Monday, March 23, 2026
Monday, March 23, 2026
Home Blog Page 1426

ಶಿಕ್ಣದ ಖಾಸಗೀಕರಣ ಶುಲ್ಕ ಏರಿಕೆ ನೀತಿಗಳಿಂದ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಕುಸಿತ

ಶಿಕ್ಷಣದ ಖಾಸಗೀಕರಣ, ಶುಲ್ಕ ಏರಿಕೆ, ಸರಕಾರಗಳ ಖಾಸಗಿ ಹಿತಾಸಕ್ತಿಪರ ನೀತಿಗಳಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು, ಬಹುಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಆಲ್ ಇಂಡಿಯಾ ಡೆಮೊಕ್ರಟಿಕ್ ಸ್ಟೂಡೆಂಟ್ಸ್ ಆರ್ಗಾನೈಜೆಷನ್(ಎಐಡಿಎಸ್‍ಓ) ಕಳವಳವ್ಯಕ್ತಪಡಿಸಿದೆ.

ಎಐಡಿಎಸ್‍ಓನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ‘ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಲು ಸರಕಾರ ನಿರ್ಧರಿಸಿದೆ.

‘ಸರಕಾರಿ ಕಾಲೇಜುಗಳ ಪದವಿ ದಾಖಲಾತಿ ಈ ವರ್ಷ ಗಣನೀಯವಾಗಿ ಕುಸಿದಿರುವುದು ಈ ಸಮಸ್ಯೆಗಳಿಗೆ ಹಿಡಿದಿರುವ ಕನ್ನಡಿಯಾಗಿದೆ. ಇಂದಿನ ವಾಸ್ತವ ಪರಿಸ್ಥಿತಿಯನ್ನು ಇದು ಎತ್ತಿ ತೋರಿಸುತ್ತದೆ. ಹೀಗಿರುವಾಗ ಈ ಶುಲ್ಕ ಏರಿಕೆಯು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ಉಳಿಸುತ್ತದೆ. ಹಾಗಾಗಿ, ಖಾಸಗಿ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವ ಶುಲ್ಕ ಏರಿಕೆಯ ನಿರ್ಧಾರವನ್ನು ಸರಕಾರ ಈ ಕೂಡಲೇ ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಈ ವರ್ಷದಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ದಾಖಲಾಗುವ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ರೂ.12,884 ಪಾವತಿಸಬೇಕಾಗಿದೆ. ಅಂದರೆ, ಈವರೆವಿಗೂ ಇದ್ದ 1,28,746ರೂ.ಗಳ ಜಾಗದಲ್ಲಿ ಇನ್ನೂ ಮುಂದೆ ವಿದ್ಯಾರ್ಥಿಗಳು 1,41,630ರೂ.ಗಳಷ್ಟು ಹೆಚ್ಚುವರಿಯಾಗಿ ಶುಲ್ಕ ಪಾವತಿಸಬೇಕು. ಈ ನಿರ್ಧಾರವನ್ನು ಇತ್ತೀಚೆಗೆ ಕೆಲವು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸರಕಾರ ನಡೆಸಿದ ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ನಿಮ್ಹಾನ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಒಪ್ಪಂದದ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ

0

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಅನೇಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಜ್ಯೂನಿಯರ್​ ಸೈಂಟಿಫಿಕ್​ ಆಫೀಸರ್​, ಫಾಲೋ ಆಪ್​ ಕೌನ್ಸಿಲರ್​ ಸೇರಿದಂತೆ ಒಟ್ಟು 10 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 10 ಆಗಿದೆ.

ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್
ಹುದ್ದೆ ಫಾಲೋ-ಅಪ್ ಕೌನ್ಸಿಲರ್, ಜೂನಿಯರ್ ಸೈಂಟಿಫಿಕ್ ಆಫೀಸರ್

ಉದ್ಯೋಗ ಸ್ಥಳ ಬೆಂಗಳೂರು.
ಸಂಬಳ: 23100-38500 ರೂ ಪ್ರತಿ ತಿಂಗಳು.
ಅರ್ಜಿ ಸಲ್ಲಿಕೆ ಆಫ್​ಲೈನ್​ ಮುಖಾಂತರ…

ಆಫ್ ಲೈನ್ ಸಲ್ಲಿಸಲು ಪ್ರಾರಂಭ ದಿನಾಂಕ: 23 ಸೆಪ್ಟೆಂಬರ್​ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಅಕ್ಟೋಬರ್ 2022

ಅಧಿಕೃತ ವೆಬ್‌ಸೈಟ್: nimhans.ac.in

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧನೆಯನ್ನ ವಿಶ್ವ ಬೆರಗಾಗಿ ನೋಡುತ್ತಿದೆ

0

ಬಾಹ್ಯಾಕಾಶ ಕ್ಷೇತ್ರದ ವಿಚಾರದಲ್ಲಿ ಪೂರ್ತಿ ವಿಶ್ವವೇ ಭಾರತವನ್ನು ಸ್ಪೂರ್ತಿಯಾಗಿ ನೋಡುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿರುವ ಎಸ್. ಸೋಮನಾಥ ಅವರು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನ ಕತ್ತಂಕೂಲಥೂರಿನ ಎಸ್ ಆರ್ ಎಮ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದರು.

ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿಗಳನ್ನು ನೋಡುವುದಕ್ಕೆ ಸಂತೋಷವಾಗುತ್ತದೆ. ಅದರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಬೆಳವಣಿಗೆಗಳು ಆಗುತ್ತಿವೆ. ಅನೇಕ ಸ್ಟಾರ್ಟ್ ಅಪ್ ಗಳು ನಮ್ಮೊಂದಿಗೆ ಸೇರಿಕೊಂಡು ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವ ಕೆಎಂಎಫ್ ಕಿವಿ ಹಿಂಡಿದ ಬೊಮ್ಮಾಯಿ

0

ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆಮ್ಮದಿಯ ಸುದ್ದಿ ನೀಡಿದೆ.

ಅದೇನು ಅಂದ್ರೆ, ಹಾಲಿನ ಬೆಲೆ ಹೆಚ್ಚಳದ ಕೆಎಂಎಫ್ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬ್ರೇಕ್ ಹಾಕಿದ್ದಾರೆ.

ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ 3 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸಲ್ಲಿಸಿರುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ನೀಡಿಲ್ಲ ಎಂದು ಮೂಲಗಳು ಮಾಹಿತಿ ತಿಳಿಸಿವೆ.

ಹಾಲಿನ ಬೆಲೆ ಹೆಚ್ಚಳ ಮಾಡುವುದರಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಆದ್ದರಿಂದ, ಪರ್ಯಾಯ ಮಾರ್ಗಗಳನ್ನು ಹುಡುಕಿ ಹಾಲು ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವಿಸ್ತರಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಫ್ಲೋರಿಡಾದಲ್ಲಿ ಪ್ರಬಲಗೊಳ್ಳುತ್ತಿರುವ ಇಯಾನ್ ಚಂಡಮಾರುತ

0

ಇಯಾನ್ ಚಂಡಮಾರುತವು ಕೆರಿಬಿಯನ್ ಮೇಲೆ ಬಲವನ್ನು ಪಡೆದುಕೊಂಡಿದ್ದು, ರಾಜ್ಯದ ಕಡೆಗೆ ಶೀಘ್ರದಲ್ಲೇ ಪ್ರಮುಖ ಚಂಡಮಾರುತವಾಗಿ ಪರಿಣಮಿಸುವ ಮುನ್ಸೂಚನೆ ನೀಡಿದ್ದರಿಂದ ಗವರ್ನರ್ ರಾನ್ ಡಿಸಾಂಟಿಸ್ ಅವರು ಫ್ಲೋರಿಡಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಇಡೀ ರಾಜ್ಯಕ್ಕೆ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲಾಗಿದೆ. ಫ್ಲೋರಿಡಾದ ದೊಡ್ಡ ಪ್ರದೇಶಗಳನ್ನು ಹೊಡೆಯುವ ಶಕ್ತಿಯನ್ನು ಹೊಂದಿರುವ ಚಂಡಮಾರುತದಿಂದ ಸುರಕ್ಷಿತವಾಗಿರಲು ಹಾಗೂ ಅದನ್ನು ಎದುರಿಸಲು ತಯಾರಾಗುವಂತೆ ಅಲ್ಲಿನ ನಿವಾಸಿಗಳನ್ನು ಮನವಿ ಮಾಡಿದ್ದಾರೆ.

ಈ ಚಂಡಮಾರುತವು ಪ್ರಮುಖ ಚಂಡಮಾರುತವಾಗಿ ಬಲಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎಲ್ಲಾ ಫ್ಲೋರಿಡಿಯನ್ನರು ತಮ್ಮ ಸಿದ್ಧತೆಗಳನ್ನು ಮಾಡಲು ನಾವು ಪ್ರೋತ್ಸಾಹಿಸುತ್ತೇವೆ. ಈ ಚಂಡಮಾರುತದ ಸಂಭಾವ್ಯ ಪರಿಣಾಮಗಳನ್ನು ಪತ್ತೆಹಚ್ಚಲು ನಾವು ಎಲ್ಲಾ ರಾಜ್ಯ ಮತ್ತು ಸ್ಥಳೀಯ ಸರ್ಕಾರದ ಪಾಲುದಾರರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಡಿಸಾಂಟಿಸ್ ಅವರು ತಿಳಿಸಿದ್ದಾರೆ.

ಅಧ್ಯಕ್ಷ ಜೋ ಬಿಡೆನ್ ಅವರು ರಾಜ್ಯಕ್ಕೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.,ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ, ಅಥವಾ FEMA, ವಿಪತ್ತು ಪರಿಹಾರ ಪ್ರಯತ್ನಗಳನ್ನು ಸಂಘಟಿಸಲು ಮತ್ತು ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಸಹಾಯವನ್ನು ಒದಗಿಸುತ್ತಾರೆ.

ಮುಂದಿನ ವಾರದ ಮಧ್ಯಭಾಗದಲ್ಲಿ ಪಶ್ಚಿಮ ಕ್ಯೂಬಾದ ಮೇಲೆ ಮತ್ತು ಫ್ಲೋರಿಡಾದ ಪಶ್ಚಿಮ ಕರಾವಳಿ ಮತ್ತು ಫ್ಲೋರಿಡಾ ಪ್ಯಾನ್‌ಹ್ಯಾಂಡಲ್ ಕಡೆಗೆ ಚಲಿಸುವ ಮೊದಲು ಇಯಾನ್ ಬಲಗೊಳ್ಳುವ ಮುನ್ಸೂಚನೆ ಇದೆ ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ.

ಚಂಡಮಾರುತದಿಂದಾಗಿ ಅಧ್ಯಕ್ಷರು ಫ್ಲೋರಿಡಾಕ್ಕೆ ಸೆ. 27 ರಂದು ನಿಗದಿಯಾಗಿದ್ದ ಪ್ರವಾಸವನ್ನು ಮುಂದೂಡಿದ್ದಾರೆ ಎನ್ನಲಾಗುತ್ತಿದೆ.

ದಸರಾ ವಿಶೇಷ ಶ್ರೀಚಾಮುಂಡೇಶ್ವರಿ ನೆಲೆಗೊಂಡ ಮಾಹಿತಿ

0

ಈ ಶಕ್ತಿ ಪೀಠ ಚಾಮುಂಡೇಶ್ವರಿ ದೇವಸ್ಥಾನ 18 ಶಕ್ತಿ ಪೀಠಗಳಲ್ಲಿ ಒಂದೆಂದು ಪ್ರಾಮುಖ್ಯ ಪಡೆದಿದೆ . ಒಬ್ಬ ಮಹಾಸತಿಯ ತಲೆ ಕೂದಲು ಉದುರಿಹೋಗುತ್ತಿದ್ದುದ್ದರಿಂದ ಈ ಕ್ಷೇತ್ರವನ್ನು ” ಕ್ರೌನ್ಛ ಕ್ಷೇತ್ರ ” ಅಥವ ” ಕ್ರೌನ್ಛ ಪುರಿ ” ಎಂದೂ ಸಹ ಪುರಾಣಕಾಲದಲ್ಲಿ ಕರೆಯಲಾಗುತ್ತಿತ್ತೆಂದು ಹೇಳುತ್ತಾರೆ .

ಸಾವಿರ ವರ್ಷಗಳಷ್ಟು ಹಿಂದಿನದು ಎಂದು ಹೇಳಲಾಗುವ ಈ ಚಾಮುಂಡೇಶ್ವರಿ ದೇವಸ್ಥಾನದ ನಿರ್ಮಾಣ ಮತ್ತು ಅಭಿವೃದ್ಧಿಗೆ ಹೊಯ್ಸಳರು , ವಿಜಯನಗರ ಸಾಮ್ರಾಜ್ಯದರಸರು ಹಾಗೂ ಮೈಸೂರು ಅರಸರ ಕೊಡುಗೆ ಅಪಾರವಾಗಿದೆ .

ಶ್ರೀ ಚಾಮುಂಡೇಶ್ವರಿ ದೇವಿಯ ಮೂಲ ದೇವಸ್ಥಾನವು ಸುಮಾರು 12 ನೇ ಶತಮಾನದಲ್ಲಿ ಹೊಯ್ಸಳ ಅರಸರಿಂದ ನಿರ್ಮಾಣ ಗೊಂಡಿದೆ. ನಂತರ ವಿಜಯನಗರದರಸರಿಂದ 17 ನೇ ಶತಮಾನದಲ್ಲಿ ಗೋಪುರ ನಿರ್ಮಾಣ ಗೊಂಡಿ ತಾದರೂ 1830 ರಲ್ಲಿ ಮೈಸೂರು ಅರಸರು ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರವೇಶ ದ್ವಾರದ ಮೇಲೆ 7 ಅಂತಸ್ತಿನ ಸುಂದರವಾದ ಭವ್ಯ ರಾಜ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿ ಸ್ವರ್ಣ ಲೇಪಿತ ಕಲಶಗಳನ್ನು ಸ್ಥಾಪಿಸಿ ಸರ್ವತೋಮುಖ ಅಭಿವೃದ್ಧಿ ಗೆ ಪಾತ್ರರಾದರು .
ಈ ದೇವಸ್ಥಾನವು ಹೆಬ್ಬಾಗಿಲು , ಪ್ರವೇಶ ದ್ವಾರ , ನವರಂಗ , ಅಂತರಾಳ , ಗರ್ಭಗೃಹ , ಮತ್ತು ಪ್ರಾಕಾರಗಳನ್ನು ಹೊಂದಿವೆ . ಗರ್ಭಗುಡಿಯ ಮೇಲೆ ವಿಮಾನ ಶಿಖರಗಳಿವೆ .


ಗರ್ಭಗುಡಿಯಲ್ಲಿ ಎಂಟು ಭುಜಗಳನ್ನು ಹೊಂದಿರುವ ಮಹಿಷ ಮರ್ಧಿನಿ ಚಾಮುಂಡೇಶ್ವರಿ
ವಿಗ್ರಹ ವಿರಾಜಮಾನವಾಗಿದೆ .ಮಾರ್ಕಂಡೇಯ
ಮುನಿಗಳು ಪ್ರತಿಷ್ಠಾಪಿಸಿದರೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ .

ದೇವಸ್ಥಾನದ ಒಳಾವರಣದಲ್ಲಿ ಗಣಪತಿ ,ನಂದಿ , ಆಂಜನೇಯ ವಿಗ್ರಹಗಳು , ಧ್ವಜ ಸ್ತ0ಭ ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿದೆ .
ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅವರ ಮೂವರು ಪತ್ನಿಯರಾದ ರಮಾವಿಲಾಸ , ಲಕ್ಶ್ಮಿವಿಲಾಸ , ಕೃಷ್ಣವಿಲಾಸ ರೊಂದಿಗೆ ಭಕ್ತಿ ಭಾವದಿಂದ ಕೈ ಮುಗಿದು ನಿಂತಿರುವ ಭಂಗಿಯ ವಿಗ್ರಹಗಳು ಭಕ್ತರಿಗೊಂದು ವಿಶಿಷ್ಟ ಅಕರ್ಷಣೆ .

ವರ್ಣರಂಜಿತ ಮಹಿಷಾಸುರ ಹಾವು ಹಾಗೂ ಖಡ್ಗವನ್ನು ಹಿಡಿದು ನಿಂತಿರುವ ಪ್ರತಿಮೆ ಬೆಟ್ಟಕ್ಕೆ ಭೇಟಿನೀಡುವವರನ್ನು ಸ್ವಾಗತಿಸುತ್ತದೆ . ಅಲ್ಲದೆ 15 ಅಡಿ ಎತ್ತರ , 25 ಅಡಿ ಅಗಲವಿರುವ ಏಕಶಿಲೆಯ ನಂದಿ , ಕುತ್ತಿಗೆಯಲ್ಲಿ ಆಭರಣಗಳನ್ನು ತೊಟ್ಟು ಕಂಗೊಳಿಸುವ ಸುಂದರ ಪ್ರತಿಮೆ ಭಕ್ತಿ ಭಾವ ಮೂಡಿಸುತ್ತದೆ .ನಾಡ ಹಬ್ಬ ನವರಾತ್ರಿಯಲ್ಲಿ ಪ್ರತಿದಿನ 9 ವಿವಿದ ರೀತಿಯಲ್ಲಿ ದೇವಿಯನ್ನು ಶೃಂಗರಿಸಿ , ಅಲಂಕರಿಸಿ ಆರಾಧಿಸಲಾಗುತ್ತದೆ.

ಮೈಸೂರು ಅರಸರು ಮುತ್ತು ರತ್ನ ಚಿನ್ನಾಭರಣಗಳನ್ನು ದೇಗುಲಕ್ಕೆ ಹೇರಳವಾಗಿ ಸಮರ್ಪಿಸಿದ್ದಾರೆ . ಚಿನ್ನದ ಉತ್ಸವ ಮೂರ್ತಿ , ಸೌಂದರ್ಯದ ಖನಿ ಅವುಗಳಲ್ಲಿ ಬೆಲೆ ಕಟ್ಟಲಾರದ್ದ.
ದೇಶದೆಲ್ಲೆಡೆಯಿಂದ ಅಪರಿಮಿತ ಭಕ್ತರು ದಿನನಿತ್ಯ, ಪ್ರತಿ ಆಷಾಡ ಶುಕ್ರವಾರ , ನವರಾತ್ರಿ , ಚಾಮುಂಡೇಶ್ವರಿ ಜಯಂತಿಯ ಆಚರಣೆಗೆ ಆಗಮಿಸಿ ಸೇವಾ ಕೈಂಕರ್ಯ ನೆರವೇರಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ .
ಮತ್ತೊಂದು ಶ್ರೀ ತ್ರಿಪುರ ಸುಂದರಿ ದೇವಸ್ಥಾನ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿಯಲ್ಲಿ ಇದೆ. ಅಲ್ಲಿ ಚಾಮುಂಡೇಶ್ವರಿ ದೇವಿಯ ಸಹೋದರಿ ಜ್ವಾಲಾ ಮಾಲಿನಿ ದೇವಿ ಯನ್ನು ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿದೆ . ರಾಕ್ಷಸ ರಾಜ ಮಹಿಷಾಶೂರನನ್ನು ಯುದ್ಧದಲ್ಲಿ ಸಂಹರಿಸಲು ಜ್ವಾಲಾಮಾಲಿನಿ ಚಾಮುಂಡೇಶ್ವರಿಗೆ ಸಹಕರಿಸಿದಳು .
ಈ ದೇಗುಲ ಪವಿತ್ರ ಯಾತ್ರಾಸ್ಥಳ ಮತ್ತು ಪ್ರೇಕ್ಷಣೀಯ ಸ್ಥಳವೂ ಹೌದು.

ಲೇ: ಎಮ್ .ತುಳಸಿರಾಮ್

ಹವಾಮಾನ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಆನ್ ಲೈನ್ ಅರ್ಜಿ ಆಹ್ವಾನ

ಭಾರತೀಯ ಹವಾಮಾನ ಇಲಾಖೆಯು ವಿವಿಧ ಕಾರ್ಯಕ್ರಮಗಳಿಗಾಗಿ ರಿಸರ್ಚ್ ಅಸೋಸಿಯೇಟ್, ಸೀನಿಯರ್ ರಿಸರ್ಚ್ ಫೆಲೋ ಮತ್ತು ಜೂನಿಯರ್ ರಿಸರ್ಚ್ ಫೆಲೋ, ಪ್ರಾಜೆಕ್ಟ್ ಸೈಂಟಿಸ್ಟ್‌ಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತರು ಕೆಳಗೆ ನೀಡಲಾದ ವಿವರಗಳನ್ನು ಪರಿಶೀಲಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9 ಅಕ್ಟೋಬರ್ 2022.

ಪ್ರಾಜೆಕ್ಟ್ ಸೈಂಟಿಸ್ಟ್ III (ಹವಾಮಾನ ಮತ್ತು ಹವಾಮಾನ ಸೇವೆಗಳು) ಗ್ರಾಮೀಣ ಕೃಷಿ ಮೌಸಂ ಸೇವಾ (ಕೃಷಿ ಹವಾಮಾನ ಸಲಹಾ ಸೇವೆಗಳು) – M.Sc. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 60 ಪ್ರತಿಶತ ಅಂಕಗಳೊಂದಿಗೆ ಕೃಷಿ ಹವಾಮಾನ / ಕೃಷಿ ಭೌತಶಾಸ್ತ್ರದಲ್ಲಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಕನಿಷ್ಠ 60 ಪ್ರತಿಶತ ಅಂಕಗಳೊಂದಿಗೆ ಮೇಲೆ ತಿಳಿಸಿದ ವಿಷಯಗಳಲ್ಲಿ ಬಿಇ ಪದವಿ.

ಸಂಬಳ: ರೂ.78000/- + HRA, ಕಾರ್ಯಕ್ಷಮತೆಯ ಪರಿಶೀಲನೆಗೆ ಒಳಪಟ್ಟು ಪ್ರತಿ 2 ವರ್ಷಗಳ ಅನುಭವಕ್ಕೆ 5 ಪ್ರತಿಶತದಷ್ಟು ಹೆಚ್ಚಳ.

ಪ್ರಾಜೆಕ್ಟ್ ಸೈಂಟಿಸ್ಟ್ II (ಹವಾಮಾನ ಮತ್ತು ಹವಾಮಾನ ಸೇವೆಗಳು) ಗ್ರಾಮೀಣ ಕೃಷಿ ಮೌಸಮ್ ಸೇವಾ (ಕೃಷಿ ಹವಾಮಾನ ಸಲಹಾ ಸೇವೆಗಳು) – M.Sc. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕೃಷಿ ಹವಾಮಾನ / ಕೃಷಿ ಭೌತಶಾಸ್ತ್ರ / ರಿಮೋಟ್ ಸೆನ್ಸಿಂಗ್ ಮತ್ತು GIS ಅಥವಾ ಸಮಾನ / ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ
ಅಥವಾ ಟೆಕ್. / ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ ಸಂಸ್ಥೆಯಿಂದ ಕನಿಷ್ಠ 60 ಪ್ರತಿಶತ ಅಂಕಗಳೊಂದಿಗೆ ಮೇಲೆ ತಿಳಿಸಿದ ವಿಷಯಗಳಲ್ಲಿ ಬಿಇ ಪದವಿ.

ಸಂಬಳ: ರೂ.67000/- + ಎಚ್‌ಆರ್‌ಎ, ಕಾರ್ಯಕ್ಷಮತೆಯ ಪರಿಶೀಲನೆಗೆ ಒಳಪಟ್ಟಿರುವ ಪ್ರತಿ 2 ವರ್ಷಗಳ ಅನುಭವಕ್ಕೆ ಶೇಕಡಾ 5 ರಷ್ಟು ಹೆಚ್ಚಳ.

ಪ್ರಾಜೆಕ್ಟ್ ಸೈಂಟಿಸ್ಟ್ I (ಹವಾಮಾನ ಮತ್ತು ಹವಾಮಾನ ಸೇವೆಗಳು) ಗ್ರಾಮೀಣ ಕೃಷಿ ಮೌಸಮ್ ಸೇವಾ (ಕೃಷಿ ಹವಾಮಾನ ಸಲಹಾ ಸೇವೆಗಳು) M.Sc. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 60 ಪ್ರತಿಶತ ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕೃಷಿ ಹವಾಮಾನ / ಕೃಷಿ ಭೌತಶಾಸ್ತ್ರ / ರಿಮೋಟ್ ಸೆನ್ಸಿಂಗ್ ಮತ್ತು GIS ಅಥವಾ ಸಮಾನ / ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಅಥವಾ ಟೆಕ್. / ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಕನಿಷ್ಠ 60 ಪ್ರತಿಶತ ಅಂಕಗಳೊಂದಿಗೆ ಮೇಲೆ ತಿಳಿಸಿದ ವಿಷಯಗಳಲ್ಲಿ ಬಿಇ ಪದವಿ.

ಸಂಬಳ: ರೂ.56000/- + ಎಚ್‌ಆರ್‌ಎ, ಕಾರ್ಯಕ್ಷಮತೆಯ ಪರಿಶೀಲನೆಗೆ ಒಳಪಟ್ಟಿರುವ ಪ್ರತಿ 2 ವರ್ಷಗಳ ಅನುಭವಕ್ಕೆ ಶೇಕಡಾ 5 ರಷ್ಟು ಹೆಚ್ಚಳ

ರಿಸರ್ಚ್ ಅಸೋಸಿಯೇಟ್ / (ಹವಾಮಾನ ಮತ್ತು ಹವಾಮಾನ ಸೇವೆಗಳು) ಗ್ರಾಮೀಣ ಕೃಷಿ ಮೌಸಮ್ ಸೇವಾ (ಕೃಷಿ ಹವಾಮಾನ ಸಲಹಾ ಸೇವೆಗಳು) – Ph.D. / MS ಅಥವಾ ಕೃಷಿ ಪವನಶಾಸ್ತ್ರ/ಕೃಷಿ ಭೌತಶಾಸ್ತ್ರ/ ಕೃಷಿ ಅಂಕಿಅಂಶಗಳಲ್ಲಿ ತತ್ಸಮಾನ ಪದವಿ ಅಥವಾ ವಿಜ್ಞಾನ ಉಲ್ಲೇಖ ಸೂಚ್ಯಂಕ (SCI) ಜರ್ನಲ್‌ನಲ್ಲಿ ಕನಿಷ್ಠ 1 ಸಂಶೋಧನಾ ಪ್ರಬಂಧದೊಂದಿಗೆ M.Sc./ ME/ M. ಟೆಕ್ ನಂತರ ಮೂರು ವರ್ಷಗಳ ಸಂಶೋಧನೆ, ಬೋಧನೆ ಮತ್ತು ವಿನ್ಯಾಸ ಮತ್ತು ಅಭಿವೃದ್ಧಿ ಅನುಭವವನ್ನು ಹೊಂದಿರುವುದು.

ವೇತನ: – ರೂ. 47000/- + HRA ಪ್ರತಿ ತಿಂಗಳು
JRF/SRF (ಹವಾಮಾನ ಮತ್ತು ಹವಾಮಾನ ಸೇವೆಗಳು) ಗ್ರಾಮೀಣ ಕೃಷಿ ಮೌಸಮ್ ಸೇವಾ (ಕೃಷಿ ಹವಾಮಾನ ಸಲಹಾ ಸೇವೆಗಳು) – ಜೂನಿಯರ್ ರಿಸರ್ಚ್ ಫೆಲೋ (JRF) M.Sc. ಕೃಷಿ ಪವನಶಾಸ್ತ್ರ/ಕೃಷಿ ಭೌತಶಾಸ್ತ್ರ/ಕೃಷಿ ಅಂಕಿಅಂಶಗಳಲ್ಲಿ, M.Sc. ಹವಾಮಾನಶಾಸ್ತ್ರದಲ್ಲಿ/ ಅಥವಾ M.Tech. NET ಅರ್ಹತೆಯೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಟ್ಮಾಸ್ಫಿಯರಿಕ್ ಸೈ./ ಅಟ್ಮಾಸ್ಫಿಯರಿಕ್ ಫಿಸಿಕ್ಸ್ / ಮೆಟಿಯಾಲಜಿ / ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ / ಕಂಪ್ಯೂಟರ್ ಸೈನ್ಸ್.

ಸೀನಿಯರ್ ರಿಸರ್ಚ್ ಫೆಲೋ (SRF) – 2 ವರ್ಷಗಳ ಸಂಶೋಧನಾ ಅನುಭವದೊಂದಿಗೆ JRF ಗೆ ಅರ್ಹತೆಯನ್ನು ಸೂಚಿಸಲಾಗಿದೆ.

ಅಭ್ಯರ್ಥಿಗಳು 1 ಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ಗಮನಿಸಬೇಕು. ಆನ್‌ಲೈನ್ ಅರ್ಜಿಯನ್ನು 9 ಅಕ್ಟೋಬರ್ 2022 ರವರೆಗೆ ಶೈಕ್ಷಣಿಕ ಅರ್ಹತೆ (10 ನೇ ತರಗತಿಯಿಂದ ನಂತರ), ಜನ್ಮ ದಿನಾಂಕ ಮತ್ತು ಅನುಭವ ಯಾವುದಾದರೂ ಇದ್ದರೆ, ಪ್ರಮಾಣಪತ್ರಗಳ (ಸ್ವಯಂ-ದೃಢೀಕರಿಸಿದ) ಪ್ರತಿಗಳೊಂದಿಗೆ ಸಲ್ಲಿಸಬೇಕು.

ಅರ್ಜಿದಾರರು ಸಂದರ್ಶನದ ಸಮಯದಲ್ಲಿ ಪರಿಶೀಲನೆಗಾಗಿ ಮೂಲ ಪ್ರಮಾಣಪತ್ರಗಳು ಮತ್ತು ದಾಖಲೆಗಳನ್ನು ತರಬೇಕು.

ಭದ್ರಾವತಿಯಲ್ಲಿ ಎನ್ಎಸ್ಎಸ್ ದಿನಾಚರಣೆ

ಸೆಪ್ಟೆಂಬರ್ 24ರಂದು ಆಚರಿಸಲ್ಪಡುವ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಅಂಗವಾಗಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂ ಟೌನ್, ಭದ್ರಾವತಿಯ ಎನ್ಎಸ್ಎಸ್ ಸ್ವಯಂಸೇವಕರಿಂದ ಶ್ರಮದಾನ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ನೀಡಿದ ಶ್ರಮಾದಾನದ ಕೆಲವು ಚಿತ್ರಗಳು


ವಸೂಲಾತಿ ಸಂದರ್ಭ ರೈತರ ಮನೆ,ಆಸ್ತಿ ಜಪ್ತಿ ನಿಷೇಧಿಸಲಾಗುತ್ತದೆ-ಬೊಮ್ಮಾಯಿ

0

ಸಾಲ ವಸೂಲಾತಿ ಸಂದರ್ಭದಲ್ಲಿ ಕೃಷಿಕರ ಮನೆ, ಆಸ್ತಿ ಜಪ್ತಿ ಮಾಡುವುದನ್ನು ನಿಷೇಧಿಸಲಾಗುತ್ತದೆ. ಹಾಗೂ ಕೃಷಿಕರ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮುಖಾಂತರ ಸಾಲ ತೀರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಆಶ್ವಾಸನೆ ನೀಡಿದ್ದಾರೆ.

ಅವರು, ಚಿತ್ರದುರ್ಗ ತಾಲೂಕಿನ ಸಿರಿಗೇರಿಯ ತರಳಬಾಳು ಮಠದಲ್ಲಿ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉಪಸ್ಥಿತರಿದ್ದರು.

ಕೃಷಿಕರು ಸಂತೋಷದಿಂದ ಇದ್ದಾಗ ಮಾತ್ರ, ನಮ್ಮ ಸಮಾಜ ಒಳ್ಳೆಯ ಸ್ಥಿತಿಯಲ್ಲಿರುತ್ತದೆ. ಆಸ್ತಿ ಜಪ್ತಿ ಎಂಬ ಆತಂಕ ಪಡುವುದು ಬೇಡ. ನಮ್ಮದು ರೈತ ಪರ ಸರ್ಕಾರ ಎಂದು ಯಡಿಯೂರಪ್ಪ ಅವರು ಹೇಳಿದರು.

ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು ರಾಷ್ಟ್ರಭಕ್ತರಾಗಬೇಕು- ಈಶ್ವರಪ್ಪ

0

ರಾಷ್ಟ್ರ ಭಕ್ತ ಮುಸಲ್ಮಾನರು ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಅವರು ಕೊಲೆ ಮಾಡಲು ಹೋಗಿ ಜೈಲು ಸೇರುತ್ತಾರೆ, ಇಲ್ಲವೇ ಭಯೋತ್ಪಾದಕ ಸಂಘಟನೆ ಜೊತೆ ಸೇರಿ ಜೈಲು ಸೇರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬಾಂಬ್ ಬ್ಲಾಸ್ಟ್ ಮಾಡಲೂ ಇಬ್ಬರು ಶಂಕಿತರು ಯೋಜನೆ ಮಾಡಿಕೊಂಡಿದ್ದರು ಎನ್ನುವುದು ಆತಂಕಕಾರಿ‌. ಎಸ್ ಡಿಪಿಐ, ಪಿಎಫ್ ಐ ರಾಷ್ಟ್ರದ್ರೋಹಿ ಸಂಘಟನೆಗಳು. ಮುಸ್ಲಿಂ ಯುವಕರನ್ನು ಇಸ್ಲಾಮಿಕ್ ಸ್ಟೇಟ್ಸ್ ಜೊತೆ ಸೇರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಮುಸ್ಲಿಂ ಸಮುದಾಯದ ಹಿರಿಯರು ಎಚ್ಚರಿಕೆ ವಹಿಸಬೇಕು ಎಂದರು.

ನಲಪಾಡ್ ಉದ್ಯೋಗವಿಲ್ಲದ ಕಾರಣದಿಂದ ಯುವಕರು ದುಷ್ಕೃತ್ಯಕ್ಕೆ ಇಳಿಯುತ್ತಿದ್ದಾರೆ ಎಂದಿದ್ದಾರೆ. ಕೇವಲ ಮುಸ್ಲಿಂ ಸಮುದಾಯದ ಯುವಕರು ಮಾತ್ರ ಇಂಥ ದುಷ್ಕೃತ್ಯದಲ್ಲಿ ತೊಡಗುತ್ತಾರೆ. ಬೇರೆ ಯಾವ ಯುವಕರು ಈ ರೀತಿಯ ಕೃತ್ಯಗಳಲ್ಲಿ‌ಭಾಗಿಯಾಗುವುದಿಲ್ಲ. ಈ ನಲಪಾಡ್ ಜೈಲಿಗೆ ಹೋಗಿಬಂದಿರುವ ವ್ಯಕ್ತಿ. ಈತ ಕಾಂಗ್ರೆಸ್ ನಾಯಕ. ಆತನನ್ನು ಕಾಂಗ್ರೆಸ್ ನಲ್ಲಿ ಇಟ್ಟುಕೊಳ್ಳುವ ಬಗ್ಗೆ ಕಾಂಗ್ರೆಸ್ ಇನ್ನೊಮ್ಮೆ ಆಲೋಚಿಸಬೇಕು. ಮುಸಲ್ಮಾನರ ಮನಸ್ಥಿತಿ ಬದಲಾಗಬೇಕು. ರಾಷ್ಟ್ರಭಕ್ತರಾಗಬೇಕು. ರಾಷ್ಟ್ರದ್ರೋಹಿಗಳಿಗೆ ಬುದ್ದಿಹೇಳುವ ಕೆಲಸವನ್ನು ಮುಸ್ಲಿಂ ಸಮುದಾಯದ ಹಿರಿಯರು ಮಾಡಬೇಕು ಎಂದು ಈಶ್ವರಪ್ಪ ಅವರು ಹೇಳಿದರು.