Monday, March 23, 2026
Monday, March 23, 2026
Home Blog Page 1435

ಸಿಟಾಗ್ಲಿಫ್ಟಿನ್ ಮಧುಮೇಹಕ್ಕೆ ಹೊಸ ಔಷಧ ಬಂದಿದೆ

0

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇಂದು ಸಾಮಾನ್ಯವಾಗಿದೆ. ಒತ್ತಡದ ಜೀವನ, ಆಹಾರ ಅಭ್ಯಾಸ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಒಮ್ಮೆ ಮಧುಮೇಹಕ್ಕೆ ತುತ್ತಾದರೆ ಜೀವನ ಪರ್ಯಂತ ಮಾತ್ರೆ ಸೇವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಮಧುಮೇಹ ರೋಗಿಗಳು ಸೇವಿಸುವ ‘ಸಿಟಾಗ್ಲಿಫ್ಟಿನ್’ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕೇವಲ ಅರವತ್ತು ರೂಪಾಯಿಗಳಿಗೆ 10 ಮಾತ್ರೆಗಳ ಪ್ಯಾಕ್ ನಲ್ಲಿ ದೊರೆಯಲಿದೆ.
ಭಾರತೀಯ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಸಂಸ್ಥೆ ಈ ಔಷಧವನ್ನು ಬಿಡುಗಡೆ ಮಾಡಿದ್ದು, 50 ಎಂಜಿ ಮತ್ತು 100 ಎಂಜಿ ಡೋಸ್ ಗಳಲ್ಲಿ ಇದು ದೊರೆಯಲಿದೆ.

ಸಿಟಾಗ್ಲಿಫ್ಟಿನ್ ಫಾಸ್ಫೇಟ್ 50 ಎಂಜಿ ಮಾತ್ರೆಯ ಹತ್ತು ಮಾತ್ರೆಗಳಿಗೆ 60 ರೂಪಾಯಿಗಳಾಗಿದ್ದರೆ, 100 ಎಂಜಿ 10 ಮಾತ್ರೆಗಳಿಗೆ ನೂರು ರೂಪಾಯಿಗಳಾಗಿದೆ. ಇವುಗಳು ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.

ಅಕ್ಟೊಬರ್ ತಿಂಗಳ ಬ್ಯಾಂಕ್ ರಜಾ ದಿನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ

0

ಹಬ್ಬ ಹರಿದಿನಗಳಲ್ಲಿ ಬ್ಯಾಂಕ್‌ಗಳು ಸತತವಾಗಿ ಹಲವಾರು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಮುಂದಿನ ಅಕ್ಟೋಬರ್ ತಿಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ದಿನ ಬ್ಯಾಂಕ್​ ಕ್ಲೋಸ್​ ಆಗಿರಲಿದೆ. ತುರ್ತು ಕೆಲಸವನ್ನು ಈಗಲೇ ಮಾಡಿ ಇಲ್ಲದಿದ್ದರೆ, ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬಹುದು.

ಅಕ್ಟೋಬರ್ 2, 2022 ರಂದು ಮಹಾತ್ಮಾ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಮಹಾಸಪ್ತಮಿ, ಭಾನುವಾರವೂ ಆಗಿರುತ್ತದೆ. ಹಾಗಾಗಿ ಬ್ಯಾಂಕ್ ಕೂಡ ಬಂದ್ ಆಗಲಿದೆ.

ಮಹಾಷ್ಟಮಿಯ ಕಾರಣ ಅಕ್ಟೋಬರ್ 3, 2022 ರಂದು ಸೋಮವಾರ ಬ್ಯಾಂಕ್ ಮುಚ್ಚಿರುತ್ತದೆ.

ಮಹಾನವಮಿಯ ಕಾರಣ ಅಕ್ಟೋಬರ್ 4, 2022 ರಂದು ಮಂಗಳವಾರ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಅಕ್ಟೋಬರ್ 5, 2022 ರಂದು ವಿಜಯ ದಶಮಿಯಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಭಾನುವಾರದಿಂದ ಬುಧವಾರದವರೆಗೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಮುಚ್ಚಿರುತ್ತದೆ. ಪೂಜೆಯ ಮೊದಲು ಎಲ್ಲಾ ಕೆಲಸಗಳನ್ನು ಮಾಡಿ ಇಲ್ಲದಿದ್ದರೆ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅಕ್ಟೋಬರ್ 8, 2022, ತಿಂಗಳ ಎರಡನೇ ಶನಿವಾರದಂದು ಬ್ಯಾಂಕ್ ಅನ್ನು ಮುಚ್ಚಲಾಗುತ್ತದೆ.

9ನೇ ಅಕ್ಟೋಬರ್, 2022, ಭಾನುವಾರ, ಕೋಜಗರಿ ಲಕ್ಷ್ಮಿ ಪೂಜೆಯ ಮೇಲೆ, ಬ್ಯಾಂಕ್‌ಗಳು ಸಹ ಮುಚ್ಚಲ್ಪಡುತ್ತವೆ.

16ನೇ ಅಕ್ಟೋಬರ್, 2022 ರಂದು, ಭಾನುವಾರದಂದು, ಬ್ಯಾಂಕ್ ಮುಚ್ಚಿರುತ್ತದೆ.

ಅಕ್ಟೋಬರ್ 22, 2022, ತಿಂಗಳ ನಾಲ್ಕನೇ ಶನಿವಾರ, ಈ ದಿನವೂ ಬ್ಯಾಂಕ್ ಮುಚ್ಚಿರುತ್ತದೆ .

23ನೇ ಅಕ್ಟೋಬರ್, 2022, ಭಾನುವಾರ, ಈ ಕಾರಣಕ್ಕಾಗಿ ಬ್ಯಾಂಕ್ ಮುಚ್ಚಿರುತ್ತದ.

ಕಾಳಿ ಪೂಜೆಯ ಸಂದರ್ಭದಲ್ಲಿ ಅಕ್ಟೋಬರ್ 24, 2022 ರಂದು ಸೋಮವಾರ ಬ್ಯಾಂಕ್ ಮುಚ್ಚಿರುತ್ತದೆ.

ಇದೇ ಕಾರಣಕ್ಕಾಗಿ ಬ್ಯಾಂಕ್ ಅನ್ನು ಅಕ್ಟೋಬರ್ 25, 2022 ರಂದು ಮುಚ್ಚಿರುತ್ತದೆ.

30ನೇ ಅಕ್ಟೋಬರ್, 2022 ರಂದು ಭಾನುವಾರ ಬ್ಯಾಂಕ್ ಮುಚ್ಚಿರುತ್ತದೆ.

ಬೆಂಗಳೂರಿನಲ್ಲಿ ಶೆಲ್ ಚಾರ್ಜಿಂಗ್ ಕೇಂದ್ರ ಗಳ ಆರಂಭ

0

ಶೆಲ್‌ ಎನರ್ಜಿ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದೆ. ಈ ಮೂಲಕ ಭಾರತದ ವಿದ್ಯುತ್ ಚಾಲಿತ ವಾಹನ (ಇ.ವಿ.) ಚಾರ್ಜಿಂಗ್ ಮಾರುಕಟ್ಟೆ ಪ್ರವೇಶಿಸಿದೆ.

2030ರೊಳಗೆ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಗುರಿಯನ್ನು ಕಂಪನಿಯು ಹೊಂದಿದೆ.
‘ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ-ಶೂನ್ಯಕ್ಕೆ ತಗ್ಗಿಸುವ ನಮ್ಮ ಉದ್ದೇಶದ ಭಾಗವಾಗಿ ಈ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ಅದರಲ್ಲೂ, ದ್ವಿಚಕ್ರ ವಾಹನಗಳಿಗೆ ನಾವು ಚಾರ್ಜಿಂಗ್‌ ಸೌಲಭ್ಯವನ್ನು ಮೊದಲಿಗೆ ಒದಗಿಸುತ್ತಿರುವುದು ಭಾರತದಲ್ಲಿ’ ಎಂದು ಕಂಪನಿಯ ಏಷ್ಯಾ ವಿಭಾಗದ ಹಿರಿಯ ಉಪಾಧ್ಯಕ್ಷ ಆಮ್ರ್‌ ಆದೆಲ್ ಅವರು ತಿಳಿಸಿದ್ದಾರೆ.

ಶೆಲ್‌ ಪೆಟ್ರೋಲ್‌ ಬಂಕ್, ಜನರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳು, ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ಗಾಗಿಯೇ ಸ್ಥಾಪಿಸಲಾಗಿರುವ ಹಬ್‌ಗಳು, ಮನೆಗಳು, ಹೋಟೆಲ್‌ ಅಥವಾ ರೆಸ್ಟಾರೆಂಟ್‌ನಂತಹ ಸ್ಥಳಗಳಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿರುವ ಚಾರ್ಜಿಂಗ್ ಸೌಲಭ್ಯವನ್ನು ಕಂಪನಿಯು ಒದಗಿಸಲಿದೆ.

ಕಂಪನಿಯು ಎಂಟು ರಾಜ್ಯಗಳಲ್ಲಿ ಈಗ ಒಟ್ಟು 300ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳನ್ನು ಹೊಂದಿದೆ. ಈ ರಾಜ್ಯಗಳ ಮಾರುಕಟ್ಟೆಗಳು ಮಾತ್ರವೇ ಅಲ್ಲದೆ ನಾವು ಇ.ವಿ. ಚಾರ್ಜಿಂಗ್ ಕೇಂದ್ರಗಳ ಮೂಲಕ ಇತರ ರಾಜ್ಯಗಳ ಮಾರುಕಟ್ಟೆಗಳನ್ನೂ ಪ್ರವೇಶಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಚಾರ್ಜಿಂಗ್ ಕೇಂದ್ರಗಳಲ್ಲಿ ಲಭ್ಯವಾಗುವ ವಿದ್ಯುತ್‌ ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆದಿದ್ದಾಗಿರುತ್ತದೆ ಎಂದು ಕಂಪನಿಯ ಭಾರತದ ನಿರ್ದೇಶಕ ಸಂಜಯ್ ವರ್ಕೆ ಹೇಳಿದರು.

ಲಂಡನ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

0

ಸೆಪ್ಟೆಂಬರ್ 19 ರಂದು ನಡೆಯಲಿರುವ ಬ್ರಿಟನ್ ರಾಣಿ ಎಲಿಜಬೆತ್-II ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಲಂಡನ್ ಗೆ ಆಗಮಿಸಿದ್ದಾರೆ.

ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‍ಗೆ ತೆರಳಿದ್ದ ದ್ರೌಪದಿ ಮುರ್ಮು, ಭಾರತದ ಪರವಾಗಿ ರಾಜಮನೆತನಕ್ಕೆ ಸಂತಾಪ ಸೂಚಿಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದ್ರೌಪದಿ ಮುರ್ಮು ಲಂಡನ್‍ನಲ್ಲಿ ರಾಣಿ ಎಲಿಜಬೆತ್-II ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್ ನ ಬಾಲ್ಮೋರಲ್ ಕ್ಯಾಸಲ್‌ ನಲ್ಲಿರುವ ನಿವಾಸದಲ್ಲಿ 96 ವರ್ಷ ವರ್ಷದ ರಾಣಿ ಎಲಿಜಬೆತ್‌ ನಿಧನರಾಗಿದ್ದರು.

ನಾಳೆ (ಸೆಪ್ಟೆಂಬರ್ 19) ಬೆಳಿಗ್ಗೆ ವೆಸ್ಟ್‌ಮಿನ್‌ಸ್ಟರ್‌ ಅಬ್ಬೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಉಡುಪಿಯಲ್ಲಿ ಕ್ಯಾನ್ಸರ್ ಡೇ ಕೇರ್ ಸೆಂಟರ್ ಆರಂಭ

0

ಮಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿ ಜಪ್ರಿಯಗೊಂಡಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿಯ ಕ್ಯಾನ್ಸರ್ ಡೇ ಕೇರ್ ಸೆಂಟರ್, ಉಡುಪಿಯಲ್ಲಿ ಕಾರ್ಯಾರಂಭ ಮಾಡಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಸುರೇಶ್‌ ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಬ್ಯುಸಿನೆಸ್ ಬೇ ಸೆಂಟರ್ ನಲ್ಲಿ ಎಂಐಒ ಕ್ಯಾನ್ಸರ್ ಡೇ ಕೇರ್ ಸೆಂಟರ್ ಕಾರ್ಯಾಚರಿಸುತ್ತಿದೆ.

ಕೇವಲ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮೀಸಲಾದ ಈ ಆಸ್ಪತ್ರೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಹಾವೆರಿ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲಿದೆ. ಎಂಐಒ ಮಂಗಳೂರು ಕೇಂದ್ರದ ಎಲ್ಲಾ ಸೇವೆಗಳು ಇಲ್ಲೂ ಲಭ್ಯವಿರಲಿದೆ. ಅಲ್ಲಿನ ಹಿರಿಯ ಕ್ಯಾನ್ಸರ್ ತಜ್ಞವೈದ್ಯರು ರೋಗಿಗಳ ಸಂದರ್ಶನಕ್ಕೆ ಪ್ರತಿದಿನ ಇಲ್ಲೂ ಲಭ್ಯರಿರುವರು. ಅಲ್ಲದೇ ರೋಗಿಯ ಕುಟುಂಬದವರು ಇಲ್ಲಿಯೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬಹುದು ಎಂದು ತಿಳಿಸಿರುತ್ತಾರೆ.

20 ಹಾಸಿಗೆಯುಳ್ಳ ಸುಸಜ್ಜಿತ ಡೇ ಕೇರ್ ಸೆಂಟರ್ ಇದಾಗಿದ್ದು, ಇಲ್ಲಿ ಸುಸಜ್ಜಿತ ಪ್ರಯೋಗಾಲಯ, ನುರಿತ ಶುಶ್ರೂಷಕರು, ಸಿಬ್ಬಂದಿ ವರ್ಗವಿದ್ದು, ಅಕ್ಕರೆಯ ಆರೈಕೆಯೊಂದಿಗೆ ಆಧುನಿಕ ಚಿಕಿತ್ಸಾ ಲಭ್ಯವಿದೆ. ಎಂಐಒ ಉಡುಪಿ ಡೇ ಕೇರ್ ನಲ್ಲಿ ಪ್ರಮುಖ ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಪಿ, ಇಮ್ಯೂನೋಥೆರಪಿ, ಟಾರ್ಗೆಟೆಡ್ ಥೆರಪಿ ಸೇರಿದಂತೆ ಶೇ.85ರಷ್ಟು ಚಿಕಿತ್ಸೆಗಳನ್ನು ಒಳರೋಗಿಯಾಗಿ ದಾಖಲಾಗದೇ ಡೇ ಕೇರ್ ನಲ್ಲಿ ಪಡೆಯಬಹುದು.
ಬಡ ಕುಟುಂಬದ ಕ್ಯಾನ್ಸರ್ ರೋಗಿಗಳು ಇಲ್ಲೂ ಸರಕಾರದ ಯೋಜನೆಗಳಡಿ ಉಚಿತ ಅಥವಾ ಅತೀ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು. ಮಂಗಳೂರು ಕೇಂದ್ರದಲ್ಲಿ ಶೇ.70ರಷ್ಟು ಬಿಪಿಎಲ್ ಕುಟುಂಬದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಎಲ್ಲಾ ಬಗೆಯ ಕಾರ್ಪೊರೇಟ್ ಹಾಗೂ ಖಾಸಗಿ ಆರೋಗ್ಯ ವಿಮೆಗಳಡಿ ಚಿಕಿತ್ಸೆ ಪಡೆಯುವ ಅನುಕೂಲ ಕಲ್ಪಿಸಲಾಗಿದೆ. ಹೀಗಾಗಿ ಸಾಮಾನ್ಯ ಜನರೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದು ಡಾ.ಸುರೇಶ್ ತಿಳಿಸಿದ್ದಾರೆ.

ಸಂಸ್ಕೃತ ದಲ್ಲಿ ಎಲ್ಲಾ ಜ್ಞಾನವು ಅಡಕ- ತ್ಯಾಗೀಶ್ವರಾನಂದ

0

ಸಂಸ್ಕೃತದಲ್ಲಿ ಏನಿದೆ ಎನ್ನುವುದಕ್ಕಿಂತ ಸಂಸ್ಕೃತದಲ್ಲಿ ಏನಿಲ್ಲ ಎಂದು ತಿಳಿಯಬೇಕು, ಸಂಸ್ಕೃತ ದೇವಭಾಷೆ, ಇದರಲ್ಲಿ ಎಲ್ಲಾ ಜ್ಞಾನವು ಅಡಕವಾಗಿದೆ ಎಂದು ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ್ ತಿಳಿಸಿದರು.

ಅವರು ಇಂದು ದಾವಣಗೆರೆ ಟಿ.ಸಿ.ಲೇ ಔಟ್ ನಲ್ಲಿರುವ ಅಕ್ಷರ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗದ ವಾಸವಿ ಅಕಾಡೆಮಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರು, ಸಂಸ್ಕೃತ ಭಾರತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿರುವ ಸಂಸ್ಕೃತ ಪಠ್ಯಕ್ರಮದ ಸಂಸ್ಕೃತ ಕಲಿಕಾ ಕೇಂದ್ರದ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತ ಸಂಸ್ಕೃತ ಕೇವಲ ಅಂಕಗಳಿಸುವ ಸಾಧನವಲ್ಲ ಭಗವಂತನನ್ನು ಅರಿಯಲು ಸಾಧನವಾಗುತ್ತದೆ ಏಕೆಂದರೆ ನಮ್ಮ ದೇಶದ ಪ್ರಮುಖ ಧರ್ಮ ಗ್ರಂಥಗಳೆಲ್ಲವೂ ಸಂಸ್ಕೃತದಲ್ಲಿದೆ ಇದನ್ನು ಮೂಲದಲ್ಲಿಯೇ ಓದಿ ಭಗವಂತನ ಹಾಗೂ ಅವನ ಉಪದೇಶಗಳನ್ನು ಅರಿಯಲು ಸಂಸ್ಕೃತ ಕಲಿಕೆ ಅನಿವಾರ್ಯ ಎಂದು ಹೇಳಿದರು.

ಮನುಷ್ಯನಾದವನು ದೇವನಾಗಲು ಸಾದ್ಯವೆಂದಾದರೆ ಅದು ಸಂಸ್ಕೃತ ಅಧ್ಯಯನದಿಂದ ಮಾತ್ರವೆಂದು ತಿಳಿಸಿದರು. ನಮ್ಮ ಜೀವನ ಪವಿತ್ರ ಮಾಡಿಕೊಳ್ಳಲು, ನಮ್ಮಲ್ಲಿರುವ ಅಲ್ಪಭಾವನೆ ದೂರವಿಡುವಲ್ಲಿ ಸಂಸ್ಕೃತ ಶ್ಲೋಕ, ಸುಭಾಷಿತ, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಸಾಹಿತ್ಯಗಳು ನಮಗೆ ತುಂಬಾ ಸಹಕಾರಿಯಾಗಲಿದೆ ಎಂದು ಸಂಸ್ಕೃತದ ಮಹತ್ವವನ್ನು ವಿಸ್ತಾರವಾಗಿ ತಿಳಿಸಿದರು.

ವಿದೇಶಿಯರು ತಮ್ಮ ಸಂಶೋದನೆಗೆ ಮುನ್ನ ಸಂಸ್ಕೃತವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು, ಹಾಗಾಗಿ ಅವರು ತಮ್ಮ ಸಂಶೋಧನೆಯಲ್ಲಿ ಪ್ರಗತಿಯನ್ನು ಕಾಣುತ್ತಿದ್ದರು, ನಮ್ಮ ದೇಶದಲ್ಲಿ ಸಂಸ್ಕೃತ ಕಲಿಕೆಯಾಗಬೇಕೆಂಬ ಕೂಗು ಎಲ್ಲಡೇ ಕೇಳಿಬರುತ್ತಿದೆ, ಕೇವಲ ಕೂಗುವುದರಿಂದ ಅದು ಸಾದ್ಯವಿಲ್ಲ ಪ್ರತಿಯೊಬ್ಬರು ಸಂಸ್ಕೃತ ಅಧ್ಯಯನ ಮತ್ತು ಅಭ್ಯಾಸ ಮಾಡುವುದರಿಂದ ಸಾದ್ಯವೆಂದರು.

ಸಂಸ್ಕೃತ ಕಲಿಕೆಯಿಂದ ನಮ್ಮಲ್ಲಿರುವ ಸುಪ್ತ ಚೈತನ್ಯ ಜಾಗ್ರತಗೊಳ್ಳುವುದು, ಸಂಸ್ಕೃತ ಕೇವಲ ಭಾಷೆಯಲ್ಲ ಇದೊಂದು ದೊಡ್ಡ ಪ್ರಪಂಚ ಇದರಲ್ಲಿ, ಜ್ಞಾನ, ವಿಜ್ಞಾನ, ಖಗೋಳ, ಜೀವಶಾಸ್ತ್ರ, ಗಣಿತ, ಆಯುರ್ವೇದ, ಯೋಗ ಹೀಗೆ ಎಲ್ಲಾ ವಿಷಯಗಳನ್ನು ಒಳಗೊಂಡಿದೆ ಇಂತಹ ಜ್ಞಾನ ಭಂಡಾರವನ್ನು ಈ ಶಾಲೆಯವರು ಈ ವರ್ಷದಿಂದ ಶಿಶುವಿಹಾರದಿಂದ ಏಳನೇ ತರಗತಿಯ ಮಕ್ಕಳಿಗೆ ಕಲಿಸುವ ಯೋಜನೆ ನಿಜಕ್ಕೂ ಶ್ಲಾಘನೀಯ, ಇದನ್ನು ಇಲ್ಲಿ ಕಲಿಯುತ್ತಿರುವ ಮಕ್ಕಳು ಪುಣ್ಯವಂತರು, ಇಂತಹ ಯೋಜನೆ ಜಾರಿಗೆ ತಂದ ಶಾಲೆಯ ಆಡಳಿತ ವರ್ಗಕ್ಕೂ ಸಂಸ್ಕೃತ ಭಾರತಿ, ವಾಸವಿ ಅಕಾಡೆಮಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು.

ಶಾಲಾಸು ಯೋಜನೆಯ ರಾಜ್ಯ ಸಂಯೋಜಕರಾದ ಶಿವಮೊಗ್ಗದ ಅ.ನಾ.ವಿಜಯೇಂದ್ರ ರಾವ್ ರವರು ಪ್ರಾಸ್ಥಾವಿಕವಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲೆಯ ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷರಾದ ಎನ್.ವಿ.ಶಂಕರನಾರಾಯಣ ವಹಿಸಿದ್ದರು.

ಕಾಯಕ್ರಮದಲ್ಲಿ ಶ್ರೀ ಪವಾಡ ಬಸವೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷರು ಹಾಗೂ ಅಕ್ಷರ ಶಾಲೆಯ ಸ್ಥಾಪಕರು ಆದ ಟಿ.ಎಸ್.ಮಲ್ಲಿಕಾರ್ಜುನ, ಸಾಮಾಜಿಕ ಹೋರಾಟಗಾರರು ಮತ್ತು ಯುವ ಬ್ರಿಗೇಡ್ ಪ್ರಮುಖರು ಆದ ಗಜೇಂದ್ರ, ಶಾಲಾ ಕಾರ್ಯದರ್ಶಿ ಕವಿತ, ಮುಖ್ಯ ಅತಿಥಿಗಳಾಗಿ ದಾವಣಗೆರೆ ಬಕ್ಕೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವಿನಯಾನಂದ ಸ್ವಾಮಿ, ಶಿವಮೊಗ್ಗದ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಎಮ್.ವಿ.ಪಿ.ಆರಾದ್ಯ ಉಪಸ್ಥಿತರಿದ್ದರು.

ಶಿಕ್ಷಕಿ ಸುಮ ಸ್ವಾಗತಿಸಿದರು ಶಿಕ್ಷಕಿ ಪ್ರಿಯ ವಂದಿಸಿದರು. ಶಿಕ್ಷಕಿ ಶ್ವೇತ ಕಾರ್ಯಕ್ರಮ ನಿರೂಪಿಸಿದರು.

ಅ.ನಾ.ವಿಜಯೇಂದ್ರ ರಾವ್, ಶಿವಮೊಗ್ಗ ೯೪೪೮೭೯೦೧೨೭/೧೬-೦೯-೨೦೨೨

ಐಟಿಐ ಇನ್ನುಮುಂದೆ ಪಿಯುಸಿ ಗೆ ತತ್ಸಮಾನ ಪರಿಗಣನೆ

ಯುವಜನರಿಗೆ ಗುಣಮಟ್ಟದ ಶಿಕ್ಣಣ ಮತ್ತು ಕೌಶಲಗಳನ್ನು ಕಲಿಸಿದರೆ ಮತ್ತು ಸದೃಢ ಹಾಗೂ ಸ್ವಾವಲಂಬಿ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ. ಇದಕ್ಕಾಗಿ ಬಾಕಿ ಉಳಿದಿರುವ 120 ಸರಕಾರಿ ಐಟಿಐಗಳನ್ನು ಉನ್ನತೀಕರಿಸಲಾಗುವುದು ಮತ್ತು ಈ ವರ್ಷ ನೂತನವಾಗಿ 30 ಐಟಿಐಗಳನ್ನು ಸ್ಥಾಪಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ.

ಪೀಣ್ಯದಲ್ಲಿರುವ ಸರಕಾರಿ ಐಟಿಐನಲ್ಲಿ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಪ್ರಪ್ರಥಮ ಐಟಿಐ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು 2021-22ರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು.

ಸರಕಾರವು ಐಟಿಐ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಾಗುವುದು. ಜತೆಗೆ, ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಇದರ ಭಾಗವಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಟಾಟಾ ಸಮೂಹದ ನೆರವಿನಲ್ಲಿ ಈಗಾಗಲೇ 150 ಸರಕಾರಿ ಐಟಿಐಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಕೋರ್ಸುಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ 4,500 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ನುಡಿದರು.

ಜಪಾನ್, ಚೀನಾ ತರಹದ ದೇಶಗಳು ಉತ್ಪಾದನಾ ವಲಯದಲ್ಲಿ ಸಾಕಷ್ಟು ಸಾಧಿಸಿವೆ. ಭಾರತ ಮತ್ತು ಕರ್ನಾಟಕ ಕೂಡ ಸೇವಾ ವಲಯದ ಜತೆಗೆ ಉತ್ಪಾದನಾ ರಂಗದಲ್ಲಿ ಮುಂಚೂಣಿಗೆ ಬರಬೇಕು. ಇದರಲ್ಲಿ ಐಟಿಐ ಪದವೀಧರರ ಪಾತ್ರವು ನಿರ್ಣಾಯಕವಾಗಿದೆ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಕೆ.ಜ್ಯೋತಿ, ಐಎಸ್ಡಿಎಸ್ ಪ್ರಾಂತೀಯ ನಿರ್ದೇಶಕ ಬಿ ಎನ್ ಶ್ರೀಧರ್ ಉಪಸ್ಥಿತರಿದ್ದರು.

ಕೆಪಿಎಸ್ ಸಿ ಯಿಂದ ಸಹಾಯಕ ನಿರ್ದೇಶರ ಹುದ್ದೆಗೆ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 16 ಸಹಾಯಕ ನಿರ್ದೇಶಕರ ಹುದ್ದೆಗಳ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಗುರುವಾರದಿಂದ ಅರ್ಜಿಗಳ ಹರಿವು ಆರಂಭವಾಗಿದೆ. ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಉಳಿದಿರುವ ಗ್ರೂಪ್ ಬಿ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ಆಕಾಂಕ್ಷಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 16 ಸಹಾಯಕ ನಿರ್ದೇಶಕರ ಹುದ್ದೆಗಳ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಗುರುವಾರದಿಂದ ಅರ್ಜಿಗಳ ಹರಿವು ಆರಂಭವಾಗಿದೆ. ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಉಳಿದಿರುವ ಗ್ರೂಪ್ ಬಿ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ಆಕಾಂಕ್ಷಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಅರ್ಜಿ ಸಲ್ಲಿಸಲು ಅರ್ಹರಾಗಲು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಗಣಿತ, ಶುದ್ಧ ಗಣಿತ, ಅಂಕಿಅಂಶ, ಅರ್ಥಶಾಸ್ತ್ರ ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ಅಭ್ಯರ್ಥಿಗಳ ಅರ್ಹತೆ

  1. ಅಭ್ಯರ್ಥಿಗಳು 18 ರಿಂದ 35 ವರ್ಷಗಳ ವಯೋಮಿತಿಯೊಳಗಿರಬೇಕು.
  2. 2A, 2B, 3A ಮತ್ತು 3B ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ ಮತ್ತು ಅಂಗವಿಕಲ ವಿಧವೆಯರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

kpsc.kar.nic.in ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳಿಗೆ ತಲಾ 35 ರೂ. ಶುಲ್ಕವನ್ನು ಪಾವತಿಸಬೇಕು. ಆದರೆ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ, 2A, 2B, 3A ಮತ್ತು 3B ವರ್ಗಗಳ ಅಭ್ಯರ್ಥಿಗಳು 300 ರೂ. ಮತ್ತು ಮಾಜಿ ಸೈನ್ಯ/ಸಶಸ್ತ್ರ ಪಡೆಗಳಿಗೆ 50 ರೂ. ಶುಲ್ಕವನ್ನು ಪಾವತಿಸಬೇಕು.

PJ, PP, ವರ್ಗ 1 ಮತ್ತು ಅಂಗವಿಕಲ ವರ್ಗಗಳಿಗೆ ಸೇರಿದ ಅರ್ಜಿದಾರರಿಗೆ ಅರ್ಜಿ ಶುಲ್ಕ ರಿಯಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆ ಅಕ್ಟೋಬರ್ 15 ರಂದು ಮುಕ್ತಾಯಗೊಳ್ಳುತ್ತವೆ. ಅಭ್ಯರ್ಥಿಯು ಎಲ್ಲಾ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿದ ನಂತರ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ, ಆಯ್ಕೆ ಪ್ರಕ್ರಿಯೆಯ ಮುಂದಿನ ಹಂತಕ್ಕಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಲಾಗುತ್ತದೆ.

ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಇತರ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ಇತ್ತೀಚಿನ ಛಾಯಾಚಿತ್ರದೊಂದಿಗೆ ವಯಸ್ಸು, ನಿವಾಸ, ವಿದ್ಯಾರ್ಹತೆ ಇತ್ಯಾದಿಗಳ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಈ ಹುದ್ದೆಯ ವೇತನ ಶ್ರೇಣಿಯು ತಿಂಗಳಿಗೆ ₹ 43,100 ರಿಂದ ₹ 83,900 ರ ನಡುವೆ ಇರುತ್ತದೆ.

ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ಕರೆ

0

2021-22 ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಹಾಗೂ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ/ಪದವಿ/ಸ್ನಾತಕೋತ್ತರ ಪದವಿ/ಕೃಷಿ, ತಾಂತ್ರಿಕ, ಪಶುವೈದ್ಯ, ವೈದ್ಯಕೀಯ ಕೋರ್ಸುಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಗಳಿಸಿ ಪ್ರಥಯ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಬಹುಮಾನ ಹಣ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ವೆಬ್‍ಸೈಟ್ www.sw.kar.nic.in ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾಲೇಜು ಪ್ರಾಂಶುಪಾಲರಿಂದ ಅರ್ಜಿ ಹಾಗೂ ದಾಖಲೆಗಳ ಜೆರಾಕ್ಸ್ ಪ್ರತಿಗಳಿಗೆ ದೃಢೀಕರಣ ಪಡೆದು ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಭದ್ರಾವತಿ ಇವರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-1)ಇವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಭದ್ರಾವತಿ, ದೂ.ಸಂ: 08282-263761 ನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

ಬಿಡುಗಡೆಯಾದ ಕೈದಿಗಳು ಸ್ವಾವಲಂಬಿಯಾಗಲು ಅಣಬೆ ಕೃಷಿ ಸಹಾಯಕ

0

ಶಿವಮೊಗ್ಗ ಅಣಬೆ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ಈ ತರಹದ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಯಾವುದೋ ಕಾರಣಾಂತರಗಳಿಂದ ಬಂಧಿಗಳಾಗಿರುವವರು ಇಲ್ಲಿಂದ ಹೊರಗೆ ಹೋದ ಮೇಲೆ ಸ್ವಾವಲಂಬಿ ಜೀವನ ಮಾಡಿ ಉತ್ತಮ ಸನ್ನಡತೆಯಿಂದ ಮುಂದುವರೆಯಬೇಕೆಂದು ಜಿಲ್ಲಾ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ.ಅನಿತಾ ರವರು ಖೈದಿಗಳಿಗೆ ಕರೆ ನೀಡಿದರು.

ಶಿವಮೊಗ್ಗ ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವಿ ಶಾಸ್ತ್ರ ವಿಭಾಗ ಹಾಗೂ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಧುನಿಕ ಅಣಬೆ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ತಂತ್ರಜ್ಞಾನ ಕುರಿತಾದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯುತ್ತಮ ಪೋಷಕಾಂಶಯುಕ್ತ ಹಾಗೂ ಬಹಳ ಬೇಡಿಕೆ ಇರುವ ಅಣಬೆ ಕೃಷಿ, ಸಾವಯವ ಕೃಷಿಗೆ ಒತ್ತು ನೀಡುವ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ಮಾಡಿ ಉತ್ತಮ ದುಡಿಮೆಯನ್ನು ಕಂಡುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರಾಗೃಹದಲ್ಲಿಯೇ ತರಬೇತಿ ನೀಡುವುದಲ್ಲದೆ ಅಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಸಹಕಾರಿಯಾಗಲು ಬಯಸುತ್ತೇನೆ ಎಂದು ಅವರು ಹೇಳಿದರು.

ಡಾ.ನಂದೀಶ್, ಡಾ.ಸಂತ್ತೋಷ್ ಹಾಗೂ ಡಾ.ಸೌಮ್ಯ ರವರುಗಳು ಕ್ರಮವಾಗಿ ಅಣಬೆ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಮತ್ತು ಸಸ್ಯಾಭಿವೃದ್ದಿ ತಂತ್ರಜ್ಞಾನ ಕುರಿತಾದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯ ನಿರ್ದೇಶಕರಾದ ಡಾ. ಕೋಟೆ ಲೋಕೇಶ್ವರ್, ಕಾರಾಗೃಹದ ಜೈಲರ್ ಮಹೇಶ್, ಸಹಾಯಕ ಅಧೀಕ್ಷಕರಾದ ಶಿವಾನಂದಶಿವಪ್ಪ ರವರುಗಳು ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರಾಗೃಹದ ಶಿಕ್ಷಕ ಗೋಪಾಲಕೃಷ್ಣ ನಿರೂಪಿಸಿ ವಂದಿಸಿದರು.