ಮುಸಲ್ಮಾನರ ‘ಮುಸ್ಲಿಂ ಪರ್ಸನಲ್ ಲಾ’ದ ಅಡಿಯಲ್ಲಿ ನಡೆದಿರುವ ವಿವಾಹ ‘ಪೋಕ್ಸೋ’ ಕಾನೂನಿನ ಪರಿಧಿಯ ಹೊರಗೆ ಇಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವಪೂರ್ಣ ತೀರ್ಪು ನೀಡುತ್ತಾ ಖಾಲಿದೂರ ರೆಹಮಾನ್ (ವಯಸ್ಸು 31 ವರ್ಷ) ಇವನ ಜಾಮಿನಿನ ಅರ್ಜಿಯನ್ನು ತಿರಸ್ಕರಿಸಲಾಯಿತು.
‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ವಿವಾಹ ಸಮ್ಮತವಾಗಿದ್ದರೂ, ಒಂದು ವೇಳೆ ಅಪ್ರಾಪ್ತ ಇರುವುದರಿಂದ ಈ ಪ್ರಕರಣ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪರಾಧ ಎನ್ನಲಾಗುವುದು’, ಎಂದು ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ಇವರು ಸ್ಪಷ್ಟಪಡಿಸಿದರು.
ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪ್ರಾಪ್ತ ಹುಡುಗಿಯ ಮೇಲಿನ ಪ್ರತಿಯೊಂದು ಲೈಂಗಿಕ ದೌರ್ಜನ್ಯಕ್ಕೆ ಅಪರಾಧ ಎನ್ನಲಾಗುವುದು. ಆದ್ದರಿಂದ (ಇಂತಹ ಅಪರಾಧ ನಡೆಸಿ ‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ವಿವಾಹ ಮಾಡಿಕೊಂಡರು ಅದು) ಇಂತಹ ವಿವಾಹ ‘ಪೋಕ್ಸೋ’ ಕಾನೂನಿನ ಪರಿಧಿಯ ಹೊರಗೆ ಇರಲು ಸಾಧ್ಯವಿಲ್ಲ.
ರೆಹಮಾನ್ ಇವನು ಓರ್ವ 16 ವರ್ಷದ ಹುಡುಗಿಯನ್ನು ಬಂಗಾಲದಿಂದ ಅಪಹರಿಸಿ ನಂತರ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಅದರ ನಂತರ ತನ್ನನ್ನು ಕಾಪಾಡಿಕೊಳ್ಳಲು ಅವನು ‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ಆಕೆಯ ಜೊತೆ ವಿವಾಹ ಮಾಡಿಕೊಂಡನು. ‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ಯೌವನಕ್ಕೆ ಬಂದಿರುವ ಹುಡುಗಿಯ ಜೊತೆಗೆ ವಿವಾಹವಾಗಲು ಅನುಮತಿ ಇದೆ. ಆದ್ದರಿಂದ ಇಂತಹ ವಿವಾಹ ಮಾಡಿಕೊಂಡಿರುವ ಯಾವುದೇ ಪುರುಷನ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಬಲಾತ್ಕಾರದ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ದಾವೆ ಮಾಡಲಾಗಿತ್ತು.
ಇದರ ಬಗ್ಗೆ ನ್ಯಾಯಾಲಯವು, ‘ಪೋಕ್ಸೋ’ ಕಾನೂನಿನ ಉದ್ದೇಶವೇ ವಿವಾಹದ ನೆಪದಲ್ಲಿ ಅಪ್ರಾಪ್ತರ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವುದಾಗಿದೆ. ಬಾಲ್ಯ ವಿವಾಹ ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದು ಅದು ಸಾಮಾಜಿಕ ಅಭಿಷಾಪವಾಗಿದೆ. ಇದರಿಂದ ಮಕ್ಕಳ ವಿಕಾಸದ ಜೊತೆ ರಾಜಿ ಮಾಡಿದ ಹಾಗೆ ಆಗುತ್ತದೆ ಎಂದು ಹೇಳಿತು.
ಈ ಸಮಯದಲ್ಲಿ ನ್ಯಾಯಮೂರ್ತಿ ಥಾಮಸ್ ಇವರು, ‘ನಾವು ಪಂಜಾಬ್ ಹರಿಯಾಣ ಮತ್ತು ದೆಹಲಿ ಉಚ್ಚ ನ್ಯಾಯಾಲಯದ ದೃಷ್ಟಿಕೋನ ಒಪ್ಪುವುದಿಲ್ಲ ಎಂಬುದು ಸ್ಪಷ್ಟಪಡಿಸಿದರು.
ಅವರು, “ಈ ನ್ಯಾಯಾಲಯವು ಅದರ ಆದೇಶದಲ್ಲಿ ಓರ್ವ ೧೫ ವರ್ಷದ ಮುಸಲ್ಮಾನ್ ಹುಡುಗಿಯು ತನ್ನ ಆಯ್ಕೆಯ ಪ್ರಕಾರ ವಿವಾಹ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ. ಇದರ ಜೊತೆಗೆ ಓರ್ವ ಪತಿಯು ಅಪ್ರಾಪ್ತ ಪತ್ನಿಯ ಜೊತೆ ಶಾರೀರಿಕ ಸಂಬಂಧ ಇಟ್ಟುಕೊಂಡ ನಂತರ ಕೂಡ ಅದನ್ನು ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ವಿನಾಯತಿ ನೀಡಲಾಗಿತ್ತು.
ಇದರ ಜೊತೆ ಕರ್ನಾಟಕದಲ್ಲಿನ ಒಂದು ಪ್ರಕರಣದಲ್ಲಿ 17 ವರ್ಷದ ಹುಡುಗಿಯ ಜೊತೆ ವಿವಾಹ ಮಾಡಿಕೊಂಡಿರುವ ಮಹಮ್ಮದ್ ವಾಸಿಮ್ ಅಹಮದ್ ಇವನ ಮೇಲಿನ ಕಾನೂನಿನ ಮೋಕದ್ದಮೆಯನ್ನು ರದ್ದು ಪಡಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ನಿರ್ಣಯದ ಬಗ್ಗೆ ಕೂಡ ನನ್ನ ಸಹಮತಿ ಇಲ್ಲಎಂದು ಹೇಳಿತು.
2022-23ನೇ ಸಾಲಿಗೆ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡೋದಕ್ಕಾಗಿ, ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರ ಪ್ರತಿ ಕನ್ನಡ ನ್ಯೂಸ್ ನೌಗೆ ದೊರೆತಿದ್ದು, 2022-23ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಎಸ್ ಎಸ್ ಎಲ್ ಸಿಯಿಂದ ಸ್ನಾತಕೋತ್ತರದವರೆಗೆ ಅತಿ ಹೆಚ್ಚು ಅಂಕ ಪಡೆದ ಶಿಕ್ಷಕರುಗಳ, ಉಪನ್ಯಾಸಕರು, ಪ್ರಾಂಶುಪಾಲರುಗಳ, ನಿವೃತ್ತ ಶಿಕ್ಷಕರು, ನಿವೃತ್ತ ಉಪನ್ಯಾಸಕರು, ಪ್ರಾಂಶುಪಾಲರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದಿದೆ.
ಈ ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕಾಗಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದಂತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬಿಎ, ಬಿಎಸ್ಸಿ, ಬಿಕಾಂ, ಬಿ.ಇಡಿ, ಬಿಸಿಎ, ಬಿಬಿಎಂ, ಬಿಎಸ್ ಸಿಎಜಿ, ಬಿಹೆಚ್ ಎಂ, ಎಲ್ ಎಲ್ ಬಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಂತ ವಿದ್ಯಾರ್ಥಿಗಳು, ಪ್ರಸ್ತುತ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಂದಹಾಗೇ ರಾಜ್ಯ ಪಠ್ಯಕ್ರಮದ ಎಸ್ ಎಸ್ ಎಲ್ ಸಿ ಯಿಂದ, ಸ್ನಾತಕ ಪದವಿ ವರೆಗಿನ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇದರ ಹೊರತಾಗಿ ಸಿಬಿಎಸ್ಸಿ, ಐಸಿಎಸ್ಸಿ ವ್ಯಾಸಂಗ ಮಾಡುತ್ತಿರುವಂತ ವಿದ್ಯಾರ್ಥಿಗಳು ಅರ್ಜಿಸಲ್ಲಿಸಲು ಅವಕಾಶ ಇರುವುದಿಲ್ಲ.
ಶೇ.60ಕ್ಕಿಂತ ಹೆಚ್ಚು ಅಂಕ ಪಡೆದಂತ ವಿದ್ಯಾರ್ಥಿಗಳು, ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಿದ ಅಂಕ ಪಟ್ಟಿಯೊಂದಿಗೆ www.kstbfonline.karnataka.gov.in ಜಾಲತಾಣಕ್ಕೆ ಭೇಟಿ ನೀಡಿ, ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವೆಬ್ ಸೈಟ್ ಮೂಲಕ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-01-2023 ಆಗಿರುತ್ತದೆ. ಅಂತಿಮ ದಿನಾಂಕದ ನಂತ್ರ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅಮೆರಿಕಾ ಮತ್ತು ಭಾರತ ನಡುವೆ ಅತ್ಯುತ್ತಮ ಸಂಬಂಧವಿದೆ. ಇದು ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದು ಶ್ವೇತಭವನದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
2022ರಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯ ಉತ್ತಮ ಮಟ್ಟದಲ್ಲಿತ್ತು.
ಇದು 2023ರಲ್ಲೂ ಮುಂದುವರೆಯಲಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಹಲೆಗಾರ ಜಾನ್ ಫೈನರ್ ಅಭಿಪ್ರಾಯಪಟ್ಟಿದ್ದಾರೆ.
ಇಂಡೋನೆಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ ಎಲ್ಲಾ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಫೈನರ್ ನೆನಪಿಸಿಕೊಂಡಿದ್ದಾರೆ.
ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರಿಗೆ ಸಂಬಂಧಪಟ್ಟಿದೆ ಎನ್ನಲಾದ ತೀರ್ಥಹಳ್ಳಿಯ 5 ಮನೆಗಳ ಮೇಲೆ ಇಂದು ಬೆಳಗಿನ ಜಾವ ಪೊಲೀಸರಿಂದ ದಾಳಿ ನಡೆಸಿದ್ದಾರೆ.
ಮಂಗಳೂರು ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಈ ದಾಳಿ ನಡೆಸಲಾಗಿದೆ. ಮೋಸ್ಟ್ ವಾಂಟೆಡ್ ಮತೀನ್ , ಬಂಧಿತ ಮಾಜ್ ಗೆ ಸಂಬಂಧಿಸಿದ ಎರಡು ಮನೆಗಳು ಮೇಲೂ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಸಾಜಿದ್ ಮತ್ತು ಶಾರೀಕ್ ಸಂಬಂಧಿಯೊಬ್ಬರ ಮನೆಯಲ್ಲೂ ಪರಿಶೀಲನೆ ನಡೆದಿದೆ. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಆಗುಂಬೆ ಠಾಣಾಧಿಕಾರಿ ಶಿವಕುಮಾರ್, ಮಾಳೂರು ಠಾಣಾಧಿಕಾರಿ ಪ್ರವೀಣ್ ನೀಲಮ್ಮನವರ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಎಸಗಿದ ಕೃತ್ಯಗಳ ಕುರಿತು ಕೆಲವು ಸಾಕ್ಷ್ಯಾಧಾರಗಳು ಮತ್ತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ.
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದರು.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಗ್ರಾಮಕ್ಕೆ ಭಾನುವಾರ ಜೆಡಿಎಸ್ನ ಪಂಚರತ್ನ ರಥಯಾತ್ರೆ ತಲುಪಿತು.
ರಥಯಾತ್ರೆಯ ದಾರಿಯುದ್ದಕ್ಕೆ ಎಚ್ಡಿಕೆ ಅವರ ಬಳಿ ರೈತ ಮಹಿಳೆಯರು, ಸ್ತ್ರೀ ಸಂಘಗಳ ಸದಸ್ಯರು ಸಾಲ ಮನ್ನ ಮಾಡುವಂತೆ ಕಷ್ಟ ಹೇಳಿಕೊಂಡಿದ್ದರು.
ಮಾಸ್ತಿ ಗ್ರಾಮದಲ್ಲಿ ಮಾತನಾಡಿದ ಎಚ್ಡಿಕೆ, 2018ರಲ್ಲಿ ಜೆಡಿಎಸ್ಗೆ ಬಹುಮತ ಸಿಕ್ಕಿ ಸರ್ಕಾರ ರಚಿಸಿದ್ದರೆ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವ ಉದ್ದೇಶವಿತ್ತು. ಆಗ ಮೈತ್ರಿ ಸರ್ಕಾರದಲ್ಲಿ ರೈತರ 25 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದೆವು. ಅದಾದ ಬಳಿಕ ಸ್ತ್ರೀಶಕ್ತಿ ಸಂಘಗಳ 1 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ತೀರ್ಮಾನಿಸಿದ್ದೆ. ಅಷ್ಟರಲ್ಲಿ ಸರ್ಕಾರವನ್ನು ಕೆಡವಿದ್ದರಿಂದ ಸಾಲಮನ್ನಾ ಮಾಡಲಾಗಲಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುವುದು ಎಂದು ಘೋಷಿಸಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಲೂರು ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 220 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಚುಮು ಚುಮು ಚಳಿಯ ವಾತಾವರಣವಿದೆ. ಆದರೆ ನವೆಂಬರ್ 22ರಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು ಕಳೆದ ವಾರ ರಾಜ್ಯದಲ್ಲಿ ಮಳೆಯಾಗಿತ್ತು. ಮೂರು ದಿನಗಳ ಕಾಲ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದಿತ್ತು. ಬಳಿಕ ಮೋಡ ಕವಿದ ವಾತಾವರಣ, ಚಳಿ ಮುಂದುವರೆದಿತ್ತು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ನವೆಂಬರ್ 22ರ ಮಂಗಳವಾರದಿಂದ ಮಳೆಯಾಗಲಿದೆ. ಇದರಿಂದಾಗಿ ಚಳಿ ಒಂದೆರಡು ದಿನ ಕಡಿಮೆಯಾಗುವ ಸಾಧ್ಯತೆ ಇದೆ.
ಯಾವ ಜಿಲ್ಲೆಗಳಲ್ಲಿ ಮಳೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಅನ್ವಯ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಚಳಿ ಸಹ ಮುಂದುವರೆಯಲಿದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಮೈಸೂರು, ತುಮಕೂರು, ಹಾವೇರಿಯಲ್ಲಿಯೂ ಮಂಗಳವಾರದಿಂದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಇದೆ. ಅಲ್ಲದೇ ಭಾರೀ ಇಬ್ಬನಿಯೂ ಸುರಿಯುತ್ತಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿಯೂ ಮಳೆಯಾಗಲಿದೆ. ಪುದುಚೇರಿ ಮತ್ತು ಚೆನ್ನೈನಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.
Overview Hotel Cliff Embassy Banquet & suites is a great choice for travellers looking for a 3 star hotel in Shimoga. It is located in Hosamane. This Hotel stands out as one of the highly recommended hotel in Shimoga and is recommended by 90% of our guests. Hotel is rated 4.0 out of 5, which is considered as Very good. The property enjoys a great location advantage and provides easy and fast connectivity to the major transit points of the city. A popular transit point from the hotel is Shimoga Railway Station (4.7 kms).
From all the 3 Star hotels in Shimoga, Hotel Cliff Embassy Banquet & suites is very much popular among the tourists. A smooth check-in/check-out process, flexible policies and friendly management garner great customer satisfaction for this property. The Hotel has standard Check-In time as 12:00 PM and Check-Out time as 12:00 PM.
What our guests think Good service quality, good stay experience, good rooms, good food and nice location are some highly appreciated and talked about aspects of the property. With an overall rating of 4.0 out of 5 (294 Ratings), the property is rated very good by 36% of the guests, 38% have rated it good, 15% have rated it average and 11% have rated it as bad. Also, we recommend that guests must go through traveller reviews and ratings posted by fellow travellers on the Goibibo platform to ensure that Hotel Cliff Embassy Banquet & suites is best suited for them. For more detailed information about this hotel, you can check the Questions & Answers section as well on Goibibo. There you can find the answers of the questions asked by some of our users about this property.
You can find numerous hotels in Shimoga under different categories and Hotel Cliff Embassy Banquet & suites is one the best hotel under its category.
Take in the views from the rooftop terrace when you stay at Cliff Embassy Banquet & suites. Free perks include WiFi, self parking, and on-the-go breakfast daily between 7:00 AM and 10:00 AM.
At a glance
Hotel size
30 rooms
Arriving/Leaving
Check-in time from noon – noon
Early check-in subject to availability
Minimum check-in age – 18
Check-out time is noon
Late check-out subject to availability
Restrictions related to your trip
Check COVID-19 restrictions
Special check-in instructions
Front desk staff will greet guests on arrival
This property doesn’t offer after-hours check-in
For more details, please contact the property using the information on the booking confirmation
To register at this property, guests who are Indian citizens must provide a valid photo identity card issued by the Government of India; travelers who are not citizens of India must present a valid passport and visa.
Required at check-in
Credit card, debit card, or cash deposit required for incidental charges
Government-issued photo ID may be required
Minimum check-in age is 18
Pets
Pets not allowed
Internet
Free WiFi in rooms
Parking
Free onsite self parking
*See fees and policies for additional details or extra charges
Property amenities
Food and drink
Free on-the-go breakfast each morning 7:00 AM–10:00 AM
Room service (limited hours)
Services
24-hour front desk
Facilities
Rooftop terrace
Room amenities
Freshen up
Private bathroom
Stay connected
Free WiFi
More
Daily housekeeping
Fees & policies
Optional extras
Early check-in can be arranged for an extra charge of INR 1000 (subject to availability)
Late check-out can be arranged for an extra charge of INR 1000 (subject to availability)
FAQ
What is the earliest I can check-in at Cliff Embassy Banquet And Suites Shimoga?
At Cliff Embassy Banquet And Suites Shimoga you can check in from 12 PM till 11.59 PM on your day of arrival.
How far is Cliff Embassy Banquet And Suites Shimoga from the city center?
The city center is located 0.6 miles away from Cliff Embassy Banquet And Suites Shimoga.
Are there any cleaning services provided at Cliff Embassy Banquet And Suites?
Yes, Cliff Embassy Banquet And Suites provides laundry, maid service and room service.
What landmarks can I find in vicinity of Cliff Embassy Banquet And Suites?
Tiger and Lion Safari is worth visiting, plus it is set around 25 minutes’ walk away from Cliff Embassy Banquet And Suites.
Can I have lunch or dinner next to Cliff Embassy Banquet And Suites Shimoga?
Yes, you can have a meal at Pawan Ice Creams and Kanauj Restaurant located about 400 feet away from Cliff Embassy Banquet And Suites Shimoga.
Is there parking at Cliff Embassy Banquet And Suites?
Yes, Cliff Embassy Banquet And Suites features an free parking available onsite.
CLIFF EMBASSY BANQUET AND SUITES
Address: Kuvempu Road, next to Nandi petrol bunk, Sharavathi Nagar, Shivamogga, Karnataka 577202
Choose Brewing Mist Homestay to escape the crowds and experience the tranquility that Chikmagalur has to offer! Located less than 2 kms from the Chikmagalur-Muthodi main road, amidst coffee and silver wood plantations, our Homestay is a perfect balance of adventure and relaxation. Perched atop a hill, you can enjoy expansive views, lush greenery and everything else that mother nature has to offer!
While our homestay itself is a modern structure, it is built on the foundations of what makes the Malnad region a truly memorable destination – hospitality, simplicity and harmony with nature.
From serving authentic local cuisines to lighting a campfire under the night sky, from providing freshly brewed coffee that you can enjoy whilst taking in the views to guiding you around the area, we have you covered. Whether you want to explore the trails and view spots around or simply relax in our cozy rooms and feel pampered, we assure you that you will find Brewing Mist Homestay to be your perfect retreat!
Activities
Table Tennis
Badminton
Campfire
Carrom Board
Chess
Darts
Jenga
Playing Cards & Uno
Board Games
Other Tourist Places Around Brewing Mist Homestay
Place
Distance
Travel Time
Kavikalgudda View Point
2 KMs Hike/4×4 Ride from Homestay
20 Mins/ 8 Mins
Bandekallu Gudda
9 KMs
22 Mins
Muthodi Forest Safari
13 KMs
28 Mins
Ukkuda Falls
21 KMs
45 Mins
Chikamagalur Town
24 KMs
43 Mins
Sitalayyangiri Temple
26 KMs
1 Hr 5 Mins
Mullayangiri Peak
29 KMs
1 Hr 15 Mins
Jhari Falls
31 KMs
1 Hr 10 Mins
Dattathreyapeeta
35 KMs
1 Hr 30 Mins
Manikyadhara Falls
40 KMs
1 Hr 40 Mins
Yagachi Dam & Water Adventure Sports
46 KMs
1 Hr 15 Mins
Sringeri
75 KMs
2 Hrs
Kemmangundi
83 KMs
2 Hrs 8 Mins
Kudremukh National Park
98 KMs
2 Hrs 45 Mins
What this place offers Garden view Mountain view Wifi Dedicated workspace Free parking on premises HDTV Private patio or balcony Security cameras on property
House rules Check-in: After 2:00 pm Check out: 10:00 am No pets Smoking is allowed Additional rules No loud music after 10 pm
Where you’ll be Chikkamagaluru, Karnataka, India Our homestay is surrounded by lush greenery and hill views
ಸರ್ಕಾರದ ಎಲ್ಲ ಸೇವೆಗಳನ್ನು ಕ್ಷೇತ್ರದ ಜನರ ಮನೆ ಬಾಗಿಲಿಗೆ ಒದಗಿಸುವ ದೃಷ್ಟಿಯಿಂದ ಜನತಾದರ್ಶನ ಕಾರ್ಯಕ್ರಮವನ್ನು ಪುನರಾರಂಭಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನತಾದರ್ಶನದಲ್ಲಿ ಮಾತನಾಡಿದ ಅವರು, ತಾವು ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಜನತಾದರ್ಶನ ಕಾರ್ಯಕ್ರಮ ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮ ತಡೆ ಹಿಡಿಯಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಜನತಾದರ್ಶನದಲ್ಲಿ ಜಿಲ್ಲಾಕಾರಿಗಳು, ತಹಸೀಲ್ದಾರ್, ಜಿಪಂ ಸಿಇಒ ಸೇರಿದಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಯ ಹಿರಿಯ ಅಕಾರಿಗಳಿಗೆ ರವಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರಿಂದ ಬರುವ ಸಮಸ್ಯೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ವಹಿಸಲಾಗುತ್ತದೆ. ಉಳಿದವುಗಳನ್ನು ಸಕಾಲ ಯೋಜನೆ ಮಾದರಿಯಲ್ಲಿ ಕೇವಲ ಒಂದು ತಿಂಗಳಲ್ಲಿ ಪರಿಹರಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದು ವೇಳೆ ಕಾನೂನು ತೊಡುಕು ಇರುವ ಸಮಸ್ಯೆಗಳ ಕುರಿತು ಅರ್ಜಿದಾರರಿಗೆ ಸಕಾರಣವನ್ನು ಒಂದು ತಿಂಗಳಿನಲ್ಲಿ ನೀಡಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜನಸ್ನೇಹಿ ಆಡಳಿತ ನೀಡುವ ಉದ್ಧೇಶದಿಂದ ಜನತಾದರ್ಶನ ನಡೆಸುತ್ತಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಜನತಾದರ್ಶದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿ ಬಂದಿದಿದ್ದು ವಿಶೇಷವಾಗಿತ್ತು. ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ ಶೇ.80ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿದೆ.
ಉಳಿದ ಅರ್ಜಿಗಳು ಬೆಸ್ಕಾಂ, ಕೆಎಸ್ ಆರ್ ಟಿಸಿ, ಬೋರ್ ವೆಲ್ ಸೇರಿದಂತೆ ಇತರೆ ಅಹವಾಲುಗಳಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ಎಲ್ಲ ಅರ್ಜಿಗಳ ವಿಲೇವಾರಿ ತರ್ಕಬದ್ಧವಾಗಿ ಮಾಡಲು ನಿರ್ದೇಶನ ನೀಡಲಾಗಿದ್ದು, ಜನರಿಗೆ ಸುಲಭ ಸೇವೆ ಸಿಗುವ ಜೊತೆಗೆ ಆಡಳಿತ ಪಾರದರ್ಶಕವಾಗಿರಬೇಕು, ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು ಎಂಬ ಉದ್ಧೇಶದಿಂದ ಜನತಾದರ್ಶನ ಆಯೋಜಿಸಲಾಗಿದೆ.
ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಭ್ರಷ್ಟಾಚಾರ ರಹಿತವಾಗಿ ಸೇವೆಗಳನ್ನು ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಂದಾಯ ಇಲಾಖೆಯಲ್ಲಿ ತಾಂತ್ರಿಕ ತೊಡುಕಿನ ಜೊತೆಗೆ ಕಾನೂನಿನ ತೊಡುಗಳಿರುವುದರಿಂದ ಕೆಲಸಗಳು ತಡವಾಗುತ್ತಿದ್ದು, ಇದರಿಂದಾಗಿಯೇ ಈ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಾಗಿ ಬಂದಿವೆ.
ಇಲಾಖೆಯಲ್ಲಿ ಮೇಲಾಧಿಕಾರಿಗಳು ಒಳ್ಳೆಯವರಿದ್ದರೂ, ಕೆಳಹಂತದ ಅಧಿಕಾರಿಗಳು ಅನೇಕ ವರ್ಷಗಳಿಂದ ಒಂದೇ ಕಡೆ ಇದ್ದು ಜಿಡ್ಡು ಹಿಡಿದಂತಾಗಿ ಜನರನ್ನು ಸತಾಯಿಸುತ್ತಿರುವುದು ಸಾಮಾನ್ಯವಾಗಿದೆ. ಈ ಕಾರಣಗಳಿಂದಲೇ ಕಂದಾಯ ಇಲಾಖೆಗೆ ಅಳೆದು ಚಪ್ಪಲಿ ಸವೆಯುತ್ತದೆ ಎಂಬ ಮಾತು ಚಾಲ್ತಿಗೆ ಬಂದಿದೆ. ಜನರ ಸಮಸ್ಯೆ ಬಗೆಹರಿಸಲು ಜನತಾದರ್ಶನ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 25,000ಕ್ಕೆ ಏರಿಕೆಯಾಗಿದ್ದು, ಚೀನಾ ಸರ್ಕಾರವೀಗ ನಗರವನ್ನು ಸೆಮಿ ಲಾಕ್‌ಡೌನ್ ಮಾಡಿದೆ. ದಿನೇ ದಿನೇ ಚೀನಾದಲ್ಲಿ ಮತ್ತೆ ಕೊರೋನಾ ಉಲ್ಬಣವಾಗುತ್ತಿದ್ದು, ಸೋಂಕಿತರ ಸಂಖ್ಯೆ 25,000ಕ್ಕೆ ಏರಿಕೆಯಾಗಿದೆ.
ಹೀಗಾಗಿ ವಾರಾಂತ್ಯದಲ್ಲಿ ಮನೆಯಲ್ಲೇ ಇರಲು ಅಲ್ಲಿನ ಸರ್ಕಾರ ಜನರಿಗೆ ಸೂಚನೆ ನೀಡಿದೆ. ಅಲ್ಲದೇ, ಪ್ರತಿದಿನ ಕೊರೋನಾ ಪರೀಕ್ಷೆಗೆಗೆ ಒಳಗಾಗಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.