Friday, March 27, 2026
Friday, March 27, 2026
Home Blog Page 1374

ಮಠ ಮಂದಿರಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ

0

ಮಠ, ಮಂದಿರಗಳು, ಸಂಘ-ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರ 23.95 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
55 ಮಠಗಳು, 81 ದೇವಾಲಯಗಳು, 25 ಸಂಘ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

ವೀರಶೈವ ಲಿಂಗಾಯಿತ ಪಂಚಮಸಾಲಿ ಮಠಕ್ಕೆ ಅನುದಾನ ರಿಲೀಸ್ ಮಾಡಲಾಗಿದೆ.

ಕೆಲವು ತಿಂಗಳ ಹಿಂದೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ಸ್ಥಾಪನೆಯಾದ ವೀರಶೈವ ಪಂಚಮಸಾಲಿ ಸಮಾಜದ 3ನೇ ಪೀಠಕ್ಕೆ ಅನುದಾನ ನೀಡಲಾಗಿದೆ. ವೀರಶೈವ ಲಿಂಗಾಯಿತ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಟ್ರಸ್ಟ್ ಅಡಿಯಲ್ಲಿ ಮೂರನೇ ಪೀಠ ಸ್ಥಾಪನೆಯಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸದಸ್ಯರಾಗಿರುವ ಸ್ವಾಮೀಜಿಗಳ ಮಠಗಳಿಗೆ ಅನುದಾನ ನೀಡಲಾಗಿದೆ. ಒಕ್ಕೂಟದ 20ಕ್ಕೂ ಹೆಚ್ಚು ಮಠಗಳಿಗೆ 20 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ.

ಅಪರಾಧ ಶಂಕಿತರ ತನಿಖೆಗಾಗಿ ಬ್ರೈನ್ ಮ್ಯಾಪಿಂಗ್ ಉಪಕರಣ

0

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಮತ್ತು ಶಂಕಿತರ ತನಿಖೆಗಾಗಿ ಕರ್ನಾಟಕದಲ್ಲಿ ಪೊಲೀಸರು ಬ್ರೈನ್ ಮ್ಯಾಪಿಂಗ್ ವ್ಯವಸ್ಥೆಯನ್ನು ಬಳಸಲಾರಂಭಿಸಿದ್ದಾರೆ. ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ಈ ಸಂಬಂಧ ಎಲ್ಲಾ ಪೊಲೀಸರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಈಗಾಗಲೇ ಪಾಲಿಗ್ರಾಫ್ ಪರೀಕ್ಷಾ ಸೌಲಭ್ಯವಿದೆ. ಪ್ರಸ್ತುತ ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಷನ್ ಸಿಗ್ನೇಚರ್ ಪ್ರೊಫೈಲಿಂಗ್ ಎಂದೂ ಕರೆಯಲ್ಪಡುವ ಬ್ರೈನ್ ಮ್ಯಾಪಿಂಗ್ ಅನ್ನು ಬಳಸಲು ಪ್ರಾರಂಭಿಸಿದ್ದಾರೆ.

ಇದಕ್ಕಾಗಿ ರಾಜ್ಯ ಪೊಲೀಸರು ಬ್ರೈನ್ ಫಿಂಗರ್‌ಪ್ರಿಂಟ್ ಡಿವೈಸ್‌ ಅನ್ನು ಕೂಡ ಹೊಂದಿದ್ದಾರೆ. ಅಪರಾಧದ ಅನುಭವ, ಜ್ಞಾನ ಮತ್ತು ವ್ಯಕ್ತಿಯ ಒಳಗೊಳ್ಳುವಿಕೆ ಸೇರಿದಂತೆ ಮಾನವ ಮೆದುಳಿನ ವಿದ್ಯುತ್ ನಡವಳಿಕೆಯನ್ನು ಅಧ್ಯಯನ ಮಾಡುವ ಎಲೆಕ್ಟ್ರೋಎನ್ಸೆಫಾಲೋಗ್ರಾಫಿ ಅನ್ನು ಬಳಸಲಿರುವ ಬ್ರೈನ್ ಫಿಂಗರ್‌ಪ್ರಿಂಟಿಂಗ್ ಸಾಧನವನ್ನು ರಾಜ್ಯ ಪೊಲೀಸರು ಸಂಗ್ರಹಿಸಿದ್ದಾರೆ. ಈ ಪರೀಕ್ಷೆಯು ಯಾವುದೇ ವ್ಯಕ್ತಿಯ ಯಾವುದೇ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ನಿರ್ಬಂಧಿಸುವುದಿಲ್ಲ. ಬ್ರೈನ್ ಮ್ಯಾಪಿಂಗ್‌ಗಾಗಿ ವ್ಯಕ್ತಿಗಳಿಗೆ ಯಾವುದೇ ರಾಸಾಯನಿಕ
ಅಥವಾ ಔಷಧಗಳನ್ನು ನೀಡುವ ಅಗತ್ಯವಿಲ್ಲ, ಇದು ಸಂಪೂರ್ಣವಾಗಿ ಆಕ್ರಮಣಶೀಲವಲ್ಲದ ಪರೀಕ್ಷೆಯಾಗಿದೆ.

ಇದು ಮನುಷ್ಯರಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ನ್ಯಾಯಾಲಯದಿಂದ ಅನುಮತಿ ಪಡೆದು ಪರೀಕ್ಷೆ ನಡೆಸಲಾಗುವುದು. ಹಾಗಾಗಿ, ಎಲ್ಲ ತನಿಖಾಧಿಕಾರಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಪೊಲೀಸ್‌ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಬ್ರೈನ್ ಮ್ಯಾಪಿಂಗ್, ಬ್ರೈನ್ ವೇವ್ ಫ್ರೀಕ್ವೆನ್ಸಿ ಬ್ಯಾಂಡ್‌ವಿಡ್ತ್‌ಗಳ ವಿಶ್ಲೇಷಣೆಯಾಗಿದೆ. ಅಪರಾಧದ ದೃಶ್ಯದಿಂದ ಶಂಕಿತ ಅಥವಾ ಆಪಾದಿತನ ಮೆದುಳು, ಮುಗ್ಧ ವ್ಯಕ್ತಿಯ ಮೆದುಳಿಗೆ ಸಾಧ್ಯವಾಗದ ವಿಷಯಗಳನ್ನು ಗುರುತಿಸುತ್ತದೆಯೇ ಎಂದು ಕಂಡುಹಿಡಿಯಲು ವಿಧಿವಿಜ್ಞಾನ ತಜ್ಞರು ವಿಶಿಷ್ಟವಾದ ನರವಿಜ್ಞಾನ ತಂತ್ರಗಳನ್ನು ಅನ್ವಯಿಸುತ್ತಾರೆ. ಇದನ್ನೇ ಬ್ರೈನ್‌ ಮ್ಯಾಪಿಂಗ್‌ ಎಂದು ಕರೆಯಲಾಗುತ್ತದೆ.

ರಸಾಯನ ಶಾಸ್ತ್ರ ಕಬ್ಬಿಣದ ಕಡಲೆಯಲ್ಲ

ವಿದ್ಯಾರ್ಥಿಗಳು ರಸಾಯನ ಶಾಸ್ತ್ರ ವಿಷಯವನ್ನು ಕಬ್ಬಿಣದ ಕಡಲೆ ಎಂದು ಭಾವಿಸಬಾರದು. ರಸಾಯನಶಾಸ್ತç ವಿಷಯ ಕಲಿಯುವ ಸರಳ ಮಾರ್ಗಗಳಿದ್ದು, ಅದನ್ನು ಅನುಸರಿಸುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಡಾ. ಗೀತಾರಾಣ ಹೇಳಿದರು.

ರಾಜೇಂದ್ರ ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಮತ್ತು ಇಂಟರಾಕ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಸಾಯನ ಶಾಸ್ತವನ್ನು ಮಕ್ಕಳು ಸರಳವಾಗಿ ಕಲಿಯುವುದು ಹೇಗೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಆರಂಭದಿಂದಲೇ ರಸಾಯನಶಾಸ್ತ ವಿಷಯ ಕಷ್ಟ ಎಂಬ ಆಲೋಚನೆ ಮೂಡಿರುತ್ತದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಆಸಕ್ತಿ ವಹಿಸಿ ಕಲಿಯದೇ ಇರುವುದರಿಂದ ಕಷ್ಟವಾಗುತ್ತದೆ. ಅದರ ಬದಲಾಗಿ ಸರಳ ಸೂತ್ರ ಹಾಗೂ ಉದಾಹರಣೆಗಳ ಮೂಲಕ ವಿಷಯಗಳ ಕಲಿಕೆಯಲ್ಲಿ ತೊಡಗಬೇಕು. ಜ್ಞಾಪಕ ಶಕ್ತಿ ವೃದ್ಧಿಯಾಗಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸುವ ದೃಷ್ಠಿಯಿಂದ ವಿಶೇಷ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದೇವೆ ಎಂದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ವಿಷಯ ಆದರೂ ಕಷ್ಟ ಎಂದು ಭಾವಿಸಬಾರದು.

ನಿರಂತರ ಅಭ್ಯಾಸ ಹಾಗೂ ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಬೇಕು. ಉತ್ತಮ ಅಭ್ಯಾಸದಿಂದ ಉತ್ತಮ ಫಲಿತಾಂಶ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಆಡಳಿತಾಧಿಕಾರಿ ಟಿ.ಪಿ.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರುಣ್ ದೀಕ್ಷಿತ್, ಮುಖ್ಯಶಿಕ್ಷಕ ಕುಮಾರಸ್ವಾಮಿ, ಸಲ್ಮಾ, ರಂಜಿತ, ಗಾನವಿ, ಶಾಲೆಯ ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಿ1 ರಿಂದ ಸುಶಾಸನ ಮಾಸಾಚರಣೆ-ಸಚಿವ ಅಶ್ವತ್ಥನಾರಾಯಣ

ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ತಮ್ಮ ನೇತೃತ್ವದ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಗಳಲ್ಲಿ ಡಿ.1ರಿಂದ ಸುಶಾಸನ ಮಾಸವನ್ನು ಆಚರಿಸಲಾಗುತ್ತದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಈ ಸಂಬಂಧವಾಗಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲು ಅವರು ಮೂರೂ ಇಲಾಖೆಗಳ ಉನ್ನತಾಧಿಕಾರಿಗಳ ಜತೆ ಗುರುವಾರ ಮಹತ್ತ್ವದ ಸಭೆ ನಡೆಸಿದರು.

ನಂತರ ಮಾತನಾಡಿದ ಅವರು, ಸುಶಾಸನ ಮಾಸಾಚರಣೆ ಅಂಗವಾಗಿ ತಮ್ಮ ಇಲಾಖೆಗಳಲ್ಲಿನ ಹಲವು ಸುಧಾರಣಾ ಕ್ರಮಗಳನ್ನು ಇಡೀ ತಿಂಗಳು‌ ಜನರಿಗೆ ತಿಳಿಸುವ ಸಲುವಾಗಿ ನಿರಂತರ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುವುದು. ಡಿ.25 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಅಂದು ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಅಂದು ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಪೂರ್ಣವಾಗಿ ಹೊಸ ರೂಪ ನೀಡಲಾಗುವುದು. ಜತೆಗೆ ಕೌಶಲಾಭಿವೃದ್ಧಿ ಇಲಾಖೆಯ ಮೂಲಕ 10 ಸಾವಿರ ಜನರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಸಂಬಂಧ ನೇಮಕಾತಿ ಪತ್ರಗಳನ್ನು ನೀಡಲಾಗುವುದು. ಹಾಗೆಯೇ, ಜಿಟಿಟಿಸಿ ಸುವರ್ಣ ಸಂಭ್ರಮದ ಅಂಗವಾಗಿ ಕಟ್ಟಿರುವ ನೂತನ ಕಟ್ಟಡವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ, ತಾಂತ್ರಿಕ ಶಿಕ್ಷಣ ಇಲಾಖೆಗೆ ನೇಮಕಾತಿ ಮತ್ತು ವೃಂದ ನಿಯಮಗಳನ್ನು 15 ವರ್ಷಗಳ ನಂತರ ರೂಪಿಸಲಾಗುತ್ತಿದೆ ಎಂದರು.

ಸುಶಾಸನ ಮಾಸಾಚರಣೆಯ ಅಂಗವಾಗಿ, ಉತ್ತಮ ವಿ.ವಿ.ಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗಳನ್ನು ನೀಡುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜೀವನೋಪಾಯ ಇಲಾಖೆಯಡಿ ಬರುವ ಸ್ವಸಹಾಯ ಸಂಘಗಳು ರಾಜ್ಯದ ಅರ್ಥಿಕ ಅಭಿವೃದ್ಧಿಗೆ ಮಹತ್ತ್ವದ ಕಾಣಿಕೆ ನೀಡುತ್ತಿವೆ. ಇವುಗಳನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಸುಶಾಸನ ಮಾಸಾಚರಣೆ ಅಂಗವಾಗಿ ಅರಿವು ಮತ್ತು ಜಾಗೃತಿ ಎರಡನ್ನೂ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ ತಿಮ್ಮೇಗೌಡ, ಐಟಿಬಿಟಿ ಇಲಾಖೆ ಹೆಚ್ವುವರಿ ಮುಖ್ಯ ಕಾರ್ಯದರ್ಶಿ‌ ರಮಣರೆಡ್ಡಿ, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಐಟಿಬಿಟಿ ನಿರ್ದೇಶಕಿ ಮೀನಾ‌ ನಾಗರಾಜ, ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ರವಿ ಡಿ.ಚನ್ನಣ್ಣನವರ್, ಕೆಇಎ ಆಡಳಿತಾಧಿಕಾರಿ ಶಿವಕುಮಾರ ಸೇರಿದಂತೆ ಇತರರು ಇದ್ದರು.

ವಿಶ್ವಕಪ್ ಪುಟ್ಬಾಲ್ ಗೆ ಮೆಡಿಕಲ್ ಟೀಮಿನಲ್ಲಿ ಕನ್ನಡದ ಮಹಿಳೆ

0

ಕತಾರ್ ದೇಶದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಮೆಡಿಕಲ್ ತಂಡದೊಂದಿಗೆ ಸೇವೆ ಸಲ್ಲಿಸಲು ತುಳುನಾಡಿನ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್.ದರ್ಖಾಸು ಎಂಬವರು ಇದೀಗ ಕತಾರಿನ ವಿಶ್ವಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು.

ಈ ಮೂಲಕ ಇವರು ವಿಶ್ವಕಪ್ ಮೆಡಿಕಲ್ ಟೀಮಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸೂರಂಡೆ ನಿವಾಸಿಗಳಾದ ನಾರಾಯಣ ಪೂಜಾರಿ ಮತ್ತು ಶ್ರೀಮತಿ ದಂಪತಿಗಳ‌ ಪುತ್ರಿಯಾದ ಪ್ರತಿಭಾ ಅವರು ವಾಮದಪದವು ಸಮೀಪದ ಕುಡಂಬೆಟ್ಟು ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರನ್ನು ವಿವಾಹವಾಗಿದ್ದು, ಸಂಸಾರ ಸಹಿತ ಕಳೆದ ಕೆಲವು ವರ್ಷಗಳಿಂದ ಕತಾರಿನಲ್ಲಿ ನೆಲೆಸಿದ್ದಾರೆ.

ಪ್ರತಿಭಾ ಅವರು ಕತಾರಿನ ಹಾಮದ್ ಮೆಡಿಕಲ್ ಕಾರ್ಪೋರೇಶನ್ ಸರಕಾರಿ ಅಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ ಸಹಿತ ಇತರ ಸಂದರ್ಭದಲ್ಲಿನ ಇವರ ವಿಶೇಷ ಸೇವೆಯನ್ನು ಗುರುತಿಸಿ ಈಗಾಗಲೇ ಗೌರವಿಸಲಾಗಿತ್ತು.

ಇದೀಗ ಇವರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಕತಾರ್ ಫಿಫಾ ವಿಶ್ವಕಪ್ ಮೆಡಿಕಲ್ ಟೀಮಿನಲ್ಲಿ ನರ್ಸಿಂಗ್ ಇನ್ಚಾರ್ಜ್ ಆಗಿ ಸೇವೆ ಸಲ್ಲಿಸಲು ಆಯ್ಕೆ ಮಾಡಲಾಗಿದೆ.

ಅನಗತ್ಯದಾವೆಗಳಿಂದ ನ್ಯಾಯಾಲಯಗಳ ಅಮೂಲ್ಯ ಸಮಯ ವ್ಯರ್ಥ- ವಿಭಾಗೀಯ ಪೀಠ

0

ರಾಜ್ಯ ಸರ್ಕಾರವು ಅನಗತ್ಯ ಮೊಕದ್ದಮೆಗಳೊಂದಿಗೆ ನ್ಯಾಯಾಲಯಗಳಲ್ಲಿ ‘ದಸ್ತಾವೇಜು ಸ್ಫೋಟ’ ಉಂಟುಮಾಡುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಕಿಡಿ ಕಾರಿದೆ. ಅಲ್ಲದೆ, ಇನ್ನು ಮುಂದೆ ಅನಗತ್ಯ ದಾವೆಗಳನ್ನು ತಪ್ಪಿಸಲು ವಿಫಲವಾದರೆ ಭಾರೀ ದಂಡ ವಿಧಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ಕಾನೂನು ಇಲಾಖೆಯು ರೂಪಿಸಿರುವ ವ್ಯಾಜ್ಯ ಪರಿಹಾರ ನೀತಿ 2021 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅನಗತ್ಯ ಅರ್ಜಿಗಳು, ಮೇಲ್ಮನವಿಗಳು ಇತ್ಯಾದಿಗಳನ್ನು ಭರ್ತಿ ಮಾಡುವುದನ್ನು ತಪ್ಪಿಸಲು ನೀತಿಯ ಬಗ್ಗೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ಪ್ರದೇಶವಾರು ಕಾರ್ಯಾಗಾರಗಳನ್ನು ನಡೆಸುವಂತೆಯೂ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಪಿ. ಎನ್. ದೇಸಾಯಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ.

“ಈ ನ್ಯಾಯಾಲಯವು ಅತಿದೊಡ್ಡ ವ್ಯಾಜ್ಯದಾರರಿಗೆ (ಸರ್ಕಾರಕ್ಕೆ) ಸಂದೇಶವನ್ನು ಕಳುಹಿಸಬೇಕಾದ ಸಮಯ ಬಂದಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಇದು ಅತಿದೊಡ್ಡ ದಾವೆಯಾಗಿರುವ ಕಾರಣ, ಎಲ್ಲಾ ಮತ್ತು ವಿವಿಧ ಪ್ರಕರಣಗಳನ್ನು ದಾಖಲಿಸಲು ಅದನ್ನು ಸಕ್ರಿಯಗೊಳಿಸಲು ಇದು ಪರವಾನಗಿಯಾಗುವುದಿಲ್ಲ. ಇದು ಅಮೂಲ್ಯವಾದ ನ್ಯಾಯಾಂಗದ ಸಮಯವನ್ನು ಹಾಳು ಮಾಡುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಮತ್ತೊಂದು ಟ್ವಿಸ್ಟ್

0

ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ.

ಶಂಕಿತ ಉಗ್ರ ಶಾರಿಕ್ ನ ಮೊಬೈಲ್ ನಲ್ಲಿ ಝಾಕಿರ್ ನಾಯ್ಕ್ ಭಾಷಣದ ವಿಡಿಯೋ ಪತ್ತೆಯಾಗಿದೆ. ವಿಡಿಯೋಗಳನ್ನು ನೋಡಿ ಶಾರಿಕ್ ಝಾಕಿರ್ ಪ್ರಭಾವಕ್ಕೆ ಒಳಗಾಗಿದ್ದ. ಝಾಕಿರ್ ನಾಯ್ಕ್ ಇಸ್ಲಾಂ ಧರ್ಮದ ಬೋಧಕ, ಭಾಷಣಕಾರ. ಭಾರತದಿಂದ ನಿಷೇಧಕ್ಕೊಳಗಾಗಿರುವ ಝಾಕಿರ್ ನ ಭಾಷಣಗಳನ್ನು ಶಾರಿಕ್ ಹೆಚ್ಚು ಕೇಳುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಶಾರಿಕ್ ಮೊಬೈಲ್ ಪರಿಶೀಲಿಸುತ್ತಿರುವ ಪೊಲೀಸರಿಗೆ ಮತ್ತೊಂದು ಸ್ಪೋಟಕ ಅಂಶ ಪತ್ತೆಯಾಗಿದ್ದು, ಶಾರಿಕ್ ಮೊಬೈಲ್ ಮೊಬೈಲ್ ನಲ್ಲಿ ಬಾಂಬ್ ತಯಾರಿಸುವ ವಿಡಿಯೋ ಸಹ ಪತ್ತೆಯಾಗಿದೆ. ಟೋರ್ ಬ್ರೌಸರ್ ಮೂಲಕ ಡಾರ್ಕ್ ವೆಬ್ ಸೈಟ್ ಗಳೂ ಪತ್ತೆಯಾಗಿವೆ ಎನ್ನಲಾಗಿದೆ.

ಇತಿಹಾಸ ಪುನರ್ರಚಿಸಲು ಸರ್ಕಾರದ ಬೆಂಬಲವಿದೆ- ಅಮಿತ್ ಶಾ

0

ಭಾರತದ ಇತಿಹಾಸವನ್ನು ಮತ್ತೆ ಬರೆಯಲು ಇತಿಹಾಸಕಾರರಿಗೆ ಕರೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಇತಿಹಾಸವನ್ನು ಪುನರ್ರಚಿಸುವವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.

ದೆಹಲಿಯಲ್ಲಿ ಅಸ್ಸಾಂ ಸರ್ಕಾರ ಏರ್ಪಡಿಸಿರುವ 17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400ನೇ ಜನ್ಮ ವಾರ್ಷಿಕೋತ್ಸವದ ಮೂರು ದಿನಗಳ ಆಚರಣೆಯ 2ನೇ ದಿನದಂದು ಅಮಿತ್ ಷಾ ಮಾತನಾಡಿದರು.

ನಾನು ಕೂಡ ಇತಿಹಾಸದ ವಿದ್ಯಾರ್ಥಿ ಮತ್ತು ನಮ್ಮ ದೇಶದ ಇತಿಹಾಸವನ್ನು ಸರಿಯಾಗಿ ಪ್ರಸ್ತುತ ಪಡಿಸಿಲ್ಲ ಎಂಬ ಮಾತುಗಳನ್ನು ಅನೇಕ ಬಾರಿ ಕೇಳಿದ್ದೇನೆ. ಅದು ನಿಜವೂ ಇರಬಹುದು. ಆದರೆ, ಈಗ ಅದನ್ನು ಸರಿಪಡಿಸಬೇಕಿದೆ ಎಂದು ಅಮಿತ್​ ಷಾ ಹೇಳಿದರು.

ಇಲ್ಲಿ ಕುಳಿತಿರುವ ಎಲ್ಲ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ನಾನೊಂದು ಮನವಿ ಮಾಡಿಕೊಳ್ಳುತ್ತೇನೆ. ಇತಿಹಾಸ ಸರಿಯಲ್ಲ ಎಂಬ ಕೂಗು ಇನ್ನು ಮುಂದೆ ಕೇಳದಂತೆ ಸರಿಪಡಿಸಲು ಮತ್ತು ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಒಮ್ಮೆ ಇತಿಹಾಸವನ್ನು ಮರು ಬರೆದರೆ ಸಾಕು, ಸುಳ್ಳು ನಿರೂಪಣೆಯನ್ನು ಪ್ರಚಾರ ಮಾಡಲಾಗುತ್ತದೆ ಎಂಬ ಕಲ್ಪನೆಯು ಇರುವುದಿಲ್ಲ ಎಂದರು. ಅಲ್ಲದೆ, ವಿಜ್ಞಾನ ಭವನದಲ್ಲಿ ಹಾಜರಿರುವ ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳ ಸಂಶೋಧನೆಗೆ ಕೇಂದ್ರವು ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

ಮುಂದೆ ಬನ್ನಿ, ಸಂಶೋಧನೆ ಮಾಡಿ ಮತ್ತು ಇತಿಹಾಸವನ್ನು ಪುನಃ ಬರೆಯಿರಿ. ಈ ರೀತಿಯಾಗಿ ನಾವು ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡಬಹುದು ಎಂದು ಅಮಿತ್​ ಷಾ ಕರೆ ನೀಡಿದರು.

ದೇಶದಲ್ಲಿ ಕೊರೋನ ಸಕ್ರಿಯ ಪ್ರಕರಣಗಳ ಇಳಿಕೆ

0

ಭಾರತದಲ್ಲಿ ಕೊರೋನಾ ಇಳಿಕೆ ಪ್ರಕರಣ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 347 ಹೊಸ ಪ್ರಕರಣ ಪತ್ತೆಯಾಗಿದೆ. ನವದೆಹಲಿ: ಭಾರತದಲ್ಲಿ ಕೊರೋನಾ ಇಳಿಕೆ ಪ್ರಕರಣ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 347 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,70,830ಕ್ಕೆ ಏರಿಕೆಯಾಗಿದೆ.

ಅಲ್ಲದೇ, ಕೊರೋನಾ ದಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,604ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,516ಕ್ಕೆ ಇಳಿಕೆಯಾಗಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 709 ಮಂದಿ ಗುಣಮುಖರಾಗುವುದರೊಂದಿಗೆ ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 4,41,34,710ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ 2,30,054 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದೆ. ಈ ವರೆಗೂ 90,47,51,609 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು.

ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 2,19,89,56,902 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

D Square Beach Home in Mangaluru

0

ಮಂಗಳೂರಿನ ಡಿ ಸ್ಕ್ವೇರ್ ಬೀಚ್ ಹೋಮ್

ಬೀಚ್‌ನಿಂದ 2 ನಿಮಿಷಗಳ ವಾಕಿಂಗ್ ದೂರದಲ್ಲಿ ಇಡೀ ಕುಟುಂಬ ಅಥವಾ ಸ್ನೇಹಿತರ ಗುಂಪಿನೊಂದಿಗೆ ವಿಶ್ರಾಂತಿ ಪಡೆಯಲು ಮತ್ತು ಉಳಿಯಲು ಹೆರಿಟೇಜ್ ಹೋಮ್. ವಿಶಾಲವಾದ ಪಾರ್ಕಿಂಗ್ ಸ್ಥಳ. ವಿವಿಧ ಹಣ್ಣುಗಳು, ತರಕಾರಿಗಳು ಮತ್ತು ತೆಂಗಿನಕಾಯಿಗಳ ಉದ್ಯಾನ. ಸ್ನೇಹಶೀಲ ಮಲಗುವ ಕೋಣೆಗಳು ಮತ್ತು ಒಟ್ಟಿಗೆ ಸೇರಲು ದೊಡ್ಡ ಕೋಣೆ. (ಹೋಸ್ಟ್ ಮತ್ತು ಇತರ ಅತಿಥಿಗಳಿಂದ ಅನುಮತಿಯೊಂದಿಗೆ ಬಾಹ್ಯ ಪ್ರದೇಶವನ್ನು ಬಳಸುವ ಆಯ್ಕೆ). ಮುಂಗಡ-ಆರ್ಡರ್‌ನಲ್ಲಿ ಆಹಾರ ಲಭ್ಯವಿದೆ ಅಥವಾ ಆಹಾರ ವಿತರಣಾ ಅಪ್ಲಿಕೇಶನ್‌ಗಳ ಮೂಲಕ ಬುಕ್ ಮಾಡಬಹುದು. ತ್ವರಿತ ಅಡುಗೆ/ತಾಪನ, ಚಹಾ ಮತ್ತು ಕಾಫಿಗಾಗಿ ಅಡುಗೆಮನೆ ಲಭ್ಯವಿದೆ. ಹೆರಿಟೇಜ್ ಬೀಚ್ ವಾಸ್ತವ್ಯವನ್ನು ಆನಂದಿಸಿ!

Heritage Home to relax and stay with the whole family or group of friends within 2 minutes walking distance from beach. Ample parking space. Garden with variety of fruits, vegetable and coconut palms. Cozy bedrooms and large living room for get together. (Option to use external area with permission from host and other guests). Food available on pre-order or can be booked through food delivery apps. Kitchenette available for quick cooking/heating, tea & coffee. Enjoy the heritage beach stay!

What this place offers
Kitchen
Free parking on premises
Pets allowed
Washing machine
Luggage drop-off allowed
Cot
Smoking allowed
Long-term stays allowed

Things to know
House rules
Check-in: After 3:00 pm
Pets are allowed
Smoking is allowed

Health & safety

Carbon monoxide alarm not reported — The host hasn’t reported a carbon monoxide alarm on the property. We suggest bringing a portable detector for your trip. Show more

Smoke alarm not reported — The host hasn’t reported a smoke alarm on the property. We suggest bringing a portable detector for your trip. Show more

Nearby lake, river, other body of water — “Covered well. Do not open lid. Children must be accompanied with elders near the well.
Beach nearby at two minutes walk. Swimming not recommended.”
You must also acknowledge

Some spaces are shared — Kitchen, washing machine, etc. needs to be shared with hosts or other guests

Address: Near Mangalore Beach Resort (Vazco), Someshwar, Mangaluru, Karnataka 575023

Phone: 099163 36177