Saturday, March 21, 2026
Saturday, March 21, 2026
Home Blog Page 1460

ಶಿವಮೊಗ್ಗದಿಂದ ಇಬ್ಬರು ರೌಡಿ ಶೀಟರ್ ಗಳ ಗಡಿಪಾರು

0

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಬ್ಬರು ರೌಡಿಶೀಟರ್ ಗಳನ್ನು ಒಂದು ತಿಂಗಳವರೆಗೆ ಗಡಿಪಾರು ಮಾಡಿ ಶಿವಮೊಗ್ಗ ಎಸಿ ಎಸ್.ಬಿ.ದೊಡ್ಡೇಗೌಡರ್ ಆದೇಶಿಸಿದ್ದಾರೆ.

ಆಶ್ರಯ ಬಡಾವಣೆಯ ಶಮಂತ ನಾಯ್ಕ (29)ಮತ್ತು ಸಂದೀಪ್ ಕುಮಾರ್(29) ಗಡಿಪಾರು ಆದವರು.
ಶಮಂತ್ ಮೇಲೆ 15 ಮತ್ತು ಸಂದೀಪ್ ಮೇಲೆ 10 ಪ್ರಕರಣಗಳಿದ್ದು ಇಬ್ಬರೂ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್​​ಗಳಾಗಿದ್ದಾರೆ.

ಇವರು ಗಣಪತಿ ಹಬ್ಬದ ಸಮಯದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿಗೆ ಭಂಗ ಉಂಟು ಮಾಡವ ಸಾಧ್ಯತೆ ಇದೆ. ಇದರರಿಂದಾಗಿ ಇಬ್ಬರನ್ನು ಗಡಿಪಾರು ಮಾಡುವಂತೆ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರು ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ವರದಿ ನೀಡಿದ್ದರು.

ಅದರಂತೆ ಆಗಸ್ಟ್ 25ರಿಂದ ಸೆಪ್ಟೆಂಬರ್ 25ರವರೆಗೆ ಶಿವಮೊಗ್ಗ ಉಪ ವಿಭಾಗ ಸರಹದ್ದಿನಿಂದ ಇಬ್ಬರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ.

ಶಾಲಾ ಮಕ್ಕಳಿಗೆ ಶೂ ಸಾಕ್ಸ್ ಖರೀದಿಗೆ ₹132 ಕೋಟಿ ಅನುದಾನ ಬಿಡುಗಡೆ

0

2022-23 ನೇ ಸಾಲಿನ ಒಂದರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಶೂ ಸಾಕ್ಸ್ ವಿತರಿಸಲು ರಾಜ್ಯ ಸರ್ಕಾರ ಒಟ್ಟು 132 ಕೋಟಿ ರೂ. ಬಿಡುಗಡೆ ಮಾಡಿದೆ.

ವಿದ್ಯಾವಿಕಾಸ ಯೋಜನೆಯಡಿ 2022-23 ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ವಿತರಿಸಲು ಅನುಮತಿ ನೀಡಲಾಗಿದ್ದು, ಒಟ್ಟು 132 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶೂ ಮತ್ತು ಸಾಕ್ಸ್ ಗಳನ್ನು ವಿತರಣೆ ಮಾಡಲು ಸರ್ಕಾರದ ಆದೇಶಗಳನ್ನು ಅನುಸರಿಸಿ 2022-23 ನೇ ಸಾಲಿನಲ್ಲಿ ತಾಲೂಕುವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಕೆ-2 ಮುಖಾಂತರ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ವಿವಿಯಲ್ಲಿ ಅತಿಥಿಉಪನ್ಯಾಸಕರ ನೇಮಕಾತಿ

0

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ವಿವಿಧ ವಿಷಯಗಳ ಬೋಧನೆಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಕಾನೂನು, ಕನ್ನಡ, ಇಂಗ್ಲಿಷ್​, ರಾಜ್ಯ ಶಾಸ್ತ್ರ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರ ಬೋಧನೆಗ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 29 ಆಗಸ್ಟ್​ ಆಗಿದೆ.

ಈ ಹುದ್ದೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದ್ದು, ಪೂರ್ಣಕಾಲಿಕ ಮತ್ತು ಅರೆಕಾಲಿಕ ಅತಿಥಿ ಉಪನ್ಯಾಸಕ ಹುದ್ದೆಗಳು ಇವಾಗಿವೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ವಿಶ್ವವಿದ್ಯಾಲಯದ ಹೆಸರು
ಬೆಂಗಳೂರು ವಿಶ್ವವಿದ್ಯಾಲಯ
ಹುದ್ದೆ
ಅತಿಥಿ ಉಪನ್ಯಾಸಕರು

ಹುದ್ದೆಗಳ ಸಂಖ್ಯೆ
ನಿರ್ದಿಷ್ಟ ಪಡಿಸಿಲ್ಲ

ಉದ್ಯೋಗ ಸ್ಥಳ
ಬೆಂಗಳೂರು

ವೇತನ
ಬೆಂಗಳೂರು ವಿಶ್ವವಿದ್ಯಾಲಯದ ನಿಯಮ ಅನುಸಾರ

ಶೈಕ್ಷಣಿಕ ಅರ್ಹತೆ: ಬೆಂಗಳೂರು ವಿಶ್ವವಿದ್ಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ಬೆಂಗಳೂರು ವಿಶ್ವವಿದ್ಯಾಲಯ ನೇಮಕಾತಿ ನಿಯಮಗಳ ಪ್ರಕಾರ
ಅರ್ಜಿ ಸಲ್ಲಿಕೆ : ಆಫ್​ಲೈನ್​

ಅರ್ಜಿ ಸಲ್ಲಿಕೆ ವಿಧಾನ

ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ

ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10 ಆಗಸ್ಟ್​​ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಆಗಸ್ಟ್ 2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: bangaloreuniversity.ac.in

ಅರ್ಜಿ ಸಲ್ಲಿಕೆ ವಿಳಾಸ
ಪ್ರಾಂಶುಪಾಲರು, ವಿಶ್ವವಿದ್ಯಾಲಯ ಕಾನೂನು ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಕ್ಯಾಂಪಸ್, ಬೆಂಗಳೂರು – 560056.

ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಂಗಳೂರು ಡೇರಿಗೆ ಭೇಟಿ

0

ಇತ್ತೀಚೆಗೆ ಕ್ರಿಯೇಟಿವ್‌ ಪಿ.ಯು ಕಾಲೇಜು, ಕಾರ್ಕಳ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ “ಕೈಗಾರಿಕಾ ಭೇಟಿ” ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಂಗಳೂರಿನ ಕೆ.ಎಂ.ಎಫ್‌ ಕೈಗಾರಿಕೆಗೆ ಭೇಟಿ ನೀಡಿದ್ದು. ಕೈಗಾರಿಕೆಯಲ್ಲಿನ ಹಾಲು ಉತ್ಪಾದನಾ ಘಟಕದ ಪ್ರಕ್ರೀಯೆಗಳು, ಹಂತಗಳು ಉತ್ಪಾದನಾ ವಿಧಾನಗಳು ಹಾಗೂ ಉತ್ಪನ್ನಗಳ ಬಗ್ಗೆ ಸವಿಸ್ಥಾರವಾದ ಮಾಹಿತಿಯನ್ನು ಸಂಗ್ರಹಿಸಿದರು.

ಬದುಕಿನಲ್ಲಿ ಪಠ್ಯದ ಜ್ಞಾನದ ಜೊತೆಗೆ ಪಠ್ಯದಲ್ಲಿನ ವಿಷಯಗಳ ಪ್ರಾಯೋಗಿಕ ಜ್ಞಾನವು ಮಹತ್ತರವಾದದು ಹಾಗೂ ಒಬ್ಬ ಯಶಸ್ವಿ ಉದ್ಯಮದಾರನ್ನಾಗಿಸಲು ಸಹಾಯವಾಗಬಹುದು ಎಂಬುದು ಸಂಸ್ಧೆಯ ಆಶಯ. ಈ ಹಿನ್ನೆಲೆಯಲ್ಲಿ ಪಠ್ಯದ ಜೊತೆಗೆ ಅನೇಕ ಪಠ್ಯೇತರ ಚಟುವಟಿಕಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಸಂಸ್ಥೆಯ ವಿಶೇಷ ಎನ್ನಬಹುದು.

ಇಂದಿನ ಜಗತ್ತಿನಲ್ಲಿ ನಾವು ನವೀನ ಉಪಕರಣಗಳನ್ನು ಬಳಸುತ್ತಿದ್ದೇವೆ. ಸಾಂಪ್ರದಾಯಕ (ಹಳೆಯ) ಉತ್ಪನ್ನಗಳು ಮರೆಯಾಗುತ್ತಿವೆ. ಹಳೆಯ ಸಂಪ್ರದಾಯಕ ಕೃಷಿ ಮತ್ತು ಕೃಷಿಯೇತರ ಸಲಕರಣೆಗಳನ್ನು ವೀಕ್ಷಿಸುವ ಸಲುವಾಗಿ‌ ವಿದ್ಯಾರ್ಥಿಗಳನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿನ ಗುತ್ತಿನ ಮನೆಗೆ ಭೇಟಿ ನೀಡಿಸಲಾಗಿತ್ತು ಇಲ್ಲಿನ ಹಳೆಯ ಗುತ್ತಿನ ಮನೆ, ದೈವದ ಮೂರ್ತಿಗಳು, ಕತ್ತಿ, ಅಕ್ಕಿಮುಡಿ, ತಿರಿ, ಜನಪದ ಕಲೆಗಳಾದ ಕೋಲ, ಯಕ್ಷಗಾನ ಇವುಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ವಿವರಿಸಲಾಯಿತು.

ಒಟ್ಟಾರೆ ಇಂದಿನ ನಾಗಾಲೋಟದ ಪ್ರಪಂಚದಲ್ಲಿ ಹೊಸತನ್ನು ಅನುಭವಿಸುತ್ತಾ ಹಳೆಯದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುತ್ತಾ ವಿದ್ಯಾರ್ಜನೆ ಮಾಡುವುದು ಈ ಸಂಸ್ಥೆಯ ವಿಶೇಷ. ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ರಾಘವೇಂದ್ರ ಬಿ ರಾವ್‌, ಉಮೇಶ್‌, ಚಂದ್ರಕಾಂತ್‌, ರಾಜೇಶ್‌ ಶೆಟ್ಟಿ, ಅಕ್ಷತಾ ಜೈನ್‌ ಹಾಗೂ ಭೋಧಕೇತರ ವೃಂದದವರು ಪಾಲ್ಗೊಂಡಿದ್ದರು.

ಇಂದು ರೂಪಿಸುವ ಯೋಜನೆಗಳು ಭವಿಷ್ಯಕ್ಕೆ ಪೂರಕವಾಗಿರಲಿ- ಸೆಲ್ವಮಣಿ

0

ಪಟ್ಟಣಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಪ್ರಸ್ತುತ ಕೈಗೊಳ್ಳುವ ಯೋಜನೆಗಳು ಭವಿಷ್ಯದ ಯೋಜನೆಗಳಿಗೆ ಪೂರಕವಾಗಿರುವಂತೆ ಸಮರ್ಪಕವಾಗಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಟ್ಟಣಗಳಲ್ಲಿ ಸಾರ್ವತ್ರಿಕವಾಗಿ ಮನೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆಯಾದ ಅಮೃತ್ 2.0 ಯೋಜನೆ ಕುರಿತಾದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಗರ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಜೋಗ-ಕಾರ್ಗಲ್, ಹೊಸನಗರ, ತೀರ್ಥಹಳ್ಳಿ, ಹೊಳೆಹೊನ್ನೂರು ಮತ್ತು ಆನವಟ್ಟಿ ಪಟ್ಟಣಗಳು ಅಮೃತ 2.0 ಯೋಜನೆಯಡಿ ಗುರುತಿಸಲಾಗಿದ್ದು, 2025 ರ ವೇಳೆಗೆ ಈ ಪಟ್ಟಣಗಳ ಎಲ್ಲ ಮನೆಗಳಿಗೆ ಕುಡಿಯುವ ನೀರು ಸರಬರಾಜು ನೀಡುವ ಸಂಬಂಧ ತಯಾರಿಸಲಾಗುತ್ತಿರುವ ಯೋಜನೆಗಳು ಸಮರ್ಪಕವಾಗಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಾಗರ ಪಟ್ಟಣಕ್ಕೆ ರೂ.2.6 ಕೋಟಿ ವೆಚ್ಚದಲ್ಲಿ ಒತ್ತಡಯುಕ್ತ ನೀರು ಸರಬರಾಜು ಯೋಜನೆಯನ್ನು ತಯಾರಿಸಿದ್ದು, ಒಂದೇ ಏಜೆನ್ಸಿಗೆ ಓ & ಎಂ ನೀಡುವಂತೆ ಯೋಜಿಸಿಕೊಳ್ಳಿರಿ ಎಂದು ಸಲಹೆ ನೀಡಿದರು. ಶಿರಾಳಕೊಪ್ಪ ಮತ್ತು ಸೊರಬದಲ್ಲಿ ಬೋರ್‍ವೆಲ್‍ಗಳ ಸಂಖ್ಯೆ ಹೆಚ್ಚಿದೆ. ಬೋರ್‍ವೆಲ್ ಮೇಲೆ ಹೆಚ್ಚು ಅಲವಂಬನೆ ಬೇಡ. ಈ ಎರಡು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಕುರಿತು ಸಮಗ್ರ ಯೋಜನೆ ರೂಪಿಸಬೇಕು. ಪ್ರಸ್ತುತ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿ, ಶಿರಾಳಕೊಪ್ಪಕ್ಕೆ ಹೊಸ ಯೋಜನೆ ತಯಾರಿಸುವಂತೆ ಸೂಚನೆ ನೀಡಿದರು. ಜನಸಂಖ್ಯೆ ನಿರ್ಧರಣೆ, ಜನಸಂಖ್ಯಾಧಾರಿತ ನೀರಿನ ಸರಬರಾಜು ಸೇರಿದಂತೆ ಎಲ್ಲ ಮಾನದಂಡಗಳನ್ನು ಯೋಜನೆಯ ಮಾರ್ಗಸೂಚನೆಯನ್ವಯ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಸೊರಬದಲ್ಲಿ ಸಹ 73 ಬೋರ್‍ವೆಲ್‍ಗಳಿವೆ. ಪ್ರತಿ ವರ್ಷ ಹೊಸ ಬೋರ್‍ಗಳನ್ನು ಕೊರೆಯಲಾಗುತ್ತಿದೆ. ಇದು ನಿಲ್ಲಬೇಕು. ಸಂಸ್ಕರಿಸಿದ ನೀರು ಜನರಿಗೆ ಸಿಗಬೇಕು. ಜೊತೆಗೆ ಭವಿಷ್ಯದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಉಪಯೋಗವಾಗುವಂತೆ ಈ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕೆಂದು ತಿಳಿಸಿದರು.

ಆನವಟ್ಟಿ ಮತ್ತು ಹೊಳೆಹೊನ್ನೂರಿನಲ್ಲಿ ಸಹ ಒಂದು ಸಮಗ್ರ ಕುಡಿಯುವ ನೀರಿನ ಯೋಜನೆಯಾಗಬೇಕು. ಹೊಸನಗರದಲ್ಲಿ ಹಿನ್ನೀರು ಖಾಲಿಯಾದಾಗ 3 ರಿಂದ 4 ತಿಂಗಳು ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದು ಆ ವೇಳೆ ನೀರು ಒದಗಿಸಿ, ಸರಿದೂಗಿಸುವಂತೆ ಯೋಜನೆ ರೂಪಿಸಬೇಕು. ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಇಂಜಿನಿಯರ್‍ರವರು ಹೊಸನಗರ ಪ.ಪಂ ಯ ಮುಖ್ಯಾಧಿಕಾರಿಗಳೊಂದಿಗೆ ಅಲ್ಲಿ ಸರ್ವೇ ಕಾರ್ಯ ನಡೆಸಿ ಯೋಜನೆ ಸಿದ್ದಪಡಿಸುವಂತೆ ತಿಳಿಸಿದರು.

ಕೆಯುಡಬ್ಲ್ಯುಎಸ್ & ಡಿಬಿ ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚ್.ಚಂದ್ರಶೇಖರ್ ಅಮೃತ್ 2.0 ಅಡಿ ಬರುವ ಪಟ್ಟಣಗಳಲ್ಲಿನ ಮನೆಗಳಿಗೆ ನೀರು ಪೂರೈಕೆಗೆ ಕೈಗೊಳ್ಳಲಾಗಿರುವ ಯೋಜನೆ ಕುರಿತು ಪ್ರಗತಿ ವರದಿ ಸಲ್ಲಿಸಿದರು.

ಸಭೆಯಲ್ಲಿ ಡಿಯುಡಿಸಿ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಸಿಎಓ ಮೋಹನ್ ಕುಮಾರ್, ಎಇಇ ಮಂಜುನಾಥ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.

ಯುಪಿಎಸ್ ಸಿ ನೇಮಕಾತಿ ಪರೀಕ್ಷೆಗಳಿಗೆ ಒನ್ ಟೈಮ್ ರಿಜಿಸ್ಟ್ರೇಷನ್ ಸೌಲಭ್ಯ

0

ಕೇಂದ್ರ ಲೋಕಸೇವಾ ಆಯೋಗ ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ‘ಒನ್ ಟೈಮ್ ರಿಜಿಸ್ಟ್ರೇಷನ್’ ಸೌಲಭ್ಯವನ್ನ ಪ್ರಾರಂಭಿಸಿದೆ. ಈ ಮೂಲಕ, ಅಭ್ಯರ್ಥಿಗಳು ಇನ್ಮುಂದೆ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದಾಗಲೆಲ್ಲಾ ಮೂಲ ವಿವರಗಳನ್ನ ಭರ್ತಿ ಮಾಡಬೇಕಾಗಿಲ್ಲ.
ಮುಂಬರುವ ಸಮಯದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಒಟಿಆರ್ ಪ್ಲಾಟ್‌ಫಾರ್ಮ್‌ʼನಲ್ಲಿ ನೋಂದಾಯಿಸಿದ ನಂತರ ಮೂಲ ವೈಯಕ್ತಿಕ ಮಾಹಿತಿಯನ್ನ ನೀಡಬೇಕಾಗುತ್ತದೆ.

ಒಟಿಆರ್ ಪ್ಲಾಟ್ಫಾರ್ಮ್ ಸಮಯವನ್ನ ಉಳಿಸುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
‘ಪ್ರತಿ ವರ್ಷ ಯುಪಿಎಸ್ಸಿ ನಡೆಸುವ ವಿವಿಧ ಪರೀಕ್ಷೆಗಳಿಗೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಈ ಪರೀಕ್ಷೆಗಳ ಮೂಲಕ, ಕೇಂದ್ರ ಸರ್ಕಾರದ ಇಲಾಖೆಗಳು / ಸಂಸ್ಥೆಗಳಿಗೆ ಅಧಿಕಾರಿಗಳನ್ನ ಆಯ್ಕೆ ಮಾಡಲಾಗುತ್ತದೆ. ಒಟಿಆರ್ ಪ್ಲಾಟ್ಫಾರ್ಮ್ ಸಮಯವನ್ನ ಉಳಿಸುತ್ತದೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನ ಸುಲಭಗೊಳಿಸುತ್ತದೆ.

ಯುಪಿಎಸ್ಸಿ ಪ್ರಕಾರ, ಅಭ್ಯರ್ಥಿಯ ನೋಂದಣಿ ಪೂರ್ಣಗೊಂಡ ನಂತರ, ಅವರ ಮಾಹಿತಿಯನ್ನ ಆಯೋಗದ ಸರ್ವರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆಗಾಗಿ ಆನ್ಲೈನ್ ಅರ್ಜಿಯನ್ನ ಭರ್ತಿ ಮಾಡಿದಾಗ, ಅವರ ಮಾಹಿತಿ ಸ್ವಯಂಚಾಲಿತವಾಗಿ ಅಲ್ಲಿಗೆ ಬರುತ್ತದೆ.

ಆಯೋಗದ ವೆಬ್ಸೈಟ್‌ನಲ್ಲಿ 24 ಗಂಟೆಗಳ ಕಾಲ ಒಟಿಆರ್ ಲಭ್ಯ
ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ವೈಯಕ್ತಿಕ ಮಾಹಿತಿಯನ್ನ ಭರ್ತಿ ಮಾಡಲು ಸಮಯವನ್ನ ಉಳಿಸುವುದರಿಂದ ಮತ್ತು ವಿವರಗಳನ್ನ ಭರ್ತಿ ಮಾಡುವಾಗ ತಪ್ಪು ಮಾಹಿತಿಯನ್ನ ನಮೂದಿಸುವುದನ್ನ ತಪ್ಪಿಸುವುದರಿಂದ ಅಭ್ಯರ್ಥಿಗಳಿಗೆ ಒಟಿಆರ್ ತುಂಬಾ ಉಪಯುಕ್ತವಾಗಲಿದೆ ಎಂದು ಆಯೋಗ ಹೇಳಿದೆ. ‘ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ಕೇಂದ್ರ ಲೋಕಸೇವಾ ಆಯೋಗವು ಒಂದು ಬಾರಿಯ ನೋಂದಣಿ ವೇದಿಕೆಯನ್ನ ಪ್ರಾರಂಭಿಸಿದೆ. ಇದು ಆಯೋಗದ ವೆಬ್ಸೈಟ್‌ನಲ್ಲಿ ದಿನದ 24 ಗಂಟೆಯೂ ಲಭ್ಯವಿರುತ್ತದೆ’ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ಪರೀಕ್ಷೆಗೆ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಶೇಕಡಾ 70ರಷ್ಟು ಮಾಹಿತಿಯನ್ನ ಸ್ವಯಂಚಾಲಿತವಾಗಿ ನಮೂದಿಸುವುದರಿಂದ, ಸಮಯವನ್ನ ಉಳಿಸಲಾಗುವುದು ಎಂದು ಅದು ಹೇಳಿದೆ. ಸಾರ್ವಜನಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳ ಪಟ್ಟಿ ಮತ್ತು ಮಾಹಿತಿಯನ್ನು ಯುಪಿಎಸ್ಸಿ ಬಿಡುಗಡೆ ಮಾಡಿದೆ.

ಸಾರ್ವಜನಿಕ ಸೇವಾ ಪರೀಕ್ಷೆಯನ್ನು ಪ್ರತಿ ವರ್ಷ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ, ಇದರಲ್ಲಿ ಪ್ರಿಲಿಮಿನರಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವೂ ಸೇರಿದೆ. ಇದರ ಮೂಲಕ, ಅಧಿಕಾರಿಗಳನ್ನು ಭಾರತೀಯ ಆಡಳಿತ ಸೇವೆ ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ (ಇತ್ಯಾದಿಗಳಿಗೆ ಆಯ್ಕೆ ಮಾಡಲಾಗುತ್ತದೆ.

ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕ ಹಿನ್ನೆಲೆ ಪ್ರತಿಭಟನೆ

0

ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ
ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಳಪೆ ಅವೈಜ್ಞಾನಿಕ ಕಾಮಗಾರಿಯ ಖಂಡಿಸಿ 5ನೇ ಸರಣಿ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗದ ಪೊಲೀಸ್ ಚೌಕಿಯಲ್ಲಿ ಕಾಮಗಾರಿ ನಡೆದ ಎರಡೇ ತಿಂಗಳಲ್ಲಿ 100 ಅಡಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ.

ಅಸಂಬದ್ಧ ಡ್ರೈನ್ ಸ್ಲಾಬ್‌ಗಳ ಜೋಡಣೆ ಮಾಡಲಾಗಿದೆ. * ಹತ್ತಾರು ಕಡೆ ಗುಂಡಿ ಬಿದ್ದ ಪುಟ್‌ ಪಾತ್‌ಗಳು ಕಂಡುಬರುತ್ತಿದೆ.
ಅವೈಜ್ಞಾನಿಕ ಗ್ರಿಟ್ ಚೇಂಬರ್ ಅಳವಡಿಕೆಯಿಂದ ಚರಂಡಿಗೆ ನೀರು ಹರಿಯುತ್ತಿಲ್ಲ * ಕನಿಷ್ಠ 15 ವರ್ಷ ಬಾಳಿಕೆ ಬರಬೇಕಾದ ರಸ್ತೆಯಲ್ಲಿ ಎರಡೇ ತಿಂಗಳಲ್ಲಿ ಗುಂಡಿ ಬಿದ್ದಿವೆ.

ಇನ್ನು 1-2 ವರ್ಷದಲ್ಲಿ ಸಂಪೂರ್ಣ ನಾಶವಾಗಿ ನಮ್ಮ ಬದುಕು ದುಸ್ತರವಾಗಲಿದೆ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಾಂತರ ಮೌಲ್ಯದ ರಾಷ್ಟ್ರೀಯ ಸಂಪತ್ತುಗಳಾದ ಮರಳು, ಜೆಲ್ಲಿ, ಟಾರು ನಷ್ಟವಾಗಿದೆ.ಪರೋಕ್ಷವಾಗಿ ನಾಡಿನ ಪರಿಸರಕ್ಕೆ ಭಾರೀ ಹೊಡೆತ ಬಿದ್ದಿದೆ.
ಜನರ ಕೋಟ್ಯಾಂತರ ರೂಪಾಯಿಯ ತೆರಿಗೆ ಹಣ ನಷ್ಟವಾಗಿದೆ.

ಈ ಕಾರಣದಿಂದಾಗಿ ಮಾನ್ಯ ಜಿಲ್ಲಾಧಿಕಾರಿಗಳು,, ಶಾಸಕರು, ಸಂಸದರು, ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರನ್ನು ಶಿಕ್ಷಿಸಬೇಕು. ಇಲ್ಲವೇ, ಕಾಮಗಾರಿಯ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಬೇಕೆಂದು ಆಗ್ರಹಿಸಲಾಯಿತು.

₹200 ಕೋಟಿ ಕ್ಲಬ್ ಸೇರಿದ ವಿಕ್ರಾಂತ್ ರೋಣ

0

ಎಲ್ಲೆಲ್ಲೂ ‘ವಿಕ್ರಾಂತ್‌ ರೋಣ ಸಿನಿಮಾಕ್ಕೆ ಸುದ್ದಿ. ವಿಕ್ರಾಂತ್ ರೋಣ ಸಿನಿಮಾದಿಂದ ‘ ₹200 ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ₹200 ಕೋಟಿ ಕ್ಲಬ್‌ ಸೇರಿದ ಕನ್ನಡ ಸಿನಿಮಾ ಇಂಡಸ್ಟ್ರಿಯ 2ನೇ ಸಿನಿಮಾ ಎಂಬ ಹೆಗ್ಗಳಿಕೆಗೂ ‘ವಿಕ್ರಾಂತ್‌ ರೋಣ’  ಪಾತ್ರವಾಗಿದೆ.

ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ. ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ ‘ವಿಕ್ರಾಂತ್‌ ರೋಣ’ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ.

ಈಗಾಗಲೇ ಬಾಕ್ಸ್‌ ಆಫಿಸ್‌ನಲ್ಲಿ ₹210 ಕೋಟಿ ಕಲೆಕ್ಷನ್‌ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ.
ಈಗಾಗಲೇ ₹200 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ನಟ ಸುದೀಪ್‌ ಅವರ ಸಿನಿಮಾ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತಿದೆ. ಈಗಾಗಲೇ ಹಾಲಿವುಡ್‌ ಅಂಗಳಕ್ಕೆ ಎಂಟ್ರಿಯಾದ ಮೊಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನ ‘ವಿಕ್ರಾಂತ್‌ ರೋಣ’ ಪಡೆದಿದ್ದು, ಕೋಟಿ ಕೋಟಿ ಭಾರತೀಯರು ಹಾಗೂ ಜಗತ್ತಿನಾದ್ಯಂತ ಇರುವ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಂಡಿದ್ದಾರೆ.

ಇನ್ನು ಸಿನಿಮಾ ರಿಲೀಸ್‌ ಆಗಿ 1 ತಿಂಗಳು ಕಂಪ್ಲೀಟ್‌ ಆಗುತ್ತಾ ಬಂದ್ರು ‘ವಿಕ್ರಾಂತ್‌ ರೋಣ’ ಹವಾ ಕಡಿಮೆ ಆಗಿಲ್ಲ.

ರಾಜ್ಯದ ಪಿಯು ಕಾಲೇಜುಗಳಲ್ಲಿ 778 ಅತಿಥಿ ಉಪನ್ಯಾಸಕರ ಭರ್ತಿ

0

ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 10 ವಿಷಯಗಳಲ್ಲಿ 778 ಹುದ್ದೆಗಳ ಭರ್ತಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಶೀಘ್ರದಲ್ಲಿಯೇ ಈ ಸಂಬಂಧ ಅಧಿಸೂಚನೆ ಹೊರ ಬೀಳಲಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿ ಖಾಲಿ ಇರುವ 778 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.

ರಸಗೊಬ್ಬರ ಬೀಜಗಳಿಗಾಗಿ ಡೀಲರ್ ಶಿಪ್ ಗೆ ಆನ್ ಲೈನ್ ಪರವಾನಗಿ ಮಾಹಿತಿ

0

ರಸಗೊಬ್ಬರ, ಬೀಜಗಳು, ಕೀಟನಾಶಕಗಳ ಆನ್‌ಲೈನ್ ಡೀಲರ್ ಪರವಾನಗಿ ನೀಡುತ್ತಿದ್ದು, ಅದರ ಪರವಾನಗಿ ಪಡೆಯುವ ವಿಧಾನಗಳನ್ನು  ಇಲ್ಲಿ ವಿವರಿಸಲಾಗಿದೆ.

ಆನ್‌ಲೈನ್ ಅರ್ಜಿಯ ವಿಧಾನ: ರಸಗೊಬ್ಬರಗಳ ಮಾರಾಟಕ್ಕಾಗಿ ರಸಗೊಬ್ಬರ A2 ಪರವಾನಗಿ (ನೋಂದಣಿ ಪ್ರಮಾಣಪತ್ರ).

  1. ಅರ್ಜಿದಾರರು ಇಲಾಖಾ ವೆಬ್‌ಸೈಟ್ http://raitamitra.kar.nic.in ಗೆ ಲಾಗಿನ್ ಮಾಡಬೇಕು ಮತ್ತು ಅವುಗಳನ್ನು ನೋಂದಾಯಿಸಿಕೊಳ್ಳಬೇಕು.ಅವರು SMS ಮೂಲಕ ಬಳಕೆದಾರ ID ಮತ್ತು ಪಾಸ್ವರ್ಡ್ ಪಡೆಯುತ್ತಾರೆ. ಆ ರುಜುವಾತುಗಳನ್ನು ಮುಂದಿನ ಪ್ರಕ್ರಿಯೆಗಳಿಗೆ ಬಳಸಲಾಗುತ್ತದೆ.
  2. ನೋಂದಣಿ ನಂತರ SMS ಪಾಸ್ವರ್ಡ್ ಮತ್ತು ಬಳಕೆದಾರ ID ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಆಗಿ ನಮೂದಿಸಿ.ನಂತರ A1 ಅಪ್ಲಿಕೇಶನ್ ಪುಟವು ತೆರೆಯುತ್ತದೆ, ಇದರಲ್ಲಿ ಅರ್ಜಿದಾರರು ಕೆಂಪು ಗುರುತು ಹೊಂದಿರುವ ಎಲ್ಲಾ ಕ್ಷೇತ್ರಗಳನ್ನು ನಿರ್ದಿಷ್ಟವಾಗಿ ಕಡ್ಡಾಯವಾಗಿ ಭರ್ತಿ ಮಾಡಬೇಕು, ನೀಡಲಾದ PDF ಹಂತಗಳನ್ನು ಅನುಸರಿಸಿ ಮತ್ತು ಅರ್ಜಿದಾರರ ಫೋಟೋ ಮತ್ತು ಸಹಿಯ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಿ ಮತ್ತು ಸುಲಭ ಸಂವಹನಕ್ಕಾಗಿ ಸಲ್ಲಿಸಬೇಕು.
  3. ಅರ್ಜಿದಾರರು ವಿವರಗಳ ಹೆಸರು ಮತ್ತು ಸಂಸ್ಥೆಯ ಹೆಸರು, ಡೀಲರ್‌ಶಿಪ್ ಪ್ರಕಾರ, ಸೇಲ್ ಪಾಯಿಂಟ್ ವಿಳಾಸ ಮತ್ತು ಸ್ಟೋರೇಜ್ ಪಾಯಿಂಟ್ ವಿಳಾಸ ಮತ್ತು ಜವಾಬ್ದಾರಿಯುತ ವ್ಯಕ್ತಿಯ ವಿವರಗಳನ್ನು ನಮೂದಿಸಬೇಕು ಮತ್ತು ನಂತರ ನಾನು ಮುಂದುವರಿಯಲು ವಿವರಗಳನ್ನು ಒಪ್ಪುವ ಮೊದಲು ಟಿಕ್ ಗುರುತು ಮಾಡಿ.ಇದು FCO ಯ ಫಾರ್ಮ್ A1 ಅನ್ನು ಹೋಲುತ್ತದೆ.

7.ಪಾವತಿ ಶುಲ್ಕದ ಹಂತಗಳು

ಹಂತ: 1- ಕರ್ನಾಟಕ ಸರ್ಕಾರದ ಖಜಾನೆ-II ಚಲನ್ ವೆಬ್‌ಸೈಟ್ ಅನ್ನು ನಮೂದಿಸಿ, ಅವರ ಸಂಸ್ಥೆಯ ಹೆಸರು, ವಿಳಾಸ, ಮೇಲ್-ಐಡಿ, ಮೊಬೈಲ್ ಸಂಖ್ಯೆ ವಿವರಗಳನ್ನು ಭರ್ತಿ ಮಾಡಿ.

ಹಂತ: 2-ಆಯ್ಕೆ ಮಾಡಿ (1) ಅನ್ವಯಿಸಲಾದ ಪರವಾನಗಿಯ ಆಯಾ ಜಿಲ್ಲೆ, (2) ಇಲಾಖೆ:-ಕರ್ನಾಟಕ ರಾಜ್ಯ ಕೃಷಿ ಇಲಾಖೆ, (3) DDO ಕಚೇರಿ:-ಕೃಷಿ ಕಮಿಷನರೇಟ್/ ಆಯಾ ಜಿಲ್ಲಾ ಕೃಷಿ ಕಚೇರಿ (4)ಉದ್ದೇಶ:-ಮಾರಾಟದಿಂದ ರಸೀದಿಗಳು ಗೊಬ್ಬರ ಮತ್ತು ರಸಗೊಬ್ಬರಗಳ, (5) ಉಪ ಉದ್ದೇಶ:- ವಿತರಕರಿಗೆ (ಸಗಟು/ಚಿಲ್ಲರೆ ವ್ಯಾಪಾರಿ) ಅಧಿಕಾರ ಪತ್ರವನ್ನು ರಚಿಸಿ.

ಗಮನಿಸಿ: ರಾಜ್ಯದ ಸಂಪೂರ್ಣ ಮಾರಾಟ ಪರವಾನಗಿಯು DDO ಕಚೇರಿಯನ್ನು ಕೃಷಿ ಕಮಿಷನರೇಟ್ ಆಗಿ ಬಳಸಬೇಕು.

ಹಂತ: 3-ಮೊತ್ತವನ್ನು ನಮೂದಿಸಿ ಮತ್ತು ಸಲ್ಲಿಸಿ.ಶುಲ್ಕ ಪಾವತಿಯನ್ನು ನಗದು ಅಥವಾ ಆನ್‌ಲೈನ್ ಮೋಡ್ ಮೂಲಕ ಮಾಡಬಹುದು.ವಿವರಗಳೊಂದಿಗೆ K2 ಚಲನ್ ಅನ್ನು ರಚಿಸಿ. ಅರ್ಜಿದಾರರಿಗೆ ಆನ್‌ಲೈನ್ ಪಾವತಿ ತಿಳಿದಿಲ್ಲದಿದ್ದರೆ, K2 ನಲ್ಲಿ ಚಲನ್ ಅನ್ನು ರಚಿಸಿ ಮತ್ತು ಹತ್ತಿರದ ಬ್ಯಾಂಕ್‌ಗಳಲ್ಲಿ ಪಾವತಿಸಿ (ಉದಾ. SBI, ಸಿಂಡಿಕೇಟ್ ಟೆಕ್.,), ಆ ಪಾವತಿಸಿದ ಚಲನ್ ಅನ್ನು ಅಪ್‌ಲೋಡ್ ಮಾಡಬಹುದು.

  1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ ನಂತರ, ಅದು ಸಂಬಂಧಪಟ್ಟ ಅಧಿಕಾರಿಯ ಲಾಗಿನ್‌ಗೆ ಚಲಿಸುತ್ತದೆ, ಸಂಬಂಧಪಟ್ಟ ಅಧಿಕಾರಿ ನಮೂದಿಸಿದ ಕ್ಷೇತ್ರಗಳನ್ನು ಮತ್ತು ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಶೀಲಿಸುತ್ತಾರೆ.ಪರಿಶೀಲನೆ ಹಂತದಲ್ಲಿ ಅಧಿಕಾರಿಯು ಅಪೂರ್ಣ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಅರ್ಜಿದಾರರಿಗೆ ಹಿಂತಿರುಗಿಸಬಹುದು.ಸಂಪೂರ್ಣ ಪರಿಶೀಲನೆಯ ನಂತರ ಅರ್ಜಿಯನ್ನು ಸಂಬಂಧಪಟ್ಟ ಪರವಾನಗಿ ಪ್ರಾಧಿಕಾರಕ್ಕೆ ರವಾನಿಸಲಾಗುತ್ತದೆ.
  2. ಪರವಾನಗಿ ಪ್ರಾಧಿಕಾರವು ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲಿಸುತ್ತದೆ ಮತ್ತು ಥ್ರೂ ಆಗಿದ್ದರೆ, ಅವರು ಅರ್ಜಿಯನ್ನು ಸ್ವೀಕರಿಸುತ್ತಾರೆ ಮತ್ತು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿ ಅಧಿಕಾರಿಗೆ ತಪಾಸಣೆಗೆ ಕಳುಹಿಸುತ್ತಾರೆ.
  3. ನಂತರ ಅದು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಅಧಿಕಾರಿ ಲಾಗಿನ್‌ನಲ್ಲಿ ತೆರೆಯುತ್ತದೆ.ಅವರು ಜಿಪಿಎಸ್ ಕೋ-ಆರ್ಡಿನೇಟ್‌ಗಳ ವಿವರಗಳನ್ನು ಪರಿಶೀಲಿಸುತ್ತಾರೆ ಮತ್ತು ಅಪ್‌ಲೋಡ್ ಮಾಡುತ್ತಾರೆ ಮತ್ತು ಜಿಪಿಎಸ್ ಟ್ಯಾಗ್ ಮಾಡಿದ ಫೋಟೋ.ತಪಾಸಣೆಯ ಸಮಯದಲ್ಲಿ ಫಲಾನುಭವಿ/ಪರವಾನಗಿದಾರರು ಮತ್ತು ತಪಾಸಣಾ ಅಧಿಕಾರಿಯು ಆವರಣದ ಜೊತೆಗೆ ಫೋಟೋ ತೆಗೆಯಬೇಕು.
  4. ನಂತರ ತಪಾಸಣೆ ವರದಿಯು ಪರವಾನಗಿ ಪ್ರಾಧಿಕಾರದ ಲಾಗಿನ್‌ನಲ್ಲಿ ಕಾಣಿಸಿಕೊಳ್ಳುತ್ತದೆ, ತಪಾಸಣೆ ವರದಿಯನ್ನು ಪರಿಶೀಲಿಸಿದ ನಂತರ, ಅನುಮತಿಯೊಂದಿಗೆ ಪರವಾನಗಿಯನ್ನು ರಚಿಸಲಾಗುತ್ತದೆ.
  5. ಅರ್ಜಿಯ ಸ್ಥಿತಿಯ ಕುರಿತು ನಿಯಮಿತ ಸೂಚನೆಗಳು ಅರ್ಜಿದಾರರ ಲಾಗಿನ್‌ನಲ್ಲಿ ಗೋಚರಿಸುತ್ತವೆ, ಅವರು ಅದು ಬಾಕಿ ಇರುವ ಹಂತವನ್ನು ವೀಕ್ಷಿಸಬಹುದು ಮತ್ತು SMS ಮೂಲಕ ಸಂವಹನ ಮಾಡಬಹುದು.
  6. ಪರವಾನಗಿ ಪ್ರಾಧಿಕಾರದ ಅನುಮೋದನೆಯ ನಂತರ, ಕರಡು ರೂಪದಲ್ಲಿ ಡೀಲರ್‌ನ ಲಾಗಿನ್‌ನಲ್ಲಿ ಪರವಾನಗಿ ಕಾಣಿಸಿಕೊಳ್ಳುತ್ತದೆ.
  7. ಅನುಮೋದಿತ ಪರವಾನಗಿಯನ್ನು ಪರವಾನಗಿ ಪ್ರಾಧಿಕಾರದಿಂದ ಡಿಜಿಟಲ್ ಸಹಿ ಮಾಡಲಾಗಿದೆ.(ಡಿಜಿಟಲ್ ಸೈನ್ ತನಕ ಅದನ್ನು ಕೈಯಾರೆ ಸಹಿ ಮಾಡಲಾಗುತ್ತದೆ).