Sunday, March 22, 2026
Sunday, March 22, 2026
Home Blog Page 1436

ಸುಲಭ ಶುಲ್ಕದಲ್ಲಿ ಮೇಕಪ್ ಕಲಿಕಾ ಶಿಬಿರ

0

ದಸರಾ ಹಬ್ಬದ ನಿಮಿತ್ತ ನಗರದ ಪ್ರಖ್ಯಾತ ಮೇಕಪ್ ಕಲಿಕಾ ತರಬೇತಿ ಸಂಸ್ಥೆಯಾದ “ಅಶ್ವಿನಿಸ್ ಮೇಕೋವರ್ ಸ್ಟುಡಿಯೋ ಶಿವಮೊಗ್ಗ” ಸಂಸ್ಥೆಯ ವತಿಯಿಂದ ರಿಯಾಯಿತಿ ದರದಲ್ಲಿ ಮೇಕಪ್ ಕಲಿಯಲು ಶಿಬಿರವನ್ನು ಏರ್ಪಡಿಸುತ್ತಿದೆ.

ಮೇಕಪ್ ಕೋರ್ಸ್‌ಗೆ ಸೇರಬಯಸುವ ಯುವತಿಯರು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದ ಮೇಕಪ್ ತರಬೇತಿಯನ್ನು ಶಿವಮೊಗ್ಗದಲ್ಲೆ ನೀಡಲಾಗುವುದು. ಆಸಕ್ತರು ಈ ತರಬೇತಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ 9901216093 ಸಂಪರ್ಕಿಸಿಲು ಸಂಸ್ಥೆಯ ಮುಖ್ಯಸ್ಥರಾದ ಅಶ್ವಿನಿ ಎಸ್ ಎಮ್ ಅವರು ತಿಳಿಸಿದ್ದಾರೆ.

8ನೇ ತರಗತಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಪ್ರವಾಸ

0

ರಾಜ್ಯ ಸರ್ಕಾರವು ಪ್ರೌಢಶಾಲೆಗಳಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಅಕ್ಟೋಬರ್ ನಲ್ಲಿ ಕರ್ನಾಟಕ ದರ್ಶನ ಪ್ರವಾಸವನ್ನು ಆಯೋಜಿಸಿದೆ.ರಾಜ್ಯ ಸರ್ಕಾರವು ಪ್ರೌಢಶಾಲೆಗಳಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಅಕ್ಟೋಬರ್ ನಲ್ಲಿ ಕರ್ನಾಟಕ ದರ್ಶನ ಪ್ರವಾಸವನ್ನು ಆಯೋಜಿಸಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ವತಿಯಿಂದ ಕರ್ನಾಟಕ ದರ್ಶನ ಉಚಿತ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು 2022-23 ನೇ ಸಾಲಿನಲ್ಲಿ ಎಸ್. ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸವನ್ನು ಅಕ್ಟೋಬರ್ 2022 ರಲ್ಲಿ ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಶೈಕ್ಷಣಿಕ ಜೀವನ ರೂಪಿಸಿಕೊಳ್ಳು ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ಸ್ಥಳ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ

ಭಾರತಕ್ಕೆ ನಮೀಬಿಯಾದಿಂದ 8 ಚಿರತೆಗಳು ಬರಲಿವೆ

0

ಅಳಿದು ಹೋದ/ಅಳಿವಿನ ಅಂಚಿನ ಪ್ರಾಣಿ ಪುನರುತ್ಥಾನ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಯೋಜನೆಯ ಅಂಗವಾಗಿ ಪುನಃ ಚೀತಾವನ್ನು ಭಾರತಕ್ಕೆ ಪರಿಚಯಿಸಲಾಗುತ್ತಿದೆ. ತಜ್ಞರ ಪ್ರಕಾರ ‘ಚೀತಾ’ ಪದವು ಸಂಸ್ಕೃತದ ‘ಚಿತ್ರಕಾ’ ಎಂಬ ಪದದಿಂದ ಬಂದಿದೆ.
ಇದರ ಅರ್ಥ ‘ಚುಕ್ಕೆಗಳಿರುವಂತಹದ್ದು’ ಎಂದಾಗಿದೆ.

ಚೀತಾ, ಚಿರತೆ, ಜಾಗ್ವಾರ್‌… ಇವು ಮೇಲ್ನೋಟಕ್ಕೆ ನೋಡಲು ಒಂದೇ ಎನ್ನಿಸಿದರೂ ಬೇರೆ ಬೇರೆ ಪ್ರಾಣಿಗಳು. ಜಾಗ್ವಾರ್‌, ಚೀತಾಗೆ ಹೋಲಿಸಿದರೆ ಚೀತಾ ಸಪೂರವಾಗಿದೆ. ಚೀತಾ ಮುಖದ ಮೇಲೆ 2 ಗೆರೆ ಇರುತ್ತವೆ ಹಾಗೂ ಚುಕ್ಕೆ ಕಮ್ಮಿ ಇರುತ್ತವೆ. ಚಿರತೆ ಮುಖದ ಮೇಲೆ ಗೆರೆ ಇರಲ್ಲ.
ಚುಕ್ಕೆಗಳಲ್ಲೂ ವ್ಯತ್ಯಾಸವಿದೆ. ಚೀತಾಗಿಂತ ಚಿರತೆ ಬಲಿಷ್ಠ ಎನ್ನಲಾಗಿದೆ.

ನಮೀಬಿಯಾ ದೇಶದಿಂದ 8 ಚೀತಾ ತರಿಸಿಕೊಳ್ಳಲಾಗುತ್ತಿದೆ. ಇದರಲ್ಲಿ 5 ಹೆಣ್ಣು, 3 ಗಂಡು. ಇವುಗಳಲ್ಲಿ ಜೋಡಿಯಲ್ಲೇ ಬೇಟೆಯಾಡುವ 2 ಗಂಡು ಸಹೋದರ ಚೀತಾಗಳು ಹಾಗೂ ಇತ್ತೀಚಿನ ಕಾಡ್ಗಿಚ್ಚಿನಲ್ಲಿ ಸಂರಕ್ಷಿಸಲ್ಪಟ್ಟ ಹೆಣ್ಣು ಚೀತಾ ಮರಿ ಕೂಡಾ ಇವೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಭೇದ ಎನಿಸಿದ ಏಷಿಯಾಟಿಕ್‌ ಸಿಂಹಗಳಿದ್ದು, ಅವುಗಳ ವಾಸಕ್ಕೆ ಅನುಕೂಲಕರ ಪರಿಸರವಿದೆ. ಇದು ಚೀತಾ ವಾಸಕ್ಕೂ ಯೋಗ್ಯವೆನಿಸಿದ ಕಾರಣ ಇಲ್ಲಿಯೇ ಚೀತಾಗಳನ್ನು ಇರಿಸಲಾಗುವುದು. ಚೀತಾಗಳ ಬೇಟೆಗಾಗಿ ಚಿಂಕಾರ, ಜಿಂಕೆ ಹಾಗೂ ಕೃಷ್ಣಮೃಗಗಳು ಇಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಇವೆ.

ಮೊದಲ ಬಾರಿಗೆ ಅಂಗನವಾಡಿ ಮಕ್ಕಳಿಗೆ ಸಿರಿಧಾನ್ಯ ಲಡ್ಡು ನೀಡಿಕೆ

0

ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ರಾಯಚೂರು ಜಿಲ್ಲೆಯಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಲಡ್ಡು ನೀಡಲಾಗುವುದು. ರಾಜ್ಯದಲ್ಲಿಯೇ ಮೊದಲ ಬಾರಿಗೆ ರಾಯಚೂರು ಜಿಲ್ಲಾಡಳಿತ ಅಪೌಷ್ಟಿಕ ಮಕ್ಕಳಿಗೆ ಸಿರಿಧಾನ್ಯದ ಲಡ್ಡು ವಿತರಿಸಲು ಪ್ರಯೋಗ ಕೈಗೊಂಡಿದೆ.

ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಮುಂದಾಗಿದೆ.
ಪೌಷ್ಟಿಕ ಆಹಾರದ ಜೊತೆಗೆ ಸಿರಿಧಾನ್ಯದ ಲಡ್ಡು ವಿತರಿಸಲಿದ್ದು, ಮುಂದಿನ ಒಂದು ವರ್ಷ ಯೋಜನೆ ಜಾರಿಯಲ್ಲಿರಲಿದೆ. ಯೋಜನೆಗಾಗಿ ಸಿ.ಎಸ್.ಆರ್. ನಿಧಿ ಬಳಸಿಕೊಳ್ಳಲಾಗುವುದು. ಹಿಂದುಳಿದ ಪ್ರದೇಶವಾದ ರಾಯಚೂರು ಜಿಲ್ಲೆಯಲ್ಲಿ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಅಂಗನವಾಡಿ ಕೇಂದ್ರಗಳ ಮೂಲಕ ಅಪೌಷ್ಟಿಕ ಮಕ್ಕಳಿಗೆ ಸಿರಿಧಾನ್ಯದಿಂದ ತಯಾರಿಸಿದ ಲಡ್ಡು ವಿತರಿಸಲಾಗುವುದು. 35,000 ಮಕ್ಕಳು ತೀವ್ರ ಮತ್ತು ಸಾಮಾನ್ಯ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರೆಲ್ಲರಿಗೂ ಸಿರಿಧಾನ್ಯದ ಲಡ್ಡು ನೀಡಲಾಗುವುದು ಎಂದು ಹೇಳಲಾಗಿದೆ.

ಬಿಎಸ್ ವೈ ಕುಟುಂಬದ ಸದಸ್ಯರ ವಿರುದ್ಧ ವಂಚನೆ ಪ್ರಕರಣ ತನಿಖೆಗೆ ಆದೇಶ

0

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕುಟುಂಬ ಸದಸ್ಯರು ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ಕುರಿತು ಎಫ್ ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ಜಡ್ಜ್ ಕೋರ್ಟ್ ಆದೇಶಿಸಿದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಖಾಸಗಿ ದೂರಿನ ವಿಚಾರಣೆ ನಡೆಸುವಂತೆ ಹೈಕೋರ್ಟ್ ಸೆಪ್ಟೆಂಬರ್ 7 ರಂದು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಒಂದು ವಾರದ ನಂತರ ಇದೀಗ ನ್ಯಾಯಾಲಯ ಈ ಆದೇಶ ಪ್ರಕಟಿಸಿದೆ.

ದೂರುದಾರ ಟಿಜೆ ಅಬ್ರಹಾಂ ಅವರಿಗೆ ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದರಿಂದ ಕೆಳ ನ್ಯಾಯಾಲಯ ಜುಲೈ 8ರಂದು ದೂರನ್ನು ವಜಾಗೊಳಿಸಿತ್ತು. ಆದರೆ, ದೂರುದಾರರು ರಾಜ್ಯಪಾಲರಿಂದ ಮಂಜೂರಾತಿ ಪಡೆಯಲು ಸಮರ್ಥ ಅಧಿಕಾರಿಯಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. “ಈ ಯಾವುದೇ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ, ನಾನು ಈ ಎಲ್ಲಾ (ಪ್ರಕರಣಗಳಿಂದ) ಹೊರಬರುತ್ತೇನೆ. ಈ ವಿಷಯಗಳು ಸಹಜ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ತಮ್ಮ ವಿರುದ್ದ ಷಡ್ಯಂತ್ರ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಒಂದೇದಿನ 6,298 ಕೋವಿಡ್ ಪ್ರಕರಣ ಪತ್ತೆ

0

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ ಮತ್ತೆ 6 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಒಂದೇ ದಿನದಲ್ಲಿ 6,298 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
ದೇಶದಲ್ಲಿ ಈವರೆಗೆ 5,28,273 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. 24 ಗಂಟೆಯಲ್ಲಿ 6,322 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ 46,748 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು,
ಶೇ.98.71ರಷ್ಟು ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,39,47,756 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 19,61,896 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 2,16,17,78,020 ಡೋಸ್ ಲಸಿಕೆ ಹಾಕಲಾಗಿದೆ.
24 ಗಂಟೆಯಲ್ಲಿ 3,33,964 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.

ಉನ್ನತ ಶಿಕ್ಷಣಕ್ಕೆ ಅಮೆರಿಕಾಗೆ ಭಾರತದಿಂದ ಅತ್ಯಧಿಕ ವಿದ್ಯಾರ್ಥಿಗಳು

0

ಯುನೈಟೆಡ್ ಸ್ಟೇಟ್ಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವಲ್ಲಿ ಭಾರತವು ನಂಬರ್ ಒನ್ ದೇಶವಾಗಿದೆ ಎಂದು ನವದೆಹಲಿಯಲ್ಲಿರುವ ಕಾನ್ಸುಲರ್ ವ್ಯವಹಾರಗಳ ಯುಎಸ್ ರಾಯಭಾರ ಸಚಿವ ಡಾನ್ ಹೆಫ್ಲಿನ್ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಭಾರತದಲ್ಲಿನ US ರಾಜತಾಂತ್ರಿಕ ನಿಯೋಗಗಳು ಮೇ ಮತ್ತು ಜೂನ್ 2022 ರ ನಡುವೆ ದಾಖಲೆಯ 82,000 ವಿದ್ಯಾರ್ಥಿ ವೀಸಾಗಳನ್ನು ನೀಡಿವೆ – ಇದು ವಿಶ್ವದ ಎಲ್ಲಾ ದೇಶಗಳಿಗಿಂತ ಹೆಚ್ಚು ಎನ್ನುವುದು ಗಮನಾರ್ಹ.

ನಾವು ಈ ಬೇಸಿಗೆಯಲ್ಲಿ ಒಟ್ಟು 82,000 ವಿದ್ಯಾರ್ಥಿ ವೀಸಾಗಳನ್ನು ನೀಡಿದ್ದೇವೆ.ಇದು ದಾಖಲೆಯಾಗಿದೆ. ಕಳೆದ ವರ್ಷ ನಾವು 62000 ವಿದ್ಯಾರ್ಥಿ ವಿಸಾಗಳನ್ನು ನೀಡುವ ದಾಖಲೆಯನ್ನು ಮಾಡಿದ್ದೇವೆ. ಆಸಕ್ತಿದಾಯಕ ಸಂಗತಿವೆಂದರೆ ಈ ವರ್ಷ ಇತರ ದೇಶಗಳಲ್ಲಿನ ಕೋವಿಡ್ ಸಂಬಂಧಿತ ಸಮಸ್ಯೆಗಳಿದ್ದರೂ ಕೂಡ ವಿದ್ಯಾರ್ಥಿಗಳನ್ನು US ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಕಳುಹಿಸುವಲ್ಲಿ ಭಾರತವು ನಂಬರ್ ಒನ್ ದೇಶವಾಗಿದೆ ಎಂದು ಹೆಫ್ಲಿನ್ ಅವರು ಮಾಹಿತಿ ನೀಡಿದ್ದಾರೆ.

ಈ ಬೇಸಿಗೆಯಲ್ಲಿ 82,000 ವಿದ್ಯಾರ್ಥಿ ವೀಸಾಗಳನ್ನು ವಿತರಿಸುವ ದೇಶದ ಇತ್ತೀಚಿನ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ.

ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು- ಸಚಿವ ಹೆಬ್ಬಾರ್

0

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸೇರಿ ಇತರ ಸೌಲಭ್ಯಗಳ ಸಮರ್ಪಕ ವಿತರಣೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ಅವರು ತಿಳಿಸಿದರು.

ವಿಧಾನ ಪರಿಷತ್ತಿನ ಕಲಾಪದ ವೇಳೆಯಲ್ಲಿ ಮಾನ್ಯ ವಿರೋಧ ಪಕ್ಷ ಮುಖ್ಯ ಸಚೇತಕರಾದ ಪ್ರಕಾಶ್ ಕೆ ರಾಥೋಡ್ ಅವರು ಸೆ.14ರಂದು ಪ್ರಸ್ತಾಪಿಸಿದ ಶೂನ್ಯ ವೇಳೆಯ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಪ್ರಸ್ತುತ ಶೈಕ್ಷಣಿಕ ಸಹಾಯಧನ ಮತ್ತು ಶಿಶುಪಾಲನಾ ಸೌಲಭ್ಯ ಜಾರಿಯಲ್ಲಿರುತ್ತದೆ.

ಶೈಕ್ಷಣಿಕ ಸಹಾಯಧನವನ್ನು ಎಲ್ ಕೆ ಜಿ ಯಿಂದ ಪಿ.ಹೆಚ್.ಡಿ ಪದವಿಯವರೆಗೆ ಓದುತ್ತಿರುವ ಮಕ್ಕಳಿಗೆ ಪ್ರತಿ ವರ್ಷ ಸಹಾಯಧನವನ್ನು ನೀಡಲಾಗುತ್ತಿದೆ. 2021-22ನೇ ಸಾಲಿನಿಂದ ಈ ಸಹಾಯಧನವನ್ನು ಎಲ್ಲಾ ಮಕ್ಕಳಿಗೂ ನಿಗಧಿತ ಅವಧಿಯಲ್ಲಿ ತಲುಪಿಸುವ ಉದ್ದೇಶದಿಂದ ಸರ್ಕಾರದ ಎಸ್.ಎಸ್.ಪಿ. ಪೋರ್ಟ್ಲ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ಮಕ್ಕಳ ಪೋಷಕರ ಖಾತೆಗಳಿಗೆ ಡಿ.ಬಿ.ಟಿ ಮೂಲಕ ನೇರವಾಗಿ ಹಣ ವರ್ಗಾವಣೆಯಾಗುತ್ತಿದೆ.

ಇದಲ್ಲದೆ, ಶಿಶುಪಾಲನಾ ಸೌಲಭ್ಯವು ಕಟ್ಟಡ ಕಾರ್ಮಿಕರು ವಾಸಿಸುವ ಮತ್ತು ಕೆಲಸ ನಿರ್ವಹಿಸುವ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು 06 ತಿಂಗಳಿಂದ 06 ವರ್ಷದವರೆಗಿನ ಮಕ್ಕಳ ಪಾಲನಾ ಮತ್ತು ಪೋಷಣೆಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ಮಕ್ಕಳ ಪೋಷಕರು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಹಾಯಕವಾಗಿರುತ್ತದೆ ಎಂದು ತಿಳಿಸಿದರು.

ಹಿಂಸೆ ಪ್ರೇರಕರಿಗೆ ಅಮೆರಿಕದಲ್ಲಿ ತಕ್ಕ ಶಿಕ್ಷೆ- ಜೋ ಬೈಡನ್

0

ದೇಶದಲ್ಲಿ ನಡೆಯುತ್ತ್ತರುವ ದ್ವೇಷದ ಹಿಂಸಾಚಾರವನ್ನು ಬೇರು ಸಹಿತ ಕಿತ್ತುಹಾಕಬೇಕು ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಹಿಂಸಾಚಾರವನ್ನು ಉತ್ತೇಜಿಸುವವರಿಗೆ ತಕ್ಕ ಶಿಕ್ಷೆ ಖಚಿತ, ಇಂತಹುದಕ್ಕೆ ಅಮೆರಿಕಾದಲ್ಲಿ ಸ್ಥಾನವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕಳೆದ 2020ರಲ್ಲಿ ಅಮೆರಿಕದಲ್ಲಿ ನಡೆದ ಅಪರಾಧ ಚಟುವಟಿಕೆಗಳು ಮಿತಿ ಮೀರಿವೆ ಇದನ್ನು ಕೊನೆಗಾಣಿಸಲು ಸಿದ್ದ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರ ವಿರುದ್ಧದ ಘಟನೆಗಳು ಸೇರಿದಂತೆ ದೇಶಾದ್ಯಂತ ದ್ವೇಷ ಸಂಬಂಧಿತ ಘಟನೆಗಳ ಉಲ್ಬಣಸಿರುವುದು ಶ್ವೇತ ವರ್ಣೀಯರ ಪ್ರಾಬಲ್ಯಕ್ಕಾಗಿ ಇಂತಹ ಪ್ರವೃತ್ತಿಯಿಂದ ಮಟ್ಟಿನಿಲ್ಲಬೇಕು ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಹರಿಹಾಯ್ದಿದ್ದಾರೆ.

ನಮ್ಮ ನಂಬಿಕೆಗಳು ಏನೇ ಇರಲಿ, ದ್ವೇಷಪೂರಿತ ಹಿಂಸಾಚಾರದ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲಬೇಕು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮಲ್ಲಿ ಒಂದು ಗುಂಪಿನ ಮೇಲಿನ ದಾಳಿ ಅಕ್ಷರಶಃ ನಮ್ಮೆಲ್ಲರ ಮೇಲಿನ ದಾಳಿಯಾಗಿದೆ ಎಂದು ಬಿಡೆನ್ ಶ್ವೇತ ಭವನದಲ್ಲಿ ನಡೆದ ಯುನೈಟೆಡ್ ವಿ ಸ್ಟ್ಯಾಂಡ ಶೃಂಗಸಭೆಯ ಭಾಷಣದಲ್ಲಿ ಹೇಳಿದರು.

ಮೈಸೂರು ಮೃಗಾಲಯ ಈಗ ಭಾರತದಲ್ಲಿ ನಂ 3

0

ಭಾರತದಲ್ಲಿನ ಮೃಗಾಲಯಗಳ ನಿರ್ವಹಣೆಯ ಪರಿಣಾಮಕಾರಿ ಮೌಲ್ಯಮಾಪನದಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು ಒಟ್ಟಾರೆ ವಿಭಾಗದಲ್ಲಿ 3ನೇ ಸ್ಥಾನ ಹಾಗೂ ದೊಡ್ಡ ಮೃಗಾಲಯ ವಿಭಾಗದಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ.

ನಿರ್ವಹಣೆ, ಸ್ವಚ್ಛತೆ, ಪ್ರಾಣಿಗಳ ಎರವಲು ಪ್ರವಾಸಿಗರ ಆಕರ್ಷಣೆ ಸೇರಿದಂತೆ ಅನೇಕ ಆಯಾಮಗಳಲ್ಲಿ ನಡೆದಿರುವ ಮೌಲ್ಯಮಾಪನದಲ್ಲಿ ದೊಡ್ಡ ಮೃಗಾಲಯಗಳ ವಿಭಾಗದಲ್ಲಿ ತಮಿಳುನಾಡಿನ ಅರಿಗ್ನಾರ್ ಅಣ್ಣ ಜಿಯಾಲಾಜಿಕಲ್ ಪಾರ್ಕ್ ಶೇ.80ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು 2ನೇ ಸ್ಥಾನದಲ್ಲಿದೆ.

ಗುಜರಾತ್‍ನ ಸಕ್ರ್ಕರ್‍ಬಾಗ್ ಜಿಯಾಲಾಜಿಕಲ್ ಪಾರ್ಕ್ ಶೇ.76ರಷ್ಟು ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನ ಪಡೆದಿದೆ.

ಮಧ್ಯಮವರ್ಗ ಮೃಗಾಲಯಗಳ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಪದ್ಮಜನಾಯ್ಡು ಹಿಮಾಲಯನ್ ಜಿಯಾಲಾಜಿಕಲ್ ಪಾರ್ಕ್ ಶೇ.83 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದೆ. ಶೇ.78 ಅಂಕಪಡೆದ ಅಲಿಫೋರ್ ಜಿಯಾಲಾಜಿಕಲ್ ಪಾರ್ಕ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್ ಪ್ರತಿಕ್ರಿಯಿಸಿ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಪ್ರಥಮ ಸ್ಥಾನಕ್ಕೆ ತರಲು ಶ್ರಮಿಸಲಾಗುತ್ತದೆ.

ಈಗಾಗಲೇ ಇನೋಸಿಸ್, ಆರ್‍ಬಿಐ ಮೃಗಾಲಯದಲ್ಲಿ ಪ್ರಾಣಿಗಳ ಮನೆ ನಿರ್ಮಾಣಕ್ಕೆ ಸಹಕಾರ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ನೀಡುವ ಜೊತೆಗೆ ಸ್ವಚ್ಛತೆ, ನಿರ್ವಹಣೆಗೆ ಹೆಚ್ಚಿನ ಗಮನ ಕೊಡಲಾಗುತ್ತದೆ ಎಂದು ತಿಳಿಸಿದರು.