Thursday, March 26, 2026
Thursday, March 26, 2026
Home Blog Page 1384

ದರಯೇರಿಕೆ ಶಾಕ್ ಮುಂದುವರೆಸಿರುವ ಕೆಎಂಎಫ್

0

ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ ಮಾಡುತ್ತೇವೆ ಎಂದು ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (ಅ.31) ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಅದರಂತೆ ಈಗ ನಂದಿನಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ 3 ರೂಪಾಯಿ ಏರಿಕೆ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ.

ಈ ಹೊಸ ದರ ಇಂದು (ನ.14) ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಇನ್ನು ಹೆಚ್ಚಳ ಮಾಡಲಾದ ದರವನ್ನು, ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ವರ್ಗಾವಣೆ ಮಾಡಲಾಗುವುದು ಎಂದು ಕೆಎಂಫ್​​ ತಿಳಿಸಿದೆ.

ಪ್ರತಿಮೆ ಅನಾವರಣಕ್ಕೆ ಆಮಂತ್ರಿಸದ ಬಗ್ಗೆಏನೂ ಹೇಳುವುದಿಲ್ಲ ಎಂದ ಮಾಜಿ ಪ್ರಧಾನಿ

0

ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಆಹ್ವಾನಿಸದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮಕ್ಕೆ ಹೆಚ್.ಡಿ.ದೇವೇಗೌಡರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ಈ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ.
ಯಾರ್ಯಾರು ಏನೇನು ಮಾಡಿದರು ಎಂದು ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಹಾಸನ ಪ್ರವಾಸ ಮಾಡುತ್ತೇನೆ. ಹಾಸನದ ಪ್ರತಿ ಕ್ಷೇತ್ರದಲ್ಲಿಯೂ ಒಂದೊಂದು ದಿನ ಪ್ರವಾಸ ಮಾಡುತ್ತೇನೆ. ಹಾಸನ ಪ್ರವಾಸದ ಬಳಿಕ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.

ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡಲು ಸಚಿವರ ಸೂಚನೆ

0

ಯಾವುದೇ ಗೊಂದಲಗಳು ಇಲ್ಲದೆ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡುವಂತೆ ಆಯಾ ತಾಲೂಕಿನ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ತಳವಾರ್ ಸಮುದಾಯದ ಸರ್ಕಾರಕ್ಕೆ ಅಭಿನಂದನೆ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ಕೇಂದ್ರ ಸರ್ಕಾರದ ಸೂಚನೆಯಂಎ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ಆಯಾ ತಾಲೂಕಿನ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಅಂತ ತಿಳಿಸಿದರು.

ತಳವಾರ ಸಮುದಾಯದ ಬಹುದಿನಗಳ ಬೇಡಿಕೆಯಾದ ಮೀಸಲಾತಿಯನ್ನು ನಮ್ಮ ಸರ್ಕಾರ ಈಡೇರಿಸಿದ್ದು, ಇದಲ್ಲದೇ ಶೇ.3 ರಿಂದ 7ಕ್ಕೆ ಏರಿಸಿದ್ದು, ಜೊತೆಗೆ ಎಸ್ಟಿ ಪ್ರಮಾಣಪತ್ರ ನೀಡಲಾಗಿದೆ ಎಂದು ಹೇಳಿದ್ದಾರೆ.

ಮಕ್ಕಳ ದಿನ ಮಹತ್ವದ ದಿನ

0

ನವೆಂಬರ್ 14 ಮಕ್ಕಳ ದಿನಾಚರಣೆ… ಇದೊಂದು ಮಕ್ಕಳ ಹಬ್ಬ ಎಂಬುದು ನಮಗೆಲ್ಲ ತಿಳಿದೇ ಇದೆ…

ಮಕ್ಕಳ ದಿನಾಚರಣೆಯ ವಿಶೇಷ ಏನು ಎಂದರೆ ನಮ್ಮ ಭಾರತದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರು ಅವರ ಜನ್ಮದಿನ. ನೆಹರು ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿಯಂತೆ… ಅವರು ದೈವಾಧೀನರಾದ ನಂತರ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಆರಂಭವಾಯಿತು.

ಮಕ್ಕಳೆಂದರೆ ದೇವಲೋಕದ ಪುಷ್ಪಗಳಿದ್ದಂತೆ… ಇಂದಿನ ಮಕ್ಕಳೇ ಮುಂದಿನ ಹಿತ ಚಿಂತಕರು ಎಂಬಂತೆ ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಿದಾಗ ಒಂದು ಉತ್ತಮ ಮನುಷ್ಯನಾಗಲು ಸಾಧ್ಯ…

ಮಕ್ಕಳ ದಿನಾಚರಣೆ ಎಂದರೆ ಮೊದಲೇ ಹೇಳಿರುವಂತೆ ಮಕ್ಕಳ ಹಬ್ಬ. ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಿ ಮಕ್ಕಳಿಗೆ ಒಂದಿಷ್ಟು ಚಟುವಟಿಕೆಗಳನ್ನ ನೀಡುತ್ತಾರೆ. ಜೊತೆಗೆ ನೆಹರು ಅವರ ಒಂದಿಷ್ಟು ಆದರ್ಶಗಳನ್ನ ತಿಳಿ ಹೇಳುತ್ತಾರೆ.

ಮಕ್ಕಳಿಗೆ ಆಟ, ಚಿತ್ರಕಲೆ ಅರ್ಧ ಸ್ಪರ್ಧೆ, ಹಾಡು ನೃತ್ಯ ಹೀಗೆ ನಾನಾ ಚಟುವಟಿಕೆಗಳನ್ನ ಮಕ್ಕಳಿಗೆ ಶಾಲಾ ಶಿಕ್ಷಕರು ನೀಡುತ್ತಾರೆ.

ಬಿತ್ತಿದಂತೆ ಬೆಳೆ ಎನ್ನುವ ಹಾಗೆ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಲು ಹಿರಿಯರ ಸಹಾಯ ಬಹಳ ಮುಖ್ಯವಾಗಿರುತ್ತದೆ. ಮಕ್ಕಳಲ್ಲಿ ಒಳ್ಳೆಯ ಹವ್ಯಾಸ, ಸಹಕಾರ ಮನೋಭಾವ, ಪ್ರೀತಿ, ವಿಶ್ವಾಸ ಇಂತಹ ಒಳ್ಳೆಯ ವಿಚಾರಗಳನ್ನು ಹೆಚ್ಚು ಹೆಚ್ಚು ಮಕ್ಕಳಿಗೆ ಕಲಿಸುವುದು ಒಳಿತು…

ಮಕ್ಕಳ ಉತ್ತಮ ಬೆಳವಣಿಗೆಗೆ ಪೋಷಕರು, ಶಿಕ್ಷಕರ ಪಾತ್ರ ಬಹುದೊಡ್ಡದಾಗಿದೆ… ಏಕೆಂದರೆ ಮಕ್ಕಳ ತಪ್ಪುಗಳನ್ನ ತಿದ್ದು ಸರಿಪಡಿಸಿ, ಒಳ್ಳೆಯ ಮಾರ್ಗವನ್ನು ತೋರಿಸುವುದು ಇವರುಗಳೇ…

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಚಿಕ್ಕವರಿದ್ದಾಗಲೇ ಅವರ ತಪ್ಪುಗಳನ್ನ ತಿದ್ದಿ ತಿಳಿ ಹೇಳಿದಾಗ ಮಾತ್ರ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ… ಎಲ್ಲಾ ಮನೆಯ ಪುಟಾಣಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು…

  • ರಚನಾ.ಕೆ.ಆರ್

ಕ್ಷಯ ,ಎಚ್ ಐ ವಿ ಮಧುಮೇಹ ಕಾಯಿಲೆಗಳಿಗೆ ಅಗ್ಗದ ದರದಲ್ಲಿ ಔಷಧ ಲಭ್ಯ

0

ಟಿಬಿ, ಎಚ್‌ಐವಿ, ಹೆಪಟೈಟಿಸ್ ಬಿ, ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಪರಿಹಾರ ನೀಡುವ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಭಾನುವಾರ ಜಾರಿಗೆ ತಂದಿದೆ. ಇದರಿಂದ ಅನೇಕ ರೋಗಗಳಿಗೆ ಔಷಧಗಳು ಅಗ್ಗವಾಗಲಿವೆ.

ಇದು ಪೇಟೆಂಟ್ ಔಷಧಗಳನ್ನು ಒಳಗೊಂಡಿದೆ.

ಸುಮಾರು ಏಳು ವರ್ಷಗಳ ನಂತರ ನವೀಕರಿಸಲಾದ ಈ ಪಟ್ಟಿಯನ್ನು ಆರೋಗ್ಯ ಸಚಿವಾಲಯವು ಸೆಪ್ಟೆಂಬರ್ 13 ರಂದು ಬಿಡುಗಡೆ ಮಾಡಿದೆ. ಇದನ್ನು 350 ಕ್ಕೂ ಹೆಚ್ಚು ತಜ್ಞರು ಸಿದ್ಧಪಡಿಸಿದ್ದಾರೆ ಮತ್ತು ಒಟ್ಟು 384 ಔಷಧಿಗಳನ್ನು ಒಳಗೊಂಡಿದೆ. ಇವುಗಳಲ್ಲಿ 4 ಕ್ಯಾನ್ಸರ್ ವಿರೋಧಿ ಔಷಧಗಳು ಸೇರಿದಂತೆ 34 ಹೊಸ ಔಷಧಿಗಳಿವೆ. 26 ಔಷಧಗಳನ್ನೂ ತೆಗೆಯಲಾಗಿದೆ. 2015ರ ಪಟ್ಟಿಯಲ್ಲಿ 376 ಔಷಧಗಳಿದ್ದವು. ಈ ಔಷಧಿಗಳನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿಗದಿಪಡಿಸಿದ ಬೆಲೆಗಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ. ಕೋವಿಡ್ ಔಷಧಿಗಳು ಮತ್ತು ಲಸಿಕೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಏಕೆಂದರೆ ಅವುಗಳನ್ನು ತುರ್ತು ಬಳಕೆಗೆ ಮಾತ್ರ ಅನುಮತಿಸಲಾಗಿದೆ. ಪಟ್ಟಿಯಿಂದ ಹೊರಗುಳಿದಿರುವ ಔಷಧಿಗಳಲ್ಲಿ ರಾನಿಟಿಡಿನ್, ಬ್ಲೀಚಿಂಗ್ ಪೌಡರ್, ವಿಟಮಿನ್ ಸಪ್ಲಿಮೆಂಟ್ ನಿಕೋಟಿನಮೈಡ್ ಸೇರಿವೆ.

ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ

ರಾಜ್ಯ ಸರ್ಕಾರದಿಂದ ಈಗಾಗಲೇ ಬಡವರು, ರೈತರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾನಿಧಿ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿತ್ತು. ಈಗ ಮುಂದುವರೆದು ಈ ಯೋಜನೆಯನ್ನು ರಾಜ್ಯದ ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೂ ವಿಸ್ತರಿಸಿದೆ.

ಈ ಮೂಲಕ ರಾಜ್ಯದ ಹಳದಿ ಬೋರ್ಡ್ ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದಿದೆ.

ಆಟೋ, ಟ್ಯಾಕ್ಸಿ ಚಾಲಕ ಮೆಟ್ರಿಕ್ ನಂತ್ರದ ಉನ್ನತ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ನೋಂದಾಯಿತ ಶಿಕ್ಷಣ ಸಂಸ್ಥೆಗಳಲ್ಲಿ ಪಿಯು, ಡಿಪ್ಲೋಮಾ, ಐಟಿಐ, ಪದವಿ, ನರ್ಸಿಂಗ್, ಬಿಇ, ಬಿ.ಟೆಕ್, ಬಿ.ಫಾರ್ಮ್, ಪ್ಯಾರಾ ಮೆಡಿಕಲ್, ಎಲ್ ಎಲ್ ಬಿ ಸೇರಿದಂತೆ ಎಲ್ಲಾ ಸ್ನಾತಕೋತ್ತರ ಕೋರ್ಸ್ ಪ್ರವೇಶ ಪಡೆದಂತ ವಿದ್ಯಾರ್ಥಿಗಳು ಈ ವಿದ್ಯಾನಿಧಿ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.

ರೂ.2,500 ಪದವಿ ಪೂರ್ವ, ಪಿಯುಸಿ, ಐಟಿಐ ಹಾಗೂ ಡಿಪ್ಲೋ ಕೋರ್ಸ್ ಸೇರಿದಂತ ವಿದ್ಯಾರ್ಥಿಗಳಿಗೆ ಆದರೆ, ರೂ.3,000 ವಿದ್ಯಾರ್ಥಿನಿಯರಿಗೆ ಆಗಿದೆ.
ರೂ.5,000 ಎಲ್ಲಾ ಪದವಿಯ ವಿದ್ಯಾರ್ಥಿಗಳಿಗೆ, ರೂ.5,500 ವಿದ್ಯಾರ್ಥಿನಿಯರಿಗೆ
ರೂ.7,500 ಎಲ್ ಎಲ್ ಬಿ, ಬಿ.ಫಾರ್ಮ್, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ, ರೂ.8,000 ವಿದ್ಯಾರ್ಥಿನಿಯರಿಗೆ.
ರೂ.10,000 ಬಿಇ, ಬಿಟೆಕ್ ಹಾಗೂ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಆದ್ರೇ ರೂ.11,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ರಾಜ್ಯ ಸರ್ಕಾರ ನೀಡಲಾಗುತ್ತಿರುವಂತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕದಲ್ಲಿ ಹಳದಿ ಬೋರ್ಡ್ ಆಟೋ ಮತ್ತು ಕ್ಯಾಬ್ ಚಾಲಕರ ಮಕ್ಕಳು ಅರ್ಹರಾಗಿರುತ್ತಾರೆ.

ರಾಜ್ಯದ ಪ್ರಾದೇಶಿಕ, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕ್ಯಾಬ್, ಆಟೋರಿಕ್ಷಾ ಕ್ಯಾಬ್ ವರ್ಗಗಳ ವಾಹನಗಳನ್ನು ಚಲಾಯಿಸುವ, ಸಾರಧಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾಪತ್ರ ಹೊಂದಿರುವಂತ ಯೆಲ್ಲೋ ಬೋರ್ಟ್ ಚಾಲಕರು, ತಮ್ಮ ಮಕ್ಕಳಿಗಾಗಿ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು http://sevasindhu.karnataka.gov.in ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲವೇ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ರಾಜ್ಯದಲ್ಲಿ 18 ಲಕ್ಷ ಮನೆಗಳ ನಿರ್ಮಾಣ- ಬೊಮ್ಮಾಯಿ

0

ಕರ್ನಾಟಕ ರಾಜ್ಯದಲ್ಲಿ ಎಲ್ಲರಿಗೂ ವಸತಿ ಕಲ್ಪಿಸಲು ಬಹಳ ದೊಡ್ಡ ಪ್ರಮಾಣದಲ್ಲಿ ನಾವು ಕ್ರಮ ತೆಗೆದುಕೊಂಡಿದ್ದೇವೆ. 18 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಐದು ಲಕ್ಷ‌ ಮನೆ ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಭಾನುವಾರ ವಸತಿ ಇಲಾಖೆಯ ಕರ್ನಾಟಕ ಗೃಹ ಮಂಡಳಿ ವತಿಯಿಂದ ಕೆಂಗೇರಿ ವಲಗೇರಹಳ್ಳಿಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರ 2018 ರಲ್ಲಿ ಸರ್ಕಾರದ ಕೊನೆಯ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿತ್ತು.‌ 15 ಲಕ್ಷ ಮನೆ ಘೋಷಿಸಿ, 2,500 ಕೋಟಿ ರೂ. ನೀಡಿತ್ತು. ಅದರಲ್ಲಿ 1,000 ಕೋಟಿ ಖರ್ಚು ಮಾಡಿದ್ದೇನೆಂದು ಘೋಷಣೆ ಮಾಡಿತ್ತು. ಅಲ್ಲದೆ ಪ್ರಧಾನಮಂತ್ರಿ ಯೋಜನೆಯನ್ನೂ ಜನರಿಂದ ದೂರ ಇಟ್ಟಿತ್ತು. ಸ್ವಪ್ರತಿಷ್ಠೆಗಾಗಿ ಒಂದು ಸರ್ಕಾರ ಜನರ ಹಿತ ಕಾಯದೇ ಅನ್ಯಾಯ ಮಾಡಿತ್ತು ಎಂದು ಕಾಂಗ್ರೆಸ್‌ ವಿರುದ್ಧ ಬಸವರಾಜ ಬೊಮ್ಮಾಯಿ‌ ವಾಗ್ದಾಳಿ ನಡೆಸಿದರು.

ಭಾನುವಾರ ವಸತಿ ಇಲಾಖೆಯ ಕರ್ನಾಟಕ ಗೃಹ ಮಂಡಳಿ ವತಿಯಿಂದ ಕೆಂಗೇರಿ ವಲಗೇರಹಳ್ಳಿಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರ 2018 ರಲ್ಲಿ ಸರ್ಕಾರದ ಕೊನೆಯ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿತ್ತು.‌ 15 ಲಕ್ಷ ಮನೆ ಘೋಷಿಸಿ, 2,500 ಕೋಟಿ ರೂ. ನೀಡಿತ್ತು. ಅದರಲ್ಲಿ 1,000 ಕೋಟಿ ಖರ್ಚು ಮಾಡಿದ್ದೇನೆಂದು ಘೋಷಣೆ ಮಾಡಿತ್ತು. ಅಲ್ಲದೆ ಪ್ರಧಾನಮಂತ್ರಿ ಯೋಜನೆಯನ್ನೂ ಜನರಿಂದ ದೂರ ಇಟ್ಟಿತ್ತು. ಸ್ವಪ್ರತಿಷ್ಠೆಗಾಗಿ ಒಂದು ಸರ್ಕಾರ ಜನರ ಹಿತ ಕಾಯದೇ ಅನ್ಯಾಯ ಮಾಡಿತ್ತು ಎಂದು ಕಾಂಗ್ರೆಸ್‌ ವಿರುದ್ಧ ಬಸವರಾಜ ಬೊಮ್ಮಾಯಿ‌ ಅವರು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ ಬಂದ ಮೇಲೆ 18 ಲಕ್ಷ ಮನೆ ನಿರ್ಮಾಣ ಕಾರ್ಯ ನಡೆಸಿದೆ. ಒಟ್ಟು 5 ಲಕ್ಷ ಮನೆಗಳನ್ನು ನಾನು ನೀಡಿದ್ದೇನೆ.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ನಿಂದ 80 ಸಾವಿರ ಮನೆ ಮಂಜೂರು ಮಾಡಲಾಗಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಮನೆ‌ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಈಗಾಗಲೇ 40 ಸಾವಿರ ಮನೆಗಳ ಹಂಚಿಕೆ ಮಾಡಿ ಚಾಲನೆ ನೀಡಲಾಗಿದೆ. ಇದು ಕ್ರಿಯಾಶೀಲ ವಸತಿ ಸಚಿವ ವಿ.ಸೋಮಣ್ಣ ಅವರಿಂದ ಸಾಧ್ಯವಾಗಿದೆ ಎಂದರು.

ದೇಶದಲ್ಲಿ ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಹೊಟ್ಟೆಪಾಡಿಗಾಗಿ ದುಡಿಯಲು, ವೃತ್ತಿ ಅರಸಿ, ಇಲ್ಲಿ ಸುವ್ಯವಸ್ಥೆ, ವಾತಾವರಣ ಹೀಗೆ ಒಂದಲ್ಲ ಒಂದು ಕಾರಣಗಳಿಗೆ ಅತೀ ಹೆಚ್ಚು ಜನರು ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಅಗಮಿಸುತ್ತಿದ್ದಾರೆ. ಹೀಗಾಗಿ ನಗರದ ಜನಸಂಖ್ಯೆ ದಿನೇ ದಿನೆ ಬೆಳೆಯುತ್ತಿದೆ. ಇಲ್ಲಿ ಪ್ರತಿ ದಿನ 5,000 ವಾಹನಗಳ ನೋಂದಣಿ ಆಗುತ್ತಿದೆ. ಹೀಗೆ ಮುಂದುವರೆದರೆ ಮುಂದಿನ ಕೆಲವೇ ದಿನಗಳಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರರನ್ನು ಡಿ ಕಂಜೆಸ್ಡೆಡ್ ಮಾಡುವ ಅಗತ್ಯವಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಸಕಾಲಿಕ ತಪಾಸಣೆ ಮತ್ತು ಅರಿವಿನ ಮೂಲಕ ಮಧುಮೇಹ ನಿಯಂತ್ರಣ

0

ಮಧುಮೇಹಿಗಳಿಗೆ ಸಕಾಲಕ್ಕೆ ತಪಾಸಣೆ ಹಾಗೂ ಮಧುಮೇಹದ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.

ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ರೋಟರಿ ಶಿವಮೊಗ್ಗ ಪೂರ್ವ, ನೇಚರ್ ಬೆಲ್ ಆಯುರ್ವೇದ, ಆಶೀರ್ವಾದ ಕಣ್ಣಿನ ಆಸ್ಪತ್ರೆ ಮತ್ತು ಶ್ರೀ ಸಾಯಿ ಮಹಿಳಾ ಗೃಹ ನಿರ್ಮಾಣ ಸಹಕಾರ ಸಂಘ ವತಿಯಿಂದ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ನೇತ್ರ ತಪಾಸಣೆ, ರಕ್ತಪರೀಕ್ಷೆ ಮತ್ತು ಮಧುಮೇಹ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಒದಗಿಸುವ ದೃಷ್ಠಿಯಿಂದ ಮುಂದಿನ ದಿನಗಳಲ್ಲಿಯು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳನ್ನು ಏರ್ಪಡಿಸಲಿದೆ ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಮಧುಮೇಹ ಕಾಯಿಲೆ ಇರುವವರಿಗೆ ಕುಟುಂಬ ಸದಸ್ಯರ ಸಹಕಾರದ ಪ್ರಾಮುಖ್ಯತೆ ಹಾಗೂ ಕುಟುಂಬ ಸದಸ್ಯರಿಗೆ ಈ ಕಾಯಿಲೆ ಬರದಂತೆ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ನೇಚರ್ ಬೆಲ್ ಆಯುರ್ವೇದ ಕ್ಲಿನಿಕ್ ಮಧುಮೇಹ ತಜ್ಞ ಡಾ. ಹನುಮಂತಪ್ಪ ಸುಂಕಾಪುರ ಮಾತನಾಡಿ, ಆರೋಗ್ಯ ರಕ್ಷಣೆಗಾಗಿ ವಿಶ್ವದಾದ್ಯಂತ ಖರ್ಚು ಮಾಡುತ್ತಿರುವ ಹಣದಲ್ಲಿ ಒಂದು ಪಾಲನ್ನು ಮಧುಮೇಹ ಕಾಯಿಲೆ ನಿರ್ವಹಣೆಗಾಗಿ ವ್ಯಯಿಸಲಾಗುತ್ತಿದೆ. ಈ ರೋಗ ನಿಯಂತ್ರಿಸಲು ಹಾಗೂ ನಿರ್ವಹಣೆ ಮಾಡಲು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.

ಆಯುರ್ವೇದದಲ್ಲಿ ಮಧುಮೇಹ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ನೇಚರ್ ಬೆಲ್ ಆಯುರ್ವೇದ ಸಂಸ್ಥೆಯು ಈಗಾಗಲೇ ಹೆಚ್ಚಿನ ಜನರಿಗೆ ಮಧುಮೇಹ ರೋಗವು ಸಂಪೂರ್ಣ ಗುಣಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ನಗರದ ಆಶೀರ್ವಾದ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಅರುಣ್ ಎ ಅವರು ಮಧುಮೇಹಿಗಳಿಗೆ ಸಮಯಕ್ಕೆ ಸರಿಯಾಗಿ ವರ್ಷಕ್ಕೆ ಒಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಮಧುಮೇಹ ಬರುವ ಯುವ ವಯಸ್ಕರಲ್ಲಿ ಡಯಾಬಿಟಿಕ್ ರೆಟಿನೋಪತಿ ಬೆಳವಣಿಗೆ ಅಪಾಯವು ದ್ವಿಗುಣಗೊಳ್ಳಬಹುದು. ಮಧುಮೇಹಿಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯದಿರುವುದು ಉತ್ತಮ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ವೇಳೆಗೆ ರೋಗವು ಸಾಕಷ್ಟು ಹೆಚ್ಚಾಗಿರಬಹುದು ಎಂದರು.

ನಾವು ಎಷ್ಟು ಮುಂಚಿತವಾಗಿ ರೋಗನಿರ್ಣಯ ಮತ್ತು ಚಿಕಿತ್ಸೆ ಪ್ರಾರಂಭಿಸುತ್ತೇವೆಯೋ ಉತ್ತಮ ದೃಷ್ಟಿ ಕಾಪಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮಧುಮೇಹ ಪತ್ತೆಯಾದ ತಕ್ಷಣ ವಿಶೇಷವಾಗಿ ಟೈಪ್ 2 ಮಧುಮೇಹಿಗಳು ಕಣ್ಣಿನ ತಪಾಸಣೆಯನ್ನು ಪ್ರಾರಂಭಿಸುವುದು ಉತ್ತಮ ಎಂದು ಹೇಳಿದರು.

ಮಧುಮೇಹದ ಆರಂಭಿಕ ಹಂತಗಳಲ್ಲಿ ಕಣ್ಣಿನ ತಪಾಸಣೆಯ ಆವರ್ತನವನ್ನು ವರ್ಷಕ್ಕೊಮ್ಮೆ ಸೀಮಿತಗೊಳಿಸಬಹುದು. ದೀರ್ಘಾವಧಿಯ ಮಧುಮೇಹದಿಂದ ಬಳಲುತ್ತಿರುವ ಜನರು ಅಥವಾ ಗರ್ಭಧಾರಣೆಯಂತಹ ವಿಶೇಷ ಸಂದರ್ಭಗಳಲ್ಲಿ ಆಗಾಗ್ಗೆ ತಪಾಸಣೆ ಮಾಡಿಸುವ ಅಗತ್ಯವಿದೆ ಎಂದು
ತಿಳಿಸಿದರು.

ಆಕಾಶ್ ಲ್ಯಾಬೋರೇಟರಿ ವತಿಯಿಂದ ರಕ್ತಪರೀಕ್ಷೆ ಮಾಡಲಾಯಿತು. ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಕುಮಾರಸ್ವಾಮಿ ಕೆ, ಮಂಜುನಾಥ್ ಕದಂ, ಆಶೀರ್ವಾದ ಕಣ್ಣಿನ ಆಸ್ಪತ್ರೆಯ ಡಾ. ಕೋಮಲ, ಸಾಯಿ ಮಹಿಳಾ ಗೃಹ ನಿರ್ಮಾಣ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಬೆಂಗಳೂರಿನ ಹೋಟೆಲ್ ಗಳಲ್ಲಿ ಊಟ ತಿಂಡಿದರ ಹೆಚ್ಚಳ ಸಾಧ್ಯತೆ

0

ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿನ ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಅಡುಗೆ ಎಣ್ಣೆ, ಕಾಫಿ, ಟೀಪುಡಿ, ಎಲ್ ಪಿಜಿ ಗ್ಯಾಸ್ ದರ ಹೆಚ್ಚಳ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ನವೆಂಬರ್ 18 ರಂದು ಹೋಟೆಲ್ ಮಾಲೀಕರ ಸಂಘ ಸಭೆ ನಡೆಸಲಿದ್ದು, ಸಭೆಯಲ್ಲಿ ಹೋಟೆಲ್ ಊಟ, ತಿಂಡಿ ದರ ಹೆಚ್ಚಳದ ಕುರಿತು ಅಂತಿ ನಿರ್ಧಾರ ತೆಗೆದುಕೊಳ್ಳಲಿದೆ.

ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶೇಕಡ 10 ರಷ್ಟು ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹೋಟೆಲ್ ಊಟ, ಉಪಾಹಾರ, ಕಾಫಿ-ಟೀ ದರ ಶೇಕಡ 10 ರಷ್ಟು ಹೆಚ್ಚಳ ಮಾಡಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಶಿವಮೊಗ್ಗದಲ್ಲಿ ನ.22,23 ರಂದು ನೀನಾಸಂ ನಾಟಕ ಪ್ರದರ್ಶನ

ನಮ್ ಟೀಮ್ ತಂಡವು ಕಳೆದ 20 ವರ್ಷದಿಂದ ನಿರಂತರವಾಗಿ ಶಿವಮೊಗ್ಗದಲ್ಲಿ ನೀನಾಸಂ ನಾಟಕೋತ್ಸವವನ್ನು ಆಯೋಜಿಸುತ್ತಾ ಬಂದಿದೆ.

ಭಾರತದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದ ಸಾಗರ ತಾಲೂಕು ಹೆಗ್ಗೋಡಿನ ನೀನಾಸಂ ರೆಪರ್ಟರಿ ಕಲಾವಿದರು ಈ ನಾಟಕಗಳನ್ನು ಅಭಿನಯಿಸುತ್ತಾರೆ. ಕರೋನಾ ಇತ್ಯಾದಿ ಕಾರಣದಿಂದ ಸ್ಥಗಿತವಾಗಿದ್ದ ನೀನಾಸಂ ತಿರುಗಾಟವು ಈ ವರ್ಷದಿಂದ ಮತ್ತೆ ಆರಂಭವಾಗಿದ್ದು, ನಾಡಿನಾದ್ಯಂತ ನಾಟಕ ಪ್ರದರ್ಶನ ನಡೆಯಲಿದೆ.

ಈ ಬಾರಿಯೂ ಸಹ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಇದೇ 2022ರ ನವೆಂಬರ್ 22 ಹಾಗೂ 23ರಂದು ಸಂಜೆ 6:45ಕ್ಕೆ ನಾಟಕ ಪ್ರದರ್ಶನವಿರುತ್ತದೆ.

ನವೆಂಬರ್ 22ರಂದು ಸಂಜೆ ಮಾಧವ ಚಿಪ್ಪಳಿ ಅವರು ಅನುವಾದಿಸಿರುವ ಯೂರಿಪಿಡೀಸ್ ರಚಿತ ಇಫಿಜೀನಿಯಾ ನಾಟಕಗಳು ಪ್ರದರ್ಶನವಾಗಲಿದೆ. ನವೆಂಬರ್ 23ರ ಸಂಜೆ  ಪ್ರವೀಣ್ ಕುಮಾರ್ ಎನ್.ಎ. ಎಡಮಂಗಲ ಅವರ ನಿರ್ದೇಶನದಲ್ಲಿ ರವೀಂದ್ರ ನಾಥ ಟ್ಯಾಗೋರರ ಮೂಲ ರಚನೆ, ಅಹೋಬಲ ಶಂಕರರಾವ್ ಅವರ ಅನುವಾದದ ಮುಕ್ತಧಾರ ನಾಟಕ ಪ್ರದರ್ಶನವಾಗುವುದು. ನಾಟಕಕ್ಕೆ ಪ್ರವೇಶ ದರ ಒಂದು ನಾಟಕಕ್ಕೆ ಒಬ್ಬರಿಗೆ ರೂ. 50 ಆಗಿರುತ್ತದೆ.

ಹೆಚ್ಚಿನ ವಿವರಕ್ಕೆ 9844518866 ಸಂಪರ್ಕಿಸಬಹುದು ಎಂದು ನಮ್ ಟೀಮ್ ಅಧ್ಯಕ್ಷ ಅ.ಮ. ಶಿವಮೂರ್ತಿ ಅವರು ತಿಳಿಸಿದ್ದಾರೆ.