Sunday, April 5, 2026
Sunday, April 5, 2026
Home Blog Page 1311

ನೀರಿನ ಕಂದಾಯ ಪಾವತಿಗೆ ಶಿವಮೊಗ್ಗದ ವಿವಿಧೆಡೆ ಕೌಂಟರ್ ಗಳ ಆರಂಭ

0

ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 12/02/2023 ರ ಭಾನುವಾರದಂದು 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ “ರಾಮಣ್ಣ ಸೆಟ್ಟಿ ಪಾರ್ಕ್ ಹತ್ತಿರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಡಿಕೊಪ್ಪ ಹತ್ತಿರ, ಟ್ಯಾಂಕ್ ಮೊಹಲ್ಲಾ ೪ನೇ ತಿರುವು ಅಂಬೇಡ್ಕರ್ ಪಾರ್ಕ್ ಹತ್ತಿರ, ಶರಾವತಿನಗರ ಚರ್ಚ್ ರಸ್ತೆ ವೀಣಾ ಶಾರದ ಪ್ರೌಢಶಾಲೆ ಆಟೋನಿಲ್ದಾಣದ ಹತ್ತಿರ ಹಾಗೂ ಅಶೋಕನಗರ ಆರ್ಚ್ ಆಟೋ ನಿಲ್ದಾಣದ ಹತ್ತಿರ, ಶಿವಮೊಗ್ಗ”ಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ.

ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಆನ್ ಲೈನ್ ಅರ್ಜಿ ಆಹ್ವಾನ

0

ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಕರ್ನಾಟಕ ಅಲೆಮಾರಿ ಹಾಗೂ ಅರಿ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಿ.ಇ.ಟಿ. ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು) ವ್ಯಾಸಂಗಕ್ಕೆ ಆರ್ಥಿಕ ನೆರವು ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಫೆ. 17ರವರೆಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: ೦08182- 229634ನ್ನು ಸಂಪರ್ಕಿಸುವುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದ ವಿವಿಧ ಹಿಂದುಳಿದ ವರ್ಗಗಳ ನಿಗಮದಿಂದ ಕೌಶಲ್ಯ ತರಬೇತಿ ಬಗ್ಗೆ ಅರ್ಜಿ ಆಹ್ವಾನ

0

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೊಳಪಡುವ (ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ನಿಗಮಗಳಡಿಯಲ್ಲಿ ಬರುವ ಸಮುದಾಯಗಳನ್ನು ಹೊರತುಪಡಿಸಿ) ಹಿಂದುಳಿದ ವರ್ಗಗಳ ಯುವ ಜನರಿಗೆ ಕೌಶಲ್ಯ ಅಭಿವೃದ್ಧಿ ಪಡಿಸಿ ಉದ್ಯೋಗಮುಖಿಯನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ಐಟಿಐಗಳಲ್ಲಿ ಅಲ್ಪಾವಧಿ ಕೋರ್ಸುಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಕೌಶಲ್ಯ ಕರ್ನಾಟಕ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

೧೦ನೇ ತರಗತಿ/ ಪಿಯುಸಿ/ ಡಿಪ್ಲೊಮಾ/ ಪದವಿ/ ಇಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿರುವ, 18 ರಿಂದ 25 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿಯಿರುವುದಿಲ್ಲ.

ಪ್ರವರ್ಗ-2ಎ, 3ಎ, 3ಬಿ ಸೇರಿದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾರ ರೂ. ೮.೦೦ ಲಕ್ಷಗಳಿಗಿಂತ ಕಡಿಮೆಯಿರಬಾರದು.

ಆಸಕ್ತರು ಆಯಾ ನಿಗಮಗಳ ಜಾಲತಾಣಗಳ ಮೂಲಕ ದಿ: 31/03/2023 ರೊಳಗಾಗಿ ಅರ್ಜಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 080 – 22374832/ 9606066389 ಅಥವಾ ಡಿ.ದೇ.ಅ.ಹಿಂ.ವ.ಅ. ನಿಗಮದ ಜಿಲ್ಲಾ ವ್ಯವಸ್ಥಾಪಕರು ಕಚೇರಿ, ಭಾಗ್ಯ ನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಹತ್ತಿರ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ.: 081820-229634 ಗಳನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ -03 ಭೀಮಾಶಂಕರ

0

ಭೀಮಾಶಂಕರ ಈ ಜ್ಯೋತಿರ್ಲಿಂಗದ ಬಗ್ಗೆ ಪ್ರಸ್ತಾಪಿಸುವಾಗ ಭೀಮನ ಪಾತ್ರ ಬರುತ್ತದೆ.

ಆದರೆ ಈ ಭೀಮ ಬೇರೆ ಮತ್ತು ಮಹಾಭಾರತದ ಭೀಮನೇ ಬೇರೆ.
ಇಲ್ಲಿ ನಿರೂಪಿಸುವ ಭೀಮ ಶಿವಪುರಾಣದ ಪ್ರಕಾರ ಒಬ್ಬ ರಕ್ಕಸ.

ಈತ ಕುಂಭಕರ್ಣನ ಮಗ.ತನ್ನ ತಂದೆಯನ್ನ ಸಂಹರಿಸಿದವರು ಶ್ರೀರಾಮನೆಂದು ಕೋಪಗೊಳ್ಳುತ್ತಾನೆ .ಶ್ರೀರಾಮಲಕ್ಷ್ಮಣರೊಂದಿಗೆ ಕಾದಾಡಲು ಬಲಕ್ಕಾಗಿ ಬ್ರಹ್ಮನನ್ನು ಕುರಿತು ದೀರ್ಘ ತಪಸ್ಸು ಮಾಡುತ್ತಾನೆ.

ಅವನ ಕಠಿಣ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಅತ್ಯಧಿಕ ಶಕ್ತಿ ಸಾಮರ್ಥ್ಯವನ್ನ ವರವಾಗಿ ನೀಡುತ್ತಾನೆ. ಜಗತ್ತನಲ್ಲಿ ತನ್ನನ್ನು ಸೋಲಿಸುವವರಿಲ್ಲ ಎಂದು
ಮದಗಜದಂತೆ ಅ ನಾಡಿನ ರಾಜನಾಗಿದ್ದ ಪ್ರಿಯಧರ್ಮನನ್ನೂ ಸೋಲಿಸಿ ಸೆರೆಯಲ್ಲಿಡುತ್ತಾನೆ.

ಸ್ವಯಂ ತಾನೇ ಎಲ್ಲರಿಗಿಂತ ಶ್ರೇಷ್ಠನು ಎಂದು ಪ್ರಜೆಗಳಿಗೆಲ್ಲಾ ಹಿಂಸೆ ಕೊಡಲಾರಂಭಿಸುತ್ತಾನೆ.ಏಳು ಲೋಕಗಳನ್ನೂ ಗೆದ್ದು ದೇವತೆಗಳನ್ನೂ ಪೀಡಿಸುತ್ತಾನೆ. ದೇವತೆಗಳು ಶಿವನನ್ನು ಪ್ರಾರ್ಥಿಸುತ್ತಾರೆ. ಶಿವನು ಪ್ರತ್ಯಕ್ಷನಾಗಿ
ಯೋಚಿಸದಿರಿ,ಭೀಮಾಸುರನಿಗೆ ಅಂತ್ಯಕಾಲ ಸನ್ನಿಹಿತವಾಗಿದೆ ಎಂದು ತಿಳಿಸುತ್ತಾನೆ.

ಇತ್ತ ಸೆರೆಯಲ್ಲಿದ್ದ ಪ್ರಿಯಧರ್ಮ ಮತ್ತು ಆತನ ಪತ್ನಿ ದಕ್ಷಿಣೆ ತಮ್ಮ ಬಿಡುಗಡೆಗಾಗಿ ಶಿವಪೂಜೆಯಲ್ಲಿ ನಿರತರಾಗಿರುತ್ತಾನೆ. ಸೆರೆಮನೆಯ ಸಿಬ್ಬಂದಿ
ಶಿವಪೂಜೆ ನಿಲ್ಲಿಸಲು ಪ್ರಯತ್ನಿಸುತ್ತಾರೆ.ಪ್ರಿಯಧರ್ಮ ಹಠಹಿಡಿದು ಶಿವಪೂಜೆ ಮುಂದುವರೆಸುತ್ತಾನೆ.

ಭೀಮಾಸುರನಿಗೆ ಈ ಸುದ್ದಿ ತಿಳಿಯುತ್ತದೆ.
ಅಲ್ಲಿಗೆ ಬಂದ ಭೀಮಾಸುರ ಶಿವನನ್ನು ಪೂಜೆಮಾಡದಿರಿ ಆವನಿಗಿಂತ ನಾನೇ ಶ್ರೇಷ್ಠ ಎಂದು ಶಿವಪೂಜೆಗೆ ಭಂಗವುಂಟುಮಾಡುವನು.
ಇಲ್ಲ ನಮಗೆಲ್ಲ ಶ್ರೇಷ್ಠನು ಶಿವ.ಅವನ ಕೃಪೆಯಿಂದ ನಮಗೆ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಪೂಜಿಸುತ್ತಿದ್ದೇವೆ ಎಂದು ಪ್ರಿಯಧರ್ಮ
ಉತ್ತರಿಸುತ್ತಾನೆ.

ಕ್ರೋಧಗೊಂಡ ಭೀಮಾಸುರ ಹರಿತ ಖಡ್ಗವೆತ್ತಿ ಪ್ರಿಯಧರ್ಮನನ್ನು ಕೊಲ್ಲಲು ಮುಂದಾಗುತ್ತಾನೆ.ಅಷ್ಟರಲ್ಲೇ ಪತ್ನಿ ದಕ್ಷಿಣೆ ಆರ್ತಳಾಗಿ ಧ್ವನಿಯೆತ್ತಿ ಅಳುತ್ತಾಳೆ.
ತಕ್ಷಣ ಅದೇನು ಮಾಯವೋ ಶಿವಲಿಂಗದಿಂದ ನಾಗಪಾಶವು ಬೀಸುತ್ತಾ ಹೊರಬಂದು ಭೀಮಾಸುರನ ಕರದಲ್ಲಿದ್ದ ಖಡ್ಗವನ್ನು ಪುಡಿಯಾಗುವಂತೆ ಮಾಡುತ್ತದೆ. ಅದಕ್ಕಂಜದ ಭೀಮಾಸುರ ತನ್ನ ಮಾಯೆಯಿಂದ ಅಸುರ ಪಡೆ ನಿರ್ಮಿಸುತ್ತಾನೆ.

ಆಗ ಶಿವನೂ ತನ್ನ ಗಣಗಳನ್ನ ಸೃಷ್ಟಿಸಿ ಯುದ್ಧಮಾಡಿಸುತ್ತಾನೆ. ಸಪ್ತಲೋಕಗಳು ಅಲ್ಲೋಲಕಲ್ಲೋಲವಾಗುವಂತೆ ಯುದ್ಧ ನಡೆಯುತ್ತದೆ. ದೇವತೆಗಳು ಶಿವನ ಸ್ತುತಿಮಾಡಿ ಈ ಕ್ರಿಮಿಯಂತಹ
ಭೀಮಾಸುರನನ್ನ ಸಂಹರಿಸಲು ಇಷ್ಟು ಸಾಹಸವೆ? ಎಂದು ಪ್ರಾರ್ಥಿಸುವರು.

ಯಕ್ಷಣ ಶಿವನು ಬೆಂಕಿಯ ರೂಪದಿಂದ ಬಂದು ಭೀಮಾಸುರನನ್ನ ಭಸ್ಮಮಾಡುವನು. ಹೀಗಾಗಿ ಅಲ್ಲಿನ ಲಿಂಗಕ್ಕೆ ಭೀಮಾಶಂಕರ ಎಂಬ ಅಭಿದಾನವಾಯಿತು. ಲಿಂಗದ ಮೇಲಿಂದ ಬಂದ ಬೆವರ ಹನಿಗಳು ನದಿಯರೂಪ ತಾಳಿ ಹರಿದವು. ಅದೇ ಭೀಮಾನದಿ ಎಂಬ ಹೆಸರಾಯಿತು.

ಪ್ರಸ್ತುತ ಈ ಜ್ಯೋತಿರ್ಲಿಂಗವು ಬೋವಾಗಿರಿಯೆಂಬ ಗುಡ್ಡಪ್ರದೇಶದಲ್ಲಿದೆ.
ಫಂಡರಾಪುರದ ಚಂದ್ರಭಾಗ ನದಿಗೆ ಭೀಮಾನದಿಯು ಮೂಲವಾಗಿದೆ.
ಪೂನಾದಿಂದ 95 ಕಿಮೀ ದೂರದಲ್ಲದೆ.

ಛತ್ರಪತಿ ಶಿವಅಜಿ ಕರೋಸಿ ಎಂಬ ಗ್ರಾಮವನ್ನು ಈ ದೇವಾಲಯಕ್ಕೆ ದಾನಮಾಡಿದ್ದಾರೆ.ಗೋಡೆಗಳ ಮೇಲೆ ರಾಮಾಯಣ,ಕೃಷ್ಣಲೀಲಾ,ಶಿವಲೀಲಾ ಚಿತ್ರಗಳನ್ನ ಬಿಡಿಸಲಾಗಿದೆ.

ಆದಿ ಶಂಕರಾಚಾರ್ಯರು ಈ ಜ್ಯೋತಿರ್ಲಿಂಗ ದರ್ಶನಮಾಡಿದ್ದರೆ.
ಅರಿರಿಂದ ರಚಿತವಾದ ಭೀಮಾಶಂಕರ ಸ್ತುತಿ.

ಯೋಡಾಕಿನೀ ಕಾಸಮಾಜೇ | ನಿಷ್ಯೇವಮಾಣಃ ಪಿಶಿತಾ ಶನೈಶ್ವ|
ಸದೈವ ಭೀಮಾದಿಪದ ಪ್ರಸಿದ್ಧರ | ತಂ ಶಂಕರಂ ಭಕ್ತಹಿತಂ ನಮಾಮಿ||

ಹೊನ್ನಾಳಿಯಲ್ಲಿ ರಾಜ್ಯಮಟ್ಟದ ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಿ

0

ಶ್ರೀ ರಾಮಾನುಜಮಠ, ಹಳೆ ದೇವರ ಹೊನ್ನಾಳಿ, ದಾವಣಗೆರೆ ಸಹಯೋಗದೊಂದಿಗೆ ಗೋಪಾಲಯ್ಯ ಇವರ ಅಧ್ಯಕ್ಷತೆಯಲ್ಲಿ ಫೆ.25 ಹಾಗೂ 26 ರ ಎರಡು ದಿನಗಳ ಕಾಲ ಶ್ರೀ ವೈಷ್ಣವ ಸಮುದಾಯದ ರಾಜ್ಯಮಟ್ಟದ ವಿಕ್ಕಿ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಪಂದ್ಯಾವಳಿಗೆ ಪ್ರವೇಶ ಶುಲ್ಕ 5000, ಸಾವಿರಗಳಾಗಿದ್ದು, ಪ್ರಥಮ ಬಹುಮಾನ 30 ಸಾವಿರ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 20 ಸಾವಿರ ಹಾಗೂ ಆಕರ್ಷಕ ಟ್ರೋಫಿ, ತೃತೀಯ 10 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಿದ್ದು, ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ಬೌಲರ್, ಬ್ಯಾಟ್ಸ್‌ಮನ್, ಆಲ್‌ರೌಂಡರ್ ಪ್ರಶಸ್ತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ 9886242563, 7259557503, 9663765008 ಗೆ ಸಂಪರ್ಕಿಸಲು ಕೋರಲಾಗಿದೆ.

ವೈಷ್ಣವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿಕೊಡಲು ತಿಳಿಸಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ -02 ಶ್ರೀಶೈಲ ಮಲ್ಲಿಕಾರ್ಜುನ

0

ಎರಡನೇ  ಜ್ಯೋತಿರ್ಲಿಂಗ ಶ್ರೀಶೈಲದಲ್ಲಿದೆ. ಒಮ್ಮೆ ಈಶ್ವರ ಪಾರ್ವತಿ ದಂಪತಿಗಳಿಗೆ ಸ್ಕಂದ ಮತ್ತು ಗಣಪತಿ
ಈರ್ವರು ಮಕ್ಕಳಲ್ಲಿ ವಿವಾಹ ಮಾಡುವ ಪ್ರಸ್ತಾಪ ಬಂದಿತು.

ಸ್ಕಂದನು ತನಗೇ ಮೊದಲು ವಿವಾಹ ಮಾಡಿರೆಂದು ತರ್ಕವನ್ನ ಮುಂದಿಟ್ಟನು.
ಆಗ ಈಶ್ವರನು ನೀಮ್ಮೀರ್ವರಲ್ಲಿ ಯಾರು ಶೀಘ್ರ ಈ ಭೂಮಿಯ ಪ್ರದಕ್ಷಿಣೆ ಮುಗಿಸಿ ಬರುವರೋ ಅವರಿಗೇ ಮೊದಲು ವಿವಾಹ ಕಾರ್ಯ ಎಂದು ಹೇಳುತ್ತಾನೆ.

ಕೂಡಲೇ ಸ್ಕಂದನು ನವಿಲೇರಿ ಹೊರಟುಬಿಡುತ್ತಾನೆ.ಗಣಪನು
ಶುಚಿರ್ಭೂತನಾಗಿ ಬಂದು ತಂದೆತಾಯಿಗಳಿಗೆ ಏಳುಸಲ ಪ್ರದಕ್ಷಿಣೆ ಬಂದು ನಮಸ್ಕರಿಸುತ್ತಾನೆ.

ತಂದೆತಾಯಿಗಳಿಗೆ ಮಾಡಿದ ಪ್ರದಕ್ಷಿಣೆಗೆ ಭೂಪ್ರದಕ್ಷಿಣೆಯ ಫಲವಿದೆ ಎಂದೂ ಹೇಳುವನು. ಮೆಚ್ಚಿದ ಶಿವನು ಗಣಪನಿಗೆ ವಿವಾಹ ನೆರವೇರಿಸುತ್ತಾನೆ.

ಅತ್ತ ಭೂಪ್ರದಕ್ಷಿಣೆ ಪೂರೈಸಿ ಬಂದ ಸ್ಕಂದನಿಗೆ ಈ ವಿಚಾರ ತಿಳಿಯುತ್ತದೆ.ವೈರಾಗ್ಯ ಬಂದು ಕ್ರೌಂಚ ಬೆಟ್ಟದಲ್ಲಿ ಕುಳಿತುಬಿಡುತ್ತಾನೆ.
ಹೀಗಾಗಿ ಅಂದಿನಿಂದ ಸ್ಕಂದನಿಗೆ ಕುಮಾರ ಬ್ರಹ್ಮಚಾರಿ ಎಂಬ ಹೆಸರೂ ಬರುತ್ತದೆ.
ಪಾರ್ವತಿಯು ಪುತ್ರ ವ್ಯಾಮೋಹದಿಂದ ಅವನೊಟ್ಟಿಗಿರುತ್ತಾಳೆ.

ಶಿವನೂ ಆಗಾಗ ನೋಡಿಕೊಂಡು ಹೋಗಿಬರುವ ವಾಡಿಕೆ ಇರುತ್ತದೆ. ತಂದೆತಾಯಿಯರಿಂದ ಮೂರು ಯೋಜನ ದೂರವಿರಲು ಸ್ಕಂದನು ನಿರ್ಧರಿಸುತ್ತಾನೆ..

ಹೀಗಾಗಿ ಮಗನಿಗಾಗಿ ಬಂದು ನೆಲಸಿದ್ದ ಶಿಖರದಲ್ಲಿ ತಾಣ ಶ್ರೀಶೈಲ
ಎಂದು ಪ್ರಸಿದ್ಧಿಪಡೆಯುತ್ತದೆ. ಶಿವನನ್ನು ಮಲ್ಲಿಕಾರ್ಜುನ ಎಂದು ಕರೆಯುತ್ತಾರೆ.ಪಾರ್ತಿಗೆ ಭ್ರಮರಾಂಬಿಕೆ ಎಂಬ ಹೆಸರು ಬರುತ್ತದೆ.
ಇಲ್ಲಿ ರಮಣೀಯ ಪರಿಸರವಿದೆ. ಒಂಭತ್ತು ಶಿಖರಗಳು ,ಒಂಭತ್ತು ಪುಣ್ಯನದಿಗಳು,ಒಂಭತ್ತು ನಗರಗಳು,ಒಂಭತ್ತು ಪವಿತ್ರ ಜಲಬಾವಿಗಳು
ಮತ್ತು ಒಂಭತ್ತು ಮಠಗಳ ಪ್ರಮುಖರು ಇಲ್ಲಿದ್ದಾರೆ.

ಶ್ರೀಶೈಲ ಶಿಖರ ದರ್ಶನ ಮಾತ್ರದಿಂದ ಮೋಕ್ಷ ಪ್ರಾಪ್ತಿಯೆಂಬ ಪ್ರತೀತಿಯಿದೆ.

ಇಲ್ಲಿ ಶಿವನು ಜ್ಯೋತಿರ್ಲಿಂಗವಾಗಿ ಜಗತ್ತಿಗೆ ಪ್ರಕಟವಾದ ಬಗ್ಗೆ ಪುಟ್ಟ ಕಥಾನಕವಿದೆ.
ಕೃಷ್ಣಾ ನದಿತೀರದ ಉತ್ತರಭಾಗದಲ್ಲಿದ್ದ ರಾಜ ಚಂದ್ರಗುಪ್ತನ ಮಗಳು
ಚಂದ್ರಾವತಿಯ ಗಮನಕ್ಕೆ ಒಂದು ವಿಚಿತ್ರ ಪ್ರಸಂಗ ಗಮನಕ್ಕೆ ಬರುತ್ತದೆ.

ಪ್ರಯಿನಿತ್ಯವೂ ಒಂದು ಹಸು ಒಂದು ಮಣ್ಣಿನ ಗುಡ್ಡೆಯ ಮೇಲೆ ಹಾಲು ಸುರಿಸಿ ಬರುವುದನ್ನ ನೋಡಿ ಅವಾಕ್ಕಾಗುವಳು. ಅಲ್ಲಿ ಮಣ್ಣಿನ ಗುಡ್ಡೆ ತೆಗೆಸಿದಾಗ ಶಿವಲಿಂಗ ಇರುವುದು ಗೋಚರವಾಗುತ್ತದೆ.
ಅಲ್ಲಿಂದ ಬೇರೆಡೆಗೆ ಲಿಂಗವನ್ನ ಸ್ಥಳಾಂತರಿಸಲು ಮಾಡಿದ ಪ್ರಯತ್ನ ನಿಷ್ಫಲವಾಗುತ್ತದೆ.

ಆ ಸ್ಥಳದಲ್ಲಿಯೇ ಶಿವನ ಅಣತಿ ಪ್ರಕಾರ ಮಲ್ಲಿಗೆ ಹೂವಿನ ಹಾರದಿಂದ ಪೂಜಿಸಿ ಧನ್ಯಳಾಗುತ್ತಾಳೆ.
ಇದೇ ಶ್ರೀಶೈಲದ ಜ್ಯೋತಿರ್ಲಿಂಗ.

ಶ್ರೀಶೈಲ ಶಿಖರ ತಲುಪ ಬೆರಕಾದರೆ ಐದು ಬೆಟ್ಟಗಳನ್ನು ದಾಟಬೇಕು.ಅಲ್ಲಿ ಮನೋಹರವಾದ ನಿಸರ್ಗ ಎಂಥವರನ್ನಾದರೂ ಮಂತ್ರ ಮುಗ್ಧರನ್ನಾಗಿಸುವಂತಿದೆ. ಮಲ್ಲಿಕಾರ್ಜುನನ ಗುಡಿಗೆ ಮುನ್ನ ಶಿಖರೇಶ್ವರ ದೇವಾಲಯವಿದೆ.

ಅಲ್ಲಿ ಸಾಕ್ಷಿಗಣಪತಿ ಮೂರ್ತಿ ಇದೆ.ಒಂದು ಕೈನಲ್ಲಿ ತಾಳೆಗರಿ
ಮತ್ತೊಂದರಲ್ಲಿ ಬರೆಯುವ ಸಾಮಗ್ರಿಯಿದೆ.

ಶ್ರೀಶೈಲದಲ್ಲಿ ಪಾತಾಳಗಂಗೆಯಿದೆ. ಶಿಖರದ ಅಕ್ಕಪಕ್ಕ ಕೃಷ್ಣಾ ನದಿ ಹರಿಯುತ್ತದೆ. ಇಲ್ಲಿಯೇ ಶ್ರೀ ಶಂಕರಾಚಾರ್ಯರು ಮಿಂದು ಶಿವದರ್ಶನ ಮಾಡಿದ್ದಾರೆ. ಮಲ್ಲಿಕಾರ್ಜುನ ಆಲಯವು ವಿಸ್ತಾರವಾಗಿದೆ.ಸುತ್ತ ಇಪ್ಪತ್ತು ಅಡಿ ಎತ್ತರವಿರುವ ಬೃಹದಾಕಾರವಾದ ಗೋಡೆಯಿದೆ.

ಇಲ್ಲಿ ಯಾರು ಬೇಕಾದರೂ ಶಿವಲಿಂಗವನ್ನ ಸ್ಪರ್ಶಿಸಿ ಪೂಜೆ ಮಾಡಬಹುದು.ಜಾತಿಭೇದವಿಲ್ಲ.ಶಿವನನ್ನ ದರ್ಶನಮಾಡಿ ಕೆಲವೇ ಮೆಟ್ಟಲುಗಳನ್ನ ಹತ್ತಿ ನಡೆದರೆ ಭ್ರಮರಾಂಬಿಕೆಯ ದರ್ಶನವೂ ಆಗುತ್ತದೆ.

ಈ ಸ್ಥಳದಲ್ಲಿಯೇ ಶ್ರೀಶಂಕರಾಚಾರ್ಯರಿಗೆ ನರಸಿಂಹ ದರ್ಶನವಾದ ಪ್ರಸಂಗ
ನಡೆದಿರುವುದು. ಶಂಕರರು ಈ ಸ್ಥಳದ ಬಗ್ಗೆ ಶ್ಲೋಕ ರಚಿಸಿದ್ದಾರೆ.

ಶ್ರೀಶೈಲಶೃಂಗೇ ವಿವಿಧಪ್ರಸಂಗೇ | ಶೇಷಾದ್ರಿ ಶೃಂಗೇಪಿ ಸದಾವಸಂತಮ್||
ತಮರ್ಜುನಂ ಮಲ್ಲಿಕ ಪೂರ್ಮೇಕಂ| ನಮಾಮಿ ಸಂಸಾರ
ಸಮುದ್ರ ಸೇತುಂ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಇನ್ನರ್ ವೀಲ್ ಕ್ಲಬ್ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದೆ-ಕವಿತಾ ನಿಯತ್

0

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಮಹಿಳೆಯರನ್ನು ಸ್ವಾಲಂಬಿಗಳನ್ನಾಗಿ ಮಾಡಿದರೆ ಕುಟುಂಬದ ಆರ್ಥಿಕ ಪರಿಸ್ಥಿತಿಯು ಸದೃಢವಾಗುತ್ತದೆ ಎಂದು ಇನ್ನರ್‌ವ್ಹೀಲ್ ಜಿಲ್ಲಾ ಚೇರ‍್ಮನ್ ಕವಿತಾ ನಿಯತ್ ಹೇಳಿದರು.

ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಅಧಿಕೃತ ಭೇಟಿ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರು ಸಾಧನೆ ಮಾಡುವಂತೆ ಪೂರಕ ಸಹಕಾರ ನೀಡಬೇಕು ಎಂದು ತಿಳಿಸಿದರು.

ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯು ಸ್ನೇಹ, ಪ್ರೀತಿ, ಸೇವೆಗಾಗಿ ಸ್ಥಾಪಿತವಾಗಿ ವಿಶ್ವಾದ್ಯಂತ ಲಕ್ಷಾಂತರ ಸದಸ್ಯರನ್ನು ಹೊಂದಿದೆ. ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದು, ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತದೆ ಎಂದರು.
ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯ ನಡೆಸುತ್ತಿದೆ. ಸಮಾಜಮುಖಿ ಆಲೋಚನೆಗಳನ್ನು ಕಾರ್ಯಗಳನ್ನು ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯು ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಮಧುರಾ ಮಹೇಶ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಜತೆಯಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಬಡಮಕ್ಕಳಿಗೆ ಆರ್ಥಿಕ ನೆರವು ನೀಡುವ ಕೆಲಸ ಮಾಡುತ್ತಿದೆ. ಗ್ರಾಮೀಣ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ಇನ್ನರ್‌ವ್ಹೀಲ್ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
ಆರ್ಥಿಕವಾಗಿ ಹಿಂದುಳಿದ ಬೀದಿಬದಿ, ಸೊಪ್ಪು, ತರಕಾರಿ ವ್ಯಾಪಾರಸ್ಥರಿಗೆ ನೆರಳಿಗೆ ಅನುಕೂಲವಾಗುವಂತೆ 8 ಛತ್ರಿಗಳನ್ನು ವಿತರಿಸಲಾಯಿತು.

ಕಾರ್ಯದರ್ಶಿ ಉಮಾ ವೆಂಕಟೇಶ್, ಜಿಲ್ಲಾ ಮಾಜಿ ಚೇರ‍್ಮನ್ ವಾರಿಜಾ ಜಗದೀಶ್, ಸುಧಾ ಪ್ರಸಾದ್, ಭಾರತಿ ಚಂದ್ರಶೇಖರ್, ಮಾಜಿ ಅಧ್ಯಕ್ಷರಾದ ಬಿಂದು ವಿಜಯ್‌ಕುಮಾರ್, ವಿಜಯ ರಾಯ್ಕರ್, ವೀಣಾ ಹರ್ಷ, ನಿಯೋಜಿತ ಜಿಲ್ಲಾ ಚೇರ‍್ಮನ್ ಶಬರಿ ಕಡಿದಾಳ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ, ಶಿಲ್ಪಾ ಗೋಪಿನಾಥ್, ವಾಗ್ದೇವಿ ಬಸವರಾಜ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಿಕ್ಕಮಗಳೂರಿನಲ್ಲಿ ಬೀದಿನಾಯಿ ನಿಯಂತ್ರಣಕ್ಕೆ ಜೆಡಿಎಸ್ ನಗರ ಸಭಾಸದಸ್ಯರ ಒತ್ತಾಯ

0

ಚಿಕ್ಕಮಗಳೂರು ನಗರದ ಶರೀಫ್‌ಗಲ್ಲಿಯ ಬಾಲಕಿಯ ಮೇಲೆ ಬೀದಿನಾಯಿಗಳ ಗುಂಪೊಂದು ದಾಳಿ ನಡೆಸಿರುವ ಪರಿಣಾಮ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ಸಂಬಂಧ ಜೆಡಿಎಸ್ ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಆಸ್ಪತ್ರೆಗೆ ಭೇಟಿ ನೀಡಿ ಐದು ಸಾವಿರ ಧನಸಹಾಯ ಹಾಗೂ ಹಣ್ಣು-ಹಂಪಲು ವಿತರಿಸಿ ಸಾಂತ್ವಾನ ಹೇಳಿದರು.

ಈ ವೇಳೆ ಮಾತನಾಡಿದ ಎ.ಸಿ.ಕುಮಾರಗೌಡ ಬೀದಿನಾಯಿಗಳ ಹಾವಳಿಯಿಂದ ಅನೇಕ ಮಕ್ಕಳು, ವೃದ್ದರು ಹಾನಿಗೊಳಗಾಗುತ್ತಿದ್ದು ಇವುಗಳನ್ನು ನಿಯಂತ್ರಣಕ್ಕೆ ನಗರಸಭಾ ಆಡಳಿತ ಮಂಡಳಿಯು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ ಎಂದರು.

ಕಳೆದ ನಾಲ್ಕು ತಿಂಗಳ ಹಿಂದೆಯೇ ನಗರಸಭಾ ಸಾಮಾನ್ಯ ಸಭೆಯಲ್ಲಿ ಬೀದಿನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ನಿಯಂತ್ರಿಸುವ ಸಲುವಾಗಿ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಆದರೆ ಆಡಳಿತ ಮಂಡಳಿಯು ಬೀದಿನಾಯಿಗಳಿಂದ ಮಕ್ಕಳ ಹಾಗೂ ವೃದ್ದರನ್ನು ರಕ್ಷಿಸಲು ಗಂಭೀರವಾಗಿ ಪರಿಗಣಿಸದೇ ಕಾಟಾಚಾರಕ್ಕೆ ತೀರ್ಮಾನ ಕೈಗೊಂಡು ಮುಂದೂಡುತ್ತಾ ಬಂದಿದೆ ಎಂದು ದೂರಿದರು.

ಇದೀಗ ಬೀದಿನಾಯಿಗಳ ಕಡಿತದಿಂದ ಅಸ್ವಸ್ಥರಾಗಿರುವ ಬಾಲಕಿಗೆ ಏಳು ವರ್ಷಗಳು ತುಂಬಿದೆ. ಮುಖ, ಕೈಕಾಲು ಸೇರಿದಂತೆ ಅನೇಕ ಭಾಗಗಳಲ್ಲಿ ಕಚ್ಚಿರುವ ಪರಿಣಾಮ ಮುಂದಿನ ಬೆಳವಣಿಗೆಯಲ್ಲಿ ಆ ಮಗುವಿನ ಸುಂದರ ಮೊಗವು ವಿರೂಪಗೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ರೀತಿ ನಗರದ ಬಹುತೇಕ ವಾರ್ಡ್ಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಇದುವರೆಗೂ 20-30 ಮಕ್ಕಳಿಗೆ ಕಚ್ಚಿರುವ ಪ್ರಕರಣ ವರದಿಯಾಗಿವೆ.

ಇದನ್ನು ಗಮನಿಸಿ ನಗರಸಭಾ ಪೌರಾಯುಕ್ತರಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಹಾಗೂ ವಾಟ್ಸಪ್ ಮೂಲಕ ಸಂದೇಶ ರವಾನಿಸಿದರೂ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ನಗರಸಭೆಯು ಬೀದಿನಾಯಿಗಳ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ವಹಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ನಾಯಿಗಳ ಹಾವಳಿಯಿಂದ ಮಕ್ಕಳಿಗೆ ತೊಂದರೆಯಾದಲ್ಲಿ ಮಗುವಿನ ಚಿಕಿತ್ಸೆಯ ಪೂರ್ಣ ವೆಚ್ಚ ಹಾಗೂ ಮಗುವಿನ ಮುಖವು ಮೊದಲಿನಂತಾಗುವವರೆಗೂ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಾಲಕಿಯ ಪೋಷಕರು ಮಾತನಾಡಿ ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಔಷಧಿಗಳು ಆಸ್ಪತ್ರೆಯಲ್ಲಿ ದೊರೆಯದೇ ಹೊರಗಡೆ ತರಲಾಗುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರು ವವರಿಗೆ ಬರೆ ಮೇಲೆ ಬರೆ ಎಳೆಯದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೂಡಲೇ ಮುಂಬರುವ ದಿನಗಳಲ್ಲಿ ಮಕ್ಕಳ ಮೇಲೆ ಯಾವುದೇ ಅವಘಡ ಸಂಭಸುವ ಮೊದಲೇ ನಗರಸಭಾ ಆಡಳಿತ ಮಂಡಳಿ ಹಾಗೂ ಪೌರಾಯುಕ್ತರು ಎಚ್ಚೆತ್ತುಕೊಂಡು ಬೀದಿನಾಯಿಗಳ ಹಾವಳಿಯ ವಿಚಾರವನ್ನು ಸೂಕ್ಷ್ಮವಾಗಿ ಪರಿಗಣಿಸಿ ನಿಯಂತ್ರಿಸುವಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾರ್ವಜನಿಕ ಉಪದ್ರ ಉಂಟು ಮಾಡಿದವರ ವಿರುದ್ಧ ಕೇಸು ದಾಖಲು

0

ದೊಡ್ಡಪೇಟೆ ಪೋಲೀಸ್ ಠಾಣೆಯ ಸಿಬ್ಬಂದಿಗಳ ತಂಡವು ಹೊರವಲಯ & ಖಾಲಿ ಸ್ಥಳಗಳಲ್ಲಿ ವಿಷೇಶ ಗಸ್ತು ಮಾಡಿ ಸಸರ್ವಜನಿಕ ಉಪದ್ರ ಮಾಡುವ ಅನುಮಾನಸ್ಪಾದ 25 ಜನರನ್ನು ಠಾಣೆಗೆ ಕರೆತಂದು ಪೂರ್ವಾಪರಗಳನ್ನು ಪರಿಶೀಲಿಸಿದರು.
Public Nuisance ಮಾಡಿದ ವ್ಯಕ್ತಿಗಳ ವಿರುದ್ದ 12 Petty Case ದಾಖಲುಮಾಡಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೆನರಾ ಬ್ಯಾಂಕ್ ವತಿಯಿಂದ ಹೊಳಲೂರಿನಲ್ಲಿ ಟೈಲರಿಂಗ್ ಉಚಿತ ತರಬೇತಿ

0

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರಿನಲ್ಲಿ (ಶಿವಮೊಗ್ಗ ತಾಲ್ಲೂಕು) “ ಟೈಲರಿಂಗ್ – ಡ್ರೆಸ್ ಡಿಸೈನ್ ”
30 ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ನಿರುದ್ಯೋಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ೧18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು, ಗ್ರಾಮೀಣ ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು ಮತ್ತು ೮ನೇ ತರಗತಿ ಉತ್ತೀರ್ಣರಾಗಿರಬೇಕು. ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು.

ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು 13/03/2023 ರಿಂದ ಪ್ರಾರಂಭವಾಗಲಿದ್ದು, ತರಬೇತಿಗೆ ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳನ್ನು ಬರೆದು ಈ ತಕ್ಷಣವೇ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577 216 (ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9743429595, 8660062683, 9449371579, 9481955721

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.