Tuesday, March 31, 2026
Tuesday, March 31, 2026
Home Blog Page 1352

ಶಿವಮೊಗ್ಗದಲ್ಲಿ ಶಕ್ತಿದೇವತೆಗಳ ಪಾರಂಪರಿಕ ಸಮಾಗಮ

0

ವಿಶ್ವ ಹಿಂದೂ ಪರಿಷತ್ ವತಿಯಿಂದ ಕಳೆದ 25 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಹೆಮ್ಮೆಯ ಕಾರ್ಯಕ್ರಮ “ಶಕ್ತಿ ದೇವತೆಗಳ ಸಮಾಗಮ”.

ಶಿವಮೊಗ್ಗದ ಖ್ಯಾತ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ವಿವಿಧ ಭಾಗದಲ್ಲಿರುವ ಸುಮಾರು 45ಕ್ಕೂ ಹೆಚ್ಚು ಶಕ್ತಿ ದೇವತೆಗಳನ್ನು (ಉತ್ಸವ ದೇವತೆ ಗಳನ್ನು)ಸಂಪೂರ್ಣ ಅಲಂಕಾರದೊಂದಿಗೆ ಪ್ರತಿಷ್ಠಾಪಿಸಲಾಗುತ್ತದೆ. ಸಂಜೆವರೆಗೂ ಆ ದೇವತೆಗಳು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ಭಕ್ತಾದಿಗಳು ಒಂದೇ ಸ್ಥಳಗಳಲ್ಲಿ ವಿವಿಧ ಶಕ್ತಿ ದೇವತೆಗಳ ದರ್ಶನ ಲಾಭ ಪಡೆಯಲು ಅನುಕೂಲವಾಗಿದೆ. ಹಿಂದೂ ಸಮಾಜದ ಎಲ್ಲ ರೀತಿಯ ಶಕ್ತಿ ದೇವತೆಗಳನ್ನು ಒಂದೇ ಕಡೆಗೆ ಸೇರಿಸುವ ಈ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು. ಮತ್ತೆ ಹಿಂದೂ ಧರ್ಮದ ಹೆಮ್ಮೆಯ ಸಂಕೇತ ಎಂದು ಹೇಳಲು ಸಂತೋಷವಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯ ಗಳ ಸಂವರ್ಧನ ಸಮಿತಿಯ ಪ್ರಮುಖರಾದ ಶ್ರೀ ಮುನಿಯಪ್ಪನವರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ವಾಸುದೇವ್, ಮಾಜಿ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು
,ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ. ಶ್ರೀಧರ್ ವಿಶ್ವ ಹಿಂದು ಪರಿಷತ್ ಪ್ರಧಾನ ಕಾರ್ಯದರ್ಶಿ ನಾರಾಯಣ್, ದೀನ್ ದಯಾಳ್ ,ಶ್ರೀ ಪ್ರಸಾದ್ ಹಾಗೂ ಇನ್ನಿತರ ಹಿಂದೂ ಪರಿಷತ್ ನ ಪ್ರಮುಖರು ಹಾಗೂ ಕೋಟೆ ಆಂಜನೇಯ ದೇವಸ್ಥಾನದ ಭಕ್ತಾದಿಗಳು, ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.

ಮನೆಯಿಂದಲೇ ಸಾಹಿತ್ಯ ಪ್ರೀತಿ ಮೂಡಿತು- ಕು.ಅಚಿಂತಾ

0

ನಾವು ಮಕ್ಕಳು, ನಮ್ಮ ತಂದೆ ತಾಯಿ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಿದ್ದಾರೆ. ನಾವು ಇಷ್ಟಪಟ್ಟು ಓದಬೇಕು. ನಮ್ಮ ತಂದೆ, ತಾಯಿ ತಲೆತಗ್ಗಿಸದಂತೆ ಜವಾಬ್ದಾರಿ ನಿರ್ವಹಿಸಬೇಕು. ನಂಬಿಕೆಗೆ ಮೋಸಮಾಡಬೇಡಿ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಮಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು .
ಅನನ್ಯ ಅವರು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ನೇತೃತ್ವದಲ್ಲಿಅಶೋಕನಗರ ಬಡಾವಣೆಯ ಅನನ್ಯ ಶಿಕ್ಷಣ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ಬೆಳಗಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಕೆ. ಬಿ. ಪ್ರಸನ್ನಕುಮಾರ್ ಮಾತನಾಡಿ, ಶಾಲೆಯ ಓದಿನ ಜೊತೆಗೆ ಸಾಹಿತ್ಯ ಕೃಷಿ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಮಕ್ಕಳು ನೀವು ನಿಮ್ಮ ಮನೆಗೆ ಮಾತ್ರ ಆಸ್ತಿಯಲ್ಲ. ನೀವು ದೇಶಕ್ಕೆ ಆಸ್ತಿಯಾಗಬೇಕು. ಸಾಹಿತ್ಯ ಎಲ್ಲರ ಹಿತಕಾಯುವ ಕಾರ್ಯಮಾಡುತ್ತೆ. ಮನಸ್ಸಿಗೆ ಮುದನೀಡುವ, ಉತ್ತಮ ಸಂದೇಶ ನೀಡುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ. ನಾಗರಾಜ್ ಮಾತನಾಡಿ, ಪ್ರತಿ ಶಾಲೆಗೆ ಹೋಗಿ ಕಮ್ಮಟ ಮಾಡಿ ಆಸಕ್ತಿಯಿರುವವರನ್ನು ಆಯ್ಕೆಮಾಡಿ ಈ ಸಮ್ಮೇಳನ ಅರ್ಥಪೂರ್ಣ ವಾಗಿದೆ. ಕನ್ನಡ ಸ್ಪಷ್ಟವಾಗಿ ಓದುವ, ಬರೆಯುವ, ಮಾತನಾಡುವ ಕಲಿಕೆ ಶಿಕ್ಷಣದ ಜೊತೆಗೆ ನಡೆಯಬೇಕು. ಆದರೆ ಕೆಲವು ಶಾಲೆಗಳು ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವಿವರಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವ ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಕು. ಅಚಿಂತಾ ಅವರು ಮಾತನಾಡಿ ಈ ಸಮ್ಮೇಳನ ನಮಗೆ ಮಕ್ಕಳಿಗೆ ಅವಿಸ್ಮರಣೀಯವಾಗಿದೆ. ನಾನು ಮೂರು ವರ್ಷದ ಮಗುವಾಗಿದ್ದಾಗ ನಮ್ಮ ತಾಯಿ ಸಂಗೀತ, ಸಾಹಿತ್ಯ ಕಾರ್ಯಕ್ರಮ ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಮನೆಯಲ್ಲಿ ಅಪ್ಪ ಕಥೆ ಹೇಳುತ್ತಿದ್ದರು. ಹಾಗೆ ಒಡನಾಡಿದ ನನಗೆ ಬರೆಯಲು, ಹಾಡಲು ಆಸಕ್ತಿ ಮೂಡಿತ್ತು. ನಮ್ಮ ಶಾಲೆಯಲ್ಲಿ ಉತ್ತಮ ವಾತಾವರಣವಿತ್ತು. ಸಾಹಿತ್ಯದ ವಾತಾವರಣ ಕಲ್ಪಿಸಲು ಕಸಾಸಾಂ ವೇದಿಕೆ ಸಹಕಾರಿಯಾಗಿದೆ ಎಂದು ವಿವರಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರು ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ, ಅನನ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿಗಳಾದ ಆರ್. ಗಿರೀಶ್, ತಾ. ಕಸಾಪ ಅಧ್ಯಕ್ಷರಾದ ಮಹಾದೇವಿ, ಕಾವ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಗಾಜನೂರು ಪ್ರೌಢಶಾಲೆಯ. ತನುಶ್ರೀ, ಪ್ರಬಂಧ ಗೋಷ್ಠಿ ಅಧ್ಯಕ್ಷತೆ ವಹಿಸಲಿರುವ ದುರ್ಗಿಗುಡಿ ಶಾಲೆಯ ಕು. ದಿವ್ಯ ಟಿ. ಪಿ., ಕಥಾ ಗೋಷ್ಠಿ ಅಧ್ಯಕ್ಷರಾದ ಪುರುದಾಳು ಶಾಲೆಯ ಕು. ವಿನೋದ ಉಪಸ್ಥಿತರಿದ್ದರು.

ಕು. ಪಾವನ ಸ್ವಾಗತಿಸಿದರು, ಕೃತಿಕ ಎಂ. ನಾಡಿಗ್, ಐಶ್ವರ್ಯ ನಿರೂಪಿಸಿದರು. ದೀಕ್ಷಿತ್ ವಂದಿಸಿದರು.

ಮಕ್ಕಳಿಗೆ ದಢಾರ ಮತ್ತು ರುಬೆಲ್ಲ ವಿರುದ್ಧದ ಎರಡು ಡೋಸ್ ನೀಡಬೇಕು-ಡಾ.ನಾಗರಾಜ್

0

ಎಲ್ಲ ಅರ್ಹ ಮಕ್ಕಳ ದಡಾರ ಮತ್ತು ರುಬೆಲ್ಲಾದ ಎರಡು ಡೋಸ್‍ಗಳ ಲಸಿಕಾಕರಣ ಆಗಬೇಕು ಹಾಗೂ ಹಾಗೂ ದಢಾರ ಲಕ್ಷಣಗಳಾದ ಜ್ವರ ಮತ್ತು ರ್ಯಾಶ್ ಬಗ್ಗೆ ಕಣ್ಗಾವಲು ವ್ಯವಸ್ಥೆ ಬಲಪಡಿಸಬೇಕೆಂದು ಶಿವಮೊಗ್ಗ ತಹಶೀಲ್ದಾರ್ ಡಾ.ನಾಗರಾಜ್ ತಿಳಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಸರ್ಕಾರವು 2023 ರ ಅಂತ್ಯದ ವೇಳೆಗೆ ದಡಾರ ಮತ್ತು ರುಬೆಲ್ಲಾ(ಎಂಆರ್) ನಿರ್ಮೂಲನೆಗಾಗಿ ಬದ್ದವಾಗಿದ್ದು ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಅರ್ಹ ದಢಾರ ಮತ್ತು ರುಬೆಲ್ಲಾದ ಎರಡು ಡೋಸ್‍ಗಳ ನಿಗದಿತ ಪ್ರಗತಿ ಸಾಧಿಸಲು ಹಾಗೂ ಎರಡು ಡೋಸ್‍ಗಳ ಡ್ರಾರ್ಪಔಟ್ ರೇಟ್ ಶೂನ್ಯಕ್ಕೆ ತರಲು ಶ್ರಮಿಸಬೇಕು ಎಂದರು.

ಇತ್ತೀಚೆಗೆ ಚೀನಾ, ಅಮೇರಿಕಾ ಇತರೆ ದೇಶಗಳಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿದ್ದು, ಇಲ್ಲಿಯೂ ಕೂಡ ಎಲ್ಲರೂ ಕೋವಿಡ್ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ನೀಡುವಿಕೆಯಲ್ಲಿ ಶೇ.95 ಪ್ರಗತಿ ಸಾಧಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ದಡಾರ ರುಬೆಲ್ಲಾ ನಿರ್ಮೂಲನೆಗಾಗಿ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಇತರೆ ಸಂಬಂಧಿಸಿದವರಿಗೆ ಕಾರ್ಯಾಗಾರಗಳು, ತರಬೇತಿ ಮತ್ತು ಓರಿಯೆಂಟೇಷನ್ ಕಾರ್ಯಕ್ರಮಗಳನ್ನು ಮಾಡಲಾಗಿದೆ. 5 ತಿಂಗಳಿನಿಂದ 5 ವರ್ಷದ ಮಕ್ಕಳ ಹೆಡ್‍ಕೌಂಟ್ ಸರ್ವೇ ಆಗಿದೆ. ಡಿಸೆಂಬರ್ 27 ರೊಳಗೆ ಬಾಕಿ ಇರುವ ಮಕ್ಕಳ ಲಸಿಕಾಕರಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಭಾರತ ದೇಶವು ಕಳೆದ 11 ವರ್ಷಗಳಿಂದ ಪೋಲಿಯೋ ಮುಕ್ತವಾಗಿದ್ದರೂ ಡಬ್ಲ್ಯುಪಿವಿ(ವೈಲ್ಡ್ ಪೊಲಿಯೋ ವೈರಸ್)ಆಮದು ಮತ್ತು ಟೈಪ್ 2 ಪೋಲಿಯೋ ವೈರಸ್ ಅಪಾಯವಿರುವ ಕಾರಣ, ಮಗುವಿಗೆ 6 ರಿಂದ 14 ವಾರಗಳಲ್ಲಿ ಮೊದಲನೇ ಐಪಿವಿ ಡೋಸ್ ಮತ್ತು 14 ರಿಂದ 36 ವಾರಗಳಲ್ಲಿ ಎರಡನೇ ಐಪಿವಿ ಡೋಸ್ ನೀಡಲಾಗುತ್ತಿದೆ. ಇದೀಗ 2023 ರ ಜನವರಿ ಯಿಂದ ಎಲ್ಲ ಮಕ್ಕಳಿಗೆ 3ನೇ ಎಫ್‍ಐಪಿವಿ ಡೋಸ್ ನೀಡಲಾಗುವುದು. ಈ ಹೆಚ್ಚುವರಿ ಡೋಸ್‍ನ್ನು ಎಂಆರ್ ಲಸಿಕೆಯೊಂದಿಗೆ 9 ತಿಂಗಳಿಗೆ ನೀಡಲಾಗುವುದು.

ಇತರೆ ದೇಶಗಳಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿದ್ದು, ತಾಲ್ಲೂಕಿನಲ್ಲಿಯೂ ಸಹ ಎಲ್ಲರೂ ಕೋವಿಡ್ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವುದರೊಂದಿಗೆ 3 ನೇ ಕೋವಿಡ್ ಲಸಿಕೆ ಪಡೆಯದವರು ಪಡೆಯಬೇಕು. ಹಾಗೂ ಶೀತ, ಕೆಮ್ಮು ಜ್ವರ ಹೀಗೆ ಕೋವಿಡ್ ಲಕ್ಷಣ ಇರುವವರು ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.

ತಹಶೀಲ್ದಾರ್, ಕ್ಯಾಸನೂರ್ ಫಾರೆಸ್ಟ್ ಡಿಸೀಸ್(ಕೆಎಫ್‍ಡಿ) ಅಥವಾ ಮಂಗನ ಕಾಯಿಲೆ ಕುರಿತು, ತಾಲ್ಲೂಕಿನ ಅರಣ್ಯ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು. ಉಣುಗು ನಿಯಂತ್ರಣವೇ ಮುಖ್ಯವಾಗಿದ್ದು ಇದಕ್ಕೆ ಸಂಬಂಧಿಸಿದ ಪಶುಪಾಲನೆ, ಅರಣ್ಯ, ಕಂದಾಯ ಮತ್ತು ಆರೋಗ್ಯ ಇಲಾಖೆಗಳು ಸಹಯೋಗದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಎತ್ತಿನ ಓಟ/ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಆಯೋಜಕರು ಕ್ರೀಡೆಯ 15 ದಿನಗಳ ಮೊದಲೇ ಸ್ಥಳೀಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ಎತ್ತಿನ ಓಟ ನಡೆಸುವ ಗ್ರಾಮಗಳಲ್ಲಿ ಮೊದಲು ಗ್ರಾಮ ಪಂಚಾಯ್ತಿ ಮತ್ತು ಪಶುವೈದ್ಯರಿಂದ ಎನ್‍ಓಸಿ ಪಡೆದು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ತಹಶೀಲ್ದಾರರಿಗೆ ಸಲ್ಲಿಸಿದ ಅರ್ಜಿಯನ್ನು ಅವರು ವಿವರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳು ಈ ಕ್ರೀಡೆಯಿಂದ ಆಗುವ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅನುಮತಿ ನೀಡುವರು ಅಥವಾ ತಿರಸ್ಕರಿಸುವರು.

ತಾಲ್ಲೂಕಿನ ಆಯನೂರು ಮತ್ತು ಹಾರ್ನಹಳ್ಳಿಯಲ್ಲಿ ಮಾತ್ರ ಎತ್ತಿನ ಓಟ ಕ್ರೀಡೆಗಳು ಸಾಮಾನ್ಯವಾಗಿ ನಡೆಯಲಿದ್ದು ಅಲ್ಲಿ ಇಓ, ಪಶುಸಂಗೋಪನೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಷರತ್ತುಗಳಿಗೊಳಪಟ್ಟು ಎತ್ತಿನ ಓಟ ಕ್ರೀಡೆಯನ್ನು ನಡೆಸುವ ಸಂಬಂಧ ಪಶುವೈದ್ಯರು ಸರ್ಟಿಫಿಕೇಟ್ ನೀಡಬೇಕು. ಹಾಗೂ ಸುತ್ತೋಲೆಯನ್ವಯ 18 ಷರತ್ತುಗಳನ್ನು ಪರಿಪಾಲಿಸಬೇಕೆಂದು ಸೂಚನೆ ನೀಡಿದರು.

ಆರ್‍ಬಿಎಸ್‍ಕೆ ಕಾರ್ಯಕ್ರಮದಡಿ ತಾಲ್ಲೂಕಿನಲ್ಲಿ ಎರಡು ವೈದ್ಯರು/ಸಿಬ್ಬಂದಿಗಳ ತಂಡಗಳು ಅಂಗನವಾಡಿಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ತಪಾಸಣೆ ನಡೆಸಿ ಸಮಸ್ಯೆ ಇದ್ದ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿ ಇರುವ ಡಿಐಇಸಿ(ಡಿಸ್ಟ್ರಿಕ್ಟ್ ಅರ್ಲಿ ಇಂಟರ್‍ವೆನ್ಶನ್ ಸೆಂಟರ್)ಗೆ ರೆಫರ್ ಮಾಡಲಾಗುತ್ತಿದೆ ಎಂದು ಆರ್‍ಬಿಎಸ್‍ಕೆ ಕಾರ್ಯಕ್ರಮಾಧಿಕಾರಿ ತಿಳಿಸಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಂಯೋಜಕ ಹೇಮಂತರಾಜ ಅರಸ್ ಮಾತನಾಡಿ, ಕೋಟ್ಪಾ ಕಾಯ್ದೆಯಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು 106 ಪ್ರಕರಣ ದಾಖಲಿಸಿ ರೂ.18150 ದಂಡ ಸಂಗ್ರಹಿಸಲಾಗಿದೆ. ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನ ಕಾಯ್ದೆ(ಕೋಟ್ಪಾ) ಹಾಗೂ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ತಾಲ್ಲೂಕಿನ 22 ಶಾಲೆಗಳಲ್ಲಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸರ್ಕಾರ ಇತ್ತೀಚೆಗೆ ಗೆಜೆಟ್ ಒಂದನ್ನು ಪಾಸ್ ಮಾಡಿದ್ದು ಅದರನ್ವಯ ಡಿಸೆಂಬರ್ ಮಾಹೆಯಿಂದ ತಂಬಾಕು ಉತ್ಪನ್ನ ಮಾರಾಟ ಮಾಡುವವರು ನಗರ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿಯನ್ನು ಪಡೆಯಬೇಕೆಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ, ಸಹಾಯಕ ನಿರ್ದೇಶಕ ಡಾ.ನಟರಾಜ್, ತಾಲ್ಲೂಕಿನ ಪಶುವೈದ್ಯರು, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ, ತಾಲ್ಲೂಕು ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

ಮನಸ್ಸಿನಿಂದ ಮನಸ್ಸಿಗೆ -06

0

ಅಸಹ್ಯಕರ ತಿರುವು ಪಡೆಯುತ್ತಿರುವ ಮೀಸಲಾತಿ ಬೇಡಿಕೆಗಳು……

” ವಸುದೈವ ಕುಟುಂಬ – ಮಾನವ ಜಾತಿ ತಾನೊಂದು ವಲಂ – ವಿಶ್ವ ಮಾನವ ಪ್ರಜ್ಞೆ – ಕುಲದ ನೆಲೆಯ ಬಲ್ಲಿರಾ – ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ – ಜಲ ಒಂದೇ ಶೌಚ ಶಮನಕ್ಕೆ..” ಹೀಗೆ ಹೇಳುತ್ತಿದ್ದವರ ಅನುಯಾಯಿಗಳ ಮುಖವಾಡಗಳು ಕಳಚಿ ಬೀಳುತ್ತಿವೆ……

ವಾಸ್ತವದಲ್ಲಿ ಶೋಷಿತರ – ಅಸ್ಪೃಶ್ಯರ ಏಳಿಗೆ ಸಹಿಸದ ಅಸೂಯೆಯ ಮನಸ್ಸುಗಳು ಬೆಂಕಿ ಕಾರುತ್ತಾ ಹೊರ ಬರುತ್ತಿವೆ…..

ಸಾಮಾಜಿಕ ನ್ಯಾಯ ಅಪಹಾಸ್ಯಕ್ಕೆ ಒಳಗಾಗಿ ಅವಶ್ಯಕತೆ ಇರುವವರಿಗೂ ಸಿಗಲಾರದಂತೆ ಗೊಂದಲ ಸೃಷ್ಟಿಸಿ ಸಂಪೂರ್ಣ ಮೀಸಲಾತಿ ನಿರ್ಮೂಲನೆ ಮಾಡುವ ಹುನ್ನಾರ ನಡೆಯುತ್ತಿದೆ…..

ಜಾತಿಯ ಶ್ರೇಷ್ಠತೆ ಉಳಿಸಿಕೊಂಡು ಲಾಭಕ್ಕಾಗಿ ಕೆಳ ಜಾತಿಯ ಪಟ್ಟ ಹೊರಲು ಸಿದ್ದರಾದ ಸಮುದಾಯಗಳ ಸ್ವಾರ್ಥ ರಾಜಕೀಯ ಮತ್ತು ಧಾರ್ಮಿಕ ಪುಡಾರಿಗಳು….

ಚುನಾವಣಾ ‌ಸಮಯದಲ್ಲಿ ಬ್ಲಾಕ್ ಮೇಲ್ ತಂತ್ರಕ್ಕೆ ಶರಣಾದ ಜಾತಿ ಸಮುದಾಯಗಳ ರಾಜಕೀಯ ಮುಖಂಡರು….

ತನ್ನ ಚುನಾವಣಾ ರಾಜಕೀಯ ಲಾಭಕ್ಕಾಗಿ ಜೇನುಗೂಡಿಗೆ ಕೈಹಾಕಿ ರಾಡಿ ಮಾಡುತ್ತಿರುವ ರಾಜ ಪಕ್ಷಗಳು……

ತಮ್ಮ ವ್ಯಾಪಾರದ ಲಾಭಕ್ಕಾಗಿ ಬೇಡದ ವಿಷಯಕ್ಕೆ ಪ್ರಚಾರದ ಮಹತ್ವ ನೀಡಿ ಜನರಲ್ಲಿ ಭ್ರಮೆ ಸೃಷ್ಟಿಸುತ್ತಿರುವ ಮಾಧ್ಯಮಗಳು……

ಭವಿಷ್ಯದ ಅರಿವಿಲ್ಲದೆ, ದೇಶದ ಸಮಗ್ರತೆಯ ಚಿಂತನೆ ಇಲ್ಲದೇ, ಕಾನೂನಿನ ತಿಳಿವಳಿಕೆ ಇಲ್ಲದೇ,
ಧರ್ಮ ಮತ್ತು ಅಮಾನವೀಯ ಕಾಳಜಿ ಇಲ್ಲದೇ, ಕುರಿಗಳಂತೆ ಸ್ವಾರ್ಥ ನಾಯಕರನ್ನು ಹಿಂಬಾಲಿಸುತ್ತಿರುವ ಮುಗ್ಧ ಮತ್ತು ಮೂರ್ಖ ಜನರು…..

ಸ್ವಾತಂತ್ರ್ಯದ 75 ವರ್ಷಗಳ ನಂತರ ನಿಧಾನವಾಗಿ ಮೀಸಲಾತಿಯನ್ನೇ ಇಲ್ಲವಾಗಿಸಿ ಬಸವಣ್ಣನವರ ಜಾತಿ ರಹಿತ ಸಮ ಸಮಾಜದ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಡಬೇಕಾಗಿದ್ದ ಭಾರತೀಯ ಸಮಾಜ ಅದಕ್ಕೆ ವಿರುದ್ಧವಾಗಿ ಜಾತಿ ಪದ್ದತಿಯನ್ನು ಮತ್ತಷ್ಟು ಆಳಕ್ಕೆ ಇಳಿಸಿ ಭಾರತದ ಮೂಲ ಸಂಸ್ಕೃತಿಗೆ ಕೊಡಲಿ ಪೆಟ್ಟು ನೀಡುತ್ತಿದೆ……

ಅಸ್ಪೃಶ್ಯರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನದ ಭಾಗವಾಗಿ ಮೀಸಲಾತಿಯನ್ನು ಸಂವಿಧಾನಾತ್ಮಕವಾಗಿ ಜಾರಿಗೊಳಿಸಿದ ಮೂಲ‌ ಉದ್ದೇಶವನ್ನು ಮರೆತು ಪ್ರಬಲ ಜಾತಿಗಳು ಬಡತನದ ನೆಪದಲ್ಲಿ – ನಿರುದ್ಯೋಗದ ನೆಪದಲ್ಲಿ ಮೀಸಲಾತಿಗಾಗಿ ಮಠದ ಸ್ವಾಮೀಜಿಗಳ ನೆರವು ಪಡೆದು ಹೋರಾಟ ಮಾಡುತ್ತಿರುವುದು ಬಸವ ತತ್ವದ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ದವಾಗಿದೆ. ಅದರ ಕನಿಷ್ಠ ಜ್ಞಾನವೂ ಇವರುಗಳಿಗೆ ಇಲ್ಲವಾಗಿದೆ……

ನಿಷ್ಕ್ರಿಯ – ಬೇಜವಾಬ್ದಾರಿ ಸರ್ಕಾರಗಳ ಆಡಳಿತ ವ್ಯವಸ್ಥೆಯನ್ನು ಜಾಗೃತಗೊಳಿಸಿ ಹೊಸ ಹೊಸ ಉದ್ಯೋಗ ಸೃಷ್ಟಿಸಿ, ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಜಾತಿ ಪದ್ದತಿಯನ್ನು ಇಲ್ಲವಾಗಿಸಿ ಸಮ ಸಮಾಜದ ನಿರ್ಮಾಣದಲ್ಲಿ ಕೈ ಜೋಡಿಸಬೇಕಾದ ರಾಜಕೀಯ ಮತ್ತು ಧಾರ್ಮಿಕ ನಾಯಕತ್ವ ಅನಾಗರಿಕ ಸಮಾಜದ ಲಕ್ಷಣಗಳನ್ನು ಬಹಿರಂಗವಾಗಿ ಪ್ರೋತ್ಸಾಹಿಸಿ ಅದರ ಬೆಳವಣಿಗೆಗಾಗಿ ಶ್ರಮಿಸುತ್ತಿರುವುದು ವರ್ತಮಾನದ ವ್ಯಂಗ್ಯ.

ಶೋಷಿತ ಸಮುದಾಯಗಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ಮೀಸಲಾತಿ ಮತ್ತು ಒಳ ಮೀಸಲಾತಿಗಾಗಿ ಹೋರಾಡುವುದರಲ್ಲಿ ಅರ್ಥವಿದೆ. ಆದರೆ ಶೋಷಕ ಸಮುದಾಯಗಳು ಒಟ್ಟು ವ್ಯವಸ್ಥೆಯ ಸುಧಾರಣೆಗೆ ಪ್ರಯತ್ನಿಸದೆ ಇಂದಿನ ಖಾಸಗೀಕರಣದ ಸಮಯದಲ್ಲಿ ಅಷ್ಟೇನು ಉಪಯುಕ್ತವಲ್ಲದ ಮೀಸಲಾತಿಗಾಗಿ ಹೋರಾಡುತ್ತಿರುವುದು ಹಾಸ್ಯಾಸ್ಪದ…….

ಅದು ಪ್ರಾಯೋಗಿಕವಾಗಿ ಅಷ್ಟು ಸರಳವೂ ಅಲ್ಲ. ಕಾನೂನಾತ್ಮಕವಾಗಿ ಜಾರಿಯಾಗಲು ಅನೇಕ ಅಡೆತಡೆಗಳು ಇವೆ……

ಒಂದು ವೇಳೆ ಈಗಿನ ಪ್ರತಿಭಟನೆಗಳಿಗೆ ಮಣಿದು ಈ ಸಮುದಾಯಗಳಿಗೆ ಮೀಸಲಾತಿ ದೊರೆಯಿತು ಎಂದು ಭಾವಿಸಿ. ಆಗ ಇನ್ನಷ್ಟು ಸಮುದಾಯಗಳು ಪ್ರತಿಭಟಿಸುತ್ತವೆ. ಜೊತೆಗೆ ಇದರ ದುಷ್ಪರಿಣಾಮ ಈಗ ಮೀಸಲಾತಿಯ ಹೆಚ್ಚು ಅನುಕೂಲ ಇರುವ ಜಾತಿಗಳ ಮೇಲೆ ಬೀರುತ್ತದೆ. ಆಗ ಅವರು ಇನ್ನೊಂದು ರೀತಿಯಲ್ಲಿ ಪ್ರತಿಭಟಿಸುತ್ತಾರೆ.

ಇದೆಲ್ಲವೂ ಪರಿಹಾರವಾಯಿತು ಎಂದಿಟ್ಟುಕೊಳ್ಳಿ. ಆಗ ಈ ಎಲ್ಲಾ ಸಮುದಾಯಗಳು ಈ ಮೀಸಲಾತಿಯಿಂದ ಅಭಿವೃದ್ಧಿ ಹೊಂದುತ್ತಾರೆಯೇ…

ಖಂಡಿತ ಇಲ್ಲ. ಈ ಸಂಕುಚಿತ ಮನೋಭಾವದ, ಭ್ರಷ್ಟ, ಜಾತಿವಾದಿಗಳಿಂದ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಚುನಾವಣಾ ರಾಜಕೀಯ ಕಲುಷಿತವಾಗುತ್ತದೆ. ಜನ ಪ್ರತಿನಿಧಿಗಳ ಗುಣಮಟ್ಟ ಪ್ರಪಾತಕ್ಕೆ ಕುಸಿಯುತ್ತದೆ.

ಶಿಕ್ಷಣ, ಆರೋಗ್ಯ, ಕಲಬೆರಕೆ ಆಹಾರ, ರೈತರ ಸಮಸ್ಯೆ, ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಯಾವುದೇ ಪ್ರತಿಭಟನೆ ಮಾಡಿ ಪರಿವರ್ತನೆಗಾಗಿ ಪ್ರಯತ್ನಿಸದೆ ಕೇವಲ ಅಷ್ಟೇನು ಉಪಯುಕ್ತವಲ್ಲದ, ದೀರ್ಘಕಾಲದಲ್ಲಿ ಆಧುನಿಕ ಜಗತ್ತಿನ ಸ್ಪರ್ಧೆ ಮತ್ತು ವೇಗ ಎದುರಿಸಲು ಸಾಧ್ಯವಾಗದ ಮೀಸಲಾತಿಗಾಗಿ ಹೊಡೆದಾಡುತ್ತಿರುವುದು ತೀರಾ ನಾಚಿಕೆಗೇಡು.

ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳು ರೂಪಿಸಿದ ಮೀಸಲಾತಿ ನೀತಿ ಅತ್ಯಂತ ವೈಜ್ಞಾನಿಕ. ಅನಂತರ ನೀಡಿದ ಬಹುತೇಕ ಮೀಸಲಾತಿಗಳು ರಾಜಕೀಯ ಕುಟಿಲತೆ ಮತ್ತು ಅವೈಜ್ಞಾನಿಕ. ಮೀಸಲಾತಿಗೆ ಯಾವುದೇ ರೀತಿಯ ಶೋಷಿತರು ಮಾತ್ರ ಅರ್ಹರು. ಶೋಷಕರಲ್ಲ…….

ದಯವಿಟ್ಟು ಯೋಚಿಸಿ. ನಮ್ಮ ಶ್ರಮ ಮತ್ತು ಆಕ್ರೋಶ ಯಾವುದಕ್ಕೆ ಉಪಯೋಗವಾಗಬೇಕೆಂದು……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

ಶಿಕಾರಿಪುರ ಭಕ್ತನಕೊಪ್ಪ ಗ್ರಾಮಸ್ಥರಿಗೆ ಕಾಮಗಾರಿ ಇಂಜಿನಿಯರ್ ಆಫೀಸಿನಿಂದ ವಿಶೇಷ ಸೂಚನೆ

0

ಶಿಕಾರಿಪುರ ತಾಲ್ಲೂಕಿನ ಭಕ್ತನಕೊಪ್ಪ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 110 ಎಂವಿಎ, 110/11 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ ಹಾಲಿ ಇರುವ 110 ಕೆವಿ ಶಿರಾಳಕೊಪ್ಪ-ಹಿರೇಕೆರೂರು ಮಾರ್ಗದಿಂದ ಟ್ಯಾಪಿಂಗ್ ಮಾಡಿಕೊಂಡು ಸುಮಾರು 0.198 ಕಿ.ಮೀ ಉದ್ದದ ಲಿಲೋ ಪ್ರಸರಣ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯು ಪೂರ್ಣಗೊಂಡಿದೆ.

ಈ ಮಾರ್ಗವು ಭಕ್ತನಕೊಪ್ಪ ಗ್ರಾಮದ ಸರ್ವೇ ನಂ.68 ಮತ್ತು 69 ರ ರೈತರ ಜಮೀನಿನಲ್ಲಿ ಹಾದು ಹೋಗಿದ್ದು ದಿ: 21-12-2022 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿ ಈ ಮಾರ್ಗವನ್ನು ಚಾಲನೆಗೊಳಿಸಲಾಗುತ್ತದೆ.

ಆದ್ದರಿಂದ ಸಾರ್ವಜನಿಕರು ಈ ಮಾರ್ಗದಲ್ಲಿ ಬರುವ ಗೋಪುರಗಳನ್ನು ಹತ್ತುವುದಾಗಲಿ, ದನಕರುಗಳನ್ನು ಕಟ್ಟುವುದಾಗಲಿ, ವಾಹನಗಳಿಗೆ ತಗುಲುವಂತೆ ವಸ್ತುಗಳನ್ನು ಎಸೆಯುವುದಾಗಲಿ ನಿಷೇಧಿಸಲಾಗಿದೆ.

ಈ ಕೃತ್ಯದಿಂದ ಅಪಘಾತ ಅಥವಾ ಉಂಟಾಗುವ ಯಾವುದೇ ಪರಿಣಾಮಗಳಿಗೆ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಶಿವಮೊಗ್ಗ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಕಾಚಿನಕಟ್ಟೆ ಶಾಲೆಯಲ್ಲಿ ಗಣಿತ ದಿನಾಚರಣೆ

0

ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಇವರ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಡಿ.22 ರಂದು ಕಾಚಿನಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಭಾ.ಆ.ಸೇ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್ ಉದ್ಘಾಟಿಸಿ ಮಾತನಾಡಿ, ರಾಮನುಜನ್ ಶ್ರೀನಿವಾಸರವರ ಬದುಕಿನ ವಿವಿಧ ಪ್ರಮುಖ ಘಟ್ಟಗಳನ್ನು ವಿವರಿಸಿ, ಕಬ್ಬಿಣದ ಕಡಲೆ ಎಂದುಕೊಳ್ಳುವ ವಿಧ್ಯಾರ್ಥಿಗಳು ಗಣಿತವನ್ನು ಹೇಗೆ ತಮ್ಮದಾಗಿಸಿಕೊಳ್ಳಬಹುದೆಂದು ತಿಳಿಸಿದರು.

ಭಾರತೀಯ ಆಡಳಿತ ಸೇವೆಗೆ ಸಂಬಂಧಿಸಿದ ವಿಚಾರಗಳ ಕುರಿತು ಶಾಲಾ ವಿಧ್ಯಾರ್ಥಿಗಳೊಡನೆ ಮುಖಾಮುಖಿ ಸಂವಾದ ನಡೆಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ದಿನನಿತ್ಯದ ಜೀವನದಲ್ಲಿ ಗಣಿತದ ಪಾತ್ರದ ಕುರಿತಾಗಿ ವಿದ್ಯಾರ್ಥಿಗಳಿಗೆ ಸವಿವರಾಗಿ ತಿಳಿಸಿದ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳಿಗೆ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ತಿಳಿಸಿದರು.

ಕೊರಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಜಿಲ್ಲಾ ಎನ್‍ಆರ್‍ಡಿಎಂಎಸ್ ಅಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ರಗಿಬ್ ಹುಸೇನ್ ಹಾಗೂ ಕೇಶವ ಪ್ರಸಾದ್ ಇಬ್ಬರು ಗಣಿತದ ಶಾಲಾ ಪಠ್ಯಕ್ಕೆ ಸಂಬಂಧಿಸಿದಂತೆ ಅನೇಕ ಮಾದರಿಯ ಸಹಾಯದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ನೂರೈವತ್ತಕ್ಕು ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

ಶಿವಮೊಗ್ಗ ಕೆಯುಡಬ್ಲ್ಯು ಜೆ ಕ್ರಿಕೆಟ್ ಪಂದ್ಯಾವಳಿ ವೀಜೇತರು

0

ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುಗ೯ ಜಿಲ್ಲಾ ಶಾಖೆಯು ಕೋವಿಡ್ ಗೆ ತುತ್ತಾದ ಪತ್ರಕರ್ತರಾದ ವಿನಯ ಮತ್ತು ಬಸವರಾಜ ಕೋಟಿ ಸ್ಮರಣಾರ್ಥವಾಗಿ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿತ್ತು.

ಈ ಪಂದ್ಯಾವಳಿಯಲ್ಲಿ 5 ಜಿಲ್ಲೆಗಳ ಪತ್ರಕರ್ತರ ಕ್ರಿಕೆಟ್ ಟೀಮ್ ಭಾಗವಹಿಸಿತ್ತು. ಪಂದ್ಯಾವಳಿಯ ಫೈನಲ್ ನಲ್ಲಿ ಕೆಯುಡಬ್ಲ್ಯೂಜೆ ಶಿವಮೊಗ್ಗ ಜಿಲ್ಲಾ ಶಾಖೆಯ ಪತ್ರಕರ್ತರ ತಂಡವು ಜಯಭೇರಿ ಬಾರಿಸಿ, ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಸಂಘಟನಾತ್ಮಕ ಉತ್ಸಾಹವನ್ನು ಇಮ್ಮಡಿಸಿದೆ.

ಪಂದ್ಯಾವಳಿಯಲ್ಲಿ
25 ಸಾವಿರ ರೂ.‌ನಗದು ಮತ್ತು ಟ್ರೋಫಿಯನ್ನು ಗೆದ್ದ ಶಿವಮೊಗ್ಗ ಪತ್ರಕರ್ತರ ತಂಡವನ್ನು ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷ ರಾದ ಕೆ.ವಿ. ಶಿವಕುಮಾರ್ ಹಾಗೂ ಪದಾಧಿಕಾರಿಗಳು, ಕಾಯ೯ಕಾರಿ ಸಮಿತಿ ಸದಸ್ಯರು ಅಭಿನಂದಿಸಿ, ಶುಭ ಕೋರಿದ್ದಾರೆ.

ನೇಕಾರ ಸಮುದಾಯದ ಅಭಿವೃದ್ದಿ ನಿಗಮ ಸ್ಥಾಪಿಸಬೇಕು-ಸೋಮಶೇಖರ್

0

ನೇಕಾರ ಸಮುದಾಯದ ಎಲ್ಲಾ ಒಳಪಂಗಡಗಳು ಒಂದಾಗುವು ದರೊಂದಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸದೃಢರಾಗಲು ಪಣ ತೊಡಬೇಕು ಎಂದು ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಅವರು ಹೇಳಿದರು.

ಚಿಕ್ಕಮಗಳೂರಿನ, ಕುಂಬಾರಬೀದಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ನೇಕಾರ ಒಕ್ಕೂಟದ ಸಮಾವೇಶ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮುಂದಿನ ಫೆಬ್ರವರಿಯಲ್ಲಿ ಜಿಲ್ಲಾ ಮಟ್ಟದಲ್ಲಿ 4ನೇ ನೇಕಾರ ಜನಾಂಗದ ಬೃಹತ್ ಸಮಾವೇಶ ವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗುತ್ತದೆ.
ಜೊತೆಗೆ ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ನೇಕಾರ ವರ್ಗದದವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿ ಕೊಡಲು ಒತ್ತಾಯಿಸಲಾಗುತ್ತದೆ ಎಂದರು.

ಜನಾಂಗದಲ್ಲಿ ಪ್ರಸ್ತುತ ಶಿಕ್ಷಣ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿವೆ. ಇತರೆ ಸಮುದಾಯಗಳಿಗೆ ಅಭಿವೃದ್ದಿ ನಿಗಮಗಳು ಲಭಿಸಿರುವುದು ಸ್ವಾಗತಾರ್ಹ. ಅದೇ ರೀತಿ ನೇಕಾರ ಸಮು ದಾಯಕ್ಕೂ ಅಭಿವೃದ್ದಿ ನಿಗಮಗಳು ಅವಶ್ಯವಿರುವ ಹಿನ್ನೆಲೆಯಲ್ಲಿ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿ ಗಳು ನಿಗಮ ಸ್ಥಾಪಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದರು.

ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ರಾಜ್ಯದ 224 ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ನೇಕಾರ ಸಮುದಾಯದವರಿಗೆ ಜಿಲ್ಲೆಯಲ್ಲಿ ಟಿಕೇಟ್ ನೀಡಿರುವುದು ಜೆಡಿಎಸ್ ಪಕ್ಷ. ಅದೇ ರೀತಿ ಆಯಾ ಜಿಲ್ಲಾವಾರುಗಳಲ್ಲಿ ಜನತೆಗೆ ಸ್ಪಂದಿಸುವ ನೇಕಾರರಿಗೆ ಪಕ್ಷಾತೀತವಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಒದಗಿಸಬೇಕು ಎಂದು ತಿಳಿಸಿದರು.

ನೇಕಾರ ಜನಾಂಗವು ಆಡಳಿತ ಪಕ್ಷಕ್ಕೆ ಅತಿಹೆಚ್ಚು ಬೆಂಬಲ ಸೂಚಿಸುತ್ತಾ ಇದುವರೆಗೂ ಬಂದಿದ್ದು ಮುಂದಿನ ಚುನಾವಣೆಗೆ ಆಕಾಂಕ್ಷಿಗಳಿಗೆ ಪಕ್ಷಾತೀತವಾಗಿ ಟಿಕೇಟ್ ನೀಡಿದ್ದಲ್ಲಿ ಮಾತ್ರ ಜನಾಂಗವು ರಾಜಕೀಯ ಹಾಗೂ ಆರ್ಥಿಕ ಸಬಲರಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಎಲ್.ಶೇಖರಪ್ಪ ಮಾತನಾಡಿ ಹಾಸನ, ಕೊಡಗು ಹಾಗೂ ಚಿಕ್ಕಮಗ ಳೂರು ಜಿಲ್ಲಾಧ್ಯಕ್ಷರೊಂದಿಗೆ ಮುಂದಿನ ಸಮಾವೇಶವನ್ನು ಹಮ್ಮಿಕೊಳ್ಳುವ ಸಲುವಾಗಿ ಸಭೆ ನಡೆಸಲಾಗಿದೆ. ಹಿಂದುಳಿದಿರುವ ನೇಕಾರ ಜನಾಂಗದವರಿಗೆ ಯಾವುದೇ ಪಕ್ಷ ಗುರುತಿಸಿ ಸ್ಪರ್ಧಿಸಲು ಅವಕಾಶ ನೀಡಲಿದೆಯೋ ಅಂತಹ ಪಕ್ಷಕ್ಕೆ ಜನಾಂಗದ ಸಂಪೂರ್ಣ ಬೆಂಬಲ ಸೂಚಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಶಿವಪ್ಪಶೆಟ್ಟಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶ್ರೀಮತಿ ಉಮಾ ಜಗದೀಶ್, ಜಿಲ್ಲಾ ಗೌರವಾಧ್ಯಕ್ಷ ಅರೇಕಲ್ಲು ಪ್ರಕಾಶ್, ಕಾರ್ಯದರ್ಶಿ ಶಿವರಾಮ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪುಷ್ಪರಾಜೇಂದ್ರ, ಕಡೂರು ತಾಲ್ಲೂಕು ಅಧ್ಯಕ್ಷ ಶಂಕರಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಿಕ್ಕಪಟ್ಟಣಗೆರೆ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಎಚ್ಐವಿ ಬಗ್ಗೆ ಸೋಂಕಿತರಲ್ಲಿ ಮಾನಸಿಕ ಮತ್ತು ದೈಹಿಕ ಧೈರ್ಯ ತುಂಬಬೇಕು- ನ್ಯಾ.ಎ.ಎಸ್.ಸೋಮ

0

ಏಡ್ಸ್ ಕಾಯಿಲೆ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸೋಂಕಿತರಿಗೆ ಮಾನಸಿಕ ಹಾಗೂ ದೈಹಿಕವಾಗಿ ಧೈರ್ಯ ತುಂಬುವುದೇ ದಿನಾಚರಣೆಯ ಮೂಲ ಉದ್ದೇಶ ಎಂದು ಚಿಕ್ಕಮಗಳೂರು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಅವರು ಹೇಳಿದರು.

ಚಿಕ್ಕಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಏಡ್ಸ್ ಎಂಬುದು ಮಾರಣಾಂತಿಕವಲ್ಲ. ಸೂಕ್ತ ಮತ್ತು ನಿಯಮಿತ ಚಿಕಿತ್ಸೆಯಿಂದ ನಿಯಂತ್ರಿಸ ಬಹುದು.

ಹೆಚ್.ಐ.ವಿ. ಪೀಡಿತರನ್ನು ಎಲ್ಲರಂತೆ ಕಾಣಬೇಕು. ಏಡ್ಸ್ ಬಗ್ಗೆ ಇರುವ ಮೌಡ್ಯವನ್ನು ಮಟ್ಟ ಹಾಕುವ ದಿನವಾಗಿದೆ. ಸೋಂಕಿನ ಕುರಿತಾದ ಅರಿವಿನಿಂದ ಇದನ್ನು ದೂರ ಇರಿಸಬಹುದು ಎಂದು ಸಲಹೆ ಮಾಡಿದರು.

ಹೆಚ್.ಐ.ವಿ.ಯಿಂದ ಬಳಲುತ್ತಿರುವವರಿಗೆ ಸಮಾಜದ ನಾಗರೀಕರು ಅಸಭ್ಯ ವರ್ತನೆ ನಡೆಸದೇ ಸಹನೆಯಿಂದ ನಡೆದುಕೊಳ್ಳಬೇಕು. ಕಾಯಿಲೆಯ ಬಗ್ಗೆ ಅವರಲ್ಲಿ ಯಾವ ಅಳಕು ಬಾರದ ರೀತಿಯಲ್ಲಿ ನಾಗರೀಕರು ವರ್ತಿಸಿದರೆ ಸಮಾಜದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್.ಮೇಟಿ ಹೆಚ್.ಐ.ವಿ. ಸೋಂಕಿಗೆ ಒಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ಧೈರ್ಯ ತುಂಬುವ ಸಂಕಲ್ಪ ಮಾಡುವ ಮಹತ್ವದ ದಿನವಾಗಿದೆ. ಆ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಹೆಚ್‌ಐವಿ ಸೆಂಟರ್ ಸ್ಥಾಪಿಸಿ ಪ್ರತಿಯೊಬ್ಬರಿಗೂ ರಕ್ತಪರೀಕ್ಷೆ ನಡೆಸಿ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡ್ಯಾಪ್ಕೋ ಜಿಲ್ಲಾ ಮೇಲ್ವಿಚಾರಕ ಆರ್.ಪ್ರಭುಕುಮಾರ್, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಸಂಯೋಜಕ ಕಿರಣಕುಮಾರ್, ಕಾರಾಗೃಹ ಮಾನಸಿಕ ಆಪ್ತ ಸಮಾಲೋಚಕಿ ಎ.ಆಶಾ, ಎಸ್.ವಿ.ವೈ.ಎಂ.ನ ರಾಜುನರಸಯ್ಯ, ಪ್ರವೀಣಕುಮಾರ್ ಡಿ.ಅಂಗಡಿ, ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಹಿಂದೂ ಜಾಗರಣ ವೇದಿಕೆ ತ್ರೈವಾರ್ಷಿಕ ಸಮ್ಮೇಳನ

0

ಹಿಂದೂ ಜಾಗರಣ ವೇದಿಕೆಯ ಮೂರನೇ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನವು ಇದೇ ತಿಂಗಳ ಡಿಸೆಂಬರ್ 25ರಂದು ಶಿವಮೊಗ್ಗದ ಎನ್ ಈ ಎಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಈ ಸಮ್ಮೇಳನಕ್ಕೆ ಕರ್ನಾಟಕ ದಕ್ಷಿಣ ಪ್ರಾಂತದ 16 ಸರ್ಕಾರಿ ಜಿಲ್ಲೆಗಳಿಂದ ಹಿಂದೂ ಜಾಗರಣ ಘಟಕದ ಸುಮಾರು 4000 ಪ್ರತಿ ನಿಧಿಗಳು ಭಾಗವಹಿಸಲಿದ್ದಾರೆ.

ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರ ವಿಷಯವಾಗಿ ಗೋಷ್ಠಿ ನಡೆಯಲಿದೆ.

ನಂತರ ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿನಿಧಿಗಳ ಶೋಭಾ ಯಾತ್ರೆ ನಡೆಯಲಿದೆ.

ಶೋಭಾಯಾತ್ರೆಯ ನಂತರ, ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ ಸಾರ್ವಜನಿಕ ನಡೆಯಲಿದೆ.

ಈ ಸಭೆಯ ಮುಖ್ಯ ಅತಿಥಿಗಳಾಗಿ ಶಾಂತವೇರಿ ಶ್ರೀ ರಾಮಮೋಹನ್ ಅವರು ಭಾಗವಹಿಸಲಿದ್ದಾರೆ.

ಹಿಂದೂ ಜಾಗರಣದ ಪ್ರಮುಖರಾದ ಶ್ರೀ ಜಗದೀಶ ಕಾರಂತರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ದಿಕ್ಸೂಚಿ
ಭಾಷಣವನ್ನು ಮಧ್ಯಪ್ರದೇಶದ ಭೂಪಾಲ್ ಸಂಸದರಾದ ಸ್ವಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಾಂತ ಸಂಚಾಲಕರಾದ, ದೊ. ಕೇಶವ ಮೂರ್ತಿ, ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ತೇಜಸ್ವಿ ಅವರು ತಿಳಿಸಿದರು.