Monday, March 23, 2026
Monday, March 23, 2026
Home Blog Page 1431

ಕಾರುಗಳ ಹಿಂದಿನ ಸೀಟ್ ಬೆಲ್ಟ್ ಅಳವಡಿಕೆ ಸಾರ್ವಜನಿಕರಿಗೆ ಪ್ರತಿಕ್ರಿಯೆಗೆ ಆಹ್ವಾನ

0

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಾರು ತಯಾರಕರು ಹಿಂದಿನ ಸೀಟ್ ಬೆಲ್ಟ್‌ಗಳಿಗೆ ಎಚ್ಚರಿಕೆಯ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಕರಡು ನಿಯಮಗಳನ್ನು ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ಕರಡು ನಿಯಮಗಳ ಕುರಿತು ಸಾರ್ವಜನಿಕ ಕಾಮೆಂಟ್‌ಗಳಿಗೆ ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ.

ರಸ್ತೆ ಅಪಘಾತದಲ್ಲಿ ಭಾರತೀಯ ಉದ್ಯಮಿ ಸೈರಸ್ ಮಿಸ್ತ್ರಿ ಅವರ ದುರದೃಷ್ಟಕರ ಸಾವು ಕಾರು ತಯಾರಕರಿಗೆ ಕಡ್ಡಾಯ ಹಿಂಬದಿ ಸೀಟ್‌ಬೆಲ್ಟ್ ನೀತಿಗೆ ವ್ಯಾಪಕ ಬೇಡಿಕೆಯನ್ನು ಉಂಟುಮಾಡಿತು. ಮಿಸ್ತ್ರಿ ಅವರ ನಿಧನದ 2 ದಿನಗಳ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಾರಿನಲ್ಲಿ ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ ಎಂದು ಘೋಷಿಸಿದರು. ಅದು ವಿಫಲವಾದರೆ ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದ್ದರು.

ಮಿಸ್ತ್ರಿ ಅವರು ಗುಜರಾತಿನ ಉದ್ವಾಡದ ಪಾರ್ಸಿ ಯಾತ್ರಾರ್ಥಿಗಳಿಂದ ಡಾ ಅನಾಹಿತಾ ಪುಂಡೋಲೆ, ಅವರ ಪತಿ ಡೇರಿಯಸ್ ಪುಂಡೋಲೆ ಮತ್ತು ಸೋದರ ಮಾವ ಜಹಾಂಗೀರ್ ಪಾಂಡೋಲೆ ಅವರೊಂದಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಿಸ್ತ್ರಿ ಮತ್ತು ಜಹಾಂಗೀರ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಅನಾಹಿತಾ ಮತ್ತು ಡೇರಿಯಸ್ ತೀವ್ರವಾಗಿ ಗಾಯಗೊಂಡು ಆಸ್ಪತ್ರಗೆ ದಾಖಲಾಗಿದ್ದರು.

ವಡೋದರದ ಪೋಷಕರಿಂದ ಸಂಸ್ಕೃತ ಕಲಿಕೆ ಚರ್ಚೆ

0

ಗುಜರಾತ್ ರಾಜ್ಯದ ವಡೋದರ ದಲ್ಲಿರುವ, ವಡೋದರ ಹೋಂ ಸ್ಕೂಲ್ ಸಂಸ್ಕೃತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಇಂದು ಸಂಸ್ಕೃತ ಭವನಕ್ಕೆ ಆಗಮಿಸಿ, ಸಂಸ್ಕೃತ ಕಲಿಕೆಯ ಮಹತ್ವ ಕುರಿತು ಚರ್ಚೆ ನಡೆಸಿದರು.

ಈ ವೇಳೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಯೋಜನೆಯ ರಾಜ್ಯಾಧ್ಯಕ್ಷ ಎಸ್.ಕೆ.ಶೇಷಾಚಲ, ವಾಸವಿ ಅಕಾಡೆಮಿ ಅಧ್ಯಕ್ಷ ಶಾಮಸುಂದರ್, ಸಂಸ್ಕೃತ ಶಿಕ್ಷಕ ಅ.ನಾ.ಶ್ರೀವತ್ಸ, ವಾಸವಿ ಅಕಾಡೆಮಿ ಟ್ರಸ್ಟ್ ಸದಸ್ಯ ಎಸ್.ಎಸ್.ವಾಗೇಶ್ ಉಪಸ್ಥಿತರಿದ್ದರು. ವಡೋದರ ಶಾಲಾ ಪರವಾಗಿ ಮೇಘನ, ದಿವ್ಯಾಂಗ ಕಪಾಡಿಯ ಇನ್ನು ಮುಂತಾದವರು ಚರ್ಚೆಯಲ್ಲಿ ಉಪಸ್ಥಿತರಿದ್ದರು.

ವರ್ಕ್ ಫ್ರಂ ಹೋಮ್ ಪಾಲಿಸಿ ಎಂಎನ್ ಸಿಗಳಿಗೆ ಈಗೀಗ ಇಷ್ಟವಾಗುತ್ತಿದೆ

ಕೊರೊನಾ ವೈರಸ್ ನಿಂದ ಕೋಟ್ಯಾಂತರ ಜನರು ವೈರಸ್​ಗೆ ಬಲಿಯಾಗಿದ್ದಾರೆ.ಇದರ ನಡುವೆಯೇ ಕೊರೋನಾದಿಂದಾಗಿ ಕೆಲ ಒಳ್ಳೆಯ ಬದಲಾವಣೆಗಳು ಕೂಡಾ ಆಗಿವೆ ಎಂಬುವುದಕ್ಕೆ ಅನೇಕ ಉದಾಹರಣೆಗಳಿವೆ. ಅದರಲ್ಲಿ ವಿಶೇಷವಾಗಿ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡುವ ಹೊಸ ದಾರಿಯನ್ನ ಕಂಡುಕೊಂಡಿವೆ.

ಮನೆಯಿಂದಲೇ ಕೆಲಸ ಮಾಡುವ ವಿಧಾನದಿಂದಾಗಿ ಉದ್ಯೋಗಿಗಳು ಇನ್ನಷ್ಟು ಕೆಲಸ ಮಾಡಲು ಸಮರ್ಥರಾಗಿರುತ್ತಾರೆ. ಅನ್ನೊದು ಕಂಪನಿಗೂ ಕೂಡಾ ಅರಿವಾಗುತ್ತಿದೆ. ಇದರಿಂದ ಕಂಪನಿಗೆ ಖರ್ಚು ಕೂಡ ಕಡಿಮೆಯಾಗಿದೆ.

ಈಗ ಇದೇ ರೀತಿ ಮುಂದಿನ ದಿನಗಳಲ್ಲಿಯೂ ಮನೆಯಿಂದಲೇ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುವ ಬಗ್ಗೆ ಚಿಂತನೆ ಕಂಪನಿ ಮಾಡುತ್ತಿದೆ. ಇದೇ ದಿಕ್ಕಿನಲ್ಲಿ ಒಂದು ದೊಡ್ಡ ಎಂಎನ್ ಸಿ ಕಂಪನಿ ಭಾರತದ 9000 ಉದ್ಯೋಗಿಗಳಿಗೆ ಉದ್ಯೋಗ ನೀಡಲು ನಿರ್ಧಾರ ಮಾಡಿದೆ. ಅವರು ಎಲ್ಲಿಂದಾದರೂ ಕೆಲಸ ಮಾಡಬಹುದು. ಟಾರ್ಗೆಟ್ ಕಂಪ್ಲಿಟ್ ಮಾಡಿದರೆ ಸಾಕು ಎಂದು ಕಂಪನಿ ಹೇಳುತ್ತಿದೆ.

ಈಗಾಗಲೇ ಉದ್ಯೋಗಿಗಳ ಹುಡುಕಾಟದಲ್ಲಿರುವ ಕಂಪನಿಗಳು ಶ್ರೇಣಿ 2 ಹಾಗೂ ಶ್ರೇಣಿ 3 ರೀತಿಯಲ್ಲಿ ಹಂತ ಹಂತವಾಗಿ ಉದ್ಯೋಗಿಗಳ ಇಂಟರ್ವ್ಯೂ ನಡೆಸುತ್ತಿದೆ.

ಜಾಗತಿಕ ಗ್ರಾಹಕ ಸೇವಾ ಸಾಫ್ಟ್‌ ವೇರ್‌ ಮತ್ತು ಸೇವೆಗಳ ಕಂಪನಿ ಇದೇ ಮಂಗಳವಾರ 9000 ಉದ್ಯೋಗಿಗಳ ನೇಮಕವನ್ನು ಪ್ರಕಟಿಸಿದೆ. ಈ ಉದ್ಯೋಗಿಗಳಿಗೆ ಎಲ್ಲಿಂದಾದರೂ ಕೆಲಸ ಮಾಡಬಹುದು, ಅನ್ನೋ ಆಯ್ಕೆ ಅವರಿಗೆ ಕೊಟ್ಟಿದೆ. ಈಗಾಗಲೇ ಫೋನ್ ಮತ್ತು ಚಾಟ್​ಗಳ ಮೂಲಕ ಉದ್ಯೋಗಿಗಳ ಜೊತೆ ಕಂಪನಿ ಮಾತುಕತೆ ನಡೆಸುತ್ತಿದೆ. ಇದರಿಂದ ಗ್ರಾಹಕರಿಗೂ ಅನಕೂಲವಾಗಲಿದೆ.

ಮಿಂಟ್ ವರದಿಯ ಪ್ರಕಾರ, ಭಾರತ ಮತ್ತು ಅಮೇರಿಕಾ ಎಸ್ವಿಪಿ ಮತ್ತು ಎಚ್‌ಆರ್ಡಿ ಹೆಡ್ ನೀನಾ ನಾಯರ್ ಅವರು ಭಾರತವು ಉತ್ತಮ ಮತ್ತು ಸಂಘಟಿತ ಪ್ರತಿಭಾಶಾಲಿ ಉದ್ಯೋಗಿಗಳನ್ನ ಹೊಂದಿದೆ.

ಇದೇ ರೀತಿಯ ಉದ್ಯೋಗಿಗಳ ಹುಡುಕಾಟದಲ್ಲಿ ಇರುವ ಕಂಪನಿ ಭಾರತದ ಉದ್ಯೋಗಾಂಕ್ಷಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿರುವುದು ವಿಶೇಷ.
ಕಂಪನಿ, ಕಳೆದ ವರ್ಷ ಭಾರತದಿಂದಲೇ 5000 ಜನರನ್ನು ನೇಮಿಸಿಕೊಂಡಿದೆ. ವ್ಯಾಪಾರದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಅವಶ್ಯಕತೆಗಳನ್ನು ಪೂರೈಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಲಾಗುತ್ತಿದೆ.

ಗ್ರಾಹಕರಿಗೆ ವೈಯಕ್ತೀಕರಿಸಿದ ಮತ್ತು ತೃಪ್ತಿಕರ ಅನುಭವವನ್ನು ಒದಗಿಸುವ ಗುರಿ ಕಂಪನಿ ಹೊಂದಿದೆ. ಕೃತಕ ಬುದ್ಧಿಮತ್ತೆಯು ಲಂಬ ಪರಿಣತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಾಗ ಮತ್ತು ಅದಕ್ಕೆ ಹೊಸ ಆಯಾಮವನ್ನು ನೀಡಿದಾಗ ಮಾತ್ರ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೇ ಈಗಾಗಲೇ ಕಂಪನಿಗಳ ಎಐ ತಂತ್ರಜ್ಞಾನವು ವ್ಯಾಪಾರ ಹಾಗೂ ಸಾಮಾನ್ಯ ಗ್ರಾಹಕರ ನಡುವಿನ ವಹಿವಾಟುಗಳನ್ನು ಇನ್ನಷ್ಟು ಸುಲಭಗೊಳಿಸುವುದಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡುತ್ತಿದೆ.

ಮಂಗಳೂರು ದಸರಾಗೆ ರಾಜ್ಯ ಸಾರಿಗೆ ನಿಗಮದಿಂದ ವಿಶೇಷ ಪ್ಯಾಕೇಜ್

0

ಮೈಸೂರು ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ‘ಮಂಗಳೂರು ದಸರಾ ದರ್ಶನ’ ಹೆಸರಿನಲ್ಲಿ ಸೆ.26ರಿಂದ ಅ.5ರ ವರೆಗೆ ಪ್ಯಾಕೇಜ್‌ ಪ್ರವಾಸ ಆಯೋಜಿಸಲಾಗಿದೆ.

ದಸರಾ ವೇಳೆ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಧಾರ್ಮಿಕ ಪ್ರವಾಸ ಇದರ ಉದ್ದೇಶವಾಗಿದೆ.

ಸುಮಾರು 10 ವಿವಿಧ ದೇವಸ್ಥಾನಗಳಿಗೆ ಈ ಪ್ಯಾಕೇಜ್‌ ಪ್ರವಾಸ ಇರಲಿದ್ದು, ಊಟ, ಉಪಹಾರ ಹೊರತುಪಡಿಸಿ ಪ್ರತಿ ಪ್ರಯಾಣಿಕರಿಗೆ ಕನಿಷ್ಠ ದರ ನಿಗದಿಪಡಿಸಲಾಗಿದೆ. ಒಂದು ದಿನದ ಪ್ರವಾಸ ಇದಾಗಿದ್ದು, ಬೆಳಗ್ಗೆ ಹೊರಟರೆ, ದೇವಸ್ಥಾನಗಳ ದರ್ಶನ ಮುಗಿಸಿ ಸಂಜೆ ವೇಳೆಗೆ ವಾಪಸ್‌ ಆಗಬಹುದು.

ಹಸಿರು ಬಣ್ಣದ ನರ್ಮ್‌ ಬಸ್‌ನ್ನು ಇದಕ್ಕೆ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಒಂದು ಬಸ್‌ನಲ್ಲಿ 40 ಮಂದಿಗೆ ಅವಕಾಶ ಇರುತ್ತದೆ. ಬೆಳಗ್ಗೆ 8 ಗಂಟೆಗೆ ಬಿಜೈ ಬಸ್‌ ನಿಲ್ದಾಣದಿಂದ ಹೊರಟರೆ, ರಾತ್ರಿ 8.30ಕ್ಕೆ ನಿಲ್ದಾಣಕ್ಕೆ ಮರಳಲಿದೆ. ಚಾಲಕನಲ್ಲದೆ, ಓರ್ವ ಸಹಾಯಕನೂ ಇರಲಿದ್ದಾರೆ.

ಈಗಾಗಲೇ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌(9663211553) ಆರಂಭಿಸಲಾಗಿದೆ.

ಅಲ್ಲದೆ ಬಸ್‌ ಹೊರಡುವ ಮುನ್ನ ಸ್ಥಳದಲ್ಲೇ ಟಿಕೆಟ್‌ ಕೂಡ ನೀಡಲಾಗುತ್ತದೆ. ವಯಸ್ಕರಿಗೆ 300 ರೂ. ಹಾಗೂ 6 ವರ್ಷ ಮೇಲ್ಪಟ್ಟಮಕ್ಕಳಿಗೆ 250 ರು. ನಿಗದಿಪಡಿಸಲಾಗಿದೆ.

ದಸರಾ ಪ್ರವಾಸಿಗಳಿಗೆ ಮೈಸೂರು ಜಿಲ್ಲಾಡಳಿತದಿಂದ ಕಾಂಬೋ ಟಿಕೆಟ್

0

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.
ಈ ಹಿನ್ನೆಲೆ ಅರಮನೆ ನಗರಿ ಮೈಸೂರಿನಲ್ಲಿ ಸಿದ್ದತೆಗಳು ಜೋರಾಗಿವೆ. ದಸರಾ ಸಮಯದಲ್ಲಿ ಮೈಸೂರಿಗೆ ದೂರದೂರಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಏಕೀಕೃತ ಟಿಕೇಟ್ (ಕಾಂಬೋ ಟಿಕೆಟ್) ವ್ಯವಸ್ಥೆ ಜಾರಿ ಮಾಡಿದೆ.

ದಸರಾ ಮಹೋತ್ಸವದ ಹಿನ್ನೆಲೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗಾಗಿ ಮತ್ತು ಸಾರ್ವಜನಿಕರಿಗಾಗಿ ಮೈಸೂರಿನ ಕೆಲವು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಾಂಬೋ ಟಿಕೆಟ್ ವ್ಯವಸ್ಥೆ ಜಾರಿ ಮಾಡಿದೆ.

ಕಾಂಬೋ ಟಿಕೆಟ್ ಮೂಲಕ ಪ್ರವಾಸಿಗರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆಆರ್‌ಎಸ್ ಬೃಂದಾವನ ಸೇರಿ ಒಟ್ಟು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.
ಇನ್ನು ಕಾಂಬೊ ಟಿಕೆಟ್ ಪಡೆದವರು ಈ ಐದು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಾಗ ಸರತಿಯಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಈಗಾಗಲೇ ಕಾಂಬೊ ಟಿಕೆಟ್ ಪಡೆದಿರುವುದರಿಂದ ಅವರು ಡೈರೆಕ್ಟ್​ ಆಗಿ ಪ್ರವೇಶಿಸಬಹುದು. ​ಈ ವ್ಯವಸ್ಥೆ ಸೆಪ್ಟೆಂಬರ್ 20ರಂದು ಆರಂಭಗೊಂಡು ಅಕ್ಟೋಬರ್‌ 5ರವರೆಗೆ ಚಾಲ್ತಿಯಲ್ಲಿರುತ್ತದೆ. ಟಿಕೆಟ್ ಬೆಲೆ 500 ರೂ.ಗಳಾಗಿದ್ದು, ಮಕ್ಕಳಿಗೆ 250 ರೂ. ನಿಗದಿಪಡಿಸಲಾಗಿದೆ.

ಈ ಟಿಕೆಟ್ ಗಳನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ನಗರದ ಕೆಎಸ್‌ಟಿಡಿಸಿ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ, ಕೆಎಸ್‌ಆರ್‌ಟಿಸಿ ಸಬರ್ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 2 ಕಡೆ, ಚಾಮುಂಡಿಬೆಟ್ಟ, ಮೃಗಾಲಯ, ಕೆಆರ್‌ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಟಿಕೆಟ್ ದೊರೆಯಲಿದೆ

ಹಿಜಾಬ್ ಧಾರಣೆ ವಿರುದ್ಧ ಇರಾನ್ ಮಹಿಳೆಯರ ಪ್ರತಿಭಟನೆ

0

22 ವರ್ಷದ ಮಹಿಳೆ ಮಹ್ಸಾ ಅಮಿನಿ ಸಾವಿನ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ತೆಗೆದು ಸುಟ್ಟು ಹಾಕುತ್ತಿದ್ದಾರೆ. ಅಲ್ಲದೆ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಳು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಧಾರ್ಮಿಕ ಶಿರಸ್ತ್ರಾಣವನ್ನು ಧರಿಸಬೇಕೆಂಬ ತೀವ್ರ ಇರಾನಿನ ನಿಯಮಕ್ಕೆ ವಿರೋಧದ ಸಾಂಕೇತಿಕ ಕ್ರಿಯೆಯಲ್ಲಿ, ಕೆಲವು ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿ ತಮ್ಮ ಹಿಜಾಬ್ ಗಳನ್ನು ಸುಟ್ಟು ಹಾಕಿದರು.

ಅಮಿನಿಯನ್ನು ಇರಾನ್‌ನಲ್ಲಿ ‘ಅನುಚಿತವಾಗಿ’ ಹಿಜಾಬ್ ಧರಿಸಿದ್ದಕ್ಕಾಗಿ ಬಂಧಿಸಿದರು ಏಕೆಂದರೆ ಅವರು ತಮ್ಮ ಕೂದಲನ್ನು ಸಂಪೂರ್ಣವಾಗಿ ಮುಚ್ಚಿರಲಿಲ್ಲ.ರಾಯಿಟರ್ಸ್ ವರದಿಯ ಪ್ರಕಾರ, ವಾರದ ಆರಂಭದಲ್ಲಿ ಟೆಹ್ರಾನ್‌ನಲ್ಲಿ ಆಕೆಯನ್ನು ಬಂಧಿಸಿದ್ದಕ್ಕಾಗಿ ಆಘಾತಕ್ಕೊಳಗಾಗಿ ಕೋಮಾ ಸ್ಥಿತಿ ತಲುಪಿ ನಿಧನರಾದರು. ಇರಾನ್‌ನಲ್ಲಿ ಮಹಿಳಾ ಹಕ್ಕುಗಳ ಮೇಲೆ ಗಮನ ಹರಿಸಿ ಆಕೆಯನ್ನು ಥಳಿಸಲಾಯಿತು ಎಂಬ ಸಾಮಾಜಿಕ ಮಾಧ್ಯಮದ ಅನುಮಾನಗಳನ್ನು ಪೊಲೀಸರು ತಿರಸ್ಕರಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ಹಲವಾರು ಪ್ರತಿಭಟನೆಗಳ ವೀಡಿಯೊಗಳು ವೈರಲ್ ಆಗಿವೆ.

ಕೆಲವು ವೀಡಿಯೊಗಳಲ್ಲಿ, ಪ್ರತಿಭಟನಾಕಾರರನ್ನು ಚದುರಿಸಲು ಇರಾನ್ ಪಡೆಗಳು ಅಶ್ರುವಾಯು ಬಳಸುತ್ತಿರುವುದು ಕಂಡುಬಂದಿದೆ.

ಮರಣದಂಡನೆ ಶಿಕ್ಷಾವಿಧಿ ಸ್ವರೂಪ ಕುರಿತು ಪರಿಶೀಲನೆ- ದ್ವಿಸದಸ್ಯ ಪೀಠ

0

ಮರಣ ದಂಡನೆ ಶಿಕ್ಷೆಗೆ ಒಳಪಡಿಸಬಹುದಾದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ಶಿಕ್ಷೆಯ ಪ್ರಮಾಣ ತಗ್ಗಿಸಬಹುದು ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವ ಕುರಿತ ಸುಮೋಟೊ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ಸೋಮವಾರ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ಮರಣ ದಂಡನೆ ಶಿಕ್ಷೆಗೆ ಒಳಪಡಬಹುದಾದ ಅಪರಾಧಿಯ ಶಿಕ್ಷೆಯನ್ನು ಎಂತಹ ಸಂದರ್ಭಗಳಲ್ಲಿ ತಗ್ಗಿಸಬೇಕು ಎಂಬುದರ ಕುರಿತು ಸ್ಪಷ್ಟತೆ ಹಾಗೂ ಏಕರೂಪತೆ ಬೇಕಿದೆ. ಈ ವಿಚಾರದ ಬಗ್ಗೆ ವಿಸ್ತೃತ ಪೀಠದಲ್ಲೇ ವಿಚಾರಣೆ ನಡೆಯುವ ಅಗತ್ಯವಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ನೇತೃತ್ವದ ದ್ವಿಸದಸ್ಯ ಪೀಠ ಹೇಳಿತು.

ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಎದುರು ಇಡಬಯಸುತ್ತೇನೆ. ಈ ಸಂಬಂಧ ಅವರೇ ಸೂಕ್ತ ಆದೇಶ ಹೊರಡಿಸಲಿ ಎಂದು ನ್ಯಾಯಮೂರ್ತಿ ಎಸ್‌.ರವೀಂದ್ರ ಭಟ್‌ ಅವರು ತೀರ್ಪು ಪ್ರಕಟಿಸುವಾಗ ತಿಳಿಸಿದರು.

ಆಗಸ್ಟ್‌ 17ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು ಮರಣ ದಂಡನೆ ಶಿಕ್ಷೆಯು ಬದಲಾಯಿಸಲು ಆಗದ್ದು. ಹೀಗಾಗಿ ಶಿಕ್ಷೆಯನ್ನು ತಗ್ಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಎಲ್ಲಾ ಅವಕಾಶಗಳನ್ನೂ ಅಪರಾಧಿಗೆ ನೀಡಬೇಕು ಎಂದು ಆಗ ಹೇಳಿತ್ತು.

ಪೌರ ಕಾರ್ಮಿಕರ ಪರ ನಿಂತ ಸರ್ಕಾರಕ್ಕೆ ಮೇಯರ್ ಧನ್ಯವಾದ

0

ರಾಜ್ಯದ ಮಹಾನಗರಪಾಲಿಕೆ, ನಗರಪಾಲಿಕೆ,ನಗರಸಭೆ ಪುರಸಭೆ ಮತ್ತು ಇತರ ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ನೌಕರರು ಈಗ17000-28980 ವೇತನ ಶ್ರೇಣಿ ಅಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. 11,133 ಪೌರ ಕಾರ್ಮಿಕ ಖಾಯಮಾತಿಯಾಗಿದ್ದು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದೆ.

ಅನೇಕ ದಿನಗಳಿಂದ ಹೋರಾಟ ಮಾಡುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ನ್ಯಾಯ ಒದಗಿಸಿದಂತಾಗಿದೆ. ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆಯನ್ನು ಕರ್ನಾಟಕದ ಬಿಜೆಪಿ ಸರ್ಕಾರ ಮುಂದುವರಿಸಿರುವುದಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ ಉಪಮೆಯರ್ ಶಂಕರ್ ಗನ್ನಿ ಹಾಗೂ ಪಾಲಿಕೆ ಸದಸ್ಯರು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ವಿರುದ್ಧ ಎಫ್ ಐಅರ್ ವಿಚಾರ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಎಫ್ ಐ ಆರ್ ದಾಖಲು.

UAPA ಕೇಸ್ ದಾಖಲಿಸಿ ತನಿಖೆ ತೀವ್ರಗೊಳಿಸಿರುವ ಪೊಲೀಸರು.

ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು.

ಮಂಗಳೂರು ಮೂಲದ ಮಾಜ್ ಮುನೀರ್ ಅಹಮದ್(22) ಹಾಗೂ ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸೀನ್ (21) ಬಂಧನ.

ನಿಷೇಧಿತ ಉಗ್ರ ಸಂಘಟನೆಯ ನಂಟು ಹೊಂದಿರುವ ಆರೋಪಿಗಳು.

ಆರೋಪಿಗಳನ್ನು‌ ನ್ಯಾಯಾಲಯಕ್ಕೆ ಹಾಜರು ಪಡಿಸಿ, ವಶಕ್ಕೆ ಪಡೆದ ಪೊಲೀಸರು.

ಸೆಪ್ಟೆಂಬರ್ 29 ರವರೆಗೆ ತಮ್ಮ ವಶಕ್ಕೆ ಪಡೆದಿರುವ ಶಿವಮೊಗ್ಗ ಗ್ರಾಮಾಂತರ ಪೊಲೀಸರು.

ಆರೋಪಿಗಳು 9 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯದ ಆದೇಶ.

ಶಂಕಿತ ಉಗ್ರರನ್ನು‌ ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಗ್ರಾಮಾಂತರ ಪೊಲೀಸರು.