Thursday, March 26, 2026
Thursday, March 26, 2026
Home Blog Page 1380

ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು-ಮಂಜುನಾಥ್

0

ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ವಾರಕ್ಕೊಮ್ಮೆ ಬರುವ ಸಾಪ್ತಾಹಿಕ ಪುರವಣಿ ಯನ್ನು ಬಿಡದೆಓದಿ. ಬಹಳ ಜನರು ಮನೆಗೆ ಪತ್ರಿಕೆ ತರಿಸುವ, ಓದುವ ಹವ್ಯಾಸ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕು. ಶಾಲೆಗಳು ಇತ್ತ ಅಗತ್ಯ ಗಮನ ಹರಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮನವಿ ಮಾಡಿದರು.

ಅವರು ನಗರದ ಕಲ್ಲಹಳ್ಳಿಯಲ್ಲಿರುವ. ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಜಿಲ್ಲಾ ಕಸಾಪ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜು ಅಂಗಳದಲ್ಲಿ ಕಥೆ, ಕವನ, ಪ್ರಬಂಧ ರಚನಾ ಕಮ್ಮಟ ನವೆಂಬರ್ 17 ರಂದು ಗುರುವಾರ ಏರ್ಪಡಿಸಲಾಗಿತ್ತು.

ಕಥಾ ರಚನೆಯ ಕುರಿತು ಮಾಹಿತಿ ನೀಡಿದ ಉಪನ್ಯಾಸಕ ಜಿ. ಆರ್. ಲವ ಅವರು ಮಾತನಾಡಿ ಬರೆಯುವ ಮೊದಲು ವಿಚಾರ, ಸಿದ್ದತೆ ಜೊತೆಗೆ ಭಾವ, ಬುದ್ದಿ, ಅನುಭವಗಳನ್ನು ಗಮನಿಸಬೇಕು. ನಿಮಗೆ ಅವಕಾಶಗಳು ಹಲವುಯಿವೆ. ಅದಕ್ಕೆ ಪರಿಶ್ರಮ ವಿರಬೇಕು ಎಂದು ವಿವರಿಸಿದರು.

ಸಂಶೋಧನಾ ವಿದ್ಯಾರ್ಥಿ, ಕವಯಿತ್ರಿ ಕು. ಕಾವ್ಯ ಅವರು ಕವನಗಳನ್ನು ಕುರಿತು ಮಾತನಾಡಿ ರಾಮಾಯಣ, ಮಹಾಭಾರತ ಎಲ್ಲವೂ ಲೇಖಕರ ಸೃಷ್ಟಿಯಾಗಿದೆ. ಒಂದು ಗೀಜಗ ಗೂಡುಕಟ್ಟುವಾಗ ಅದು ಒಂದೇ ದಿನದಲ್ಲಿ ಆಗೋದಿಲ್ಲ. ಒಂದೇ ಹುಲ್ಲಿನಿಂದ ಆಗೋದಿಲ್ಲ. ಬೇರೆ ಬೇರೆ ಪದಗಳು, ಅರ್ಥ, ಭಾವಗಳ ಜೊತೆ ಭಾವನೆಗಳನ್ನು ಕಟ್ಟುವ ಮೂಲಕ ಕಾವ್ಯ ಸೃಷ್ಟಿ ಯಾಗಬೇಕು. ಕಾವ್ಯ ಲಕ್ಷಣ ಸುಲಭವಲ್ಲ ಎಂದು ವಿವರಿಸಿದರು.
ಪ್ರಬಂಧ ವಿಚಾರವಾಗಿ ಮಾತನಾಡಿದ ಸಾಹಿತಿಗಳು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಚ್. ಟಿ. ಕೃಷ್ಣಮೂರ್ತಿ ಅವರು ಕಥೆ, ಕವಿತೆ, ಪ್ರಬಂಧ ಗಳು ಲೇಖಕ ತನ್ನ ಬೇಸರ, ಸಂತಸ, ನೋವು, ನಲಿವು ಎಲ್ಲವನ್ನೂ ಅಭಿವ್ಯಕ್ತಿಸಲು ಬಳಸಿಕೊಳ್ಳಬಹುದು. ನಮ್ಮ ಆಧ್ಯತೆ ಯಾವುದು, ನಮ್ಮ ಮನದಲ್ಲಿ ಕುಳಿತಿರುವ ವಿಚಾರ, ನಮ್ಮನ್ನು ಕಾಡುವ, ನಮ್ಮ ಆಸಕ್ತಿ ಎಲ್ಲವೂ ಪ್ರಭಾವ ಬೀರುತ್ತವೆ ಎಂದರಲ್ಲದೆ ಜ್ಞಾನ ಪಡೆಯಲು ಓದಬೇಕು. ಅದರಿಂದ ಮತ್ತಷ್ಟು ಪ್ರೇರಣೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.
‌ ಸಂಸ್ಥೆಯ ಪ್ರಿನ್ಸಿಪಾಲ್ ಶಾರದಾ ಎಸ್. ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾ. ಕಾರ್ಯದರ್ಶಿ ಅನುರಾಧ, ಜಿಕಸಾಸಾಂ. ವೇದಿಕೆಯ ಶ್ರೀನಿವಾಸ ನಗಲಾಪುರ ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕರಾದ ಲತಾ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ದೀಪಕ್ ವಂದಿಸಿದರು. ಶಿಕ್ಷಕಿ ಸಿರಿ ವಂದಿಸಿದರು.

ಮಹದೇಶ್ವರ ಜಾತ್ರೆಗೆ ವನ್ಯಜೀವಿ ಇಲಾಖೆಯ ಕೆಲವು ನಿರ್ಬಂಧಗಳು

0

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆಗೆ ಈ ಬಾರಿ ರಾಜ್ಯ ಅರಣ್ಯ ಇಲಾಖೆಯು ಭಾರಿ ನಿರ್ಬಂಧಗಳನ್ನು ವಿಧಿಸಿದೆ.

ಜಾನುವಾರು, ಎತ್ತಿನಗಾಡಿಗಳು, ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಸೇರಿದಂತೆ ಹಲವು ಆದೇಶಗಳನ್ನು ಜಾರಿಗೊಳಿಸುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬೇಲದಕುಪ್ಪೆ ದೇವಾಲಯದ ವಾರ್ಷಿಕ ಜಾತ್ರೆಯ ಕುರಿತು ಸರ್ಕಾರದಿಂದ ಸ್ಥಿತಿ ವರದಿಯನ್ನು ಕೋರಿತ್ತು. ಇದರ ನಂತರ, ರಾಜ್ಯ ಅರಣ್ಯ ಇಲಾಖೆಯು ವನ್ಯಜೀವಿಗಳನ್ನು ರಕ್ಷಿಸಲು ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಹೇಳಿದೆ.

ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಸ್ಥಾನವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಹುಲಿ ಆವಾಸಸ್ಥಾನವನ್ನು ರೂಪಿಸುವ ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇವಾಲಯದಲ್ಲಿ 2020 ಮತ್ತು 2021 ರಲ್ಲಿ ಜಾತ್ರೆಯನ್ನು ನಿಷೇಧಿಸಲಾಗಿತ್ತು. ಈ ಹಿನ್ನೆಲೆ ಈ ಬಾರಿಯ ಜಾತ್ರೆ ಬಾರಿಯ ಜಾತ್ರೆ ಅದ್ಧೂರಿಯಾಗಲಿದೆ ಎಂದು ಅಂದಾಜಿಸಾಗಿದೆ.

ನವೆಂಬರ್ 20 ರಿಂದ 23 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಪೂರ್ವಭಾವಿಯಾಗಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ಅವರು ಮಂಗಳವಾರ ದೇವಾಲಯದ ಸ್ಥಳವನ್ನು ಪರಿಶೀಲಿಸಿದ್ದಾರೆ. ಜೊತೆಗೆ ದೇವಾಲಯದ ಟ್ರಸ್ಟಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಪ್ರತಿವರ್ಷ ಜಾತ್ರೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನ ಸೇರುತ್ತಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವವರು ಹೆಚ್ಚಿನವರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಾತ್ರೆ ಸಮಯದಲ್ಲಿ ಬೆಂಗಳೂರು, ಮಂಡ್ಯ ಮುಂತಾದ ಕಡೆಯಿಂದ ಜನರು ಸೇರುತ್ತಾರೆ.

ಕೊರೊನ ಸೋಂಕಿನಲ್ಲಿ ಮತ್ತಷ್ಟು ಇಳಿಕೆ

0

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 656 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಸಾವಿನ ಸಂಖ್ಯೆಯಲ್ಲಿಯೂ ಮತ್ತೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೋವಿಡ್ ಗೆ 7 ಜನರು ಬಲಿಯಾಗಿದ್ದಾರೆ.

ದೇಶದಲ್ಲಿ ಇದುವರೆಗೆ 5,30,553 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ 7,034 ಕೋವಿಡ್ ಸಕ್ರಿಯ ಪ್ರಕರಣಗಳಿದೆ. ಶೇ.98.78ರಷ್ಟು ಜನ ಕೊರೋನಾ ನಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ ಇದುವರೆಗೆ 4,41,30,380 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 1,03,328 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಈವರೆಗೆ 2,19,84,61,828 ಡೋಸ್ ಲಸಿಕೆ ಹಾಕಲಾಗಿದೆ.

24 ಗಂಟೆಯಲ್ಲಿ 1,94,240 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.

ಬಿಜೆಪಿ ಸೇರಿದ ಎಚ್.ಟಿ.ಬಳಿಗಾರ್ ಶಿಕಾರಿಪುರ ಭಾಗದಲ್ಲಿ ಪಕ್ಷಕ್ಕೆ ಬಲವೃದ್ಧಿ?

0

ಬಿಜೆಪಿಗೆ ಜೆಡಿಎಸ್ ಮುಖಂಡ ಹೆಚ್.ಟಿ. ಬಳಿಗಾರ್ ಅವರು ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸೇರ್ಪಡೆಯಾಗಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಬಳಿಗಾರ್ ಅವರಿಗೆ ಕೇಸರಿ ಶಾಲು ಹೊದಿಸುವುದರ ಮುಖಾಂತರ ಪಕ್ಷಕ್ಕೆ ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಅವರು ಬರ ಮಾಡಿಕೊಂಡಿದ್ದಾರೆ.

ಹೆಚ್.ಟಿ. ಬಳಿಗಾರ್ ಅವರು ಶಿಕಾರಿಪುರ ಭಾಗದಲ್ಲಿ ಪ್ರಭಾವಿ ಮುಖಂಡರಾಗಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಬಳಿಗಾರ್ ಅವರು ನಮ್ಮ ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು.

ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾಗಿರುವ ಇವರು ಕೆ.ಎ.ಎಸ್. ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದಿನ ರಾಜ್ಯ ಸರ್ಕಾರದಲ್ಲಿ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇವರಿಗೆ ಹಲವಾರು ವರ್ಷಗಳ ಹಿಂದೆಯೇ ಬಿಜೆಪಿಗೆ ಆಹ್ವಾನಿಸಿದ್ದೆವು. ಈಗ ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ.ಇವರಿಗೆ ಸೂಕ್ತ ಸ್ಥಾನಮಾನ ನೀಡಲು ನಾವು ಬದ್ಧರಾಗಿದ್ದೆವೆ.ಇವರನ್ನು ಬಳಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ, ಪಕ್ಷದ ಮುಖಂಡರು ಉಪಸ್ಥತರಿದ್ದರು.

ಹುಲಿ ಸಿಂಹಧಾಮದಲ್ಲಿ ವನ್ಯಜೀವಿ ಪರಿಸರದ ಬಗ್ಗೆ ಚಳಿಗಾಲದ ಶಿಬಿರ

0

ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ 2022-23 ನೇ ಸಾಲಿನಲ್ಲಿ ಚಳಿಗಾಲದ ಶಿಬಿರವನ್ನು ಡಿಸೆಂಬರ್ ಮಾಹೆಯಲ್ಲಿ ಹಮ್ಮಕೊಳ್ಳಲಾಗುತ್ತಿದೆ.

ಮೃಗಾಲಯ ನಿರ್ವಹಣೆ, ವನ್ಯಜೀವಿ ಆರೋಗ್ಯ ಮತ್ತು ಪರಿಪಾಲನೆ, ಪರಿಸರ ಸಂರಕ್ಷಣೆ, ಪಕ್ಷಿ ವೀಕ್ಷಣೆ, ಸರಿಸೃಪಗಳು, ಸಸ್ತನಿ ಕುರಿತು ಬೋಧನೆ, ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಈ ಕಾರ್ಯಕ್ರಮಗಳಿಗೆ ಯಾವುದೇ ಆಸಕ್ತ ಅಭ್ಯರ್ಥಿ, ವಿದ್ಯಾರ್ಥಿಗಳು ಭಾಗವಹಿಸಬಹುದು. ಮೊದಲು ಬಂದ 40 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು ಶುಲ್ಕ ರೂ.1000/- ಇರುತ್ತದೆ. ಮೃಗಾಲಯದ ವತಿಯಿಂದ ಸರ್ಟಿಫಿಕೇಟ್, ಟೀ-ಶರ್ಟ್, ಕ್ಯಾಪ್ ಮುಂತಾದವುಗಳನ್ನು ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಕಾರ್ಯ ನಿರ್ವಾಹಕ ನಿರ್ದೇಶಕರು, ಹುಲಿ-ಸಿಂಹಧಾಮ, ತ್ಯಾವರೆಕೊಪ್ಪ, ಮೊ.ಸಂ: 8073322471 ನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ‌

ಸಾರಿಗೆ ಇಲಾಖೆ ಮತ್ತು ಬಸ್ ಮಾಲೀಕರ ಸಭೆಪ್ರಮುಖ ವಿಷಯಗಳ ಬಗ್ಗೆ ಚರ್ಚೆ

0

ಜಿಲ್ಲಾ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರೊಂದಿಗೆ ಡಿಎಆರ್ ಸಭಾಂಗಣದಲ್ಲಿ ಸಭೆ ನಡೆಸಿದರು.

ಈ ವೇಳೆ ಅಧಿಕಾರಿಗಳು ಬಸ್ ಮಾಲೀಕರಿಗೆ ಎಂಟು ಪ್ರಮುಖ ಸೂಚನೆ ನೀಡಿದ್ದಾರೆ. ಇವುಗಳನ್ನು ಪಾಲಿಸದೆ ಇದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿದ ಎಂಟು ಸೂಚನೆಗಳು

  1. ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ತಪಾಸಣೆ ವೇಳೆ ಸಮವಸ್ತ್ರ ಧರಿಸದೆ ಇರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
  2. ಚಾಲಕರು ಹಾಗೂ ನಿರ್ವಾಹಕರುಗಳು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಬೇಕು. ತೊಂದರೆಯಾಗದಂತೆ ನಡೆದುಕೊಳ್ಳಬೇಕು.
  3. ಪ್ರಯಾಣಿಕರ ಸುರಕ್ಷತೆ ಮತ್ತು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವೇಗ ಮಿತಿ ಹಾಗೂ ಸಂಚಾರ ನಿಯಮ ಕಡ್ಡಾಯವಾಗಿ ಚಾಲಕರು ಹಾಗೂ ನಿರ್ವಾಹಕರುಗಳು ಪಾಲಿಸಬೇಕು.
  4. ಬಸ್‌ಗಳನ್ನು ನಗರದ ಎಲ್ಲೆಂದರಲ್ಲಿ ನಿಲ್ಲಿಸದೆ ನಿಗದಿಪಡಿಸಿದ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು.
  5. ಬಸ್‌ಗಳಲ್ಲಿ ಸರಕು ಸಾಗಾಣಿಕೆಯ ಸಂದರ್ಭ ನಿಗಾ ವಹಿಸಬೇಕು. ಅನುಮಾನಾಸ್ಪದ ಸರಕುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
  6. ಸಾರ್ವಜನಿಕರ ಸುರಕ್ಷಿತ ನಿಯಮ ಪ್ರಕಾರ ಶಿವಮೊಗ್ಗ ನಗರ ಖಾಸಗಿ ಬಸ್ ನಿಲ್ದಾಣ ಮತ್ತು ತಾಲೂಕು ಬಸ್ ನಿಲ್ದಾಣಗಳಲ್ಲಿ 10 ದಿನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.
  7. ಬಸ್‌ಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಸಂಬಂಧ ಪಟ್ಟ ಖಾಸಗಿ ಬಸ್‌ಗಳ ಮಾಲೀಕರೆ ಹೊಣೆಯಾಗುತ್ತಾರೆ.
  8. ಚಾಲಕರು ಬಸ್‌ಗಳನ್ನು ಚಾಲನೆ ಮಾಡುವ ಸಮಯದಲ್ಲಿ, ಮೊಬೈಲ್ ಬಳಸುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಓಡಾಟ ಹಾಗೂ ಬಸ್‌ ನಿಲ್ದಾಣಗಳ ಸಂಖ್ಯೆ ಹೆಚ್ಚಿದ್ದು, ಖಾಸಗಿ ಬಸ್‌ಗಳಿಂದ ಕಾನೂನು ಹದಗೆಡಿಸುವ ಯಾವುದೇ ಕೆಲಸಗಳು ನಡೆಯಬಾರದು ಎಂದು ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಖಾಸಗಿ ಬಸ್‌ ಮಾಲೀಕರಿಗೆ ಎಂಟು ಸೂಚನೆಗಳನ್ನು ನೀಡಲಾಗಿದೆ.