Thursday, March 26, 2026
Thursday, March 26, 2026
Home Blog Page 1382

ಜಿಲ್ಲಾ ಆಸ್ಪತ್ರೆಗಳಲ್ಲಿ ಸಹಾಯವಾಣಿ ಆರಂಭಿಸಲಾಗುವುದು- ಡಾ.ಸುಧಾಕರ್

0

ಜಿಲ್ಲಾ ಆಸ್ಪತ್ರೆಗಳಲ್ಲಿ 24/7 ಸಹಾಯವಾಣಿ (ಹೆಲ್ಪ್ ಡೆಸ್ಕ್) ತೆರೆಯಲಾಗುವುದು. ಈ ಡೆಸ್ಕ್​ನಲ್ಲಿ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ಯಾರಿಗೂ ಸಮಸ್ಯೆ ಎದುರಾಗದಂತೆ ಈ ಡೆಸ್ಕ್ ಸ್ಪಂದಿಸಲಿದೆ ಎಂದರು.

ತಾಯಿ ಕಸ್ತೂರಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣದ ತನಿಖಾ ವರದಿ ಶೀಘ್ರವೇ ಬರಲಿದೆ. ಕೆಲ ಸಿಬ್ಬಂದಿಗಳ ವರ್ತನೆಯಿಂದ ಈ ರೀತಿಯಾಗಿದೆ ಎಂಬುದು ಗೊತ್ತಾಗಿದೆ. ಕಸ್ತೂರಿ ಅವರ ಮೊದಲ ಮಗಳು ಶಂಕರಿ ಹೆಸರಿನಲ್ಲಿ 10 ಲಕ್ಷ ರೂಪಾಯಿ ಅನ್ನು ನಮ್ಮ ಇಲಾಖೆಯಿಂದ ಎಫ್​ಡಿ ಮಾಡ್ತಿದ್ದೇವೆ ಎಂದರು.

ವರದಿ ಬಂದ ಬಳಿಕ ಯಾರ ಕರ್ತವ್ಯ ಲೋಪ ಎಂಬುದು ಸ್ಪಷ್ಟವಾಗಲಿದೆ. ಡಾ.ಉಷಾ ಅವರು ವೈದ್ಯಾಧಿಕಾರಿಗಳ ಸಂಘಕ್ಕೆ ಪತ್ರ ಬರೆದಿದ್ದು, ಸಮಗ್ರ ವರದಿ ಬಳಿಕ ಯಾರ ತಪ್ಪು ಎಂಬುದು ತಿಳಿಯಲಿದೆ. ನಾನು ಸಿಸಿ ಕ್ಯಾಮರಾ ನೋಡಿದ್ದೇನೆ. ಏಕಮುಖವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಓಟಿಯಿಂದ ಬಂದಿದ್ದಾರೆ. ಆ ವಿಡಿಯೋ ಫ್ರೇಮ್​ನಲ್ಲಿ ರೋಗಿ ಹಾಗೂ ವೈದ್ಯೆ ಉಷಾ ಇಬ್ಬರೂ ಇದ್ದಾರೆ. ಕಮಿಷನರ್ ಹಂತದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬಳಿಕ ತೀರ್ಮಾನ ಆಗುತ್ತೆ. ಅಲ್ಲಿಯವರೆಗೂ ಅವರು ಅಮಾನತಿನಲ್ಲಿರುತ್ತಾರೆ. ಅದೇ ಪರ್ನಮೆಂಟ್ ಸಸ್ಪೆಷನ್ ಅಲ್ಲ. ಅವರು ತಪ್ಪಿತಸ್ಥ ಅಲ್ಲ ಅಂತ ಗೊತ್ತಾದರೆ, ಅವರ ಅಮಾನತು ವಾಪಸ್ ಆಗುತ್ತೆ ಎಂದರು.

ಅಪಘಾತದಲ್ಲಿ ಬದುಕುಳಿದ ವ್ಯಕ್ತಿಗೆ ಪರಿಹಾರ ನಿರಾಕರಿಸಲಾಗದು- ಸುಪ್ರೀಂ ಕೋರ್ಟ್

0

ಅಪಘಾತ ಪ್ರಕರಣಗಳಲ್ಲಿ ಗಂಭೀರ ಗಾಯಗೊಂಡು ಬದುಕುಳಿದ ವ್ಯಕ್ತಿಗೆ ಭವಿಷ್ಯದಲ್ಲಿ ಎದುರಾಗುವ ಶಾಶ್ವತ ಅಂಗವೈಕಲ್ಯದ ಸಾಧ್ಯತೆಗೆ ಪರಿಹಾರ ಕೊಡುವುದನ್ನು ನಿರಾಕರಿಸಲಾಗುವುದು ಎಂಬುದನ್ನು ಸಮರ್ಥಿಸಲಾಗದು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾಯಾಲಯದಿಂದ ಪರಿಹಾರ ನಿರ್ಧರಿಸುವ ಪ್ರಕ್ರಿಯೆಯು ಮೂಲಭೂತವಾಗಿ ತುಂಬಾ ಕಠಿಣ ಸವಾಲು ಮತ್ತು ಇದು ಪರಿಪೂರ್ಣ ವಿಜ್ಞಾನವಾಗಲು ಸಾಧ್ಯವಿಲ್ಲ. ಗಾಯ ಮತ್ತು ಅಂಗವೈಕಲ್ಯಕ್ಕೆ ಪರಿಪೂರ್ಣವಾದ ಪರಿಹಾರ ನಿಗದಿಪಡಿಸುವುದು ಅಷ್ಟು ಸುಲಭವಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ಕರ್ನಾಟಕದಲ್ಲಿ 2012ರ ಜುಲೈನಲ್ಲಿ ‌ರಸ್ತೆ ಅಪಘಾತದಲ್ಲಿ ಶೇ 45 ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ವ್ಯಕ್ತಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ₹21,78,600ಕ್ಕೆ ಹೆಚ್ಚಿಸಿದೆ.

ಬೆಳಗಾವಿಯ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ ನೀಡಿದ್ದ ಪರಿಹಾರವನ್ನು ₹3,13,800ನಿಂದ ₹ 9,26,800ಕ್ಕೆ ಹೆಚ್ಚಿಸಿ 2018ರ ಏಪ್ರಿಲ್‌ನಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಿದ್ರಾಮ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತೀರ್ಪು ಪ್ರಶ್ನಿಸಿ, ಪರಿಹಾರ ಮೊತ್ತ ಹೆಚ್ಚಿಸುವಂತೆಯೂ ಮೇಲ್ಮನವಿಯಲ್ಲಿ ಅರ್ಜಿದಾರರು ಕೋರಿದ್ದರು.
ಅರ್ಜಿಯನ್ನು ಸಲ್ಲಿಸಿದ ದಿನದಿಂದ ಪಾವತಿಯ ಅನುಷ್ಠಾನದ ದಿನಾಂಕದವರೆಗೆ ವಾರ್ಷಿಕ ಶೇ 6ರ ದರದಲ್ಲಿ ಬಡ್ಡಿಯೊಂದಿಗೆ ₹ 6,13,000 ಪರಿಹಾರವನ್ನು ನ್ಯಾಯಮಂಡಳಿಯು ನೀಡಿರುವುದನ್ನು ಪೀಠವು ಗಮನಿಸಿತು.

ನಂದಿನಿ ಹಾಲಿನ ದರ ಏರಿಕೆಗೆ ಸದ್ಯ ಕಡಿವಾಣ ಹಾಕಿದ ಸಿಎಂ

0

ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು 3ರೂಗೆ ಏರಿಕೆ ಮಾಡಿದ್ದ ಕೆಎಂಎಫ್ನ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ಹಿಡಿದಿದ್ದಾರೆ.

ಬೆಲೆ ಏರಿಕೆ ಬಗ್ಗೆ ನ.20ರಂದು ನಡೆಯುವ ಸಭೆ ಬಳಿಕ ನಿರ್ಧಾರ ಮಾಡಲಾಗುತ್ತದೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಇಂದು (ನ. 14) ಬೆಳಿಗ್ಗೆ ಕೆಎಂಎಫ್​​ ಹಾಲಿನ ಮತ್ತು ಮೊಸರಿನ ದರವನ್ನು 3ರೂ ಗೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ಕಲಬುರಗಿಯ ಸೇಡಂನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಲಿನ ದರ ಏರಿಕೆ ಇಲ್ಲ, ನ.20ರ ನಂತರ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರು.

ರೈತರಿಗೆ ಬಿಜೆಪಿ ಸರ್ಕಾರ ಕೇವಲ ಭರವಸೆಗಳನ್ನ ನೀಡುತ್ತದೆ- ರಾಹುಲ್

0

ಕಾಂಗ್ರೆಸ್‌ ನ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ರೈತರ ಸಮಸ್ಯೆಗಳನ್ನು ಕಡೆಗಣಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂಗೋಲಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ನಮಗೆ ಮೇಡ್ ಇನ್ ಇಂಡಿಯಾ ಬೇಕು,ಮೇಡ್ ಇನ್ ಚೈನಾ ಅಲ್ಲ ಎಂದರು.

ಬಿಜೆಪಿ ಸರಕಾರ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರೂ ಪರಿಹಾರ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

“ಅಕಾಲಿಕ ಮಳೆ ಮತ್ತು ಇತರ ಸಮಸ್ಯೆಗಳಿಂದ ರೈತರ ಭೂಮಿ ನಾಶವಾದರೆ ಅವರಿಗೆ ಬಿಮಾ ಯೋಜನೆಯಿಂದ ಪರಿಹಾರ ಧನ ನೀಡಲಾಗುವುದು ಎಂದು ಬಿಜೆಪಿ ಹೇಳಿದೆ. ಆದರೆ ಏನೂ ಆಗಲಿಲ್ಲ. ಈ ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತದೆ ಎಂದು ರಾಹುಲ್ ಹೇಳಿದರು.

ಬೆಳಗ್ಗೆ ಎದ್ದು ಕೂಲಿ ಮಾಡುವವರು ರೈತರೇ, ಶ್ರಮ ಪಟ್ಟರೂ ಸರ್ಕಾರ ಅವರ ಉತ್ಪನ್ನಗಳಿಗೆ ಸೂಕ್ತ ದರ ನೀಡುತ್ತಿಲ್ಲ, ರಫ್ತು ನಿಲ್ಲಿಸಿದ್ದಾರೆ, ಈ ಸರ್ಕಾರದಲ್ಲಿ ತೈಲ ಮತ್ತು ಅನಿಲ ದರಗಳು ಕುಸಿದಿವೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬಕ್ಕೆ ಒಂದು ರೂಪಾಯಿ ನೀಡುವುದಿಲ್ಲ ಎಂದು ರಾಹುಲ್ ಹೇಳಿದರು.

ಕ್ಯಾಮೆರಾಗಳು, ಮೊಬೈಲ್‌ಗಳು ಮತ್ತು ಬಟ್ಟೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಚೀನಾದ ರಫ್ತುದಾರರಿಗೆ ಇದರಿಂದ ಅನುಕೂಲವಾಗುತ್ತದೆ. ನಮಗೆ ಇಲ್ಲ. ಹೀಗಾಗಿ ನಮಗೆ ಮೇಡ್ ಇನ್ ಚೈನಾ ಉತ್ಪನ್ನಗಳು ಬೇಡ, ನಮಗೆ ಮೇಡ್ ಇನ್ ಇಂಡಿಯಾ, ಮೇಡ್ ಇನ್ ಮಹಾರಾಷ್ಟ್ರ, ನಾಸಿಕ್, ಹಿಂಗೋಲಿ ಮಾತ್ರ ಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ 1591 ಪಿಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್​ ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1591 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್​ 21 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಲ್ಲಿ 454 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿರಿಸಲಾಗಿದ್ದು, 1137 ಹುದ್ದೆಗಳು ಸಾಮಾನ್ಯ ಹುದ್ದೆಗಳಾಗಿವೆ.

ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷಗಳು ಮೀರಿರಬಾರದು. ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅ.20 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು. ಅರ್ಜಿ ಸಲ್ಲಿಸಲು 21 ನವೆಂಬರ್ ಕೊನೆಯ ದಿನಾಂಕವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸುವಂತೆ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯ ಅಧ್ಯಕ್ಷರಾಗಿ ಸುಷ್ಮಾ ಹಿರೇಮಠ್ ಆಯ್ಕೆ

0

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸುಷ್ಮಾ ಬಿ ಹಿರೇಮಠ ಹಾಗೂ ಕಾರ್ಯದರ್ಶಿಯಾಗಿ ಡಾ. ಲಲಿತಾ ಆಯ್ಕೆಯಾಗಿದ್ದಾರೆ.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ಸುಷ್ಮಾ ಬಿ ಹಿರೇಮಠ್ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಡಾ. ಲಲಿತ ಅವರು ಆಯ್ಕೆಯಾಗಿದ್ದಾರೆ.

ಸುಷ್ಮಾ ಅವರು ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರಿಗೆ ಜೆಸಿ ಶಿವಮೊಗ್ಗ ಸಹ್ಯಾದ್ರಿಯ ಹಾಲಿ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಸಂತೋಷ್ ಕುಮಾರ್, ಕಿಶೋರ್ ಕುಮಾರ್, ಉಪಾಧ್ಯಕ್ಷ ಮಂಜುನಾಥ್ ರಾವ್ ಕದಂ, ಮಾಜಿ ಅಧ್ಯಕ್ಷ ಶೇಷಗಿರಿ, ಸುರೇಂದ್ರ ಕೋಟ್ಯಾನ್, ಅನುಷ್ ಗೌಡ, ಶುಭಂ ಹೋಟೆಲ್ ಮಾಲೀಕ ಉದಯ್ ಕದಂಬ, ಚಂದ್ರಹಾಸ ಶೆಟ್ಟಿ, ಉದಯ್ ಅಭಿನಂದಿಸಿದ್ದಾರೆ.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯು ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುತ್ತಿದೆ. ಮುಂದಿನ ಸಾಲಿನಲ್ಲಿ ಮತ್ತಷ್ಟು ಉತ್ತಮ ಸೇವಾ ಕಾರ್ಯಗಳನ್ನು ನಡೆಸಲಿದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಹಾಲಿ ಅಧ್ಯಕ್ಷ ಸತೀಶ್‌ಚಂದ್ರ ತಿಳಿಸಿದ್ದಾರೆ.

ಫೌಂಡ್ರಿ ಉದ್ಯಮದಲ್ಲಿ ಹೊಸ ತಂತ್ರಜ್ಞಾನ ಬಳಸಬೇಕು-ಶಾಸಕ ರುದ್ರೇಗೇಡ

0

ಫೌಂಡ್ರಿ ಉದ್ಯಮದಲ್ಲಿ ಹೊಸ ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಂಡು ಉತ್ಪಾದನಾ ಪ್ರಮಾಣ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ, ಶಾಂತಲಾ ಸಮೂಹ ಸಂಸ್ಥೆ ಚೇರ‍್ಮನ್ ಎಸ್.ರುದ್ರೇಗೌಡ ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ದಶಮಾನೋತ್ಸವ ಕಾರ್ಯಕ್ರಮ ಪ್ರಯುಕ್ತ ನಗರದ ರಾಯಲ್ ಆರ್ಕಿಡ್‌ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ವಿತರಣಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಎಂಬತ್ತರ ದಶಕದ ಆರಂಭದಲ್ಲಿನ ಫೌಂಡ್ರಿ ಉದ್ಯಮಕ್ಕೂ ಪ್ರಸ್ತುತ ಕಾಲಘಟ್ಟಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದು, ಕಾಲ ಬದಲಾದಂತೆ ನಾವು ಕೆಲಸ ನಿರ್ವಹಿಸುತ್ತಿರುವ ಕ್ಷೇತ್ರದಲ್ಲೂ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮಾಡುವುದರ ಬಗ್ಗೆ ಆಲೋಚಿಸಬೇಕಿದೆ ಎಂದು ತಿಳಿಸಿದರು.

ಕೃಷಿ, ಆಟೋಮೊಬೈಲ್ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಫೌಂಡ್ರಿ ಉತ್ಪನ್ನಗಳ ಅಗತ್ಯತೆ ಇದ್ದು, ಫೌಂಡ್ರಿ ಕ್ಷೇತ್ರದ ಅವಶ್ಯಕತೆ ಹಾಗೂ ಅನಿವಾರ್ಯತೆ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಹೊಸ ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ಅನುಷ್ಠಾನಗೊಳಿಸಬೇಕು. ಮಾನವ ಸಂಪನ್ಮೂಲದ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಐಐಎಫ್ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಮಾತನಾಡಿ, ಫೌಂಡ್ರಿ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಅಧಿಕ ಕುಟುಂಬಗಳು ಅವಲಂಬಿತವಾಗಿದ್ದು, ಉದ್ಯೋಗ ಒದಗಿಸುವ ಕೆಲಸ ಮಾಡಿದೆ. ಶಿವಮೊಗ್ಗ ಜಿಲ್ಲೆಯ ಫೌಂಡ್ರಿ ಉತ್ಪನ್ನಗಳು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ರಫ್ತು ಆಗುವಲ್ಲಿ ಕಾರ್ಮಿಕರ ಶ್ರಮ ಅಪಾರ ಎಂದು ತಿಳಿಸಿದರು.

ಫೌಂಡ್ರಿ ಕಾರ್ಮಿಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ವತಿಯಿಂದ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಐಐಎಫ್ ದಕ್ಷಿಣ ವಲಯ ಚೇರ‍್ಮನ್ ಮುತ್ತುಕುಮಾರ್, ಐಐಎಫ್ ಖಜಾಂಚಿ ಎಸ್.ಕುಪ್ಪುಸ್ವಾಮಿ, ಐಐಎಫ್ ದಕ್ಷಿಣ ವಲಯ ಗೌರವ ಕಾರ್ಯದರ್ಶಿ ಡಿ.ಜಿ.ಬೆನಕಪ್ಪ, ಐಐಎಫ್ ಶಿವಮೊಗ್ಗ ಘಟಕದ ಅಧ್ಯಕ್ಷ ಟಿ.ಎನ್.ಪರಮಶೇಖರ್‌, ಐಐಎಫ್ ಶಿವಮೊಗ್ಗ ಘಟಕದ ಗೌರವ ಕಾರ್ಯದರ್ಶಿ ಎಂ.ವಿ.ರಾಘವೇಂದ್ರ, ಖಜಾಂಚಿ ರಾಘವೇಂದ್ರ ಹೆಬ್ಬಾರ್, ಐಐಎಫ್ ಶಿವಮೊಗ್ಗ ಘಟಕದ ನಿಕಟಪೂರ್ವ ಅಧ್ಯಕ್ಷ ಶ್ರೀನಾಥ್‌ ಗಿರಿಮಾಜಿ, ಶ್ರೀನಿವಾಸಮೂರ್ತಿ, ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ಕಿರಣ್‌ಕುಮಾರ್ ಉಪಸ್ಥಿತರಿದ್ದರು.

ಕುಗ್ರಾಮದಲ್ಲಿ ಕನ್ನಡದ ಹಬ್ಬ

ಶಿವಮೊಗ್ಗ ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ, ಕುಗ್ರಾಮ ಶೆಟ್ಟಿಹಳ್ಳಿ ಚಿತ್ರಶೆಟ್ಟಿಹಳ್ಳಿ, ಸರ್ಕಾರಿ ಸೇವೆಗಳಿಂದ, ಮೂಲಭೂತ ಸೇವೆಗಳಿಂದ ವಂಚಿತವಾಗಿರುವ, ಶೆಟ್ಟಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳ ಜೊತೆ, ಭೂಮಿ ಸಂಸ್ಥೆಯ ಸದಸ್ಯರು ಇಂದು ಮಕ್ಕಳ ದಿನಾಚರಣೆ ಆಚರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಕಮಿಟಿಯ ಅಧ್ಯಕ್ಷ ಪರಮೇಶ್ವರ್, ಶಾಲೆಯ ಮುಖ್ಯ ಶಿಕ್ಷಕಿ ರಂಜಿತ, ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ಸದಸ್ಯ ಅಕಿಫ್, ಶಾಲೆಯ ಮಕ್ಕಳು ಇದ್ದರು. ಭೂಮಿ ಸಂಸ್ಥೆಯಿಂದ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.

ಬಹುಮಾನವಾಗಿ ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿಉದ್ಯೋಗಾವಕಾಶಗಳು

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶವೊಂದು ಹೊರಹೊಮ್ಮಿದೆ.

ಯುಪಿಎಸ್ ಸಿ, ಯುಕೆಪಿ ಎಸ್ ಸಿ , ಆರ್ ಎಸ್ ಎಮ್ ಎಸ್ ಎಸ್ ಬಿ, ಸಿಐಎಸ್ ಎಫ್, ಮತ್ತು ಇತ್ಯಾದಿಗಳು ಹಲವು ಹುದ್ದೆಗಳಿಗೆ ನೇಮಕಾತಿ ಆಗಲಿದೆ.

ನಿಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ನೀವು ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಖಾಲಿ ಹುದ್ದೆಗಳ ವಿವರಗಳನ್ನು ತಿಳಿಯಿರಿ.

ಸಿ ಐ ಎಸ್ ಎಫ್ ನೇಮಕಾತಿ 2022 : ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ 787 ಕಾನ್‌ಸ್ಟೆಬಲ್ ಮತ್ತು ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 18 ರಿಂದ 23 ವರ್ಷದೊಳಗಿನ 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ PST, PET, DV, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇತ್ಯಾದಿಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳು ಇನ್ನೂ ಪ್ರಾರಂಭವಾಗಿಲ್ಲ. ನೀವು ಅವರಿಗೆ 21 ನವೆಂಬರ್ 2022 ರಿಂದ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ 20 ಡಿಸೆಂಬರ್ 2022.

ವಿವರಗಳನ್ನು ತಿಳಿಯಲು www.cisfrectt.in ಗೆ ಭೇಟಿ ನೀಡಿ.

ಜಿಪ್ಮರ್ ನೇಮಕಾತಿ 2022: ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ 456 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇವುಗಳಿಗೆ ಆನ್‌ಲೈನ್ ಅರ್ಜಿಗಳನ್ನು ಮಾತ್ರ ಮಾಡಬಹುದು, ಇದಕ್ಕಾಗಿ JIPMER ನ ಅಧಿಕೃತ ವೆಬ್‌ಸೈಟ್ ವಿಳಾಸ – jipmer.edu.in ಇವುಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೂ 1500 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01 ಡಿಸೆಂಬರ್ 2022.

ITBP ನೇಮಕಾತಿ 2022 : ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ 186 ಸಹಾಯಕ ಹೆಡ್ ಕಾನ್ಸ್‌ಟೇಬಲ್ ಮತ್ತು 239 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾದವರು ಮೂರು ವರ್ಷಗಳ ಅನುಭವ ಇರುವವರು ಸಹ ಅರ್ಜಿ ಸಲ್ಲಿಸಬಹುದು. ವಯೋಮಿತಿ 18 ರಿಂದ 25 ವರ್ಷಗಳು ಮತ್ತು ಶುಲ್ಕ 450 ರೂ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ನವೆಂಬರ್ 2022 ಮತ್ತು recruitment.itbpolice.nic.in ನಲ್ಲಿ ಅರ್ಜಿ ಸಲ್ಲಿಸಿ. ಕಾನ್‌ಸ್ಟೆಬಲ್ ಹುದ್ದೆಗೆ ಪಿಸಿಎಂ ವಿಷಯಗಳೊಂದಿಗೆ 12 ನೇ ತೇರ್ಗಡೆ ಹೊಂದಿರುವುದು ಅವಶ್ಯಕ.

ವಯೋಮಿತಿ 18 ರಿಂದ 25 ವರ್ಷ ಮತ್ತು ಶುಲ್ಕ 100 ರೂ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ನವೆಂಬರ್ 2022. ಮೇಲೆ ತಿಳಿಸಿದ ವೆಬ್‌ಸೈಟ್‌ನಿಂದ ಮಾತ್ರ ಅರ್ಜಿ ಸಲ್ಲಿಸಬಹುದು.

ಡಿಜಿಟಲ್ ಕರೆನ್ಸಿ ಚಲಾವಣೆಗೆ 5 ಬ್ಯಾಂಕುಗಳ ಆಯ್ಕೆ

0

ದೇಶದಲ್ಲಿ ಡಿಜಿಟಲ್‌ ಕರೆನ್ಸಿಯನ್ನು ಚಲಾವಣೆಗೊಳಿಸುವ ನಿಟ್ಟಿನಲ್ಲಿ ಎಸ್‌ಬಿಐ, ಐಸಿಐಸಿಐ ಸೇರಿದಂತೆ ಐದು ಬ್ಯಾಂಕ್‌ಗಳನ್ನು ಆರ್‌ಬಿಐ ಆಯ್ಕೆ ಮಾಡಿದೆ.

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಕೂಡ ಪಟ್ಟಿಯಲ್ಲಿದೆ.
ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ ಅನ್ನು ಈಗಿನ ಡಿಜಿಟಲ್‌ ಪೇಮೆಂಟ್‌ ಸಿಸ್ಟಮ್‌ ಜತೆಗೆ ಸಂಯೋಜಿಸಬೇಕೇ ಅಥವಾ ಪ್ರತ್ಯೇಕ ನೆಟ್‌ ವರ್ಕ್‌ ಅಳವಡಿಸಬೇಕೇ ಎಂಬುದರ ಬಗ್ಗೆ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ.

ಶೀಘ್ರದಲ್ಲಿಯೇ ಡಿಜಿಟಲ್‌ ಕರೆನ್ಸಿಯ ಪ್ರಾಯೋಗಿಕ ರಿಟೇಲ್‌ ಚಲಾವಣೆ ನಡೆಯಲಿದೆ. ಆರ್‌ಬಿಐ ಮತ್ತು ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಇದಕ್ಕಾಗಿ ಬ್ಯಾಂಕ್‌ಗಳ ಜತೆಗೆ ಸಾಥ್‌ ನೀಡಲಿವೆ. ಸಗಟು ವಿಭಾಗದಲ್ಲಿ ಈಗಾಗಲೇ ಡಿಜಿಟಲ್‌ ಕರೆನ್ಸಿ ಮೂಲಕ ಸಾಲಪತ್ರಗಳ (ಬಾಂಡ್)‌ ಹಣಕಾಸು ವರ್ಗಾವಣೆಗಳು ನಡೆದಿವೆ.