Friday, March 27, 2026
Friday, March 27, 2026
Home Blog Page 1370

ಕಿಸಾನ್ ಕಾರ್ಡ್ ಲಾಭಗಳ ಬಗ್ಗೆ ಕೃಷಿಕರಿಗೆ ಮಾಹಿತಿ

0

ರೈತರಿಗೆ ಮತ್ತಷ್ಟು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಈ ಹಿಂದೆಯೇ ಆರಂಭಿಸಿದೆ.

ಈ ಯೋಜನೆಯಡಿ ರೈತರಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ 3 ರಿಂದ 4 ಲಕ್ಷ ರೂ.ವರೆಗೆ ಸಾಲವನ್ನು ಕೃಷಿಗಾಗಿ ನೀಡಲಾಗುತ್ತದೆ. ಈ ಸಾಲ ಸೌಲಭ್ಯದ ಬಗ್ಗೆ ರೈತರು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ರೈತರು ತಮ್ಮ ಕೃಷಿ ಭೂಮಿಯಲ್ಲಿ ಈ ಸಾಲದ ಮೊತ್ತವನ್ನು ಹೂಡಿಕೆ ಮಾಡಬಹುದು.

ರೈತರು ಬೀಜಗಳು, ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಹುದು. ರೈತರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕ್‌ ಖಾತೆಯನ್ನು ಹೊಂದಿದ್ದರೆ ಸಾಕು ಮನೆಯಲ್ಲಿ ಕುಳಿತು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೂ. 2 ಲಕ್ಷಗಳವರೆಗಿನ ಸಾಲದ ಮೊತ್ತಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ. ಅಲ್ಲದೆ ಸಕಾಲದಲ್ಲಿ ಈ ಸಾಲವನ್ನು ಮರುಪಾವತಿ ಮಾಡಿದಲ್ಲಿ ವಾರ್ಷಿಕ ಶೇ. 3ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ ಸೌಲಭ್ಯ ಈ ಪಡೆಯಬಹುದು.

ಆಸಕ್ತ ರೈತರು ತಮ್ಮ ಅವಶ್ಯಕತೆಗನುಗುಣವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ನೀಡುತ್ತವೆ. ರೈತರಿಗೆ ರಸಗೊಬ್ಬರ, ಬೀಜ, ಕೀಟನಾಶಕ ಇತ್ಯಾದಿ ಕೃಷಿ ಉತ್ಪನ್ನಗಳ ಖರೀದಿಗೆ ಸಾಲ ನೀಡುವುದು ಸರ್ಕಾರದ ಉದ್ದೇಶವಾಗಿದೆ.

ಎರಡನೆಯ ಉದ್ದೇಶವೆಂದರೆ ರೈತರು ಅತಿಯಾದ ಬಡ್ಡಿಯನ್ನು ವಿಧಿಸುವ ಉದ್ದೇಶದ ಸಾಲ ಪಡೆಯುವ ಅಗತ್ಯವಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ತೆಗೆದುಕೊಂಡ ಸಾಲವು ಶೇ. 2-4 % ಮಾತ್ರ ರೈತರ ಅನುಕೂಲಕ್ಕಾಗಿ ಅಗ್ಗವಾಗಿದೆ.

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿದ್ದರೆ ನೀವು ಯೋನೋ ಅಪ್ಲಿಕೇಶನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದಕ್ಕಾಗಿ ನೀವು ಯೋನೋ ಅಗ್ರಿಕಲ್ಚರ್ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡುವ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ರೈತರು ಮೊದಲು ಎಸ್‌ಬಿಐನ ಯೋನೋ ಆಪ್ ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಇದಲ್ಲದೆ, ನೀವು ಎಸ್‌ಬಿಐನ ಯೋನೋ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಲಾಗಿನ್ ಕೂಡ ಮಾಡಬಹುದು.

ಜ್ಞಾನ ವಾಹಿನಿಗಳ ಕಾರ್ಯಕ್ರಮ ಕನ್ನಡದಲ್ಲಿ ಬಿತ್ತರಿಸಲು ಮನವಿ

0

ಜಗತ್ತಿನ ಜ್ಞಾನ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡುವಂತೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.

ಜಗತ್ತಿನ ಜ್ಞಾನ ವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ತಮಿಳಿನಲ್ಲಿ, ತೆಲುಗಿನಲ್ಲಿ, ಹಿಂದಿಯಲ್ಲಿ ಡಬ್ಬಿಂಗ್ ಆಗಿ ಅಂದಿನಿಂದ ಪ್ರಸಾರವಾಗುತ್ತಿದ್ದು, ಭೂ ಜೀವ ಜಗತ್ತಿನ ಅದ್ಭುತ ಸುಂದರ ವಿಷಯಗಳೆಲ್ಲಾ ಅಲ್ಲಿನ ಜನಗಳಿಗೆ ಅವರ ಅವರ ಪ್ರಾದೇಶಿಕ ಭಾಷೆಗಳಲ್ಲಿ ದೊರಕುತ್ತಿವೆ.

ಈ ಭೂಮಿಯ ಮೇಲಿನ ಜೀವಜಗತ್ತಿನ ಅದ್ಭುತ ವೈವಿಧ್ಯತೆಗಳನ್ನು ವೈಚಿತ್ರಗಳನ್ನು ಅವುಗಳ ನಿಗೂಢ ಜೀವನ ಕ್ರಮಗಳನ್ನು ಹಾಗೂ ಅವುಗಳೆಲ್ಲಾ ಅಳಿವಿನಂಚೆಗೆ ಹೋಗುತ್ತಿರುವ ಭೀಕರತೆಗಳನ್ನೆಲ್ಲ ಜಗತ್ತಿನ ಎಲ್ಲ ಜನಗಳು ಅವರವರ ಮಾತೃಭಾಷೆಗಳಲ್ಲಿ ಅರಿತುಕೊಳ್ಳುವ ಅನಿವಾರ್ಯತೆ ಇದೆ. ಆದರೆ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡ ಭಾಷೆಯಲ್ಲಿ ಪ್ರಸಾರವಾಗದೇ ಇರುವುದರಿಂದ ಅದರಲ್ಲಿ ಜೀವ ವೈವಿಧ್ಯದ ಜ್ಞಾನ ಕನ್ನಡಿಗರನ್ನು ತಲುಪುತ್ತಿಲ್ಲ. ಆದ್ದರಿಂದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ ಹಾಗೂ ಬಿಬಿಸಿ ಅರ್ಥ್ ವಾಹಿನಿಗಳು ಕನ್ನಡದಲ್ಲಿ ಪ್ರಸಾರವಾಗಬೇಕೆಂದು ಕನ್ನಡಿಗರು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸುನಿಲ್ ಕುಮಾರ್ ಅವರು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ- ಸಿದ್ಧರಾಮಯ್ಯ

0

ರಾಜ್ಯದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬಂದರೇ ಉಚಿತವಾಗಿ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಘೋಷಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಮಾತನಾಡಿದಂತ ಅವರು, ನಾವು ಮತ್ತೆ ಅಧಿಕಾರಕ್ಕೆ ಬಂದರೇ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ. ಬಿಜೆಪಿಯವರು ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ್ರೇ 4 ಕೋಟಿ ಜನರಿಗೆ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಸಚಿವ ನಾರಾಯಣಗೌಡ ಜೆಡಿಎಸ್ ನಿಂದ ಬಿಜೆಪಿಗೆ ಹೋದ ಗಿರಾಕಿ. ನಾರಾಯಣಗೌಡ ಕೆ ಆರ್ ಪೇಟೆಯಲ್ಲಿ ಒಂದೇ ಒಂದು ಮನೆ ಕೊಟ್ಟದ್ದಾರಾ? ಬಿಜೆಪಿಯವರ ಮನೆ ಹಾಳಾಗ ಒಂದೇ ಒಂದು ಮನೆ ಕಟ್ಟಸಲು ಆಗಿಲ್ಲ ಎಂದು ಕಿಡಿ ಕಾರಿದ್ದಾರೆ.

30 ವರ್ಷಮೀರಿದ ಪ್ರತೀ ವ್ಯಕ್ತಿಗೂ ನಮ್ಮ ಕ್ಲಿನಿಕ್ ನಲ್ಲಿ ಮಧುಮೇಹ ತಪಾಸಣೆ

0

ನಮ್ಮ ಕ್ಲಿನಿಕ್ ಗಳ ಮೂಲಕ 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಆರೋಗ್ಯ ಸಿಟಿ ಸಮ್ಮಿಟ್ ನಲ್ಲಿ ಮಾತನಾಡಿದ ಅವರು, ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಮ್ಮ ಕ್ಲೀನಿಕ್ ಗಳ ಮೂಲಕ 30 ವರ್ಷ ಮೀರಿದ ಪ್ರತಿಯೊಬ್ಬರಿಗೂ ಮಧುಮೇಹ ತಪಾಸಣೆ ಮಾಡಲಾಗುವುದು ಎಂದರು.

ರಾಜ್ಯದ ವಿವಿಧ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಗಳನ್ನು ಆರಂಭಿಸಲಾಗುವುದು. ಈಗಾಗಲೇ 200ಕ್ಕೂ ಅಧಿಕ ಕ್ಲಿನಿಕ್ ಗಳು ಸಿದ್ಧವಾಗಿದ್ದು, ಈ ತಿಂಗಳಂತೆಕ್ಕೆ 100 ಕ್ಲಿನಿಕ್ ಗಳನ್ನು ಉದ್ಘಾಟಿಸಲಾಗುವುದು.
ಕೊಳಗೇರಿ ಹಾಗೂ ಬಡವರು ವಾಸಿಸುವ ಪ್ರದೇಶದಲ್ಲಿ ಕ್ಲಿನಿಕ್ ಗಳನ್ನು ಆರಂಭಿಸಿ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 6500ಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿಯೂ ಮಧುಮೇಹ ತಪಾಸಣೆ ಮಾಡಲಾಗುವುದು. 18 ತಿಂಗಳಲ್ಲಿ ರಾಜ್ಯದ ಶೇ. 100 ರಷ್ಟು ಜನರ ಆರೋಗ್ಯ ತಪಾಸಭೆ ಗುರಿ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ನಿವೃತ್ತಿಗೊಂಡು ನಾಲ್ಕು ವರ್ಷವಾದ ನೌಕರರ ವಿರುದ್ಧ ತನಿಖೆಗೆ ಅವಕಾಶವಿಲ್ಲ

0

ನಾಲ್ಕು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನೌಕರರ ವಿರುದ್ಧ ತನಿಖೆ ನಡೆಸಲು ಅವಕಾಶವಿಲ್ಲವೆಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಕರ್ನಾಟಕ ನಾಗರೀಕ ಸೇವೆಗಳ ಅಧಿನಿಯಮದ ನಿಯಮ 214ರ 2(ಬಿ) (ಜಿಜಿ) ಪ್ರಕಾರ ಇದಕ್ಕೆ ಅವಕಾಶವಿಲ್ಲವೆಂಬುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಗೃಹ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅನಿಲ್ ಕುಮಾರ್ ಹಾಗೂ ಟಿ. ಮಲ್ಲಣ್ಣ ವಿರುದ್ಧ 2006ರಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2022ರ ಜೂನ್ 21ರಂದು ಮೆಮೋ ಜಾರಿಗೊಳಿಸಲಾಗಿತ್ತು.

ಆದರೆ ಅನಿಲ್ ಕುಮಾರ್ 2018ರ ಜೂನ್ 30ರಂದು ನಿವೃತ್ತಿಯಾಗಿದ್ದರೆ, ಮಲ್ಲಣ್ಣ 2020 ರ ಆಗಸ್ಟ್ 30 ರಂದು ನಿವೃತ್ತರಾಗಿದ್ದರು. ಹೀಗಾಗಿ 2006 ರಂದು ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಈಗ ಮೆಮೋ ನೀಡಲಾಗಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆಗೆ ಅವಕಾಶವಿಲ್ಲವೆಂದು ತೀರ್ಪು ಪ್ರಕಟಿಸಿದೆ.

ಹೊಸ ಆದ್ಯತಾ ಪಡಿತರ ಚೀಟಿ ಕೋರಿದ 1.55 ಲಕ್ಷ ಅರ್ಜಿಗಳು ಮಾನ್ಯವಾಗಿವೆ

0

ರಾಜ್ಯ ಸರ್ಕಾರದಿಂದ ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿರುವಂತ ಅರ್ಜಿಗಳಲ್ಲಿ 1.55 ಲಕ್ಷ ಅರ್ಜಿಗಳನ್ನು ಮಾನ್ಯಗೊಳಿಸಲಾಗಿದೆ.

ಹೀಗೆ ಹೊಸ ಆದ್ಯತಾ ಪಡಿತರ ಚೀಟಿ ಸಲ್ಲಿಸಿದವರಿಗೆ ಪಡಿತರ ಚೀಟಿಗಳನ್ನು ವಿತರಿಸಲು ಸರ್ಕಾರ ಆದೇಶಿಸಿದೆ.
ಕುರಿತಂತೆ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳಿ ಸೂಚಿಸಿರುವಂತೆ ತಿಳಿಸಲಾಗಿದೆ.

ಅದರಲ್ಲಿ ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ ಕೋರಿ ದಿನಾಂಕ 25-08-2022ರವರೆಗೆ 2,73,662 ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 1,55,927 ಅರ್ಹ ಕುಟುಂಬಗಳಿಗೆ ಹೊಸ
ಆದ್ಯತಾ ಪಡಿತರ ಚೀಟಿ ನೀಡುವ ಬಗ್ಗೆ ಜಿಲ್ಲೆಗಳಲ್ಲಿ ವರದಿ ಪಡೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದಿದೆ.

ಹೊಸದಾಗಿ ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವಂತ 2,73,662 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅದ್ಯಾತಾ ಪಡಿತರ ಚೀಟಿಯನ್ನು ಹೊಂದಲು ಅರ್ಹರಿರುವ ಒಟ್ಟು 1,55,927 ಅರ್ಜಿದಾರರಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು ವಿತರಿಸಲು ಆದೇಶಿಸಿದೆ.

ಬಿಜೆಪಿಗೆ ಯಾವುದೇ ರೌಡಿಗಳಿಗೆ ಮನ್ನಣೆಕೊಡುವುದಿಲ್ಲ- ಬೊಮ್ಮಾಯಿ

0

ನಾವು ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿರುವಂತೆ ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ಸಂಬಂಧಿಸಿದಂತೆ ರೌಡಿ ಶೀಟರ್ ಗಳ ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಮತ್ತು ಅವರನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿದ್ದು, ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿರುವಂತೆ ಸೈಲೆಂಟ್ ಸುನೀಲ್ ರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಅಂದಹಾಗೇ ರೌಡಿ ಶೀಟರ್ ಆಗಿದ್ದಂತ ಸೈಲೆಂಟ್ ಸುನೀಲ್ ಬಿಜೆಪಿ ನಾಯಕರನ್ನು ರಕ್ತದಾನ ಶಿಬಿರಕ್ಕೆ ಆಹ್ವಾನಿಸಿ, ಕಾರ್ಯಕ್ರಮ ಮಾಡಿದ್ದರ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪಿಸಿತ್ತು. ಅಲ್ಲದೇ ರೌಡಿಗಳ ತಾಣವಾಗುತ್ತಿದೆ ಬಿಜೆಪಿ ಎಂಬುದಾಗಿ ವಾಗ್ಧಾಳಿ ನಡೆಸಿತ್ತು. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು ನಳೀನ್ ಕುಮಾರ್ ಕಟೀಲ್ ಅವರು ಸೈಲೆಂಟ್ ಸುನಿಲ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಬಳಿಕ ಈಗ ಸಿಎಂ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ನಮ್ಮ ಕ್ಲಿನಿಕ್ ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ

0

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದ ಅನುಮೋದನೆಯಂತೆ, ನೂತನವಾಗಿ ಸ್ಥಾಪಿಸಲಾಗುವ “ನಮ್ಮ ಕ್ಲಿನಿಕ್”ಗಳಲ್ಲಿ ಕರ್ತವ್ಯನಿರ್ವಹಿಸಲು ವೈದ್ಯಾಧಿಕಾರಿಗಳ ಹುದ್ದೆಗೆ 01 ವರ್ಷದ ಅವಧಿಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಆಸಕ್ತಿವುಳ್ಳ ಎಂ.ಬಿ.ಬಿ.ಎಸ್ ಪದವಿ ಮತ್ತು ಕೆ.ಎಂ.ಸಿ ಕೌನ್ಸಿಲ್‌ ನೊಂದಾವಣಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು ಮತ್ತು ಒಂದು ಜೆರಾಕ್ಸ್ ಪ್ರತಿ, ಭಾವಚಿತ್ರದೊಂದಿಗೆ ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ರವರ ಕಛೇರಿ, ಅನೆಕ್ಸ್-2 ಕಟ್ಟಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು-560 002 ವಿಳಾಸಕ್ಕೆ ಖುದ್ದಾಗಿ – ಅರ್ಜಿ ಸಲ್ಲಿಸಲು ಎಂದು ಮುಖ್ಯ ಆರೋಗ್ಯಾಧಿಯಾದ ಡಾ. ಬಾಲಸುಂದರ್ ರವರು ಕೋರಿರುತ್ತಾರೆ.

500 ಮಿಲಿಯನ್ ವಾಟ್ಸ್ ಆ್ಯಪ್ ಬಳಕೆದಾರರ ಮಾಹಿತಿ ಮಾರಾಟ

0

ವಿಶ್ವದಲ್ಲಿ ವಾಟ್ಸಪ್ ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ 550 ಮಿಲಿಯನ್ ಜನ ವಾಟ್ಸಪ್ ಬಳಸುತ್ತಿದ್ದಾರೆ. ಆದರೀಗ ವಾಟ್ಸಪ್ ಬಳಕೆದಾರರನ್ನು ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ.

ಅದೇನೆಂದರೆ, ಡಾರ್ಕ್ ವೆಬ್ ನಲ್ಲಿ ಸುಮಾರು 500 ಮಿಲಿಯನ್ ವಾಟ್ಸಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಮಾರಾಟವಾಗಿವೆಯಂತೆ.
ಸೈಬರ್ ನ್ಯೂಸ್ ವರದಿ ಮಾಡಿರುವ ಈ ಮಾಹಿತಿ ವಾಟ್ಸಪ್ ಬಳಕೆದಾರರನ್ನು ಆತಂಕಕ್ಕೀಡು ಮಾಡಿದೆ. ವರದಿಯ ಪ್ರಕಾರ ಪ್ರಸಿದ್ಧ ಹ್ಯಾಕಿಂಗ್ ಗುಂಪೊಂದು ಕಮ್ಯುನಿಟಿ ವೇದಿಕೆಯಲ್ಲಿ ಜಾಹೀರಾತೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ 47.8 ಕೋಟಿ ವಾಟ್ಸಪ್ ಬಳಕೆದಾರರ ಸಂಖ್ಯೆಗಳ ಡೇಟಾಬೇಸ್ ನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಲಾಗಿದೆ.

ಸೋರಿಕೆಯಾದ ಡೇಟಾಸೆಟ್ 84 ದೇಶಗಳ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹೊಂದಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ವಾಟ್ಸಪ್ ಬಳಕೆದಾರರ ವೈಯಕ್ತಿಕ ಮಾಹಿತಿ, ದತ್ತಾಂಶಗಳನ್ನು ಕದ್ದು ಮಾರಾಟಕ್ಕೆ ಇಡಲಾಗಿದೆಯಂತೆ. ಈ ಮೂಲಕ ವಾಟ್ಸಪ್ ಬಳಕೆದಾರರ ವಾಟ್ಸಪ್ ನಂಬರ್, ವೈಯಕ್ತಿಕ ಮಾಹಿತಿ ಅನ್ಯರ ಪಾಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.

ಮಾರಾಟಕ್ಕಿಟ್ಟಿರುವ ಡೇಟಾಬೇಸ್ ನಲ್ಲಿ ಭಾರತ, ಯುನೆಟೈಡ್ ಕಿಂಗ್ ಡಮ್, ಇಟೆಲಿ, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್, ಸೌದಿ ಅರೇಬಿಯಾ ಸೇರಿದಂತೆ ವಿಶ್ವದ 84 ರಾಷ್ಟ್ರಗಳ ವಾಟ್ಸಪ್ ಬಳಕೆದಾರರ ಮೊಬೈಲ್ ನಂಬರ್ ಗಳಿವೆ ಎಂದು ಹೇಳಲಾಗುತ್ತಿದೆ.

ಅಮೆರಿಕಾದಲ್ಲಿ 3.2 ಕೋಟಿ, ಬ್ರಿಟನ್ 1.1 ಕೋಟಿ, ರಷ್ಯಾ 1 ಕೋಟಿ, ಇಟಲಿ 3.5 ಕೋಟಿ, ಸೌದಿ ಅರೇಬಿಯಾ 2.9 ಕೋಟಿ, ಭಾರತದ 60 ಲಕ್ಷ ಜನರ ಮೊಬೈಲ್ ನಂಬರ್ ಸೈಬರ್ ಖದೀಮರ ಕೈ ಸೇರಿದ್ದು, ಬಳಕೆದಾರರ ಖಾಸಗಿ ಮಾಹಿತಿ ಲೀಕ್ ಆಗಿದೆ ಎಂದು ವರದಿ ಹೇಳಿದೆ.

ನವೆಂಬರ್ 16ರಂದು ಹ್ಯಾಕಿಂಗ್ ಕಮ್ಯೂನಿಟಿ ವೇದಿಕೆಯಲ್ಲಿ ಜಾಹೀರಾತೊಂದನ್ನು ಪೋಸ್ಟ್ ಮಾಡಲಾಗಿತ್ತು. ಇದರಲ್ಲಿ ವಾಟ್ಸಪ್ ನ ಅಂದಾಜು 2 ಶತಕೋಟಿ ಸಕ್ರಿಯ ಮಾಸಿಕ ಬಳಕೆದಾರರಲ್ಲಿ ನಾಲ್ಕನೇ ಒಂದು ಭಾಗವು ಅಪಾಯದಲ್ಲಿದೆ ಎಂದು ವರದಿಯಾಗಿದೆ.

ವಾಟ್ಸಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ ಆಗಿರುವ ವಿಚಾರ ಎಲ್ಲರಲ್ಲೂ ಆತಂಕ ತಂದೊಡ್ಡಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಬಹಳ ಎಚ್ಚರವಾಗಿರುವುದು ಉತ್ತಮ. ವಾಟ್ಸಪ್ ನಲ್ಲಿ ಅನಾಮಿಕ ನಂಬರ್ ನಿಂದ ಮೆಸೇಜ್, ಕಾಲ್ ಬಂದಲ್ಲಿ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ.

ಮುಖ್ಯವಾಗಿ ಅನಾಮಿಕ ಸಂಖ್ಯೆಗಳಿಂದ ಯಾರಾದರೂ ಮಾಹಿತಿ ಕೇಳಿದರೆ, ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು. ಪದೇ ಪದೇ ಸಂದೇಶ ಬರುವ ಸ್ಪ್ಯಾಮ್ ಸಂಖ್ಯೆಗಳನ್ನು ಡಿಲೀಟ್ ಮಾಡಬೇಕು ಅಥವಾ ಬ್ಲಾಕ್ ಮಾಡಿದರೆ ಇನ್ನೂ ಒಳ್ಳೆಯದು. ಸಾಧ್ಯವಾದಷ್ಟು ಮಾಹಿತಿಯನ್ನು ಹಾಗೂ ಪ್ರೊಫೈಲ್ ಫೋಟೋವನ್ನು ಗೌಪ್ಯವಾಗಿ ಇಡುವುದು ಉತ್ತಮ.

ಭಾರತೀಯ ಅಂಚೆಯಲ್ಲಿ ನೇಮಕಾತಿ ಡ್ರೈವ್

0

ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಎಂಟಿಎಸ್ ಮತ್ತು ಮೇಲ್ ಗಾರ್ಡ್ ನೇಮಕಾತಿಗಳನ್ನು ಭರ್ತಿ ಮಾಡಲು, ಭಾರತೀಯ ಅಂಚೆ ಕಚೇರಿ ಇತ್ತೀಚೆಗೆ 2022 ರ ತನ್ನ ನೇಮಕಾತಿ ಡ್ರೈವ್ನ ಅಧಿಸೂಚನೆಯನ್ನು ಘೋಷಿಸಿದೆ.

ಅಭ್ಯರ್ಥಿಗಳು ಡಿಒಪಿ ಹುದ್ದೆಗಳಿಗೆ ಬೇಕಾಗಿದರುವ ಅರ್ಹತೆಯನ್ನು ಪೂರೈಸಿದರೆ ಎಂಟಿಎಸ್ ಮತ್ತು ಮೇಲ್ ಗಾರ್ಡ್ ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ ನ ಇಂಡಿಯಾ ಪೋಸ್ಟ್ ಆಫೀಸ್ ನೇಮಕಾತಿಗಾಗಿ, ಇಂಡಿಯಾ ಪೋಸ್ಟ್ ಆಫೀಸ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ 98083 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತದ ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳಲ್ಲಿ ಬಲವಾದ ಬೇರುಗಳನ್ನು ಹೊಂದಿರುವ ದೊಡ್ಡ ಸರ್ಕಾರಿ ಸಂಸ್ಥೆಗಳು ಅಂಚೆ ಇಲಾಖೆ ಮತ್ತು ಸಂವಹನ ಸಚಿವಾಲಯವು ಪೋಸ್ಟ್‌ ಆಫೀಸ್‌ನಲ್ಲಿ ಕೆಲಸ ಮಾಡಲು ದೊಡ್ಡ ಪ್ರಮಾಣದ ಕಾರ್ಮಿಕರ ಅಗತ್ಯವಿದೆ ಹೀಗಾಗಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ.

ಪೋಸ್ಟ್ಮ್ಯಾನ್, ಮೇಲ್ ಗಾರ್ಡ್ ಮತ್ತು ಎಂಟಿಎಸ್ (ಮಲ್ಟಿ-ಟಾಸ್ಕಿಂಗ್ ಸ್ಟಾಫ್) ನಂತಹ ಹುದ್ದೆಗಳಿಗೆ ಇಂಡಿಯಾ ಪೋಸ್ಟ್ ನೇಮಕಾತಿ 2022 ರ ಅಡಿಯಲ್ಲಿ 98083 ಹುದ್ದೆಗಳಿವೆ. ಕರ್ನಾಟಕ ರಾಜ್ಯದಲ್ಲಿ ಎಂಟಿಎಸ್ ಮತ್ತು ಮೇಲ್ ಗಾರ್ಡ್ ನೇಮಕಾತಿಯನ್ನು ನಿಮ್ಮ ಉಲ್ಲೇಖಕ್ಕಾಗಿ ಕೆಳಗೆ ಪಟ್ಟಿ ಮಾಡಲಾದ ಪ್ರದೇಶವಾರು ಪೋಸ್ಟ್ ಆಫೀಸ್ ನೇಮಕಾತಿ 2022 ಅನ್ನು ನೀವು ಪರಿಶೀಲಿಸಬಹುದು.

ನೇಮಕಾತಿ ಶೀರ್ಷಿಕೆ
ಇಂಡಿಯಾ ಪೋಸ್ಟ್ ನೇಮಕಾತಿ
2022

ಪೋಸ್ಟ್ ಆಫೀಸ್ ನೇಮಕಾತಿ ಅಧಿಸೂಚನೆ 2022 ದಿನಾಂಕ 15 ಆಗಸ್ಟ್ 2022

ಒಟ್ಟು ಹುದ್ದೆಗಳ ಸಂಖ್ಯೆ 98083 ಪೋಸ್ಟ್ ಗಳು

ಹುದ್ದೆ ಗಳ ಹೆಸರು ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್, ಎಂಟಿಎಸ್
ಇಂಡಿಯಾ ಪೋಸ್ಟ್ ಮ್ಯಾನ್ 59,099 ಹುದ್ದೆಗಳು

ಇಂಡಿಯಾ ಪೋಸ್ಟ್ ಮೇಲ್ ಗಾರ್ಡ್ ಪೋಸ್ಟ್ಗಳು 2022 1445 ಹುದ್ದೆಗಳು

ಪೋಸ್ಟ್ ಆಫೀಸ್ ಎಂಟಿಎಸ್ ಪೋಸ್ಟ್ ಗಳು 37,539 ಹುದ್ದೆಗಳು

ಅಪ್ಲಿಕೇಶನ್ ಪ್ರಾರಂಭ ದಿನಾಂಕ ನವೆಂಬರ್ 2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 2022

ವಿದ್ಯಾರ್ಹತೆ ಅಗತ್ಯ 10 ನೇ ಪಾಸ್ ಅಥವಾ 12 ನೇ ಪಾಸ್
ವಯಸ್ಸಿನ ಮಿತಿ 18-32 ವರ್ಷಗಳು
ಅಧಿಕೃತ ವೆಬ್ ಸೈಟ್
indiapost.gov.in

ಗ್ರಾಮೀಣ ಡಾಕ್ ಸೇವಕ್ (ಬಿಪಿಎಂ, ಎಬಿಪಿಎಂ, ಇತ್ಯಾದಿ) ಹುದ್ದೆಗಳು: ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಿಂದ ಇಂಗ್ಲಿಷ್ ಮತ್ತು ಗಣಿತದಲ್ಲಿ ಉತ್ತೀರ್ಣರಾದ ಅಂಕಗಳೊಂದಿಗೆ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ 10 ನೇ ತರಗತಿಗೆ ಸೆಕೆಂಡರಿ ಶಾಲಾ ಪರೀಕ್ಷೆಯನ್ನು ಸ್ಪರ್ಧಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಅರ್ಹರು.

ಪೋಸ್ಟ್ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳು: ಸಿ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್, ಎಸ್‌ಎಸ್ಸಿ, ಎಸ್‌ಎಸ್‌ಎಲ್ಸಿ ಅಥವಾ 10 ನೇ ತರಗತಿಯಲ್ಲಿ ಸರ್ಕಾರದಿಂದ ಅನುಮೋದಿತ ರಾಜ್ಯ ಅಥವಾ ಕೇಂದ್ರ ಶಿಕ್ಷಣ ಮಂಡಳಿ ಅಥವಾ ಸಂಸ್ಥೆಯಿಂದ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಐಟಿಐ ಅಥವಾ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿರಬೇಕು.
ಸ್ಟಾಫ್ ಕಾರ್ ಡ್ರೈವರ್ ಪೋಸ್ಟ್: ಅಭ್ಯರ್ಥಿಗಳು ಲಘು ಮತ್ತು ಭಾರಿ ಮೋಟಾರು ವಾಹನಗಳಿಗೆ ಮಾನ್ಯ ಚಾಲನಾ ಪರವಾನಗಿ ಮತ್ತು ಮಾನ್ಯತೆ ಪಡೆದ ಬೋರ್ಡ್ ಅಥವಾ ಇನ್ಸ್ಟಿಟ್ಯೂಟ್ನಿಂದ 10 ನೇ ದರ್ಜೆಯ ಡಿಪ್ಲೊಮಾ ಹೊಂದಿರಬೇಕು.

ನುರಿತ ಕುಶಲಕರ್ಮಿ ಹುದ್ದೆ: ಸಂಬಂಧಪಟ್ಟ ಟ್ರೇಡ್ ನಲ್ಲಿ ಸರ್ಕಾರದಿಂದ ಸ್ವೀಕರಿಸಲಾದ ಟೆಕ್ನಿಕಲ್ ಸ್ಕೂಲ್ ನಿಂದ ಸರ್ಟಿಫಿಕೇಟ್ ಅಥವಾ 8 ನೇ ತರಗತಿಯ ಡಿಪ್ಲೊಮಾ ಮತ್ತು ಟ್ರೇಡ್ ನಲ್ಲಿ ಒಂದು ವರ್ಷದ ಅನುಭವ.

ಪೋಸ್ಟಲ್ ಅಸಿಸ್ಟೆಂಟ್ (ಪಿಎ)/ ರಿಮ್ಯಾಂಡ್ ಅಸಿಸ್ಟೆಂಟ್ (ಎಸ್‌ಎ) ಮತ್ತು ಇತರ ಹುದ್ದೆಗಳು: 12 ನೇ (ಎಚ್‌ಎಸ್ಸಿ) ಪರೀಕ್ಷೆ, ಡಿಪ್ಲೊಮಾ, ಸಂಬಂಧಿತ ಕ್ಷೇತ್ರದಲ್ಲಿ ಪದವಿ, ಅಥವಾ ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾಲಯ ಅಥವಾ ಇನ್ಸ್ಟಿಟ್ಯೂಟ್ನಿಂದ ತುಲನಾತ್ಮಕ ಅರ್ಹತೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಹುದ್ದೆಗೆ ಅರ್ಹರಾಗಿರುತ್ತಾರೆ.