Friday, March 27, 2026
Friday, March 27, 2026
Home Blog Page 1369

ಜಿ೨೦ ರಾಷ್ಟ್ರಗಳ ಸಂಘಟನೆಗೆ ಭಾರತದ ಸಾರಥ್ಯ.

0

ಇಂದಿನಿಂದ ಭಾರತಕ್ಕೆ ಜಿ20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷಗಿರಿ.
ಏನಿದು ಜಿ 20 ?
ವಿಶ್ವದ ದೇಶಗಳ ಒಂದು ಸಂಘಟನೆ.
ಅಂದರೆ ಆರ್ಥಿಕ ಸಂಕಷ್ಟಗಳ ಬಗ್ಗೆ
ದೇಶಗಳಲ್ಲಿರುವ ಸಮಸ್ಯೆಗಳು ಅದಕ್ಕೆ ತಹುಲಿದಂತೆ ಬರುವ ಇತರ ದೇಶಗಳ ವ್ಯಾಪಾರ ವಹಿವಾಟು, ಸಹಕಾರ‌, ವಿನಿಮಯ ಹೀಗೆ ಪರಸ್ಪರ ಚರ್ಚಿಸಿ ಪರಿಹಾರ ಹುಡುಕುವುದೇ ಇದರ ಮೂಲ ಧ್ಯೇಯ.
ಮುಖ್ಯವಾಗಿ 2008 ರಲ್ಲಿ ಉಂಟಾದ ಆರ್ಥಿಕ ಹಿಂಜರಿತದಿಂದ ಜಿ20 ರಾಷ್ಟ್ರಗಳ ಸಂಘಟನೆ ಹೊಸತಾಗಿ ಯೋಚನೆ ಮಾಡುವಂತಾಯಿತು.
ಅಲ್ಲಿಂದ ಎರಡು ತಿಂಗಳಿಗೊಮ್ಮೆ
ಸಭೆ ನಡೆಯುತ್ತಿತ್ತು.


ಇದರಲ್ಲಿ ದೇಶದೇಶಗಳ ವಾಣಿಜ್ಯ ಒಪ್ಪಂದಗಳಷ್ಟೇ ಅಲ್ಲ ಜಾಗತಿಕ ಹವಾಮಾನ ವೈಪರೀತ್ಯ,ಮುಕ್ತ ಮತ್ತು ಸ್ವತಂತ್ರ ಸಮುದ್ರಯಾನ, ಭಯೋತ್ಪಾದನೆ ತಡೆ,ಪ್ರಾದೇಶಿಕ ಶಾಂತಿ ಇತ್ಯಾದಿ ಗಂಭೀರ ವಿಷಯಗಳ ಚರ್ಚಿಸಲಾಗುತ್ತದೆ.ಅದಲ್ಲದೇ ರಾಷ್ಟ್ರಗಳ ನಡುವೆ ನಡೆಯುವ ಯುದ್ಧಗಳ ಭೀಕರತೆಯ ಬಗ್ಗೆಯೂ ವಿವೇಚನೆ ನಡೆಯುತ್ತದೆ.

ಒಂದು ಸಂಘಟನೆಯೆಂದರೆ ನಾಯಕತ್ವ ಇರಕೇಬೇಕಲ್ಲವೆ?
ಆದರೆ ಈ ಸಂಘಟನೆ ನಾಯಕರಾರೂ ಇಲ್ಲ. ಒಂದರ್ಥದಲ್ಲಿ ಸಾಮೂಹಿಕ ನಾಯಕತ್ವ.
ಪ್ರತೀ ಒಂದು ವರ್ಷಕ್ಕೆ ಒಂದೊಂದು ದೇಶ ನಾಯಕತ್ವ ವಹಿಸಿಕೊಳ್ಳುತ್ತದೆ.

ಹಾಗಾದರೆ ಈ ಸಂಘಟನೆಯಲ್ಲಿ ಎಷ್ಟು ದೇಶಗಳಿವೆ?. ಒಟ್ಟು ಹತ್ತೊಂಬತ್ತು ಮತ್ತು ಐರೋಪ್ಯ ರಾಷ್ಡ್ರಗಳ ಒಕ್ಕೂಟವೇ ಇದೆ.
ಜಿ20 ಅಂತ ಕರೆದರೂ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟದ 27 ದೇಶಗಳಿವೆ. ಹಾಗಾಗಿ 19 ದೇಶಗಳು ಮತ್ತು ಒಂದು ಒಕ್ಕೂಟ ಸೇರಿ 20 ಆಗಿವೆ.

ಈ ವರ್ಷ ಭಾರತಕ್ಕೆ ಅಧ್ಯಕ್ಷತೆಯ ಗೌರವ ಲಭಿಸಿದೆ.15 ಸಭೆಗಳನ್ನ ನಡೆಸಬೇಕಿದೆ. 25 ನಗರಗಳ ಆಯ್ಕೆಯೂ ನಡೆದಿದೆ.ಕೊನೆಯದೇ ಶೃಂಗ ಸಭೆಯಾಗಿ ಮಾರ್ಪಟ್ಟು ಅಧ್ಯಕ್ಷತೆ ಅವಧಿ ಮುಗಿಯುತ್ತದೆ.

“ಒಂದು ಭೂಮಿ,ಒಂದು ಕುಟುಂಬ,ಒಂದು ಭವಿಷ್ಯ” ಇದು ಈ ವರ್ಷದ ಧ್ಯೇಯ ವಾಕ್ಯ.

ಅದಕ್ಕೆ ಅರ್ಥಗರ್ಭಿತವಾಗಿ ನಮ್ಮ ಪ್ರಧಾನಿ ಮೋದಿಯವರು ಹೇಳಿಕೆ ಬಂದಿದೆ.
ಜೀವಿಗಳು ಹಾಗೂ ವಸ್ತುಗಳು ಪಂಚತತ್ವ ಆಧರಿಸಿವೆ.ಇದು ನಮ್ಮ ಪರಿಸರ ,ದೈಹಿಕ,ಸಾಮಾಜಿಕ ಯೋಗಕ್ಷೇಮಕ್ಕೆ ಅಗತ್ಯ.ಭಾರತದ ನೇತೃತ್ವದಲ್ಲಿ ನಡೆಯಲಿರುವ ಶೃಂಗಸಭೆಯು ಏಕತ್ವ ಪ್ರಜ್ಞೆಯನ್ನು ಉತ್ತೇಜಿಸಲು ಯತ್ನಿಸುತ್ತದೆ.

ಪ್ರಧಾನಿ ಅವರ ಮನವಿ ಹೀಗಿದೆ.
“ಸಾಮರಸ್ಯ,ಭರವಸೆ ಹಾಗೂ ಸ್ವಾಸ್ಥ್ಯ ಸಾಧಿಸುವ ನಿಟ್ಟಿನಲ್ಲಿ ಭಾರತದ ನೇತೃತ್ವದ ನಾಯಕತ್ವದ ಜೊತೆ ಎಲ್ಲರೂ ಕೈ ಜೋಡಿಸಿ”.

ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೊ ನಡುವೆ ವಿಮಾನ ಸಂಚಾರ ಡಿ 2 ರಿಂದ ಆರಂಭ

0

ರೈತರು ಬೆಳೆ ನಷ್ಟಕ್ಕೆ ಒಳಗಾದ ವೇಳೆಯಲ್ಲಿ ಅವರಿಗೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ರೈತರು ಹಿಂಗಾರು ಹಂಗಾಮಿನ ಬೆಳೆಗಳಿಗೆ ತಪ್ಪದೇ ವಿಮೆ ಮಾಡಿಸಿಕೊಳ್ಳಲು ಸೂಚಿಸಲಾಗಿದ್ದು, ಕಡಿಮೆ ಪ್ರೀಮಿಯಂ ಮೊತ್ತ ಪಾವತಿಸಿ ಸಂಪೂರ್ಣ ಸುರಕ್ಷೆ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

ನೋಂದಣಿಗಾಗಿ 31 ಡಿಸೆಂಬರ್ 2022 ಕೊನೆಯ ದಿನಾಂಕವಾಗಿದೆ. ಅಲ್ಲದೆ, ಡಿಸೆಂಬರ್ 1ರಿಂದ ಡಿಸೆಂಬರ್ 7ರ ವರೆಗೆ ಬೆಳೆ ವಿಮೆ ಸಪ್ತಾಹವನ್ನು ಆಚರಿಸಲಾಗುತ್ತಿದೆ.

ಫಸಲ್ ವಿಮಾ ಯೋಜನೆ- ನೋಂದಣಿಗೆ ಡಿ 31 ಕೊನೇ ದಿನಾಂಕ

0

ರೈತರು ಬೆಳೆ ನಷ್ಟಕ್ಕೆ ಒಳಗಾದ ವೇಳೆಯಲ್ಲಿ ಅವರಿಗೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ರೈತರು ಹಿಂಗಾರು ಹಂಗಾಮಿನ ಬೆಳೆಗಳಿಗೆ ತಪ್ಪದೇ ವಿಮೆ ಮಾಡಿಸಿಕೊಳ್ಳಲು ಸೂಚಿಸಲಾಗಿದ್ದು, ಕಡಿಮೆ ಪ್ರೀಮಿಯಂ ಮೊತ್ತ ಪಾವತಿಸಿ ಸಂಪೂರ್ಣ ಸುರಕ್ಷೆ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

ನೋಂದಣಿಗಾಗಿ 31 ಡಿಸೆಂಬರ್ 2022 ಕೊನೆಯ ದಿನಾಂಕವಾಗಿದೆ. ಅಲ್ಲದೆ, ಡಿಸೆಂಬರ್ 1ರಿಂದ ಡಿಸೆಂಬರ್ 7ರ ವರೆಗೆ ಬೆಳೆ ವಿಮೆ ಸಪ್ತಾಹವನ್ನು ಆಚರಿಸಲಾಗುತ್ತಿದೆ

ಸಂವಿಧಾನಾತ್ಮಕ ಇರುವ ಮತದಾನದ ಹಕ್ಕನ್ನು ಅರಿಯಿರಿ- ವಿಶ್ವೇಶ್ವರ ಹೆಗಡೆ ಕಾಗೇರಿ

0

ಸಂವಿಧಾನಬದ್ಧವಾಗಿ ಸಿಕ್ಕಿರುವ ಮತದ ಹಕ್ಕನ್ನು ಕಳೆದುಕೊಳ್ಳಬೇಡಿ.

ಅಭ್ಯರ್ಥಿಗಳಲ್ಲಿ ಉತ್ತಮರು ಕಾಣದಿದ್ದರೆ ಈ ಮೇಲಿನ ಯಾರೂ ಅಲ್ಲ ಬಟನ್ ಒತ್ತಿ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು. ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನನ್ನ ಮತ ಯಾವುದೇ ಕಾರಣಕ್ಕೂ ಮಾರಾಟಕ್ಕಿಲ್ಲ ಎಂಬ ಆತ್ಮಸಾಕ್ಷಿಯ ಅಭಿಯಾನ ಕೈಗೊಳ್ಳಿ ಎಂದು ಕರೆ ಕೊಟ್ಟರು.

ಬುಧವಾರ ನಗರದ ಡಾ.ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಕಾಗೇರಿ ಮಾತನಾಡಿದರು.

ಚುನಾವಣೆಯಲ್ಲಿಂದು ಹಣ, ತೋಳ್ಬಲ ಹಾಗೂ ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನಬದ್ಧವಾಗಿ ಸಿಕ್ಕಿರುವ ಮತದ ಹಕ್ಕನ್ನು ಮತದಾರರು ಅರಿಯಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿತವಾಗುತ್ತಿದ್ದು ಭ್ರಷ್ಟಾಚಾರ ವ್ಯಾಪಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆ್ಯಂಟಿ ರೇಪ್ ಫೂಟ್ ವೇರ್ ಸಿದ್ಧಗೊಳಿಸಿದ ವಿದ್ಯಾರ್ಥಿನಿ

ಇತ್ತೀಚಿಗೆ ದಿನದಿಂದ ದಿನಕ್ಕೆ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಮಾಡಿದರು, ಕೂಡ ಲೈಂಗಿಕ ದೌರ್ಜನ್ಯಗಳು ಇನ್ನೂ ನಡೆಯುತ್ತಲೇ, ಇವೆ… ಈ ಹಿನ್ನೆಲೆಯಲ್ಲಿ ಕಲಬುರಗಿಯ ಬಾಲಕಿಯೊಬ್ಬಳು ಕಾಮುಕರಿಗೆ ಶಾಕ್ ಕೊಡುವ ಒಂದು ಸಾಧನವನ್ನು ಕಂಡು ಹಿಡಿದಿದ್ದಾಳೆ.

ಅದೇನು ಅಂತ ಯೋಚಿಸುತ್ತಿದ್ದೀರಾ…!?

ಕಲಬುರಗಿ ನಗರದ ಎಸ್.ಆರ್.ಎನ್ ಮೆಹತಾ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಓದುತ್ತಿರುವ ವಿಜಯಲಕ್ಷ್ಮಿ ಬಿರಾದಾರ್ ಎನ್ನುವ ವಿದ್ಯಾರ್ಥಿನಿ, ಆಯಂಟಿ ರೇಪ್ ಫುಟ್‌ವೇರ್ ಸಿದ್ದಗೊಳಿಸಿದ್ದಾಳೆ.

ಪಾದರಕ್ಷೆಯ ಕೆಳಗೆ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಲಾಗಿದೆ.

ಯಾರಾದರೂ ಕಾಮುಕರು ಅಥವಾ ಅಪರಿಚಿತರು ಬಂದು ಮಹಿಳೆಯರನ್ನು ಮುಟ್ಟಿದರೆ ಆ ಪಾದರಕ್ಷೆಗಳಿಂದ ಎದುರಿಗಿರುವ ವ್ಯಕ್ತಿಗೆ ಕಿಕ್ ಮಾಡಿದರೆ 0.5 ರಷ್ಟು ಆಂಪಿಯರ್ ನಷ್ಟು ವಿದ್ಯುತ್ ಉತ್ಪಾದನೆಯಾಗಿ ಕಾಮುಕರಿಗೆ ಶಾಕ್ ಹೊಡೆಯುವಂತೆ ಮಾಡುತ್ತದೆ.

ಇಷ್ಟೇ ಅಲ್ಲದೆ, ಈ ಮಷಿನ್, ನಡೆಯುವಾಗಲೇ ಬ್ಯಾಟರಿ ಚಾರ್ಜ್ ಆಗುವಂತೆ ರೂಪಿಸಲಾಗಿದೆ. ಈ ಪಾದರಕ್ಷೆಯಲ್ಲಿ ಬ್ಲಿಂಕ್ ಆಪ್ ತಂತ್ರಜ್ಞಾನ ಅಳವಡಿಸಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆ ಹೆಬ್ಬೆರೆಳು ಬಳಿ ಬಟನ್ ಒತ್ತಿದರೆ ಸಾಕು, ಪೊಲೀಸರಿಗೆ ಮತ್ತು ಕುಟುಂಬದವರಿಗೆ ಎಚ್ಚರಿಕೆಯ ಸಂದೇಶ ಹೋಗುವಂತಹ ವ್ಯವಸ್ಥೆಯನ್ನು ಕೂಡಾ ಈ ಸಾಧನದಲ್ಲಿ ರೂಪಿಸಲಾಗಿದೆ. ಅಪ್ಲಿಕೇಶನ್​ನಲ್ಲಿ ಯಾರ ನಂಬರ್​ನ್ನು ದಾಖಲಿಸಿರುತ್ತೇವೆಯೋ ಆ ನಂಬರ್​ಗೆ ಸಹಾಯದ ಸಂದೇಶ ಹೋಗುತ್ತದೆ. ಇದರಿಂದ ಸಂಕಷ್ಟಕ್ಕೊಳಗಾದವರು ಎಲ್ಲಿ ಇದ್ದಾರೆ ಎಂಬುವುದನ್ನು ಕೂಡಾ ಟ್ರ್ಯಾಕ್ ಮಾಡಲು ಪೊಲೀಸರಿಗೆ ನೆರವಾಗುವಂತೆ ತಂತ್ರಜ್ಞಾನವನ್ನು ರೂಪಿಸಲಾಗಿದೆ.

ರಾಜ್ಯ ಸಾರಿಗೆ ನೂತ‌ನ ವಾಹನಗಳಿಗೆ ಹೆಸರು- ಬ್ರಾಂಡ್ ಸೂಚಿಸಿ ಬಹುಮಾನ ಗೆಲ್ಲಿರಿ

0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸದ್ಯದಲ್ಲೇ ಮಲ್ಟಿ ಎಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಆರಂಭಿಸುತ್ತಿದ್ದು, ಇದರ ಮಧ್ಯೆ ನೂತನ ವಾಹನಗಳಿಗೆ ಹೆಸರು – ಬ್ರಾಂಡ್ ಸೂಚಿಸಲು ಕೋರಲಾಗಿದೆ.

ಸಾರ್ವಜನಿಕರು ಹಾಗೂ ಪ್ರಯಾಣಿಕರು, ಬ್ರಾಂಡ್ ಹೆಸರು ಟ್ಯಾಗ್ಲೈನ್ ಹಾಗೂ ಗ್ರಾಫಿಕ್ಸ್ ಕಳುಹಿಸಿಕೊಡಬಹುದಾಗಿದ್ದು, ಪ್ರತಿ ಮಾದರಿಯ ಉತ್ತಮ ಬ್ರಾಂಡ್ ಹೆಸರು ಸೂಚಿಸಿದವರಿಗೆ 10,000 ನಗದು ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ 25,000 ನಗದು ಬಹುಮಾನ ನೀಡಲಾಗುತ್ತದೆ.

ಹೆಸರನ್ನು ಸೂಚಿಸಲು ಡಿಸೆಂಬರ್ 5 ಕೊನೆಯ ದಿನಾಂಕವಾಗಿದೆ. ಸಾರ್ವಜನಿಕರು ಹಾಗೂ ಪ್ರಯಾಣಿಕರು ತಮ್ಮ ಬ್ರಾಂಡ್ ಐಡಿಯಾಗಳನ್ನು ಇ ಮೇಲ್ ಅಥವಾ ಕೆಎಸ್ಆರ್ ಟಿಸಿ ಅಧಿಕೃತ ಫೇಸ್ ಬುಕ್ ಅಥವಾ ಟ್ವಿಟರ್ ಖಾತೆಗೆ ಸಲ್ಲಿಸಬಹುದಾಗಿದೆ.

ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತ ಹಿತಕರ ಅಮೇರಿಕ ಸಂಸ್ಥೆಯ ಮೆಚ್ಚುಗೆ

0

ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇತರರ ಜತೆಗೆ ಸೇರಿಕೊಂಡು ಬದುಕು ನಡೆಸುವ ವಾತಾವರಣ ಇದೆ. ಈ ಮಾದರಿಯನ್ನು ವಿಶ್ವಸಂಸ್ಥೆ ಅಳವಡಿಸಿಕೊಳ್ಳಬಹುದು ಎಂದು ಅಮೆರಿಕದ ವಾಷಿಂಗ್ಟನ್‌ನಲ್ಲಿ ಇರುವ ದ ಸೆಂಟರ್‌ ಫಾರ್‌ ಪಾಲಿಸಿ ಅನಾಲಿಸಿಸ್‌ ಎಂಬ ಸಂಸ್ಥೆ ತನ್ನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಜಗತ್ತಿನ ಇತರ ದೇಶಗಳಲ್ಲಿ ಇರುವಂತೆ ಯಾವುದೇ ಧಾರ್ಮಿಕ ವಿಭಾಗಗಳಿಗೆ ಭಾರತದಲ್ಲಿ ನಿಷೇಧ ಹೇರಲಾಗಿಲ್ಲ ಎಂದೂ ಅದರಲ್ಲಿ ಶ್ಲಾಘಿಸಲಾಗಿದೆ.

ಧಾರ್ಮಿಕ ಅಲ್ಪಸಂಖ್ಯಾತರಿಗೆ ಸುಲಭವಾಗಿ ಹಾಗೂ ತೊಂದರೆ ಇಲ್ಲದೆ ಜೀವನ ನಡೆಸಲು ಅನುಕೂಲವಾಗಿರುವಂತೆ ಇರುವ ರಾಷ್ಟ್ರಗಳ ಪಟ್ಟಿಯನ್ನು ಈ ಸಂಸ್ಥೆ ಸಿದ್ಧಪಡಿಸಿದೆ.

ಅದರಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ. ಭಾರತದ ಸಂವಿಧಾನದಲ್ಲಿ ಧಾರ್ಮಿಕವಾಗಿ ಅಲ್ಪಸಂಖ್ಯಾತರಾದವರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಜಗತ್ತಿನ ಇತರ ರಾಷ್ಟ್ರಗಳ ಸಂವಿಧಾನದಲ್ಲಿ ಇಂಥ ಅವಕಾಶ ಕಲ್ಪಿಸಲಾಗಿಲ್ಲ. ಭಾಷಾ ಅಲ್ಪಸಂಖ್ಯಾತರಿಗೂ ಇದೇ ರೀತಿಯ ವಿಶೇಷ ಸವಲತ್ತು ಇದೆ ಎಂದು ವರದಿಯಲ್ಲಿ ಸಂತಸ ವ್ಯಕ್ತಪಡಿಸಲಾಗಿದೆ.

ಕೆಲವೊಂದು ದೇಶಗಳಲ್ಲಿ ಕೆಲವು ಧರ್ಮಗಳಿಗೆ ಮತ್ತು ಅವುಗಳ ಆಚರಣೆಗೆ ನಿಷೇಧ ಇರುವಂತೆ ಭಾರತದಲ್ಲಿ ಅಂಥ ವ್ಯವಸ್ಥೆ ಇಲ್ಲ. ಹೀಗಾಗಿ, ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಅನುಸರಿಸುವ ನಿಯಮಗಳನ್ನು ವಿಶ್ವಸಂಸ್ಥೆ ಅಳವಡಿಸಿಕೊಳ್ಳಬಹುದು ಎಂದು ತನ್ನ ವರದಿಯಲ್ಲಿ ಪ್ರಶಂಸೆ ಮಾಡಿ, ಶಿಫಾರಸು ಮಾಡಿದೆ.

ಹೊಸಗದ್ದೆಯಲ್ಲಿ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್

0

ಪರಿಸರ ಅಧ್ಯಯನ ಕೇಂದ್ರ, ಕ್ಯಾಟ್ಸ್ ಚಿತ್ರದುರ್ಗ, ಮೈಸೂರು ಹಾಗೂ ರೇಡಿಯೋ ಶಿವಮೊಗ್ಗದ ಸಹಯೋಗದೊಂದಿಗೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಾನುಲಿಯಲ್ಲಿ ನಡೆದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ ನ ಮೊದಲ ಬ್ಯಾಚ್ ನ ಸಂಪರ್ಕ ತರಗತಿಗಳು ಹಾಗೂ ಪರೀಕ್ಷೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಗದ್ದೆಯ ಪರಿಸರ ಅಧ್ಯಯನ ಕೇಂದ್ರದಲ್ಲಿ ನಡೆದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ ನ ಮೊದಲ ಬ್ಯಾಚ್ ನ ವಸತಿ ಸಹಿತ ಸಂಪರ್ಕ ತರಗತಿ, ಪರೀಕ್ಷೆಯಲ್ಲಿ ಕಲಿಕಾರ್ಥಿಗಳು ಭಾಗವಹಿಸಿದ್ದರು.

20 ಅವಧಿಯ ಬಾನುಲಿ ತರಗತಿಗಳ ಮುಖಾಂತರ ನಡೆದಿದ್ದ ಆ್ಯಕ್ಟಿಂಗ್ ಔಟ್ ಸರ್ಟಿಫಿಕೇಷನ್ ಕೋರ್ಸ್ನ ಬೌದ್ಧಿಕ ಹಾಗೂ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗಿತ್ತು. ಇದರ ಭಾಗವಾಗಿ ಈ ಸಂಪರ್ಕ ತರಗತಿಗಳು ನಡೆದವು.

ಸುಂದರ ಪರಿಸರದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಈ ಸಂಪರ್ಕ ತರಗತಿಗಳು ಜರುಗಿದವು. ಮೂರು ದಿನಗಳ ಕಾಲ ನಡೆದ ಈ ಸಂಪರ್ಕ ತರಗತಿಗಳಲ್ಲಿ ಕಲಿಕಾರ್ಥಿಗಳಲ್ಲಿದ್ದ ಗೊಂದಲಗಳನ್ನು ಬಗೆಹರಿಸಲಾಯಿತು.

ಪ್ರಾಯೋಗಿಕ ತರಗತಿಗಳ ಮುಖಾಂತರ ಕಲಿಕಾರ್ಥಿಗಳನ್ನು ಮಾನಸಿಕವಾಗಿ, ದೈಹಿಕವಾಗಿ ಸಿದ್ಧಗೊಳಿಸಲಾಯಿತು. ಪ್ರತಿದಿನ ಬೆಳಗ್ಗೆ 9:30ಕ್ಕೆ ತರಗತಿಗಳು ಆರಂಭವಾಗಿ ಅಗತ್ಯ ವಿರಾಮಗಳೊಂದಿಗೆ ರಾತ್ರಿ 9 ಗಂಟೆಯವರೆಗೂ ನಡೆದವು. ಇದರ ಜೊತೆಗೆ ಇದು ವಸತಿಸಹಿತ ಸಂಪರ್ಕ ತರಗತಿಯಾಗಿದ್ದರಿಂದ, ತಡರಾತ್ರಿಯವರೆಗೂ ಕಲಿಕಾರ್ಥಿಗಳ ನಡುವೆ, ಕಲಿಕಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ನಡುವೆ ಅನೌಪಚಾರಿಕ ಚರ್ಚೆ, ಸಂವಾದಗಳು ನಡೆಯುತ್ತಿದ್ದವು.

ಹೀಗಾಗಿ ಸಂಪರ್ಕ ತರಗತಿಗಳು ಮತ್ತಷ್ಟು ಕಳೆಗಟ್ಟಿದವು. ಪರೀಕ್ಷೆಗಳು ಕೂಡಾ ಬೌದ್ಧಿಕ ಹಾಗೂ ಪ್ರಾಯೋಗಿಕ ಈ ಎರಡೂ ವಿಭಾಗದಲ್ಲಿ ನಡೆದವು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾದ ಮೈಸೂರಿನ ಖ್ಯಾತ ರಂಗಕರ್ಮಿ ನಾ. ಶ್ರೀನಿವಾಸ್ ತರಗತಿಗಳನ್ನು ನಡೆಸಿಕೊಟ್ಟರು. ಸಹ ಸಂಪನ್ಮೂಲ ವ್ಯಕ್ತಿ, ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕರೂ ಆದ ಜಿ.ಎಲ್. ಜನಾರ್ದನ್ ಸಹಕರಿಸಿದರು. ಪರಿಸರ ಅಧ್ಯಯನ ಕೇಂದ್ರದ ಪ್ರಮುಖರೂ, ವಿಶ್ರಾಂತ ತಹಸೀಲ್ದಾರ್ ಚಂದ್ರಶೇಖರ್, ಯಶೋದಾ ಚಂದ್ರಶೇಖರ್ ಹಾಗೂ ಬಾನುಲಿಯ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ಭಾಗವಹಿಸಿದ್ದರು.

ಕಲೆ ಸಂಸ್ಕೃತಿ ಜ್ಞಾನ ವಿಸ್ತಾರಕ್ಕೆ ಸಹಕಾರಿ- ಉಮೇಶ್ ಹಾಲಾಡಿ

0

ಕಲೆ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯು ಎಲ್ಲರ ಜ್ಞಾನ ವಿಸ್ತಾರಕ್ಕೂ ಸಹಕಾರಿ ಆಗುತ್ತದೆ. ನೃತ್ಯದ ಮೂಲಕ ಐತಿಹಾಸಿಕ ಪರಂಪರೆಯ ಸಂಗತಿಗಳನ್ನು ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮೇಶ್ ಹಾಲಾಡಿ ಹೇಳಿದರು.

ಇಂಟರ್ ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಷನ್ ಸಂಸ್ಥೆಯ ದಶಮಾನೋತ್ಸವ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ “ಅಮೃತ್ ಕಲಾ ಮಹೋತ್ಸವ” ಶೀರ್ಷಿಕೆಯಡಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಗಿ ಭಾಗವಹಿಸಿ ಮಾತನಾಡಿದರು.

ನೃತ್ಯ ಪ್ರಕಾರದ ಮೂಲಕ ಮನರಂಜನೆ ಜತೆಯಲ್ಲಿ ಸಂದೇಶಗಳನ್ನು ಜನರ ಮನಸ್ಸಿಗೆ ತಲುಪಿಸಲು ಸಾಧ್ಯವಿದೆ. ಶೈಕ್ಷಣಿಕ ಸಂಗತಿಗಳನ್ನು ಮನಮುಟ್ಟುವ ರೀತಿಯಲ್ಲಿ ಅರಿವು ಮೂಡಿಸಬಹುದಾಗಿದೆ.

ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಗಳು ಅತ್ಯಂತ ಅಗತ್ಯ. ಇಂತಹ ವೇದಿಕೆಗಳನ್ನು ಪ್ರತಿಭಾವಂತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇಂಟರ್ ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ಶ್ರೀವತ್ಸ ಶಾಂಡಿಲ್ಯ ಮಾತನಾಡಿ, ಕರ್ನಾಟಕ ರಾಜ್ಯದ ವೀರಮಹಿಳೆಯರ ಸಾಹಸ ಕಥನವನ್ನು ಮನಮುಟ್ಟುವ ರೀತಿಯಲ್ಲಿ ದೇಶಾದ್ಯಂತ ಪ್ರಸ್ತುತ ಪಡಿಸಲಾಗುತ್ತಿದೆ. ಕಲೆಯು ಮಾಹಿತಿ ಕಥನಗಳ ಜ್ಞಾನ ಸಂವಹನ ಮಾರ್ಗ ಆಗಿದೆ ಎಂದು ಹೇಳಿದರು.

ನಮ್ಮ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೃತ್ಯ ಕಾರ್ಯಕ್ರಮ ಆಯೋಜಿಸಿ ಸ್ಥಳೀಯವಾಗಿರುವ ವಿವಿಧ ನೃತ್ಯತಂಡಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸ ಮಾಡುತ್ತಿದೆ. ವೈವಿಧ್ಯ ಕಲಾತಂಡಗಳ ಪ್ರತಿಭಾವಂತರ ನೃತ್ಯ ಪ್ರದರ್ಶನ ವಿಶೇಷತೆಯಿಂದ ಕೂಡಿರುವಂತೆ ಆಯೋಜಿಸಲಾಗುತ್ತದೆ. ಇಲ್ಲಿಯೂ ಅತ್ಯಂತ ಯಶಸ್ವಿಯಾಗಿ ನೃತ್ಯ ಕಾರ್ಯಕ್ರಮ ಮೂಡಿಬಂದಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಆಚರಣೆ ಅಮೃತ ಮಹೋತ್ಸವ ಪ್ರಯುಕ್ತ “ಆಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮ ದೇಶದಾದ್ಯಂತ ವಿಶೇಷವಾಗಿ ಆಚರಿಸಲಾಗುತ್ತಿದೆ. ಭಾರತ ಸರ್ಕಾರ ಸಾಂಸ್ಕೃತಿಕ ಸಚಿವಾಲಯ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಕಂಡ ವೀರ ಮಹಿಳೆಯರು ರಾಣಿ ಅಬ್ಬಕ್ಕ, ರಾಣಿ ಕೆಳದಿ ಚೆನ್ನಮ್ಮ, ರಾಣಿ ಚೆನ್ನ ಬೈರಾದೇವಿ, ರಾಣಿ ಬೆಳವಡಿ ಮಲ್ಲಮ್ಮ ಅವರ ಸಾಹಸ ಕಥೆಗಳಿಗೆ ಭರತನಾಟ್ಯ ಶೈಲಿಯಲ್ಲಿ ಶಾಸ್ತ್ರೀಯ ನೃತ್ಯವನ್ನು ಪೆರುಮಾಳ್ ನೃತ್ಯ ಕಲಾ ಕೇಂದ್ರದ ಗುರು ಸುಪ್ರಿಯಾ ಪೊದುವಾಳ್ ತಂಡ, ಸಹಚೇತನ ನಾಟ್ಯಾಲಯದ ಗುರು ಸಹನಾ ಚೇತನ್ ತಂಡ, ಶ್ರೀ ವಿಜಯ ಕಲಾನಿಕೇತನದ ಗುರು ಡಾ.ಕೆ.ಎಸ್.ಪವಿತ್ರ ಮತ್ತು ಡಾ.ಕೆ.ಎಸ್.ಶುಭ್ರತ ತಂಡ, ಪುಷ್ಪಾ ಪರ್ಫಾಮಿಂಗ್ ಆರ್ಟ್ ಸೆಂಟರ್ ನ ಗುರು ಪುಷ್ಪ ಕೃಷ್ಣಮೂರ್ತಿ ತಂಡ, ಸಾಗರ ಹೆಗ್ಗೋಡು ಮಹಿಳಾ ಡೊಳ್ಳು ಕಲಾತಂಡ, ಗ್ರಾಮೀಣ ಸೊಗಡಿನ ಕಲಾ ಪರಂಪರೆ ಪ್ರತಿಕ ಶ್ರೀ ಸಿಂಗದೂರು ಚೌಡೇಶ್ವರಿ ಮಹಿಳಾ ಡೊಳ್ಳು ಕಲಾತಂಡ ನೃತ್ಯ ಪ್ರದರ್ಶಿಸಿದವು.

ಎಲ್ಲ ತಂಡಗಳ ಗುರುಗಳು ಹಾಗೂ ಕಲಾವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜೆಸಿಐ ವಲಯ ನೂತನ ಅಧ್ಯಕ್ಷರಾಗಿ ಅನುಷ್ ಗೌಡ,ಉಪಾಧ್ಯಕ್ಷರಾಗಿ ಸತೀಶ್ ಚಂದ್ರ ಆಯ್ಕೆ

0

ಜೆಸಿಐ ವಲಯದ 2023ನೇ ಸಾಲಿನ ನೂತನ ವಲಯ ಅಧ್ಯಕ್ಷರಾಗಿ ಅನುಷ್ ಗೌಡ ಹಾಗೂ ವಲಯ ಉಪಾಧ್ಯಕ್ಷರಾಗಿ ಸತೀಶ್ ಚಂದ್ರ ಆಯ್ಕೆಯಾಗಿದ್ದಾರೆ.

ಜೆಸಿಐ ಅಂತರಾಷ್ಟ್ರೀಯ ಸಂಸ್ಥೆಯ ವಲಯ 24ರ ವಲಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಹಾಗೂ ವಲಯ ಉಪಾಧ್ಯಕ್ಷರ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳಿಂದ ಜಯಗಳಿಸಿ 2023 ನೇ ಸಾಲಿನ ವಲಯ ಅಧ್ಯಕ್ಷ
ಹಾಗೂ ವಲಯ ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಜೆಸಿಐ ವಲಯದ 2023ನೇ ಸಾಲಿನ ನೂತನ ವಲಯ ಅಧ್ಯಕ್ಷ ಅನುಷ್ ಗೌಡ ಹಾಗೂ ವಲಯ ಉಪಾಧ್ಯಕ್ಷ ಸತೀಶ್ ಚಂದ್ರ ಅವರಿಗೆ ಮಂಜುನಾಥ್ ಕದಂ, ಕಿಶೋರ್ ಕುಮಾರ್, ವಸಂತ ಹೋಬಳಿದಾರ್, ಜಿ.ವಿಜಯಕುಮಾರ್, ರವೀಂದ್ರನಾಥ ಐತಾಳ್, ಡಾ. ಗುಡದಪ್ಪ ಕಸಬಿ, ಸುರೇಂದ್ರ ಕೋಟ್ಯಾನ್, ಶೇಷಗಿರಿ ಡಿ ಕೆ, ಶುಭಂ ಹೋಟೆಲ್ ಮಾಲೀಕರಾದ ಚಂದ್ರಹಾಸ್ ಶೆಟ್ಟಿ, ಉದಯ ಕದಂಬ, ಹರೀಶ್, ಈಶ್ವರ್, ಸಂತೋಷ್ ಕುಮಾರ್ ಹಾಗೂ ಜೆಸಿಐ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ, ಕಾರ್ಯದರ್ಶಿ ಡಾ. ಲಲಿತಾ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಜಿ ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿ ಕುಮಾರಸ್ವಾಮಿ, ಎಲ್ಲಾ ಸದಸ್ಯರು ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಸಂಸ್ಥೆಯ ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಜೆಸಿಐ ಸಂಸ್ಥೆಯು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ.

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಸೇವೆ ಸಲ್ಲಿಸುತ್ತಿದೆ. ಮುಂದಿನ ವರ್ಷದಲ್ಲಿಯೂ ವಲಯ ಮಟ್ಟದಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ನಡೆಸಲಿ ಎಂದು ಶುಭಕೋರಿದ್ದಾರೆ.