರಜತ ವಸ್ತುಗಳನ್ನು ವಿದ್ವಾಂಸರು, ಪಂಡಿತರು, ಸಂಶೋಧಕರಿಗೆ ಪ್ರದಾನ ಮಾಡಲಾಗುವುದು. ಶ್ರೀಮಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಎರಡು ಸಾವಿರ ವೇತನ ಹೆಚ್ಚಳ ಮಾಡುವ ಮೂಲಕ ಸುಮಾರು 1.75 ಕೋಟಿ ಶ್ರೀಮಠಕ್ಕೆ ವೇತನದ ವೆಚ್ಚವಾಗಲಿದೆ. ಸಾಲುಮರದ ತಿಮ್ಮಕ್ಕನ ಅಮೃತಹಸ್ತದಿಂದ ಮಂತ್ರಾಲಯದಲ್ಲಿ ಸಸಿ ನೆಡುವ ಮೂಲಕ ಹಸರೀಕರಣಗೊಳಿಸಲಾಗುವುದು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದಿದೆ.ಎಲ್ಲೆಡೆ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಎಲ್ಲರೂ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರಧಾನಿ ಮೋದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಲಿ.

ಗಡಿಯಲ್ಲಿ ಭೇದ ಮರೆತು ಭಾರತ ಪಾಕ್ ಸೈನಿಕರಿಂದ ಸಿಹಿ ವಿನಿಮಯ

0

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ-ಪಾಕ್ ಸೈನಿಕರು ಸಿಹಿಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಸೈನಿಕರು ಗಡಿಯಲ್ಲಿ ಪರಸ್ಪರ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದು ಎರಡೂ ದೇಶಗಳ ನಡುವಿನ ಹಳೆಯ ಸಂಪ್ರದಾಯವಾಗಿದೆ. ಆದಾಗ್ಯೂ, ಎರಡೂ ದೇಶಗಳ ನಡುವೆ ಉದ್ವಿಗ್ನತೆಯ ಪರಿಸ್ಥಿತಿ ಇದ್ದಾಗ ಈ ಸಂಪ್ರದಾಯವನ್ನು ಕೈಬಿಡಲಾಗುವುದಿಲ್ಲ. 2019 ರಲ್ಲಿ, ಪುಲ್ವಾಮಾ ದಾಳಿಯಿಂದಾಗಿ ಸಿಹಿತಿಂಡಿಗಳ ವಿನಿಮಯವಾಗಿರಲಿಲ್ಲ.

ಅಮೃತಸರದಿಂದ 30 ಕಿ.ಮೀ ದೂರದಲ್ಲಿರುವ ಬಾಘಾ-ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನ ರೇಂಜರ್ಸ್ ಮತ್ತು ಬಿಎಸ್‌ಎಫ್ ಸಿಹಿ ಹಂಚಿದರು. ಭಾರತವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಇದಕ್ಕೂ ಒಂದು ದಿನ ಮೊದಲು, ಪಾಕಿಸ್ತಾನವು ಆಗಸ್ಟ್ 14 ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಗಡಿ ಪಡೆಗಳು ಎರಡೂ ದೇಶಗಳ ನಡುವೆ ವಿಶೇಷ ಸಂದರ್ಭಗಳಲ್ಲಿ ಸಮಾರಂಭಗಳನ್ನು ಆಯೋಜಿಸುತ್ತಿವೆ.

ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಸಂದರ್ಭದ ವಿಶೇಷವೆಂದರೆ 21ಗನ್ ಸಲ್ಯೂಟ್

0

ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ, ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಇದರ ಬೆನ್ನಲ್ಲಿಯೇ ಔಪಚಾರಿಕವಾಗಿ 21 ಗನ್‌ ಸೆಲ್ಯೂಟ್‌ ನೀಡಿದ ಬಳಿಕ ಭಾರತ ಇತಿಹಾಸದ ಪುಟಗಳಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿತು.

52 ಸೆಕೆಂಡ್‌ನ ರಾಷ್ಟ್ರಗೀತೆಯ ವೇಳೆ ಒಟ್ಟು 21 ಬಾರಿ ಗನ್‌ ಸೆಲ್ಯೂಟ್‌ಅನ್ನು ಮಹಾನ್‌ ದೇಶಕ್ಕೆ ನೀಡಲಾಯಿತು.

ಇದೇಕೆ ವಿಶೇಷವೆಂದರೆ, ಕಳೆದ 74 ವರ್ಷಗಳಲ್ಲಿ ಸ್ವಾತಂತ್ರೋತ್ಸವದ ದಿನದಂದು ನೀಡಲಾಗುವ 21 ಗನ್‌ ಸೆಲ್ಯೂಟ್‌ಗಳನ್ನು ಮೇಡ್‌ ಇನ್‌ ಬ್ರಿಟನ್‌ ಮೂಲಕ 7 ಸ್ಪೆಷಲ್‌ ಗನ್‌ ನಿಂದ ನೀಡಲಾಗುತ್ತಿತ್ತು. ಈ ಶೆಲ್‌ಗಳಲ್ಲಿನ ಮದ್ದುಗುಂಡುಗಳು ಖಾಲಿ ಇರುತ್ತಿದ್ದವು. ಬರೀ ಸ್ಪೋಟದ ಸದ್ದು ಹಾಗೂ ಹೊಗೆ ಮಾತ್ರ ಬರುತ್ತಿದ್ದವು. ಅದಕ್ಕಾಗಿ ಈ ಗನ್‌ಗಳನ್ನು 25 ಪೌಂಡರ್‌ ಗನ್ಸ್‌ ಎನ್ನಲಾಗುತ್ತಿತ್ತು. ಅದರರ್ಥ, ಈ ಕ್ಯಾನನ್‌ಗಳು ಕೇವಲ 25 ಪೌಂಡ್‌ ಅಂದರೆ 11.5 ಕೆಜಿಯ ಗುಂಡುಗಳನ್ನು ಮಾತ್ರವೇ ಸ್ಫೋಟ ಮಾಡುತ್ತಿದ್ದವು.

ಆದರೆ, ಈ ಬಾರಿ 74 ವರ್ಷದ ಇತಿಹಾಸ ಬದಲಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ 25 ಪೌಂಡರ್‌ ಬ್ರಿಟಿಷ್‌ ಗನ್‌ಗಳ ಬದಲು, ದೇಶೀಯ ನಿರ್ಮಿತ ಎಟಿಎಜಿಎಸ್‌ಅನ್ನು ಬಳಕೆ ಮಾಡಲಾಗಿದೆ.

ಎಟಿಎಜಿಎಸ್ ಅಂದರೆ, ಅಡ್ವಾನ್ಸ್ಡ್‌ ಟೋವ್ಡ್‌ ಆರ್ಟಿಲರಿ ಗನ್‌ ಸಿಸ್ಟಮ್‌. ಅಂದರೆ, ಸಾಗಿಸಬಲ್ಲ ಸುಧಾರಿತ ಆರ್ಟಿಲರಿ ಗನ್‌ ವ್ಯವಸ್ಥೆ. ಇದನ್ನು ನಿರ್ಮಾಣ ಮಾಡಿದ್ದು ಡಿಆರ್‌ಡಿಓ. ಇದರ ವಿಶೇಷವೇನೆಂದರೆ, ಇದು ಉಡಾಯಿಸುವ ಗುಂಡು ಅತ್ಯಂತ ದೂರದವರೆಗೆ ಹೋಗಿ ಮುಟ್ಟುತ್ತದೆ. ವಿಶ್ವದಲ್ಲಿಯೇ ಇಷ್ಟು ದೂರದವರೆಗೆ ಗುಂಡನ್ನು ಉಡಾಯಿಸಬಲ್ಲ ಮತ್ಯಾವುದೇ ಹೋವಿಟ್ಜರ್‌ ಗನ್‌ಗಳಿಲ್ಲ.

ಸುಧಾರಿತ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ಎಟಿಎಜಿಎಸ್) ಅನ್ನು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಮುಖ ಭಾಗವಾಗಿದೆ. ಭಾರತದಲ್ಲಿ ಆಂತರಿಕವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಉತ್ಪಾದನೆಯೊಂದಿಗೆ ರಕ್ಷಣಾ ವಲಯದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಸರ್ಕಾರದ ಪ್ರೋತ್ಸಾಹದ ಭಾಗವಾಗಿ ATAGS ಅಭಿವೃದ್ಧಿಯಾಗಿದೆ.

ಕಾಮನ್ ಸರ್ವೀಸ್ ಸೆಂಟರ್ ಗಳನ್ನಹತ್ತು ಸಾವಿರಕ್ಕೆ ವಿಸ್ತರಿಸುವ ಗುರಿ- ವೀರೇಂದ್ರ ಹೆಗ್ಗಡೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಕಾಮನ್‌ ಸರ್ವಿಸ್‌ ಸೆಂಟರ್‌ಗಳನ್ನು (ಸಿಎಸ್‌ಸಿ) 10 ಸಾವಿರಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯಸಭಾಸದಸ್ಯರಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸರಕಾರದಲ್ಲಿ 500ಕ್ಕೂ ಅಧಿಕ ಜನೋಪಯೋಗಿ ಯೋಜನೆಗಳಿವೆ.ಮಾಹಿತಿ ಕೊರತೆಯಿಂದ ಸರಿಯಾಗಿ ತಲುಪುತ್ತಿಲ್ಲ. ಸಿಎಸ್‌ಸಿ ಮೂಲಕ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಈಗಾಗಲೇ 6 ಸಾವಿರ ಸಿಎಸ್‌ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಸರಕಾರದ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರಕಾರದ ಅಧಿಕಾರಿಗಳು ಸಿಎಸ್‌ಸಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇದರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಮಾದರಿಯಲ್ಲಿ ದೇಶದಲ್ಲಿ ಗ್ರಾ.ಪಂ. ಮಟ್ಟದಲ್ಲಿ ಸಿಎಸ್‌ಸಿ ತೆರೆಯುವ ಬಗ್ಗೆ ಕೇಂದ್ರ ಸರಕಾರದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.

ಸ್ವ ಉದ್ಯೋಗ ತರಬೇತಿ ಕೇಂದ್ರದಡಿಯಲ್ಲಿ ಇದು ದೇಶದ 590 ಜಿಲ್ಲೆಗಳಲ್ಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯವನ್ನ ಭಾರತ ಜಗತ್ತಿಗೆ ತಿಳಿಸಿದೆ-ರಾಷ್ಟ್ರಪತಿ ದ್ರೌಪದಿ ಮುರ್ಮು

0

ಭಾರತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ.

ನಾವು ವಸಾಹತುಶಾಹಿ ಆಡಳಿತಗಾರರ ಸಂಕೋಲೆಯಿಂದ ಮುಕ್ತವಾಗಲು ಅಗಾಧ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸಿದರು.ನಾವು ಸ್ವತಂತ್ರ ಭಾರತದಲ್ಲಿ ಬದುಕಲು ಸಾಧ್ಯವಾಗುವಂತೆ ಅಪಾರ ತ್ಯಾಗ ಮಾಡಿದವರಿಗೆ ನಾವು ನಮಸ್ಕರಿಸುತ್ತೇವೆ. ಇತರ ಸುಸ್ಥಾಪಿತ ಪ್ರಜಾಪ್ರಭುತ್ವಗಳಲ್ಲಿ ಮಹಿಳೆಯರು ಮತದಾನದ ಹಕ್ಕನ್ನು ಪಡೆಯಲು ದೀರ್ಘಾವಧಿಯ ಹೋರಾಟಗಳನ್ನು ನಡೆಸಬೇಕಾಗಿತ್ತು. ಆದರೆ ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯವನ್ನು ತಿಳಿಸಲು ಜಗತ್ತಿಗೆ ಸಹಾಯ ಮಾಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ನಮ್ಮ ಹೆಣ್ಣುಮಕ್ಕಳು ರಾಷ್ಟ್ರದ ದೊಡ್ಡ ಭರವಸೆ ಎಂದು ಅವರು ಪ್ರತಿಪಾದಿಸಿದರು.

ಹಲವು ವೀರರು ಮತ್ತು ಅವರ ಹೋರಾಟಗಳನ್ನು ವಿಶೇಷವಾಗಿ ರೈತರು ಮತ್ತು ಬುಡಕಟ್ಟು ಜನಾಂಗದವರು ಮರೆತುಹೋಗಿದ್ದಾರೆ. ನವೆಂಬರ್ 15 ಅನ್ನು “ನಜಾತಿಯ ಗೌರವ್ ದಿವಸ್ ಎಂದು ಆಚರಿಸಲು ಸರ್ಕಾರದ ನಿರ್ಧರಿಸಿದೆ. ನಮ್ಮ ಬುಡಕಟ್ಟು ವೀರರು ಕೇವಲ ಸ್ಥಳೀಯ ಅಥವಾ ಪ್ರಾದೇಶಿಕ ಐಕಾನ್‌ ಗಳಲ್ಲ, ಆದರೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯಾಗಿರುವುದರಿಂದ ಸ್ವಾಗತಾರ್ಹ ಎಂದರು.

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ತ್ಯಾಗ ಬಲಿದಾನ, ಇಂದಿನ ಭಾರತದ ಸಾಧನೆ ಕುರಿತು ದ್ರೌಪದಿ ಮುರ್ಮು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ಹೆಣ್ಣುಮಕ್ಕಳು ನಮ್ಮ ರಾಷ್ಟ್ರದ ದೊಡ್ಡ ಭರವಸೆ. ದೇಶದ ಬಗ್ಗೆ ನಮ್ಮ ಹೆಣ್ಣುಮಕ್ಕಳು ದೊಡ್ಡ ಭರವಸೆ ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ನಾವು ನಮ್ಮ ಭಾರತೀಯತೆಯನ್ನು ಆಚರಿಸುತ್ತೇವೆ. ಭಾರತವು ವೈವಿಧ್ಯತೆಯಿಂದ ಕೂಡಿದೆ. ಆದರೆ, ನಾವೆಲ್ಲರೂ ಒಂದೇ ಎಂಬ ಸಾಮಾನ್ಯ ಮನೋಭಾವವಿದೆ. ಈ ಸಾಮಾನ್ಯ ಥ್ರೆಡ್ ನಮ್ಮನ್ನು ಒಟ್ಟಿಗೆ ಬಂಧಿಸುತ್ತದೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮನೋಭಾವದೊಂದಿಗೆ ಒಟ್ಟಾಗಿ ನಡೆಯಲು ಪ್ರೇರೇಪಿಸುತ್ತದೆ ಎಂದರು.

ಈ ವೇಳೆ ಕನ್ನಡದ ರಾಷ್ಟ್ರಕವಿ ಕುವೆಂಪು ಅವರ ನವ ಭಾರತ ಲೀಲೆ ಕವನದ ಸಾಲುಗಳನ್ನು ಕನ್ನಡದಲ್ಲೇ ಹೇಳಿದ್ದಾರೆ.ಶ್ರೇಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರೀಕ ತನ್ನ ಕೈಲಾದ ಕೊಡುಗೆ ನೀಡಬೇಕು. ಎಲ್ಲರು ಜೊತೆಗೂಡಿದರೆ ನವಭಾರತ ನಿರ್ಮಾಣವಾಗಲಿದೆ ಎಂದಿದ್ದಾರೆ.

ದ್ರೌಪದಿ ಮುರ್ಮು ಕನ್ನಡದ ಶ್ರೇಷ್ಠ ಹಾಗೂ ರಾಷ್ಟ್ರಕವಿ ಕುವೆಂಪು ಅವರ ನಾನಳಿವೆ ನಿನಳಿವೆ ನಮ್ಮಲವುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಕವನವನ್ನು ಕನ್ನಡದಲ್ಲೇ ಉಲ್ಲೇಖಿಸಿದ್ದಾರೆ ಬಳಿಕ ಇದರ ಅರ್ಥವನ್ನು ಹೇಳಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನು ಅಳಿಯುತ್ತೇನೆ, ನೀನು ಅಳಿಸಿ ಹೋಗುತ್ತಿಯಾ. ಆದರೆ ನಾವು ಪಡೆದ ಗೆಲುವು ಹೊಸ ಭಾರತ ನಿರ್ಮಿಸಲಿದೆ. ನಮ್ಮ ಹೋರಾಟದಿಂದ ಭಾರತದ ಅಸ್ಥಿತ್ವ ಇರಲಿದೆ ಎಂದು ಕುವೆಂಪು ಅರ್ಥಪೂರ್ಣವಾಗಿ ನಾನಳಿವೆ ನಿನಳಿವೆ ನಮ್ಮಲವುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಕವನದಲ್ಲಿ ಹೇಳಿದ್ದಾರೆ. ದೇಶಕ್ಕಾಗಿ ಕೊಡುಗೆ ನೀಡುವುದು, ದೇಶಕ್ಕಾಗಿ ಜೀವವನ್ನೇ ಮುಡಿಪಾಗಿಡುವುದು ನಮ್ಮ ಆದರ್ಶವಾಗಬೇಕು ಎಂಬುದನ್ನು ಕುವೆಂಪು ಸೂಚ್ಯವಾಗಿ ಹೇಳಿದ್ದಾರೆ. ಈ ಕುವೆಂಪಪು ಸಾಲಿನ ಅರ್ಥವನ್ನೂ ದ್ರೌಪದಿ ಮುರ್ಮು ತಮ್ಮಭಾಷಣದಲ್ಲಿ ಹೇಳಿದ್ದಾರೆ.

ಭಾರತೀಯ ಯುವ ಸಮೂಹಕ್ಕೆ ಮಹತ್ವದ ಕರೆ ನೀಡಿದ್ದಾರೆ. ಹೊಸ ಭಾರತ ನಿರ್ಮಾಣಕ್ಕೆ ಕೈಜೋಡಿರುವಂತೆ ಕರೆ ನೀಡಿದ್ದಾರೆ. ಇದೇ ವೇಳೆ ಭಾರತ ನದಿ, ಬೆಟ್ಟ ಗಡ್ಡ, ಬಯಲು, ಕಾಡು, ಕೃಷಿ ಸೇರಿದಂತೆ ಪ್ರಾಕೃತಿ ಸೌಂದರ್ಯದಿಂದ ಕೂಡಿದ ದೇಶವಾಗಿದೆ. ಈ ಸಂಪತ್‌ಭರಿತ ದೇಶವನ್ನು ಮುಂದಿನ ಪೀಳಿಗೆ ನೀಡುವ ಅತೀ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

ಭಾರತೀಯ ಕ್ರೀಡಾಪಡುಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗರಿಮೆ ಹೆಚ್ಚಿಸಿದ್ದಾರೆ. ಪದಕಗಳನ್ನು ಗಳಿಸುವ ಮೂಲಕ ಭಾರತದಕೀರ್ತಿಯನ್ನು ಪಸರಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಅತ್ಯುತ್ತಮ ಸಾಧನೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೂಲಕ ಮುನ್ನುಗ್ಗುತ್ತಿದ್ದಾರೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

ಅಮೃತ ಮಹೋತ್ಸವಕ್ಕೆ ಬಾಹ್ಯಾಕಾಶದಿಂದ ಶುಭಾಶಯ ಕೋರಿಕೆ

0

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕೂ ಮುನ್ನವೇ ಬಾಹ್ಯಾಕಾಶದಿಂದ ಶುಭಾಶಯ ಬಂದಿದೆ.

ಇಎಸ್‌ಎ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭಾರತಕ್ಕೆ ಶುಭ ಹಾರೈಸಿದ್ದಾರೆ.

ದಶಕಗಳಿಂದ, ಅಂತಾರಾಷ್ಟ್ರೀಯ ಏಜೆನ್ಸಿಗಳು ಅನೇಕ ಬಾಹ್ಯಾಕಾಶ ಮತ್ತು ವಿಜ್ಞಾನ ಕಾರ್ಯಾಚರಣೆಗಳಲ್ಲಿ ಇಸ್ರೋದೊಂದಿಗೆ ಸಹಕರಿಸಿವೆ ಮತ್ತು ಆ ಸಹಕಾರವು ಇಂದಿಗೂ ಮುಂದುವರೆದಿದೆ.

ಮುಂಬರುವ ನಿಸಾರ್ ಅರ್ಥ್ ಸೈನ್ಸ್ ಮಿಷನ್‌ನ ಅಭಿವೃದ್ಧಿಯಲ್ಲಿ ಇಸ್ರೋ ಕೆಲಸ ಮಾಡುವುದರಿಂದ ಅದು ನಮಗೆ ವಿಪತ್ತುಗಳನ್ನು ಪತ್ತೆಹಚ್ಚಲು ಮತ್ತು ನಮ್ಮ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಜನ್ಮ ವಾರ್ಷಿಕೋತ್ಸವದಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸ್ಪೇಸ್ ಐಎಸ್‌ಎಸ್ ಸ್ಟೇಷನ್ ನಿಂದ ಶುಭಹಾರೈಕೆಗಳು ಎಂದು ವಿಡಿಯೋ ಸಹಿತ ಶುಭಹಾರೈಸಿದ್ದಾರೆ.

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದೊಂದಿಗೆ ಜಂಟಿ ಭೂ ವೀಕ್ಷಣಾ ಉಪಗ್ರಹ ಕಾರ್ಯಾಚರಣೆಗಾಗಿ ಅತ್ಯಂತ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ ಅಭಿವೃದ್ಧಿಯನ್ನು ಇಸ್ರೋ ಪೂರ್ಣಗೊಳಿಸಿದೆ.

ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ 90000 ಮಂದಿ ನೋಂದಾವಣೆ- ಶಿವಕುಮಾರ್

0

ಆ.15 ರ ಮಧ್ಯಾಹ್ನ ನಡೆಯಲಿರುವ ಕಾಂಗ್ರೆಸ್‌ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಈಗಾಗಲೇ 90000 ಮಂದಿ ರಿಜಿಸ್ಟರ್ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಈ‌ ದಿನಗಳಲ್ಲಿ ಬೆಳಗ್ಗೆ ಎದ್ದು ಕಾಫಿ ಕುಡಿಯುವ ಮೊದಲು ಎಷ್ಟು ಜನ #FreedomMarch ನಲ್ಲಿ ಭಾಗಿಯಾಗಲು ರಿಜಿಸ್ಟರ್‌ ಮಾಡಿದ್ದಾರೆ ಎನ್ನುವುದನ್ನು ಚೆಕ್‌ ಮಾಡ್ತಿದ್ದೇನೆ. ಈ ದಿನ ಕೂಡ ನನಗೆ ನಿರಾಶೆಯಾಗಿಲ್ಲ. 90000+ ಮಂದಿ ರಿಜಿಸ್ಟರ್ ಮಾಡುವ ಮೂಲಕ ನಮ್ಮನ್ನು ಯಶಸ್ಸಿ ನ ಬಾಗಿಲಿಗೆ ತಂದು ನಿಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಟ್ವೀಟ್‌ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ತಿಳಿಸಿದ್ದಾರೆ.

ವಿಶ್ವದಲ್ಲಿ ಯುದ್ಧ ನಿಲ್ಲಬೇಕೆಂದರೆ ಮೋದೀಜಿ ನಾಯಕತ್ವ‌ಬೇಕು- ಜಗ್ಗೇಶ್

0

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಶ್ರೀ ಗುರುರಾಯರ 351 ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆಯಲ್ಲಿ ಚಿತ್ರನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ ಶನಿವಾರ ಭಾಗಿಯಾಗಿದ್ದರು.

ಸುಕ್ಷೇತ್ರದ ಮಠಕ್ಕೆ ಆಗಮಿಸಿದ ಜಗ್ಗೇಶ ಶ್ರೀರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನದ ದರ್ಶನ, ನಂತರ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಆಶೀರ್ವಾದವನ್ನು ಪಡೆ​ದ​ರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ಸಮರ್ಥರು ಬೇಕು. ಪ್ರಪಂಚದ ದೊಡ್ಡ ರಾಷ್ಟ್ರಗಳಾದ ಅಮೆರಿಕ, ರಷ್ಯಾ ಮತ್ತು ಚೀನಾದೊಂದಿಗೆ ಮಾತನಾಡಿ, ಅವರನ್ನು ಸಾತ್ವಿಕರನ್ನಾಗಿಸುವ ಶಕ್ತಿ ಮೋದಿ ಅವರಲ್ಲಿದೆ ಎಂದು ತಿಳಿಸಿದ್ದಾರೆ.

ದೇಶದಾದ್ಯಂತ 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ದೇಶದ ಪ್ರಜೆಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಚಿಕ್ಕಮಕ್ಕಳು ಸಹ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿಯುವುದರಿಂದ ದೇಶದ ಸ್ವಾತಂತ್ರ್ಯದ ಕುರಿತು ತಿಳಿದುಕೊಳ್ಳಲು ಆಸಕ್ತಿ ಮೂಡುತ್ತದೆ. ಮೇಧಾವಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಭಕ್ತಿಯನ್ನು ಹೆಚ್ಚಿಸಲು ಈ ಯೋಜನೆ ರೂಪಿಸಿದ್ದಾರೆ ಎಂದ ಹೇಳಿದ್ದಾರೆ.

ಸರ್ಕಾರ ರೂಪಿಸುವ ಅಷ್ಟೋ ಯೋಜನೆಗಳು ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲ. ಅವುಗಳಲ್ಲಿ ಸರಿಯಾಗಿ ಓದಿ ತಿಳಿದುಕೊಳ್ಳದಕ್ಕೆ ಸಾಕಷ್ಟುಅನುದಾನಗಳು ವಾಪಸ್ಸು ಹೋಗುತ್ತಿವೆ. ಆದ್ದರಿಂದ, ನಿಜವಾದ ಫಲಾನುಭವಿಗಳಿಗೆ ಯೋಜನೆಗಳ ಲಾಭವೇ ಸಿಗುವುದಿಲ್ಲ. ಎಲ್ಲರು ಯೋಜನೆಗಳನ್ನು ಅರಿತು ಅವುಗಳ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ರಾಜ್ಯಸಭಾ ಸದಸ್ಯನಾಗಿರುವ ನಮಗೆ ಪ್ರಹ್ಲಾದ್‌ ಜೋಶಿ ಮತ್ತು ಸಂತೋಷ ಜೀ ಅವರು ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದ್ದಾರೆ.