Monday, April 6, 2026
Monday, April 6, 2026
Home Blog Page 1309

ಕೆರೆ ಕಾಮಗಾರಿ ಟೆಂಡರ್ ನಲ್ಲಿ ಸಿ‌ಟಿ.ರವಿ ಪಕ್ಷಪಾತ- ಜೆಡಿಎಸ್ ಆರೋಪ

0

ಚಿಕ್ಕಮಗಳೂರು: ಜೆಡಿಎಸ್‌ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಪಕ್ಷ ಘೋಷಿಸಿದಂತೆ ಬಿಜೆಪಿಯು ಚುನಾವಣೆ ಮೊದಲೇ ಮುಖ್ಯಮಂತ್ರಿಯನ್ನು ಯಾರೆಂದು ಘೋಷಿಸಿ ಇಲ್ಲಸಲ್ಲದ ಹೇಳಿಕೆಗಳಿಗೆ ಸಿ.ಟಿ.ರವಿ ಮುಕ್ತಾಯ ಹಾಡಬೇಕು ಎಂದು ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರೆಂಬುದ ನ್ನು ತಿಳಿಸದೇ ಚುನಾವಣೆ ಎದುರಿಸುತ್ತಿದೆ.

ಆದರೆ, ಜೆಡಿಎಸ್ ಆ ರೀತಿಯ ಗೊಂದಲಗೊಳಗಾಗದೇ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿ ಚುನಾವಣೆಯನ್ನು ಧೈರ್ಯವಾಗಿ ಎದುರಿಸಲು ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಶಾಸಕರು ರಾಜ್ಯದ ಹಿರಿಯ ರಾಜಕಾರಣಿಗಳಿಗೆ ಇಲ್ಲಸಲ್ಲದ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿ ಕೊಳ್ಳಲು ಹಾಗೂ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸುತ್ತಿದ್ದು ದೀಪ ಹೆಚ್ಚು ಉರಿದಂತೆ ಕೊನೆಯಲ್ಲಿ ಆರಲಿದೆ ಎಂಬಂತೆ ಶಾಸಕರು ಹೆಚ್ಚು ಮಾತನಾಡಿ ಕೊನೆಯಲ್ಲಿ ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಈ ರೀತಿ ವರ್ತಿಸು ತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಜೆಪಿಯಲ್ಲಿ ಪ್ರಹ್ಲಾದ್ ಜೋಷಿ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಥವಾ ಇನ್ಯಾದರ ಹೆಸರನ್ನು ಹೇಳಿ ಚುನಾವಣೆ ಎದುರಿಸುವುದನ್ನು ಬಿಟ್ಟು ಜೆಡಿಎಸ್‌ನ ಧೀಮಂತ ನಾಯಕರ ವಿರುದ್ಧ ಹೇಳಿಕೆ ನೀಡಿ ಕಾಟಾಚಾರದ ಪ್ರಚಾರ ಗಿಟ್ಟಿಕೊಳ್ಳಲು ಮುಂದಾಗಿದೆ ಎಂದು ದೂರಿದ್ದಾರೆ.

ಇಪತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಶಾಸಕರಾಗಿರುವ ರವಿ ಅವರು ಜಿಲ್ಲೆಯ ಅಭಿವೃದ್ದಿ ವಿಚಾರವನ್ನಿಟ್ಟು ಕೊಂಡು ಚುನಾವಣೆ ಎದುರಿಸುತ್ತಿರುವ ಮುಂದಾಗಿದ್ದಾರೆ. ಬಸವನಹಳ್ಳಿ ಕೆರೆ, ಕೋಟೆ ಕೆರೆ ಕಾಮಗಾರಿಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಕೇವಲ ಮಣ್ಣನ್ನು ತೆಗೆದು ಹಾಕಿ ಟೆಂಡರ್ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅಮೃತ ಯೋಜನೆ ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದರೂ ಪೂರ್ಣವಾಗಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಕಳಪೆ ಕಾಮಗಾರಿ ಕೆಲಸವಾಗಿದೆ. ಇಷ್ಟೆಲ್ಲಾ ಕಳಪೆ ಕಾಮಗಾರಿ ಹಾಗೂ ಬಾರೀ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ಈ ಬಾರಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಸಂಘ-ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಜನವರಿ ಪ್ರಾರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಹಂಚಿಕೆ ಮಾಡುತ್ತವೆ. ಆದರೆ ನಗರಸಭಾ ಆಡಳಿತ ಮಂಡಳಿಯು ಜನವರಿ ಕಳೆದು ಫ್ರೆಬವರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದ್ದಾರೆ.
ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳನ್ನು ಹೊತ್ತಿಕೊಂಡು ಸ್ಥಳೀಯ ಶಾಸಕರು ಚುನಾವಣೆ ಎದುರಿಸಲು ಭಯ ಪಡುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ರಾಜಕಾರಣಿಗಳ ಬಗ್ಗೆ ಹೇಳಿ ನೀಡಿ ಗೆಲ್ಲುವ ಕನಸು ಕಾಣುತ್ತಿದ್ದು ಇದನ್ನು ಜನತೆ ಸೂಕ್ಷ್ಮವಾಗಿ ಅರಿತು ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮತ ನೀಡಿ ಗೆಲುವಿಗೆ ವರದಾನವಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಗೆ ಅಧಿಕಾರ ಕೊಡಿ ಬಡವರ ಏಳಿಗೆ ಮಾಡುತ್ತೇವೆ- ಡಿ.ಕೆ.ಶಿವಕುಮಾರ್

0

ಶಿವಮೊಗ್ಗದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಶಿವಮೊಗ್ಗದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇನ್ನು ಸದ್ಯದಲ್ಲೇ ಉಳಿದ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಈ ರಾಜ್ಯದಲ್ಲಿ ಭ್ರಷ್ಟ ರಾಜಕಾರಣವನ್ನು ಕೊನೆಗೊಳಿಸಬೇಕು ಎನ್ನುವ ಮಹಾದಾಸೆಯಿಂದ ಕಾಂಗ್ರೆಸ್ ಪಕ್ಷವು ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ. ಜನರು ಪ್ರೀತಿ ವಿಶ್ವಾಸ ತೋರಿಸಬೇಕು ಎಂದು ಮನವಿ ಮಾಡಿದರು.

ಜನರ ವಿಶ್ವಾಸದಂತೆ ನಾವು ಜವಾಬ್ದಾರಿಯುತವಾಗಿ ಹಲವಾರು ಯೋಜನೆಗಳನ್ನ ರೂಪಿಸಿದ್ದೇವೆ. ಕೆಲಸ ಕಾರ್ಯದಲ್ಲಿ ತೊಡಗಿದ್ದೇವೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬಡವರಿಗಾಗಿ ಅನುಕೂಲಕರ ವಾಗುವಂತೆ ಕೆಲಸ ಮಾಡುತ್ತೇವೆ ಎಂದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭದ್ರಾವತಿ ಕಾರ್ಖಾನೆ ದುಃಸ್ಥಿತಿಗೆ ಬಿಜೆಪಿ ನಾಯಕರೇ ಕಾರಣ- ಡಿ.ಕೆ.ಶಿವಕುಮಾರ್

0

ಇನ್ನು ಕೇವಲ 50 ದಿನಗಳು ಮಾತ್ರ ಕಾಯಿರಿ. ರಾಜ್ಯದ ಜನರು ನಿಮ್ಮನ್ನ ಗಂಟು ಮೂಟೆ ಕಟ್ಟಿ ಮನೆಗೆ ಕಳಿಸಿಕೊಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರ ನಡೆಸಲು ವಿಧಾನಸೌಧಕ್ಕೆ ಕಳುಹಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಭದ್ರಾವತಿಯಲ್ಲಿ ಪ್ರಜಾದ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ನಾವು ಹುಟ್ಟುವಾಗ ಯಾರು ಅರ್ಜಿ ಸಲ್ಲಿಸಿ ಯಾವುದೇ ಜಾತಿಯಲ್ಲಿ ಹುಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಎಲ್ಲಾ ಜಾತಿ, ವರ್ಗ, ಧರ್ಮಕ್ಕೂ ಸೇರಿದ ಪಕ್ಷ. ಆದರೆ ಬಿಜೆಪಿ ಮಾತ್ರ ಇದಕ್ಕೆ ವಿರುದ್ಧವಾದ ನೀತಿ ಅನುಸರಿಸುತ್ತಿದೆ. ಬಿಜೆಪಿ ಬರೀ ಜಾತಿಯ ಮೇಲೆ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ. ನೀತಿಯ ಮೇಲೂ ರಾಜಕಾರಣ ಮಾಡಬೇಕು ಎಂದು ಡಿಕೆಶಿ ಕಿವಿ ಮಾತು ಹೇಳಿದ್ದಾರೆ.

ಕಳೆದ ಚುನಾವಣೆಯ ವೇಳೆ ಬಿಎಸ್ ಯಡಿಯೂರಪ್ಪ ಕಾರ್ಖಾನೆಗೆ 1,000 ಕೋಟಿ ಬಂಡಬಾಳ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ರು. ಬಳಿಕ ಕೇಂದ್ರ ಸಚಿವರೊಬ್ಬರು ಬಂದು ಆರು ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಆದರೆ ಕೊಡಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಜನರು ಡಬಲ್ ಇಂಜಿನ್ ಸರ್ಕಾರಕ್ಕೆ ಅಧಿಕಾರ ಕೊಟ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕೈಯಲ್ಲಿ ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿವಾದಂತಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆತರಲಾಗುತ್ತಿದೆ. ರಾಜ್ಯದಲ್ಲಿ ನಾಯಕತ್ವ ಇಲ್ಲದ ಬಿಜೆಪಿ ಈಗ ಮೋದಿ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್. ಪಿ. ಗಿರೀಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಇಕ್ಕೇರಿ ರಮೇಶ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮನಸ್ಸಿನಿಂದ ಮನಸ್ಸಿಗೆ -16

0

ಮಾನವ ಪ್ರೀತಿಯ ಮುಂದೆ
ದೇವರು ಮತ್ತು ಧರ್ಮದ ನಂಬಿಕೆ ಶಿಥಿಲ…

ಸಿರಿಯಾ – ಟರ್ಕಿ ದೇಶಗಳ ಭೂಕಂಪದ ದಾರುಣ ಘಟನೆಗಳಲ್ಲಿ ಇದು ಮತ್ತೊಮ್ಮೆ ಸಾಬೀತಾಗುತ್ತಿದೆ……

ತಂದೆಯೊಬ್ಬರು ತಮ್ಮ 15 ವರ್ಷದ ಮಗಳು ಕಾಂಕ್ರೀಟ್ ಚಪ್ಪಡಿ ಕುಸಿತದಿಂದ ಸತ್ತಿರುವಾಗ ಆ ಮಗುವಿನ ಕೈ ಹಿಡಿದು ಅಲ್ಲಿಯೇ ಕುಳಿತಿದ್ದಾರೆ. ಯಾರು ಏನೇ ಹೇಳಿದರು ಸತ್ತಿರುವ ಮಗುವಿನ ಕೈ ಬಿಡದೆ ಅಲ್ಲಿಯೇ ಕುಳಿತಿದ್ದಾರಂತೆ. ಆ ಹೆಣ್ಣು ಮಗುವನ್ನು ತಂದೆ ಅದೆಷ್ಟು ಪ್ರೀತಿಸುತ್ತಿದ್ದರೋ…

ಸುಮಾರು 5 ವರ್ಷದ ಹೆಣ್ಣು ಮಗು ಸುಮಾರು 2 ವರ್ಷದ ತನ್ನ ತಮ್ಮನ ತಲೆಯ ಮೇಲೆ ಕುಸಿದ ಕಟ್ಟಡದ ಕಲ್ಲಿನ ಚಪ್ಪಡಿಯ ಒತ್ತಡ ಬೀಳಬಾರದೆಂದು ಸುಮಾರು 17 ಗಂಟೆಗಳ ಕಾಲ ತಮ್ಮನ ತಲೆಯನ್ನು ಕೈ ಅಡ್ಡ ಹಿಡಿದು ರಕ್ಷಿಸುತ್ತಿರುವ ದೃಶ್ಯ ವಿಶ್ವಸಂಸ್ಥೆಯ ಟ್ವಿಟರ್ ನಲ್ಲಿ ಪ್ರಕಟವಾಗಿದೆ. ತಮ್ಮನ ಮೇಲೆ ಆ ಪುಟ್ಟ ಮಗುವಿಗೆ ಅದೆಷ್ಟು ಪ್ರೀತಿಯೋ…..

ಈ ರೀತಿಯ ಹೃದಯ ವಿದ್ರಾವಕ ಘಟನೆಗಳು ಇನ್ನೆಷ್ಟು ಸುದ್ದಿಯಾಗದೇ ಉಳಿದಿದೆಯೋ…..

ನವಜಾತ ಶಿಶುಗಳು ಸೇರಿ ಎಲ್ಲಾ ಗಾಯಗಳನ್ನು ಉಳಿಸಿಕೊಳ್ಳಲು ಅಲ್ಲಿ ನೆರವಿಗೆ ಧಾವಿಸಿ ಸಹಾಯ ಮಾಡುತ್ತಿರುವುದು ಮತ್ತದೇ ಮನುಷ್ಯರು….

ಯಾವ ದೇವರು ಈ ಪ್ರಾಕೃತಿಕ ಅನಾಹುತವನ್ನು ತಡೆಯಲಿಲ್ಲ, ಯಾವ ದೇವರು ಅಲ್ಲಿನ ಜನರ ನೋವಿಗೆ ಸ್ಪಂದಿಸಲಿಲ್ಲ…

ಇಸ್ಲಾಂ ಧರ್ಮದ ಮೂಲಭೂತವಾದಿಗಳೇ,
ಸನಾತನ ಧರ್ಮದ ಮೂಲಭೂತವಾದಿಗಳೇ,
ಕ್ರಿಶ್ಚಿಯನ್ ಧರ್ಮದ ಮೂಲಭೂತವಾದಿಗಳೇ,
ಇತರ ಎಲ್ಲಾ ಧರ್ಮಗಳ ಮೂಲಭೂತವಾದಿಗಳೇ,
ಹಾಗು
ಜನಸಾಮಾನ್ಯರೇ,
ಮನುಷ್ಯ ಪ್ರೀತಿ ಮತ್ತು ಮನುಷ್ಯ ಶಕ್ತಿಯ ವಾಸ್ತವತೆಯ ಮುಂದೆ ದೈವಿಕ ಶಕ್ತಿ ಒಂದು ಕಾಲ್ಪನಿಕ ಮತ್ತು ಭ್ರಮೆ ಮಾತ್ರ.

ಅಜ್ಞಾನ, ಭಯ, ದುರಾಸೆಯ ಕಾರಣದಿಂದಾಗಿ ದೈವಶಕ್ತಿ ಸ್ವಲ್ಪ ಮಾನಸಿಕ ಧೈರ್ಯ ಕೊಡಬಹುದೇ ಹೊರತು ಮನುಷ್ಯ ಶಕ್ತಿಯೇ ನಿಮಗೆ ಸ್ಪಂದಿಸುವುದು ಮತ್ತು ನಿಮ್ಮನ್ನು ರಕ್ಷಿಸುವುದು….

ಸಹಸ್ರಾರು ವರ್ಷಗಳಿಂದ ಯಾವ‌ ದೇವರು ಸಹ ಯುದ್ಧಗಳನ್ನು, ಭೂಕಂಪನಗಳನ್ನು, ಸುನಾಮಿಗಳನ್ನು, ಜ್ವಾಲಾಮುಖಿಗಳನ್ನು, ಚಂಡಮಾರುತಗಳನ್ನು, ವೈರಸ್‌ಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ಮನುಷ್ಯ ಇದನ್ನು ತನ್ನ ಅನುಭವ ಮತ್ತು ಅರಿವಿನ ಮಿತಿಯಲ್ಲಿ ಮೊದಲೇ ಊಹಿಸುವ ಮತ್ತು ಅದನ್ನು ತಡೆಯಲು ಅಸಾಧ್ಯವಾದಾಗ ಕನಿಷ್ಠ ಅನಾಹುತಗಳಿಗೆ ಸಾಧ್ಯವಾದಷ್ಟು ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾನೆ.

ನಿಮ್ಮ ತಂದೆ ಮನುಷ್ಯ,
ನಿಮ್ಮ ತಾಯಿ ಮನುಷ್ಯ,
ನಿಮ್ಮ ಮಗ ಮಗಳು ಮನುಷ್ಯ,
ನಿಮ್ಮ ಅಕ್ಕ ತಂಗಿ ಅಣ್ಣ ತಮ್ಮ ಅಜ್ಜ ಅಜ್ಜಿ ಮನುಷ್ಯರು,
ನಿಮ್ಮ ಗುರು, ನಿಮ್ಮ ಸ್ನೇಹಿತ, ನಿಮ್ಮ ವೈದ್ಯ, ನಿಮ್ಮ ವಕೀಲ, ನಿಮ್ಮ ಚಾಲಕ, ನಿಮ್ಮ ಸೈನಿಕ ಮನುಷ್ಯರೇ,……

ನಿಮಗೆ ಆಹಾರ ನೀಡುವವರು ಮನುಷ್ಯರೇ,
ನಿಮ್ಮ ವಂಶಾಭಿವೃದ್ಧಿ ಮಾಡುವವರು ಮನುಷ್ಯರೇ,
ನಿಮಗೆ ಮನರಂಜನೆ ನೀಡುವವರು ಮನುಷ್ಯರೇ,
ನಿಮ್ಮ ಶವ ಸಂಸ್ಕಾರ ಮಾಡುವವರು ಮನುಷ್ಯರೇ…

ಅಂತಹ ಮನುಷ್ಯರನ್ನೇ ನಂಬಿಕೆಯ ದೇವರು ಮತ್ತು ಧರ್ಮದ ರಕ್ಷಣೆಗಾಗಿ ಕೊಲ್ಲುವುದು ಎಂತಹ ವಿಪರ್ಯಾಸ……

ಭ್ರಷ್ಟಾಚಾರ ನಿರ್ಮೂಲನೆ ಮಾಡದ ದೇವರು,
ಜಾತಿ ಅಸಮಾನತೆ ತೊಡೆದುಹಾಕದ ದೇವರು,
ಭಯೋತ್ಪಾದನಾ ಕೃತ್ಯಗಳನ್ನು ನಿಗ್ರಹಿಸದ ದೇವರು,
ಕೊಲೆ ಅತ್ಯಾಚಾರ ಅನಾರೋಗ್ಯ ಅಪಘಾತ ಆತ್ಮಹತ್ಯೆ ತಡೆಯದ ದೇವರಿಗಿಂತ ಇವುಗಳ ನಿಯಂತ್ರಣಕ್ಕೆ ಸತತವಾಗಿ ಪ್ರಯತ್ನಿಸುತ್ತಿರುವ ಮನುಷ್ಯನೇ ಉತ್ತಮವಲ್ಲವೇ….

ಸುಮಾರು 20000 ಸಾವಿರ ಜನರು ಈಗಾಗಲೇ ಭೂಕಂಪದ ಅನಾಹುತಕ್ಕೆ ಬಲಿಯಾಗಿದ್ದಾರೆ.

ಸಿರಿಯಾದಲ್ಲಿ ಕಳೆದ 15 ವರ್ಷಗಳಲ್ಲಿ ಭಯೋತ್ಪಾದನೆಯಿಂದಾಗಿ ಲಕ್ಷಾಂತರ ಜನರ ಮಾರಣ ಹೋಮ ನಿರಂತರವಾಗಿ ನಡೆಯುತ್ತಲೇ ಇದೆ.

ದೇವರು – ಧರ್ಮದ ನಂಬಿಕೆ ಮತ್ತು ಕಟ್ಟುಪಾಡುಗಳನ್ನು ಮೀರಿ ಮನುಷ್ಯ ಪ್ರೀತಿ ಬೆಳೆಸಿಕೊಂಡಲ್ಲಿ ನಿಜಕ್ಕೂ ಬದುಕೊಂದು ಅದ್ಬುತ ಅನುಭವ ನೀಡುತ್ತದೆ. ದೇವರನ್ನೇ ನಂಬಿದರೆ ಹಿಂಸೆ ರಕ್ತಪಾತ ಸಣ್ಣತನ ಸದಾ ಗಲಭೆಗಳು ಅಜ್ಞಾನ ಅಂಧಕಾರಗಳಲ್ಲಿಯೇ ನಾವು ಕಳೆದು ಹೋಗುತ್ತೇವೆ.

ಅತಿಯಾಗಿ ದೇವರು ಧರ್ಮವನ್ನು ನಂಬಿದ ದೇಶಗಳಿಗಿಂತ ಸಂವಿಧಾನದ ಮೇಲೆ ಅವಲಂಬಿತವಾದ ದೇಶಗಳು ಇರುವುದರಲ್ಲಿ ಉತ್ತಮವಾಗಿರುವುದು ವಾಸ್ತವ ಸತ್ಯ.

ಮನುಷ್ಯ ಪ್ರೀತಿ ಒಂದು ಸಹಜ ಅಭಿವ್ಯಕ್ತಿ,
ದೈವ ಭಕ್ತಿ ಒಂದು ಕೃತಕ ಮುಖವಾಡ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

ಬರಹ: ವಿವೇಕಾನಂದ ಎಚ್. ಕೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಇಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

0

ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭಗೊಂಡಿದೆ. ಬೆಳಿಗ್ಗೆ 11 ಗಂಟೆಗೆ ಉಭಯ ಸದನವನ್ನು ಉದ್ದೇಶಿಸಿ ರಾಜ್ಯಪಾಲ ತಾವರ್ ಚೆನ್ ಗೆಹ್ಲೋಟ್ ಅವರು ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಧಾನ ಸಭಾ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಧ್ಯಕ್ಷರಾದ ಶ್ರೀ ಬಸವರಾಜ್ ಹೊರಟ್ಟಿ ಇನ್ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಿಕ್ಕಮಗಳೂರು ಜಿಲ್ಲಾ ಕೈಗಾರಿಕೆ ಮತ್ತು ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್ ಪ್ರಭು ಆಯ್ಕೆ

0

ಚಿಕ್ಕಮಗಳೂರು: ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಪ್ರಭು ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ.ಅಶೋಕ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ನಗರದ ಡಿಎಸ್‌ಎಂಎಸ್ ಸಂಘದ ಸಭಾಂಗಣದಲ್ಲಿ ಅವಿರೋಧ ಆಯ್ಕೆಯನ್ನು ಬುಧವಾರ ಚುನಾವಣಾಧಿಕಾರಿ ಬಿ.ಕೆ. ವಿಜಯೇಂದ್ರ ಘೋಷಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಪ್ರಭು ಸಹಕಾರ ಸಂಘದ ನಿರ್ದೇಶಕರು ಹಾಗೂ ಸದಸ್ಯ ರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರ ಸಮೀಪದಲ್ಲಿ ರಿಯಾಯಿತಿ ದರದಲ್ಲಿ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದ್ದು ಸಂಘದ ಸದಸ್ಯರ ಸಹಕಾರವು ಅತಿಮುಖ್ಯವಾಗಿದೆ ಎಂದರು.

ಎರಡನೇ ಬಾರಿಗೆ ಅವಿರೋಧ ಆಯ್ಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಉಪಾಧ್ಯಕ್ಷ ಎಂ.ಬಿ.ಅಶೋಕ್‌ಕುಮಾರ್ ಮಾತನಾಡಿ ಸಂಘದ ಅಭಿವೃದ್ದಿ ಬೆಳವಣಿಗೆಗೆ ಸಂಘದ ಪ್ರತಿಯೊಬ್ಬರ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಮುನ್ನೆಡೆಯಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ವಿ.ವೇಣುಗೋಪಾಲ್ ಪ್ರಭು, ವಿ.ಜಯರಾಮ್, ಎ.ಪೂಣೇಶ್, ಸಿ.ವಿ.ಹರೀಶ್, ಮಂಜುನಾಥ್ ಜೋಷಿ, ಡಿಎಸ್‌ಎಂಎಸ್‌ನ ಅಧಿಕಾರಿ ಕುಮಾರಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮೈಸೂರಿನಲ್ಲಿ ನಡೆದ ಮುಕ್ತ ಕರಾಟೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಿವಮೊಗ್ಗದ ಕರಾಟೆ ತಂಡ

0

ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಮೈಸೂರು ಓಪನ್, ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ತಂಡ ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದಿದ್ದು ಈ ಸಂದರ್ಭದಲ್ಲಿ ಸಿಟಿ ಕರಾಟೆ ಅಸೋಸಿಯೇಷನ್ ತರಬೇತಿದಾರರಾದ ವೆಂಕಟೇಶ್ ಶ್ರೇಯಸ್ ಹರ್ಷಿತ್ ಸಾಗರ್ ಉಪಸ್ಥಿತರಿದ್ದರು ಹಾಗೂ ಈ ಸಂದರ್ಭದಲ್ಲಿ ಎಲ್ಲ ವಿಜೇತರಿಗೆ ಹಾಗೂ ತರಬೇತಿದಾರರಿಗೆ ಅಸೋಸಿಯೇಷನ್ ಅಧ್ಯಕ್ಷರಾದ ಶಿವಮೊಗ್ಗ ವಿನೋದ್ ರವರು ಅಭಿನಂದಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಂಕಷ್ಟ ಸಂರ್ಭದಲ್ಲಿ ಮಗುವಿಗೆ ಚಿಕಿತ್ಸಾ ಸೌಲಭ್ಯ ದೊರಕಿಸಿದ ಸಂಸದ ರಾಘವೇಂದ್ರ

0

ಶಿವಮೊಗ್ಗ: ಲೋ ಶುಗರ್ ಹಾಗೂ ಗ್ರೋತ್ ಆರ್ಗನ್ ಸಮಸ್ಯೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ನಿರಂತರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ಇಟ್ಟಿಗೆ ಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿಗಳಿಗೆ ಇಬ್ಬರು ಮಕ್ಕಳು. ಮೊದಲನೆಯವನು ಎಲ್ಲರಂತೆಯೇ ಇದ್ದರೂ ಎರಡನೆಯ ಮಗು ಶ್ರೇಯಸ್‍ಗೆ 6 ತಿಂಗಳಿನಿಂದಲೇ ವಿಚಿತ್ರ ಸಮಸ್ಯೆ ಕಾಣಿಸಿಕೊಂಡಿತ್ತು.

ಲೋ ಶುಗರ್ ನಿಂದ ಬಳಲುತ್ತಿದ್ದ. ಜೊತೆಗೆ ಗ್ರೋತ್ ಆರ್ಗನ್ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಇದು ಮಗುವಿನ ಬೆಳವಣಿಗೆ ಕುಂಠಿತಗೊಳಿಸುತ್ತಿದ್ದಲ್ಲದೆ, ಪ್ರಾಣಾಪಾಯವೂ ಇತ್ತು.
ವೈದ್ಯರಿಗೆ ಮಗುವಿನ ಸಮಸ್ಯೆ ಏನೆಂದು ಗುರುತಿಸಲು ಮೂರು ವರ್ಷಗಳು ಬೇಕಾಯಿತು. ನಂತರ ಪ್ರತಿ ತಿಂಗಳೂ ಹತ್ತಾರು ಸಾವಿರ ರೂ.ಗಳ ಮೆಡಿಸನ್ ಮತ್ತು ಚಿಕಿತ್ಸಾ ವೆಚ್ಚ ಭರಿಸಬೇಕಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ದುಬಾರಿ ಚಿಕಿತ್ಸಾ ವೆಚ್ಚ ಭರಿಸುವುದೇ ಅಸಾಧ್ಯ ಎನ್ನುವಂತಾಗಿತ್ತು. ಸದ್ಯ ಮಗುವಿಗೆ 5 ವರ್ಷ 4 ತಿಂಗಳಾಗಿದೆ. ಇನ್ನು ಚಿಕಿತ್ಸೆ ಕೊಡಿಸುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ಸಂಸದ ಬಿ.ವೈ. ರಾಘವೇಂದ್ರ ಅವರ ಗಮನ ಸೆಳೆದಿದ್ದಾರೆ.

ಸಮಸ್ಯೆಯನ್ನು ಅರಿತುಕೊಂಡ ಸಂಸದರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಗುವಿಗೆ 18 ವರ್ಷವಾಗುವವರೆಗೂ ಸರ್ಕಾರದಿಂದಲೇ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಂಡಿದ್ದಾರೆ.
ಇಂದು ಬೆಳಿಗ್ಗೆ ಮಗುವಿಗೆ ಸರ್ಕಾರದಿಂದ ಮೊದಲ ಔಷಧಿಗಳನ್ನು ಒದಗಿಸಲಾಗಿದ್ದು, ಸಂಸದರ ಬಿ.ವೈ. ರಾಘವೇಂದ್ರ ಮಗುವಿಗೆ ಔಷಧಿ ನೀಡಿ, ಶೀಘ್ರದಲ್ಲೇ ಮಗು ಎಲ್ಲ ಮಕ್ಕಳಂತೆ ಆರೋಗ್ಯವಾಗಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಬಿಜೆಪಿ ರೈತಮೋರ್ಚಾ ಪ್ರಧಾನಕಾರ್ಯದರ್ಶಿ ಇಟ್ಟಿಗೆಹಳ್ಳಿ ನಾಗೇಂದ್ರ, ಪ್ರಮುಖರಾದ ಸತೀಶ್, ಚೇತನ್ ಮತ್ತಿತರರಿದ್ದರು.

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಮಗುವಿನ ಪೋಷಕರಾದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿಗಳು ಸಂಕಷ್ಟದ ಸಂದರ್ಭದಲ್ಲಿ ಸ್ಪಂದಿಸಿ, ಮಗುವಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿಸುವ ಮೂಲಕ ತಮ್ಮ ಬದುಕಲ್ಲಿ ಭರವಸೆ ಮೂಡಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಏರ್ ಪೋರ್ಟಿಗೆ ಯಡಿಯೂರಪ್ಪ ಹೆಸರಿಡಲು ಸಿ ಟಿ ರವಿ ಒಪ್ಪುವರೆ? ಕಾಂಗ್ರೆಸ್ ಕಟಕಿ

0

ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರು ಇಡಲು ಭಾರತೀಯ ಜನತಾ ಪಕ್ಷ ಮತ್ತು ರಾಷ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಒಪ್ಪುವರೇ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೇಸ್ ಸರ್ಕಾರ ರಾಜ್ಯಾದ್ಯಂತ ಬಡಜನರ ಹಸಿವು ನೀಗಿಸಲು ಸಾವಿರಾರು ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ ಈ ಕ್ಯಾಂಟೀನ್‌ಗಳಿಗೆ ಇಂದಿರಾ ಹೆಸರುಇಟ್ಟಾಗ ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಬಿ.ಜೆ.ಪಿ.ಯ ಕೆಲವು ನಾಯಕರು ಸರ್ಕಾರದ ಹಣದಿಂದ ನಿರ್ಮಿಸಿರುವ ಕ್ಯಾಂಟೀನ್‌ಗಳಿಗೆ ಇಂದಿರಾಗಾಂಧಿಯ ಹೆಸರು ಇಡಲು ಯಾರಪ್ಪನ ಮನೆಯಿಂದ ಅಥವಾ ನೆಹರು ಮತ್ತು ಇಂದಿರಾ ಗಾಂಧಿ ಕುಟುಂಬ ಮನೆಯಿಂದ ಹಣವನ್ನೇನಾದರೂಕಾಂಗ್ರೇಸ್ ನವರುತಂದು ಹಾಕಿದ್ದಾರೆಯೇಎಂದುಅಪಹಾಸ್ಯ ಮಾಡುವ ಮೂಲಕ ವಿರೋಧಿಸಿದ್ದರು.
ಶಿವಮೊಗ್ಗ ಜಿಲ್ಲೆಯನ್ನುಈ ಹಿಂದೆ ಸಜ್ಜನ ರಾಜಕಾರಣಿಗಳು ದಕ್ಷತೆ ಮತ್ತು ಪ್ರಾಮಾಣಿಕವಾಗಿ ಜನಪರ ಆಡಳಿತ ನಡೆಸಿ ಜಿಲ್ಲೆಯಕೀರ್ತಿಯನ್ನು ಹೆಚ್ಚಿಸಿದ್ದಾರೆ.ಇನ್ನುಜಿಲ್ಲೆಯ ಸಾಹಿತಿಗಳು ತಮ್ಮದೇಆದಅದ್ಬುತ ಸಾಹಿತ್ಯ ಬರವಣಿಗೆಯಿಂದ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಕ್ಕೆಕೊಂಡೋಯ್ದಿದ್ದಾರೆ. ಆದರೆ, ಇತ್ತೀಚೆಗೆ ಎರಡು ಮೂರು ದಶಕದಲ್ಲಿ ಬಂದ ರಾಜಕಾರಣಿಗಳು, ಜಿಲ್ಲೆಯನ್ನು ಲೂಟಿ ಮಾಡಿ, ಸಾವಿರಾರು ಕೋಟಿಗಳ ಹಣ ಮತ್ತು ಆಸ್ತಿಯನ್ನು ಮಾಡಿದ್ದು ಬಿಟ್ಟರೆ ಮತ್ತೇನನ್ನು ಮಾಡಿರುವುದಿಲ್ಲ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನೂರಾರು ಸಂಖ್ಯೆಯಕಾಮಗಾರಿ ಪೂರ್ಣಗೊಳ್ಳದ ಸೇತುವೆ ಮತ್ತು ಕಟ್ಟಡಗಳನ್ನು ತರಾತುರಿಯಲ್ಲಿಉದ್ಘಾಟಿಸಲು ಮುಂದಾಗಿರುವುದು ಸುತಾರಾಮ್ ಒಪ್ಪುವಂತಹದ್ದು ಅಲ್ಲವೆಂದು ಜಿಲ್ಲಾವಕ್ತಾರರಾದ ವೈ.ಬಿ.ಚಂದ್ರಕಾಂತ್ ಖೇಧ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿಬಿ.ಜೆ.ಪಿ.ಯೇತರ ರಾಜಕೀಯ ಪಕ್ಷಗಳ ಸರ್ಕಾರಗಳು ಸರ್ಕಾರಿ ಕಟ್ಟಡಗಳಿಗೆ, ಸ್ಥಳಗಳಿಗೆ ತಮ್ಮ ಪಕ್ಷದ ನಾಯಕರ ಹೆಸರುಇಟ್ಟರೆ ಸಹಿಸದ ಬಿ.ಜೆ.ಪಿ ನಾಯಕರು,ತಮ್ಮ ಆಡಳಿತದಲ್ಲಿ ತಾವೇನುತಮ್ಮ ಮನೆಯಿಂದ ಹಣತಂದು ಹಾಕಿದವರಂತೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆಯಡಿಯೂರಪ್ಪರ ಹೆಸರುಇಡುವುದಕ್ಕೆ ಮುಂದಾಗಿದ್ದಾದರೂ ಏಕೆ..?

ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪರ ಹೆಸರುಇಡುವುದು, ಬಿಡುವುದು ಬಿ.ಜೆ.ಪಿ ಸರ್ಕಾರಕ್ಕೆ ಬಿಟ್ಟ ವಿಷಯವಾಗಿದೆ.ಆದರೆ, ಜಿಲ್ಲೆಯ ಜನರ ಅಭಿಪ್ರಾಯ ಕೇಳದೆ, ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪರ ಹೆಸರಿಡಲು ಸರ್ಕಾರ ಹೊರಟಿರುವುದು ಭಾರತೀಯ ಜನತಾ ಪಕ್ಷದ ನಾಯಕರ ಮತ್ತು ಸರ್ಕಾರದ ಸರಿಯಾದ ನಡುವಳಿಕೆ ಅಲ್ಲ ಎಂದು ಕಾಂಗ್ರೆಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಡಿಸಿಸಿ ಬ್ಯಾಂಕ್ ನಡೆಸಿದ ಪರೀಕ್ಷೆಯ ಅಂಕಪಟ್ಟಿ ಪ್ರಕಟ

0

ಶಿವಮೊಗ್ಗ:
ಶಿವಮೊಗ್ಗ ಸಹಕಾರ ಕೇಂದ್ರ ಬ್ಯಾಂಕ್ ನಿ. ಶಿವಮೊಗ್ಗ ಇಲ್ಲಿ ಖಾಲಿ ಇರುವ ಕಿರಿಯ ಸಹಾಯಕರು ಅಥವಾ ನಗದು ಗುಮಾಸ್ತರು ಅಥವಾ ಕ್ಷೇತ್ರಾಧಿಕಾರಿಗಳು, ಅಟೆಂಡರ್ ಹಾಗೂ ವಾಹನ ಚಾಲಕರ ಹುದ್ದೆಯ ಸಂದರ್ಶನಕ್ಕೆ ಅರ್ಹರಾಗುವ ಅಭ್ಯರ್ಥಿಗಳ ವರ್ಗವಾರು ನಿಲುಗಡೆಯಾದ ಅಂಕಗಳ ವಿವರವನ್ನು ಫೆ.07 ರಂದು ಬ್ಯಾಂಕಿನ ವೆಬ್‍ಸೈಟ್ www.shimogadccbank.com ಇಲ್ಲಿ ಪ್ರಕಟಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.