Monday, March 23, 2026
Monday, March 23, 2026
Home Blog Page 1434

ಹುಬ್ಬಳ್ಳಿ ಹುಡುಗಿ ವರ್ಶಿಣಿ ಮಿಸ್ ಊರ್ವಶಿ 22

0

ರಾಷ್ಟ್ರೀಯ ಮಟ್ಟದ ಮಿಸ್ ಊರ್ವಶಿ 2022ರ ಕಿರೀಟವನ್ನು ವಾಣಿಜ್ಯನಗರಿ ಹುಬ್ಬಳ್ಳಿಯ ವರ್ಶಿಣಿ ಎಂಬ ಯುವತಿ ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾಳೆ.

ಹುಬ್ಬಳ್ಳಿಯ ವರ್ಶಿನಿ ಎಂಬ ಯುವತಿ ಸೆಪ್ಟೆಂಬರ್‌ 11ರಂದು ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯ ಮಿಸ್ ಊವರ್ಶಿ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾಳೆ.

ಹುಬ್ಬಳ್ಳಿಯ ವರ್ಶಿಣಿ ಮಿಸ್ ಊರ್ವಶಿ 2022 ಕಿರೀಟವನ್ನು ಪಡೆದಿದೆ. ಜೈಪುರದ ರಾಜಬಿ ಮೊದಲ ರನ್ನರ್ ಅಪ್ ಹಾಗೂ ಸಿಯಾ ರೈಟ್ ಎರಡನೇ ರನ್ನರ್ ಅಪ್ ಆಗಿದ್ದಾರೆ.

ನಟ ವಿವೇಕ್‌ ಒಬೇರಾಯ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 20ರ ವರ್ಷದ ವರ್ಷಿಣಿ ಧಾರವಾಡದ ಕೆಸಿಡಿ ಕಾಲೇಜ್‌ನಲ್ಲಿ ಟ್ರಾವೆಲ್ ಆಯಂಡ್ ಟೂರಿಸಂ ಕೋರ್ಸ್‌ ತೆಗೆದುಕೊಂಡಿದೆ. ವ್ಯಾಸಂಗದಲ್ಲಿ 2ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ ಮಿಸ್ ಇಂಟರ್ ಕ್ವಾಂಟಿನೇಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಇವರು ಪ್ರತಿನಿಧಿಸಿದ್ದರು.

ಉಕ್ರೇನ್ ವಿರುದ್ಧ ಸಮರ ನಿಲ್ಲಿಸಲು ಪುಟಿನ್ ಗೆ ನೇರ ಹೇಳಿದ ಪ್ರಧಾನಿ ಮೋದಿ

0

ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ನರೇಂದ್ರ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

ಇದೀಗ ಮತ್ತೊಮ್ಮೆ ಇಡೀ ವಿಶ್ವದ ಪ್ರಮುಖ ಮಾಧ್ಯಮಗಳು ನರೇಂದ್ರ ಮೋದಿಯವರ ಮಾತಿಗೆ ಮೆಚ್ಚುಗೆ ಸೂಚಿಸಿದೆ ಅಂತ ವರದಿಯಾಗಿದೆ.ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಮುಂದುವರೆದಿದೆ. ಅದನ್ನು ನಿಲ್ಲಿಸುವಂತೆ ಪುಟಿನ್‌ಗೆ ನರೇಂದ್ರ ಮೋದಿ ಸಲಹೆ ನೀಡಿದ್ದರು.

ಮೋದಿಯವರ ಇದೇ ಮಾತಿಗೆ ಮಾಧ್ಯಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದೆ.

ಉತ್ತರಾಖಂಡದಲ್ಲಿ ಡೆಂಗ್ಯು ಹಾವಳಿ

0

ಉತ್ತರಾಖಂಡದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 500ರ ಗಡಿ ದಾಟಿದೆ ಎಂದು ರಾಜ್ಯ ವೈದ್ಯಕೀಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ನಿರ್ದೇಶನಾ ಮಾಹಿತಿ ನೀಡಿದೆ.

ಡೆಂಗ್ಯೂ ಹರಡುವುದನ್ನು ತಡೆಗಟ್ಟಲು ಎಲ್ಲಾ ಜಿಲ್ಲೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದುವರೆಗೆ, ರಾಜ್ಯದ 5 ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ’ ಎಂದು ಆರೋಗ್ಯ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್.ರಾಜೇಶ್ ಕುಮಾರ್ ಅವರು ಹೇಳಿದ್ದಾರೆ.

ಡೆಹ್ರಾಡೂನ್ ಮತ್ತು ಹರಿದ್ವಾರದಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಡೆಹ್ರಾಡೂನ್ ಜಿಲ್ಲೆಯಲ್ಲಿ ಇದುವರೆಗೆ 295 ಪ್ರಕರಣಗಳು ಮತ್ತು ಹರಿದ್ವಾರದಲ್ಲಿ 123 ಪ್ರಕರಣಗಳು ವರದಿಯಾಗಿವೆ.

ಡೆಂಗ್ಯೂ ಹರಡುವುದನ್ನು ತಡೆಯಲು ಉತ್ತರಾಖಂಡ ಸರ್ಕಾರ ಈ ಹಿಂದೆ ಎಲ್ಲಾ ಮುಖ್ಯ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಎಎನ್‌ಐ ಜೊತೆ ಮಾತನಾಡಿದ ಕುಮಾರ್, ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಲು ಎಲ್ಲಾ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಯಾವುದೇ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾದರೆ, ಆಗ ಸಿಎಂಒ ನೇರವಾಗಿ ಜವಾಬ್ದಾರರಾಗುತ್ತಾರೆ ಎಂದು ಅವರು ಹೇಳಿದರು.

ರಾಜ್ಯದ ಡೆಹ್ರಾಡೂನ್, ಪೌರಿ ಮತ್ತು ಹರಿದ್ವಾರ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ, ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 300 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಡೆಂಗ್ಯೂವನ್ನು ಗಮನದಲ್ಲಿಟ್ಟುಕೊಂಡು, ಪೂರ್ಣ ತೋಳಿನ ಶರ್ಟ್ಗಳನ್ನು ಧರಿಸಿದ ನಂತರವೇ ಮಕ್ಕಳನ್ನು ಶಾಲೆಗೆ ಪ್ರವೇಶಿಸಲು ಅನುಮತಿಸಲು ರಾಜ್ಯದ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಂಗ್ಯೂ ವೇಗವಾಗಿ ಹೊರಹೊಮ್ಮುತ್ತಿರುವ ಸೋಂಕುಗಳಲ್ಲಿ ಒಂದಾಗಿದೆ ಮತ್ತು ಪ್ರಸ್ತುತ ಅತ್ಯಂತ ವೇಗವಾಗಿ ಹರಡುತ್ತಿರುವ ಸೊಳ್ಳೆಯಿಂದ ಹರಡುವ ವೈರಲ್ ರೋಗವಾಗಿದೆ.

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಬಹುಮಾನ ಘೋಷಣೆ

0

ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಈ ಶೋ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ ಗ್ರ್ಯಾಂಡ್ ಫಿನಾಲೆ ಸೆಪ್ಟೆಂಬರ್ 17 ಮತ್ತು 18ರಂದು ನಡೆದಿದೆ.

ಫಿನಾಲೆಯಲ್ಲಿ ಒಟ್ಟು 4ಜನ ಪ್ರಶಸ್ತಿ ಗೆದಿದ್ದಾರೆ.

2 ಆಕ್ಟರ್ ವಿಭಾಗದಲ್ಲಿ 2 ನಾನ್ ಆಕ್ಟರ್ ವಿಭಾಗದಲ್ಲಿ. ಸೃಜನ್ ಲೋಕೇಶ್ , ಶ್ರುತಿ ಹಾಗೂ ಸಾಧು ಕೋಕಿಲ್ ತೀರ್ಪುಗಾರಿಕೆಯಲ್ಲಿ, ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ಆರಂಭದಿಂದಲ್ಲೂ ಟಿಆರ್‌ಪಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಕೊಂಡಿತ್ತು. ಫಿನಾಲೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸ್ಯಾಂಡಲ್‌ವುಡ್‌ ಕನಸಿನ ರಾಣಿ ಮಾಲಾಶ್ರೀ ಆಗಮಿಸಿದ್ದರು.

ಈ ಸೀಸನ್ ವಿನ್ನರ್ ಆಗಿ ನಾನ್ ಆಕ್ಟರ್ – ವಂಶಿಕಾ ಅಂಜನಿ ಕಶ್ಯಪಾ
ಆಕ್ಟರ್ ಶಿವು ಅವರು ಈ ಶೋ ವಿನ್ನರ್ ಆಗಿದ್ದಾರೆ.

ಗಿಚ್ಚಿ ಗಿಲಿಗಿಲಿ ಸೀಸನ್ ರನ್ನರ್ ಆಗಿ ನಾನ್ ಆಕ್ಟರ್ – ನಿವೇದಿತಾ ಗೌಡ
ಆಕ್ಟರ್ ಗೊಬ್ಬರಗಾಲ.

ಪ್ರಥಮ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಹಾಗೂ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. 2ನೇ ಸ್ಥಾನ ಪಡೆದವರಿಗೆ ಟ್ರೋಫಿ ಹಾಗೂ 3 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

ವಿಶಿಷ್ಟ ನಟ ವಿಷ್ಣುವರ್ಧನ್

0

ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ ಹೀಗೆ ನಾನಾಬಿರುದುಗಳಿಂದ ಜನಪ್ರಿಯತೆ ಪಡೆದಿರುವ ಡಾ.ವಿಷ್ಣುವರ್ಧನ್ ಅವರ ಜನ್ಮದಿನ. ಸೆಪ್ಟಂಬರ್ 18 ವಿಷ್ಣುದಾದಾ ಅಭಿಮಾನಿಗಳಿಗೆ ವಿಶೇಷ ದಿನ. ವಿಷ್ಣುವರ್ಧನ್ ದೈಹಿಕವಾಗಿ ಇಲ್ಲದಿದ್ದರೂ ಅಭಿಮಾನಿಗಳ ಮನದಲ್ಲಿ ಇನ್ನು ಜೀವಂತ.

ಡಾ. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಹೆಚ್.ಎಲ್.ನಾರಾಯಣರಾವ್ ತಾಯಿ ಕಾಮಾಕ್ಷಮ್ಮ .

ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ಮೊದಲ ಬಾರಿಗೆ ನಟಿಸಿದ್ದರು.
ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು.

ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ 1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ಪುಟ್ಟಣ್ಣ ಕಣಗಾಲ್ ಅವರು ವಿಷ್ಣುವರ್ಧನ್ ಎಂದು ಹೆಸರಿಟ್ಟರು.

ಕನ್ನಡದ ಸಾಂಸಾರಿಕ ಸಮಸ್ಯೆಗಳ ಸುತ್ತಲಿನ ವಸ್ತು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಕರತಲಾಮಲಕ.
ಹಾಗೇ ಅವರ ಚಿತ್ರಗಳ ನಾಯಕನ ಆಯ್ಕೆಯೂ ವೈವಿಧ್ಯಮಯ.
ಅಂತಹ ಆಯ್ಕೆಗಳಲ್ಲಿ
ವಿಷ್ಣುವರ್ಧನ್ ಕೂಡ
ಕನ್ನಡಿಗರ ಹೃದಯಸಿಂಹಾಸನದಲ್ಲಿ ನೆಲೆನಿಂತ ನಟ.

1980ರಲ್ಲಿ ಶಂಕರ್ ನಾಗ್ ಕನಸಿನ ಪ್ರಾಜೆಕ್ಟ್ ಆದ ಮಾಲ್ಗುಡಿ ಡೇಸ್ನಲ್ಲಿ ಡಾ. ವಿಷ್ಣುವರ್ಧನ್ ನಟಿಸುವ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಗಳಿಸಿದ್ದರು.

ಇವರು ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದರು.

ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ವಿಷ್ಣು ದಾದಾ ಅವರು ಸಲ್ಲುತ್ತದೆ.

ಸಾಹಸ ಸಿಂಹ ವಿಷ್ಣುವರ್ಧನ್ ಕನ್ನಡ,ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆ ಸೇರಿದಂತೆ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾದರು.

ಬೆಂಗಳೂರು ವಿಶ್ವವಿದ್ಯಾಲಯವು 2005ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕನ್ನಡದ ಮೇರು ನಟ ವಿಷ್ಣುವರ್ಧನ್ ಡಿಸೆಂಬರ್ 30, 2009ರಲ್ಲಿ ದೈವಾಧೀನರಾದರು.

ಚಂಡಿಘರ್ ವಿವಿ ಹಾಸ್ಟೆಲ್ ವಿದ್ಯಾರ್ಥಿನಿಯ ಹೀನ ಕೃತ್ಯಕ್ಕೆ ಪ್ರತಿಭಟನೆ

0

ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ 8 ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.

ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೋವನ್ನು ಸೆರೆಹಿಡಿದ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತನಿಗೆ ಕಳುಹಿಸಿದ್ದು, ಈ ವಿಡಿಯೋಗಳು ವೈರಲ್ ಆಗಿವೆ. ವಿಷಯ ತಿಳಿದ ಎಂಟು ಮಂದಿ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದು, ವಿದ್ಯಾರ್ಥಿನಿಯರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ಮೇಲೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ವಾಹನಗಳು ಕೂಡ ಆಕ್ರೋಶದ ಕಿಚ್ಚಿಗೆ ಧ್ವಂಸಗೊಂಡಿವೆ

ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಕ್ರಮ ಕೈಗೊಳ್ಳುವ ಬದಲು ವಿಷಯವನ್ನು ಹತ್ತಿಕ್ಕುತ್ತಿದೆ ಎಂದು ಬಾಲಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಹಿರಿಯ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೋವನ್ನು ಶಿಮ್ಲಾ ಮೂಲದ ವಿದ್ಯಾರ್ಥಿನಿಯೊಬ್ಬಳು ಶಿಮ್ಲಾದಲ್ಲಿ ವಾಸಿಸುವ ತನ್ನ ಗೆಳೆಯನೊಂದಿಗೆ ಹಂಚಿಕೊಂಡಿದ್ದಾಳೆ. ಅದನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋವನ್ನು ನೋಡಿದ ಎಂಟು ವಿದ್ಯಾರ್ಥಿನಿಯರು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವಳ ಸ್ಥಿತಿ ಚಿಂತಾಜನಕವಾಗಿದೆ.

ಸದ್ಯ ಕೃತ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ವೀಡಿಯೊಗಳನ್ನು ಸಂಗ್ರಹಿಸುವ ಉದ್ದೇಶವೇನು? ಎಂಬಿತ್ಯಾದಿ ಆಯಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣದ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಶಿಮ್ಲಾದ ವ್ಯಕ್ತಿಯ ಬಂಧನಕ್ಕೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಶದಲ್ಲಿರುವ ವಿದ್ಯಾರ್ಥಿನಿಯೂ ಹಿಮಾಚಲದವಳೇ, ಹುಡುಗನೂ ಅಲ್ಲಿಯವನೇ. ಹಾಗಾದರೆ ಇವರಿಬ್ಬರು ಯಾಕೆ ಹೀಗೆ ಮಾಡಿದರು? ಈ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

ಮೋದಿ ಜನ್ಮದಿನ ದಾಖಲೆಯ ರಕ್ತದಾನ

0

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಪ್ರಾರಂಭವಾದ ಹದಿನೈದು ದಿನಗಳ ರಕ್ತದಾನ ಅಭಿಯಾನದ ಮೊದಲ ದಿನದಲ್ಲಿ 87,137 ಜನರು ರಕ್ತದಾನ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ತಿಳಿಸಿದ್ದಾರೆ.

ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ ಶಿಬಿರದಲ್ಲಿ ರಕ್ತದಾನ ಮಾಡಿದ ಮಾಂಡವಿಯಾ, ಅಕ್ಟೋಬರ್ 1ರವರೆಗೆ ನಡೆಯಲಿರುವ ‘ರಕ್ತದಾನ ಅಮೃತ ಮಹೋತ್ಸವ’ದ ಅಂಗವಾಗಿ ರಕ್ತದಾನ ಮಾಡಲು ಆರೋಗ್ಯ ಸೇತು ಆಯಪ್ ಅಥವಾ ಇ-ರಕ್ತ್ ಕೋಶ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಜನ್ಮದಿನದಂದು 87 ಸಾವಿರಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದಾರೆ, ಇದು ಹೊಸ ವಿಶ್ವ ದಾಖಲೆಯಾಗಿದೆ. ಇದು ಅಮೂಲ್ಯ ಕೊಡುಗೆಯಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ನಮ್ಮ ಪ್ರೀತಿಯ ಪ್ರಧಾನ ಸೇವಕನಿಗೆ ದೇಶ, “ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ಮೊದಲ ದಿನ ರಕ್ತದಾನ ಮಾಡಿದ ವ್ಯಕ್ತಿಗಳ ಎಣಿಕೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀತಾಗಳನ್ನು ತಂದ ತಜ್ಞರ ತಂಡದಲ್ಲಿ ಕನ್ನಡಿಗ ಕೃಷ್ಣ

0

70 ವರ್ಷ ಬಳಿಕ ಭಾರತದ ಅರಣ್ಯಕ್ಕೆ ನಮೀಬಿಯಾ ದೇಶದಿಂದ ವಿಮಾನದಲ್ಲಿ ಎಂಟು ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಭಾರತದ ಏಕೈಕ ವನ್ಯಜೀವಿ ಅರಿವಳಿಕೆ ತಜ್ಞ ಕನ್ನಡಿಗರಾಗಿದ್ದು, ಅವರು ಕರ್ನಾಟಕದ ಪುತ್ತೂರಿನವರು ಎಂಬುದು ವಿಶೇಷ.

ದೆಹಲಿಯ ನ್ಯಾಷನಲ್‌ ಝೂಲಾಜಿಕಲ್‌ ಪಾರ್ಕ್ನ ಅಸಿಸ್ಟಂಟ್‌ ವೆಟರ್ನರಿ ಅಧಿಕಾರಿಯಾಗಿರುವ ಇವರು ಭಾರತದ ಮೂರು ಮಂದಿಯ ತಂಡದಲ್ಲಿದ್ದರು. ಇವರಲ್ಲದೆ ಭಾರತದ ನಮೀಬಿಯಾ ಹೈಕಮಿಷನರ್‌ ಪ್ರಶಾಂತ್‌ ಅಗರ್‌ವಾಲ್‌, ಪ್ರಾಜೆಕ್ಟ್ ಚೀತಾದ ಮುಖ್ಯ ವಿಜ್ಞಾನಿ ಮತ್ತು ಡೆಹರಾಡೂನ್‌ ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಡೀನ್‌ ಡಾ.ವೈ.ವಿ.ಜಲಾಲ್‌ ಮತ್ತು ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿಯ ನಿರ್ದೇಶಕ ಅನಿಶ್‌ ಗುಪ್ತಾ ಇವರಿಬ್ಬರಿದ್ದರು.

ಚೀತಾಗಳನ್ನು ನಮೀಬಿಯಾದಿಂದ ದೇಶಕ್ಕೆ ಕರೆತರುವಲ್ಲಿಯವರೆಗೆ ಸನತ್‌ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಚೀತಾಗಳಿಗೆ ಸಣ್ಣ ಪ್ರಮಾಣದಲ್ಲಿ ಅರಿವಳಿಕೆ ನೀಡಿ 16 ಗಂಟೆಗಳ ವಿಶೇಷ ವಿಮಾನ ಪ್ರಯಾಣದಲ್ಲಿ ಶನಿವಾರ ಭಾರತ ತಲುಪಿದ್ದಾರೆ.

ಪ್ರಯಾಣದುದ್ದಕ್ಕೂ ವಿಮಾನದಲ್ಲಿ ಗಂಟೆಗೊಮ್ಮೆ ಚೀತಾಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು. ಮೋದಿ ವನ್ಯಜೀವಿ ತಜ್ಞರ ತಂಡದ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಡಾ.ಸನತ್‌ ಕೃಷ್ಣ ಜತೆಯೂ ಮಾತನಾಡಿದ್ದರು.

ಸನತ್‌ ಕೃಷ್ಣ ಹುಲಿ ಹಾಗೂ ಆನೆಗೆ ರೇಡಿಯೋ ಕಾಲರ್‌ ಅಳವಡಿಕೆಯಲ್ಲಿ ಪರಿಣತ ತಜ್ಞ. ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಹುಲಿ ಗಣತಿ ವೇಳೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರಸಿದ್ಧ ಮುಳಿಯ ಸ್ವರ್ಣೋದ್ಯಮಿ ಮನೆತನದ ಕೃಷ್ಣ ಭಟ್‌ ಮತ್ತು ಕಾವೇರಿ ದಂಪತಿಯ ಮೊಮ್ಮಗನಾಗಿ, ಕೇಶವ ಭಟ್‌ ಮತ್ತು ಉಷಾ ದಂಪತಿ ಪುತ್ರನಾದ ಸನತ್‌ ಕೃಷ್ಣ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು.

ಬಳಿಕ ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವನ್ಯಜೀವಿ ವಿಭಾಗದಲ್ಲಿ ಬಿವಿಎಸ್‌ಸಿ ಮತ್ತು ಎಂವಿಎಸ್‌ಸಿ ವ್ಯಾಸಂಗ ಮಾಡಿದ ಅವರು ಅಮೆರಿಕದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ಪ್ರಸ್ತುತ ದೆಹಲಿಯ ರಾಷ್ಟ್ರೀಯ ವನ್ಯಜೀವಿ ಪಾರ್ಕ್ನಲ್ಲಿ ಉಪ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ.

ಇವರ ಪತ್ನಿ ಡಾ.ಪ್ರಿಯಾಂಕ ಜಸ್ತಾ ಪ್ರಸಕ್ತ ಡೆಹರಾಡೂನ್‌ನ ವನ್ಯಜೀವಿ ಸಂಶೋಧನಾ ವಿವಿಯಲ್ಲಿ ತಜ್ಞೆಯಾಗಿದ್ದಾರೆ.

ಮುಂದಿನ ವರ್ಷಜಾಗತಿಕ ಆರ್ಥಿಕ ಹಿಂಜರಿತ-ಮುಲ್ಟಾಸ್

0

ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್‌ ಮುಖ್ಯಸ್ಥ ಡೇವಿಡ್‌ ಮಾಲ್ಪಾಸ್‌ ಹೇಳಿದ್ದಾರೆ.

ಒಂದು ಕಡೆ ಜಗತ್ತಿನ ಎಲ್ಲ ದೇಶಗಳ ಕೇಂದ್ರ ಬ್ಯಾಂಕ್‌ಗಳು ಹಣದುಬ್ಬರ ನಿಯಂತ್ರಿಸಲು ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ.
ಇದರ ಅಡ್ಡ ಪರಿಣಾಮವೆಂಬಂತೆ ಹೂಡಿಕೆ ಮೇಲೆ ಹೊಡೆತವುಂಟಾಗಿದೆ.

ಉದ್ಯೋಗನಷ್ಟ ಸಂಭವಿಸಿದೆ, ಬೆಳವಣಿಗೆ ಕುಸಿದಿದೆ, ವ್ಯಾಪಾರ ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್‌ ಕಳವಳ ವ್ಯಕ್ತಪಡಿಸಿದೆ.
ಈಗಿನ ಲೆಕ್ಕಾಚಾರದ ಪ್ರಕಾರ 1970ರ ನಂತರ ಜಾಗತಿಕವಾಗಿ ಅತ್ಯಂತ ಕಷ್ಟಕರವಾದ ಆರ್ಥಿಕ ಹಿಂಜರಿತ ಸಂಭವಿಸುವುದು ಸ್ಪಷ್ಟ ಎನ್ನುವುದು ಡೇವಿಡ್‌ ಮಾಲ್ಪಾಸ್‌ ವಿಶ್ಲೇಷಣೆ. ಇದನ್ನು ಸರಿಪಡಿಸಲಿಕ್ಕಾಗಿ ಉತ್ಪಾದನೆ ಹೆಚ್ಚಿಸುವುದು, ಪೂರೈಕೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದು ಒಂದು ದಾರಿಯಾಗಿದೆ.

ಪ್ರಸಿದ್ಧ ಬೇಬಿ ಪೌಡರ್ ಬ್ರಾಂಡ್ ಗೆ ಈಗ ಪರವಾನಗಿ ರದ್ದು

0

ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್‌ ನ ಉತ್ಪನ್ನ ತಯಾರಿಕಾ ಪರವಾನಗಿಯನ್ನು ಮಹಾರಾಷ್ಟ್ರ ರದ್ದುಗೊಳಿಸಿದೆ. ಮಹಾರಾಷ್ಟ್ರ FDA(Food & Drugs Administration) ಪತ್ರಿಕಾ ಟಿಪ್ಪಣಿಯನ್ನು ಹೊರಡಿಸಿದ್ದು, ಉತ್ಪನ್ನವು ಕಡ್ಡಾಯ ಮಿತಿಗಿಂತ ಹೆಚ್ಚಿನ pH ಮೌಲ್ಯವನ್ನು ಹೊಂದಿದೆ ಎಂದು ಕಂಡುಬಂದ ಕಾರಣ ಜಾನ್ಸನ್ ಮತ್ತು ಜಾನ್ಸನ್‌ಗೆ ಮಹಾರಾಷ್ಟ್ರದಲ್ಲಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅನ್ನು ತಯಾರಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸೂಚಿಸಿದೆ.

ಮಹಾರಾಷ್ಟ್ರದ ಎಫ್‌ಡಿಎ ಕೂಡ ಕಂಪನಿಗೆ ‘ಸ್ಟ್ಯಾಂಡರ್ಡ್ ಕ್ವಾಲಿಟಿ ಅಲ್ಲ’ ಎಂದು ಪತ್ತೆಯಾದ ಪುಡಿಯ ದಾಸ್ತಾನುಗಳನ್ನು ಹಿಂಪಡೆಯುವಂತೆ ಕೇಳಿಕೊಂಡಿದೆ. ಪೌಡರ್ ಅನ್ನು ಬಳಸುವುದರಿಂದ ನವಜಾತ ಶಿಶುಗಳ ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು FDA ಉಲ್ಲೇಖಿಸಿದೆ. ಲಿಮಿಟೆಡ್ ಮುಲುಂಡ್, ಮುಂಬೈ ಪುಣೆ ಮತ್ತು ನಾಸಿಕ್‌ನಲ್ಲಿ ತೆಗೆದ ಪುಡಿಯ ಮಾದರಿಗಳನ್ನು ಸರ್ಕಾರವು ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ’ ಎಂದು ಘೋಷಿಸಿತು.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ FDAಯು ಜಾನ್ಸನ್ ಮತ್ತು ಜಾನ್ಸನ್ ಪ್ರೈವೇಟ್‌ನ ಜಾನ್ಸನ್ ಬೇಬಿ ಪೌಡರ್‌ನ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಿತು. ದಿನಾಂಕ 15/09/2022 ರಂದು ಈ ಆದೇಶವನ್ನು ನೀಡಲಾಗಿದೆ.