Sunday, August 23, 2026
Sunday, August 23, 2026

500 ಮಿಲಿಯನ್ ವಾಟ್ಸ್ ಆ್ಯಪ್ ಬಳಕೆದಾರರ ಮಾಹಿತಿ ಮಾರಾಟ

Date:

ವಿಶ್ವದಲ್ಲಿ ವಾಟ್ಸಪ್ ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ 550 ಮಿಲಿಯನ್ ಜನ ವಾಟ್ಸಪ್ ಬಳಸುತ್ತಿದ್ದಾರೆ. ಆದರೀಗ ವಾಟ್ಸಪ್ ಬಳಕೆದಾರರನ್ನು ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ.

ಅದೇನೆಂದರೆ, ಡಾರ್ಕ್ ವೆಬ್ ನಲ್ಲಿ ಸುಮಾರು 500 ಮಿಲಿಯನ್ ವಾಟ್ಸಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಮಾರಾಟವಾಗಿವೆಯಂತೆ.
ಸೈಬರ್ ನ್ಯೂಸ್ ವರದಿ ಮಾಡಿರುವ ಈ ಮಾಹಿತಿ ವಾಟ್ಸಪ್ ಬಳಕೆದಾರರನ್ನು ಆತಂಕಕ್ಕೀಡು ಮಾಡಿದೆ. ವರದಿಯ ಪ್ರಕಾರ ಪ್ರಸಿದ್ಧ ಹ್ಯಾಕಿಂಗ್ ಗುಂಪೊಂದು ಕಮ್ಯುನಿಟಿ ವೇದಿಕೆಯಲ್ಲಿ ಜಾಹೀರಾತೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ 47.8 ಕೋಟಿ ವಾಟ್ಸಪ್ ಬಳಕೆದಾರರ ಸಂಖ್ಯೆಗಳ ಡೇಟಾಬೇಸ್ ನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಲಾಗಿದೆ.

ಸೋರಿಕೆಯಾದ ಡೇಟಾಸೆಟ್ 84 ದೇಶಗಳ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹೊಂದಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ವಾಟ್ಸಪ್ ಬಳಕೆದಾರರ ವೈಯಕ್ತಿಕ ಮಾಹಿತಿ, ದತ್ತಾಂಶಗಳನ್ನು ಕದ್ದು ಮಾರಾಟಕ್ಕೆ ಇಡಲಾಗಿದೆಯಂತೆ. ಈ ಮೂಲಕ ವಾಟ್ಸಪ್ ಬಳಕೆದಾರರ ವಾಟ್ಸಪ್ ನಂಬರ್, ವೈಯಕ್ತಿಕ ಮಾಹಿತಿ ಅನ್ಯರ ಪಾಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.

ಮಾರಾಟಕ್ಕಿಟ್ಟಿರುವ ಡೇಟಾಬೇಸ್ ನಲ್ಲಿ ಭಾರತ, ಯುನೆಟೈಡ್ ಕಿಂಗ್ ಡಮ್, ಇಟೆಲಿ, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್, ಸೌದಿ ಅರೇಬಿಯಾ ಸೇರಿದಂತೆ ವಿಶ್ವದ 84 ರಾಷ್ಟ್ರಗಳ ವಾಟ್ಸಪ್ ಬಳಕೆದಾರರ ಮೊಬೈಲ್ ನಂಬರ್ ಗಳಿವೆ ಎಂದು ಹೇಳಲಾಗುತ್ತಿದೆ.

ಅಮೆರಿಕಾದಲ್ಲಿ 3.2 ಕೋಟಿ, ಬ್ರಿಟನ್ 1.1 ಕೋಟಿ, ರಷ್ಯಾ 1 ಕೋಟಿ, ಇಟಲಿ 3.5 ಕೋಟಿ, ಸೌದಿ ಅರೇಬಿಯಾ 2.9 ಕೋಟಿ, ಭಾರತದ 60 ಲಕ್ಷ ಜನರ ಮೊಬೈಲ್ ನಂಬರ್ ಸೈಬರ್ ಖದೀಮರ ಕೈ ಸೇರಿದ್ದು, ಬಳಕೆದಾರರ ಖಾಸಗಿ ಮಾಹಿತಿ ಲೀಕ್ ಆಗಿದೆ ಎಂದು ವರದಿ ಹೇಳಿದೆ.

ನವೆಂಬರ್ 16ರಂದು ಹ್ಯಾಕಿಂಗ್ ಕಮ್ಯೂನಿಟಿ ವೇದಿಕೆಯಲ್ಲಿ ಜಾಹೀರಾತೊಂದನ್ನು ಪೋಸ್ಟ್ ಮಾಡಲಾಗಿತ್ತು. ಇದರಲ್ಲಿ ವಾಟ್ಸಪ್ ನ ಅಂದಾಜು 2 ಶತಕೋಟಿ ಸಕ್ರಿಯ ಮಾಸಿಕ ಬಳಕೆದಾರರಲ್ಲಿ ನಾಲ್ಕನೇ ಒಂದು ಭಾಗವು ಅಪಾಯದಲ್ಲಿದೆ ಎಂದು ವರದಿಯಾಗಿದೆ.

ವಾಟ್ಸಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ ಆಗಿರುವ ವಿಚಾರ ಎಲ್ಲರಲ್ಲೂ ಆತಂಕ ತಂದೊಡ್ಡಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಬಹಳ ಎಚ್ಚರವಾಗಿರುವುದು ಉತ್ತಮ. ವಾಟ್ಸಪ್ ನಲ್ಲಿ ಅನಾಮಿಕ ನಂಬರ್ ನಿಂದ ಮೆಸೇಜ್, ಕಾಲ್ ಬಂದಲ್ಲಿ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ.

ಮುಖ್ಯವಾಗಿ ಅನಾಮಿಕ ಸಂಖ್ಯೆಗಳಿಂದ ಯಾರಾದರೂ ಮಾಹಿತಿ ಕೇಳಿದರೆ, ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು. ಪದೇ ಪದೇ ಸಂದೇಶ ಬರುವ ಸ್ಪ್ಯಾಮ್ ಸಂಖ್ಯೆಗಳನ್ನು ಡಿಲೀಟ್ ಮಾಡಬೇಕು ಅಥವಾ ಬ್ಲಾಕ್ ಮಾಡಿದರೆ ಇನ್ನೂ ಒಳ್ಳೆಯದು. ಸಾಧ್ಯವಾದಷ್ಟು ಮಾಹಿತಿಯನ್ನು ಹಾಗೂ ಪ್ರೊಫೈಲ್ ಫೋಟೋವನ್ನು ಗೌಪ್ಯವಾಗಿ ಇಡುವುದು ಉತ್ತಮ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...