Monday, March 23, 2026
Monday, March 23, 2026
Home Blog Page 1432

ಎಸ್ ಬಿ ಐ ನಲ್ಲಿ 5008 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

0

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅನೇಕ ಪೋಸ್ಟ್ಗಳಿಗೆ ನೇಮಕಾತಿಯನ್ನು ಬಿಡುಗಡೆ ಮಾಡಿದೆ, ಇದಕ್ಕಾಗಿ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಇಲ್ಲಿ ನಿಮಗೆ ಅಗತ್ಯವಾದ ಮಾಹಿತಿಯನ್ನು ನೀಡಲಾಗಿದೆ.

ಕೊಲಿಪಿಕ್ ಕೇಡರ್ನಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಅಡಿಯಲ್ಲಿ, ಒಟ್ಟು 478 ಬ್ಯಾಕ್ಲಾಗ್ ಹುದ್ದೆಗಳು ಮತ್ತು 5008 ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್ಬಿಐನ ಅಧಿಕೃತ ವೆಬ್ಸೈಟ್ – ಬ್ಯಾಂಕ್.ಎಸ್ಬಿಐ / ಕೆರಿಯರ್ಸ್ ಅಥವಾ sbi.co.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 27, 2022 ರಂದು. ನಿಗದಿಪಡಿಸಲಾಗಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ, ಇದು ನವೆಂಬರ್ ನಲ್ಲಿ ನಡೆಯಲಿದೆ. ಇದರೊಂದಿಗೆ, ಮುಖ್ಯ ಪರೀಕ್ಷೆ ಡಿಸೆಂಬರ್ 2022 / ಜನವರಿ 2023 ರಿಂದ ನಡೆಯಲಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ- ಸಚಿವ ಸುಧಾಕರ್

0

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾದ ಕುರಿತು ಆರ್ಥಿಕ ಇಲಾಖೆಗೆ ಕಡತ ಹೋಗಿದೆ. ಆಸ್ಪತ್ರೆ ನಿರ್ಮಾಣ ಸ್ಥಳದ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಅಧಿವೇಶನದ ನಂತರ ಪ್ರವಾಸ ಮಾಡಿ ಪೈನಲ್ ಮಾಡುತ್ತೇವೆ. ಸೂಕ್ತವಾದ ಸ್ಥಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಹೋರಾಟ, ಪ್ರತಿಭಟನೆಗಳು ತೀವ್ರಗೊಂಡಿದ್ದವು.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ.

ಸಿಹಿಸುದ್ದಿ ರಾಜ್ಯದಲ್ಲಿ ಅಂತರ್ಜಲ ಮಟ್ಟ ಏರಿಕೆ-ಅಶೋಕ್

0

ರಾಜ್ಯದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, 18 ಜಿಲ್ಲೆಗಳಲ್ಲಿ ಶೇ.100ರಷ್ಟು ಅಂತರ್ಜಲ ಮಟ್ಟ ಏರಿಕೆ ಕಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ದಾವಣಗೆರೆ, ಧಾರವಾಡ, ಚಿತ್ರದುರ್ಗ, ಹಾಸನ, ಚಾಮರಾಜನಗರ ಸೇರಿದಂತೆ 18 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ ಎಂದರು.

125 ತಾಲ್ಲೂಕುಗಳಲ್ಲಿ 4 ಮೀಟರ್ ನಷ್ಟು, 39 ತಾಲೂಕುಗಳಲ್ಲಿ ಎರಡರಿಂದ ನಾಲ್ಕು ಮೀಟರ್ ನಷ್ಟು ಹಾಗೂ 26 ತಾಲ್ಲೂಕುಗಳಲ್ಲಿ 0-2 ರಷ್ಟು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತದ ಬಾಕ್ಸರ್ ಗಳಿಗೆ 19 ಪದಕಗಳ ಗೌರವ

0

ಭಾರತದ ಯುವ ಬಾಕ್ಸರ್‌ಗಳು ಸರ್ಬಿಯಾದ ವೊವೊದಿನಾದಲ್ಲಿ ನಡೆದ ಗೋಲ್ಡನ್‌ ಗ್ಲೋವ್‌ ಯೂತ್ ಬಾಕ್ಸಿಂಗ್ ಟೂರ್ನಿಯಲ್ಲಿ ಭರ್ಜರಿ 19 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಟೂರ್ನಿಯ ಕೊನೆಯ ದಿನವಾದ ಸೋಮವಾರ 10 ಚಿನ್ನದ ಪದಕಗಳು ಭಾರತದ ಮಡಿಲು ಸೇರಿದವು.ಮಹಿಳಾ ವಿಭಾಗದಲ್ಲಿ ಭಾವನಾ ಶರ್ಮಾ 48 ಕೆಜಿ ವಿಭಾಗ, ದೇವಿಕಾ ಘೋರ್ಪಡೆ 52 ಕೆಜಿ, ಕುಂಜರಾಣಿ ದೇವಿ 60 ಕೆಜಿ, ರವೀನಾ 63 ಕೆಜಿ ಹಾಗೂ ಕೀರ್ತಿ 81 ಕೆಜಿಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಸ್ಪರ್ಧೆಯಲ್ಲಿದ್ದ ಭಾರತದ 12 ಮಹಿಳೆಯರೂ ಪೋಡಿಯಂ ಫಿನಿಶ್ ಮಾಡಿದರು.

ಫೈನಲ್‌ ತಲುಪಿದ್ದ ಭಾರತದ ಎಲ್ಲ ಐದೂ ಮಂದಿ ಪುರುಷ ಸ್ಪರ್ಧಿಗಳು ಚಿನ್ನದ ಪದಕಗಳಿಗೆ ಮುತ್ತಿಟ್ಟರು. ವಿಶ್ವ ನಾಥ್‌ (48 ಕೆಜಿ), ಆಶಿಷ್‌ (54 ಕೆಜಿ), ಸಾಹಿಲ್‌ (71 ಕೆಜಿ), ಜಾದೂಮಣಿ (51 ಕೆಜಿ), ಭರತ್ ಜೂನ್‌ (92 ಕೆಜಿ) ಅಗ್ರಸ್ಥಾನ ಗಳಿಸಿದರು.

ಮುರುಘಾಶ್ರೀಗಳು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಸ್ಥಳಾಂತರ

0

ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಹೃದಯ ಸಂಬಂಧಿ ಕಾಯಿಲೆ ತಪಾಸಣೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ.

ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಮಹಾದೇವಿ ಎಂ.ಮರಕಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಸೋಮವಾರ ಪ್ರಕಟಿಸಿದರು. ಆರೋಪಿ ಯನ್ನು ಇಂದು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಪಡಿತರ ಸಮಸ್ಯೆಗೆ ಸ್ಪಂದಿಸದ ಸರ್ಕಾರದ ಬಗ್ಗೆ ಬೇಸತ್ತ ಪರಿಸರ ಪ್ರೇಮಿ ಆತ್ಮಹತ್ಯೆ

0

ಪರಿಸರ ಪ್ರೇಮಿ, ಸಾಲುಮರದ ವೀರಾಚಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 3 ಸಾವಿರ ಮರಗಳನ್ನ ವೀರಾಚಾರಿ ಬೆಳೆಸಿದ್ದರು.
ನಿತ್ಯ ಪರಿಸರ ಹಾಗೂ ಮರಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ಮಿಟ್ಲಕಟ್ಟೆಯಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ವೀರಾಚಾರಿ ಅವರು ಹೊರಾಟ ನಡೆಸುತ್ತಿದ್ದರು.
ಆದರೆ ನ್ಯಾಯ ಸಿಗಲಿಲ್ಲ ಎಂದು ಮನನೊಂದು ಮರಕ್ಕೆ ನೇಣಿಗೆ ಶರಣಾಗಿದ್ದಾರೆ.

ನಿಗದಿತ ಪಡಿತರ ಕೊಡದೆ ಕಡಿಮೆ ಕೊಡಲಾಗುತ್ತಿದೆ. ಜನರಿಗೆ ಮೋಸ ಮಾಡಲಾಗುತ್ತಿದೆ. ಈ ಅವ್ಯವಸ್ಥೆಯನ್ನ ಸರಿ ಪಡಿಸಬೇಕೆಂದು ಆಗ್ರಹಿಸಿ ಕಳೆದ ಎರಡು ವರ್ಷದಿಂದ ವೀರಾಚಾರಿ ಹೋರಾಟ ನಡೆಸುತ್ತಿದ್ದರು.

ಇತ್ತೀಚೆಗೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದರು. ಹೋರಾಟಕ್ಕೆ ನ್ಯಾಯ ಸಿಗಲಿಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಕ್ಲಿನಿಕ್ ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಣೆ- ಡಾ.ಸುಧಾಕರ್

0

ಆರೋಗ್ಯ ಸೇವೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಂತಹ ರಾಜ್ಯ ಸರ್ಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿತ್ತು. ಈ ನಮ್ಮ ಕ್ಲಿನಿಕ್ ಗಳನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿರುವಂತಹ ನಮ್ಮ ಕ್ಲಿನಿಕ್ ಕೇಂದ್ರಗಳನ್ನು ರಾಜ್ಯಾದ್ಯಂತ ಶೀಘ್ರದಲ್ಲೇ ಪ್ರಾರಂಭ ಮಾಡಲಾಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಇದರ ಸಾಧಕ-ಬಾಧಕಗಳನ್ನು ನೋಡಿಕೊಂಡು, ರಾಜ್ಯಾಧ್ಯಂತ ವಿಸ್ತರಣೆ ಮಾಡುವಂತ ಗುರಿಯನ್ನು ಹೊಂದಲಾಗಿದೆ ಎಂದಿದ್ದಾರೆ.

ಬೆಂಗಳೂರಿನ 243 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭವಾಗಲಿದೆ. ಇತರೆ ಜಿಲ್ಲೆಗಳಲ್ಲಿ 195 ಸೇರಿದಂತೆ ಒಟ್ಟು 438 ನಮ್ಮ ಕ್ಲಿನಿಕ್ ಗಳನ್ನು ಅಕ್ಟೋಬರ್ ಅಂತ್ಯದೊಳಗೆ ಸಂಪೂರ್ಣವಾಗಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತಿವೆ. ಈ ಕ್ಲಿನಿಕ್ ಗಳಲ್ಲಿ ಒಬ್ಬ ಡಾಕ್ಟರ್, ಒಬ್ಬ ನರ್ಸ್, ಒಬ್ಬ ಲ್ಯಾಬ್ ಟೆಕ್ನೀಷಿಯನ್ ಹಾಗೂ ಒಬ್ಬ ಡಿ ಗ್ರೂಪ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ತಪಾಸಣೆ ಬಳಿಕ, ಉಚಿತ ಔಷಧ ವಿತರಣೆ ಮಾಡಲಾಗುತ್ತಿದೆ.

ಈ ಕ್ಲಿನಿಕ್ ನಲ್ಲಿ ಬಾಣಂತಿಯರು, ಗರ್ಭಿಣಿಯರು, ನವಜಾತ ಶಿಶು, ಮಕ್ಕಳು, ಕುಟುಂಬ ಕಲ್ಯಾಣ ಯೋಜನೆ ಸೇರಿದಂತೆ 12 ಸೇವೆಗಳನ್ನು ನೀಡಲಾಗುವುದು. ಪ್ರತಿ ಕ್ಲಿನಿಕ್ ನಲ್ಲಿ ತಲಾ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಗ್ರೂಪ್ ಡಿ ಸಿಬ್ಬಂದಿ ಇರುತ್ತಾರೆ. ಪ್ರತಿ ಕ್ಲಿನಿಕ್ ಗೆ ಬಿಬಿಎಂಪಿಯಲ್ಲಿ 36.45 ಲಕ್ಷ ರೂ. ಇತರೆ ಜಿಲ್ಲೆಯಲ್ಲಿ 34.46 ಲಕ್ಷ ರೂ. ವರೆಗೆ ವೆಚ್ಚವಾಗಲಿದೆ ಎಂದರು.

ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಸರ್ಕಾರಿ ನೌಕರರೆಂದು ನೇಮಕಾತಿ

0

ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಾಜ್ಯದ ನಗರಸಭೆ, ಪುರಸಭೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸ್ತಿರುವ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಬಿಬಿಎಂಪಿಯ 3673 ನೌಕರರು, ನಗರಸಭೆ, ಪುರಸಭೆಗಳಲ್ಲಿ 5533 ಮತ್ತು ಮಹಾನಗರ ಪಾಲಿಕೆಗಳಲ್ಲಿನ 1927 ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಪೌರಕಾರ್ಮಿಕರು 17,000-28,980 ವೇತನ ಶ್ರೇಣಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.

ಮಂಗಳೂರಿನ ದಸರಾ ಶಾರದೆಗೆ ಚಿನ್ನದ ಜರಿ ಮೆರುಗು

0

ಈ ಬಾರಿ ದಸರಾ ಮಹೋತ್ಸವದಲ್ಲಿ ಮಂಗಳೂರಿನ ರಥಬೀದಿ ಶಾರದೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿ ಸೀರೆಯೊಂದಿಗೆ ಮಿಂಚಲಿದ್ದಾಳೆ. ಈ ಸೀರೆಯನ್ನು ವಾರಣಾಸಿ ಜ್ಞಾನವ್ಯಾಪಿ ದೇಗುಲ ಬಳಿಯ ಮುಸ್ಲಿಂ ಕುಟುಂಬವೊಂದು ಕಳೆದ 6 ತಿಂಗಳಿನಿಂದ ತಯಾರಿಸುತ್ತಿದೆ.

ಪ್ರತಿವರ್ಷ ಶಾರದೆಯ ಶೋಭಾಯಾತ್ರೆ ಸಂದರ್ಭ ಬೆಳ್ಳಿಯ ಜರಿಯಿರುವ ರೇಷ್ಮೆ ಸೀರೆಯನ್ನು ಶಾರದಾ ದೇವಿಗೆ ಉಡಿಸಲಾಗುತ್ತಿದ್ದು, ನಗರದ ದಾನಿಯೊಬ್ಬರು ಈ ಸೀರೆಯನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ವಾರಣಾಸಿ ಮುಸ್ಲಿಂ ಕುಟುಂಬವೇ ಈ ಸೀರೆಯನ್ನು ತಯಾರಿಸುತ್ತಿದ್ದು, ಈ ಬಾರಿ ಶಾರದೆಯ ಸೀರೆ ತಯಾರಿಸುವವರು ಆ ಕುಟುಂಬದ 5ನೇ ತಲೆಮಾರಿನವರಾಗಿದ್ದಾರೆ.

ಮಂಗಳೂರು ಶಾರದಾ ಮಹೋತ್ಸವದ ಶತಮಾನೋತ್ಸವದ ಈ ಪರ್ವಕಾಲದಲ್ಲಿ ಶಾರದಾ ಮಹೋತ್ಸವ ಸಮಿತಿ ಮತ್ತು ಭಕ್ತಾದಿಗಳು ಒಟ್ಟು ಸೇರಿ 200 ಪವನ್‌ ತೂಕದ ಸ್ವರ್ಣಾಭರಣಗಳನ್ನು ಸಮರ್ಪಿಸಲಿದ್ದಾರೆ. ಅದರಲ್ಲಿ ಶಾರದೆಗೆ ಚಿನ್ನದ ವೀಣೆ, ನವಿಲೂ ಸೇರಿದೆ. ಇದು ಮಾತ್ರವಲ್ಲದೆ ಶಾರದೆಗೆ ರಜತ ಬೆಳ್ಳಿ ದೀಪಗಳು ಸಮರ್ಪಣೆಯಾಗುತ್ತಿವೆ.

ಸಾರಿಗೆ ಇಲಾಖೆಯ 58 ಸೇವೆಗಳು ಮಧ್ಯವರ್ತಿಗಳಿಲ್ಲದೇಆನ್ ಲೈನ್ ಮೂಲಕ ಮನೆಬಾಗಿಲಿಗೆ

0

ಸಾರಿಗೆ ಇಲಾಖೆಯು ಒದಗಿಸುವ ಹಲವು ಸೇವೆಗಳನ್ನು ಈಗ ಸುಲಭವಾಗಿ ಮನೆಗಳಲ್ಲಿ ಇದ್ದೇ ಪಡೆದುಕೊಳ್ಳಬಹುದಾಗಿದೆ.
ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ಅಧಿಸೂಚನೆಯ ಪ್ರಕಾರ ಚಾಲನಾ ಪರವಾನಗಿ, ಕಂಡಕ್ಟರ್ ಲೈಸೆನ್ಸ್, ವಾಹನ ನೋಂದಣಿ, ಪರ್ಮಿಟ್, ಮಾಲೀಕತ್ವ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ 58 ನಾಗರಿಕ ಸೇವೆಗಳನ್ನು ಸಂಪೂರ್ಣವಾಗಿ ಆನ್​ಲೈನ್​ನಲ್ಲಿಯೇ ಪಡೆಯಬಹುದಾಗಿದೆ.

ಸಾರಿಗೆ ಇಲಾಖೆ ಕಚೇರಿಗಳಿಗೆ ಜನರು ಭೇಟಿ ನೀಡಲೇಬೇಕು ಎನ್ನುವ ಅನಿವಾರ್ಯತೆಗೆ ಈ ನಿಯಮಗಳು ರಿಯಾಯ್ತಿ ನೀಡಿವೆ.ಸಾರಿಗೆಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಒದಗಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರಿಗೆ ಸೇವೆಗಳನ್ನು ಕಾಂಟ್ಯಾಕ್ಟ್​ಲೆಸ್, ಫೇಸ್​ಲೆಸ್ ರೀತಿಯಲ್ಲಿ ಒದಗಿಸುವುದರಿಂದ ನಾಗರಿಕರ ಸಮಯವನ್ನು ಉಳಿಸುವಲ್ಲಿ ಮತ್ತು ಕಾಯುವಿಕೆಯ ಹೊರೆ ಕಡಿಮೆ ಮಾಡುವಲ್ಲಿ ಈ ಕ್ರಮಗಳು ನೆರವಾಗುತ್ತವೆ.

ಈ ಸುಧಾರಣೆಗಳಿಂದಾಗಿ ಆರ್​ಟಿಒ ಕಚೇರಿಗಳಲ್ಲಿ ಜನದಟ್ಟಣೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಇಲಾಖೆಯ ಕಾರ್ಯನಿರ್ವಹಣೆಯಲ್ಲಿ
ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಸಾರಿಗೆ ಇಲಾಖೆಯು ಈ ಸಂಬಂಧ ಸೆಪ್ಟೆಂಬರ್ 16ರಂದು ಅಧಿಸೂಚನೆ ಹೊರಡಿಸಿದೆ. ಈವರೆಗೆ 18 ನಾಗರಿಕ ಸೇವೆಗಳನ್ನು ಸಾರಿಗೆ ಇಲಾಖೆಯು ಆನ್​ಲೈನ್​ನಲ್ಲಿ ಒದಗಿಸುತ್ತಿತ್ತು. ಇದೀಗ ಈ ಸೇವೆಗಳ ಸಂಖ್ಯೆಯು 58ಕ್ಕೆ ಹೆಚ್ಚಾಗಲಿದೆ. ಈ ಎಲ್ಲ ಸೇವೆಗಳಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಿದೆ.

ಜನರು ಯಾವುದೇ ಮಧ್ಯವರ್ತಿಗಳ ಅಗತ್ಯ ಇಲ್ಲದಂತೆ ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಲರ್ನರ್ ಲೈಸೆನ್ಸ್​ (ಎಲ್​ಎಲ್​), ನಕಲಿ ಚಾಲನಾ ಪರವಾನಗಿ, ಚಾಲನಾ ಪರವಾನಗಿ ನವೀಕರಣಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಅಂತರರಾಷ್ಟ್ರೀಯ ಚಾಲನಾ ಪರವಾನಗಿ, ಕಂಡಕ್ಟರ್ ಪರವಾನಗಿಯಲ್ಲಿ ವಿಳಾಸದ ಬದಲಾವಣೆ, ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸೇರಿದಂತೆ ಹಲವು ಸೇವೆಗಳನ್ನು ಆಧಾರ್ ದೃಢೀಕರಣದ ಮೂಲಕ ಪಡೆದುಕೊಳ್ಳಬಹುದು.

ಸಾರಿಗೆಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಒದಗಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರಿಗೆ ಸೇವೆಗಳನ್ನು ಕಾಂಟ್ಯಾಕ್ಟ್​ಲೆಸ್, ಫೇಸ್​ಲೆಸ್ ರೀತಿಯಲ್ಲಿ ಒದಗಿಸುವುದರಿಂದ ನಾಗರಿಕರ ಸಮಯವನ್ನು ಉಳಿಸುವಲ್ಲಿ ಮತ್ತು ಕಾಯುವಿಕೆಯ ಹೊರೆ ಕಡಿಮೆ ಮಾಡುವಲ್ಲಿ ಈ ಕ್ರಮಗಳು ನೆರವಾಗುತ್ತವೆ. ಈ ಸುಧಾರಣೆಗಳಿಂದಾಗಿ ಆರ್​ಟಿಒ ಕಚೇರಿಗಳಲ್ಲಿ ಜನದಟ್ಟಣೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ ಎಂದು ಸಚಿವಾವಾಲಯ ತಿಳಿಸಿದೆ.