Monday, March 23, 2026
Monday, March 23, 2026
Home Blog Page 1428

ಶಟಲ್ ಬ್ಯಾಡ್ಮಿಂಟನ್ ಪಟು ಕು.ಲೇಖನಾ ರಾಜ್ಯಮಟ್ಟಕ್ಕೆ ಆಯ್ಕೆ

0

ಶಟಲ್‌ ಬ್ಯಾಡ್ಮಿಂಟನ್‌ ನಲ್ಲಿ ಕ್ರಿಯೇಟಿವ್‌ ಕಾಲೇಜಿನ ಲೇಖನಾ ರಾಜ್ಯಮಟ್ಟಕ್ಕೆ ಆಯ್ಕೆ
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲ್ಪಟ್ಟ ಉಡುಪಿ ಜಿಲ್ಲಾ ಮಟ್ಟದ ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪ ಪೂ ಕಾಲೇಜಿನ ಕುಮಾರಿ ಲೇಖನಾ ಬಾಲಕಿಯರ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ 18 ರ ವಯೋಮಿತಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಮುಂದಿನ ರಾಜ್ಯಮಟ್ಟದ ತಂಡದಲ್ಲಿ ಆಡುವ ಅವಕಾಶ ಗಳಿಸಿದ್ದಾರೆ.
ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರವಲ್ಲದೆ ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುತ್ತಿದೆ. ಕ್ರಿಯೇಟಿವ್‌ ಈ ಹಿಂದೆಯೂ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದು ಪ್ರಶಂಸೆಗೆ ಪಾತ್ರವಾಗಿದೆ.
ವಿದ್ಯಾರ್ಥಿಗಳ ಸಾಧನೆಯನು ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ತಂಡದ ಸಂಯೋಜಕ ಮಹೇಶ್‌ ಶೆಣೈ, ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಸೆ.28 ಶಿವಪ್ಪನಾಯಕ ಕೃಷಿ & ತೋಟಗಾರಿಕಾ ವಿವಿ ಘಟಿಕೋತ್ಸವ

1

ವಿಶೇಷ ಲೇಖನ: ಅರುಣ್ ಪ್ರಸಾದ್ ಹೊಂಬುಜ

28- ಸೆಪ್ಟೆಂಬರ್ -2022 ರಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ನೂತನ ಅವರಣದಲ್ಲಿ ಮೊದಲ ಘಟಿಕೋತ್ಸವ ಸಮಾರಂಭ ನಡೆಯಲಿದೆ, ಘನವೆತ್ತ ರಾಜ್ಯಪಾಲರಾದ ಗೆಹ್ಲೋಟ್ ಆಗಮಿಸಲಿದ್ದಾರೆ.


ಸದರಿ ವಿಶ್ವ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವ ಇದು ಮೊದಲಿನ ಆರು ಘಟಿಕೋತ್ಸವ ಇರುವಕ್ಕಿಯ ನೂತನ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣವಾಗದ್ದರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲೇ ನಡೆಸಲಾಗಿತ್ತು.


ಕೃಷಿ ವಿಶ್ವವಿದ್ಯಾಲಯಕ್ಕೆ ಜಿಲ್ಲೆಯಲ್ಲಿನ ಇರುವಕ್ಕಿ ಮತ್ತು ಹಾಯ್ ಹೊಳೆ ಹತ್ತಿರ ಭೂಮಿ ಗುರುತಿಸಲಾಗಿತ್ತು ಮತ್ತು ಹಾಯ್ ಹೊಳೆಯ ಭೂಮಿಯಲ್ಲೇ ಕೃಷಿ ವಿಶ್ವವಿದ್ಯಾಲಯ ಮಾಡಬೇಕೆಂಬ ಒತ್ತಡವಿತ್ತು ಕಾರಣ ಅಲ್ಲಿ ಬೇನಾಮಿ ಹೆಸರಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಭೂಮಿ ಖರೀದಿಸಿದ್ದರು ಅವರ ಭೂಮಿಗೆ ಬಂಗಾರದ ಬೆಲೆ ಬರಬೇಕೆಂದರೆ ಕೃಷಿ ವಿಶ್ವವಿದ್ಯಾಲಯ ಬರಬೇಕು ಎಂಬುದು.
ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯ ಇರುವಕ್ಕಿ ಗ್ರಾಮದಲ್ಲಿ ದಟ್ಟ ಅರಣ್ಯ ಇರುವ 777 ಎಕರೆ ರೆವಿನ್ಯೂ ಜಮೀನು ಕೃಷಿ ವಿಶ್ವವಿದ್ಯಾಲಯಕ್ಕೆ ಸೂಕ್ತವಾಗಿತ್ತು ಆದರೆ ರಿಯಲ್ ಎಸ್ಟೇಟ್ ಮಾಪಿಯಾ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡಬೇಡಿ ಎಂಬ ಪ್ರತಿಭಟನೆ ಮಾಡಿತ್ತು.
ಇದರ ಹೂರಣ ಅರಿತಿದ್ದ ಯಡ್ಯೂರಪ್ಪ ಮತ್ತು ಕಾಗೋಡು ತಿಮ್ಮಪ್ಪ ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲೇ ಕೃಷಿ ವಿಶ್ವವಿದ್ಯಾಲಯಕ್ಕೆ ಜಾಗ ಮಂಜೂರು ಮಾಡಿಸಿದರು.


ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಮಂತ್ರಿ ಕೃಷ್ಣ ಬೈರೇಗೌಡರು ಹಣ ಮಂಜೂರು ಮಾಡಿದರು.
ಶಂಕುಸ್ಥಾಪನೆ ನೆರವೇರಿಸಿದವರು ಕೃಷಿ ಸಚಿವ ಕೃಷ್ಣ ಬೈರೇಗೌಡರು, ಇವರ ತಂದೆ ಬೈರೇಗೌಡರು ಕೃಷಿ ಮಂತ್ರಿಗಳಾಗಿದ್ದಾಗ 1996 – 97ರಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಭೂಸಾರ ಸಂರಕ್ಷಣಾ ಇಲಾಖೆಯ ಅವ್ಯವಹಾರ ಪರಿಶೀಲನೆಗೆ ಆನಂದಪುರಂ ಹೋಬಳಿಗೆ ಬಂದು 7 ಜನ ಕೃಷಿ ಇಲಾಖಾ ಅಧಿಕಾರಿಗಳನ್ನು ಜೈಲಿಗೆ ಕಳಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲುಕಿನ ಈಸೂರಿನ ಚಿಂಡಿ ವಾಸುದೇವ ಈ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳು.
ಮೊದಲ ಪಾರಂ ಇನ್ ಚಾಜ್೯ ಹುಂಚಾ ಸಮೀಪದ ಡಾ.ಗಣಪತಿ.
ಮೊದಲ ಕಾನೂನು ಸಲಹೆಗಾರರು ರಿಪ್ಪನ್ ಪೇಟೆ ಸಮೀಪದ ಹಾಲಿ ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲರಾಗಿರುವ ಕುಬಟೂರು ರಾಮಚಂದ್ರ.


ಇರುವಕ್ಕಿಯ 777 ಎಕರೆ ಕೃಷಿ ವಿಶ್ವವಿದ್ಯಾಲಯ ಭೂಮಿ ಮಂಜೂರಾತಿ ಮಾಡಿಸಲು ವಿಶೇಷ ಪ್ರಯತ್ನ ಮಾಡಿದ ಆಗಿನ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಸಾಗರ ತಾಲೂಕಿನ ಮಂಚಾಲೆಯ ಡಾ.ವಿಘ್ನೇಶ್ ಮುಖ್ಯ ಕಾರಣ.
ಸಾಗರ ತಾಲೂಕಿನ ಆನಂದಪುರಂ ನಾಡ ಕಚೇರಿಯ ಉಪ ತಹಸೀಲ್ದಾರ್ ಆಗಿದ್ದ ಕಲ್ಲಪ್ಪ ಮೆಣಸಿನ ಹಾಳ್ ಇರುವಕ್ಕಿಯ ರೆವಿನ್ಯೂ ಭೂಮಿ ಕೃಷಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಹೆಚ್ಚು ಶ್ರಮಿಸಿದ್ದಾರೆ.
ಹೀಗೆ ಅನೇಕರ ಸಹಕಾರದಿಂದ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯ ಇರುವಕ್ಕಿಯಲ್ಲಿ ಪ್ರತಿಷ್ಟಿತ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಪ್ರಾರಂಭವಾಗಿದೆ.
ಯಡೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯ – ಉಪಾಧ್ಯಕ್ಷ – ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನಾನು ಶಂಕುಸ್ಥಾಪನೆಗೆ ಬಂದಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಮತ್ತು ಎಲ್ಲಾ ಅತಿಥಿಗಳಿಗೆ ಚಹಾ-ಮತ್ತು ಮಧ್ಯಾಹ್ನ ಮಲೆನಾಡಿನ ಶೈಲಿಯ ಊಟದ ಆತಿಥ್ಯ ನೀಡಿದ ಹಿರಿಮೆ ನನ್ನದು ಅದೇ ರೀತಿ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ರಕರ್ತರು, ಗಣ್ಯರು ಮತ್ತು ಪೋಲಿಸ್ ಇಲಾಖಾ ಸಿಬ್ಬಂದಿಗಳಿಗೆ ನನ್ನ ಕೃಷ್ಣ ಸರಸ ಕಲ್ಯಾಣ ಮಂಟಪದಲ್ಲಿ ಮಲೆನಾಡಿನ ಸಂಪ್ರದಾಯಿಕ ಊಟ ಆಗಿನ ಕುಲಪತಿ ಚಿಂಡಿ ವಾಸುದೇವರ ಮನವಿ ಮೇರೆಗೆ ಉಣ ಬಡಿಸಿದ ಸಂತೃಪ್ತಿ ನನ್ನದು.
ಮುಂದಿನ ಪ್ರತಿ ವರ್ಷ ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ರಾಜ್ಯಪಾಲರು ಘಟಿಕೋತ್ಸವಕ್ಕೆ ತಪ್ಪದೇ ಬರುತ್ತಾರೆ, ಈ ಭಾಗದ ಮುಂದಿನ ತಲೆಮಾರಿನ ಮಕ್ಕಳು ವಿದ್ಯಾವಂತರಾಗುವ ಹೊಸ ಹುಮ್ಮಸ್ಸು ಹೊಂದುತ್ತಾರೆ ಒಟ್ಟಾರೆ ಆನಂದಪುರಂ ಹೋಬಳಿ ಸರ್ವತ್ತೋಮುಖ ಅಭಿವೃದ್ದಿ ಕಾಣಲಿದೆ.

ಸಂಜೆ ಶಿಕ್ಷಣದ ಮೂಲಕ ಸಂಸ್ಕೃತ ಕಲಿಕಾ ಸೌಲಭ್ಯ

0

ಶಿವಮೊಗ್ಗ: ವಾಸವಿ ಅಕಾಡೆಮಿ ಟ್ರಸ್ಟ್, ಕೋಟೆ ರಸ್ತೆ, ಶಿವಮೊಗ್ಗ, ಅಜೇಯ ಸಂಸ್ಕೃತಿ ಬಳಗ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಹಯೋಗದಲ್ಲಿ ವಾಸವಿ ವಿದ್ಯಾಲಯ, ಕೋಟೆ ರಸ್ತೆ, ಶಿವಮೊಗ್ಗ ಇಲ್ಲಿ ನವದೆಹಲಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಪಠ್ಯಕ್ರಮ ಆಧಾರದ ಮೇಲೆ ಎರಡು ವರ್ಷದ ಸಂಸ್ಕೃತ ಶಿಕ್ಷಣವನ್ನು ಅಕ್ಟೋಬರ್ ತಿಂಗಳಿಂದ ಪ್ರಾರಂಭಿಸಲಾಗುವುದು.

ಕೇವಲ ಎರಡೇ ವರ್ಷಗಳಲ್ಲಿ ಸಂಸ್ಕೃತದಲ್ಲಿ ಮಾತನಾಡಲು ಬರೆಯಲು ಮತ್ತು ಓದಲು ಕಲಿಸಿಕೊಡಲಾಗುವುದು ವಾರದಲ್ಲಿ ಮೂರು ದಿನ ತರಗತಿಗಳನ್ನು ಎರಡು ತಂಡಗಳಲ್ಲಿ ನಡೆಸಲಾಗುವುದು ಸೋಮ, ಮಂಗಳ ಬುಧವಾರ, ಹಾಗೂ ಗುರು, ಶುಕ್ರ, ಶನಿವಾರ ಸಂಜೆ 6.30 ರಿಂದ 8 ರವರೆಗೆ ತರಗತಿಗಳು ನಡೆಯಲಿದೆ. 15 ವರ್ಷ ಮೇಲ್ಪಟ್ಟ ಯಾರೇ ಆಗಲಿ ಈ ಯೋಜನೆಗೆ ಸೇರಬಹುದು ಪ್ರತಿ ತಂಡದಲ್ಲೂ ಕೇವಲ 30 ಜನರಿಗೆ ಮಾತ್ರ ಅವಕಾಶ ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.

ವಾರ್ಷಿಕ ಶುಲ್ಕ ರೂ. 500.00 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನವದೆಹಲಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಜಯೇಂದ್ರ ರಾವ್ 9448790127 ಇವರನ್ನು ಸಂಪರ್ಕಿಸಬಹುದು ಎಂದು ವಾಸವಿ ಅಕಾಡೆಮಿಯ ಟ್ರಸ್ಟ್ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ತಿಳಿಸಿದ್ದಾರೆ.

ಮೈಸೂರು ಮಾಹಿತಿ ಬರಹ : ಎಂ.ತುಳಸಿರಾಂ

0

ನವಾಬ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ರಾಜಕೀಯ ಒಳಸಂಚಿಗೆ ಮೈಸೂರು ಅರಸರು ಒಳಗಾಗಿ ರಾಜ್ಯಾಧಿಕಾರದಿಂದ ದೂರಸರಿಸಲ್ಪಟ್ಟ ಸಮಯದಲ್ಲಿ (1734 – 1799 ) ರಾಜ ಮನೆತನ ದವರು ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು.

ಆದರೆ, ದುಃಖ , ಸಂಕಟ , ಅವಮಾನಗಳಿಂದ ಮನ ನೊಂದು ರಾಜ್ಯಭಾರ ವನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಎರಡನೇ ಕೃಷ್ಣ ರಾಜ ಒಡೆಯರ ವರ ಧರ್ಮಪತ್ನಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಯವರು ದೇವರ ಮೊರೆಯೊಗಿದ್ದರು. ಆಗ ದೇವರು ಕನಸಿನಲ್ಲಿ ಮೂಡಿಬಂದು ಶ್ರೀರಂಗ ಪಟ್ಟಣದ ಸಮೀಪ ಇರುವ ಬಲಮುರಿಯಲ್ಲಿರುವ ವೆಂಕಟೇಶ್ವರ ಮೂರ್ತಿಯನ್ನು ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಲು ಸೂಚಿಸಿದರು. ಆ ಮೇರೆಗೆ ಸುಲ್ತಾನರ ಗಮನಕ್ಕೆ ಬರದಂತೆ ಗುಟ್ಟಾಗಿ ಮೈಸೂರು ಅರಮನೆ ಆವರಣದಲ್ಲಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಆರಾಧಿಸಿದ ರೆಂಬುದು ಒಂದು ದಂತ ಕಥೆ ಪ್ರಚಲಿತದಲ್ಲಿದೆ. ಬಳಿಕ ಟಿಪ್ಪುಸುಲ್ತಾನ್ 1799 ರ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಮಡಿದಾಗ , ಮೈಸೂರು ಅರಸರು ರಾಜ್ಯಾಧಿಕಾರವನ್ನು ಮರುಪಡೆದರು .ಅಲ್ಲದೆ 5 ವರ್ಷದ ಬಾಲಕ ಮೂರನೇ ಕೃಷ್ಣರಾಜ ಒಡೆಯರ್ ರಿಗೆ , ಜೂನ್ 30 , 1799 ರಲ್ಲಿ ಪಟ್ಟಾಭಿಷೇಕವಾಯಿತು.
ನಂತರ ಮೂರನೇ ಕೃಷ್ಣರಾಜ ಒಡೆಯರ್ ರವರು ಅವರ ಆಡಳಿತಾವಧಿಯಲ್ಲಿ 1825 ರಲ್ಲಿ ಕಿಲ್ಲೆ ವೆಂಕಟರಮಣಸ್ವಾಮಿ ದೇವಸ್ಥಾನವನ್ನು ಮೈಸೂರು ಕೋಟೆಯ ಪಶ್ಚಿಮ ಭಾಗದಲ್ಲಿ ನಿರ್ಮಿಸಿದರು.
ಮೈಸೂರು ಅರಸರ ಇತಿಹಾಸದಲ್ಲಿ ಈ ದೇವಸ್ಥಾನ ಪ್ರಾಮುಖ್ಯತೆ ಪಡೆದಿದೆ.

ಲೇ:ಎಂ.ತುಳಸಿರಾಂ.ಮೈಸೂರು

ತಾಯಿರೂಪದ ಜನ ಪೌರ ಕಾರ್ಮಿಕರು-ಈಶ್ವರಪ್ಪ

0

ಮನೆಯಲ್ಲಿ ತಾಯಿ ಹೇಗೆ ಬೇಸರವಿಲ್ಲದೆ ಎಲ್ಲ ರೀತಿಯ ಸ್ವಚ್ಚತೆ ಕಾರ್ಯ ಕೈಗೊಳ್ಳುವಳೋ ಅದೇ ರೀತಿಯಲ್ಲಿ ಎಲ್ಲ ರೀತಿಯ ಸ್ವಚ್ಚತೆಯನ್ನು ಕೈಗೊಳ್ಳುವ ತಾಯಿ ರೂಪದ ಜನ ಪೌರ ಕಾರ್ಮಿಕರು ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ಪೌರಕಾರ್ಮಿಕರನ್ನು ಕೊಂಡಾಡಿದರು.

ಮಹಾನಗರಪಾಲಿಕೆ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ತಾಯಿ ಹೇಗೆ ಸ್ವಚ್ಚತೆ ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ಬೇಸರವಿಲ್ಲದೆ ಮಾಡುತ್ತಾಳೋ ಅದೇ ರೀತಿ ಪೌರಕಾರ್ಮಿಕರು ಯಾವುದೇ ಬೇಸರವಿಸಲ್ಲದೆ ನಗರ, ಊರುಗಳಲ್ಲಿನ ಎಲ್ಲ ರೀತಿಯ ಕಸ, ಕೊಳೆಗಳನ್ನು ಸ್ವಚ್ಚಗೊಳಿಸುತ್ತಾರೆ. ಬೇಡಿಕೆ ಹಲವಾರು ಇದ್ದರೂ, ಈಡೇರದಿದ್ದರೂ ತಮ್ಮ ಕಾಯಕವನ್ನು ಬಿಡದೇ ಮುಂದುವರೆಸಿಕೊಂಡು ಹೋಗುವ ತಾಯಿಯಂತಹ ಜನ ನೀವು ಎಂದ ಅವರು ನಾವು ಎಂದಿಗೂ ಪೌರಕಾರ್ಮಿಕರನ್ನು ತಾತ್ಸಾರ ಮಾಡುವಂತಿಲ್ಲ. ನಾವೆಲ್ಲ ಒಂದೇ, ಸಮಾಜ ಶುದ್ದಿ ಮಾಡುವ ಕೆಲಸವನ್ನು ಎಲ್ಲ ಸೇರಿ ಮಾಡೋಣ ಎಂದರು.

ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 6 ಎಕರೆ 9 ಗುಂಟೆ ಜಮೀನಿನಲ್ಲಿ ಒಟ್ಟು 168 ಮನೆಗಳ ನಿರ್ಮಾಣ ಆಗುತ್ತಿದೆ. ಈ ಜಾಗ ಪಡೆಯಲು ಪೌರಕಾರ್ಮಿಕರು ಬಹಳ ಶ್ರಮಪಟ್ಟಿದ್ದಾರೆ. ಶೇ.60 ರಷ್ಟು ಕೆಲಸ ಆಗಿದೆ. ಒಂದು ಮನೆಗೆ ರೂ.8.25 ಲಕ್ಷ ವೆಚ್ಚ ತಗುಲುತ್ತದೆ. ಅದರಲ್ಲಿ ಫಲಾನುಭವಿ ತಲಾ ರೂ.1.5 ಲಕ್ಷ ನೀಡಬೇಕು. ಆದರೆ ಇದುವರೆಗೆ ಯಾರೂ ಹಣ ಕಟ್ಟಿಲ್ಲ. ಈ ಹಣವನ್ನು ಸಹ ಪಾಲಿಕೆಯ 24.10 ಅನುದಾನದಲ್ಲಿ ಭರಿಸಬಹುದೆಂದು ತಿಳಿಸಿದ್ದೀರಿ. ಈ ರೀತಿ ಹಣ ಭರಿಸಿ ಸಂಪೂರ್ಣವಾಗಿ ತಮಗೆ ಉಚಿತವಾಗಿ ಮನೆಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ನಗರದ ಮಾರ್ನಮಿಬೈಲ್ ಮತ್ತು ಹೊಸಮನೆಯಲ್ಲಿ ಪೌರಕಾರ್ಮಿಕರು ವಾಸಿಸುತ್ತಿರುವ 80+40 ಒಟ್ಟು 120 ಮನೆಗಳನ್ನು ಸಕ್ರಮೀಕರಣಗೊಳಿಸಲು ಸರ್ವೇ ಕಾರ್ಯ ನಡೆಸಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಸಿದ್ದೇಶ್ವರ ನಗರದಲ್ಲಿ ರೂ.4.5 ಕೋಟಿ ಅನುದಾನದಲ್ಲಿ ರಾಜ್ಯದಲ್ಲಿಯೇ ಮೊದಲ ಪೌರಕಾರ್ಮಿಕರ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ನೀಡಬಹುದಾದ ಯಾವುದೇ ರೀತಿಯ ಸೌಲಭ್ಯಗಳನ್ನು ಕೊಡಿಸುವ ಪ್ರಯತ್ನ ಮಾಡುವೆ ಎಂದು ಶಾಸಕರಾದ ಕೆ. ಎಸ್ ಈಶ್ವರಪ್ಪನವರು ತಿಳಿಸಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ದೇಶದ ಆರೋಗ್ಯ ಕಾಪಾಡುವ ಕೆಲಸ ಮಾಡುವ ನಿಮಗೆ ಅಭಿನಂದನೆಗಳು. ಕೋವಿಡ್ ಸಂಕಷ್ಟ ಸಮಯದಲ್ಲಿ ನೀವು ನಿಮ್ಮ ಜೀವದ ಹಂಗನ್ನು ತೊರೆದು ಸೇವೆ ನೀಡಿರುವುದು ಅವಿಸ್ಮರಣೀಯ. ನಾಡಿಗೆ ನಿಮ್ಮ ಸೇವೆ ವಿಶೇಷವಾಗಿದ್ದು, ನಮ್ಮ ಪ್ರಧಾನಿಯವರು ಉತ್ತರ ಪ್ರದೇಶದಲ್ಲಿ ಪೌರಕಾರ್ಮಿಕನ ಪಾದ ತೊಳೆದು ಪೂಜ್ಯರಿಗೆ ಸರಿಸಮನಾದ ಸ್ಥಾನವನ್ನು ನಿಮಗೆ ನೀಡಿದ್ದಾರೆ ಎಂದರು.

ಪೌರಕಾರ್ಮಿಕರನ್ನು ನೇರ ಪಾವತಿಯಿಂದ ಖಾಯಂ ಪಾವತಿಗೆ ಮತ್ತು ಗೌರವಧನವನ್ನು ರೂ.3500 ದಿಂದ 7000 ದವರೆಗೆ ಹೆಚ್ಚಿಸುವ ಮೂಲಕ ಸರ್ಕಾರ ಉತ್ತಮ ನಿಲುವು ಕೈಗೊಂಡಿದೆ. ಹಾಗೆಯೇ ಲೋಡರ್ಸ್, ಡ್ರೈವರ್‍ಗಳು, ಕ್ಲೀನರ್ಸ್ ಇತರೆ ಹೊರಗುತ್ತಿಗೆ ಸಿಬ್ಬಂದಿಗಳ ಬೇಡಿಕೆಗಳನ್ನು ಸಹ ಹಂತ ಹಂತವಾಗಿ ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರೀತಿ ಮಕ್ಕಳು ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದ ಅವರು ಸೈನಿಕರಷ್ಟೇ ತ್ಯಾಗದ ಕೆಲಸ ನಿಮ್ಮದು. ದೇಶದ ವಿಚಾರ ಬಂದಾಗ ನಾವೆಲ್ಲ ಒಟ್ಟಾಗಿರಬೇಕೆಂದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಪೌರಕಾರ್ಮಿಕರ ದಿನಾಚರಣೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಸ್ವಚ್ಚತೆ ಕಾಪಾಡುವ ನಿಮ್ಮ ಕಾರ್ಯಕ್ಕೆ ಅನಂತ ಅಭಿನಂದನೆಗಳು. ಜಿಲ್ಲಾಡಳಿತ ಸದಾ ನಿಮ್ಮ ಜೊತೆ ಇರಲಿದೆ ಎಂದು ತಿಳಿಸಿದರು.

ಮಹಾನಗರಪಾಲಿಕೆ ಮಹಾಪೌರರಾದ ಸುನೀತ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಚನ್ನಬಸಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಮಾರಪ್ಪ ಮಾತನಾಡಿದರು.

ಪಾಲಿಕೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್ ಗೋವಿಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಸ್ವಾಗತಿಸಿದರು. ಪಾಲಿಕೆ ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಪೌರಕಾರ್ಮಿಕರು, ಅಧಿಕಾರಿ, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ವಿಜ್ಞಾನ ನಾಟಕ ಸ್ಪರ್ಧೆ-ಡಿ.ಬಿ.ಹಳ್ಳಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

ವಿಜ್ಞಾನ ನಾಟಕ ಸ್ಪರ್ಧೆ ಅಪ್ಪಟ ಗ್ರಾಮೀಣ ಪ್ರತಿಭೆ ಪದ್ಮದೀಪ ಪಬ್ಲಿಕ್ ಶಾಲೆಯವಿದ್ಯಾರ್ಥಿಗಳು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಉತ್ತಮ ನಟಿ ಅನುಶ್ರೀ ಉತ್ತಮ ನಿರ್ದೇಶಕ ಅಜಯ್ ನಿನಾಸಂ, ಪದ್ಮ ದೀಪ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ
ವಿಜ್ಞಾನ ವಿಷಯದಲ್ಲಿ ಮಕ್ಕಳಿಗೆ ಪ್ರಯೋಗಾತ್ಮಕವಾದ ನೈಜ ಅನುಭವ ದೊರಕಲು ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ಹಾಗೂ ಸ್ವತಃ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕರ್ನಾಟಕ ಸರ್ಕಾರ ವಿಜ್ಞಾನ ನಾಟಕವನ್ನು ಹಮ್ಮಿಕೊಂಡಿದ್ದು ವಿಭಾಗ ಮಟ್ಟದ ವಿಜ್ಞಾನ ನಾಟಕ ಹಾಸನ ಜಿಲ್ಲೆಯ ಡಯಟ್ ನವರು ನಡೆಸಿದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭದ್ರಾವತಿ ತಾಲೂಕು ಡಿ ಬಿ ಹಳ್ಳಿ ಗ್ರಾಮದ ಪದ್ಮ ದೀಪ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬೇಸಿಕ್ ಸೈನ್ಸ್ ಫಾರ್ ಸಸ್ಟೈನಬಲ್ ಲೈಫ್ ಎಂಬ ಮುಖ್ಯ ವಿಷಯ ಆಧಾರಿತ ಕರೋನ ಪ್ಯಾಡೆಮಿಕ್ ಸೋಶಿಯಲ್ ಎಫೆಕ್ಟ್ ಎಂಬ ವಿಷಯವನಾಧರಿಸಿ ಅಜಯ್ ಗೌಡ ನೀನಾಸಂ ರಚಿಸಿ ನಿರ್ದೇಶಿಸಿದ ನಾಟಕ ಡೇರ್ ಡೇವಿಲ್ ವೈರಸ್ ಭೂಮಿಗೆ ನೂರೆಂಟು ಸರ್ಕಸ್ಸು ನಾಟಕವನ್ನು ಪದ್ಮದೀಪ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಅನುಶ್ರೀ ಧನ್ಯಶ್ರೀ ಭೂಮಿಕಾ ಧೀಮಂತ್ ಭುವನ್ ಮಹಮ್ಮದ್ ರಫೀಕ್ ಪ್ರಜ್ವಲ್ ರುದ್ರೇಶ್ ಹೇಮಂತ್ ಇವರು ಮನೋಜ್ಞವಾಗಿ ಅಭಿನಯಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ
ಗ್ರಾಮೀಣ ಭಾಗದ ಮಕ್ಕಳು ತಮ್ಮ ಪ್ರತಿಭೆಯ ಮೂಲಕ ನಗರ ಭಾಗದ ವಿದ್ಯಾರ್ಥಿಗಳಿಗೂ ಪೈಪೋಟಿ ನೀಡಿ 13 ವರ್ಷಗಳ ವಿಜ್ಞಾನ ನಾಟಕ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯ ಪದ್ಮ ದೀಪ ಪಬ್ಲಿಕ್ ಸ್ಕೂಲ್, ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಾಟಕವನ್ನು ನೀಡಿ ಮಾದರಿಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕಿರಣ್ ಕುಮಾರ್ ಎಸ್ ಯು ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಪ್ರಾಂಶುಪಾಲರಾದ ತಂಗರಾಜು ಕೆ ರವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸಿದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎನ್ನುವುದನ್ನು ನಮ್ಮ ವಿದ್ಯಾರ್ಥಿಗಳು ಸಾಬೀತುಪಡಿಸಿ ಶಿವಮೊಗ್ಗ ಜಿಲ್ಲೆಯನ್ನು ರಾಜ್ಯಮಟ್ಟ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ರಮವಹಿಸಿ ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೂ ಸಂಸ್ಥೆ ಪರವಾಗಿ ಹಾಗೂ ಶಾಲಾ ಸಿಬ್ಬಂದಿ ವರ್ಗದ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ

ಅಪರೂಪದ ಸುದ್ದಿ ಆರ್ ಎಸ್ಎಸ್ ಪ್ರಮುಖರ ಮಸೀದಿ-ಮದರಸಾ ಭೇಟಿ

0

ಕಳೆದ ಗುರುವಾರ ಆರ್ ಎಸ್ ಎಸ್ ಪ್ರಮುಖರಾದ ಮೋಹನ್ ಭಾಗವತ್ ರವರು ದೆಹಲಿಯ ಕಸ್ತೂರಿ ಬಾ ಗಾಂಧಿ ಮಾರ್ಗದಲ್ಲಿನ ಮಸೀದಿಗೆ ಭೇಟಿ ನೀಡಿದ್ದರು. ಆಜಾದ್ ಪುರದಲ್ಲಿನ ತಜ್ವಿದುಲ್ ಖುರಾನ್ ಮದರಸಾಕ್ಕೂ ಭೇಟಿ ನೀಡಿದ್ದರು. ಇದು ಮದರಸಕ್ಕೆ ಮೋಹನ್ ಭಾಗವತ್ ರವರ ಮೊದಲ ಭೇಟಿಯಾಗಿದೆ. ಮದರಸಾದ ಮಕ್ಕಳೊಂದಿಗೆ ಅವರು ಸಂವಾದ ಮಾಡಿದ್ದಾರೆ. ಮಕ್ಕಳು ಖುರಾನ್ ಪಠಣ ಮಾಡಿದರು. ಅಲ್ಲದೇ ವಂದೇ ಮಾತರಂ ಮತ್ತು ಜೈ ಹಿಂದ್ ಘೋಷಣೆಯನ್ನೂ ಮಾಡಿದರು.

ಎಲ್ಲಾ ಧರ್ಮಗಳನ್ನೂ ನಾವು ಗೌರವಿಸಬೇಕು ಎಂದು ಭಾಗವತ್ ನುಡಿದರು ಎಂದು ವರದಿಯಾಗಿದೆ.
ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹಮ್ಮದ್ ಇಲಿಯಾಸಿ ಅವರು ಮೋಹನ್ ಭಾಗವತ್ ಅವರನ್ನ ರಾಷ್ಟ್ರಪಿತ ಎಂದು ಕರೆದಾಗ ಭಾಗವತ್ ಅವರು ತಕ್ಷಣ ಆಕ್ಷೇಪಿಸಿ ರಾಷ್ಟ್ರ ಪಿತರು ಒಬ್ಬರೇ ಆಗಿದ್ದಾರೆ ಮತ್ತು ನಾವೆಲ್ಲರೂ ಭಾರತದ ಮಕ್ಕಳು ಎಂದರು.

ಇದಕ್ಕೂ ಮುನ್ನ ಮೋಹನ್ ಭಾಗವತ್ ರವರು ಮುಸ್ಲಿಂ ಸಮುದಾಯದ ಬುದ್ದಿಜೀವಿಗಳನ್ನ ಭೇಟಿ ಮಾಡಿದರು.

ದೆಹಲಿಯ ಮಾಜಿ ಲೇ. ಗವರ್ನರ್ ನಜೀಬ್ ಜಂಗ್, ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಎಸ್.ವೈ. ಖುರೇಶಿ , ಅಲಿಘಡ್ ಮುಸ್ಲಿಂ ವಿವಿಯ ಮಾಜಿ ಕುಲಪತಿ ಜಮೀರ್ ಉದ್ದಿನ್ ಶಾ, ಮಾಜಿ ಸಂಸದ ಶಹೀದ್ ಸಿದ್ದಿಕಿ, ಉದ್ಯಮಿ ಸಯೀದ್ ಶರ್ವಾನಿ,ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಬಳಿಕ ಮಹತ್ವದ ಮಾತುಕತೆ ಬಗ್ಗೆ ಪ್ರತಿಕ್ರಿಯಿಸಿದ ಇಲ್ಯಾಸಿ, ಮೋಹನ್ ಭಾಗವತ್ ಅವರಿಗೆ ಭೇಟಿಯಾಗಿ ನಾನೇ ಆಹ್ವಾನ ನೀಡಿದ್ದೆ. ಅವರು ಒಬ್ಬ ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಕೂಡ ಹೌದು. ಸರ್ವರ ಭಾಜನರಾಗುವ ಮೇರು ವ್ಯಕ್ತಿತ್ವದವರು ಎಂದು ಕೊಂಡಾಡಿದರು.

ನಮ್ಮ ಈ ದೇಶವಾಸಿಗಳ ಡಿಎನ್ ಎ ಒಂದೇ ಆಗಿದೆ. ಆದರೆ ಧಾರ್ಮಿಕ ರೀತಿ ರಿವಾಜು ಭಿನ್ನವಾಗಿದೆ. ದೇವರನ್ನು ಪೂಜಿಸುವ ವಿಧಾನ ಕೂಡ ಬೇರೆಯೇ ಇದೆ. ಹಾಗಿದ್ದೂ ಈ ಜಗತ್ತಿನಲ್ಲಿ ಮಾನವೀಯತೆಗಿಂತ ದೊಡ್ಡ ಧರ್ಮ ಬೇರೊಂದು ಇಲ್ಲ. ಜೊತೆಗೆ ಎಲ್ಲಕ್ಕಿಂತ ಮೊದಲು ನಮ್ಮ ದೇಶ ಹಾಗೂ ಅದರ ರಕ್ಷಣೆಯಾಗಿದೆ. ಒಂದೇ ಕುಟುಂಬದಂತೆ ನಾವು ಮುಖಂಡರು ಸಭೆ ನಡೆಸಿದ್ದು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಹಿಜಾಬ್ ವಿವಾದ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

0

ತೀವ್ರ ಧರ್ಮದಂಗಲ್​ಗೆ ಕಾರಣವಾಗಿದ್ದ ಹಿಜಾಬ್ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್​​ನಲ್ಲಿ ಅಂತ್ಯಗೊಂಡಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್​​ ತೀರ್ಪು ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟ್​ನಲ್ಲಿ ಹಿಜಾಬ್ ವಿಚಾರಣೆ ಅಂತ್ಯವಾಗಿದ್ದು ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಸುಮಾರು 10 ದಿನಗಳ ಕಾಲ ಅರ್ಜಿ ವಿಚಾರಣೆ ನಡೆಸಿ, ಅರ್ಜಿದಾರರ ಪರ ವಕೀಲರು ಮತ್ತು ಸರ್ಕಾರ ಪರ ವಕೀಲರ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಹಿಜಾಬ್ ನಿಷೇಧ ಸರಿಯೇ ಅಥವಾ ತಪ್ಪೇ ಎಂಬ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಹಿಜಾಬ್ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್ ಪೀಠ
ಉಡುಪಿಯ ಸರ್ಕಾರಿ ಕಾಲೇಜಿನಿಂದ ಶುರುವಾಗಿದ್ದ ಹಿಜಾಬ್ ವಿವಾದ ಇಡೀ ರಾಜ್ಯಾದ್ಯಂತ ಪಸರಿಸಿತ್ತು.

ಹಿಜಾಬ್​ಗೆ ಪ್ರತಿಯಾಗಿ ಕೆಲ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದರಿಂದ ವಿವಾದ ಮತ್ತಷ್ಟು ಭುಗಿಲೆದ್ದಿತ್ತು. ಬಳಿಕ ರಾಜ್ಯ ಸರ್ಕಾರ ಹಿಜಬ್ ನಿಷೇಧ ಆದೇಶ ಹೊರಡಿಸಿತ್ತು. ಪ್ರಕರಣ ಹೈಕೋರ್ಟ್​ ಮೆಟ್ಟಿಲೇರಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್​​ ಮೊರೆ ಹೋಗಿದ್ದವು.

ಹಿಜಾಬ್ ಪರ ವಕೀಲರು ಮತ್ತು ಸರ್ಕಾರದ ಪರ ವಕೀಲರ ವಾದ ಮಂಡನೆ ಆಲಿಸಿರುವ ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.

ಶಿವಮೊಗ್ಗ ಬಿಜೆಪಿ ಯಿಂದ ಮೋದೀಜಿ ಜನ್ಮ ದಿನಾಚರಣೆ

0

ಹೆಮ್ಮೆಯ ಪ್ರಧಾನ ಮಂತ್ರಿಗಳು ಹಾಗೂ ವಿಶ್ವನಾಯಕರಾದ
ಶ್ರೀ ನರೇಂದ್ರ ಮೋದಿ ರವರ 72 ನೇ ಜನ್ಮದಿನಾಚರಣೆಯ ಅಂಗವಾಗಿ
ದಿ.23 ಸೆ. 2022 ರಂದು ಅಮೃತ ಸರೋವರ ದ ಅಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ವಿಭಾಗ ಪ್ರಧಾನಿಗಳಾದ ಗಿರೀಶ್ ಪಟೇಲ್ ರವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಎನ್ ಕೆ ಜಗದೀಶ್ ರವರು, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಬಳ್ಳೇಕೆರೆ ಸಂತೋಷ್ , ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷರಾದ ಎನ್ ಜಿ ನಾಗರಾಜ್, ಬಿಜೆಪಿ ಕೋರ್ ಕಮಿಟಿ ಸದಸ್ಯರಾದ ಕೆ ಈ ಕಾಂತೇಶ್ ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ.ಉಪ ಮಹಾಪೌರರಾದ ಶಂಕರ್ ಗನ್ನಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸುರೇಖಾ ಮುರಳಿಧರ್ ಹಾಗೂ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ರೈತ ಮೋರ್ಚಾ ಅಧ್ಯಕ್ಷರಾದ ಕಾಚಿನಕಟ್ಟೆ ಸತ್ಯನಾರಾಯಣ ಅಭಿಯಾನ ಪ್ರಮುಖರಾದ ಎಸ್ಟಿ ಪುರುಷೋತ್ತಮ್ ಮಹಾನಗರಪಾಲಿಕೆ ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ಮಹಾಶಕ್ತಿಕೇಂದ್ರದ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿ, ಶಕ್ತಿಕೇಂದ್ರ ಪ್ರಮುಖರು, ವಾರ್ಡ್ ನ ಅಧ್ಯಕ್ಷರು, ಬೂತ್ ನ ಸದಸ್ಯರುಗಳು, ಪಕ್ಷದ ಎಲ್ಲಾ ಪ್ರಮುಖ ಜವಾಬ್ದಾರಿಯುತ ಕಾರ್ಯಕರ್ತರುಗಳು ಉಪಸ್ಥಿತರಿದರು.

ಕೃಷಿ ನೀರಾವರಿ ಪಂಪ್ ಸೆಟ್ ಅಕ್ರಮ ಸಕ್ರಮ ಹಂತಹಂತವಾಗಿ ಮಾಡಲಾಗುತ್ತದೆ

0

ರಾಜ್ಯದಲ್ಲಿ 6 -7 ಲಕ್ಷ ಅಕ್ರಮ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು ಹಂತ ಹಂತವಾಗಿ ಆದ್ಯತೆ ಮೇಲೆ ಪ್ರಕ್ರಿಯೆ ಪೂರ್ಣಗೊಳಿಸಲು ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಅವರು, ಅಕ್ರಮ ಸಕ್ರಮದ ಬಗ್ಗೆ ರೈತರಿಂದ ಒತ್ತಾಯ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೃಷಿ ನೀರಾವರಿ ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆದವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಪ್ರತ್ಯೇಕ ಟಿಸಿ(ವಿದ್ಯುತ್ ಪರಿವರ್ತಕ) ಅಳವಡಿಸುವಂತೆ ಕೋರಿ ಸುಮಾರು 7 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.