Sunday, March 22, 2026
Sunday, March 22, 2026
Home Blog Page 1437

ಗ್ರಾಮ ಪಂಚಾಯತಿಗಳಲ್ಲಿನ ಖಾಲಿ ಹುದ್ದೆಗಳಿಗೆ ಶೀಘ್ರ ನೇಮಕಾತಿ-ಬೊಮ್ಮಾಯಿ

0

ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಮೂರ್ನಾಲ್ಕು ತಿಂಗಳೊಳಗೆ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ರಾಜ್ಯದ ಗ್ರಾಮಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಾರೆ.

326 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಸಲ್ಲಿಸಿದ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ. ಕಾರ್ಯದರ್ಶಿ ಗ್ರೇಡ್ -1 487 ಹುದ್ದೆಗಳ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಕಾರ್ಯದರ್ಶಿ ಗ್ರೇಡ್- 2 ರ 556 ಹುದ್ದೆಗಳಲ್ಲಿ 343 ಹುದ್ದೆಗಳನ್ನು ನೇರ ನೇಮಕಾತಿ ಮಾಡಲಿದ್ದು, ಉಳಿದ ಹುದ್ದೆಗಳನ್ನು ಭಡ್ತಿ ಮೂಲಕ ಭರ್ತಿ ಮಾಡಲಾಗುವುದು.

625 ಎಸ್.ಡಿ.ಎ. ಹುದ್ದೆಗಳಲ್ಲಿ 124 ನೇರ ನೇಮಕಾತಿ ಮಾಡಲಿದ್ದು, ಉಳಿದವನ್ನು ಭಡ್ತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಶೇ. 90 ರಷ್ಟು ಹುದ್ದೆಗಳು ಭರ್ತಿಯಾಗಲಿವೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಿಗೆ 30ಕ್ಕೂ ಹೆಚ್ಚು ಇಲಾಖೆಗಳ ಸೇವೆ ಒದಗಿಸುವ ಅಧಿಕಾರ ನೀಡಲಾಗಿದೆ.

ಕೋವಿಡ್ ಕಾರಣ ಮಾಚ್ಚಿದ್ದ ಭಾರತ ಭೂತಾನ್ ಗಡಿ ತೆರೆಯಲಾಗುತ್ತದೆ

0

ಕೊರೋನಾ ಹಿನ್ನೆಲೆ ಸಾಂಕ್ರಾಮಿಕ ನಿಯಂತ್ರಿಸುವುದಕ್ಕಾಗಿ ಮುಚ್ಚಲ್ಪಟ್ಟಿದ್ದ ಅಸ್ಸಾಂ ಗಡಿಯಲ್ಲಿರುವ ಭಾರತ,ಭೂತಾನ್ ಗಡಿ ಬಾಗಿಲು ಸೆ. 23ರಂದು ತೆರೆಯಲಾಗುತ್ತಿದೆ.

ತಾಶಿ ಪೆಂಜೋರ್ ನೇತೃತ್ವದ ಭೂತಾನ್ ನಿಯೋಗವು ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮತ್ತೆ ಭಾರತ-ಭೂತಾನ್ ಗಡಿ ಬಾಗಿಲುಗಳನ್ನು ಸೆ.23ರಂದು ತೆರವುಗೊಳಿಸಲು ನಿರ್ಧರಿಸಲಾಗಿದೆ.

ಎರಡೂವರೆ ವರ್ಷಗಳ ಬಳಿಕ ಈ ಗಡಿ ಬಾಗಿಲುಗಳನ್ನು ತೆರೆಯಲಾಗುತ್ತಿದೆ. ಸೆ.23ರಿಂದ ವ್ಯಾಪಾರ, ವಾಣಿಜ್ಯ ಮತ್ತು ಅಧಿಕೃತ ಸಾರಿಗೆಗಾಗಿ ತನ್ನ ಗಡಿಗಳನ್ನು ಪುನಃ ತೆರೆಯುವುದಾಗಿ ಭೂತಾನ್ ಸರ್ಕಾರ ಘೋಷಿಸಿದೆ.

ಸ್ಫೂರ್ತಿ ದಿನಾಚರಣೆಯಾಗಿ ಡಾ.ಪುನೀತ್ ಜನ್ಮದಿನ

0

ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಅನೇಕ ತಿಂಗಳುಗಳೆ ಕಳೆದಿದ್ದರೂ ಸಹ ಕನ್ನಡಿಗರ ಮನಸ್ಸಿನಲ್ಲಿ ಅವರು ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ.

ಕರ್ನಾಟಕ ಸರ್ಕಾರ ಸಹ ಪುನೀತ್ ರಾಜಕುಮಾರ್ ಅವರ ಜನ್ಮದಿನವಾದ ಮಾರ್ಚ್ 17 ಅನ್ನು ಸ್ಪೂರ್ತಿ ದಿನವನ್ನಾಗಿ ಸರ್ಕಾರದ ವತಿಯಿಂದಲೇ ಆಚರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಈ ಬಾರಿಯ ದಸರಾ ಮಹೋತ್ಸವದ ಚಲನಚಿತ್ರ ಪ್ರದರ್ಶನ ಸಂದರ್ಭದಲ್ಲಿ ಅಪ್ಪು ಅಭಿನಯದ ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಇದಕ್ಕಾಗಿ ಚಿತೋತ್ಸವದ ಒಂದು ದಿನ ಮೀಸಲಿಡಲಾಗಿದೆ.
ಇದರ ಮಧ್ಯೆ ಶಿವಮೊಗ್ಗದ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಮತ್ತೊಂದು ಮಹತ್ವದ ಕಾರ್ಯ ಮಾಡಿದ್ದಾರೆ. ಅದೇನು ಅಂದ್ರೆ… ವಿಶ್ವದ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಒಂದಾಗಿರುವ ಲಡಾಕ್ ನ ಖರದುಂಗ್ಲಾ ಪಾಸ್ ನಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರದೊಂದಿಗೆ ಕನ್ನಡ ಧ್ವಜವನ್ನು ಹಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಪ್ರಮುಖರಾದ ಗೌತಮ್, ಹರೀಶ್, ಕಿರಣ್ ತಮ್ಮ ನೆಚ್ಚಿನ ನಟನ ಫೋಟೋದೊಂದಿಗೆ ಕ್ಲಿಕ್ಕಿಸಿಕೊಂಡಿರುವ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಂದೇಭಾರತ್ ಹೈಸ್ಪೀಡ್ ರೈಲು ಜಗತ್ತನ್ನೇ ಬೆಚ್ಚಿಬೀಳಿಸಿದೆ

0

ಭಾರತವು ಹೈಡ್ರೋಜನ್ ಚಾಲಿತ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. 2023ರ ವೇಳೆಗೆ ಸಿದ್ಧಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

ಭುವನೇಶ್ವರದಲ್ಲಿರುವ ಎಸ್‌ಒಎ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ಸಚಿವ ವೈಷ್ಣವ್‌, ಭಾರತೀಯ ರೈಲ್ವೇ ತನ್ನ ಗತಿ ಶಕ್ತಿ ಟರ್ಮಿನಲ್‌ಗಳ ನೀತಿಯ ಮೂಲಕ ದೇಶದ ದೂರದ ಮತ್ತು ಸಂಪರ್ಕವಿಲ್ಲದ ಪ್ರದೇಶಗಳನ್ನು ರೈಲ್ವೇ ನೆಟ್‌ವರ್ಕ್‌ನೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಈ ನೀತಿಯ ಕೆಲಸ ತ್ವರಿತಗತಿಯಲ್ಲಿದೆ ಎಂದು ಹೇಳಿದರು.

ಬೆಂಗಳೂರಿನಿಂದ ಓಡಾಡಲಿದೆ ವಂದೇ ಭಾರತ್ ವಿಶೇಷ ರೈಲು, ಎಲ್ಲಿಂದ ಎಲ್ಲಿಗೆ ಪ್ರಯಾಣ ತಿಳಿಯಿರಿ

ವಂದೇಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈ ಸ್ಪೀಡ್ ಹಾಗೂ ಅತಿ ವೇಗದ ರೈಲುಗಳಲ್ಲಿ ಒಂದನ್ನು ಭಾರತದಲ್ಲಿ ಆಂತರಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕಳೆದ 2 ವರ್ಷಗಳಿಂದ ರೈಲು ಯಾವುದೇ ದೊಡ್ಡ ಸ್ಥಗಿತವಿಲ್ಲದೆ ಸರಾಗವಾಗಿ ಚಲಿಸುತ್ತಿದೆ. ಎಕ್ಸ್‌ಪ್ರೆಸ್ ರೈಲುಗಳನ್ನು ಐಸಿಎಫ್‌ನಲ್ಲಿ ತಯಾರಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಸೇವೆಗೆ ಒದಗಿಸಲಾಗುತ್ತದೆ ಎಂದು ಹೇಳಿದರು.

ಇತ್ತೀಚೆಗೆ ರೈಲ್ವೇ ಸುರಕ್ಷತಾ ಆಯುಕ್ತರಿಂದ ವಂದೇ ಭಾರತ್‌ಗೆ ಹಸಿರು ನಿಶಾನೆ ಸಿಕ್ಕಿದೆ. ರೈಲು ಮತ್ತು ಹಳಿಗಳ ನಿರ್ವಹಣೆ ಕುರಿತು ಮಾತನಾಡಿದ ಸಚಿವರು, ನಮ್ಮ ಗಮನ ಕೇವಲ ರೈಲುಗಳನ್ನು ತಯಾರಿಸುವುದು ಮಾತ್ರವಲ್ಲ. ಅರೆ-ಹೈ ಅಥವಾ ಹೈಸ್ಪೀಡ್ ರೈಲುಗಳನ್ನು ಓಡಿಸಲು ನಾವು ಟ್ರ್ಯಾಕ್ ನಿರ್ವಹಣಾ ವ್ಯವಸ್ಥೆಯಲ್ಲಿ ಶ್ರಮಿಸುತ್ತಿದ್ದೇವೆ. ವಂದೇ ಪ್ರಯೋಗದ ಸಮಯದಲ್ಲಿ 180 ಕಿಲೋಮೀಟರ್ ವೇಗದಲ್ಲಿ ಸಂಪೂರ್ಣವಾಗಿ ತುಂಬಿದ ನೀರಿನ ಲೋಟವು ಅಲುಗಾಡಲಿಲ್ಲ. ಈ ವಂದೇ ಭಾರತ್‌ ಅದು ಜಗತ್ತನ್ನು ಬೆಚ್ಚಿಬೀಳಿಸಿದೆ ಎಂದು ನಾವು ಈಗಾಗಲೇ ತೋರಿಸಿದ್ದೇವೆ ಎಂದರು.

ಕೆಲವೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ಲಿಂಕ್ ಎಲೆಕ್ಟ್ರಿಕ್ ಬಸ್ ಸೌಲಭ್ಯ

0

ಸಿಲಿಕಾನ್‌ ಸಿಟಿ ಬೆಂಗಳೂರಿಗರಿಗೆ ಸಂತೋಷದ ಸಮಾಚಾರ. ಮೆಟ್ರೋ ನಿಲ್ದಾಣದಿಂದ ಇತರ ಸ್ಥಳಗಳಿಗೆ ತೆರಳುವುದಕ್ಕಾಗಿ ಮೊದಲ ಬಾರಿಗೆ ಮಿನಿ ಎಲೆಕ್ಟ್ರಿಕ್ ಬಸ್ ಸೇವೆ ನೀಡಲು ಬಿಎಂಟಿಸಿ ಮುಂದಾಗಿದೆ.

ಕೇಂದ್ರ ಸರ್ಕಾರದ 13 ಕೋಟಿ ಅನುದಾನದಿಂದ. ಈಗ ಮಿನಿ ಎಲೆಕ್ಟ್ರಿಕ್ ಕಂಡಕ್ಟರ್ ಲೇಸ್ ಬಸ್ ಸೇವೆ ನೀಡಲು ಬಿಎಂಟಿಸಿ ಮುಂದಾಗಿದೆ. ಮೆಟ್ರೋ ನಿಲ್ದಾಣದಿಂದ ಇತರ ಸ್ಥಳಗಳಿಗೆ ಹೋಗಲು ಅನುಕೂಲವಾಗುವಂತೆ 100 ಮಿನಿ ಬಸ್ ಆರಂಭ ಮಾಡಲು ಬಿಎಂಟಿಸಿ ಯೋಚಿಸಿದೆ.

ಇದು ನೋಡಕ್ಕೆ ಬಸ್ ಗಿಂತ ಚಿಕ್ಕದಾಗಿದೆ.ವ್ಯಾನ್ ಎಂದು ಕರೆಯಲು ಬಹುದು . ಸುಮಾರು 25 ರಿಂದ 30 ಜನ ಪ್ರಯಾಣಿಕರು ಸಂಚಾರ ಮಾಡಬಹುದಾದ ಈ ಎಲೆಕ್ಟ್ರಿಕ್ ಬಸ್ಸಾಗಿದೆ . ಇದು ಕಂಡಕ್ಟರ್ ಲೆಸ್ ಬಸ್ ಆಗಿರಲಿದೆ. ಸ್ಮಾರ್ಟ್ ಕಾರ್ಡ್ ಅಥವಾ ಆನ್‍ಲೈನ್ ಮೂಲಕ ಟಿಕೇಟ್ ಖರೀದಿಸಿ ಸಂಚಾರ ಮಾಡಬಹುದು. ಮುಂದಿನ ಆರರಿಂದ ಏಳು ತಿಂಗಳಲ್ಲಿ ಈ ಮಿನಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿಗರ ಸೇವೆಗೆ ಸಿಗಲಿದೆ.

ಸರ್ ಎಂ.ವಿ.ರಾಷ್ಟ್ರ ನಿರ್ಮಿಸಿದ ಮಹಾಮೇಧಾವಿ- ಈಶ್ವರಪ್ಪ

0

ಸರ್ ಎಂ ವಿಶ್ವೇಶ್ವರಯ್ಯನವರು ರಾಷ್ಟ್ರವನ್ನು ನಿರ್ಮಾಣ ಮಾಡಿದಂತಹ ಮಹಾನ್ ಮೇಧಾವಿ ಎಂದು ಕೆ ಎಸ್ ಈಶ್ವರಪ್ಪ ನವರು ಹೇಳಿದರು ಸರ್. ಎಂ ವಿ ಅಭಿಮಾನಿ ಬಳಗ ತಾಲೂಕು ಬ್ರಾಹ್ಮಣ ಸೇವಾ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳ ವತಿಯಿಂದ ನಿರ್ಮಾಣ ಮಾಡಿದಂತಹ ಸರ್. ಎಂ ವಿಶ್ವೇಶ್ವರಯ್ಯನವರ ಪುತ್ತಳಿಯನ್ನು ಮೈನ್ ಮೆಡ್ಲಿ ಸ್ಕೂಲ್ ಆವರಣದಲ್ಲಿ ಅನಾವರಣ ಗೊಳಿಸಿ ಮಾತನಾಡಿದರು ಸರ್ ಎಂ ವಿ ಅವರು ಪ್ರಪಂಚದಲ್ಲಿರುವ ಮೇಧಾವಿಗಳಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದಾರೆ ಇಡೀ ಪ್ರಪಂಚಕ್ಕೆ ಅವರ ಕೊಡುಗೆ ಅಮೂಲ್ಯವಾದದ್ದು ಶಾಲೆಯ ಮಕ್ಕಳೆಲ್ಲರೂ ಅವರು ನಡೆದು ಬಂದಂತಹ ದಾರಿ ಎನ್ನು ಅರ್ಥೈಸಿಕೊಳ್ಳಬೇಕು ವಿಶ್ವೇಶ್ವರಯ್ಯನವರ ಮಾದರಿಯಲ್ಲಿ ವಿದ್ಯೆಯನ್ನು ಕಲಿತು ವಿದ್ಯಾರ್ಥಿಗಳು ಜೀವನದಲ್ಲಿ ಬಹಳ ಉತ್ತುಂಗಕ್ಕೆ ಬೆಳೆಯಲಿ ಎಂಬ ದೃಷ್ಟಿಯಿಂದ ಈ ಜಾಗದಲ್ಲಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ ಬೇರೆ ಎಲ್ಲಾ ಇಂಜಿನಿಯರ್ಸ್ಗಳಿಗೆ ಸರ್ ಎಂ ವಿ. ಯವರು ಮಾದರಿಯಾಗಿದ್ದರು ಅವರ ಕಾಲದಲ್ಲಿ ಕೇವಲ ಸೇತುವೆ ಕೈಗಾರಿಕೆ ಡ್ಯಾಮ್ಗಳಷ್ಟೇ ನಿರ್ಮಾಣ ಮಾಡದೆ ಮಹಾನ್ ರಾಷ್ಟ್ರಭಕ್ತರಾಗಿ ಇಡೀ ರಾಷ್ಟ್ರವನ್ನು ನಿರ್ಮಾಣ ಮಾಡಿದಂತಹ ಕೊಡುಗೆ ಅವರಿಗೆ ಸಲ್ಲುತ್ತದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷರಾದ ವೆಂಕಟೇಶ್ ರಾವ್ ಅವರು ಮಾತನಾಡಿ ಹಲವಾರು ವರ್ಷಗಳ ಹಿಂದೆ ನಮ್ಮ ಸಂಘದ ಮಾಜಿ ಅಧ್ಯಕ್ಷರಾದ ರವಿಶಂಕರ್ ಅವರ ನೇತೃತ್ವದಲ್ಲಿ ಪುತ್ತಳಿಯನ್ನು ತಾಲೂಕ್ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಮಾಡಿಸಲಾಗಿತ್ತು ನಮ್ಮ ಗಾಯತ್ರಿ ದೇವಸ್ಥಾನದಲ್ಲೇ ಪ್ರತಿ ವರ್ಷ ಸರಿ ಎಂ. ವಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿತ್ತು ಆದರೆ ಅದನ್ನು ನಗರ ಭಾಗದಲ್ಲಿ ಇಡಲು ಸೂಕ್ತವಾದಂತಹ ಸಮಯ ಜಾಗ ಬಂದಿರಲಿಲ್ಲ ಈಶ್ವರಪ್ಪನವರ ಸಹಾಯದಿಂದ ಪುತ್ತಳಿ ಸರ್ ಎಂ.ವಿ ಅವರ ಜನ್ಮದಿನದೊಂದೇ ಅನಾವರಣಗೊಳ್ಳುತ್ತಿದ್ದು ಬಹಳ ಸಂತೋಷವಾಗಿದೆ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರಿನ ನಾಮಫಲಕವನ್ನು ಆದಷ್ಟು ಬೇಗ ರಸ್ತೆ ಮಾರ್ಗದಲ್ಲಿ ಹಾಕಿಸಬೇಕು ಎಂದು ಮನವಿ ಮಾಡಿದರು
ಜಿಲ್ಲಾ ಬ್ರಾಹ್ಮಣ ಮಹಾಸಭಾಧ್ಯಕ್ಷರಾದ ನಟರಾಜ್ ಭಗವತ್ ಅಂಕಣಕಾರರಾದ ಸುಂದರ್ ರಾಜ್ ಕೆ ಎಸ್ ಎಸ್ ಐ ಡಿ ಸಿ ಮಾಜಿ ಉಪಾಧ್ಯಕ್ಷರಾದ ದತ್ತಾತ್ರಿ ಕರ್ನಾಟಕ ಬ್ಯಾಂಕ್ ಎಜಿಎಂ ಹಾಯವಧನ ಉಪಾಧ್ಯಾಯ ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಶಂಕರ್ ಉಪಸ್ಥಿತರಿದ್ದರು

ಕೃಷಿ ಆದಾಯ ದ್ವಿಗುಣ ಬಗ್ಗೆ ವಿಚಾರ ಗೋಷ್ಠಿ

0

ಸೆ. 17ರಿಂದ 20ರ ವರೆಗೆ ನಾಲ್ಕು ದಿನಗಳ ಕಾಲ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ‘ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಘೋಷವಾಕ್ಯದಡಿ ಕೃಷಿ ಮೇಳ-2022 ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೃಷಿ ವಿವಿ ಕುಲಪತಿ ಡಾ.ಬಸವರಾಜಪ್ಪ, ಕಳೆದ ಎರಡು ವರ್ಷಗಳ ಕಾಲ ಕೋವಿಡ್‌ ಹಿನ್ನೆಲೆಯಲ್ಲಿ ಮೇಳ ನಡೆದಿಲ್ಲ. ಕಳೆದ ಜನವರಿ ತಿಂಗಳಲ್ಲಿ ಮಳೆಯ ಹಿನ್ನೆಲೆಯಲ್ಲಿ ಮುಂದೂಡಿ ಇದೀಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆ. 17ರಂದು ಬೆಳಗ್ಗೆ 10.30ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲಪುಷ್ಪ, ಗಡ್ಡೆ-ಗೆಣಸು, ಮತ್ಸ ಮೇಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 11.30ಕ್ಕೆ ಬೀಜ ಮೇಳ ಉದ್ಘಾಟನೆ, ಮಧ್ಯಾಹ್ನ 2ಕ್ಕೆ ಸೂರ್ಯಕಾಂತಿ ಬೆಳೆ ವಿಚಾರಗೋಷ್ಠಿ ಹಾಗೂ ಮಧ್ಯಾಹ್ನ 3ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸೆ.18ರಿಂದ ಬೆಳಗ್ಗೆ 11ಕ್ಕೆ ಹವಾಮಾನ ವೈಪರಿತ್ಯ ವಿಚಾರಗೋಷ್ಠಿ ನಡೆಯಲಿದ್ದು, ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು.

ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಮತ್ತಿತರರು ಭಾಗವಹಿಸುತ್ತಾರೆ. ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 3.30ಕ್ಕೆ ರೈತರ ಆದಾಯ ದ್ವಿಗುಣ ವಿಚಾರಗೋಷ್ಠಿ ನಡೆಯಲಿದೆ ಎಂದರು.

ಸೆ.19ರಂದು ಬೆಳಗ್ಗೆ 10ಕ್ಕೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ವಿಚಾರಗೋಷ್ಠಿ, ಬೆಳಗ್ಗೆ 11.30ಕ್ಕೆ ನೈಸರ್ಗಿಕ ಕೃಷಿ ವಿಚಾರಗೋಷ್ಠಿ, ಮಧ್ಯಾಹ್ನ 2.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಸಂಜೆ 4.30ಕ್ಕೆ ಕೃಷಿ ವಿಚಾರಗೋಷ್ಠಿ ನಡೆಯಲಿದೆ. ಸೆ. 20ರಂದು ಬೆಳಗ್ಗೆ 10.30ಕ್ಕೆ ಕನ್ನಡ ಕೃಷಿ ಗೋಷ್ಠಿ, ಡಾ. ಚನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ ಪ್ರದಾನ, ಬೆಳಗ್ಗೆ 11.30ಕ್ಕೆ ದ್ವಿತೀಯ ಕೃಷಿ ವಿಚಾರಗೋಷ್ಠಿ, ಮಧ್ಯಾಹ್ನ 2.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಹಾಗೂ ಸಂಜೆ 4ಕ್ಕೆ ಸಮಾರೋಪ ನಡೆಯಲಿದೆ ಎಂದರು.

ಉಕ್ರೇನ್ ಅಧ್ಯಕ್ಷ ಕಾರು ಅಪಘಾತದಿಂದ ಪಾರು

0

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಗಿ 7 ತಿಂಗಳುಗಳೇ ಕಳೆದಿವೆ. ಕಳೆದ ಫೆಬ್ರುವರಿಯಿಂದ ಶುರುವಾದ ಯುದ್ಧ ಇನ್ನೂ ನಿಂತಿಲ್ಲ. ಯುದ್ಧದಲ್ಲಿ ಉಕ್ರೇನ್​ಗೆ ಅಪಾರ ಪ್ರಮಾಣದ ಹಾನಿ ಅನುಭವಿಸಿದ್ದರೂ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಮಾತ್ರ ಧೈರ್ಯದಿಂದ ಮುನ್ನುಗ್ಗುತ್ತಲೇ ಇದ್ದಾರೆ.

ಆದರೆ, ಇದರ ನಡುವೆಯೇ ಉಕ್ರೇನ್​ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಇಂದು ನಡೆದಿದೆ.

ವೊಲೊದಿಮಿರ್ ಝೆಲೆನ್​ಸ್ಕಿ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್​ ವೊಲೊದಿಮಿರ್ ಅಲ್ಪದಲ್ಲಿಯೇ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಯುದ್ಧಭೂಮಿಗೆ ಭೇಟಿ ನೀಡಿದ ನಂತರ ಹಿಂದಿರುವ ವೇಳೆಯಲ್ಲಿ ಈ ಘಟನೆ ನಡೆದಿದೆ. ವೊಲೊಡಿಮಿರ್ ಅವರ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಜೀವಕ್ಕೇನು ಅಪಾಯವಿಲ್ಲ ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಇವರ ಕಾರು ಚಾಲಕನಿಗೆ ಸಹ ಗಾಯಗಳಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಕೂಲಂಕಷವಾಗಿ ತನಿಖೆ ಪ್ರಾರಂಭಿಸಲಾಗಿದೆ.

ಸ್ಮಾರ್ಟ್ ಸಿಟಿಯ 108 ತಂಗುದಾಣಅಸಮರ್ಪಕ

0

ಶಿವಮೊಗ್ಗ ಸ್ಮಾರ್ಟಸಿಟಿಯವರು ನಗರದ್ಯಾಂತ  ಬಸ್ಸು ತಂಗುದಾಣ ನಿಲ್ದಾಣದಗಳನ್ನು ನಿರ್ಮಿಸಿದ್ದು  ಅವುಗಳು  ಅವೈಜ್ಞಾನಿಕ ವ್ಯವಸ್ಥೆಗಳಿಂದ   ಪ್ರಯಾಣಿಕರಿಗೆ ತ್ರೀವ್ರ ಆನಾನುಕೂಲ ಉಂಟಾಗುತ್ತಿದೆ. ಹಾಗೂ ನಗರದ ರಕ್ಷಣಾ ವ್ಯವಸ್ಥೆಗೂ ಸವಾಲಾಗಿದೆ.  ಈ ವಿಚಾರವಾಗಿ ಗಮನಿಸಿ, ಸೂಕ್ತ ಕ್ರಮ ಕೈಗೋಳ್ಳಿ ಎಂದು ಶಿವಮೊಗ್ಗ ನಾಗರಿಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅಪಾಯಕಾರಿಯಾಗಿ  ಪ್ರಯಾಣಿಕರ ಮಾಹಿತಿ  ಬೋರ್ಡ್ ಗಳ ಜೋಡಣೆ:   ಬಿ.ಹೆಚ್. ರಸ್ತೆ, ಸಾಗರ ರಸ್ತೆ, 100 ಅಡಿ ರಸ್ತೆ ಮುಂತಾದ ಕಡೆಗಳಲ್ಲಿ ತಂಗುದಾಣಗಳಲ್ಲಿ ಪ್ರಯಾಣಿಕರ ಮಾಹಿತಿ  ಬೋರ್ಡ್ ಗಳನ್ನು ಆಡವಳಿಸಲಾಗಿದೆ.  ಇವುಗಳನ್ನು ಬಹುತೇಕ ಕಡೆ ಪ್ರಯಾಣಿಕರು  ಈ ಬಸ್ಸು ತಂಗುದಾಣಗಳಿಗೆ ಹತ್ತುವ ಮತ್ತು ಇಳಿಯುವ  ಜಾಗದಲ್ಲೇ  ಆಡವಳಿಸಿರುವುದರಿಂದ  ಪ್ರಯಾಣಿಕರಿಗೆ ತ್ರೀವ್ರ ಅಡಚಣೆ ಆಗುತ್ತಿದೆ.  ತುಂಬಾ  ಕಡಿಮೆ  ಎತ್ತರದಲ್ಲಿ ಅಡವಳಿಸಿರುವುದರಿಂದ  ಹಲವಾರು ಕಡೆ ಪ್ರಯಾಣಿಕರಿಗೆ ಈಗಾಗಲೇ ಗಾಯಗಳಾಗುತ್ತೀವೆ.  ಇವುಗಳನ್ನು ನೆಲಮಟ್ಟದಿಂದ ಕನಿಷ್ಠ  7 ಅಡಿಯ ಮೇಲೆ ಕೂರಿಸ ಬೇಕು. ಆದರೆ ಈ ತಂಗುದಾಣಗಳ ವಿನ್ಯಾಸ ಇದಕ್ಕೆ ಪೂರಕವಾಗಿಲ್ಲ. ಹಾಗಾಗಿ   ದಯವಿಟ್ಟು ತಕ್ಷಣದಲ್ಲಿ  ಇವುಗಳ ಜೋಡಣೆ   ಎಲ್ಲಿಲ್ಲಿ ಅಪಾಯಕಾರಿ ಅಂತರದಲ್ಲಿ ಆಳವಡಿಸಿದ್ದಾರೆಯೂ, ಅವುಗಳನ್ನು ತಕ್ಷಣ  ತೆರವು ಗೊಳಿಸಲು ಕ್ರಮ ಕೈಗೋಳ್ಳಿ .  ಉಳಿದ ತಂಗುದಾಣಗಳಿಗೆ ಈ ಮಾಹಿತಿ ಬೋರ್ಡ್ ಗಳನ್ನು ಈ ರೀತಿ    ಆಳವಡಿಸದಂತೆ ಸ್ಮಾರ್ಟಸಿಟಿಯವರಿಗೆ ಸೂಚಿಸಿ.   ಅಪಾಯಕಾರಿ ಜೋಡಣೆಯ ಕೆಲವು  ಪೋಟೂ ಗಳನ್ನು ಇದರೂಂದಿಗೆ ಲಗತ್ತಿಸಿದೇವೆ.    
 
2.ಹಲವಾರು ತಂಗುದಾಣದ ಎತ್ತರ ರಸ್ತೆ ಮಟ್ಟದಿಂದ 150 ಎಂ.ಎಂ. ( ಅರ್ದ ಅಡಿ) ಹೆಚ್ಚಾಗಿದ್ದು, ಈ ರಚನೆಗಳು ರಾಷ್ಟ್ರೀಯ ರೋಡ್ ಕಾಂಗ್ರೆಸ್ ನಿಯಮ ಗಳ ವಿರುದ್ದವಾಗಿದೆ.  ಇದರಿಂದ ವಯೋವೃದ್ಧ, ಮಂಡಿ ನೋವಿರುವ, ಪೊಲಿಯೂ ಪೀಡಿತ ಹಾಗು  ಆಂಗ ವಿಕಲ ಪ್ರಯಾಣಿಕರಿಗೆ ತ್ರೀವ
ತೂಂದರೆ ಆಗಲಿದೆ.  ಈ ರೀತಿಯ ನಿರ್ಮಾಣಗಳಿಗೆ ಉದಾಹರಣೆಗಳು: ಲಕ್ಷ್ಮಿ ಟ್ಯಾಕ್ಸಿಸ್ , ಮೀನಾಕ್ಷಿ ಭವನ, ಸೈನ್ಸ್ ಫೀಲ್ಡ್,  ಎ.ಪಿ.ಎಂ.ಸಿ ಎದುರು, ಕೋರ್ಟ್  ಎದುರು, ಹೊಸ ಬ್ರಿಡ್ಜ ಪಕ್ಕದ    ತಂಗುದಾಣಗಳು. ಇವುಗಳನ್ನು ನಿಯಮದ ಪ್ರಕಾರ ಬಳಕೆದಾರರಾದರ ಸ್ನೇಹಿ ತಂಗುದಾಣವಾಗಿ  ಪುನರ್ ನಿರ್ಮಾಣ ಮಾಡಲು  ಸ್ಮಾರ್ಟಸಿಟಿಯವರಿಗೆ ಸೂಚಿಸ ಬೇಕು.                                               3.  ಬಸ್ಸು   ತಂಗುದಾಣಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳ ಎರಡೂ ಬದಿಗಳಲ್ಲಿ ಇಳಿಜಾರುಗಳನ್ನು ತಮ್ಮ ಅನುಮೊದಿತ ನಕ್ಷೆಯ ಪ್ರಕಾರ ( ಪ್ರಯಾಣಿಕರಿಗೆ ಇಳಿಯಲು-ಹತ್ತಲು) ನಿರ್ಮಾಣ ಮಾಡ ಬೇಕಾಗಿತ್ತು ಸ್ಮಾರ್ಟಸಿಟಿಯವರು. ಅನುಮೊದಿತ ನಕ್ಷೆಯನ್ನು ತಮ್ಮ ಗಮನಕ್ಕೆ ಲಗತ್ತಿಸಿದ್ದೇವೆ .  ಬಹುತೇಕ ತಂಗುದಾಣಗಳಲ್ಲಿ ಒಂದೇ ಕಡೆಯಲ್ಲಿ ಇಳಿಜಾರು ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಎಲ್ಲಾ ತಂಗುದಾಣಗಳಲ್ಲಿ  ಎರಡೂ ಬದಿಗಳಲ್ಲಿ ಇಳಿಜಾರು ಗಳನ್ನು ರಚಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಲು  ಸ್ಮಾರ್ಟಸಿಟಿಯವರಿಗೆ ತಾವು  ಸೂಚಿಸ ಬೇಕು.                  

  1. ರಾಷ್ಟ್ರೀಯ ರೋಡ್ ಕಾಂಗ್ರೆಸ್ ನ ನಿಯಮ ಗಳಿಗೆ ವಿರುದ್ದವಾಗಿ- ಸರ್ಕಲ್ ಗಳಲ್ಲಿ  ಬಸ್ಸು  ತಂಗುದಾಣ:     ಇಂದಿರಾ ಗಾಂಧಿ ಸರ್ಕಲ್,   ವಿನೋಬನಗರ ಪೋಲಿಸ್ ಚೌಕಿ, ಮತ್ತು  ಸೌಹ್ಯಾರ್ದಿ  ಕಾಲೇಜ್  ಸರ್ಕಲ್ ನಲ್ಲಿ ಎರಡು   ಬಸ್ಸು   ತಂಗುದಾಣ ನಿರ್ಮಾಣ ಮಾಡಿದ್ದು, ಸರ್ಕಲ್ ಗಳಲ್ಲಿ ಬಸ್ಸು ತಂಗುದಾಣಗಳು    ರಾಷ್ಟ್ರೀಯ ರೋಡ್ ಕಾಂಗ್ರೆಸ್ ನಿಯಮ ಗಳಿಗೆ ವಿರುದ್ದ ವಾಗಿದೆ ಮತ್ತು
    ವಾಹನ ಓಡಾಟಕ್ಕೆ ತ್ರೀವ ತೊಂದರೆ ಆಗುತ್ತಿದೆ.  ವಿನೂಭನಗರದ ಇಂದಿರಾಗಾಂಧಿ ಸರ್ಕಲ್ ಮತ್ತು  ಪೋಲೀಸ್ ಚೌಕಿಯಲ್ಲಿ ಬಸ್ಸು ತಂಗುದಾಣಗಳನ್ನು  ನಾವು ಪ್ರಾರಂಬ ಹಂತದಲ್ಲೇ ವಿರೋಧಿಸಿದ್ದೇವು.   ಇದೇ ರೀತಿ  ನವುಲೇ ಕರೆಗಿಂತ ಮೊದಲು ನಿರ್ಮಿಸಿರುವ ಬಸ್ಸು ತಂಗುದಾಣದಲ್ಲಿ,  ಬಸ್ಸು ನಿಲುಗಡೆಯಿಂದ  ವಾಹನ ಓಡಾಟಕ್ಕೆ ತ್ರೀವ ತೊಂದರೆ ಆಗುತ್ತಿದೆ.  ಸ್ಮಾರ್ಟಸಿಟಿಯ ನಿಯಮಗಳ ಪ್ರಕಾರ ಸಂಬಂಧ ಪಟ್ಟವರ ಅನುಮತಿ ಪಡೆದು ಅಭಿವೃದ್ಧಿ ಕಾರ್ಯ  ನೆಡೆಸ ಬೇಕಾಗಿತ್ತು. ಆದರೆ, ತಂಗುದಾಣಗಳ ನಿರ್ಮಾಣಕ್ಕಿಂತ ಮೊದಲು  ಕನಿಷ್ಠ ನಿಮ್ಮ ಇಲಾಖೆಯ ಸಲಹೆಯನ್ನಾದರೂ   ಪಡೆದು ನಿರ್ಮಿಸಿದ್ದರೆ  ನಿಯಮ ಉಲ್ಲಂಘನೆಗೆ ಅವಕಾಶ ಇರುತ್ತಿರಲಿಲ್ಲ.    ಆದುದರಿಂದ ತಮ್ಮಲ್ಲಿ ವಿನಂತಿ ಎನೆಂದರೆ ಎಲ್ಲಾ ನಿಯಮಗಳನ್ನು ಬದಿಗೆ ತೂರಿ ವಾಹನ ಓಡಾಟಕ್ಕೆ ತೂಂದರೆ ಆಗುವ ಎಲ್ಲಾ  ತಂಗುದಾಣಗಳನ್ನು  ತೆರವು ಗೊಳಿಸಲು ಕ್ರಮ ಕೈಗೋಳ್ಳುವಂತೆ ತಿಳಿಸಲಾಗಿದೆ.
                         
  2. ಬಸ್ಸು ಗಳ ಓಡಾಟವೇ ಇಲ್ಲದ ರಸ್ತೆ ಗಳಲ್ಲಿ ಬಸ್ಸು ತಂಗುದಾಣಗಳು- ನಗರದ ರಕ್ಷಣೆಗೆ ಸವಾಲು: ಬಸ್ಸು ತಂಗುದಾಣಗಳಿಗೆ ಭಾರಿ ವೆಚ್ಚ ತಗಲುವುದಿಲ್ಲ ಮತ್ತು ಕೇವಲ 15 ದಿನಗಳಲ್ಲಿ  ನಿರ್ಮಾಣ ಮಾಡ ಬಹುದು. ಹಾಗಾಗಿ  ಬಸ್ಸು ಗಳು ಓಡಾಡದ ರಸ್ತೆ ಗಳಲ್ಲಿ  ಈಗಲೇ ತಂಗುದಾಣ ನಿರ್ಮಾಣ ಮಾಡುವ ಅಗತ್ಯ ವಿರಲಿಲ್ಲ.   ಬಸ್ಸು ಗಳು ಓಡಾಡದ ಜಾಗದಲ್ಲಿ ಬಸ್ಸು ತಂಗುದಾಣ ಮಾಡಿರುವುದು ಕುಡುಕರ,ಕ್ರಿಮಿನಲ್, ಪೋಲಿಗಳ, ಆಂದರ್ ಬಾಹರ್ ಆಡುವವರ  ಕಾರ್ಯ ಕ್ಷೇತ್ರ ಅಥವಾ ವಾಸ ಸ್ಥಾನ ಬಿಟ್ಟು ಬೇರೇನೂ ಅಲ್ಲ.

ಉದಾಹರಣೆಗೆ: ಕುವೆಂಪು ನಗರ ರಸ್ತೆ ಪ್ರಾರಂಭದಲ್ಲಿ, ಕುವೆಂಪು ನಗರದ ರಸ್ತೆ ಯಲ್ಲಿ,  ವಿದ್ಯಾ ಭಾರತಿ ಕಾಲೇಜು ಹತ್ತಿರ ನಿರ್ಮಿಸಿರುವ ತಂಗುದಾಣ, ಕೃಷ್ಣಪ್ಪ ತಂಗುದಾಣ ಆಲುಕೂಳ ಸರ್ಕಲ್,  ಉಷಾ ನರ್ಸಿಂಗ್ ನಿಂದ ರೋಟರ್ರಿ ಬ್ಲಡ್ ಬ್ಯಾಂಕ್ ಕಡೆಗೆ ಬಸ್ಸು ತಂಗುದಾಣ, ಡಿ.ವಿ.ಜಿ. ಸರ್ಕಲ್ ಬಸ್ಸು ತಂಗುದಾಣ ಮತ್ತು ಹಲವು( ಸಂಪೂರ್ಣ ತಂಗುದಾಣಗಳ ಪಟ್ಟಿ ಲಗತ್ತಿಸಿದೇವೆ). ಇವುಗಳಿಗೆಲ್ಲವೂ  ತಮ್ಮ ಇಲಾಖೆಯ ಅಥವಾ ಆರ್.ಟಿ.ಓ.ಇಲಾಖೆಯ ಅಭಿಪ್ರಾಯ ಪಡೆಯದೇ ನಿರ್ಮಿಸಿರುವ ತಂಗುದಾಣಗಳು.  ನಗರದ ರಕ್ಷಣಾ ಹೆಚ್ಚಿನ ಸಾವಾಲುಗಳು.  ಈ ರೀತಿ ನಿರ್ಮಾಣ ಮಾಡಿರುವ ಎಲ್ಲಾ ತಂಗುದಾಣಗಳಿಂದ, ಓಡಾಡಲು ನಾಗರೀಕರಿಗೆ, ಮಕ್ಕಳು,
ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ತೊಂದರೆಗಳು ಆಗದಂತೆ ವ್ಯವಸ್ಥೆ ಕಲ್ಪಸಿ ಬೇಕಾದ ಹೆಚ್ಚಿನ ಜವಾಬ್ದಾರಿ ರಕ್ಷಣಾ ಇಲಾಖೆಗೆ ಓದಗಿ ಬಂದಿದೆ.  ಈ ವಿಷಯವನ್ನು  ಜಿಲ್ಲಾಳಿತದ ಗಮನಕ್ಕೆ  ತಂದು, ಸ್ಮಾರ್ಟಸಿಟಿಯವರಿಂದ ಈ ಎಲ್ಲಾ ತಂಗುದಾಣಗಳಲ್ಲಿ  ಸಿ.ಸಿ.ಕ್ಯಾಮರ ಆಡವಳಿಸಲು ಮತ್ತು ರಕ್ಷಣೆಗೆ ಅಗತ್ಯವಾದ ಇತರೇ ಕ್ರಮಗಳು ತಮ್ಮಿಂದ ಆಗ ಬೇಕಾಗಿದೆ. 

  1. ನಾವು  108 ತಂಗುದಾಣ ಪಟ್ಟಿಯನ್ನು ಈ ಮನವಿಗೆ ಲಗತ್ತಿಸಿದೇವೆ. ತಾವು ದಯವಿಟ್ಟು ಪ್ರತ್ಯೇಕ ತನಿಖಾ ತಂಡ ರಚಿಸಿ  ಅವುಗಳ ನ್ಯೂನತೆಗಳ ಸಮಗ್ರ  ವರದಿ ತಯಾರಿಸಿ ಹಾಗು ನ್ಯೂನತೆಗಳನ್ನು   ಸ್ಮಾರ್ಟಸಿಟಿ ಯೂಜನೆ ಮುಗಿಯುವುದರ  ಒಳಗೆ ಸರಿಪಡಿಸಲು ಕ್ರಮ ಕೈಗೋಳ್ಳಲು ವಿನಂತಿಸಲಾಗಿದೆ‌.

ಮಂಕಿಪಾಕ್ಸ್ ಬಗ್ಗೆ ಜಾಗರೂಕರಾಗಿರಿ

0

ಕಳೆದೆರಡು ವರ್ಷಗಳಿಂದ ಕೋವಿಡ್‌-19 ಜನಜೀವನವನ್ನು ಹೈರಾಣಾಗಿಸಿದೆ. ಪ್ರಕರಣಗಳು ಕಡಿಮೆಯಾಗ್ತಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಹೆಚ್ಚಾಗ್ತಿದೆ. ಈ ಮಧ್ಯೆ ಈ ವರ್ಷದ ಮೇ ತಿಂಗಳಲ್ಲಿ ಏಕಾಏಕಿ ಮಂಕಿಪಾಕ್ಸ್ ಜಗತ್ತನ್ನು ಆವರಿಸಿದೆ. ಪ್ರಪಂಚದಾದ್ಯಂತ, ಸಂಖ್ಯೆಗಳು ಹೆಚ್ಚಾದಂತೆ, ಸಾರ್ವಜನಿಕ ಆತಂಕವೂ ಹೆಚ್ಚಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಆಗಸ್ಟ್ 17 ರಂದು ನೀಡಿದ ವರದಿಯ ಪ್ರಕಾರ, 92 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಲ್ಲಿ 12 ಸಾವುಗಳು ಮತ್ತು 35,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಪ್ರಕರಣದ ಸಾವಿನ ಪ್ರಮಾಣವು ಇತ್ತೀಚೆಗೆ 3-6% ವ್ಯಾಪ್ತಿಯಲ್ಲಿದೆ.

ಅದರಲ್ಲೂ ಆತಂಕ ಪಡುವ ವಿಚಾರವೆಣದರೆ, ಇತ್ತೀಚೆಗೆ, ಮಂಕಿಪಾಕ್ಸ್ ರೋಗನಿರ್ಣಯ ಮಾಡಿದ ವ್ಯಕ್ತಿಗಳಲ್ಲಿ ತೀವ್ರ ಹೃದಯ ಸಮಸ್ಯೆಗಳು ಕಂಡು ಬರುತ್ತಿವೆ.

ಈ ಪ್ರಕರಣ ಮಂಗನ ಕಾಯಿಲೆಯ ತೀವ್ರತೆಯ ಬಗ್ಗೆ ಗಮನ ಸೆಳೆದಿದ್ದು, ಆತಂಕ ಮೂಡಿಸಿದೆ. ಮಂಕಿಪಾಕ್ಸ್‌ನ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಜ್ವರ, ದೈಹಿಕ ನೋವು, ದಣಿವು ಮತ್ತು ಸಾಂದರ್ಭಿಕವಾಗಿ ಊದಿಕೊಂಡ ದುಗ್ಧರಸ ಗ್ರಂಥಿಗಳನ್ನು ಒಳಗೊಂಡಿರುತ್ತದೆ. ಈ ಸ್ಥಿತಿಯು ಚರ್ಮದ ಮೇಲೆ ಕೆಂಪು ಮೊಡವೆಗಳನ್ನು ಕೈಗಳು, ಪಾದಗಳು, ಮುಖ, ತುಟಿಗಳು ಅಥವಾ ಜನನಾಂಗಗಳ ಮೇಲೆ ರೂಪಿಸಲು ಕಾರಣವಾಗಬಹುದು. ಸೋಂಕಿತ ಪ್ರಾಣಿ, ವ್ಯಕ್ತಿ ಅಥವಾ ಕಲುಷಿತ ವಸ್ತುವಿನ ನೇರ ಸಂಪರ್ಕದ ಮೂಲಕ ಮಂಕಿಪಾಕ್ಸ್ ಸೋಂಕಿಗೆ ಒಳಗಾಗಬಹುದು, ಇದು ಜನರಿಗೆ ಮಂಕಿಪಾಕ್ಸ್ ಹರಡಲು ಕಾರಣವಾಗಬಹುದು.