Friday, March 20, 2026
Friday, March 20, 2026
Home Blog Page 1469

ಬೆಂಗಳೂರಿಗೆ ಶೀಘ್ರದಲ್ಲೇ ಜಂಬೋವಿಮಾನ ಹಾರಾಟ ನಿಯೋಜನೆ

0

ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನವು ನಮ್ಮ ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ.

ಎಮಿರೇಟ್ಸ್ ಏರ್‌ಲೈನ್ಸ್ ಅಕ್ಟೋಬರ್ 30ರಿಂದ ಬೆಂಗಳೂರು- ದುಬೈ ಮಾರ್ಗದಲ್ಲಿ ಈ ಜಂಬೋ ವಿಮಾನವನ್ನು ಹಾರಾಟಕ್ಕೆ ನಿಯೋಜಿಸಲಿದೆ.

ಎ 380 ಎಂಬುದು ವಿಶ್ವದ ಉದ್ದವಾದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ಬೆಂಗಳೂರು ದೆಹಲಿ ಮತ್ತು ಮುಂಬೈ ನಂತರ ಜಂಬೋ ಜೆಟ್ ಅನ್ನು ಇಳಿಸುವ ಮೂರನೇ ಭಾರತೀಯ ನಗರವಾಗಲಿದೆ. ಎಮಿರೇಟ್ಸ್ ಏರ್‌ಲೈನ್ಸ್‌ಗೆ ಬೆಂಗಳೂರು ಎ 380 ವಿಮಾನವನ್ನು ದೈನಂದಿನ ಸೇವೆಯಾಗಿ ನಿಯೋಜಿಸುವ ಎರಡನೇ ಭಾರತೀಯ ನಗರವಾಗಿದೆ.

ಇದಕ್ಕೂ ಮೊದಲು ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯು 2014 ರಿಂದ ಮುಂಬೈ- ದುಬೈ ಮಾರ್ಗದಲ್ಲಿ ಎ 380 ಅನ್ನು ಹಾರಿಸುತ್ತಿದೆ.

ಬೆಂಗಳೂರು- ದುಬೈ ಮಾರ್ಗದಲ್ಲಿ ದೈನಂದಿನವಾಗಿ ಎ 380 ವಿಮಾನಗಳು ಮೂರು ವರ್ಗದ ಮಾದರಿಯಲ್ಲಿ ಹಾರಾಟ ನಡೆಸಲಿವೆ. ಅವುಗಳೆಂದರೆ ಎಕಾನಮಿ, ಬಿಸಿನೆಸ್‌ ಮತ್ತು ಫಸ್ಟ್‌ ಕ್ಲಾಸ್‌ ತರಗತಿಗಳಲ್ಲಿ ಆಸನಗಳು ವಿಮಾನದಲ್ಲಿ ಇರಲಿವೆ. ಇಕೆ 568 ಅಕ್ಟೋಬರ್ 30 ರಂದು ಸ್ಥಳೀಯ ಕಾಲಮಾನ ರಾತ್ರಿ 9.25ಕ್ಕೆ ದುಬೈನಿಂದ ಟೇಕ್ ಆಫ್ ಆಗಲಿದ್ದು, ಮರುದಿನ ಮುಂಜಾನೆ 2.30ಕ್ಕೆ ಬೆಂಗಳೂರನ್ನು ತಲುಪಲಿದೆ. ರಿಟರ್ನ್ ಫ್ಲೈಟ್ ಇಕೆ 569 ಅಕ್ಟೋಬರ್ 31 ರಂದು ಬೆಳಿಗ್ಗೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 7.10ಕ್ಕೆ (ಸ್ಥಳೀಯ ಸಮಯ) ದುಬೈಗೆ ಇಳಿಯುತ್ತದೆ.

ಎ380 ಆಸನಗಳು ಎಕಾನಮಿ ಕ್ಲಾಸ್‌ನಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ವಿಶಾಲವಾಗಿರುತ್ತವೆ. ಬಿಸಿನೆಸ್ ಕ್ಲಾಸ್ ಸಂಪೂರ್ಣವಾಗಿ ಫ್ಲಾಟ್ ಸೀಟ್‌ಗಳನ್ನು ಹೊಂದಿರುತ್ತದೆ. ಫಸ್ಟ್‌ ಕ್ಲಾಸ್‌ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿರುತ್ತದೆ ಎಂದು ಎಮಿರೇಟ್ಸ್‌ ಏರ್‌ಲೈನ್ಸ್ ತಿಳಿಸಿದೆ.

ಶಾಂತಿ ಕಾಪಾಡಲು ಜನರಿಗೆ ಗೃಹ ಸಚಿವರ ಮನವಿ

0

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಹಾಕಿದ್ದ ವೀರ್ ಸಾವರ್ಕರ್‌ ಫ್ಲೆಕ್ಸ್ ತೆಗೆದಿದ್ದರಿಂದ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.

ಶಿವಮೊಗ್ಗ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ವೀರ್ ಸಾವರ್ಕರ್‌ ಫ್ಲೆಕ್ಸ್, ಬ್ಯಾನರ್‌ ಕಟ್ಟುವ ವಿಚಾರ ಸಂಬಂಧ ಭಿನ್ನಾಭಿಪ್ರಾಯ ಉಂಟಾಗಿ ಜಗಳ ನಡೆದು ವ್ಯಕ್ತಿಗೆ ಚಾಕು ಇರಿತ ಉಂಟಾಗಿತ್ತು. ಕಾನೂನು ಸುವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ಶಾಂತಿ ಹದಗೆಟ್ಟಿತ್ತು. ಹೀಗಾಗಿ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಶಾಲೆ ಕಾಲೇಜಿಗೆ ರಜೆ ನೀಡಲಾಗಿದೆ.

ಸದ್ಯ ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಜನರು ಶಾಂತಿ ಕಾಪಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಘಟನೆಯಲ್ಲಿ ಚೂರಿ ಇರಿತಕ್ಕೊಳಗಾದ ಇಬ್ಬರಲ್ಲಿ ಒಬ್ಬರನ್ನು ಭೇಟಿಯಾಗಿ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ‘ನಾವು ಕಳೆದ ಮೂರು ದಿನಗಳಿಂದ ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇಂತಹ ಸಂತಸದ ಸಂದರ್ಭದಲ್ಲಿ ಇಂತಹ ಅಹಿತಕರ ಘಟನೆ ನಡೆದಿರುವುದು ದುರಾದೃಷ್ಟಕರ.
ಇಲ್ಲಿ ಪೊಲೀಸರು ಎಲ್ಲಾ ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲುತ್ತಾರೆ ಎಂದರು.

ಚೂರಿ ಇರಿತ ಘಟನೆಯ ಹಿಂದಿರುವ ಕೋಮುವಾದಿ ಶಕ್ತಿಗಳನ್ನು ಬಯಲಿಗೆಳೆಯುವ ಅಗತ್ಯವಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಶೀಘ್ರದಲ್ಲೇ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ಭದ್ರಾವತಿಯಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

0

ನಿಷೇಧಾಜ್ಞೆ ನಡುವೆಯೂ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಮೂವರ ಗುಂಪೊಂದು ಚಾಕುವಿನಿಂದ ಇರಿಯಲು ಯತ್ನಿಸಿರುವ ಘಟನೆ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೂದಲೆಳೆಯ ಅಂತರದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್(28) ಪಾರಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಪೊಲೀಸರ ಹೈ ಅಲರ್ಟ್, ನಿಷೇಧಾಜ್ಞೆ ನಡುವೆಯೂ ಗುಂಪೊಂದು ಭದ್ರಾವತಿಯ ನೆಹರು ಬಡಾವಣೆಯಲ್ಲಿ ಗಲಾಟೆ ನಡೆಸಿದ್ದು, ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಸುನೀಲ್ ಎಂಬಾತನ ಮೇಲೆ ಡಿಚ್ಚಿ ಅಲಿಯಾಸ್ ಮುಬಾರಕ್ ಸೇರಿದಂತೆ ಮೂವರು ಮನಬಂದಂತೆ ಕೈಗಳಿಂದ ಮುಖ, ಕೈ ಹಾಗೂ ಇನ್ನಿತರ ಭಾಗಗಳಿಗೆ ಹಲ್ಲೆ ನಡೆಸಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ.

ತಕ್ಷಣ ಸುನೀಲ್ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದು, ಹಲ್ಲೆಯಿಂದ ಮುಖಕ್ಕೆ ಗಂಭೀರ ಪೆಟ್ಟಾಗಿದೆ. ಸುದ್ದಿ ತಿಳಿದು ಹಳೆನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಕ್ರೀಡೆಯಾಗಿ ಬಾಸ್ಕೆಟ್ ಬಾಲ್-ಸೀಎಂ

0

ಕ್ರೀಡಾ ದತ್ತು ಯೋಜನೆ ಜಾರಿಯಲ್ಲಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಕ್ರೀಡಾಂಗಣಗಳ ಅಭಿವೃದ್ಧಿಯನ್ನೂ ಮಾಡಲಾಗುತ್ತಿದೆ. ಬ್ಯಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ ಎಂದು ಅಳವಡಿಸಿಕೊಳ್ಳುತ್ತಿದ್ದೇವೆ. ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಎರಡು ತಿಂಗಳೊಳಗೆ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕ್ರೀಡಾ ದತ್ತು ಯೋಜನೆ ಜಾರಿಯಲ್ಲಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಕ್ರೀಡಾಂಗಣಗಳ ಅಭಿವೃದ್ಧಿಯನ್ನೂ ಮಾಡಲಾಗುತ್ತಿದೆ. ಬ್ಯಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ ಎಂದು ಅಳವಡಿಸಿಕೊಳ್ಳುತ್ತಿದ್ದೇವೆ. ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಎರಡು ತಿಂಗಳೊಳಗೆ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗುತ್ತದೆ. ನಮ್ಮ ಸರ್ಕಾರ ಕ್ರೀಡೆ ಹಾಗೂ ಕ್ರೀಡಾಪಟುಗಳ ಕಲ್ಯಾಣಕ್ಕೆ ಆದ್ಯತೆಯನ್ನು ನೀಡಿದೆ.

ಯಾವುದನ್ನೂ ಚಿಂತೆ ಮಾಡದೆ ಧೈರ್ಯವಾಗಿ ಆಡಿ ಬನ್ನಿ. ಸರ್ಕಾರ ನಿಮ್ಮ ಜೊತೆ ಇದೆ ಎಲ್ಲಾ ದೃಷಿಯಿಂದ ನಿಮ್ಮ ಸುರಕ್ಷತೆಯನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬರ್ಮಿಂಗ್ ಹ್ಯಾಂ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಆಯ್ಕೆಯಾಗಿರವ 75 ಕ್ರೀಡಾ ಪಟುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ರೀಡಾಪಟುಗಳ ಜೀವನಕ್ಕೆ ಭದ್ರತೆ ಬೇಕು ಎನ್ನುವುದನ್ನು ಸರ್ಕಾರ ಮನಗಂಡಿದೆ.

ಮನಸ್ಸಿನಲ್ಲಿ ಕ್ರೀಡೆಯನ್ನು ನನಗೋಸ್ಕರ ಹಾಗೂ ದೇಶಕ್ಕಾಗಿ ಪದಕ ಗೆಲ್ಲಲು ಆಡುತ್ತಿದ್ದೇನೆ ಎನ್ನುವುದನ್ನು ಮಾತ್ರ ಕ್ರೀಡಾಪಟುಗಳು ಮರೆಯಬಾರದು. ಮಿಕ್ಕಿದ್ದನ್ನು ಸರ್ಕಾರಕ್ಕೆ ಬಿಡಿ. ನಿಮ್ಮ ಸಾಧನೆಗಳಿಗೆ ತಕ್ಕಂತೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಶಿವಮೊಗ್ಗದಲ್ಲಿ ದ್ವಿಚಕ್ರ ವಾಹನ ಸವಾರಿ ಒಬ್ಬರಿಗೇ ಅನುಮತಿ

0

ಸಾವರ್ಕರ್ ಭಾವ ಚಿತ್ರ ಇರುವ ಬ್ಯಾನರ್ ತೆರವುಗೊಳಿಸಿರುವ ವಿಚಾರಕ್ಕೆ ಶಿವಮೊಗ್ಗದಲ್ಲಿ ನಡೆದ ಗಲಾಟೆ ಹಾಗೂ ಚೂರಿ ಇರಿತ ಪ್ರಕರಣದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು
ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನ ಪುರುಷರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

(40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ)

ಇನ್ನು ನಗರದಲ್ಲಿ 05 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಭಂಧಿಸಿದೆ.

ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಲಾಗಿದೆ.
ಯಾವುದೇ ರೀತಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಾಗೂ ಸ್ಪೋಟಕಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವುದು ನಿಷೇಧಿಸಲಾಗಿದೆ.

ವ್ಯಕ್ತಿ / ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ / ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವುದು ನಿಷೇಧಿಸಲಾಗಿದೆ.

ರಾತ್ರಿ 09:00 ರಿಂದ ಬೆಳಗಿನ ಜಾವ 05:00 ರವೆಗೆ ತುರ್ತು ಸಂದರ್ಭವನ್ನು ಹೊರತು ಪಡಿಸಿ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಶಿವಮೊಗ್ಗ ಫ್ಲೆಕ್ಸ್ ಪ್ರಕರಣ: ಚಾಕು ಇರಿತ ಆರೋಪದಡಿ ಮೂವರ ಬಂಧನ

0

ಶಿವಮೊಗ್ಗದಲ್ಲಿ ಫ್ಲೆಕ್ಸ್ ತೆರವಿನ ವಿವಾದ ಬಳಿಕ ಯುವಕನಿಗೆ ಚಾಕು ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿಸಲಾಗಿದೆ.

ಶಿವಮೊಗ್ಗದಲ್ಲಿ ಪ್ರಕ್ಷ್ಯುಬದ್ಧ ಸ್ಥಿತಿ ನಿರ್ಮಾಣವಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಎಡಿಜಿಪಿ ಅಲೋಕ್ ಕುಮಾರ್ ಮೊಕ್ಕಾಂ ಹೂಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಆರ್​ಎಎಫ್(ರ್ಯಾಪಿಡ್ ಆಕ್ಷನ್ ಫೋರ್ಸ್) ತುಕಡಿಯಿಂದ ರೂಟ್ ಮಾರ್ಚ್ ನಡೆಯುತ್ತಿದೆ. ಬೆಂಗಳೂರಿನಿಂದ ಆಗಮಿಸಿರುವ ಆರ್​ಎಎಫ್ ತುಕಡಿ ಜತೆಗೆ ಕೆಎಸ್​ಆರ್​ಪಿ ಹಾಗೂ ಡಿಎಆರ್ ನಿಂದಲೂ ಪಥ ಸಂಚಲನ ನಡೆಯುತ್ತಿದೆ.

ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಿಂದ ಕೆ.ಆರ್. ಪುರಂ ರಸ್ತೆ ಸೇರಿದಂತೆ ಹಳೇ ಶಿವಮೊಗ್ಗ ಭಾಗದಲ್ಲಿ ರೂಟ್ ಮಾರ್ಚ್ ನಡೆದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್​ ಕುಮಾರ್,ಶಿವಮೊಗ್ಗದಲ್ಲಿ ಬೇರೆ ಬೇರೆ ಜಿಲ್ಲೆಯ ಪೊಲೀಸರು ಬೀಡು ಬಿಟ್ಟಿದ್ದಾರೆ. ಜನರು ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆಯಿಲ್ಲ ಎಂದು ಅಭಯ ನೀಡಿದರು.

ಸಾರ್ವಜನಿಕರಲ್ಲಿರುವ ಭಯ ತೊಡೆದುಹಾಕುವ ನಿಟ್ಟಿನಲ್ಲಿ ಆರ್​ಎಎಫ್ ನಿಂದ ರೂಟ್ ಮಾರ್ಚ್ ಮಾಡಲಾಗುತ್ತಿದೆ. ತಪ್ಪಿತಸ್ಥರು ಮತ್ತು ಪುಡಾರಿಗಳಿಗೆ ಭಯ ಹುಟ್ಟಿಸಲು ಇದೂ ಒಂದು ತಂತ್ರ. ಜನರು ಅಂಜಬೇಕಾದ ಅವಶ್ಯಕತೆಯಿಲ್ಲ‌. ಜನರ ಜತೆ ನಾವಿದ್ದೇವೆ. ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಯಲಿದೆ.
ನೀವೆಲ್ಲರೂ ಸೇಫ್ ಇದ್ದೀರಿ ಎಂದು ತಿಳಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ.

ಐದು ಕೋಟಿ ಮನೆಗಳ ಮೇಲೆ ಲಾಸ್ಯವಾಡಿದ ರಾಷ್ಟ್ರಧ್ವಜ

0

ಸ್ವಾತಂತ್ರ್ಯದ ಅಮೃತ ಮಹೋತ್ಸದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ವೆಬ್‌ಸೈಟ್‌ನಲ್ಲಿ ಈವರೆಗೆ 5 ಕೋಟಿಗೂ ಹೆಚ್ಚು ಮಂದಿ ರಾಷ್ಟ್ರ ಧ್ವಜದ ಜತೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಇದೊಂದು ಅದ್ಭುತ ಸಾಧನೆ ಎಂದು ಸಚಿವಾಲಯ ಬಣ್ಣಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಪ್ರಧಾನ ಸೂತ್ರಧಾರಿಯಾಗಿರುವ ಸಂಸ್ಕೃತಿ ಸಚಿವಾಲಯ ಸಹ ‘ತಿರಂಗಾ’ ಜತೆ ಸೆಲ್ಫಿ ತೆಗೆದು ಅಭಿಯಾನಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುವಂತೆ ಜನತೆಗೆ ಮನವಿ ಮಾಡಿತ್ತು.
ಐದು ಕೋಟಿ ‘ತಿರಂಗಾ’ ಸೆಲ್ಫಿಗಳು ದೇಶ ಮೊದಲು ಎಂಬ ಭಾರತೀಯ ನಾಗರಿಕರ ಬದ್ಧತೆಯ ಸಂಕೇತವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.

76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ವೈಭವೋಪೇತವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 25 ವರ್ಷಗಳ ‘ಅಮೃತ ಕಾಲ’ದ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಮೋದಿ ಅವರು ಜುಲೈ 22ರಂದು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರೆ ನೀಡಿದ್ದರು. ಮನೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡುವಂತೆ ಮನವಿ ಮಾಡಿದ್ದರು.

ವಿಶ್ವಮಟ್ಟದಲ್ಲಿ ವರ್ಚಸ್ವಿಯಾಗಿದೆ ಭಾರತ-ಪುಟಿನ್

0

ವಿಶ್ವ ಮಟ್ಟದಲ್ಲಿ ಭಾರತ ನ್ಯಾಯಸಮ್ಮತವಾದ ವರ್ಚಸ್ಸು ಪಡೆದು ಅದನ್ನು ಸಂಭ್ರಮಿಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಶುಭಾಶಯ ಕೋರಿರುವ ಪುಟಿನ್, ಭಾರತೀಯರನ್ನು ಅಭಿನಂದಿಸಿ ದೇಶದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮ ಆತ್ಮೀಯ ಅಭಿನಂದನೆಗಳನ್ನು ಸ್ವೀಕರಿಸಿ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಿಮ್ಮ ದೇಶವು ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಇತರ ಕ್ಷೇತ್ರಗಳಲ್ಲಿ ಗುರುತರ ಯಶಸ್ಸು ಸಾಧಿಸಿದೆ. ಅಲ್ಲದೇ, ಜಾಗತಿಕ ಮಟ್ಟದಲ್ಲಿ ಭಾರತವು ತನ್ನ ಗಣನೀಯವಾದ ವರ್ಚಸ್ಸನ್ನು ನ್ಯಾಯಸಮ್ಮತವಾಗಿ ಪಡೆದು ಸಂಭ್ರಮಿಸುತ್ತಿದೆ. ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ರಚನಾತ್ಮಕ ಪಾತ್ರ ನಿರ್ವಹಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾ ಅಧ್ಯಕ್ಷರು ಅಭಿನಂದಿಸಿ, ಉತ್ತಮ ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ಕೋರಿದ್ದಾರೆ. ಮಾಸ್ಕೋ ಹಾಗೂ ನವದೆಹಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಹಕರಿಸುತ್ತಿವೆ. ಯುಎನ್, ಬ್ರಿಕ್ಸ್, ಎಸ್‌ಸಿಒ ಮತ್ತು ಇತರ ಬಹುಪಕ್ಷೀಯ ರಚನೆಗಳ ಚೌಕಟ್ಟಿನೊಳಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುತ್ತಿವೆ ಎಂದು ಪುಟಿನ್ ಹೇಳಿದ್ದಾರೆ.

ಶೀಘ್ರವೇ 5000 ಪಿಸಿ ಹುದ್ದೆಗಳಿಗೆ ಭರ್ತಿ- ಆರಗ ಜ್ಞಾನೇಂದ್ರ

0

ಉದ್ಯೋಗಾಕಾಂಕ್ಷಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭರ್ಜರಿ ಸಿಹಿಸುದ್ದಿ ನೀಡಿದೆ. ಶೀಘ್ರವೇ 5 ಸಾವಿರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ವರ್ಷ ಸಿಬ್ಬಂದಿ ನೇಮಕ ಕಾರ್ಯ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿಯೂ 5 ಸಾವಿರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆ ಭರ್ತಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಗೊಳಿಸಲಾಗಿದೆ. ಬಾಲ ಬಿಚ್ಚಿದವರ ಹೆಡೆಮುರಿ ಕಟ್ಟಲಾಗಿದೆ. ರಾಜ್ಯದೆಲ್ಲೆಡೆ ಹೊಸ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಆಗಷ್ಟ್ 16 ಶಿವಮೊಗ್ಗ ಭದ್ರಾವತಿಶಾಲಾಕಾಲೇಜುಗಳಿಗೆ ರಜೆ ಜಿಲ್ಲಾಧಿಕಾರಿ ಘೋಷಣೆ

0

ಸೆಕ್ಷನ್ 144 ಜಾರಿಗೊಳಿಸಿರುವುದರಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರ ಪ್ರದೇಶದ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಆಗಸ್ಟ್ 16ರಂದು ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೂಡ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ರಜೆ ಘೋಷಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಂದ ಪ್ರತಿ ದಿನ ಪ್ರಯಾಣಿಸುವ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ರಜೆ ಘೋಷಿಸಲಾಗಿದ್ದು, ಉಪನ್ಯಾಸಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.