Monday, April 6, 2026
Monday, April 6, 2026
Home Blog Page 1310

ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ

0

ತ್ರಯಂಬಕೇಶ್ವರ

ಬ್ರಹ್ಮಗಿರಿಯಲ್ಲಿ ಗೌತಮ ಮುನಿಗಳು ಪತ್ನಿ ಅಹಲ್ಯೆಯೊಂದಿಗೆ ಆಶ್ರಮದಲ್ಲಿದ್ದರು.ತಪಸ್ಸು,ಯಾಗ ,ಯಜ್ಞ ಗಳು ಯಥೇಚ್ಛ ನಡೆಯುತ್ತಿದ್ದವು.
ಆ ದೇಶದಲ್ಲಿ ಇದ್ದಕ್ಕಿದ್ದಂತೆ ಮಳೆ ಹೋಗಿ ಬರಗಾಲ ಬಂದಿತು. ಕುಡಿಯುವ ನೀರಿಗೆ ತೊಂದರೆಯಾಯಿತು. ಗೌತಮರು ವರುಣನನ್ನ ಪ್ರಾರ್ಥಿಸಿದರು.

ಆಗ, ವರುಣನು ನಾನು ಭಗವದಾಧೀನ. ಆತನ ಅಪ್ಪಣರಯಿಲ್ಲದೇ
ಏನೂ ಮಾಡೆನು ಎಂದು ತನ್ನ ಅಸಹಾಯಕತೆಯನ್ನ ವ್ಯಕ್ತಪಡಿಸುವನು.
ಗೌತಮರ ಕಷ್ಅವನ್ನ ರ‍್ಥಮಾಡಿಕೊಂಡ ವರುಣದೇವನು ನೀವು ಒಂದು ಕೊಳ ನರ‍್ಮಾಣ ಮಾಡಿರಿ.ಅದನ್ನು ತುಂಬುತ್ತೇನೆ.ಮತ್ತೆಂದೂ ಅದು ಬರಿದಾಗದು ಹಾಗೆ ಇರುತ್ತದೆ.ಅದು ಗೌತಮತರ‍್ಥ ಎಂದು ಪ್ರಸಿದ್ಧವಾಗುತ್ತದೆ ಎಂದು ಹೇಳಿದನು. ಗೌತಮರು ನರ‍್ಮಿಸಿದ ಕೊಳದಲ್ಲಿ ವರುಣ ಮಳೆ ಸುರಿಸಿ ತುಂಬುವಂತೆ ಮಾಡಿದ. ಕ್ರಮೇಣ ಅಲ್ಲಿನ ನೀರಿನ ಆಸರೆಗೆಂದು ಬೇರೆ ಬೇರೆ ಋಷಿ ದಂಪತಿಗಳು ಆ ಪ್ರದೇಶದ ಸುತ್ತ ವಾಸಮಾಡತೊಡಗಿದರು.

ವಿಚಿತ್ರ ಸಂಗತಿಯೆಂದರೆ ಗೌತಮರ ಮಡದಿ ಅಹಲ್ಯೆ ತಮ್ಮ ಶಿಷ್ಯರಿಗೆ ನೀರು ತರಲು ಹೇಳುತ್ತಾಳೆ. ಶಿಷ್ಯರು ಹೋದಾಗ ಬೇರೆ ಋಷಿಪತ್ನಿಯರು ಆಕ್ಷೇಪಿಸುತ್ತಾರೆ. ಕೊನೆಗೆ ಈ ಸಂಗತಿ ಯಾವ ಹಂತ ತಲುಪುತ್ತೆದೆಂದರೆ
ಗೌತಮರನ್ನೇ ಇಲ್ಲಿಂದ ಹೊರಗೆಹೋಗುವ ಉಪಾಯವನ್ನ ಆ ಅನ್ಯ ಋಷಿ ಸಂಸಾರಗಳು ಯೋಚಿಸುತ್ತವೆ.ಗಣಪತಿಯನ್ನ ಬರಮಾಡಿಕೊಂಡು ಸಮಸ್ಯೆ ಬಿನ್ನವಿಸುವರು. ಆಶ್ರಯಕೊಟ್ಟವರಿಗೇ ಅಪಕಾರ ಮಾಡುತ್ತಿದ್ದೀರಿ ಎನ್ನುತ್ತಾನೆ.
ಇದರಿಂದ ಗೌತಮರಿಗೇ ಒಳಿತಾಗುವುದೆಂದು ಉಪಾಯಹೂಡುವನು.

ತನ್ನ ಗಣದ ರ‍್ವನನ್ನು ಹಸುವಾಗಿಮಾಡಿ ಗೌತಮರ ಆಶ್ರಮದತ್ತ ಕಳಿಸುತ್ತಾನೆ. ಅದನ್ನು ಕಂಡ ಗೌತಮರಯ ಹುಲ್ಲನ್ನು ಹಸುವಿನೆಡೆಗೆ ಹಾಕುತ್ತಾರೆ.ಅದು ತಾಗಿದ್ದೇ ತಡ ಹಸು ಅಸು ನೀಗುತ್ತದೆ.ಗೋಹತ್ಯಾ ದೋಷ ಬಂತೆಂದು ಗೌತಮರು ವಿಹ್ವಲರಾಗುತ್ತಾರೆ.
ಹೀಗೆ ಪರಿಹಾರದ ಬಗ್ಗೆ ಕೇಳಿದಾಗ ಬ್ರಹ್ಮಗಿರಿಯನ್ನು ಹನ್ನೊಂದು ಸಲ ಪ್ರದಕ್ಷಿಣೆ ಬರಬೇಕು.ಇಲ್ಲಿಗೆ ಗಂಗೆಯನ್ನ ಬರಮಾಡಕೊಂಡು ನಿಮ್ಮ ದೇಹವನ್ನು ಪವಿತ್ರಗೊಳಿಸಿಕೊಳ್ಳಬೇಕೆಂದು ಹೇಳಲಾಗುತ್ತದೆ.
ಗೌತಮರು ಶಿವನನ್ನು ಪ್ರರ‍್ಥಿಸುತ್ತಾರೆ.ಶಿವನು ಪ್ರತ್ಯಕ್ಷನಾಗಿ ಮುನಿಗಳ
ಇಷ್ಟರ‍್ಥ ನೆರವೇರಿಸುತ್ತಾನೆ.ಶಿವನ ಅಣತಿಯಂತೆ ಗಂಗೆ ಅಲ್ಲಿಗೆ ಬಂದು
ಗೌತಮರನನ್ನ ಪವಿತ್ರಗೊಳಿಸುತ್ತಾಳೆ

ಪರಶಿವನು ಇಲ್ಲಿ ಜ್ಯೋತರ‍್ಲಿಂಗವಾಗಿದ್ದರೆ ತಾನೂ ಇರುವುದಾಗಿ ಗಂಗೆ ತನ್ನ ಇಚ್ಛೆ ವ್ಯಕ್ತಪಡಿಸುವಳು.ಹಾಗೆಂದು ಅಲ್ಲಿ ಪರಶಿವನು ತ್ರಿಮರ‍್ತಿಗಳ ಅಸ್ತಿತ್ವ
ಸಾರಲು ಲಿಂಗರೂಪದಲ್ಲಿರದೇ ಮೂರು ಗುಂಡುಗಳ ರೂಪದಲ್ಲಿದೆ.
ಹೀಗೆ ತ್ರ‍್ಯಯಂಬಕೇಶ್ವರನೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಒಂದು ಗುಂಡಿನ ಕೆಳಗಿಂದ ಗಂಗೆ ಹರಿದು ಬರುವುದನ್ನ ಕಾಣಬಹುದು.

ಮಹಾರಾಷ್ಟ್ರದ ನಾಸಿಕ್ ನಿಂದ 28 ಕಿಮೀ ದೂರದಲ್ಲಿ ಅರಣ್ಯ ಪ್ರದೇಶದಲ್ಲಿದೆ. ಆಲಯದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ಚಿತ್ರಗಳನ್ನ ಕೆತ್ತಲಾಗಿದೆ.ಮಹಾಮೃತ್ಯುಂಜಯ ಮಂತ್ರವನ್ನ ಇಲ್ಲಿಗೆ ಬರುವವರೆಲ್ಲ ತಮಗೆ ಅರಿವಾಗದಂತೇ ಜಪಿಸುವರು.

ತ್ರ‍್ಯಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿರ‍್ಧನಂ
ರ‍್ವಾರುಕಮಿವ ಬಂಧನಾನ್ಮೃತ್ಯರ‍್ಮುಕ್ಷೀಯ ಮಾಮೃತಾತ್.

ಇಲ್ಲಿನ ಅಹಲ್ಯೆ ಗುಹೆಯಲ್ಲಿ 100 ಶಿವಲಿಂಗಗಳನ್ನ ಕೆತ್ತಲಾಗಿದೆ.
ಬ್ರಹ್ಮಗಿರಿಯಲ್ಲಿ ಕೇದಾರೇಶ್ವರ, ಗೌತಮೇಶ್ವರ, ತ್ರಿಸಂಧ್ಯಾದೇವಿ,ಭುವನೇಶ್ವರಿ, ದತ್ತಾತ್ರೇಯ, ಕಾಲಭೈರವ ದೇವಾಲಗಳಿವೆ.ಬ್ರಹ್ಮಗಿರಿಯೇ ಗೋದಾವರಿ ಉಗಮಸ್ಥಾನ.ಇಲ್ಲಿ ಹನ್ನೆರೆಉ ರ‍್ಷಕ್ಕೊಮ್ಮೆ ಕುಂಭಮೇಳ ಜರುಗುತ್ತದೆ.
ಪ್ರತೀರ‍್ಷ ಕರ‍್ತೀಕ ಹುಣ್ಣಿಮೆ ರಥೋತ್ಸವ ನಡೆಯುತ್ತದೆ.

ಶ್ರೀಶಂಕರಾಚರ‍್ಯರು ತ್ರಯಂಬಕೇಶ್ವರನನ್ನ ಸ್ತುತಿಸಿದ ಶ್ಲೋಕ

ಸಹ್ಯಾದ್ರಿಪಾಶ್ವೇಪಿ ತಟೇ ರಮಂತಂ
ಗೋದಾವರೀತೀರ ಪವಿತ್ರದೇಶೇ |
ಯದ್ರ‍್ಶನಾತ್ಪಾತಕ ಜಾತ ನಾಶಃ ,ಪ್ರಜಾಯತೇ ತ್ರಯಂಬಕೆಮೀಶನೀಡೆ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪುಸ್ತಕಮಳಿಗೆಗಳು ಜಿಜ್ಞಾಸುಗಳ ಚರ್ಚಾತಾಣವಾಗಬೇಕು- ಪ್ರೊ.ಗುರುರಾಜ ಕರ್ಜಗಿ

0

ಶಿವಮೊಗ್ಗ:
ಯಾವುದೇ ಪುಸ್ತಕ ಮಳಿಗೆಗಳು ಕೇವಲ ಮಳಿಗೆಗಳಾಗಿ ಉಳಿಯಬಾರದು.ಅದು ಸದಾ ಕ್ರಿಯಾಶೀಲ ಚಟುವಟಿಕೆಗಳ, ಬಿಜ್ಞಾಸುಗಳ ಚರ್ಚಾತಾಣವಾಗಬೇಕು. ಸಾಹಿತಿಗಳು, ಚಿಂತಕರ ಸಂವಾದ ಕೇಂದ್ರಗಳಾಗಬೇಕು.ಆಗ ಮಾತ್ರ ಆ ಮಳಿಗೆಯಲ್ಲಿನ ಆತ್ಮ ಜಾಗೃತವಾಗುತ್ತದೆ.ಪದೇ ಪದೇ ಸೇರಬೇಕು ಎಂಬ ತವಕಉಂಟಾಗುತ್ತದೆ ಎಂದು ಹೆಸರಾಂತ ವಾಗ್ಮಿ ಗುರುರಾಜ ಕರ್ಜಗಿ ಬಣ್ಣಿಸಿದರು.

ಶಿವಮೊಗ್ಗದ ಡಯಾನಾ ಬುಕ್‌ಗ್ಯಾಲರಿಗೆ ಭೇಟಿ ನೀಡಿ, ಅಲ್ಲಿಯ ಚಟುವಟಿಕೆಗಳನ್ನು ಗಮನಿಸಿ, ಮೆಚ್ಚುಗೆಯ ಮಾತುಗಳನ್ನಾಗಡಿದ ಅವರು, ತಾಯಿ ಶಾರದೆಯ ದೇವಾಲಯ. ಇಲ್ಲಿರುವ ಪ್ರತೀ ಪುಸ್ತಕಗಳು ಸಹ ಆ ದೇವಿಯನ್ನು ಪೂಜಿಸುವ ಸಾಮಗ್ರಿಗಳು.ಈ ಪೂಜೆ ನಿತ್ಯ ನಿರಂತರವಾಗಿರಲಿ ಎಂದು ಆಶಿಸಿದರು.

ವಿಶಾಲ ಶ್ರೇಣಿಯ ಈ ಪುಸ್ತಕ ಮಳಿಗೆ ಓದುಗರಲ್ಲಿಆಸಕ್ತಿಯನ್ನು ಉದ್ದೀಪನಗೊಳಿಸುವಂತಿದೆ ಎಂದಅವರು, ಇಂದುಜನರಲ್ಲಿ ಮೊಬೈಲ್ ಬಳಕೆ ತನ್ನ ಪರಾಕಾಷ್ಟೆಯನ್ನುತಲುಪಿಯಾಗಿದೆ. ಹೀಗಾಗಿ ಮುಂದಿನ ದಿನಮಾನಗಳಲ್ಲಿ ಪುಸ್ತಕ ಅನಿವಾರ್ಯ-ಅಗತ್ಯವಾಗಬಹುದು.ಆಗ ಖಂಡಿತವಾಗಿಯೂಓದುಗರ ಸಂಖ್ಯೆ ಹೆಚ್ಚುತ್ತದೆ ಎಂದರು.

ತಮ್ಮಜನಪ್ರಿಯ ಕರುಣಾಳು ಬಾ ಬೆಳಕೆ ಪುಸ್ತಕ ಮಾರಾಟದಿಂದ ಬರುವ ಹಣವನ್ನು ಸ್ವಂತಕ್ಕೆ ಬಳಸುತ್ತಿಲ್ಲ. ಬದಲಾಗಿ ಅದನ್ನು ಟ್ರಸ್ಟ್ ಗೆ ನೀಡಿ ಆ ಮೂಲಕ ಸಮಾಜಮುಖಿಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದ ಅವರು, ಪ್ರಸ್ತುತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತಾಗಿ ಪುಸ್ತಕ ರಚನೆಯಲ್ಲಿತೊಡಗಿಕೊಂಡಿರುವುದಾಗಿ ಹೇಳಿದರು.

ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಡಯಾನಾ ಬುಕ್‌ಗ್ಯಾಲರಿಯಲ್ಲಿ ಕಳೆದ ಅವರು, ಕೆಲವು ಪುಸ್ತಕಗಳನ್ನು ಖರೀದಿಸಿದರು.

ಈ ಸಂದರ್ಭದಲ್ಲಿ ಡಯಾನಾ ಬುಕ್‌ಗ್ಯಾಲರಿಯ ಮಾಲೀಕರಾದ ಕೆ. ಎಲ್. ಈಶ್ವರ್ (ಡಯಾನಾ), ಕಮಲಾ ನೆಹರೂಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ಎಸ್. ನಾಗಭೂಷಣ ಸೇರಿದಂತೆ ಅನೇಕ ಓದುಗರು, ಡಯಾನಾ ಬುಕ್‌ಗ್ಯಾಲರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಹಿಳೆಯರ ಆರೋಗ್ಯ ಮತ್ತು ವಿಕಸನಕ್ಕೆ ಹೆಚ್ಚಿನ ಆದ್ಯತೆ-ಚೈತ್ರ ಸಿ ಗೌಡ

0

ಸಮಾಜಮುಖಿ ಕೆಲಸಗಳೊಂದಿಗೆ ಮಹಿಳೆಯರ ಆರೋಗ್ಯ ಮತ್ತು ಅವರ ವೈಯಕ್ತಿಯ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಜೆಸಿಐ ಮಲ್ನಾಡ್‌ನ ನೂತನ ಅಧ್ಯಕ್ಷೆ ಚೈತ್ರ ಸಿ ಗೌಡ ಹೇಳಿದರು.

ಚಿಕ್ಕಮಗಳೂರಿನ ಗ್ಲಾಸ್‌ಹೌಸ್‌ನಲ್ಲಿ ಆಯೋಜನೆಗೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾಂಭದಲ್ಲಿ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಸಾರ್ವಜನಿಕ ವಲಯದಲ್ಲಿ ಸದಾ ಸಮಾಜಮುಖಿ ಕೆಲಸಗಳಿಂದ ಸಕ್ರಿಯರಾಗಿ ಚಿಕ್ಕಮಗಳೂರು ಜನರ ಕಷ್ಟಗಳಿಗೆ ಮತ್ತು ವಿಶೇಷವಾಗಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಹಾಗೂ ಅವರ ವೈಯಕ್ತಿಕ ವಿಕಸನಕ್ಕೆ ಹೆಚ್ಚಿನ ಆಧ್ಯತೆ ನೀಡಲು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಚಟುವಟಿಕೆಗಳನ್ನು ರೂಪಿಸಿ ಚಿಕ್ಕಮಗಳೂರಿನ ಜೆಸಿಐ ಮಲ್ನಾಡ್ ಪ್ರಪಂಚದಾದ್ಯಂತ ಮಾದರಿಯಾಗುವಂತೆ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಸಭಾಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಅವರು ಮಾತನಾಡಿ ಜೆಸಿಐ ಸಂಸ್ಥೆಯಿಂದ ನಮ್ಮ ನಗರದಲ್ಲಿ ಉತ್ತಮ ಜನಪರ ಸೇವೆಗಳು ಸಿಗುವಂತಾಗಲಿ ಎಂದರು.

ಸಮಾಜ ಸೇವಕಿ ಪಲ್ಲವಿ ಸಿ.ಟಿ ರವಿ ಮಾತನಾಡಿ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿರುವ ಚೈತ್ರರನ್ನು ಅಭಿನಂದಿಸಿ ಮಹಿಳೆಯರ ಬಗೆಗೆ ವಿಶೇಷ ಕಾಳಜಿ ವಹಿಸಿ ಅವರ ಏಳಿಗೆಗೆ ಶ್ರಮಿಸುವಂತಕ ಕಾರ್ಯಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.

ಕೃಷಿ ಜಂಟಿ ನಿರ್ದೇಶಕರಾದ ಜೆಸಿಐನ ತಿರುಮಲೇಶ್‌ರವರು ಜೆಸಿಐನ ಕಾರ್ಯವೈಖರಿಯ ಬಗ್ಗೆ ಹಾಗೂ ಜೆಸಿಐನ ಸಮಾಜಮುಖಿ ಕಾರ್ಯಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಜೆಸಿಐನ ಪೂರ್ವಾಧ್ಯಕ್ಷರಾದ ಗಿರಿಧರ್ ರಾಜ್ ಅರಸ್, ವಲಯ ಅಧ್ಯಕ್ಷರಾದ ಯಶಸ್ವಿನಿ, ಪೂರ್ವ ವಲಯಾಧ್ಯಕ್ಷರಾದ ಸಮಥ ನವೀನ್ ಮಿಸ್ಕಿತ್, ವಲಯ ಉಪಾಧ್ಯಕ್ಷರಾದ ಚರಣ್‌ರಾಜ್, ಸಂಸ್ಥಾಪಕ ಅಧ್ಯಕ್ಷರಾದ ಅನಿಲ್ ಆನಂದ್,ಕಾರ್ಯದರ್ಶಿ ಕೋಮಲ, ವಲಯ ಉಪ ಪೂರ್ವಾಧ್ಯಕ್ಷರಾದ ವಿಜಯ್ ಕುಮಾರ್, ಹರ್ಷವರ್ಧನ್, ರಘುನಂದನ್, ಇಂದ್ರೇಶ್, ಗುರುಮೂರ್ತಿ ನಾಡಿಗ್, ಜೆಜೆಸಿ ಆಯುಶ್, ಪ್ರಿಯಾ ಅನಿಲ್ ಮುಂತಾದವರು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮುಖ್ಯಮಂತ್ರಿಗಳಿಂದ ಆಚಾರ್ಯತ್ರಯ ಭವನದ ಉದ್ಘಾಟನೆ

0

ಶಿವಮೊಗ್ಗದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಿರ್ಮಿಸಲಾದ ಆಚಾರ್ಯ ತ್ರಯ ಭವನ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿ ಗಳಾದ ಬಸವರಾಜ್ ಬೊಮ್ಮಾಯಿ ರವರು ಶಾಸಕ ಕೆಎಸ್ ಈಶ್ವರಪ್ಪ ನವರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ವಾನ್ ಜೋಯಿಸ್ ಶಂಕರಾನಂದ ಮತ್ತು ವಿದ್ವಾನ್ ಮಹಿಪತಿ ಜೋಯಿಸ್ ಆಚಾರ್ಯ ತ್ರಯರ ಭಾವ ಚಿತ್ರ ನೀಡಿ ಅಭಿನಂದಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಎನ್ಎಸ್ ಯು ಐ ವಿದ್ಯಾರ್ಥಿಗಳಲ್ಲಿ ರಾಜಕೀಯ ಜಾಗೃತಿ ಬೆಳೆಸುತ್ತದೆ- ಡಿ.ಕೆ.ಶಿವಕುಮಾರ್

0

ಎನ್.ಎಸ್.ಯು.ಐ. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವುದಲ್ಲದೇ ಸಮಾಜದಲ್ಲಿ ವ್ಯಕ್ತಿಗತವಾಗಿ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶಿವಮೊಗ್ಗದ ಇಂದಿರಾಗಾಂಧಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಿಲ್ಲಾ ಎನ್.ಎಸ್.ಯು.ಐ. ಕಚೇರಿ ಉದ್ಘಾಟಿಸಿ ಮಾತನಾಡಿದರು.
ನಾನೂ ಕೂಡ ಎನ್.ಎಸ್.ಯು.ಐ.ನಿಂದ ರಾಜಕೀಯ ಜೀವನ ಆರಂಭಿಸಿದೆ. ಇಂದು ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದೇನೆ. ಇದಕ್ಕೆ ಕಾರಣ ವಿದ್ಯಾರ್ಥಿ ದೆಸೆಯಲ್ಲಿಯೇ ನನ್ನಲ್ಲಿ ರಾಜಕೀಯ ಪ್ರಜ್ಞೆ ಮೂಡಿದ್ದು ಎಂದ ಅವರು, ಎನ್.ಎಸ್.ಯು.ಐ. ದೇಶದ ಮುಂದಿನ ನಾಯಕರುಗಳನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೇರೆಲ್ಲೂ ಎನ್.ಎಸ್.ಯು.ಐ. ಇಷ್ಟು ಸುಸಜ್ಜಿತ ಕಚೇರಿ ಹೊಂದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರು ಸಕ್ರಿಯವಾಗಿದ್ದು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ನಾನೂ ಕೂಡ ಕಳೆದ 43 ವರ್ಷಗಳ ಹಿಂದೆ ಎನ್‍ಎಸ್‍ಯುಐ ಮೂಲಕವೇ ರಾಜಕೀಯ ಜೀವನ ಆರಂಭಿಸಿದ್ದೆ. ಯಾರು ಎನ್.ಎಸ್.ಯು.ಐ.ನಿಂದ ಬಂದಿದ್ದಾರೋ ಅವರು ಎಂದೂ ಕಾಂಗ್ರೆಸ್ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಹಾಗೆಯೇ ಪಕ್ಷದ ಬೇರುಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ಇಂದು ಎನ್‍ಎಸ್‍ಯುಐ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಬೇಕು. ಜೊತೆ ಜೊತೆಗೇ ವಿದ್ಯಾಭ್ಯಾಸದಲ್ಲೂ ತೊಡಗಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ಮಾಜಿ ಸೂಡಾ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಯಾಕೆ ಮಾಡಿದರೆಂಬ ಬಗ್ಗೆ ಬಹುತೇಕ ಯುವಕರಿಗೆ ಗೊತ್ತಿಲ್ಲ. ಇಂದು ಮೋದಿ ಸರ್ಕಾರ ಎಲ್ಲ ರಂಗಗಳನ್ನೂ ಖಾಸಗೀಕರಣ ಮಾಡಿ ನಿರುದ್ಯೋಗ ಸೃಷ್ಟಿಸುತ್ತಿದೆ. ಇದು ಇನ್ನಷ್ಟು ಹೆಚ್ಚಾಗುತ್ತಾ ದೇಶವನ್ನು ಅಧೋಗತಿಗೆ ತಳ್ಳುತ್ತದೆ. ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುವಾದದ ಮೂಲಕ ಬಡವರ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸುವುದೇ ರಾಹುಲ್ ಅವರ ಯಾತ್ರೆಯ ಉದ್ದೇಶವಾಗಿತ್ತು. ಇಂದಿನ ದಿನಮಾನಗಳಲ್ಲಿ ರಾಹುಲ್ ಅವರಿಗೆ ರಾಜಕೀಯ ಶಕ್ತಿ ತುಂಬುವ ಮೂಲಕ ನಿಮ್ಮ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕಬೇಕು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ ಶುಭ ಕೋರಿದರು. ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಹೆಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಮಾಜಿ ಸಂಸದ ಉಗ್ರಪ್ಪ, ಎನ್.ಎಸ್.ಯು.ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಮಾಜಿ ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಮುಖಂಡರಾದ ವಿಜಯಕುಮಾರ್ (ದನಿ), ಕೆ.ದೇವೇಂದ್ರಪ್ಪ, ಸಿ.ಜಿ. ಮಧುಸೂದನ್, ಕೆ. ಚೇತನ್, ಮಹಮ್ಮದ್ ನಿಹಾಲ್ ಮುಂತಾದವರಿದ್ದರು.
ಕಾರ್ಯಾಲಯ ಉದ್ಘಾಟನೆಗೆ ‘ಪ್ರಜಾಧ್ವನಿ ಯಾತ್ರೆ’ಯ ವಾಹನದಲ್ಲಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍ರನ್ನು ಡೊಳ್ಳು ಬಾರಿಸಿ, ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿ, ಎನ್.ಎಸ್.ಯು.ಐ. ಕಾರ್ಯಕರ್ತರು ಘೋಷಣೆ ಕೂಗಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಗರಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆಗೆ ರಾಜ್ಯ ಸಂಪುಟ ಒಪ್ಪಿಗೆ

0

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಇಂದಿನ‌ ಸಚಿವ ಸಂಪುಟ ಅಸ್ತು ಎಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಇಂದಿನ ಸಚಿವ ಸಂಪುಟದಲ್ಲಿ
ಕೃಷಿ ಸಂಶೋಧನಾ ಕೇಂದ್ರದಲ್ಲಿ, ಹೊಸ‌ಕೃಷಿ ಕಾಲೇಜು ಸ್ಥಾಪಿಸಲು ಆಡಳಿತಾತ್ಮ‌ಕ ಅನುಮೋದನೆ ದೊರೆತಿದೆ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ಕೃಷಿ ಕಾಲೇಜು”, ಸ್ಥಾಪನೆಗೆ ಅಗತ್ಯ ಮೂಲಸೌಕರ್ಯ/ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲು ‘ಜಿಲ್ಲಾ ಗಣಿಗಾರಿಕೆ ನಿಧಿ’ಯಿಂದ ರೂ.5 ಕೋಟಿ ಅನುದಾನವನ್ನು ಒದಗಿಸಲಾಗಿದೆ.
ಒದಗಿಸಲಾಗುವ 5 ಕೋಟಿ ರೂಪಾಯಿಗಳ ಅನುದಾನ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 2022- 23ನೇ ಆರ್ಥಿಕ ಸಾಲಿಗೆ ಅನುಮತಿಸಿರುವ 20 ಕೋಟಿ ರೂಪಾಯಿಗಳ ಅನುದಾನದಲ್ಲಿ ಕಾಲೇಜಿಗೆ ಅಗತ್ಯವಿರುವ ಮೂಲಸೌಲಭ್ಯಗಳನ್ನು/ ಕಾಮಗಾರಿಗಳನ್ನು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲೋಕೋಪಯೋಗಿ ಇಲಾಖೆ ಮೂಲಕ ಅನುಷ್ಠಾನಗೊಳಿಸಲು ಹಾಗೂ 2022-23ನೇ ಶೈಕ್ಷಣಿಕ ಸಾಲಿನಿಂದಲೇ 30 ವಿದ್ಯಾರ್ಥಿ ಪ್ರಮಾಣದೊಂದಿಗೆ ಸ್ಥಾಪಿಸಿ, ಸಂಶೋಧನಾ ಕೇಂದ್ರ ಮತ್ತು ಆಸುಪಾಸಿನ ಸಂಶೋಧನಾ ಕೇಂದ್ರಗಳಿಂದ ಹಾಗೂ ಡಿಪ್ಲೋಮಾ ಕಾಲೇಜಿನಲ್ಲಿ ಲಭ್ಯವಿರುವ ಬೋಧಕ/ಬೋಧಕೇತರ ಸಿಬ್ಬಂದಿಯ ಸೇವೆಯನ್ನು ರಿಡಿಪ್ಲಾಯ್‌ಮೆಂಟ್/ನಿಯೋಜನೆ/ಅತಿಥಿ ಉಪನ್ಯಾಸದಿಂದ ಬಳಸಿಕೊಂಡು “ನೂತನ ಕೃಷಿ ಕಾಲೇಜನ್ನು ಪ್ರಾರಂಭಿಸುವುದಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭದ್ರಾವತಿ ವಿಐಎಸ್ಎಲ್ ಕಾರ್ಮಿಕರ ನಿಯೋಗದಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ

0

ವಿ.ಐ.ಎಸ್.ಎಲ್ ಸಂಸ್ಥೆಯ ಕಾರ್ಮಿಕರ ನಿಯೋಗವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಆಯನೂರು ಮಂಜುನಾಥ್, ಸಂಸದ ಬಿ.ವೈ.ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

ಜಾತಿ ಆಧಾರಿತ ಹೇಳಿಕೆಗಳಿಗೆ ಜನ ಕಿಮ್ಮತ್ತು ಕೊಡುವುದಿಲ್ಲ- ಬಸವರಾಜ ಬೊಮ್ಮಾಯಿ

0

ಕರ್ನಾಟಕ ರಚನೆಯಾಗಿ 75 ವರ್ಷಗಳಾಗಿವೆ. ಜನ ಜಾತಿ ಆಧಾರದ ಮೇಲೆ ಮಾಡಿದ ಹೇಳಿಕೆಗಳಿಗೆ ಕಿಮ್ಮ ತ್ತು ನೀಡುವುದಿಲ್ಲ. ಆದ್ದರಿಂದ ಜನರಿಗೆ ಹಿಡಿಸದೇ ಇರುವುದನ್ನು ಮಾತನಾಡಬಾರದು. ಇಂಥ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎನ್ನುವುದು ನನ್ನ ಭಾವನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಜಾತಿ ಆಧಾರಿತ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ಜನ ನಮ್ಮ ಕಾರ್ಯವೈಖರಿಯನ್ನು, ನೋಡಿ ತೀರ್ಮಾನ ಮಡುತ್ತಾರೆ. ಅವರ ಬದುಕಿಗೆ ಏನು ಸಹಾಯ ಮಾಡಿದ್ದಾರೆ, ಯಾವ ಸರ್ಕಾರ ಸಹಾಯ ಮಾಡಿದೆ, ಅನುಕೂಲವಾಗಿದೆ ಎನ್ನುವುದರ ಆಧಾರದ ಮೇಲೆ ಮತ ಹಾಕುತ್ತಾರೆ.

ಮತದಾರರು ಬಹಳ ಬುದ್ದಿವಂತರು, ಪ್ರಬುದ್ಧರು. ಮತದಾರರ ಮುಂದೆ ಸಣ್ಣ ಪುಟ್ಟ ಜಾತಿ ಮಾತುಗಳು ಯಾವುದೇ ಪ್ರಯೋಜನವಾಗುವುದಿಲ್ಲ. ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಹೇಳಿಕೆಗೆ ¨ಬದ್ಧ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ ಬದ್ಧರಾಗಿದ್ದರೆ ಒಳ್ಳೆಯದು ಎಂದರು.

ಬಿಜೆಪಿಯಲ್ಲಿ ಈ ಹೇಳಿಕೆಗಳಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಮತದಾರರಲ್ಲಿ ಗೊಂದಲವಿಲ್ಲ, ಬಿಜೆಪಿಯಲ್ಲಿ ಗೊಂದಲ ಏಕೆ ಇರುತ್ತದೆ ಎಂದರು.

ಶರಾವತಿ ಸಂಸತ್ರಸ್ತರ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಸ್ತಾವನೆಗಳನ್ನು ಪಡೆದು ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಹಳ ವರ್ಷಗಳ ಬೆಡಿಕೆ ಅಂತಿಮ ಪರಿಹಾರ ನೀಡಲು ಎಲ್ಲಾ ಸಾಧ್ಯತೆಗಳಿವೆ ಎಂದರು.

ಸಿರಿಯಾ ಮತ್ತು ಟರ್ಕಿಯಲ್ಲಿ ನಡೆದ ಭೂಕಂಪದಲ್ಲಿ ಸಂಸತ್ರಸ್ತರಾಗಿರುವ ಕನ್ನಡಿಗರಿಗೆ ಸಹಾಯ ಮಾಡಲು ಈಗಾಗಲೇ ಸಹಾಯವಾಣಿ ಸ್ಥಾಪನೆಯಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಸಾರ್ವಜನಿಕರಿಗೆ ಬಂಧುಮಿತ್ರರ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ ಸಂತ್ರಸ್ತರನ್ನು ಪತ್ತೆಹಚ್ಚಲು ಕ್ರಮ ವಹಿಸಲಾಗಿದೆ. ದೆಹಲಿಯಲ್ಲಿರುವ ಕರ್ನಾಟಕದ ಆಯುಕ್ತರು ನೋಡಲ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಶಿವಮೊಗ್ಗ ನಗರ ಶೀಘ್ರ ಬೆಳೆಯುತ್ತಿದ್ದುಉತ್ತಮ ಭವಿಷ್ಯವಿದೆ- ಬಸವರಾಜ ಬೊಮ್ಮಾಯಿ

0

ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಶಿವಮೊಗ್ಗ. ಶಿವಮೊಗ್ಗ ನಗರಕ್ಕೆ ಉತ್ತಮ ಭವಿಷ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.
ಶಿವಮೊಗ್ಗದ ಎನ್‍ಇಎಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಅಭಿವೃದ್ದಿ ಒಂದು ನಿರಂತರ ಪ್ರಕ್ರಿಯೆ. 2006 ರ ಹಿಂದಿನ ಶಿವಮೊಗ್ಗ ಹಾಗೂ ಇಂದಿನ ಶಿವಮೊಗ್ಗದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ದಿಯನ್ನು ನಾವು ಕಾಣುತ್ತಿದ್ದೇವೆ. ಇಂದು ಸುಮಾರು 1000 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ವಸತಿ ಯೋಜನೆಗಳಡಿ ಮನೆಗಳನ್ನು ನೀಡುವುದು, ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ, ಶಿಕ್ಷಣ, ರಸ್ತೆ, ನೀರು, ನಗರಾಭಿವೃದ್ದಿ, ತಂತ್ರಜ್ಞಾನ ಹೀಗೆ ಹತ್ತು ಹಲವು ಪುಣ್ಯದ ಕೆಲಸಗಳು ಜನೋಪಯೋಗಿ ನಾಯಕರಿಂದ ಇಂದು ಸಾಧ್ಯವಾಗಿದೆ.

ಕೇವಲ 18 ತಿಂಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ವಿಮಾನ ನಿಲ್ದಾಣದಿಂದಾಗಿ ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ವಲಯದಲ್ಲಿ ಜಿಲ್ಲೆಯು ಅಭಿವೃದ್ದಿ ಹೊಂದಲಿದೆ.

ವಿಮಾನ ನಿಲ್ದಾಣಕ್ಕೆ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನಿಡಲು ಸಚಿವ ಸಂಪುಟ ನಿರ್ಧರಿಸಿದ್ದು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗೆ ಶಾಶ್ವತವಾಗಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರದ ಅನುಮತಿ ಪಡೆದ ಬಳಿಕ ನಿರ್ವಸಿತರಿಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ರೂ.500 ಕೋಟಿ ಮಂಜೂರು ಮಾಡಿದೆ ಎಂದರು.

ಇದೇ ರೀತಿ ವಿಐಎಸ್‍ಎಲ್ ಸಮಸ್ಯೆ ಬಗೆಹರಿಸುವ ಕುರಿತು ಮುಂದಿನ ವಾರ ಬೆಂಗಳೂರಿನಲ್ಲಿ ಎಲ್ಲಾ ಪ್ರತಿನಿಧಿಗಳ ಸಭೆ ನಡೆಸಿ, ಈ ಕಾರ್ಖಾನೆಯನ್ನು ಮುಂದುವರೆಸುವ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ: ಮುಖ್ಯಮಂತ್ರಿ ಅವರು ನಗರದ ಹೊರವಲಯದ ಗೋವಿಂದಪುರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳಡಿ ನಿರ್ಮಿಸಲಾಗುತ್ತಿರುವ 3 ಸಾವಿರ ಮನೆಗಳ ಪೈಕಿ ಪೂರ್ಣಗೊಂಡಿರುವ 288 ಮನೆಗಳನ್ನು ಹಸ್ತಾಂತರಿಸಿ 700 ಫಲಾನುಭವಿಗಳಿಗೆ ಅಂತಿಮ ಹಂಚಿಕೆ ಪತ್ರ ವಿತರಿಸಿದರು.

ಶಿವಮೊಗ್ಗ ನಗರದಲ್ಲಿ 3.48 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗಿರುವ 2 ಕೆರೆಗಳ ಲೋಕಾರ್ಪಣೆ, ನಗರದಲ್ಲಿ 25.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ, 1.74 ಕೋಟಿ ರೂ. ವೆಚ್ಚದ ಸ್ಮಾರ್ಟ್ ಎಜುಕೇಶನ್ ಪ್ರಾಜೆಕ್ಟ್, 58 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಮತ್ತು ಮಲಿನ ನೀರು ಶುದ್ಧೀಕರಣ ಘಟಕ, ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ 15.41 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ನೆರವೇರಿಸಿದರು.

ರೂ.21.60 ಕೋಟಿ ವೆಚ್ಚದ ಅಂಗನವಾಡಿ, ಶಾಲೆ ಅಭಿವೃದ್ದಿ, ರಸ್ತೆ, ಬಾಕ್ಸ್ ಚರಂಡಿ, ಉದ್ಯಾನವನ ಅಭಿವೃದ್ದಿ, ರೂ.6.45 ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್‍ಗಳಲ್ಲಿ ಅಭಿವೃದ್ದಿ, ರೂ.15.15 ಕೋಟಿ ವೆಚ್ಚದಲ್ಲಿ ತುಂಗಾ ನದಿಗೆ ಸೇರುತ್ತಿರುವ ಮಲಿನ ನೀರನ್ನು ಪ್ರತಿಬಂಧಿಸುವುದು ಮತ್ತು ತಿರುಗಿಸುವ ಕಾಮಗಾರಿ. ರೂ.10.62 ಕೋಟಿ ವೆಚ್ಚದಲ್ಲಿ ವಿವಿಧ ಮಾರ್ಡ್‍ಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ, ಸಮುದಾಯ ಭವನ ಹಾಗೂ ಇತರೆ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಶಾಸಕರಾದ ಕೆ.ಎಸ್.ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ನಿಕಟಪೂರ್ವ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಕೆ.ಬಿ.ಅಶೋಕ ನಾಯ್ಕ್, ಆಯನೂರು ಮಂಜುನಾಥ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಮಹಾನಗರಪಾಲಿಕೆ ಮಹಾಪೌರರಾದ ಶಿವಕುಮಾರ್, ಜಿಲ್ಲಾಧಿಕಾರಿ ಎಸ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕರಾಗಿ ಡಾ.ಸಿ.ಎ.ಹಿರೇಮಠ್ ನೇಮಕ

0

ಉಪನಿರ್ದೇಶಕರ ಕಛೇರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಶಿವಮೊಗ್ಗ ಇಲ್ಲಿನ ಉಪನಿರ್ದೇಶಕರಾಗಿ ಡಾ. ಸಿ.ಎ.ಹಿರೇಮಠ ಅವರು ನಿರ್ಗಮಿತ ಉಪನಿರ್ದೇಶಕ ಶ್ರೀ ಕೆ.ಕೃಷ್ಣ ಅವರಿಂದ ಅಧಿಕಾರ ವಹಿಸಿಕೊಂಡಿದ್ದು, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ದೂ.ಸಂ.: 08182-220925ನ್ನು ಸಂಪರ್ಕಿಸುವಂತೆ ಅಥವಾ ಮೇಲ್ಕಂಡ ವಿಳಾಸಕ್ಕೆ ಅಹವಾಲು ಸಲ್ಲಿಸುವಂತೆ ತಿಳಿಸಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.