Friday, March 20, 2026
Friday, March 20, 2026
Home Blog Page 1467

ಭಾರತದಲ್ಲಿ ಓದುತ್ತಿರುವ ಆಫ್ಘನ್ ವಿದ್ಯಾರ್ಥಿನಿಯಿಂದ ಪ್ರಧಾನಿ ಮೋದಿಗೆ ಮನವಿ

0

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡು ಬಳಿಕ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.

ಉದ್ಯೋಗ ಸ್ಥಳದಲ್ಲಿ ಅಲ್ಲಿನ ಮಹಿಳೆಯರ ಪರಿಸ್ಥಿತಿ ಶೋಚನಿಯವಾಗಿದ್ದು, ವಿದ್ಯಾರ್ಥಿನಿಯರು ಶಾಲಾ – ಕಾಲೇಜಿಗೆ ತೆರಳಲೂ ಸಹ ಹಲವಾರು ಕಟ್ಟುಪಾಡುಗಳಿವೆ.
ಇದರ ಮಧ್ಯೆ ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಅಫ್ಘಾನಿಸ್ತಾನಕ್ಕೆ ತೆರಳಿದ ಬಳಿಕ ಅಲ್ಲಿಂದ ವಾಪಸ್ ಬರಲು ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಯುವತಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿ ತಮ್ಮ ವ್ಯಾಸಂಗಕ್ಕೆ ನೆರವಾಗುವಂತೆ ಮೊರೆ ಇಟ್ಟಿದ್ದಾರೆ.

ಅಫ್ಘಾನಿಸ್ತಾನದ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಶುಕ್ರವಾರದಂದು ವಿಡಿಯೋ ಹರಿಬಿಟ್ಟಿದ್ದು, ನಾನು ಭಾರತದಲ್ಲಿ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾಳೆ. ಅಲ್ಲದೆ ನಾವುಗಳು ಭಾರತವನ್ನು ಪ್ರೀತಿಸುತ್ತೇವೆ. ಅದು ನಮ್ಮ ಕುಟುಂಬವಿದ್ದಂತೆ ಎಂದು ಫಾತಿಮಾ ಹೇಳಿಕೊಂಡಿದ್ದಾಳೆ.

ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ 5000 ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಈಗ ಅಲ್ಲಿಯೇ ಸಿಲುಕಿಕೊಂಡಿದ್ದು, ವಿದ್ಯಾಭ್ಯಾಸಕ್ಕಾಗಿ ವಾಪಸ್ ಬರಲು ಸಾಧ್ಯವಾಗುತ್ತಿಲ್ಲ. ವೀಸಾ ಸಿಗದಿರುವುದೇ ಇದಕ್ಕೆ ಕಾರಣವಾಗಿದ್ದು, ಹೀಗಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ.

ಸಾಲಗಾರರಿಗೆ ಶಾಕ್ ಕೆಲವು ಬ್ಯಾಂಕ್ ಗಳ ಸಾಲದ ಬಡ್ಡಿದರದಲ್ಲಿ ಏರಿಕೆ

0

ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿರುವ ಬೆನ್ನಲ್ಲೇ ಸಾಲದ ಬಡ್ಡಿ ದರ ಏರಿಕೆಯಾಗಿದೆ. ಅನೇಕ ಬ್ಯಾಂಕುಗಳು ಸಾಲದ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ.

ಇದೇ, ಸಂದರ್ಭದಲ್ಲಿ ಠೇವಣಿ ಬಡ್ಡಿ ದರ ಕೂಡ ಏರಿಕೆಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್.ಡಿ.ಎಫ್.ಸಿ.ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮೊದಲಾದ ಬ್ಯಾಂಕುಗಳು ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಣೆ ಮಾಡಿವೆ.

ಅವಧಿ ಮತ್ತು ಠೇವಣಿ ಮೊತ್ತದ ಆಧಾರದ ಮೇಲೆ ಬಡ್ಡಿ ದರಗಳನ್ನು ಹೆಚ್ಚಳ ಮಾಡಲಾಗಿದೆ. 2 ಕೋಟಿ ರೂಪಾಯಿಯವರೆಗಿನ ಅನೇಕ ಕಾಲಮಿತಿ ಠೇವಣಿಗಳ ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಠೇವಣಿ ಬಡ್ಡಿ ದರ ಏರಿಕೆಯಾಗಿದೆ.

ರಾಜ್ಯದಲ್ಲಿ ಸುರಿಮಳೆಗೆ ಈಗ ಸಂಪೂರ್ಣ ವಿರಾಮ

0

ರಾಜ್ಯದಲ್ಲಿ ಮಳೆ ಸಂಪೂರ್ಣ ಕಡಿಮೆಯಾಗಿದೆ. ಬೆಳಗಾವಿ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಸಣ್ಣದಾಗಿ ಮಳೆಯ ಸಿಂಚನ ಇದೆ. ಇದನ್ನು ಹೊರತುಪಡಿಸಿದರೆ, ಮಳೆ ಬ್ರೇಕ್ ನೀಡಿದೆ. ರಾಜ್ಯದಲ್ಲಿಂದು ಒಣ ಹವೆ ವಾತಾವರಣ ಇರಲಿದೆ.

ಆದರೆ, ಅನೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಕೊಂಚ ಸೆಕೆ ಇರಲಿದೆ. ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಜಲಾಶಯಗಳು, ಕೆರೆ ಕುಂಟೆಗಳು ಭರ್ತಿಯಾಗಿವೆ. ಮತ್ತೊಂದೆಡೆ ನೆರೆಯ ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಕೃಷ್ಣಾ ಮತ್ತು ಭೀಮಾ ನದಿ ಉಕ್ಕಿ ಹರಿಯುತ್ತಿವೆ.

ರಾಜಧಾನಿ ಬೆಂಗಳೂರಿನಲ್ಲಿ 10 ಗಂಟೆ ನಂತರ ಸೂರ್ಯನ ಪ್ರಖರತೆ ಹೆಚ್ಚಾಗಲಿದೆ. ನಗರದಲ್ಲಿ ಸಂಜೆ ಆಗ್ತಿದ್ದಂತೆ ಸುಳಿಗಾಳಿ ಹೆಚ್ಚಾಗುತ್ತಿರುವ ಕಾರಣ ಚಳಿಯ ಪ್ರಮಾಣ ಕೊಂಚ ಏರಿಕೆಯಾಗಿದೆ. ಇಂದು ನಗರದಲ್ಲಿ ಗರಿಷ್ಠ 28 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ದೇಶದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ

0

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 13,272 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಇಳಿಮುಖವಾಗಿದ್ದು ಕಳೆದ 24 ಗಂಟೆಯಲ್ಲಿ 36 ಮಂದಿ ಬಲಿಯಾಗಿದ್ದಾರೆ.

ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,27,289 ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 1,01,166 ಕೋವಿಡ್ ಸಕ್ರಿಯ ಪ್ರಕರಣಗಳಿದೆ. ಶೇ.98.58 ರಷ್ಟು ಜನ ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಈವರೆಗೆ 4,36,99,435 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 13,15,536 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಇದುವರೆಗೆ 2,09,40,48,140 ಡೋಸ್ ಲಸಿಕೆ ಹಾಕಲಾಗಿದೆ.

ಭಾರತದಲ್ಲಿ ಹತ್ತು ಮಂಕಿಪಾಕ್ಸ್ ಪ್ರಕರಣ ಪತ್ತೆ

0

ಮಂಕಿಪಾಕ್ಸ್‌ ರೋಗಿಗಳ ಸಂಪರ್ಕಿತರಲ್ಲಿ ಪ್ರತಿಕಾಯದ ಸ್ಥಿತಿಯನ್ನು ತಿಳಿಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸೆರೋ ಸಮೀಕ್ಷೆ ನಡೆಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಈ ಸೋಂಕು ಲಕ್ಷಣರಹಿತವಾಗಿ ಎಷ್ಟು ಮಂದಿಗೆ ಬಾಧಿಸಿದೆ ಎಂಬುದು ತಿಳಿದು ಬಂದಿಲ್ಲ ಎಂದು ತಿಳಿದು ಬಂದಿದೆ.

ಇದುವರೆಗೆ ಭಾರತದಲ್ಲಿ ಮಂಕಿಪಾಕ್ಸ್‌ನ ಹತ್ತು ಪ್ರಕರಣಗಳು ವರದಿಯಾಗಿವೆ.

ಕೃಷ್ಣನಿಗೆ ಅವಲಕ್ಕಿ ಏಕೆ ಇಷ್ಟ?

0

“ಕೃಷ್ಣನಿಗೆ ಏಕೆ ಅವಲಕ್ಕಿ ಇಷ್ಟ?” -ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ತನ್ನಿಮಿತ್ತ ಈ ವಿಶೇಷ ಕಿರು ಲೇಖನ, ಸುಧಾಮ ಕೃಷ್ಣನಿಗೆ ಅವಲಕ್ಕಿ ಕೊಟ್ಟ, ಕೃಷ್ಣ ಅದನ್ನು ಇಷ್ಟಪಟ್ಟ ಏಕೆಂದು ಕೃಷ್ಣನೇ ಹೇಳಿರುವ ಸಾರಾಂಶ ಇಲ್ಲಿದೆ-ಎಚ್.ಬಿ.ಮಂಜುನಾಥ, ಹಿರಿಯಪತ್ರಕರ್ತ. ಶ್ರೀಕೃಷ್ಣನ ಸಹಪಾಠಿಯಾದ ಸುದಾಮನು ಅಂದರೆ ಕುಚೇಲನು ಕೃಷ್ಣನನ್ನು ಭೇಟಿಯಾಗಲು ಹೋಗುವಾಗ ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ಹೋಗಿ ಅತ್ಯಂತ ಸಂಕೋಚದಿಂದ ಕೃಷ್ಣನಿಗೆ ಕೊಟ್ಟಾಗ ಕೃಷ್ಣ ಅದನ್ನು ಇಷ್ಟಪಟ್ಟು ಪ್ರೀತಿಯಿಂದ ತಿಂದ ಎಂದು ಹೇಳಲಾಗುತ್ತದೆ, ಅಂದರೆ ಕೃಷ್ಣನಿಗೆ ವಸ್ತು ರೂಪದ ಅವಲಕ್ಕಿ ಅಷ್ಟೊಂದು ಇಷ್ಟವೇ? ಈ ಬಗ್ಗೆ ಭಗವಾನ್ ಶ್ರೀಕೃಷ್ಣನೇ ಭಾಗವತದ 22 ನೇ ಅಧ್ಯಾಯದ ದಶಮಸ್ಕಂದದಲ್ಲಿ ಅಭಿಪ್ರಾಯಪಟ್ಟಿರುವನೆಂದು ಪ್ರಾಜ್ಞರು ಹೇಳುವ ಅಂಶವನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲಿಚ್ಛಿಸುವೆ.

ಹಾಗಾದರೆ ವಸ್ತು ರೂಪದ ಅವಲಕ್ಕಿ ತಯಾರಾಗುವ ವಿಧಾನವನ್ನು ಮೊದಲು ಅವಲೋಕಿಸೋಣ, ಭತ್ತವನ್ನು ನೀರಿನಲ್ಲಿ ಮುಳುಗಿಸಿ ತೋಯಿಸಬೇಕು, ಹಾಗೆ ತೊಯ್ದ ಭತ್ತವನ್ನು ಓಡಿನಲ್ಲಿ ಅರ್ಥಾತ್ ಬಾಣಲೆಯಲ್ಲಿ ಹುರಿಯಬೇಕು, ನಂತರ ಅದನ್ನು ಒನಕೆಯಿಂದ ಕುಟ್ಟಿ ಕುಟ್ಟಿ ಸಿಪ್ಪೆತೆಗೆದು ವಿಸ್ತಾರ ವಾಗುವಂತೆ ಮಾಡಬೇಕು. ಇದರ ಅರ್ಥ “ನಾವು ಭಕ್ತಿಯಲ್ಲಿ ಮುಳುಗಿ ತೋಯಬೇಕು, ನಂತರ ಕರ್ಮವೆಂಬ ಓಡಿನಲ್ಲಿ ಹುರಿ ಯಲ್ಪಟ್ಟು ಅಂದರೆ ಬೆಂದು, ನಂತರ ಜ್ಞಾನವೆಂಬ ಒನಕೆಯ ಪೆಟ್ಟಿಗೆ ಅಹಂಕಾರವೆಂಬ ಸಿಪ್ಪೆಯನ್ನು ಕಳಚಿಕೊಂಡು ಹೃದಯ ವಿಸ್ತಾರವಾಗ ಬೇಕು ಇದು ವೈರಾಗ್ಯ, ಇದೇ ಪರಿಪಾಕ ಗೊಳ್ಳುವಿಕೆ. ಭತ್ತವನ್ನು ಹಾಗೇ ತಿನ್ನಲು ಹೋದರೆ ಬಾಯಿಯೊಳಗೆ ಗಾಯವಾಗಿ ನೋವಾಗುತ್ತದೆ, ಅಕ್ಕಿ ಮಾಡಿಕೊಂಡು ತಿಂದರೆ ಹೊಟ್ಟೆ ನೋಯುತ್ತದೆ, ಅವಲಕ್ಕಿ ಮಾಡಿಕೊಂಡು ತಿಂದರೆ ಬಾಯಿಗೂ ಹಿತ ಹೊಟ್ಟೆಗೂ ಹಿತ ಹೀಗೆ ಪರಿಪಾಕ ಗೊಂಡ ಅವಲಕ್ಕಿ ಮತ್ತೆ ಮೊಳಕೆಯೊಡೆಯುವುದಿಲ್ಲ,ಭತ್ತವೆಂದರೆ ಮೊಳಕೆಯೊಡೆಯುತ್ತದೆ, ಅಂದರೆ ಭಕ್ತಿ ಜ್ಞಾನ ವೈರಾಗ್ಯ ಗಳಿಂದ ಪರಿ ಪಾಕಗೊಂಡ ವರಿಗೆ ಪುನರ್ಜನ್ಮವಿಲ್ಲ ಎಂದರ್ಥ.

ಇದೇ ಕೃಷ್ಣ ಪ್ರೀತಿ, ಈ ಅರ್ಥದಲ್ಲಿ ಶ್ರೀಕೃಷ್ಣನಿಗೆ ಅವಲಕ್ಕಿ ತತ್ವ ಪ್ರೀತಿಯೇ ವಿನಹ ವಸ್ತು ರೂಪದ ಅವಲಕ್ಕಿ ಅಲ್ಲ. ನಾವು ಅವಲಕ್ಕಿಯನ್ನು ಕೃಷ್ಣನಿಗೆ ನೈವೇದ್ಯ ಮಾಡಿದಾಕ್ಷಣ, ನೈವೇದ್ಯ ಮಾಡಿದ ಅವಲಕ್ಕಿಯನ್ನು ನಾವು ಸೇವಿಸಿದಾಕ್ಷಣ ಕೃಷ್ಣ ಪ್ರೀತಿಯನ್ನು ಪಡೆದೆವೆಂದರೆ, ಪಡೆಯುತ್ತೇವೆ ಎಂದರೆ ಅದು ಬರೀ ಭ್ರಮೆ ಅಷ್ಟೇ. ಅವಲಕ್ಕಿ ಯಂತೆ ನಾವು ಭಕ್ತಿ ಜ್ಞಾನ ವೈರಾಗ್ಯ ಗಳಿಂದ ಪರಿಪಾಕಗೊಂಡಿವರೆ ಮೊಳಕೆ ಯೊಡೆಯದೆ ಭಯ ಶೋಕ ಮೋಹ ಗಳಿಂದ ಕೂಡಿದ ಜನ್ಮಜನ್ಮಾಂತರ ಗಳಿಂದ ಪುನರ್ಜನ್ಮ ವಿರದ ಮೋಕ್ಷ ಪಡೆಯುತ್ತೇವೆ ಎಂದರ್ಥ. ಇದೇ ಶ್ರೀ ಕೃಷ್ಣನ ಅವಲಕ್ಕಿ ಪ್ರೀತಿಯ ತತ್ವಾರ್ಥ. ಈ ತತ್ವಾರ್ಥವಿರುವುದರಿಂದಲೇ ಅವಲಕ್ಕಿಯು ಶ್ರೀ ಗಣಪತಿಗೂ ಪ್ರೀತಿ, ಗಣಹೋಮದ ಅಷ್ಟದ್ರವ್ಯಕ್ಕೂ ಅವಲಕ್ಕಿ ಬೇಕು. ಎಚ್.ಬಿ.ಮಂಜುನಾಥ- ಹಿರಿಯ ಪತ್ರಕರ್ತ

ಫೋಟೋಗ್ರಫಿ ದಿನ:ಹೆಮ್ಮೆಯ ಶಿವಮೊಗ್ಗ ನಂದನ

0

ಜಗತ್ತಿನಾದ್ಯಂತ ಇಂದು ವಿಶ್ವ ಛಾಯಾಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಪದಗಳಲ್ಲಿ ಹೇಳಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿಯಲ್ಲಿದೆ.

ಜಗತ್ತಿನಲ್ಲಿ ಉದ್ಬವಿಸಬಹುದಾದ ಕಠಿಣ ಸನ್ನಿವೇಶಗಳಲ್ಲಿ ಛಾಯಾಗ್ರಾಕರು ತಮ್ಮ ಚಾಕಚಕ್ಯತೆಯನ್ನ ಮರೆದಿದ್ದಾರೆ. ಯುದ್ಧವಾಗಲಿ, ಪ್ರಕೃತಿ ವಿಕೋಪಗಳಾಗಲಿ ಎಂತಹ ವಿಷಮ ಸನ್ನಿವೇಶದಲ್ಲೂ ತಮ್ಮ ಜೀವದ ಹಂಗು ತೊರೆದು ಕ್ಲಿಕ್ಕಿಸುವ ತಮ್ಮ ಫೋಟೋಗಳ ಮೂಲಕ ಮಾಹಿತಿಯನ್ನ ಜನರಿಗೆ ಮುಟ್ಟಿಸುವಂತ ಕೆಲಸವನ್ನ ಮಾಡುತ್ತಿದ್ದಾರೆ.

ಈ ಸಾಲಿನಲ್ಲಿ ತಟ್ಟನೇ ನೆನಪಾಗುವುದು ಶಿವಮೊಗ್ಗದ ಹಿರಿಯ ಫೋಟೋಗ್ರಾಫರ್ ಶಿವಮೊಗ್ಗ ನಂದನ್..
ಶಿವಮೊಗ್ಗ ನಂದನ್ ಇವರು 1967ರಲ್ಲಿ ಶಿವಮೊಗ್ಗದ ಅರಸಳು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಮಾದೇಗೌಡ ತಾಯಿ ಮಾಯಮ್ಮ.
ಇವರು 1988ರಲ್ಲಿ ತಮ್ಮ ಛಾಯಾಗ್ರಾಹಕ ವೃತ್ತಿ ಪ್ರಾರಂಭಿಸಿದರು. 1994ರಿಂದ ಹೊಸದಿಗಂತ, ಜನವಾಹಿನಿ, ಕನ್ನಡ ಪ್ರಭ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳಿಗೆ ಛಾಯಾಗ್ರಹಕರಾಗಿ ಕೆಲಸ ನಿರ್ವಹಿಸಿದ್ದಾರೆ.

ಇವರು ಶಿವಮೊಗ್ಗ ಹಾಗೂ ಕರ್ನಾಟಕದ ಹಲವೆಡೆ ಛಾಯಾಚಿತ್ರ ನೀಡಿದ್ದಾರೆ. ಇವರು ಫೋಟೋಗ್ರಾಫಿ ಯೊಂದಿಗೆ ಭಾವಚಿತ್ರಗಳು, ವನ್ಯ ಜೀವಿ, ಲ್ಯಾಂಡ್ಸ್ಕೇಪ್ , ಹಾವುಗಳ ವಿಶೇಷ ಚಿತ್ರಗಳು, ಪಕ್ಷಿ ಚಿತ್ರಗಳು, ಕೈಗಾರಿಕಾ ಛಾಯಾ ಚಿತ್ರಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

ಇವರು ನೈನಿತಾಲ್, ದೆಹಲಿ, ಮುಂಬೈ ಮುಂತಾದ ಕಡೆ ಆಹ್ವಾನದ ಮೇರೆಗೆ ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿದ್ದಾರೆ.

ಸುಧಾ, ಪ್ರಜಾವಾಣಿ, ತರಂಗ, ಉದಯವಾಣಿ, ಕಸ್ತೂರಿ , ತುಷಾರ, ಸಖಿ, ಮಯೂರ, ಹಾಗೂ ಇನ್ನು ಅನೇಕ ಪತ್ರಿಕೆಗಳಲ್ಲಿ ಇವರ ಛಾಯಾಚಿತ್ರಗಳು ಪ್ರಕಟಗೊಂಡಿವೆ. ಜೊತೆಗೆ ಪುಸ್ತಕಗಳ ರಕ್ಷಾಪುಟ, ಶುಭಾಶಯ ಪತ್ರಗಳ ಮುಖಪುಟ, ಜಾಹೀರಾತು ವಿನ್ಯಾಸಗಳಲ್ಲಿ ಇವರ ಛಾಯಾಚಿತ್ರಗಳು ಬಳಕೆಯಾಗಿವೆ .ಕರ್ನಾಟಕದ ಹಲವೆಡೆ ಛಾಯಾಚಿತ್ರ ಪ್ರದರ್ಶನ ನೀಡಿದ್ದಾರೆ.

ಇವರ ಛಾಯಾಚಿತ್ರಗಳಿಗೆ ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಪ್ರಶಸ್ತಿ, ನಾಲ್ಕು ರಾಜ್ಯ ಪ್ರಶಸ್ತಿ, ಜಿಲ್ಲಾಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ಲಭಿಸಿವೆ.
, 2010ರ ಶಿವಮೊಗ್ಗ ದಸರಾದಲ್ಲಿ ಶಿವಮೊಗ್ಗ ನಗರಸಭೆಯ ವತಿಯಿಂದ ಪೌರ ಸನ್ಮಾನ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ದೊರೆತಿವೆ.
ತುಮಕೂರಿನಲ್ಲಿ 2015 -16ರ ರಾಜ್ಯಮಟ್ಟದ ಅನುಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.

ಪ್ರಸ್ತುತ ಇವರು ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್ಪ್ರೆಸ್ ಶಿವಮೊಗ್ಗ ಆವೃತ್ತಿಯ ಪ್ರಮುಖ ಛಾಯಾಚಿತ್ರಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಶಾಲೆಗಳಲ್ಲಿ ಗಣೇಶಮೂರ್ತಿ ಇರಿಸಲು ಮತ್ತು ನಮಾಜ್ ಮಾಡಲು ಅವಕಾಶವಿಲ್ಲ

0

ಶಾಲೆಯಲ್ಲಿ ಗಣೇಶಮೂರ್ತಿಯನ್ನ ಕೂರಿಸುವ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಮಾತನಾಡಿ ʻಗಣೇಶ ಕೂರಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ, ನಮಾಜ್‌ಗೆ ಅವಕಾಶ ಕೊಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಾಲೆಯಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ. ಕೂರಿಸಬೇಡಿ ಅಂತಾನೂ ಹೇಳಿಲ್ಲ. ಯಾವುದೇ ಮಾರ್ಗಸೂಚಿ, ಅನುಮತಿಯನ್ನು ಕೊಟ್ಟಿಲ್ಲ ಎಂದು ಉತ್ತರಿಸಿದ್ದಾರೆ.

ಶಿಕ್ಷಣ ಇಲಾಖೆಯಿಂದ ಅನುಮತಿ ಕೊಟ್ಟಿದ್ದಾರೆ ಅನ್ನೋದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ಇರುವ ನಿಯಮಗಳೇ ಮುಂದೆಯೂ ಇರಲಿದೆ. ನಮಾಜ್‌ಗೆ ಅವಕಾಶ ಕೊಡಲು ಸಾಧ್ಯವೇ ಇಲ್ಲ. ಶಾಲೆಗಳಲ್ಲಿ ಹೊಸ ಹೊಸ ಸಂಪ್ರದಾಯ ಹುಟ್ಟುಹಾಕಕಲು ಅವಕಾಶ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಮುಸ್ಲಿಂ ಮುಖಂಡ ಉಮರ್ ಷರೀಫ್ ಸಹ ಈ ಬಗ್ಗೆ ಮಾತನಾಡಿದ್ದು, ಗಣಪ ಓಕೆ ಹಿಜಬ್‌ಗೂ ಹೀಗೆ ಅವಕಾಶ ಕೊಡಿ. ಒಂದು ಧರ್ಮಕ್ಕೆ ನ್ಯಾಯ ಇನ್ನೊಂದು ಧರ್ಮಕ್ಕೆ ಅನ್ಯಾಯ ಯಾಕೆ ಅಂತಾ ಪ್ರಶ್ನಿಸಿದ್ದಾರೆ.

ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಭದ್ರತೆ ನೀಡಲು ಪೋಲಿಸ್ ಗೆ ಸೂಚನೆ

0

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿಚಾರವಾಗಿ ದೆಹಲಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ವಿಪಕ್ಷ ನಾಯಕರಿಗೆ ಭದ್ರತೆ ನೀಡಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿ ಭದ್ರತೆ ನೀಡಲು ಹೇಳಿದ್ದೇವೆ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಮೊಟ್ಟೆ ಎಸೆದಿರುವುದನ್ನ ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಸಿಎಂ ಆಗಿದ್ದ ವ್ಯಕ್ತಿ ಘನತೆಗೆ ತಕ್ಕ ಮಾತನಾಡಲಿ.
ಹಾಗೇ ಮಾತನಾಡಿದ್ದರಿಂದ ಇಂಥ ಘಟನೆ ನಡೆಯುವುದು. ಅವರ ಮಾತುಗಳು ಅವರ ಹಿರಿತನಕ್ಕೆ ಶೋಭೆ ತರಲ್ಲ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸಂಸ್ಕೃತ ಗ್ರಾಮದ ಬಗ್ಗೆ ಮೆಚ್ಚಿದ ಎಡಿಜಿಪಿ ಅಲೋಕ್ ಕುಮಾರ್

0

ಸಾರ್ವಕರ್ ಫ್ಲೆಕ್ಸ್​ ವಿಚಾರದಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಪರಿಸ್ಥಿತಿಯಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು.

ಈ ವೇಳೆ, ಸಂಸ್ಕೃತ ಗ್ರಾಮ ಮತ್ತೂರಿಗೂ ಭೇಟಿ, ಇಲ್ಲಿನ ಗ್ರಾಮಸ್ಥರ ಜೊತೆ ಸಂಸ್ಕೃತದಲ್ಲಿಯೇ ಮಾತನಾಡಿದ್ದಾರೆ. ಆ ವಿಡಿಯೋವನ್ನು ಅಲೋಕ್ ಕುಮಾರ್​ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಶಿವಮೊಗ್ಗ ನಗರದಿಂದ 10 ಕಿಮೀ ದೂರವಿರುವ ಮತ್ತೂರು ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಸಿಕ್ಕವರ ಜೊತೆ ಸಂಸ್ಕೃತದಲ್ಲಿಯೇ ಮಾತನಾಡಿದ್ದಾರೆ. ಇದು ಒಂದು ರೀತಿ ಸಹಜ ಸಂಭಾಷಣೆ ಎಂಬುವಂತೆ ಇದೆ.
ಎಡಿಜಿಪಿ ಅಲೋಕ್ ಕುಮಾರ್ ಸಂಸ್ಕೃತ ಗ್ರಾಮ ಮತ್ತೂರಿಗೆ ಭೇಟಿ
ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೊಸ್ಟ್ ಮಾಡಿದ್ದಾರೆ.

‘ಸಂಸ್ಕೃತ ಒಂದು ಶಾಸ್ತ್ರೀಯ ಭಾಷೆ, ಅದರ ದನಿಯೇ ಕಿವಿಗೆ ಸಂಗೀತವಿದ್ದಂತೆ, ಈ ನಿಟ್ಟಿನಲ್ಲಿ ಮತ್ತೂರಿಗೆ ಭೇಟಿ ನೀಡಿ ಅಲ್ಲಿನವರ ಜೊತೆ ಒಂದಿಷ್ಟು ಮಾತುಕತೆ ನಡೆಸಿದೆ. ಎಲ್ಲ ಶಾಸ್ತ್ರೀಯ ಭಾಷೆಗಳನ್ನು ರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಅಗತ್ಯತೆ ಇದೆ’ ಎಂದು ಅಲೊಕ್ ಕುಮಾರ್ ಬರೆದುಕೊಂಡಿದ್ದಾರೆ.