Friday, March 20, 2026
Friday, March 20, 2026
Home Blog Page 1468

75 ವರ್ಷದ ಹಿರಿಯರಿಗೆ ಸೀಎಂ ಶಿಂಧೆ ಮಹಾ ಕೊಡುಗೆ

0

ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿಂಧೆ-ಫಡ್ನವೀಸ್‌ ಸರಕಾರದ ಸಂಪುಟ ಸಭೆ ನಡೆಯಿತು.

ಈ ಸಭೆಯಲ್ಲಿ, ಶಿಂಧೆ ಸರಕಾರ ಸಾರ್ವಜನಿಕರಿಗೆ ಮತ್ತು ಸರಕಾರಿ ನೌಕರರಿಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ ಉಚಿತ ಎಸ್‌ಟಿ ಬಸ್‌ ಪ್ರಯಾಣ ನೀಡುವ ಜತೆಗೆ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ಶಿಂಧೆ ಸರ‌ಕಾರದ ಹೊಸ ನಿರ್ಧಾರದ ಪ್ರಕಾರ, ಈಗ 75 ವರ್ಷ ಪೂರೈಸಿದ ಹಿರಿಯ ನಾಗರಿಕರು ರಾಜ್ಯ ಸಾರಿಗೆ ಸಂಸ್ಥೆಯ ಎಸ್‌ಟಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಜತೆಗೆ ಗೋವಿಂದ ತಂಡಕ್ಕೆ 10 ಲಕ್ಷ ರೂ.ಗಳ ವಿಮಾ ರಕ್ಷಣೆ ಮತ್ತು ಸರಕಾರಿ ನೌಕಕರರಿಗೆ ಭತ್ಯೆ ಹೆಚ್ಚಿಸಲಾಗಿದೆ.
ಗೋವಿಂದ ತಂಡಕ್ಕೆ ಸರಕಾರ ವಿಮಾ ಸೌಲಭ್ಯ ನೀಡಬೇಕು ಎಂಬ ಬೇಡಿಕೆ ಇತ್ತು.

ಈ ಬೇಡಿಕೆಯಂತೆ ಗೋವಿಂದ ತಂಡಕ್ಕೆ ಸರಕಾರದಿಂದ 10 ಲಕ್ಷ ರೂ. ವಿಮಾ ರಕ್ಷಣೆ ನೀಡಲಾಗುವುದು. ಈ ವಿಮಾ ರಕ್ಷಣೆಯ ಪ್ರೀಮಿಯಂ ಅನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಘೋಷಿಸಿದ್ದಾರೆ.

ಕೇಂದ್ರ ಸರಕಾರ ನೌಕರರ ಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದೆ.
ಮಹಾರಾಷ್ಟ್ರ ಸರಕಾರವು ನೌಕರರ ಖಾತೆಗೆ ಎರಡು ಕಂತುಗಳನ್ನು ಜಮಾ ಮಾಡಿದೆ. ಈಗ ಸರಕಾರ ಮೂರನೇ ಕಂತನ್ನು ಖಾತೆಗೆ ಕಳುಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಈ ಮಹತ್ವದ ಘೋಷಣೆ ಮಾಡಿದ್ದಾರೆ. ತುಟ್ಟಿಭತ್ಯೆ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿದೆ. ಹೆಚ್ಚಳವು ಆಗಸ್ಟ್ ನಿಂದ ಜಾರಿಗೆ ಬರಲಿದೆ. ಇದರಿಂದ ಸರಕಾರಿ ನೌಕರರ ಗಣೇಶೋತ್ಸವ ಸಡಗರದಿಂದ ಸಾಗುವುದರಲ್ಲಿ ಸಂಶಯವಿಲ್ಲ. 7ನೇ ವೇತನ ಆಯೋಗದ ಬಾಕಿಯ ಮೂರನೇ ಕಂತನ್ನು ಮಹಾರಾಷ್ಟ್ರ ಸರಕಾರಿ ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ.

ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೀನು ಊಟದ ಹೋಟೆಲ್ ಆರಂಭ

0

ಮೀನು ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನೂಟ ಮನೆ ಆರಂಭಿಸಲು ನಿರ್ಧರಿಸಿದೆ.

ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್‌.ಅಂಗಾರ, ‘ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿ ಕೆಲವು ಕಡೆಗಳಲ್ಲಿ ಮೀನು ಊಟದ ಹೋಟೇಲ್‌ಗಳನ್ನ ಪ್ರಾರಂಭಿಸಿಲಾಗಿತ್ತು. ಆದರೆ ವಿಸ್ತರಿಸಲು ಆಗಿರಲಿಲ್ಲ.
ಹಾಗಾಗಿ ಸದ್ಯ ಖಾಸಗಿ ಸಹಭಾಗಿತ್ವದಡಿ ರಾಜ್ಯದ ಎಲ್ಲೆಡೆ ಮೀನೂಟ ಮನೆ ಪ್ರಾರಂಭಿಸಲಿದೆ ಎಂದರು.

ಈ ಮೂಲಕ ಲಿಂಗನಮಕ್ಕಿ, ಭದ್ರಾ ಸೇರಿ ರಾಜ್ಯದ ಪ್ರಮುಖ 12 ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ರಾಜಾಹುಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯತ್ವ ಗೌರವಸಿ ಎಂ ಅಭಿನಂದನೆ

0

ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ರೈತ ನಾಯಕ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಪಕ್ಷದ ಅತ್ಯಂತ ಉನ್ನತವಾದ ಸಂಸದೀಯ ಮಂಡಳಿಗೆ ತಮ್ಮನ್ನು ನೇಮಕ ಮಾಡುವುದರ ಮೂಲಕ ಪಕ್ಷ ತಮಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ತಾವು ಈ ಹುದ್ದೆಗೆ ಏರಿರುವುದರಿಂದ ಬಿಜೆಪಿ ಕರ್ನಾಟಕಕ್ಕೆ ಆನೆ ಬಲಬಂದಂತಾಗಿದೆ. ಮುಂಬರುವ 2023ರ ರಾಜ್ಯ ಚುನಾವಣೆಯಲ್ಲಿ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ನಿಶ್ಚಿತ. B S ಯಡಿಯೂರಪ್ಪ ಅವರನ್ನು ಈ ಉನ್ನತ ಹುದ್ದೆಗೆ ನೇಮಕ ಮಾಡಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ, ರಾಷ್ಟ್ರೀಯ ಅಧ್ಯಕ್ಷ ಶ್ರೀ. ಜೆ.ಪಿ. ನಡ್ಡಾ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಶೇ2 ರಷ್ಟು ಕ್ರೀಡಾ ಮೀಸಲಾತಿ-ಸೀಎಂ

0

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗದು ಬಹುಮಾನ ನೀಡಿ ಗೌರವಿಸಿದರು.

ಬ್ಯಾಡ್ಮಿಂಟನ್ ಮಿಕ್ಸ್ ಡ್ ಡಬಲ್ಸ್ ನಲ್ಲಿ ಬೆಳ್ಳಿ ಗೆದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ.
ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ವಾಡ್ ಅವರಿಗೆ 15 ಲಕ್ಷ ರೂ. ಹಾಗೂ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ 8 ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ ಬಳಿ ಕ್ರೀಡಾಪ್ರೋತ್ಸಾಹಕ್ಕೆ ಮನವಿ ಮಾಡಿದ ಪದಕ ವಿಜೇತ ಗುರುರಾಜ್ ಪೂಜಾರಿ, ಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತಷ್ಟು ಬೆಂಬಲ ಸಿಕ್ಕರೆ ಇನ್ನೂ ಹೆಚ್ಚು ಪದಕ ಸಿಗುತ್ತದೆ. ದೇಶದ ಒಟ್ಟು 61 ಪದಕಗಳಲ್ಲಿ ಕರ್ನಾಟಕಕ್ಕೆ 3 ಪದಕ ಬಂದಿದೆ. ಬೇರೆ ರಾಜ್ಯಗಳಲ್ಲಿ ಪ್ರೋತ್ಸಾಹ ಧನ ಹೆಚ್ಚಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ಪ್ರೋತ್ಸಾಹ ಧನ ಕಡಿಮೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ಧನ ಸಿಕ್ಕರೆ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಪದಕಗಳನ್ನು ಗಳಿಸುತ್ತಾರೆ ಹಾಗೂ ಕ್ರೀಡಾಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೂಡ ನೀಡಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ, ಕ್ರೀಡಾ ಮನೋಭಾವದಿಂದ ಮನುಷ್ಯನಿಗೆ ಶಿಸ್ತು ಬರುತ್ತದೆ. ಕ್ರೀಡೆಯಿಂದ ಒಂದು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ನಮ್ಮ ರಾಜ್ಯದಲ್ಲಿ ಅನೇಕ ಕ್ರೀಡಾಪಟುಗಳಿದ್ದಾರೆ. ಕೆಲಸಕ್ಕಾಗಿ ನೀವು ಆಟವಾಡಬಾರದು. ದೇಶಕ್ಕೋಸ್ಕರ ಆಟ ಆಡಿ. ನಿಮ್ಮ ಆತಂಕ, ಭಯ ನನಗೆ ಅರ್ಥ ಆಗುತ್ತೆ. ಅದಕ್ಕೆ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ . ನಾವು ಈಗಾಗಲೇ ಪೋಲಿಸ್ ಮತ್ತು ಫಾರೆಸ್ಟ್ ಇಲಾಖೆಗಳಲ್ಲಿ ಶೇ.2 ರಷ್ಟು ಕ್ರೀಡಾ ಮೀಸಲಾತಿ ನೀಡಿದ್ದೇವೆ. ಮುಂದೆ ಎಲ್ಲಾ ಇಲಾಖೆಗಳಿಗೂ ವಿಸ್ತರಣೆ ಮಾಡಿ ಶೇ. 2 ರಷ್ಟು ಕ್ರೀಡಾ ಮೀಸಲಾತಿ ನೀಡ್ತೀವಿ ಎಂದರು.
ಅಮೃತ ಕ್ರೀಡಾ ದತ್ತು ಯೋಜನೆಯಡಿ ಆಯ್ಕೆಯಾದ 75 ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ, ಕರ್ನಾಟಕ ಒಲಿಂಪಿಕ್ ಅಧ್ಯಕ್ಷ ಕೆ.ಗೋವಿಂದರಾಜು ಮತ್ತು ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು.

ಅಂಗವಿಕಲರಿಗೆ ಎಸ್ ಬಿ ಐ ನಿಂದ ವಿಶೇಷ ಬ್ಯಾಂಕಿಂಗ್ ಸೇವೆ

0

ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಮನೆ ಬಾಗಿಲಿನ ಬ್ಯಾಂಕಿಂಗ್​ ಸೇವೆಗಳನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದು, ಈ ಸೇವೆಯನ್ನು ಕೋವಿಡ್​ -19 ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಬಳಸಲಾಗುತ್ತಿತ್ತು.

ಈಗ, ಎಸ್​ಬಿಐ ತಿಂಗಳಿಗೆ ಮೂರು ಬಾರಿ ವಿಕಲಚೇತನರಿಗೆ ಉಚಿತ ಬ್ಯಾಂಕಿಂಗ್​ ಸೇವೆಗಳನ್ನು ಘೋಷಿಸಿದೆ.
ಸಾರ್ವಜನಿಕ ವಲಯದ ಈ ಬ್ಯಾಂಕ್ ಇತ್ತೀಚಿನ ಟ್ವೀಟ್​ನಲ್ಲಿ ಈ ಕ್ರಮವನ್ನು ಘೋಷಿಸಿದೆ.

ʼನಿಮ್ಮ ಮನೆ ಬಾಗಿಲಿಗೆ ಎಸ್​ಬಿಐ‌ !!! ಅಂಗವಿಕಲ ಗ್ರಾಹಕರಿಗೆ, ಎಸ್.​ಬಿ.ಐ. ತಿಂಗಳಿಗೆ 3 ಬಾರಿ ಉಚಿತ ಡೋರ್​ ಸ್ಟೆಪ್​ ಬ್ಯಾಂಕಿಂಗ್​ ಸೇವೆಗಳಿಗೆ ಸಹಾಯ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಎಸ್​.ಬಿ.ಐ. ಡೋರ್​ಸ್ಟೆಪ್​ ಬ್ಯಾಂಕಿಂಗ್​ ಸೇವೆಗಳಲ್ಲಿ ನಗದು ಪಿಕಪ್​, ನಗದು ವಿತರಣೆ, ಫಾರ್ಮ್ 15ಎಚ್​ ಸ್ವೀಕಾರ, ಡ್ರಾಫ್ಟ್ ವಿತರಣೆ, ಅವಧಿ ಠೇವಣಿ ಸಲಹೆ, ಲೈಫ್ ಸರ್ಟಿಫಿಕೇಟ್ ಸ್ವೀಕಾರ, ಕೆವೈಸಿ ದಾಖಲೆಗಳ ಸ್ವೀಕಾರ ಸೇವೆ ಒಳಗೊಂಡಿದೆ.

ಗ್ರಾಹಕರು ಎಸ್.​ಬಿ.ಐ. ಮನೆ ಬಾಗಿಲಿನ ಬ್ಯಾಂಕಿಂಗ್​ ಸೇವೆಗಳಿಗೆ ನೋಂದಾಯಿಸಲು ಟೋಲ್​ ಸಂಖ್ಯೆ 1800 1037188 ಅಥವಾ 1800 1213 721 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು.

ಸಂತ್ರಸ್ತ ಪ್ರೇಮ್ ಸಿಂಗ್ ಅವರಿಗೆ ಸಾಂತ್ವನ ಹೇಳಿದ ಮೇಯರ್ ಸುನೀತಾ ಅಣ್ಣಪ್ಪ

0

ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವ ಚಿತ್ರ ತೆರವು ಸಂಬಂಧಿಸಿದಂತೆ, ಗಾಂಧಿ ಬಜಾರ್ ಸಮೀಪ ಉಪ್ಪಾರಕೇರಿಯ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಚಾಕು ಇರಿದು ಹಲ್ಲೆ ನಡೆದಿದೆ. ಈ ಹಿನ್ನೆಲೆಯಲ್ಲಿ ಗಾಯಾಳು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅವರು, ಪ್ರೇಮ್ ಸಿಂಗ್ ಅವರನ್ನು ವಾರ್ಡ್ ನಲ್ಲಿ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ ಶೀಘ್ರ ಗುಣಮುಖ ವಾಗಲೆಂದು ಹಾರೈಸಿದರು.

ಸರ್ಕಾರದ ಯೋಜನೆ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ

0

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೊರಡಿಸಿದ ಇತ್ತೀಚಿನ ಸುತ್ತೋಲೆಯಂತೆ ಇನ್ನು ಮುಂದೆ ನೀವು ಸರ್ಕಾರಿ ಸಬ್ಸಿಡಿಗಳು ಹಾಗೂ ಪ್ರಯೋಜನಗಳನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.

ಇಲ್ಲವೇ, ಆಧಾರ್‌ ದಾಖಲಾತಿ ಚೀಟಿಯಾದರೂ ಹೊಂದಿರಲೇಬೇಕು.

ಆಧಾರ್‌ ಸಂಖ್ಯೆ ಇಲ್ಲದಿದ್ದರೆ ಸರ್ಕಾರದ ಯಾವುದೇ ಸವಲತ್ತು ಹಾಗೂ ಸಬ್ಸಿಡಿಗಳು ನಿಮಗೆ ಸಿಗುವುದಿಲ್ಲ ಎಂದು ಸುತ್ತೋಲೆ ತಿಳಿಸಿದೆ.

ಯುಐಡಿಎಐ ಕಳೆದ ವಾರ ಎಲ್ಲಾ ಕೇಂದ್ರ ಸಚಿವಾಲಯಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಈ ಸುತ್ತೋಲೆ ಹೊರಡಿಸಿದೆ.

ಆಧಾರ್ ಸಂಖ್ಯೆ ಹೊಂದಿಲ್ಲದೆ ಸರ್ಕಾರ ನೀಡುವ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಪಡೆಯುತ್ತಿರುವವರಿಗೆ ಆಧಾರ್ ನಿಯಮಗಳನ್ನು ಬಿಗಿಗೊಳಿಸಲು ಆಗಸ್ಟ್ 11 ರಂದು ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎನ್ನಲಾಗಿದೆ. ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬರುವ ಸವಲತ್ತುಗಳು, ಸಬ್ಸಿಡಿಗಳು ಹಾಗೂ ಸೇವೆಗಳನ್ನು ನೀಡಲು ಫಲಾನುಭವಿಗಳ ಅರ್ಹತೆಯನ್ನು ನಿರ್ಧರಿಸುವ ಸಲುವಾಗಿ ಈಗ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಸರ್ಕಾರದ ಪ್ರಮಾಣ ಪತ್ರಗಳನ್ನು ಬಯಸಿದರೂ ಕೂಡ ಆಧಾರ್‌ ಕಡ್ಡಾಯ ಎಂದು ತಿಳಿಸಲಾಗಿದೆ.

ದೇಶವು ರಷ್ಯಾದಿಂದ ಕಚ್ಚಾತೈಲ ಖರೀದಿ ಮುಂದುವರೆಸಲಿದೆ

0

ಬಹುತೇಕ ಭಾರತೀಯರು ಕಚ್ಛಾ ತೈಲಕ್ಕೆ ಹೆಚ್ಚಿನ ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ. ಆದ್ದರಿಂದ, ದೇಶವು ರಷ್ಯಾದೊಂದಿಗೆ ಕಚ್ಛಾ ತೈಲ ಖರೀದಿ ಒಪ್ಪಂದಗಳನ್ನು ಮುಂದುವರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ನಾವು ನಮ್ಮ ಹಿತಾಸಕ್ತಿಗಳ ಕುರಿತಾಗಿ ತುಂಬಾ ಮುಕ್ತ ಮತ್ತು ಪ್ರಾಮಾಣಿಕವಾಗಿದ್ದೇವೆ. ನಾನು 2000 ಡಾಲರ್ ತಲಾದಾಯವನ್ನು ಹೊಂದಿರುವ ದೇಶವನ್ನು ಹೊಂದಿದ್ದೇನೆ. ಇವರು ಹೆಚ್ಚಿನ ಇಂಧನ ಬೆಲೆಗಳನ್ನು ನಿಭಾಯಿಸುವ ಜನರಲ್ಲ. ಹೀಗಾಗಿ ಅವರಿಗೆ ಉತ್ತಮ ವ್ಯವಹಾರವನ್ನು ಒದಗಿಸುವುದು ನನ್ನ ನೈತಿಕ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ತೈಲ ಖರೀದಿಗಳು, ನಿರ್ಬಂಧಗಳು ಇತ್ಯಾದಿಗಳ ವಿಷಯಕ್ಕೆ ಬಂದಾಗ, ಇಂಧನ ಖರೀದಿಗೆ ನಿರ್ಬಂಧಗಳಿವೆ ಎಂಬುದನ್ನು ನಾನು ಗಮನಿಸುತ್ತೇನೆ. ಖಂಡಿತವಾಗಿ, ನಾವು ಕೂಡ ರಷ್ಯಾದಿಂದ ಹೆಚ್ಚುವರಿ ಇಂಧನವನ್ನು ಖರೀದಿಸದಂತೆ ದೇಶಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಆದರೆ, ಪ್ರತಿಯೊಂದು ದೇಶವೂ ವಿಭಿನ್ನವಾಗಿದೆ. ಹೀಗಾಗಿ ವಿಭಿನ್ನ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಹೊಂದಿರುತ್ತದೆ. ಆದರೆ, ನಾವು ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳು ರಷ್ಯಾದಿಂದ ಇಂಧನ ಖರೀದಿಯನ್ನು ಹೆಚ್ಚಿಸದಿರಲು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರು ಮಾಡಿದಾಗಿನಿಂದ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದ್ದವು. ಈ ಪೈಕಿ ಅಮೆರಿಕವು ಸೇರಿತ್ತು. ಹೀಗಾಗಿ ಏಪ್ರಿಲ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಅವರು, ರಷ್ಯಾದಿಂದ ಹೆಚ್ಚುವರಿ ತೈಲವನ್ನು ಖರೀದಿಸದಂತೆ ಭಾರತವನ್ನು ಒತ್ತಾಯಿಸಿದ್ದರು.

ಸುಳ್ಳು ಸುದ್ದಿ ಹರಡುವವರ ಮೇಲೆ ನಿಗಾ

0

ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉದ್ವಿಗ್ನಗೊಂಡಿದ್ದ ಶಿವಮೊಗ್ಗದಲ್ಲಿ ಪರಿಸ್ಥಿತಿ ಈಗ ಸಹಜ ಸ್ಥಿತಿಗೆ ಮರಳುತ್ತಿದೆ.
ಎಂದಿನಂತೆ ಇಂದಿನಿಂದ ಶಾಲಾ – ಕಾಲೇಜುಗಳು ಆರಂಭವಾಗಿವೆ.

ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಆಗಸ್ಟ್ 18ರ ರಾತ್ರಿ ಹತ್ತು ಗಂಟೆಯವರೆಗೆ ಮುಂದುವರೆಯಲಿದೆ.
ಶಿವಮೊಗ್ಗ ಹಾಗೂ ಭದ್ರಾವತಿ ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳೇ ಖುದ್ದಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಆದರೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದರಿಂದ ಅಂತವರ ಮೇಲೂ ತೀವ್ರ ನಿಗಾ ಇರಿಸಲಾಗಿದೆ. ಬಡಾವಣೆಗಳಲ್ಲಿ ಅಂಗಡಿ ಮುಂಗಟ್ಟುಗಳು ಸಹ ತೆರೆದಿದ್ದು, ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಪ್ರಮುಖ ಬೀದಿಗಳಲ್ಲಿ ಅಂಗಡಿಗಳನ್ನು ತೆರೆಯಲು ಪೊಲೀಸರು ಅವಕಾಶ ಕೊಡುವ ಸಾಧ್ಯತೆ ಇದೆ.

ದೇಶದಲ್ಲಿ ಕೊಂಚ ಆತಂಕ ಹೆಚ್ಚಿಸಿರುವ ಕೋವಿಡಾಸುರ

0

ದೇಶದಲ್ಲಿ ಮತ್ತೆ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ ಸೋಂಕಿತರ ಪ್ರಮಾಣ ಶೇ. 20ರ ಸನಿಹ ತಲುಪಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಆಗಸ್ಟ್ 16 ರಂದು ದೆಹಲಿಯಲ್ಲಿ ಒಟ್ಟು 917 ಕರೋನಾ ಸಾಂಕ್ರಾಮಿಕ ಪ್ರಕರಣಗಳು ವರದಿಯಾಗಿವೆ.

ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 4775 ಜನರಿಗೆ ಕರೋನಾ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 917 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ ಪ್ರಸ್ತುತ 6867 ಕೊರೊನಾವೈರಸ್ ರೋಗಿಗಳಿದ್ದಾರೆ. ಅದೇ ಸಮಯದಲ್ಲಿ, ನಗರದಲ್ಲಿ ಕಂಟೋನ್ಮೆಂಟ್ ವಲಯಗಳ ಸಂಖ್ಯೆ ಪ್ರಸ್ತುತ 326 ಆಗಿದೆ.

ದೆಹಲಿಯಲ್ಲಿನ ಹೊಸ ಅಂಕಿಅಂಶಗಳೊಂದಿಗೆ, ಕರೋನಾ ಸೋಂಕಿನ ಪ್ರಮಾಣವು 19.20% ಕ್ಕೆ ಏರಿದೆ. ಇದು ಕಳೆದ 7 ತಿಂಗಳಲ್ಲೇ ಅತಿ ಹೆಚ್ಚು ಕರೋನಾ ಸೋಂಕಿನ ಪ್ರಮಾಣವಾಗಿದೆ.

ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಾರ, ಈಗ ನಗರದಲ್ಲಿ ಸೋಂಕಿತರ (ಕೊರೊನಾವೈರಸ್) ಒಟ್ಟು ಸಂಖ್ಯೆ 19 ಲಕ್ಷ 86 ಸಾವಿರ 739 ಕ್ಕೆ ಏರಿದೆ. ಈ ಪೈಕಿ 26 ಸಾವಿರದ 392 ರೋಗಿಗಳು ಸಾವನ್ನಪ್ಪಿದ್ದಾರೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿದ ದೆಹಲಿ ಸರ್ಕಾರ ಈಗ ಕಂದಾಯ ಇಲಾಖೆಯ ಅಧಿಕಾರಿಗಳ 2 ತಂಡಗಳನ್ನು ರಚಿಸಿದೆ. ಈ ತಂಡಗಳು ಕೋವಿಡ್‌ಗೆ ಸಂಬಂಧಿಸಿದ ಡೇಟಾವನ್ನು ನಿರ್ವಹಿಸುತ್ತವೆ.

ವರದಿಯ ಪ್ರಕಾರ, ಈ ಎರಡೂ ತಂಡಗಳು ವಿವರವಾದ ಪೋರ್ಟಲ್‌ನಲ್ಲಿ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಡೇಟಾವನ್ನು ನಿಯಮಿತವಾಗಿ ನವೀಕರಿಸುತ್ತಲೇ ಇರುತ್ತವೆ. ಎರಡೂ ತಂಡಗಳು SDM (HQ) SA ಬೆಲ್‌ರೋಸ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತವೆ.

ಕೊರೊನಾ ಸೋಂಕಿನ ಅಂಕಿ-ಅಂಶಗಳು ಹೆಚ್ಚಾಗುತ್ತಿರುವುದು ರಾಜ್ಯ ಸರ್ಕಾರವನ್ನು ಮತ್ತೊಮ್ಮೆ ಚಿಂತೆಗೀಡು ಮಾಡಿದೆ.