Thursday, March 26, 2026
Thursday, March 26, 2026
Home Blog Page 1385

ಶಾಲೆಗಳಲ್ಲಿ ಮೂರುಬಾರಿ ನೀರಿನ ಬೆಲ್ ಬಾರಿಸಲು ಸೂಚನೆ

ರಾಜ್ಯದ ಶಾಲೆಗಳಲ್ಲಿ ಇನ್ನು ಮುಂದೆ ದಿನಕ್ಕೆ ಮೂರು ಬಾರಿ ನೀರಿನ ಗಂಟೆ ಬಾರಿಸಲು ಸೂಚನೆ ನೀಡಲಾಗಿದೆ.

ಶಾಲೆಗಳಲ್ಲಿ ಬೆಳಗ್ಗೆ 10.35ಕ್ಕೆ ಮೊದಲ ಗಂಟೆ, ಎರಡನೆಯದ್ದು ಮಧ್ಯಾಹ್ನ 12ಕ್ಕೆ ಮತ್ತು ಮಧ್ಯಾಹ್ನ 2 ಗಂಟೆಗೆ ಮೂರನೇ ಗಂಟೆಗೆ ಬಾರಿಸಲು ವೇಳಾಪಟ್ಟಿ ನಿಗದಿ ಪಡಿಸಲಾಗಿದೆ.

ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಬೆಲ್ ಮಾಡುವ ಪದ್ಧತಿ ಈಗಾಗಲೇ ಕೇರಳದಲ್ಲಿ ಇತ್ತು.ಅದೇ ರೀತಿ ಕರ್ನಾಟಕದಲ್ಲೂ ಹೊಸ ನಿಯಮ ಜಾರಿಗೆ ತರಲು ಯೋಚಿಸಲಾಗಿದೆ.
ಮೂರು ಬೆಲ್‍ ಹಾಕಿದ ತಕ್ಷಣ ಮಕ್ಕಳು ನೀರುಕುಡಿಯುವಂತೆ ಸೂಚಿಸಲಾಗುತ್ತದೆ.

ಶಾಲಾ ಮಕ್ಕಳಲ್ಲಿ ನೀರಿನ ಅಂಶದಕೊರತೆ ನೀಗಿಸುವ ಉದ್ದೇಶದಿಂದ ಹಾಗೂ ನಿಯಮಿತವಾಗಿ ವಿದ್ಯಾರ್ಥಿಗಳಿಗೆ ನೀರು ಕುಡಿಯುವಂತೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದ್ದು, ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ ನೀರಿನ ಬೆಲ್ ಮಾಡಬೇಕು ಎಂದು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

2019ರಲ್ಲಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಈ ಯೋಜನೆಯನ್ನು ಜಾರಿಗೊಳಿಸಲು ಯೋಚಿಸಿದ್ದರು.

ಸಚಿವ ಬಿ.ಸಿ.ನಾಗೇಶ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದ್ದರಿಂದ, ಮತ್ತೆ ಈ ಯೋಜನೆ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಮಕ್ಕಳು ಆಗಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದು ಅಷ್ಟೇ ಅಲ್ಲ ಕೆಲವೊಮ್ಮೆ ನಿರ್ಜಲೀಕರಣ ಹಾಗೂ ಹೊಟ್ಟೆನೋವು, ಒಣ ಗಂಟಲು ಮತ್ತು ತಲೆನೋವಿನ ಕಾರಣದಿಂದ ಶಾಲೆಗೆ ಗೈರಾಗುವುದನ್ನು ತಪ್ಪಿಸುವ ಸಲುವಾಗಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದ ಈ ಎಲ್ಲ ಆರೋಗ್ಯ ಸಮಸ್ಯೆಯಿಂದ ತಪ್ಪಿಸಲು ಇದು ಸಹಕಾರಿಯಾಗಿದೆ.

ಉತ್ತರ ಮಧ್ಯ ರೈಲ್ವೆಯಲ್ಲಿ ಗ್ರೂಪ್ ಸಿ ಹುದ್ದೆಗೆ ಭರ್ತಿ

ಉತ್ತರ ಮಧ್ಯೆ ರೈಲ್ವೆಯಲ್ಲಿ 11 ಗ್ರೂಪ್​ ಸಿ, ಗ್ರೂಪ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ, ಐಟಿಐ ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಕ್ಟೋಬರ್ 27ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದೆ. ಆಸಕ್ತರು ಈ ಕೂಡಲೇ ಆನ್​ಲೈನ್ ಮೂಲಕ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ.

ಸಂಸ್ಥೆ ಉತ್ತರ ಮಧ್ಯೆ ರೈಲ್ವೆ
ಹುದ್ದೆಯ ಹೆಸರು ಗ್ರೂಪ್​ ಸಿ, ಗ್ರೂಪ್​ ಡಿ
ಒಟ್ಟು ಹುದ್ದೆ 11

ವಿದ್ಯಾರ್ಹತೆ
ಪಿಯುಸಿ, ಐಟಿಐ
ವೇತನ ನಿಯಮಾನುಸಾರ

ಸ್ಥಳ
ಪ್ಯಾನ್ ಇಂಡಿಯಾ

ಅರ್ಜಿ ಸಲ್ಲಿಕೆ ವಿಧಾನ
ಆನ್​ಲೈನ್​

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
ಎಸ್​​ಸಿ/ಎಸ್​​ಟಿ/ ಮಾಜಿ ಸೈನಿಕ/ PWD/ ಮಹಿಳಾ/ ಅಲ್ಪಸಂಖ್ಯಾತ & EBC ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ

ಹುದ್ದೆಯ ಮಾಹಿತಿ:
ಗ್ರೂಪ್​ ಸಿ- 03
ಗ್ರೂಪ್​ ಡಿ-08
ಒಟ್ಟು-11 ಹುದ್ದೆ

ವಿದ್ಯಾರ್ಹತೆ:
ಗ್ರೂಪ್​ ಸಿ- ಟೆಕ್ನಿಷಿಯನ್ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಹಾಗೂ ಐಟಿಐ ಪಾಸಾಗಿರಬೇಕು. ಇತರೆ ಹುದ್ದೆಗಳಿಗೆ ಶೇ.50ರಷ್ಟು ಅಂಕಗಳೊಂದಿಗೆ 12ನೇ ತರಗತಿ/ಪಿಯುಸಿ ಪಾಸಾಗಿರಬೇಕು.

ಗ್ರೂಪ್​ ಡಿ- ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:
ಗ್ರೂಪ್​ ಸಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-30 ವರ್ಷದೊಳಗಿರಬೇಕು.
ಗ್ರೂಪ್ ಡಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-33 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ:
ಗ್ರೂಪ್ ಸಿ, ಗ್ರೂಪ್​ ಡಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.

ವೇತನ:
ಗ್ರೂಪ್​ ಸಿ- ಲೆವೆಲ್ -2 ಗ್ರೇಡ್ ಪೇ 1900 ರೂ.
ಗ್ರೂಪ್​ ಡಿ- ಲೆವೆಲ್ -1 ಗ್ರೇಡ್ ಪೇ 1800 ರೂ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
ಅರ್ಜಿ ಸಲ್ಲಿಸಲು ಕೊನೆ ದಿನ: 21/11/2022

ರಾಜ್ಯ ಸಾರಿಗೆ ಸಂಸ್ಥೆಗೆ 650 ಹೊಸ ಬಸ್ ಖರೀದಿ

0

ಕಲ್ಯಾಣ ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮುಂದಿನ ಮೂರು ತಿಂಗಳಲ್ಲಿ 650 ಹೊಸ ಬಸ್ ಗಳನ್ನು ಸೇರಿಸುವ ನಿರೀಕ್ಷೆಯಿದೆ.

ವಿಶೇಷವಾಗಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೆ ವಿಶ್ವಾಸಾರ್ಹ ಸಾರಿಗೆ ಸೇವೆಗಳನ್ನು ಒದಗಿಸಲು ಬಿಎಸ್ 6 ರ 610 ಸಾಮಾನ್ಯ ಬಸ್ಸುಗಳನ್ನು ಖರೀದಿಸಲು ಶನಿವಾರ ಹೊಸ ಟೆಂಡರ್ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಪ್ರಸ್ತುತ, ಕೆಕೆಆರ್ಟಿಸಿ 4,400 ಬಸ್ಗಳನ್ನು ಹೊಂದಿದೆ, ಅವುಗಳಲ್ಲಿ 1,800 ಬಸ್ಗಳು 9 ಲಕ್ಷ ಕಿ.ಮೀ.ಗಿಂತ ಹೆಚ್ಚು ಓಡಿವೆ. ‘ನಿಯಮದ ಪ್ರಕಾರ, ಈ ಬಸ್ ಗಳನ್ನು ಸ್ಕ್ರ್ಯಾಪ್ ಮಾಡಬೇಕು. ಆದಾಗ್ಯೂ, ಅವುಗಳಲ್ಲಿ ಕೆಲವು 11 ಲಕ್ಷ ಅಥವಾ 12 ಲಕ್ಷ ಕಿ.ಮೀ ಓಡಿದ ನಂತರವೂ ಉತ್ತಮ ಸ್ಥಿತಿಯಲ್ಲಿವೆ.

ಆದ್ದರಿಂದ, ನಾವು ಅವರೊಂದಿಗೆ ಸಾಧ್ಯವಾದಷ್ಟು ಕಾಲ ಕೆಲಸ ಮಾಡುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಯಾ ಯೋಜನೆಯ ಪ್ರಕಾರ, ಕೆಕೆಆರ್ಟಿಸಿ 2023 ರ ಅಂತ್ಯದ ವೇಳೆಗೆ ಸೇವೆಗಳನ್ನು 4,050 ಶೆಡ್ಯೂಲ್ಗಳಿಂದ 4,500 ಶೆಡ್ಯೂಲ್ಗಳಿಗೆ ಹೆಚ್ಚಿಸಲು ಪ್ರಯತ್ನಿಸುತ್ತದೆ.

‘650 ಹೊಸ ಬಸ್ಸುಗಳಲ್ಲಿ 300 ಬಸ್ ಗಳನ್ನು ಹಳೆಯ ಬಸ್ ಗಳ ಬದಲಿಗೆ ನಿಯೋಜಿಸಲಾಗುವುದು. ಉಳಿದ 350 ಅನ್ನು ಸೇವೆಗಳನ್ನು ಹೆಚ್ಚಿಸಲು ಬಳಸಲಾಗುವುದು ಎಂದು ಅವರು ಹೇಳಿದರು.

ಕೆಕೆಆರ್ಟಿಸಿ ಚಾಲಕರು ಮತ್ತು ನಿರ್ವಾಹಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೋಡುತ್ತಿದೆ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದ ಇಸ್ಲಾಮಿಕ್ ಸಂಸ್ಥೆಯಲ್ಲಿ ಸಂಸ್ಕೃತ ಕಲಿಕಾ ಚಟುವಟಿಕೆ

ಇಸ್ಲಾಮಿಕ್ ಸಂಸ್ಥೆಯಲ್ಲಿ ಸಂಸ್ಕೃತ ಕಲಿಸುವುದನ್ನು ಎಂದಾದರೂ ಯಾರಾದರೂ ಕೇಳಿದ್ದೀರಾ…!?

ಹೌದು, ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಸಂಸ್ಥೆಯೊಂದರಲ್ಲಿ ಉದ್ದನೆಯ ಬಿಳಿ ನಿಲುವಂಗಿ ಮತ್ತು ಬಿಳಿ ಶಿರವಸ್ತ್ರಧಾರಿ ವಿದ್ಯಾರ್ಥಿಗಳು ಭಗವದ್ಗೀತೆಯ ಸಂಸ್ಕೃತ ಶ್ಲೋಕ, ಮಂತ್ರಗಳನ್ನು ನಿರರ್ಗಳವಾಗಿ ಪಠಣ ಮಾಡುತ್ತಾರೆ.

ಕೇರಳದ ಈ ಸಂಸ್ಥೆಯಲ್ಲಿ ತರಗತಿಯಲ್ಲಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ನಡುವಿನ ಎಲ್ಲಾ ಸಂಭಾಷಣೆಗಳು ಸಂಸ್ಕೃತದಲ್ಲಿದೆ. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುದೇವ ನಮಃ ಎಂದು ವಿದ್ಯಾರ್ಥಿಯು ತನ್ನ ಪ್ರಾಧ್ಯಾಪಕರನ್ನು ಕೇಳಿದಾಗ ಇದೇ ರೀತಿಯ ಶ್ಲೋಕವನ್ನು ಪ್ರತಿದಿನ ಸಂಸ್ಕೃತದಲ್ಲಿ ಪಠಿಸುತ್ತಾನೆ. ತರಗತಿಯಲ್ಲಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ನಡುವಿನ ಎಲ್ಲಾ ಸಂಭಾಷಣೆಯನ್ನ ಸಂಸ್ಕೃತದಲ್ಲೇ ಮಾಡುತ್ತಾರೆ.

ಮಲಿಕ್ ದೀನರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ ನ ಪ್ರಾಂಶುಪಾಲರಾದ ಓಂಪಿಲ್ಲಿ ಮುಹಮ್ಮದ್ ಫೈಝಿ, ಸಂಸ್ಕೃತ, ಉಪನಿಷತ್ತುಗಳು, ಪುರಾಣಗಳು ಇತ್ಯಾದಿಗಳನ್ನು ಕಲಿಸುವ ಹಿಂದಿನ ಉದ್ದೇಶವು ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಎಂದು ಹೇಳಿದರು. ಇದಕ್ಕೆ ಮುಖ್ಯ ಕಾರಣ ಫೈಝಿಯವರು ಶಂಕರ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದರಿಂದ ಎಂ ಐ ಸಿ ಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸುವಲ್ಲಿ ಅವರ ಸ್ವಂತ ಶೈಕ್ಷಣಿಕ ಹಿನ್ನೆಲೆ.

ಆದ್ದರಿಂದ, ವಿದ್ಯಾರ್ಥಿಗಳು ಇತರ ಧರ್ಮಗಳು ಮತ್ತು ಅವರ ಪದ್ಧತಿಗಳು ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಾನು ಭಾವಿಸಿದೆ. ಆದರೆ, ಎಂಟು ವರ್ಷಗಳ ಅಧ್ಯಯನದ ಅವಧಿಯಲ್ಲಿ ಸಂಸ್ಕೃತ ಹಾಗೂ ‘ಉಪನಿಷತ್ತು’, ‘ಶಾಸ್ತ್ರ’, ‘ವೇದಾಂತಂ’ಗಳ ಆಳವಾದ ಅಧ್ಯಯನ ಸಾಧ್ಯವಾಗುವುದಿಲ್ಲ. ಬದಲಿಗೆ, ಇವುಗಳ ಬಗ್ಗೆ ಮೂಲಭೂತ ಜ್ಞಾನವನ್ನು ಒದಗಿಸುವುದು ಮತ್ತು ಇನ್ನೊಂದು ಧರ್ಮದ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಫೈಜಿ ಹೇಳಿದರು.

ಭಗವದ್ಗೀತೆ, ಉಪನಿಷತ್ತುಗಳು, ಮಹಾಭಾರತ, ರಾಮಾಯಣದ ಪ್ರಮುಖ ಭಾಗಗಳನ್ನು 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಎಂಟು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಆಯ್ದು ಕಲಿಸಲಾಗುತ್ತದೆ. ಈ ಪಠ್ಯಗಳ ಆಯ್ದ ಬೋಧನೆಯು ಸಂಸ್ಥೆಯು ಪ್ರಾಥಮಿಕವಾಗಿ ಷರಿಯಾ ಕಾಲೇಜಾಗಿದ್ದು, ಅಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯಕ್ಕೆಸಂಯೋಜಿತವಾಗಿರುವುದರಿಂದ ಕಲೆಯಲ್ಲಿ ಪದವಿ ಕೋರ್ಸ್‌ನ ಜೊತೆಗೆ ಉರ್ದು ಮತ್ತು ಇಂಗ್ಲಿಷ್‌ನಂತಹ ಇತರ ಭಾಷೆಗಳನ್ನು ಸಹ ಕಲಿಸಲಾಗುತ್ತದೆ.

ಶೈಕ್ಷಣಿಕ ಕೆಲಸದ ಹೊರೆ ದೊಡ್ಡದಾಗಿದೆ. ಆದ್ದರಿಂದ, ನಾವು ಅದನ್ನು ನಿಭಾಯಿಸಬಲ್ಲ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳುತ್ತೇವೆಮತ್ತು ಕಟ್ಟುನಿಟ್ಟಾದ ಮಾನದಂಡಗಳನ್ನು ಸಹ ನಿರ್ವಹಿಸುತ್ತೇವೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ಇದೆ. ಆರಂಭದಲ್ಲಿ ಅರೇಬಿಕ್‌ನಂತೆಯೇ ಸಂಸ್ಕೃತವನ್ನು ಕಲಿಯುವುದು ಕಷ್ಟಕರವಾಗಿತ್ತು. ಆದರೆ, ನಿರಂತರವಾಗಿ ಅಧ್ಯಯನ ಮತ್ತು ಅಭ್ಯಾಸದಿಂದ ಕಾಲಕ್ರಮೇಣ ಸುಲಭವಾಗುತ್ತದೆ ಎಂದು ಕೆಲವು ವಿದ್ಯಾರ್ಥಿಗಳು ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದರು.

ತುರ್ತು ಚಿಕಿತ್ಸೆಗೆ ನೆರವಾಗಿ ಜೀವವುಳಿಸಿದ ಸಾಕುನಾಯಿ

0

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಈಗ ಹೇಳು ಹೊರಟಿರುವ ವಿಷಯವು ಕೂಡ ಇದಕ್ಕೆ ಸಂಬಂಧಿಸಿದ್ದೆ…
ಇದೊಂದು ಮನ ಮಿಡಿಯುವ ವಿಷಯ.

ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ನಿರ್ಜನ ಪ್ರದೇಶದಲ್ಲಿ ತಲೆ ಸುತ್ತಿ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ತನ್ನ ಸಾಕು ನಾಯಿಯಿಂದ ಈತ ಪತ್ತೆಯಾಗಿದ್ದಾನೆ.

ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೂಡೂರಿನಲ್ಲಿ ನಡೆದಿದೆ.

ಈ ಊರಿನ ಶೇಖರಪ್ಪ ಎಂಬಾತ ಆಯನೂರಿನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಸುಮಾರು 6 ಗಂಟೆಗೆ ಕಟ್ಟಿಗೆ ತರುವುದಕ್ಕೆ ಕಾಡಿಗೆ ಹೋಗಿದ್ದಾರೆ. ಸುಮಾರು 10 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದವರು ಎಷ್ಟೊತ್ತಾದರೂ ಮನೆಗೆ ಬಂದಿಲ್ಲ. ಆದ್ದರಿಂದ, ಮನೆಯವರು ಊರಿನ ಒಂದಿಷ್ಟು ಜನರಿಗೆ ವಿಚಾರ ತಿಳಿಸಿದ್ದಾರೆ. ಊರಿನವರು ಈತನನ್ನು ಹುಡುಕಲು ಕಾಡಿಗೆ ಹೋಗಿದ್ದಾರೆ. ಕಾಡಿನಲ್ಲಿ ಎಷ್ಟು ಹುಡುಕಿದರು ಶೇಖರಪ್ಪನ ಸುಳಿವು ಸಿಗಲೇ ಇಲ್ಲ.

ಆದರೆ, ಈತ ಸಾಕಿದ್ದ ನಾಯಿಯೊಂದು ಶೇಖರಪ್ಪ ಇರುವ ಜಾಗ ಪತ್ತೆ ಹಚ್ಚಿದೆ. ಸುಮಾರು 4 ಗಂಟೆ ಸುಮಾರಿಗೆ ಶೇಖರಪ್ಪ ಇರುವ ಜಾಗಕ್ಕೆ ಊರಿನವರನ್ನು ಕರೆ ತಂದಿದೆ.
ತಕ್ಷಣವೇ ಶೇಖರಪ್ಪನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ನಾಯಿ ಪ್ರತಿನಿತ್ಯ ಮಾಲೀಕನ ಜೊತೆಯಲ್ಲಿ ಹೋಗುತ್ತಿತ್ತಂತೆ. ಹಾಗಾಗಿಯೇ ಶೇಖರಪ್ಪನನ್ನು ಪತ್ತೆ ಮಾಡಿದೆ ಎನ್ನಲಾಗಿದೆ.

ಪಿಡಿಓ ಹುದ್ದೆ ಉನ್ನತೀಕರಿಸಿ ಮುಂದುವರೆಸುವ ಬಗ್ಗೆ ಸರ್ಕಾರದ ಆದೇಶ

0

ಗ್ರಾಮ ಪಂಚಾಯತಿಗಳಿಗೆ ಮಂಜೂರಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸುವ ಬಗ್ಗೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಮುಂದುವರೆಸುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

1500 ಪಿಡಿಒ ಹುದ್ದೆಗಳನ್ನು ಗ್ರೂಪ್ ಸಿ ನಿಂದ ಗ್ರೂಪ್ ಬಿ’ಗೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ‘ಗ್ರೂಪ್‌ ಸಿ’ನಲ್ಲಿನ 37,900-70,850 ರೂ. ವೇತನ ಶ್ರೇಣಿಯನ್ನು 40,900-78,200 ವೇತನ ಶ್ರೇಣಿಯ ಗ್ರೂಪ್-ಬಿ ಕಿರಿಯ ವೃಂದಕ್ಕೆ ಉನ್ನತೀಕರಿಸಲಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಸೃಜನೆಯಾಗಿರುವ 176 ಹೆಚ್ಚುವರಿ ಕಾರ್ಯಕ್ರಮ ಅಧಿಕಾರಿ ಹುದ್ದೆಗಳನ್ನು ಸಹಾಯಕ ನಿರ್ದೇಶಕರು ಎಂದು ಪುನರ್ ಪದನಾಮಗೊಳಿಸಲಾಗಿದೆ.

ರಾಜ್ಯದಲ್ಲಿನ 226 ತಾಲೂಕು ಪಂಚಾಯಿತಿಗಳಲ್ಲಿ ಅಸ್ತಿತ್ವದಲ್ಲಿದ್ದ ತಲಾ ಒಂದು ಸಹಾಯಕ ನಿರ್ದೇಶಕರು ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ತಾಲೂಕಿಗೆ ಒಂದು ಸಹಾಯಕ ನಿರ್ದೇಶಕರು ಹುದ್ದೆಯಂತೆ ಒಟ್ಟು 26 ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ.

ಪ್ರಸ್ತುತ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮುಂಬಡ್ತಿಗಾಗಿ 452 ಸಹಾಯಕ ನಿರ್ದೇಶಕರು ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ

0

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಇನ್ನೂ 3 ದಿನ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಜಿಲ್ಲೆಗಳು, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನರ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.

ದೇಶದಲ್ಲಿ ಕೋವಿಡ್ ಸೋಂಕು ಗಣನೀಯ ಇಳಿಕೆ

0

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿತಕಂಡಿದ್ದು, ಕಳೆದ 24 ಗಂಟೆಯಲ್ಲಿ 734 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 24 ಗಂಟೆಯಲ್ಲಿ ಕೊರೋನಾ ವೈರಸ್ ಗೆ 3ಜನ ಬಲಿಯಾಗಿದ್ದಾರೆ.

ದೇಶದಲ್ಲಿ ಈವರೆಗೆ 5,30,531 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ 12,307 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಶೇ.98.78ರಷ್ಟು ಜನ ಕೊರೋನಾ ದಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ ಇದುವರೆಗೆ 4,41,23,539 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.

ನಿನ್ನೆ 92,188 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಈವರೆಗೆ 2,198,001,694 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 1,57,660 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ.

500 ಜನೌಷಧ ಮಳಿಗೆ ತೆರೆಯಲು ಸರ್ಕಾರದ ಪ್ರಸ್ತಾವನೆ-ಡಾ.ಸುಧಾಕರ್

0

ಬಡ, ಹಿಂದುಳಿದ ಮತ್ತು ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ ಔಷಧ ಹಾಗೂ ಶಸ್ತ್ರ ಚಿಕಿತ್ಸಾ ಪರಿಕರಗಳು ಲಭ್ಯವಾಗುವ ಜನೌಷಧ ಮಳಿಗೆಗಳು ಇನ್ನಷ್ಟು ತೆರೆಯಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು.

ಇದೀಗ ಸರ್ಕಾರ ಇದಕ್ಕೆ ಸೂಕ್ತವಾಗಿ ಸ್ಪಂದಿಸಿದೆ. ರಾಜ್ಯದಲ್ಲಿ ಹೊಸದಾಗಿ 500 ಜನೌಷಧ ಮಳಿಗೆಗಳನ್ನು ತೆರೆಯಲು ಚಿಂತನೆ ನಡೆಸಿದೆ.

ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ 40 ಮಳಿಗೆ ತೆರೆಯಲು ಅನುಮತಿ ನೀಡುವಂತೆ ಕೋರಿ ಭಾರತೀಯ ಔಷಧ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದೆ. ಜನೌಷಧ ಮಳಿಗೆ ಸ್ಥಾಪನೆ ವಿಚಾರದಲ್ಲಿ ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಈ ವರ್ಷದ ಫೆಬ್ರವರಿ ನಂತರ 300 ಮಳಿಗೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಜನೌಷಧ ಮಳಿಗೆಗಳಲ್ಲಿ ಮಾರುಕಟ್ಟೆ ದರಕ್ಕಿಂತ ಶೇಕಡ 50 ರಿಂದ ಶೇಕಡ 80ರಷ್ಟು ಅಗ್ಗದ ದರದಲ್ಲಿ ದೊರೆಯುತ್ತಿದೆ. ಒಟ್ಟು 1,451 ಔಷಧಿಗಳು ಹಾಗೂ 240 ಶಸ್ತ್ರ ಚಿಕಿತ್ಸಾ ಪರಿಕರಗಳು ಜೊತೆಗೆ ದುಬಾರಿ ವೆಚ್ಚದ ಕ್ಯಾನ್ಸರ್ ಔಷಧಿಗಳು ಸಹ ಇಲ್ಲಿ ದೊರೆಯುತ್ತಿವೆ.

ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿಗಳ ಬಿರುಸಿನ ಮಾರಾಟ

0

ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಕೇವಲ ಮೂರು ದಿನ ಉಳಿದಿವೆ. ಈವರೆಗೆ ಸುಮಾರು 750 ಮಂದಿ ಅರ್ಜಿಗಳನ್ನು ಪಡೆದುಕೊಂಡಿದ್ದು, ಆ ಪೈಕಿ 200 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ.

ಹೀಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ನ.15 ಅಂತಿಮ ದಿನವಾಗಿದೆ. ಆದರೆ, ಸಿದ್ದರಾಮಯ್ಯ, ಡಾ

ಜಿ.ಪರಮೇಶ್ವರ್‌, ಕೆ.ಜೆ.ಜಾಜ್‌ರ್‍, ಎಂ.ಬಿ.ಪಾಟೀಲ್‌ ಸೇರಿದಂತೆ ಪ್ರಮುಖ ನಾಯಕರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಅಂತಿಮ ದಿನವನ್ನು ಕನಿಷ್ಠ ಒಂದು ವಾರವಾದರೂ ಮುಂದೂಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.