Monday, March 23, 2026
Monday, March 23, 2026
Home Blog Page 1430

ವಿಶ್ವ ಹಿರಿಯರ ದಿನಾಚರಣೆಗೆ ವಿವಿಧ ಸ್ಪರ್ಧೆಗಳ ಆಯೋಜನೆ

0

2022 ರ ಅಕ್ಟೋಬರ್ 1 ರಂದು ನಡೆಯಲಿರುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರೀಕರಿಗೆ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪಧೆಗಳನ್ನು ಸೆ.25 ರ ಭಾನುವಾರ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು 60 ವರ್ಷ ಮೇಲ್ಪಟ್ಟವರಾಗಿದ್ದು, ಆಧಾರ್ ಕಾರ್ಡ್ ಮತ್ತು ಹಿರಿಯ ನಾಗರಿಕರ ಗುರುತಿನ ಚೀಟಿಯೊಂದಿಗೆ ಸೆ.23 ರೊಳಗಾಗಿ ನಾಗರಿಕರ ಸಹಾಯವಾಣಿ ಕೇಂದ್ರ, ಡಿವೈಎಸ್‍ಪಿ ಕಚೇರಿ ಆವರಣ ಶಿವಮೊಗ್ಗ ಇಲ್ಲಿ ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ನೋಂದಣಿಗಾಗಿ ಯುವರಾಜ ಮೊಬೈಲ್ ಸಂಖ್ಯೆ 9632570371, ಚಂದ್ರು 9108984207, ದೂ.ಸಂ: 08182-260424 ನ್ನು ಸಂಪರ್ಕಿಸಬಹುದು.

ಕ್ರೀಡಾ ಸ್ಪರ್ಧೆಗಳು : ಪುರುಷರಿಗೆ 60 ರಿಂದ 69 ವರ್ಷದವರು, 70 ರಿಂದ 79 ವರ್ಷದವರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ನಡಿಗೆ, ರಿಂಗ್‍ನ್ನು ಬಕೆಟ್‍ನಲ್ಲಿ ಎಸೆಯುವುದು, ಮ್ಯೂಸಿಕಲ್ ಚೇರ್ಸ್ ಸ್ಪರ್ಧೆಯನ್ನು ಮತ್ತು ಮಹಿಳೆಯರಿಗೆ 60 ರಿಂದ 69 ವರ್ಷದವರು, 70 ರಿಂದ 79 ವರ್ಷದವರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ನಡಿಗೆ, ರಿಂಗ್‍ನ್ನು ಬಕೆಟ್‍ನಲ್ಲಿ ಎಸೆಯುವುದು, ಮ್ಯೂಸಿಕಲ್ ಚೇರ್ಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ

ಸಾಂಸ್ಕೃತಿಕ ಸ್ಪರ್ಧೆಗಳು : ಪುರುಷರಿಗೆ 60 ರಿಂದ 69 ವರ್ಷದವರು, 70 ರಿಂದ 79 ವರ್ಷದವರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಏಕಪಾತ್ರಾಭಿನಯ, ಗಾಯನ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳು ಮತ್ತು ಮಹಿಳೆಯರಿಗೆ 60 ರಿಂದ 69 ವರ್ಷದವರು, 70 ರಿಂದ 79 ವರ್ಷದವರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಏಕಪಾತ್ರಾಭಿನಯ, ಗಾಯನ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

72 ಗಂಟೆಯೊಳಗಡೆ ಬಡವರಿಗೆ ಪಿಂಚಣಿ ಮಂಜೂರು- ಸಚಿವ ಅಶೋಕ್

0

ಬಡವರಿಗೆ 72 ಗಂಟೆಯೊಳಗೆ ಪಿಂಚಣಿ ಮಂಜೂರು ಮಾಡಲಾಗುವುದು. ಫೋನ್ ನಲ್ಲಿ ಕೋರಿದರೂ ದಾಖಲೆ ಪಡೆದು ಪಿಂಚಣಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕರು ಪಿಂಚಣಿ ಕೋರಿದ 72 ಗಂಟೆ ಒಳಗೆ ಪಿಂಚಣಿ ಮಂಜೂರಾತಿ ಮಾಡುವ ವ್ಯವಸ್ಥೆ ತರಲಾಗಿದೆ.
ದೂರವಾಣಿ ಮೂಲಕ ಪಿಂಚಣಿ ಕೋರಿದರೂ ಆಧಾರ್ ಕಾರ್ಡ್ ಮತ್ತು ಮನೆಯ ಫೋಟೋ ದಾಖಲೆ ಪಡೆದು ಪಿಂಚಣಿ ನೀಡಲಾಗುವುದು ಎಂದು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ನ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈಗಾಗಲೇ ಮನೆ ಬಾಗಿಲಿಗೆ ಮಾಸಾಶನ ಅಭಿಯಾನ ಜಾರಿಗೊಳಿಸಲಾಗಿದೆ. ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಅರ್ಹ ಪಲಾನುಭವಿಗಳನ್ನು ಗುರುತಿಸಿ ನವೋದಯ ಆಪ್ ಮೂಲಕ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡುತ್ತಾರೆ.
ಕಂದಾಯ ಇಲಾಖೆಯ ಹಲೋ ಕಂದಾಯ ಸಚಿವರೇ ಟೋಲ್ ಫ್ರೀ ಸಹಾಯವಾಣಿ ಆರಂಭಿಸಿದ್ದು, ಈ ದೂರವಾಣಿಗೆ ಕರೆ ಮಾಡಿದರೆ ಸಹಾಯವಾಣಿಯ ಸಿಬ್ಬಂದಿ ವಿವರ ಪಡೆದು ಸಂಬಂಧಿಸಿದ ಗ್ರಾಮ ಲೆಕ್ಕಗರ ಮೊಬೈಲಿಗೆ ರವಾನಿಸುತ್ತಾರೆ.

ಗ್ರಾಮ ಲೆಕ್ಕಿಗರು 72 ಗಂಟೆಯೊಳಗೆ ಪರಿಶೀಲನೆ ನಡೆಸಿ ಪಿಂಚಣಿ ಮಂಜೂರಾತಿ ಆದೇಶ ನೀಡಲಿದ್ದು, ಫಲಾನುಭವಿಯ ಖಾತೆಗೆ ನೇರವಾಗಿ ಹಣ ತಲುಪುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಿನಿಮಾದ ಚಾರ್ಲಿ 777 ಈಗ ರಿಯಲ್ ಲೈಫ್ ಪರೋಪಕಾರಿ

0

ಪ್ರಾಣಿ ಪ್ರಿಯರ ನೆಚ್ಚಿನ ಸಿನಿಮಾ ಚಾರ್ಲಿ 777 ಸಿನಿಮಾ ಈಗಾಗಲೇ ಹೆಚ್ಚು ಜನಪ್ರಿಯತೆ ಗಳಿಸಿರುವ ಕನ್ನಡ ಸಿನಿಮಾವಾಗಿದೆ. ಈ ಸಿನಿಮಾ ದಲ್ಲಿ ಚಾರ್ಲಿ ಎಂಬ ಶ್ವಾನ ವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಚಿತ್ರವನ್ನು ಚಿತ್ರಿಸಲಾಗಿದೆ.

ಈ ಸಿನಿಮಾದಲ್ಲಿ ನಟಿಸಿರುವ 2 ಶ್ವಾನ ಗಳಿಗೆ ಸುಮಾರು 6ಕೋಟಿ ರೂಪಾಯಿ ಸಂದಾಯವಾಗಿದೆ. ಮತ್ತೊಂದು ವಿಶೇಷ ಎಂದರೆ ಆ ಹಣವನ್ನು ಗಾಯಗೊಂಡ ಪ್ರಾಣಿಗಳು ಮತ್ತು ಅನಾಥ ನಾಯಿಗಳ ರಕ್ಷಣೆಗೆ ಬಳಕೆಯಾಗಿದೆ.

ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಿನಿಮಾ ಯಶಸ್ವಿಯಾದಲ್ಲಿ ಅದರ ಲಾಭಾಂಶದ ಪಾಲನ್ನು ಈ ಶ್ವಾನ ಗಳಿಗೆ ಸಲ್ಲಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿತ್ತು.

ಅದೇ ರೀತಿ ಚಾರ್ಲಿ 777 ಸಿನಿಮಾ ಭರ್ಜರಿ ಜಯ ಗಳಿಸಿ ಸುಮಾರು 160 ಕೋಟಿ ರೂಪಾಯಿ ಲಾಭ ಗಳಿಸಿದೆ. ಸಿನಿಮಾದಲ್ಲಿ ನಟಿಸಿರುವ ಮೈಸೂರಿನ 2 ಶ್ವಾನಗಳ ಪಾಲು ಸುಮಾರು 6 ಕೋಟಿ ರೂಪಾಯಿಗಳು ವಿತರಕರು ಮತ್ತು ಚಿತ್ರ ತಂಡದ ಮುಖಾಂತರ ಈ ಮೊತ್ತ ಚಾರ್ಲಿ ಗಳಿಗೆ ತಲುಪಲಿದೆ. ಈ ಹಣವನ್ನು ಇತರ ಶ್ವಾನಗಳ ಆರೈಕೆ ಗೆ ಬಳಸಿಕೊಳ್ಳಲಾಗುತ್ತದೆ ಎಂದು ಚಿತ್ರತಂಡ ಹಾಗೂ ತರಬೇತಿ ದಾರರು ನಿರ್ಧರಿಸಿದ್ದಾರೆ.

ಮಾಧ್ಯಮ ವೊಂದಕ್ಕೆ ಮಾಹಿತಿ ನೀಡಿರುವ ಚಾರ್ಲಿ ಮತ್ತು ಮತ್ತೊಂದು ಶ್ವಾನದ ತರಬೇತುದಾರ ರಾದ ಮೈಸೂರಿನ ಪ್ರಮೋದ್ ಅವರು ಈ ಹಣವನ್ನು ಠೇವಣಿ ಇಡಲಾಗುತ್ತದೆ. ಇದರಿಂದ ಬಂದ ಆದಾಯವನ್ನು ದೇಶಾದ್ಯಂತ ಗಾಯಗೊಂಡ ಪ್ರಾಣಿ,ಪಕ್ಷಿ, ಹಾಗೂ ಬೀದಿ ನಾಯಿಗಳ ಸಂರಕ್ಷಣೆಗೆ ಶ್ರಮಿಸುವ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಡಿ.31ರೊಳಗೆ ಆಯುಷ್ಮಾನ್ ಭಾರತ್ ನೂತನ ಗುರುತಿನ ಚೀಟಿ ವಿತರಿಸಲು ಸೂಚನೆ

0

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯ ನೂತನ ಗುರುತಿನ ಚೀಟಿಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ಡಿಸೆಂಬರ್ 15 ರೊಳಗೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಯೋಜನೆಯಡಿ ಕಾರ್ಡ್ ವಿತರಣೆಯ ಮಧ್ಯಂತರ ಗುರಿಯಾಗಿ ಅ.2 ರೊಳಗೆ 1 ಕೋಟಿ ಗುರುತಿನ ಚೀಟಿ ಸಿದ್ದುಪಡಿಸಿ ವಿತರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಸಾರ್ವಜನಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಆಭರಣದಲ್ಲಿ ಗುರುತಿನ ಚೀಟಿ ಕೇಂದ್ರಗಳನ್ನು ಶೀಘ್ರವೇ ಸ್ಥಾಪಿಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬಿಎಂಟಿಸಿಗೆ ದಂಡ ವಿಧಿಸಿದ ವಿವಿಧ ಪ್ರಕರಣಗಳಿಂದ ₹4.62 ಲಕ್ಷ ಸಂಗ್ರಹ

0

ಬಿಎಂಟಿಸಿ ಬಸ್ ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಪ್ರಯಾಣಿಕರಿಂದ ಬಿಎಂಟಿಸಿ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ರೂಪಾಯಿ ದಂಡ ಕಟ್ಟಿಸಿಕೊಂಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಆಗಸ್ಟ್‌ನಲ್ಲಿ 2,744 ಪ್ರಯಾಣಿಕರಿಂದ 4.62 ಲಕ್ಷ ರೂಪಾಯಿಗಳನ್ನು ದಂಡದ ಮೂಲಕ ಸಂಗ್ರಹಿಸಿದೆ.

ನಗರದಾದ್ಯಂತ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರಿಗೂ ದಂಡ ಕಟ್ಟಿಸಿಕೊಂಡಿದೆ. 119 ಪುರುಷ ಪ್ರಯಾಣಿಕರಿಗೆ ಮಹಿಳೆರ ರಿಸರ್ವ್ ಸೀಟ್ ಬಳಕೆ ಮಾಡಿದಕ್ಕಾಗಿ 11,900 ರೂಪಾಯಿಗಳನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 177 ಹಾಗೂ 94ರ ಪ್ರಕಾರ ದಂಡ ವಿಧಿಸಲಾಗಿದೆ.

2,625 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ಒಟ್ಟು 4.50 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ. ಟಿಕೆಟ್ ರಹಿತ ಪ್ರಯಾಣಿಕರು ಸಂಚಾರ ಮಾಡುತ್ತಿದ್ದ ಬಸ್‍ಗಳಲ್ಲಿಕರ್ತವ್ಯ ನಿರ್ಲಕ್ಷ್ಯ ಆಧಾರದ ಮೇಲೆ ನಿರ್ವಾಹಕರಗಳ ವಿರುದ್ಧವು ಕೂಡ 1,430 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಜಮ್ಮು ಕಾಶ್ಮೀರದ ಬೊಟಿಂಗೊದಲ್ಲಿ ಈರ್ವರು ಭಯೋತ್ಪಾದಕರ ಬಂಧನ

0

ಜಮ್ಮು ಕಾಶ್ಮೀರದ ಬೊಟಿಂಗೂ ಗ್ರಾಮದಲ್ಲಿ ಲಷ್ಕರ್-ಎ-ತೈಬಾ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕನನ್ನು ಪೊಲೀಸರು ಹಾಗೂ ಸಿಆರ್‌ಪಿಎಫ್‌ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಜಿಲ್ಲೆಯ ಬೊಟಿಂಗೂ ಗ್ರಾಮದಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಹಾಗೂ ಸಿಆರ್‌ಪಿಎಫ್ ನೇತೃತ್ವದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಎಲ್‌ಇಟಿ ಸಂಘಟನೆಯ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಭಯೋತ್ಪಾದಕರ ಚಲನವಲನದ ಖಚಿತ ಮಾಹಿತಿ ಆಧಾರದ ಮೇಲೆ ಸೋಪೋರೆ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಜಂಟಿ ಕಾರ್ಯಾಚರಣೆ ನಡೆಸಿದೆ. ಇಮ್ತಿಯಾಜ್ ಅಹ್ಮದ್ ಗನಿ ಮತ್ತು ವಸೀಮ್ ಅಹ್ಮದ್ ಲೋನ್ ಎಂಬ ಇಬ್ಬರು ಎಲ್‌ಇಟಿ ಸಂಘಟನೆಯ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್, 8 ಪಿಸ್ತೂಲ್ ಸುತ್ತುಗಳು, ಒಂದು ಚೀನಾದ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ಷುಲ್ಲಕ ವಿಷಯ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ₹ 5 ಲಕ್ಷ ದಂಡ

0

ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪ್ರಶ್ನಿಸಿ ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಮೂಲದ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್‌ ಬರೋಬ್ಬರಿ 5 ಲಕ್ಷ ರೂ. ದಂಡ ಹಾಕಿದೆ.

ಅರ್ಜಿದಾರರು ಸತ್ಯಾಂಶವನ್ನು ಬಚ್ಚಿಟ್ಟು, ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುವ ಮಾಡಿದ್ದಲ್ಲದೆ, ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಇದನ್ನು ಸರ್ವತಃ ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರಯತ್ನಗಳನ್ನು ನಿರ್ದಾಕ್ಷಿಣ್ಯವಾಗಿ ಮತ್ತು ಕಠೀಣಾತಿ ಕಠಿಣ ರೀತಿಯಲ್ಲಿ ಹತ್ತಿಕ್ಕಲಾಗುವುದು ಎಂದು ಹೈಕೋರ್ಟ್‌ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ನಿವಾಸಿ ಪಿ. ಮೋಹನ್‌ ಚಂದ್ರ ದಂಡ ಹಾಕಿಸಿಕೊಂಡ ವ್ಯಕ್ತಿ. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೋಹನ್‌ ಚಂದ್ರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ. ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿದಾರರಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಅರ್ಜಿದಾರರು 5 ಲಕ್ಷ ರೂ. ದಂಡದ ಮೊತ್ತವನ್ನು 2 ತಿಂಗಳಲ್ಲಿ ಬೆಂಗಳೂರು ವಕೀಲರ ಸಂಘಕ್ಕೆ ಪಾವತಿಸಬೇಕು ಎಂದು ಕೋರ್ಟ್‌ ಆದೇಶಿಸಿದೆ. ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಅರ್ಜಿದಾರರರು ಸ್ವಲ್ಪ ಸಮಯಾವಕಾಶ ಕೋರಿದರು. ಆದರೆ ವಿಭಾಗೀಯ ನ್ಯಾಯಪೀಠ ಆ ಮನವಿಯನ್ನೂ ಸಹ ತಿರಸ್ಕರಿಸಿದೆ.

ಅರ್ಜಿದಾರರು ಮೂಲತಃ ವಕೀಲರಾಗಿದ್ದರೂ ಪಾರ್ಟಿ ಇನ್‌ ಪರ್ಸನ್‌ ಎಂದು ಹೇಳಿಕೊಂಡು ಸಹ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಆ ಮೂಲಕ ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಾರೆ. ನ್ಯಾಯಾಲಯಗಳು ದೇವಾಲಯಗಳಿದ್ಧಂತೆ, ಜನರಿಗೆ ಇಂದಿಗೂ ನಂಬಿಕೆ ಉಳಿದಿರುವುದು ಕೋರ್ಟ್‌ಗಳಲ್ಲಿ ಮಾತ್ರ. ಎಲ್ಲ ಕಡೆ ಸೋತ ಜನರು ಕೊನೆಗೆ ನ್ಯಾಯ ಅರಸಿ ಬರುವುದು ಕೋರ್ಟ್‌ಗೆ, ಅಂತಹ ನ್ಯಾಯಾಂಗದಲ್ಲಿ ಬಿರುಕು ಮೂಡಲು ಬಿಡುವುದಿಲ್ಲ’. ಹಾಗೆ ಬಿಟ್ಟರೆ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸ ಕಳೆದುಹೋಗಲಿದೆ’ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ನ್ಯಾಯಾಧೀಶರು ಇಂತಹ ಪ್ರಕರಣಗಳನ್ನು ನೋಡಿಕೊಂಡು ಸುಮ್ಮನೆ ಕೂರಲಾಗದು. ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತರಲು ಯಾರಿಗೂ ಬಿಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳು ಹೆಚ್ಚುತ್ತಿವೆ. ಇಂತಹ ಪ್ರವೃತ್ತಿಯನ್ನು ಹತ್ತಿಕ್ಕಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸದೃಢ ಹಾಗೂ ಸಮರ್ಥ ದೇಶ ನಿರ್ಮಿಸೋಣ-ಬೊಮ್ಮಾಯಿ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ವಿಶ್ವ ಶಾಂತಿ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ತಮ್ಮ ಟ್ವಿಟ್ಟರ್ ಅಕೌಂಟಿನಲ್ಲಿ,
ಇಂದು ವಿಶ್ವ ಶಾಂತಿ ದಿನ. ಪ್ರೀತಿ, ಶಾಂತಿ ಮತ್ತು ಸೌಹಾರ್ದಯುತವಾಗಿ ಬದುಕುವ ಮೂಲಕ ಉತ್ತಮ ವಾತಾವರಣವನ್ನು ನಿರ್ಮಿಸೋಣ. ಈ ಮೂಲಕ ಸದೃಢ ಹಾಗೂ ಸಮರ್ಥ ದೇಶವನ್ನು ನಿರ್ಮಿಸುವ ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಿಳಿಸಿದ್ದಾರೆ.

ಯುದ್ಧದ ಸಮಯವಲ್ಲ ಎಂದ ಮೋದೀಜಿ ಮಾತಿಗೆಸೈ ಎಂದ ಫ್ರಾನ್ಸ್ ಅಧ್ಯಕ್ಷ

0

ಇದು ಯುದ್ಧದ ಸಮಯವಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ತಿಳಿಸಿದ್ದಾರೆ.

ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಮ್ಯಾಕ್ರೋನ್ ಅವರು ಮೋದಿ ಅವರನ್ನು ಶ್ಲಾಘಿಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದು ಯುದ್ಧದ ಸಮಯವಲ್ಲ ಎಂದು ಹೇಳಿದ್ದು ಸರಿಯಾಗಿದೆ. ಇದು ಪಶ್ಚಿಮದ ದೇಶಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಅಥವಾ ಪೂರ್ವದದೇಶಗಳ ವಿರುದ್ಧ ಪಶ್ಚಿಮವನ್ನು ಎತ್ತಿಕಟ್ಟುವುದಕ್ಕಾಗಲೀ ಅಲ್ಲ. ಇದು ನಮ್ಮ ವಿಶ್ವದ ಎಲ್ಲ ದೇಶಗಳಿಗೆ ಅನ್ವಯಿಸುವ ಸಮಾನ ಸಂಗತಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದರು.

ಕಳೆದ ವಾರ ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಮೋದಿ ಅವರು ಪುಟಿನ್‌ಗೆ ಇದು ಯುದ್ಧದ ಸಮಯವಲ್ಲ. ಉಕ್ರೇನ್ ಜೊತೆಗಿನ ಸಂಘರ್ಷ ಕೊನೆಗೊಳಿಸಿ ಎಂದಿದ್ದರು.

ಇದೇ ಹೇಳಿಕೆಯನ್ನು ಉಲ್ಲೇಖಿಸಿ ಇದೇ ಮ್ಯಾಕ್ರೋನ್ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಉಗ್ರರ ಅಡಗುದಾಣವಾಗುತ್ತಿದೆಯೆ?

0

ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿರುವ ಆರೋಪ ಹಿನ್ನೆಲೆ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡವು ಇಬ್ಬರನ್ನು ಬಂಧಿಸಿದೆ.

ಮಂಗಳೂರಿನ 22 ವರ್ಷದ ಮಾಜ್ ಮುನೀರ್‌ ಅಹಮ್ಮದ್‌ ಮತ್ತು ಸಯ್ಯದ್‌ ಯಾಸೀನ್‌ ಬಂಧಿತ ಯುವಕರು.

ಮತ್ತೋರ್ವನಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನುಬಾಹಿರ ಚಟುವಟಿಕೆಗಳು ಕಾಯಿದೆಯಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾಜ್ ಮುನೀರ್‌ ಅಹಮ್ಮದ್‌ ಮತ್ತು ಸಯ್ಯದ್‌ ಯಾಸೀನ್‍ರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತ ಮಾಜ್ ಗೋಡೆ ಬರಹದ ಆರೋಪಿಯಾಗಿದ್ದ. ಈತ ಕಾಣೆಯಾಗಿರೋ ಬಗ್ಗೆ ಸೋಮವಾರ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಜನತೆಗೆ ಈ ರೀತಿಯ ಉಗ್ರರ ಚಟುವಟಿಕೆಗಳ ಸುದ್ದಿ
ಭಯಭೀತರನ್ನಾಗಿಸಿದೆ. ಒಂದಿಲ್ಲೊಂದು ಹಿಂಸಾಕೃತ್ಯಗಳನ್ನ ಕಂಡಿರುವ ಸಾರ್ವಜನಿಕರಲ್ಲಿ
ಮೂಡುತ್ತಿರುವ ಪ್ರಶ್ನೆ.
ಶಿವಮೊಗ್ಗ ಉಗ್ರರ ಅಡಗುದಾಣವಾಗುತ್ತಿದೆಯೆ?