Wednesday, June 24, 2026
Wednesday, June 24, 2026

ಮರಣದಂಡನೆ ಶಿಕ್ಷಾವಿಧಿ ಸ್ವರೂಪ ಕುರಿತು ಪರಿಶೀಲನೆ- ದ್ವಿಸದಸ್ಯ ಪೀಠ

Date:

ಮರಣ ದಂಡನೆ ಶಿಕ್ಷೆಗೆ ಒಳಪಡಿಸಬಹುದಾದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ಶಿಕ್ಷೆಯ ಪ್ರಮಾಣ ತಗ್ಗಿಸಬಹುದು ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವ ಕುರಿತ ಸುಮೋಟೊ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ಸೋಮವಾರ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ಮರಣ ದಂಡನೆ ಶಿಕ್ಷೆಗೆ ಒಳಪಡಬಹುದಾದ ಅಪರಾಧಿಯ ಶಿಕ್ಷೆಯನ್ನು ಎಂತಹ ಸಂದರ್ಭಗಳಲ್ಲಿ ತಗ್ಗಿಸಬೇಕು ಎಂಬುದರ ಕುರಿತು ಸ್ಪಷ್ಟತೆ ಹಾಗೂ ಏಕರೂಪತೆ ಬೇಕಿದೆ. ಈ ವಿಚಾರದ ಬಗ್ಗೆ ವಿಸ್ತೃತ ಪೀಠದಲ್ಲೇ ವಿಚಾರಣೆ ನಡೆಯುವ ಅಗತ್ಯವಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ನೇತೃತ್ವದ ದ್ವಿಸದಸ್ಯ ಪೀಠ ಹೇಳಿತು.

ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಎದುರು ಇಡಬಯಸುತ್ತೇನೆ. ಈ ಸಂಬಂಧ ಅವರೇ ಸೂಕ್ತ ಆದೇಶ ಹೊರಡಿಸಲಿ ಎಂದು ನ್ಯಾಯಮೂರ್ತಿ ಎಸ್‌.ರವೀಂದ್ರ ಭಟ್‌ ಅವರು ತೀರ್ಪು ಪ್ರಕಟಿಸುವಾಗ ತಿಳಿಸಿದರು.

ಆಗಸ್ಟ್‌ 17ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು ಮರಣ ದಂಡನೆ ಶಿಕ್ಷೆಯು ಬದಲಾಯಿಸಲು ಆಗದ್ದು. ಹೀಗಾಗಿ ಶಿಕ್ಷೆಯನ್ನು ತಗ್ಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಎಲ್ಲಾ ಅವಕಾಶಗಳನ್ನೂ ಅಪರಾಧಿಗೆ ನೀಡಬೇಕು ಎಂದು ಆಗ ಹೇಳಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...

Sri Jayachamarajendra Government ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಅರಿವಳಿಕೆ ತಜ್ಞರ ನೇಮಕಾತಿಗೆ ನೇರ ಸಂದರ್ಶನ.

Sri Jayachamarajendra Government ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶಿವಮೊಗ್ಗ ಜಿಲ್ಲಾ ಆರೋಗ್ಯ...

S.N. Channabasappa ಅರ್ಹ ಬಡವರ ಬಿ.ಪಿ.ಎಲ್.ಕಾರ್ಡ್ ರದ್ದತಿಯಿಂದ ಜನಸಾಮಾನ್ಯರ ಬದುಕು ದುಸ್ತರ- ಎಸ್.ಎನ್.ಚನ್ನಬಸಪ್ಪ.

S.N. Channabasappa ಅರ್ಹ ಬಡವರ ಬಿಪಿಎಲ್ ಕಾರ್ಡ್ ರದ್ದತಿಯಿಂದ ಜನಸಾಮಾನ್ಯರ ಬದುಕು...

B.Y. Raghavendra ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: ರಾಜ್ಯಪಾಲರಿಗೆ ಸಂಸದ ರಾಘವೇಂದ್ರ ಮನವಿ ಅರ್ಪಣೆ.

B.Y. Raghavendra ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಶಿವಮೊಗ್ಗ ಎಲ್ಲ ರೀತಿಯಲ್ಲೂ ಅರ್ಹವಾಗಿದೆ; ರಾಜ್ಯಪಾಲರ...