Monday, March 23, 2026
Monday, March 23, 2026
Home Blog Page 1427

ಉನ್ನತ ಸಮಿತಿ ಸೂಚನೆ ಪಾಲಿಸಿ ಸಿಇಟಿ ಬಿಕ್ಕಟ್ಟು ಶಮನ- ಹೈಕೋರ್ಟ್

0

ವೃತ್ತಿ ಪರ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತಂತೆ ಉಂಟಾಗಿದ್ದ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿದಿದೆ. ಸಿಇಟಿ ರ್ಯಾಂಕಿಂಗ್ ವಾದಕ್ಕೆ ಸಂಬಂಧ ಸರ್ಕಾರ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇತ್ಯರ್ಥ ಪಡಿಸಿದೆ. ಇದರಿಂದಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ದೊರಕಲಿದೆ.

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯ ಸಮಿತಿ ಸೂಚಿಸಿರುವ ವಿಧಾನ ಅಳವಡಿಸಕೊಂಡು ಸಿಇಟಿ ರ್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.

ಸಮಿತಿ ಸೂಚಿಸಿರುವ ವಿಧಾನಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರೂ ಸಮ್ಮತಿಸಿದ ಹಿನ್ನೆಲೆಯಲ್ಲಿ, ಸಮಿತಿ ಸೂಚಿಸಿರುವ ವಿಧಾನ ಅಳವಡಿಸಿಕೊಂಡು, ಹೊಸ ರ್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ ಮೇಲ್ಮನವಿ ಇತ್ಯರ್ಥಪಡಿಸಿದೆ.

ಕೃಷಿ & ತೋಟಗಾರಿಕಾ ವಿವಿ ಘಟಿಕೋತ್ಸವಕ್ಕೆರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 10 ನೇ ಸಂಸ್ಥಾಪನಾ ದಿನಾಚರಣೆಯನ್ನು ಸೆ. 26 ರಂದು ಆಯೋಜಿಸಲಾಗಿದೆ ಎಂದು ವಿವಿ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ತಿಳಿಸಿದರು.

 ನವುಲೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು,  ಹತ್ತನೆಯ ಸಂಸ್ಥಾಪನಾ ದಿನಾಚರಣೆ  ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರಸ್ವಾಮಿಗಳು ವಹಿಸುವರು. ಸಂಸದರಾದ ಬಿ.ವೈ.ರಾಘವೇಂದ್ರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಹೆಚ್.ಹಾಲಪ್ಪ ಇವರು ಪಾಲ್ಗೊಂಡು ಪ್ರಶಸ್ತಿ ವಿತರಣೆ ಮಾಡುವರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸುವರು. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು ಮತ್ತು ಅಧಿಕಾರಿ ವರ್ಗದವರು ಭಾಗವಹಿಸುವರು.

  ಅಂದು ನಮ್ಮ ವಿಶ್ವವಿದ್ಯಾಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೌಕರರನ್ನು ಗುರುತಿಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಸಂಶೋಧಕ ಪ್ರಶಸ್ತಿ, ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ, ಅತ್ಯುತ್ತಮ ಕ್ಷೇತ್ರ ಅಧೀಕ್ಷಕ ಪ್ರಶಸ್ತಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ (ಎ ಬಿ ಸಿ ಮತ್ತು ಡಿ), ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಕೈಗೊಳ್ಳಲು ಬಾಹ್ಯ ಸಂಸ್ಥೆಗಳ ಅನುದಾನ ಪಡೆದವರಿಗೆ ಪ್ರಶಂಸನಾ ಪತ್ರ, ಅತ್ಯುತ್ತಮ ಸಂಶೋಧನಾ ಪ್ರಬಂಧ ರಚನೆ ಮಾಡಿದ ವಿಜ್ಞಾನಿಗಳಿಗೆ ಪ್ರಶಸ್ತಿ/ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು ಎಂದರು.


 ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಏಳನೆಯ ಘಟಿಕೋತ್ಸವವನ್ನು ಸೆ. 28 ರಂದು ಬೆಳಿಗ್ಗೆ 11 ಗಂಟೆಗೆ  ಇರುವಕ್ಕಿ ಮುಖ್ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್  ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ಪದವಿ ಪ್ರದಾನ  ಮಾಡಿ ಮಾತನಾಡುವರು ಎಂದರು.

ಕೃಷಿ ಸಚಿವ ಮತ್ತು ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಬಿ.ಸಿ. ಪಾಟೀಲ್ ಘಟಿಕೋತ್ಸವ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ಟ್ರಸ್ಟ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಅಧ್ಯಕ್ಷರು ಮತ್ತು ಹರಿಯಾಣದ ರೈತರ ಆಯೋಗದ ಅಧ್ಯಕ್ಷ ಡಾ. ಆರ್. ಎಸ್. ಪರೋಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಏಳನೆಯ ಘಟಿಕೋತ್ಸವ ಭಾಷಣವನ್ನು ಮಾಡುವರು ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ 355 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 79 ಎಂ.ಎಸ್ಸಿ ಪದವಿ, 10 ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ 7 ಬಿ.ಎಸ್ಸಿ ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕಗಳು, 13 ಎಂ.ಎಸ್ಸಿ ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕಗಳು ಮತ್ತು 4 ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕಗಳು ಸೇರಿ ಒಟ್ಟಾರೆ 33 ಚಿನ್ನದ ಪದಕಗಳನ್ನು 24 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುತ್ತದೆ.

2020-21 ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಐಸಿಎಆರ್-ಜೆಆರ್‌ಎಫ್ ಪರೀಕ್ಷೆಯಲ್ಲಿ ನಮ್ಮ ವಿವಿ ಯ ಒಟ್ಟು 14ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ. ಹಾಗೂ ಅಖಿಲ ಭಾರತ ಐಸಿಎಆರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ೨ ವಿದ್ಯಾರ್ಥಿಗಳು ಎಸ್‌ಆರ್‌ಎಫ್ ಗಳಾಗಿ ಆಯ್ಕೆಯಾಗಿದ್ದಾರೆ.

15 ವಿದ್ಯಾರ್ಥಿಗಳು ಎನ್‌ಟಿಎಸ್(ಸ್ನಾತಕೋತ್ತರ) ಪ್ರವೇಶ ಪಡೆದುಕೊಂಡಿದ್ದಾರೆ.
ಐಸಿಎಆರ್ ವತಿಯಿಂದ ಮಂಜೂರಾಗಿ ಅನುಷ್ಟಾನಗೊಂಡಿರುವ 3 ಅನುಭವ ಕಲಿಕೆ ಯೋಜನೆಗಳಾದ ಬೀಜೋತ್ಪಾದನೆ ತಂತ್ರಜ್ಞಾನ, ಜೈವಿಕ ಶಿಲೀಂದ್ರನಾಶಕಗಳು, ಪುಷ್ಪಕೃಷಿಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗಿದೆ. ವಿವಿಧ ಸ್ಪರ್ಧೆಗಳು, ಕ್ರೀಡಾಕೂಟದಲ್ಲಿ ನಮ್ಮ ವಿವಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸುಮಾರು 525.63 ಲಕ್ಷ ಅನುದಾನ ದೊರೆತಿದ್ದು 32 ಯೋಜನೆಗಳು ಅನುಷ್ಟಾನಗೊಳ್ಳಲಿವೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಇರುವಕ್ಕಿಯಲ್ಲಿ ಅನಾನಸ್ ಹಾಗೂ ಇತರ ಹಣ್ಣುಗಳು ಮತ್ತು ಶುಂಠಿಯನ್ನು ಸಂಸ್ಕರಣೆ ಮಾಡಿ ಅಭಿವೃದ್ದಿಪಡಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಬೀಜ ಘಟಕದಿಂದ ಎಲ್ಲಾ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ ಬೀಜೋತ್ಪಾದನೆ ಮತ್ತು ಸಸ್ಯೋತ್ಪಾದನೆ ಕಾರ್ಯಕ್ರಮಗಳ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.


ಶಿಲೀಂದ್ರ ರೋಗ ನಿಯಂತ್ರಣ, ಆದಾಯಕ್ಕೆ ಪೂರಕವಾದ ಅಡಿಕೆ ಪರ್ಯಾಯ ಬೆಳೆ ಪದ್ದತಿ ಸೇರಿದಂತೆ ಅನೇಕ ಪ್ರಯೋಗ ಮತ್ತು ಸಂಶೋಧನೆಗಳ ಮುಖಾಂತರ ಕೃಷಿಕರ ಬದುಕನ್ನು ಹಸನುಗೊಳಿಸುವಂತಹ ಹಾಗೂ ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನ ಅಭಿವೃದ್ದಿಪಡಿಸಿ ಕೃಷಿಕರ ಸರ್ವತೋಮುಖ ಅಭಿವೃದ್ದಿಗಾಗಿ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿವಿ ಕುಲಸಚಿವರಾದ ಡಾ.ಲೋಕೇಶ್ ಉಪಸ್ಥಿತರಿದ್ದರು.

ಮೈಸೂರು ಮಾಹಿತಿ

0

ಚಾಮುಂಡಿ ಬೆಟ್ಟ :
ಪ್ರಸ್ತುತ ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಕ್ರಮೇಣ ನಗರ ಬೆಟ್ಟದ ಸುತ್ತ ಹರಡಿಕೊಳ್ಳುತ್ತಿದ್ದಂತೆ ಮೈಸೂರು ನಗರದ ಮದ್ಯ ಭಾಗದಲ್ಲಿದ್ದಂತೆ ಭಾಸವಾಗುತ್ತಿದೆ.


ಮೈಸೂರಿನ ಆಗ್ನೇಯಕ್ಕೆ ಪೂರ್ವಪಶ್ಚಿಮವಾಗಿ ಹಬ್ಬಿಕೊಂಡಿರುವ ಈ ಬೆಟ್ಟ ಸುಮಾರು 1073 ಮೀಟರ್ ಎತ್ತರವಿದೆ . ಬೆಟ್ಟದಸುತ್ತಲೂ ದಟ್ಟವಲ್ಲದಿದ್ದರೂ ಅರೆ ಅರಣ್ಯ ಪ್ರದೇಶವಿದೆ .ಈ ಅರಣ್ಯ ವನ್ನು ಚಾಮುಂಡೇಶ್ವರಿ ರಕ್ಷಿತಾರಣ್ಯ ಪ್ರದೇಶವಾಗಿ ಪರಿಗಣಿಸಲಾಗಿದ್ದು ಅನೇಕ ವನ್ಯ ಜೀವಿಗಳಿಗೆ ಆಶ್ರಯ ತಾಣವಾಗಿದೆ . ವಿಶಿಷ್ಟವಾಗಿ ಚಿರತೆ ಗಳು ಹಾಗೂ ವಿಷಯುಕ್ತ ಹಾವುಗಳು ಹೇರಳ ಎಂಬ ವದಂತಿ ಪ್ರಚಲಿತ ವಾಗಿದೆ .


ಪುರಾಣ ಪ್ರಸಿದ್ದವಾದ ಈ ಬೆಟ್ಟ ಪ್ರದೇಶ ಮಹಿಷಾಸುರ ಎಂಬ ಬಲಿಷ್ಠ ರಾಕ್ಷಸ ರಾಜ ನ ಆಳ್ವಿಕೆಗೆ ಒಳಪಟ್ಟಿತ್ತು . ಅವನ ದಬ್ಬಾಳಿಕೆ , ದೌರ್ಜನ್ಯ, ಉಪಟಳ ಕ್ಕೆ ಇತಿಶ್ರೀ ಹಾಡಲು ಶಕ್ತಿ ದೇವತೆ ಚಾಮುಂಡಿಯ ಅವತಾರ ತಾಳಿ ಉಗ್ರ ಯುದ್ಧ ಮಾಡಿ ಮಹಿಷಾಸುರನನ್ನು ಕೊಂದು ಜನರನ್ನು ರಕ್ಷಿಸಿ ದಳೆಂಬುದು ಪುರಾಣ ಪ್ರತೀತ. ಹಾಗಾಗಿ ಈ ಬೆಟ್ಟ ಚಾಮುಂಡಿ ಬೆಟ್ಟವೆಂದು ಪ್ರಸಿದ್ಧವಾಯಿತು . ಚಾಮುಂಡೇಶ್ವರಿ ಆರಾಧನೆಗೆ ಚಾಮುಂಡೇಶ್ವರಿ ದೇವಸ್ಥಾನವು ಸಹ ನಿರ್ಮಾಣಗೊಂಡಿತು.


ಇದಕ್ಕೂ ಪೂರ್ವ ಈ ಬೆಟ್ಟವನ್ನು ಮಹಾಬಲಚಲ”ವೆಂದು ಕರೆಯುತ್ತಿದ್ದರು . ಬೆಟ್ಟದ ಮೇಲೆ ಮಹಾಬಲೇಶ್ವರ ದೇವಸ್ಥಾನವಿದೆ .ಈ ದೇವಸ್ಥಾನ 10 ನೇ ಶತಮಾನದ ಪೂರ್ವದಲ್ಲೇ ನಿರ್ಮಾಣ ಗೊಂಡಿದ್ದು ಪುಣ್ಯ ಕ್ಷೇತ್ರವೆಂದು ಪರಿಗಣಿಸ ಲಾಗಿರುವುದಕ್ಕೆ ಹಾಗೂ 1128 ರಲ್ಲಿ ದತ್ತಿ ನೀಡಿರುವುದರ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ .


ಈ ಬೆಟ್ಟದಮೇಲೆ ಹೋಗಲು ಸುಮಾರು 1008 ಕಲ್ಲಿನ ಮೆಟ್ಟಲುಗಳಿವೆ . ಶಿವನ ವಾಹನ ನಂದಿ , ,ಮಹಿಷಾಸುರನ ಮೂರ್ತಿಗಳನ್ನೂ ಸಹ ಸ್ಥಾಪಿಸಲಾಗಿದೆ . 3000 ಅಡಿ ಎತ್ತರವಿರುವ ಬೆಟ್ಟದ ಮೇಲ್ನಿಂತು ಮೈಸೂರು ನಗರದ ಸುಂದರ ವಿಹಂಗಮ ನೋಟ ವನ್ನು ವೀಕ್ಷಿಸುವುದೇ ಒಂದು ಸಂಭ್ರಮ .
ಚಾಮುಂಡಿಬೆಟ್ಟ ಮೈಸೂರಿನ ಪ್ರಮುಖ

ಯಾತ್ರಾಸ್ಥಳ ಮತ್ತು ಪ್ರಮುಖ ಆಕರ್ಷಣೆ .

ಲೇ: ಎಂ ತುಳಸಿರಾಂ .

ಎನ್ಎಸ್ಎಸ್ ನಿಂದ ದೇಶಪ್ರೇಮಿಗಳಾಗಿ-ಡಾ.ಗಿರಿಧರ್

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡು ದೇಶಪ್ರೇಮಿಗಳಾಗಿ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಎಂ ಬಿ ಎ ವಿಭಾಗದ ಮುಖ್ಯಸ್ಥರಾದ ಡಾ. ಗಿರಿಧರ್ ಕೆ.ವಿ ನುಡಿದರು.


ಅವರು ಇಂದು ಬೆಳಿಗ್ಗೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಹಾಲಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಶಕ್ತಿಯಿಂದ ದೇಶವನ್ನು ಉತ್ತಮ ಹಾದಿಯಲ್ಲಿ ನಿರ್ಮಾಣ ಮಾಡಬಹುದು ಯುವಶಕ್ತಿ ದೇಶದ ಆಸ್ತಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.


ರಾಷ್ಟ್ರೀಯ ಸೇವಾ ಯೋಜನೆ ನಮ್ಮ ವಿದ್ಯಾಭ್ಯಾಸದ ಜೊತೆಗೆ ನಮ್ಮನ್ನು ಸೃಜನಶೀಲರನ್ನಾಗಿಸುವುದರ ಜೊತೆಯಲ್ಲಿ ದೈಹಿಕವಾಗಿ ಮಾನಸಿಕವಾಗಿ ಸದೃಢನಾಗಿಸುವುದು, ಪರಸ್ಪರ ಓಡನಾಟ ಹೆಚ್ಚುವುದು ಮತ್ತು ಜೊತೆಗೆ ಗ್ರಾಮೀಣ ಬದುಕಿನ ಪರಿಚಯವಾಗುತ್ತದೆ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ
ಜಿ ವಿಜಯ್ ಕುಮಾರ್ ರವರು ಮಾತನಾಡುತ್ತಾ
ರಾಷ್ಟ್ರೀಯ ಸೇವಾ ಯೋಜನೆಯೆಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಪ್ರಪಂಚಜ್ಞಾನ ವೃದ್ಧಿಯಾಗುವುದು ಜೊತೆಗೆ ಸೇವಾ ಮನೋಭಾವನೆಗೆ ಹಾಗೂ ಮನುಕುಲದ ಸೇವೆಯಲ್ಲಿ ನಮ್ಮನ್ನು ನಾವು ಹೇಗೆ ತೊಡಗಿಸಿಕೊಳ್ಳಬಹುದೆಂದು ತಿಳಿಯುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪ್ರೊ. ಹೆಚ್ ಎಮ್ ಸುರೇಶ್ ಪ್ರಾಂಶುಪಾಲರು ಆಚಾರ್ಯ ತುಳಿಸಿ ವಾಣಿಜ್ಯ ಕಾಲೇಜು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿ ಗ್ರಾಮೀಣ ಬದುಕಿನ ಪರಿಸ್ಥಿತಿಗಳು ಹಾಗೂ ಸೇವೆಗಳನ್ನು ಮಾಡಲು ಒಳ್ಳೆಯ ಅವಕಾಶವಾಗಿದೆ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ದಿನಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ನಾಯಕನಾಗುವ ಗುಣಗಳು ಬೆಳೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಿಗೆ ಹಾಗೂ ಎನ್ ಎಸ್ ಎಸ್ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ
ಪ್ರೊ ಕೆ ಎಮ್ ನಾಗರಾಜ್, ಪ್ರೊ ಖಾಜಿಮ್ ಶೆರಿಫ್,
ಪ್ರೊ ಎಸ್ ಜಗದೀಶ್, ಪ್ರೊ ಎನ್ ಮಂಜುನಾಥ್
ಹಾಗೂ ಉಪನ್ಯಾಸಕರು ಸಿಬ್ಬಂದಿಗಳು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶೇಡ್ಗಾರಿನಲ್ಲಿ ಪೋಷಣ್ ಅಭಿಯಾನ

ಇಂದು ( 23-09-2022) ರಂದು ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ, ಶೇಡ್ಗಾರ್, ಕಟ್ಟೆಹಕ್ಕಲು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶೇಡ್ಗಾರ್ ಶಾಲೆಯ SDMC ಅಧ್ಯಕ್ಷರಾದ ಶ್ರೀ ಗುರುಮೂರ್ತಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ನಿರ್ದೇಶಕರಾದ ಶ್ರೀ ಕೆ.ಸಿ. ಬಸವರಾಜ್ ರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಶ್ರೀಮತಿ ಕಲಾವತಿ ಹೆಚ್. ಎಮ್. , ಹಾಗೂ ಶಿಕ್ಷಕ ವೃಂದದವರು, ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಗಳಾದ ಶ್ರೀಮತಿ ಅರ್. ವನಿತಾ , ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ನ ಸಂಯೋಜಕಿ

ಶ್ರೀಮತಿ ವಿಜಯಲಕ್ಷ್ಮಿ, ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಕ್ಕಳು ಪ್ರಾತ್ಯಕ್ಷಿಕೆ ಮೂಲಕ ತಾವೇ ತಯಾರಿಸಿ ತಂದಿದ್ದ ಪೌಷ್ಟಿಕ ಆಹಾರವನ್ನು ಪ್ರದರ್ಶಿಸಿ ಪೌಷ್ಟಿಕ ಅಂಶಗಳ ಬಗ್ಗೆ ವಿವರಿಸಿದರು.

ವಸುಧೈವ ಕುಟುಂಬಕಂ ತತ್ವಾಧಾರಿತ ಭಾರತೀಯತೆ ನಮ್ಮದು- ಭಾಗವತ್

0

ರಾಷ್ಟ್ರೀಯತೆಯ ಭಾರತೀಯ ಪರಿಕಲ್ಪನೆ ವಸುದೈವ ಕುಟುಂಬಕಂ ಎಂಬ ತತ್ವವನ್ನು ಮುಂದುವರಿಸುವಂಥದ್ದು. ಇದರಿಂದ ಯಾವ ದೇಶಕ್ಕೂ ಅಪಾಯ ಇಲ್ಲ. ಆದ್ದರಿಂದ ಭಾರತದಲ್ಲಿ ಹಿಟ್ಲರ್ ಆಗಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ದೆಹಲಿಯಲ್ಲಿ ಮಾಜಿ ಅಧಿಕಾರಿಗಳ ಸಂಘಟನೆಯಾದ ಸಂಕಲ್ಪ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ರಾಷ್ಟ್ರೀಯತೆ ಇತರ ಯಾರಿಗೂ ಅಪಾಯಕಾರಿಯಾಗುವುದಿಲ್ಲ. ಅದು ನಮ್ಮ ಸ್ವಭಾವವೂ ಅಲ್ಲ. ಇಡೀ ವಿಶ್ವ ಒಂದು ಕುಟುಂಬ (ವಸುದೈವ ಕುಟುಂಬಕಂ) ಎಂದು ನಮ್ಮ ರಾಷ್ಟ್ರೀಯತೆ ಪ್ರತಿಪಾದಿಸುತ್ತದೆ. ಈ ಭಾವನೆಯನ್ನು ಜಗತ್ತಿನಾದ್ಯಂತ ಪಸರಿಸುತ್ತದೆ. ಆದ್ದರಿಂದ ಭಾರತದಲ್ಲಿ ಹಿಟ್ಲರ್ ಆಗಲು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಆಗಲು ಹೊರಟರೆ ದೇಶದ ಜನ ಅವರನ್ನು ಕೆಳಗೆ ಇಳಿಸುತ್ತಾರೆ” ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ ಜಾಗತಿಕ ಮಾರುಕಟ್ಟೆ ಬಗ್ಗೆ ಮಾತನಾಡುತ್ತಾರೆ. ಆದರೆ ಭಾರತ ಮಾತ್ರ ವಸುದೈವ ಕುಟುಂಬಕಮ್ ಬಗ್ಗೆ ಮಾತನಾಡುತ್ತಿದೆ. ಇಷ್ಟು ಮಾತ್ರವಲ್ಲದೇ ಇಡೀ ವಿಶ್ವವನ್ನು ಒಂದು ಕುಟುಂಬವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಧರ್ಮ, ಭಾಷೆ ಅಥವಾ ಸಮಾನ ಹಿತಾಸಕ್ತಿಯ ವ್ಯಕ್ತಿಗಳಿಂದ ಆಧರಿತವಾಗಿರುವ ಇತರ ರಾಷ್ಟ್ರೀಯವಾದದ ಪರಿಕಲ್ಪನೆಗಳಿಗಿಂತ ಭಿನ್ನ. ಪ್ರಾಚೀನ ಕಾಲದಿಂದಲೂ ವೈವಿಧ್ಯತೆ ಭಾರತೀಯ ಪರಿಕಲ್ಪನೆಯ ಭಾಗ ಎಂದು ಅವರು ಪ್ರತಿಪಾದಿಸಿದರು

ವರದಿಗಾರಿಕೆಯಲ್ಲಿ ಜನಪರತೆ ಮತ್ತು ವೃತ್ತಿಪರತೆ ಮುಖ್ಯ-ಪ್ರೊ.ವೀರಭದ್ರಪ್ಪ

ವಿಘಟನೆಯ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವ ಸಮಕಾಲೀನ ಸಮಾಜವನ್ನು ರಚನಾತ್ಮಕವಾಗಿ ಕಟ್ಟುವ ಗುರುತರ ಜವಾಬ್ದಾರಿಯನ್ನು ಭವಿಷ್ಯದ ಪತ್ರಕರ್ತರು ನಿರ್ವಹಿಸಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶನಿವಾರ ನಡೆದ ಈ-ಟಿವಿ ಭಾರತ್‌ನ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾತಂತ್ರ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ಪತ್ರಿಕಾ ರಂಗಕ್ಕೆ ಕಾಲಿಡಲಿರುವ ಉದಯೋನ್ಮುಖ ಪತ್ರಕರ್ತರು ಸಮಾಜವನ್ನು ಒಗ್ಗೂಡಿಸುವ ಕಾರ್ಯನಿರ್ವಹಿಸಬೇಕಿದೆ. ಜಾತಿ, ಧರ್ಮ, ಸಮುದಾಯಗಳ ನಡುವಿನ ಬಿರುಕುಗಳನ್ನು ಗುಣಪಡಿಸುವ ಹೊಣೆಗಾರಿಕೆ ಅವರ ಮೇಲಿದೆ ಎಂದರು.

ಸಮಾಜದ ವಿವಿಧ ಸ್ಥರಗಳಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನೈಜ ವರದಿ ಮಾಡುವುದರ ಜೊತೆಗೆ ಜನಪರವಾದ ನೈತಿಕ ಮೌಲ್ಯ ಮತ್ತು ವೃತ್ತಿಪರತೆ ಪತ್ರಕರ್ತರಿಗೆ ಅತ್ಯಗತ್ಯ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಪ್ರಾಯೋಗಿಕ ಕಲಿಕೆಯ ಜೊತೆಗೆ ನೈತಿಕ ಮೌಲ್ಯಗಳಿಗೆ ಒತ್ತು ನೀಡುತ್ತಿದೆ ಎಂದರು.

ಪ್ರಾಧ್ಯಾಪಕ ಪ್ರೊ. ಡಿ. ಎಸ್. ಪೂರ್ಣಾನಂದ ಮಾತನಾಡಿ, ಕಳೆದ ದಶಕದಿಂದೀಚೆಗೆ ಎಲ್ಲ ಮಾಧ್ಯಮ ಸಂಸ್ಥೆಗಳು ಡಿಜಿಟಲ್ ವೇದಿಕೆಯನ್ನು ಪ್ರವೇಶಿಸುತ್ತಿವೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಬಲ ಟಿ.ವಿ ವಾಹಿನಿಗಳ ಸಮೂಹವನ್ನು ಹೊಂದಿದ್ದ ರಾಮೋಜಿ ರಾವ್ ಒಡೆತನದ ಈ-ಟಿವಿ, ಡಿಜಿಟಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಕಾಲಿರಿಸಿದ ಮೊದಲ ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆ ಎಂದರೆ ತಪ್ಪಾಗಲಾರದು. ಭವಿಷ್ಯದಲ್ಲಿ ಪತ್ರಿಕೋದ್ಯಮವನ್ನು ಡಿಜಿಟಲ್ ಮಾಧ್ಯಮ ಆವರಿಸಿಕೊಳ್ಳಲಿದೆ ಎಂದರು.

ವಿಭಾಗದ ಮುಖ್ಯಸ್ಥ ಡಾ. ಸತೀಶ್ ಕುಮಾರ್, ಡಾ. ಸತ್ಯಪ್ರಕಾಶ್ ಎಂ. ಆರ್, ಈ-ಟಿವಿ ಭಾರತ್‌ನ ಶಿವಮೊಗ್ಗ ಜಿಲ್ಲಾ ವರದಿಗಾರ ಕಿರಣ್ ಕಂಕಾರಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಶಿವಮೊಗ್ಗದಲ್ಲಿ ಶಂಕಿತ ಉಗ್ರರು ಬೃಹತ್ ಸ್ಫೋಟಕ್ಕೆ ತಯಾರಾಗಿದ್ದರು-ಲಕ್ಷ್ಮೀಪ್ರಸಾದ್

0

ಶಿವಮೊಗ್ಗದಲ್ಲಿ ಶಂಕಿತ ಉಗ್ರರು ದೊಡ್ಡ ಪ್ರಮಾಣದ ಸ್ಫೋಟಕ್ಕೆ ಸಿದ್ಧರಾಗಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್‌ ಅವರು ಹೇಳಿದ್ದಾರೆ.

ಶಿವಮೊಗ್ಗದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಂಧಿತರಿಂದ ಒಂದು ಕಾರು, 2 ಲ್ಯಾಪ್‌ಟಾಪ್‌ ಸಹಿತ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುತ್ತಿದ್ದ ಅನೇಕ ವಸ್ತುಗಳನ್ನು ವಶಪಡಿಸಲಾಗಿದೆ ಎಂದು ಬಿ.ಎಂ. ಲಕ್ಷ್ಮೀಪ್ರಸಾದ್‌ ಅವರು ಎಂದು ಮಾಹಿತಿ ನೀಡಿದ್ದಾರೆ.

ಆ.15ರಂದು ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ ಎಂಬವರನ್ನು ಮುಸ್ಲಿಂ ಯುವಕರು ಇರಿದು ಕೊಲ್ಲಲು ಪ್ರಯತ್ನಿಸಿದ್ದರು. ಈ ಸಂಬಂಧ 4ಜನರನ್ನು ಬಂಧಿಸಲಾಗಿತ್ತು. ಬಂಧಿತ ಜಬೀವುಲ್ಲಾನ ವಿಚಾರಣೆಯಿಂದ ಶಾರೀಖ್‌ ಬಗ್ಗೆ ಮಾಹಿತಿ ಸಿಕ್ಕಿತು. ಇವನ ಜೊತೆ ಮಾಜ್‌ ಮತ್ತು ಯಾಸೀನ್‌ ಸಂಬಂಧ ಇರುವುದು ಗೊತ್ತಾ
ಯಿತು. ಇವರು ಕಾನೂನು ಬಾಹಿರ ಚಟುವಟಿಕೆ ಮತ್ತು ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದು ಕಂಡುಬಂದಿದೆ. ಇದುವರೆಗೆ ಮಾಜ್‌ ಹಾಗೂ ಯಾಸೀನ್‌ ಅವರನ್ನು ಮಾತ್ರ ಬಂಧಿಸಲಾಗಿದೆ. ಶಾರೀಖ್‌ ನಾಪತ್ತೆಯಾಗಿದ್ದು, ಅವನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಪ್ರಕರಣದಲ್ಲಿ ಅವನೇ ಎ1 ಆರೋಪಿಯಾಗಿದ್ದಾನೆ. ಅವನು ಸಿಕ್ಕರೆ ಇನ್ನಷ್ಟು ಮಾಹಿತಿ ಸಿಗುತ್ತದೆ ಎಂದು ಬಿ.ಎಂ. ಲಕ್ಷ್ಮೀಪ್ರಸಾದ್‌ ಅವರು ಹೇಳಿದ್ದಾರೆ.

ಇದುವರೆಗೆ 11 ಕಡೆ ದಾಳಿ ಮಾಡಲಾಗಿದೆ. ಬಂಧಿತರಿಂದ 14 ಮೊಬೈಲ್‌, 1 ಡಾಂಗಲ್‌, 2 ಲ್ಯಾಪ್‌ಟಾಪ್‌, ಒಂದು ಪೆನ್‌ಡ್ರೈವ್‌ ಮತ್ತು ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಸ್ಫೋಟದ ಸ್ಥಳದಲ್ಲಿ ಬಾಂಬ್‌ ಅವಶೇಷಗಳು ಸಿಕ್ಕಿವೆ ಎಂದು ಮಾಹಿತಿ ತಿಳಿಸಿದ್ದಾರೆ.

ಆರೋಪಿಗಳು ಸ್ವಾತಂತ್ರ್ಯ ದಿನಾಚರಣೆಯ ನಂತರ ರಾಷ್ಟ್ರಧ್ವಜವನ್ನು ಸುಟ್ಟು ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಕೊಂಡಿದ್ದಾರೆ. ಈಗ ಮೊಬೈಲ್‌ನಲ್ಲಿ ವೀಡಿಯೋಗಳು ಸಿಕ್ಕಿವೆ. ಬಾಂಬ್‌ ಸ್ಫೋಟದ ಜಾಗದಿಂದ ಸ್ವಲ್ಪ ದೂರದಲ್ಲಿ ಸುಟ್ಟಿರುವ ರಾಷ್ಟ್ರಧ್ವಜದ ತುಣುಕುಗಳು ಸಿಕ್ಕಿವೆ ಎಂದು ಎಸ್‌ಪಿ ಅವರು ತಿಳಿಸಿದ್ದಾರೆ.

ಬಾಂಬ್‌ ತಯಾರಿಕೆ ಮಾಹಿತಿ
ಶಂಕಿತರು ಬಾಂಬ್‌ ತಯಾರಿಗೆ ಬೇಕಾದ ತರಬೇತಿಯನ್ನು ಐಸಿಸ್‌ನಿಂದ ಪಡೆದಿದ್ದರು. ಅವರಿಗೆ ಅನೇಕ appಗಳ ಮಾಹಿತಿ ಕಳುಹಿಸಲಾಗಿತ್ತು. ಅದನ್ನು ಅವರು ಪೆನ್‌ಡ್ರೈವ್‌ನಲ್ಲಿ ಇಟ್ಟುಕೊಂಡಿದ್ದರು. ಅದನ್ನು ನೋಡಿ ಅದಕ್ಕೆ ಬೇಕಾದ ಟೈಮರ್‌, ರಿಲೇ ಸರ್ಕ್ಯೂಟ್ ಗಳನ್ನು ಅಮೆಜಾನ್‌ ಆಯಪ್‌ ಮುಖಾಂತರ ಖರೀದಿಸಿದೆ. ಶಿವಮೊಗ್ಗದಲ್ಲಿ 9 ವೋಲ್ಟ್ನ 2 ಬ್ಯಾಟರಿ, ಸ್ವಿಚ್‌, ವೈರ್‌, ಮ್ಯಾಚ್‌ ಬಾಕ್ಸ್‌ ಮತ್ತು ಇತರ ಸ್ಫೋಟಕ ವಸ್ತುಗಳನ್ನು ಖರೀದಿಸಿ ಬಾಂಬ್‌ ತಯಾರು ಮಾಡಿದ್ದರು ಎಂದು ತಿಳಿಸಲಾಗಿದೆ.

ಆರೋಪಿಗಳು ಇಸ್ಲಾಮಿಕ್‌ ಸ್ಟೇಟ್‌ ನ ಅಧಿಕೃತ ಮಾಧ್ಯಮ ವಾದ ಆಲ್‌ ಟೆಲಿಗ್ರಾಂ ಚಾನೆಲ್‌ನ ಸದಸ್ಯರಾಗಿದ್ದರು ಎಂದು ತಿಳಿಸಿದ್ದಾರೆ.

ಹೊರ ರಾಜ್ಯದ ಪ್ರವಾಸಿಗರ ವಾಹನಕ್ಕೆ ದಸರಾ ವಿಶೇಷ ತೆರಿಗೆ ವಿನಾಯಿತಿ

0

ವಿಶ್ವವಿಖ್ಯಾತ ಮೈಸೂರು ದಸರಾ ಗೆ ತೆರಳುವಂತ ಹೊರ ರಾಜ್ಯದ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ವಾಹನ ತೆರಿಗೆಯಿಂದ ವಿನಾಯ್ತಿಯನ್ನು ಘೋಷಣೆ ಮಾಡಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ, ಕರ್ನಾಟಕ ಹೊರತುಪಡಿಸಿ. ಇತರೆ ರಾಜ್ಯಗಳಲ್ಲಿ ನೋಂದಾಯಿಸಲ್ಪಟ್ಟ ಮತ್ತು ಆ ರಾಜ್ಯದಲ್ಲಿ ತೆರಿಗೆ ಪಾವತಿಸಿರುವ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಲು ಸರ್ಕಾರವು ತೀರ್ಮಾನಿಸಿದೆ ಎಂದಿದ್ದಾರೆ.

ಸರ್ಕಾರದ ತೀರ್ಮಾನದಂತೆ ವಿಶೇಷ ರಹದಾರಿ ಪಡೆದು ದಿನಾಂಕ 29-09-2022ರಿಂದ ದಿನಾಂಕ 06-10-2022ರ ನಡೆಯಲಿರುವ ದಸರಾ ಮಹೋತ್ಸವಕ್ಕೆ ಅಂತರ ರಾಜ್ಯದಿಂದ ಮೈಸೂರು ನಗರಕ್ಕೆ ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯ ಕೃಷ್ಣರಾಜ್ಯ ಸಾಗರ ಜಲಾಶಯ ವೀಕ್ಷಿಸಲು ಆಗಮಿಸುವ ಪ್ರವಾಸಿ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಿದ್ದಾರೆ.

ದಸರಾ ನಡುವೆಯೇ ವಿದ್ಯುತ್ ದರ ಏರಿಕೆ ಶಾಕ್

0

ವಿದ್ಯುತ್ ಖರೀದಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ.

6 ತಿಂಗಳ ಕಾಲ ಯೂನಿಟ್ ವಿದ್ಯುತ್ ಗೆ 43 ಪೈಸೆವರೆಗೆ ಹೆಚ್ಚು ಹಣ ಪಾವತಿಸಬೇಕಿದೆ. ಇಂಧನ ಹೊಂದಾಣಿಕೆ ವೆಚ್ಚದ ರೂಪದಲ್ಲಿ ವಿದ್ಯುತ್ ಖರೀದಿ ದರದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ.

ಕಳೆದ ಏಪ್ರಿಲ್ ತಿಂಗಳಲ್ಲಿ 35 ಪೈಸೆಯಷ್ಟು ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಇಂಧನ ಹೊಂದಾಣಿಕೆ ವೆಚ್ಚ ಹೆಸರಲ್ಲಿ ಮತ್ತೆ ದರ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್ ಗೆ 24 ಪೈಸೆಯಿಂದ 43 ಪೈಸೆವರೆಗೆ ವಿದ್ಯುತ್ ದರ ಹೆಚ್ಚಳಕ್ಕೆ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ಆದೇಶಿಸಿದೆ.

ಬೆಸ್ಕಾಂ ಗ್ರಾಹಕರಿಗೆ ಯೂನಿಟ್ ಗೆ 43 ಪೈಸೆ, ಮೆಸ್ಕಾಂ(ಮಂಗಳೂರು) ಗ್ರಾಹಕರಿಗೆ 24 ಪೈಸೆ. ಚಾಮುಂಡೇಶ್ವರಿ ಮೈಸೂರು(ಚೆಸ್ಕಾಂ) ಗ್ರಾಹಕರಿಗೆ 34 ಪೈಸೆ ಹುಬ್ಬಳ್ಳಿ(ಹೆಸ್ಕಾಂ) ಗ್ರಾಹಕರಿಗೆ 35 ಪೈಸೆ, ಕಲಬುರ್ಗಿ(ಜೆಸ್ಕಾಂ) ಗ್ರಾಹಕರಿಗೆ 35 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳವಾಗಿದೆ.