Sunday, April 5, 2026
Sunday, April 5, 2026
Home Blog Page 1312

ಪೋಲೀಸ್ ಇಲಾಖೆಯ ಮಕ್ಕಳ ವಿಶೇಷ ಘಟಕದ ಅಧಿಕಾರಿಗಳಿಗೆ ಕಾರ್ಯಾಗಾರ

0

ಶಿವಮೊಗ್ಗ ಡಿಎಆರ್ ಸಭಾಂಗಣದಲ್ಲಿ
ಶಿವಮೊಗ್ಗ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ವತಿಯಿಂದ ಪೊಲೀಸ್ ಇಲಾಖೆಯ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಕ್ಕಳ ಪ್ರಕರಣಗಳ ನಿರ್ವಹಣೆಯ ಕುರಿತಂತೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಸಂಪನ್ಮೂಲ ವ್ಯಕ್ತಿಗಳಾದ ರೋಹಿತ್, ಮಂಜುನಾಥ್ ಪಾಟೀಲ್,
ಗಾಯತ್ರಿರವರು ಮಕ್ಕಳ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇದ ಕಾಯ್ದೆ, ಬಾಲ ಕಾರ್ಮಿಕರ ದುಡಿಮೆ (ನಿಷೇಧ) ಕಾಯ್ದೆ, ಪೋಕ್ಸೋ ಮುಂತಾದ ವಿಷಯದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭದ್ರಾವತಿಯಲ್ಲಿ ರೈಲ್ವೆ ಸುರಕ್ಷಾ ಜಾಗೃತಿ ಅಭಿಯಾನ

0

ಭದ್ರಾವತಿ ಸಮೀಪದ ಕಡದಕಟ್ಟೆಯ ಕೆಜಿಆರ್ ಗ್ರಾಮಾಂತರ ಹಿರಿಯ ಪ್ರಾಥಮಿಕ ಶಾಲೆ(ಅನುದಾನಿತ) ಮತ್ತು ನವಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿವಮೊಗ್ಗ ರೈಲ್ವೆ ಇಲಾಖೆ ವತಿಯಿಂದ ಸುರಕ್ಷಿತ ರೈಲ್ವೆ ಪ್ರಯಾಣ ಹಾಗೂ ರೈಲ್ವೆ ಕಾಯ್ದೆ ಕುರಿತು ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು

ಶಿವಮೊಗ್ಗ ಆರ್‍ಪಿಎಫ್ ಇನ್ಸ್‍ಪೆಕ್ಟರ್ ಬಿ.ಎನ್.ಕುಬೇರಪ್ಪ ಹಾಗೂ ಸಬ್ ಇನ್ಸ್‍ಪೆಕ್ಟರ್ ಸಂತೋಷ್ ಎಸ್ ಗಾವಕರ್ ಹಾಗೂ ಸಿಬ್ಬಂದಿ ವರ್ಗದವರು ಜಾಗೃತಿ ಅಭಿಯಾನ ನಡೆಸಿಕೊಟ್ಟರು.

ಪಿಎ ಸಿಸ್ಟಂ ಮತ್ತು ಟಿವಿ ಪ್ರದರ್ಶಕಗಳ ಮೂಲಕ ವಿದ್ಯಾರ್ಥಿಗಳಿಗೆ ಕಲ್ಲು ತೂರಾಟ, ರೈಲ್ವೆ ಹಳಿ ಅತಿಕ್ರಮಣ, ರೈಲ್ವೆ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದರ ಪರಿಣಾಮ, ಜಾನುವಾರುಗಳ ಅಪಘಾತ, ಆತ್ಮಹತ್ಯೆ ಮತ್ತು ಫುಟ್ ಬೋರ್ಡ್‍ಗಳಲ್ಲಿ ಪ್ರಯಾಣಿಸುವುದರಿಂದ ಆಗುವ ಅವಘಡಗಳು ಇತ್ಯಾದಿಗಳ ಗಂಭೀರತೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.

ರೈಲ್ವೇ ಕಾಯ್ದೆಯಡಿ ಬರುವ ಅಪರಾಧಗಳು ಹಾಗೂ ಶಿಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟ ಅವರು ಎಲ್‍ಸಿ ಗೇಟ್‍ಗಳನ್ನು ಹಾದುಹೋಗುವಾಗ ಎಲ್ಲರೂ ನಿಯಮಗಳನ್ನು ಅನುಸರಿಸಬೇಕು. ಹಾಗೂ ರೈಲುಗಳ ಸುರಕ್ಷಿತ ಮತ್ತು ಸುಗಮ ಓಡಾಟಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೆಜಿಆರ್ ಗ್ರಾಮಾಂತರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುವರ್ಣ ಹೆಚ್.ಡಿ, ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.

ತವರು ಮನೆಯಿಂದ ಮೆರವಣಿಗೆ ಮೂಲಕ ಪತಿಯ ಮನೆಗೆ ಬಂದ ಮಾರಿಕಾಂಬೆ

0

ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ತಾಯಿಯ ತವರು ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಮಾರಿಕಾಂಬಾ ಮೂರ್ತಿಯನ್ನು ಮಂಗಳವಾರ ರಾತ್ರಿ ಅದ್ಧೂರಿಯಾದ ಮೆರವಣಿಗೆ ಹಾಗೂ ರಾಜಬೀದಿ ಉತ್ಸವದ ಮುಖಾಂತರ ಗಂಡನ ಮನೆಗೆ ತರಲಾಯಿತು. ಸಾವಿರಾರು ಜನರು ತವರು ಮನೆ ದೇವಸ್ಥಾನದಲ್ಲಿ ಜಮಾಯಿಸಿದ್ದರು.

ಮಂಗಳವಾರ ರಾತ್ರಿ 11ಕ್ಕೆ ಮಹಾಮಂಗಳಾರತಿ ನಂತರ ಪೋತರಾಜನಿಂದ ಚಾವಟಿ ಸೇವೆ ನಡೆಯಿತು. ನಂತರ ಹೆಣ್ಣು ಒಪ್ಪಿಸುವ ಧಾರ್ಮಿಕ ಪೂಜಾ ವಿಧಾನಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ನೂಕು ನುಗ್ಗಲಾಯಿತು.

ಶ್ರೀ ದೇವಿಯ ದಂಡಿನ ಮೆರವಣಿಗೆಯು ಪ್ರಸಿದ್ಧ ಕಲಾತಂಡಗಳ ಪಾಲ್ಗೊಳ್ಳುವಿಕೆಯ ಜತೆಯಲ್ಲಿ ನಡೆಯಿತು. ಭಕ್ತರು ದೇವಿಯ ದರ್ಶನ ಪಡೆದರು.
ಬೆಳ್ತಂಗಡಿಯ ಸೃಷ್ಠಿ ಆರ್ಟ್ಸ್ ನ ಕಲಾವಿದರ ತಂಡ, ಕೀಲುಕುದುರೆ, ಕರಗ, ರಾಜ, ರಾಣಿ, ಸಿಂಹ ಸೇರಿದಂತೆ ವಿವಿಧ ವೇಷಧಾರಿಗಳು, ಹುಬ್ಬಳ್ಳಿಯ ಬ್ಯಾಂಡ್ ಬಳಗ, ಸಿರಸಿಯ ಮುಖೇಶ್ ಆರ್ಟ್ಸ್ ಬೇಡರ ವೇಷದ ಕಲಾವಿದರು, ಅರಸಿಕೇರೆಯ ಶ್ರೀ ರಾಮ ಯುವಕರ ಕಲಾಸಂಘದ ಸದಸ್ಯರು ಸೋಮನ ಕುಣಿತ, ನಂದಿಕೋಲು ನಡೆಸಿಕೊಟ್ಟರು.

ವಾದ್ಯಗಾರರು ಕಾಂತಾರ ಚಲನಚಿತ್ರದ ಗೀತೆಯನ್ನು ನುಡಿಸಿದರು. ಮಂಡ್ಯ ಕೆ.ಆರ್.ನಗರದ ಆದಿಶಕ್ತಿ ತಂಡವು ನಗಾರಿ, ಡೊಳ್ಳು ಕಲಾವಿದರು, ಚಂಡೆವಾದನ, ಮಂಗಳವಾದ್ಯ ಸೇರಿದಂತೆ ಮುಂತಾದ ಕಲಾತಂಡಗಳ ಸದಸ್ಯರು ರಾಜಬೀದಿ ಉತ್ಸವದಲ್ಲಿ ಭಾಗವಹಿಸಿದ್ದರು.

ಭವ್ಯರಥದಲ್ಲಿ ಶ್ರೀ ಮಾರಿಕಾಂಬೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬುಧವಾರ ಬೆಳಗ್ಗೆ ಗಂಡನ ಮನೆಗೆ ತರಲಾಯಿತು. ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಸಿದ್ಧಪಡಿಸಿದ್ದ ಬೃಹತ್ ವೇದಿಕೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಆಚರಣೆಗಳನ್ನು ನಡೆಸಲಾಯಿತು.

ಬುಧವಾರದದಿಂದ ಗಂಡನ ಮನೆ ಆವರಣದಲ್ಲಿ ಶ್ರೀ ಮಾರಿಕಾಂಬಾ ದೇವರ ದರ್ಶನಕ್ಕೆ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಘಟೇವು ಪ್ರವೇಶ ನಂತರ ಮಂಗಳಾರತಿ ನಡೆಸಲಾಯಿತು.

ಫೆ. 15ರವರೆಗೂ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾರಿಕಾಂಬ ಜಾತ್ರೆಯ ಎರಡನೇ ದಿನವೂ ದೇವಿಯ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಸಲ್ಲಿಸಿದರು.

ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ, ಪೋತರಾಜ ರವಿ, ಉಪಾಧ್ಯಕ್ಷರು, ಸಹ ಕಾರ್ಯದರ್ಶಿ, ವಿವಿಧ ಸಮಿತಿ ಸಂಚಾಲಕರು ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರ ಕಸಾಪ ಸಮಿತಿಗೆ ಲೇಖಕಿ ರಂಜನಿ ದತ್ತಾತ್ರಿ ಮಹಿಳಾ ಪ್ರತಿನಿಧಿಯಾಗಿ ನೇಮಕ

0

ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಲೇಖಕಿ,ಅಂಕಣಕಾರ್ತಿ , ನಿರೂಪಕಿ ಹಾಗು ಸಮಾಜಸೇವಾಕಾರ್ಯಕರ್ತೆ ಎಂದು ಹೆಸರುಮಾಡಿರುವ, ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸದಾ ತೊಡಗಿರುವ ಶ್ರೀಮತಿ ಶ್ರೀರಂಜನಿ ದತ್ತಾತ್ರಿ ಯವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮವಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿನಿಧಿಯಾಗಿ ನೇಮಕಗೊಂಡಿರುವುದು ಇದೇ ಪ್ರಥಮ. ಹಾಗೆ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ಕಳೆದ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಾ ಬಂದ ಮಹಿಳಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಮ್ಮೇಳನಗಳನ್ನು ಆಯೋಜನೆ ಮಾಡುವುದರಲ್ಲಿ ಶ್ರೀರಂಜನಿಯವರ ಪಾತ್ರ ಅಪಾರವಾಗಿದ್ದುದನ್ನು ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಕಂಡಿದ್ದಾರೆ.

ಸಮ್ಮೇಳನಗಳ ಗೋಷ್ಠಿ ನಿರ್ವಹಣೆ, ಆಯೋಜನೆ ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ಹಾಗೆ ರಾಜ್ಯಾಧ್ಯಕ್ಷರಾಗಿದ್ದ ನಾಡೋಜ ಡಾ.ಮನುಬಳಿಗಾರ ರವರು ಶ್ರೀರಂಜನಿಯವರ ಪ್ರತಿಭೆಯನ್ನು ಗುರುತಿಸಿ ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯ ನಿರೂಪಣೆಗೆ ಆಹ್ವಾನಿಸಿದ್ದನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಮೆಚ್ಚಿಗೆಗೆ ಪಾತ್ರರಾಗಿ ಜಿಲ್ಲೆಗೆ ಹೆಸರನ್ನು ತಂದಿದ್ದರು.

ಅವರ ಪ್ರತಿಭೆಯನ್ನು ಎಂದು ಗುರುತಿಸಿದ್ದ ನಮ್ಮ ಈಗಿನ ಹೆಮ್ಮೆಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ನಾಡೋಜ ಡಾ.ಮಹೇಶ್ ಜೋಷಿಯವರು ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಗೋಷ್ಠಿಯ ನಿರೂಪಣೆಗೆ ಆಹ್ವಾನಿಸಿದ್ದು ಜಿಲ್ಲೆಗೆ ಸಂದ ಮತ್ತೊಂದು ಗೌರವ.

ನಿರಂತರ ಎರಡು ವರ್ಷ ಅನುಕ್ರಮವಾಗಿ ಗೋಷ್ಠಿಗಳ ನಿರೂಪಣೆಗೆ ಕಾರ್ಯಕಾರಿ ಸಮಿತಿಯಲ್ಲಿ ಇಲ್ಲದ ಒಬ್ಬ ಪ್ರತಿನಿಧಿಗೆ ದೊರೆತಿರುವುದು ಇದೇ ಮೊದಲೆನ್ನಬಹುದಾಗಿದೆ. ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡು ರಾಜ್ಯಾಧ್ಯಕ್ಷರ ಗಮನಸೆಳೆದು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ, ಗೋಷ್ಠಿಗಳಲ್ಲಿ ಅವರು ನಿರ್ವಹಿಸುವ ಕಲೆಗಾರಿಕೆ ಅಪರೂಪದ್ದು.. ಪ್ರಸ್ತುತ ವಿಚಾರಗಳ ಬಗ್ಗೆ , ಪ್ರವಾಸ ಕಥನಗಳ ಬಗ್ಗೆ, ಹಲವು ವ್ಯಕ್ತಿಗಳ ಬಗ್ಗೆ, ರಾಷ್ಟ್ರೀಯ ಚಿಂತನೆಗಳ ಬಗ್ಗೆ… ಹೀಗೆ ನೂರಾರು ಲೇಖನಗಳು, ಮಾಡಿದ ಭಾಷಣಗಳ ಮೂಲಕ ಶ್ರೀರಂಜಿನಿ ಎಲ್ಲರಿಗೂ ಪರಿಚಿತರು.

ಅಲ್ಲದೆ ಈ ಹಿಂದೆ ಹಲವು ಮಹಿಳಾ ಸಂಘಟನೆಗಳ ಅಧ್ಯಕ್ಷರಾಗಿ.. ಅಂತರಾಷ್ಟ್ರೀಯ ಸಂಸ್ಥೆ ಇಬ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಅಧ್ಯಕ್ಷೆಯಾಗಿ ಮಾಡಿದ ಸೇವಾ ಕಾರ್ಯಗಳಿಗೆ ಹಲವು ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿದ್ದಾರೆ. ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ರಜತ ವರ್ಷದ ಅಧ್ಯಕ್ಷೆಯಾಗಿ, ಶ್ರೀಲಲಿತಾ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ, ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗದ ಸಹಕಾರ್ಯದರ್ಶಿಯಾಗಿ ..ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೆಲೆಯಲ್ಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಲ್ಲಿ ಘಟಕ ಸಂಯೋಜಕಿ, ಜಿಲ್ಲಾ ಸಂಯೋಜಕಿ, ವಿಭಾಗ ಸಂಯೋಜಕಿ, ಮಹಿಳಾ ಪ್ರಾಂತ ಪ್ರಮುಖ ಆಗಿ ಎಂಟು ವರ್ಷಗಳ ಕಾಲ ವಿವಿಧ ಜವಾಬ್ದಾರಿ ನಿರ್ವಹಿಸಿ ಜಿಲ್ಲೆಯಾದ್ಯಂತ ಸಂಚರಿಸಿ ಸಂಘಟಿಸಿದ ಅನುಭವ ಇವರಿಗಿದೆ.

ಶ್ರೀರಂಜನಿಯವರ ಸಂಘಟನಾತ್ಮಕ ಶಕ್ತಿ, ಅಮೂಲ್ಯ ಲೇಖನಗಳು, ಭಾಷಣಗಳು, ಸಾರ್ವಜನಿಕ ಚಟುವಟಿಕೆಗಳು, ವಿವಿಧ ಮಹಿಳಾ ಸಂಘಟನೆಗಳೊಂದಿಗಿನ ಇವರ ಬಾಂದವ್ಯವನ್ನು, ಸಾಹಿತ್ಯ ಸೇವೆಯನ್ನು ಗಮನಿಸಿದ ನಾಡೋಜ ಡಾ.ಮಹೇಶ್ ಜೋಶಿಯವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಥಮವಾಗಿ ಶ್ರೀರಂಜನಿಯವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನಾಮಕರಣ ಮಾಡಿದ್ದರು.

ಕೇವಲ ಆರು ತಿಂಗಳ ಅವಧಿಯಲ್ಲಿ ಶ್ರೀರಂಜನಿಯವರ ಕಾರ್ಯಕ್ಷಮತೆಯನ್ನು ಗುರುತಿಸಿ ಮತ್ತೆ ಅವರನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಪ್ರತಿನಿಧಿಯಾಗಿ ನಾಮಕರಣ ಮಾಡಿದ್ದಾರೆ. ಇದು ಶಿವಮೊಗ್ಗ ಜಿಲ್ಲೆಯ ಸಾಹಿತ್ಯಾಭಿಮಾನಿಗಳಿಗೆ ಹಾಗು ಜಿಲ್ಲೆಯ ಮಹಿಳೆಯರಿಗೆ, ಮಹಿಳಾ ಸಾಹಿತಿಗಳಿಗೆ ಸಂದ ಗೌರವವಾಗಿದೆ.

ನಿರಂತರ ಪರಿಶ್ರಮದಿಂದ ಹಾಗು ಅನೇಕ ಅಡೆತಡೆಗಳನ್ನು ಎದುರಿಸಿ ಸ್ವಂತ ಬಲದಿಂದ ಕಾರ್ಯನಿರ್ವಹಿಸುತ್ತಾ ಇರುವ ಇವರಿಗೆ ಗೌರವಗಳು ತಾವೇ ಅರಿಸಿಕೊಂಡು ಶ್ರೀರಂಜನಿಯವರು ಬಯಸದಿದ್ದರು ಬರುತ್ತಿವೆ. ಈ ಗೌರವಗಳಿಂದ ಶ್ರೀರಂಜನಿಯವರು ಇನ್ನು ಉನ್ನತ ಸ್ಥಾನವನ್ನು ಸಾಹಿತ್ಯ ಕ್ಷೇತ್ರದಲ್ಲಿ ಗಳಿಸುವಂತಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆಂದು ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಡಿ.ಬಿ.ಶಂಕರಪ್ಪನವರು ಅಭಿನಂದನೆ ಸಲ್ಲಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರ ಬಜೆಟ್ ದೂರದೃಷ್ಟಿ ಹೊಂದಿದೆ-ಜಿ.ಎನ್.ರಾವ್

0

ಕೇಂದ್ರ ಸರ್ಕಾರ ದೂರದೃಷ್ಠಿ ಹೊಂದಿರುವ ಬಜೆಟ್ ಮಂಡಿಸಿದ್ದು, ದೇಶದ ಅಭಿವೃದ್ಧಿ ದೃಷ್ಠಿಯಿಂದ ಉತ್ತಮ ಬಜೆಟ್ ಮಂಡಿಸಲಾಗಿದೆ. ಬಜೆಟ್ ಉತ್ತಮ ಅಂಶಗಳನ್ನು ಒಳಗೊಂಡಿದೆ ಎಂದು ಆರ್ಥಿಕ ತಜ್ಞ ಜಿ.ಎನ್.ರಾವ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ 2023 ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಜನರು ವಸ್ತುಗಳ ಬೆಲೆ ಏರಿಕೆ ಹಾಗೂ ಇಳಿಕೆ ಬಗ್ಗೆ ಮೊದಲು ಬಜೆಟ್‌ನಲ್ಲಿ ಗಮನ ಹರಿಸುತ್ತಾರೆ. ಯುವಜನತೆ ಉದ್ಯೋಗ ಸೃಷ್ಠಿ ಕುರಿತು ಬಜೆಟ್ ಅವಲೋಕಿಸುತ್ತಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಸದೃಢ ಹಾದಿಯಲ್ಲಿ ಸಾಗುವ ಪ್ರಮುಖ ಅಂಶಗಳಿವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ವಿವಿಧ ವಿಷಯಗಳಿಗೆ ಆದ್ಯತೆ ನೀಡಿದ್ದು, ಎಲ್ಲ ವಲಯಗಳಿಗೂ ಪ್ರಾಮುಖ್ಯತೆ ನೀಡಿರುವುದನ್ನು ಕಾಣಬಹುದಾಗಿದೆ.

ಪ್ರತ್ಯೇಕವಾಗಿ ಗುರುತಿಸಿ ಗಮನ ಹರಿಸಲಾಗಿದೆ. ಎಸ್‌ಸಿ ಎಸ್‌ಟಿ, ಯುವಜನತೆ, ಮಹಿಳೆ, ರೈತ ವಲಯವನ್ನು ಗುರಿಯಾಗಿಸಿ ಬಜೆಟ್ ಮಂಡಿಸಲಾಗಿದೆ. ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶ ಸದೃಢಗೊಳಿಸುವ ನಿಟ್ಟಿನಲ್ಲಿ ಮೂಲಸೌಕರ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಹತ್ತು ಲಕ್ಷ ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮೂಲ ಸೌಕರ್ಯ ಕ್ಷೇತ್ರದಲ್ಲಿ ಆಗುತ್ತಿದೆ.
ಉದ್ಯೋಗ ಸೃಷ್ಠಿಗೆ ಹೂಡಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಅಧಿಕಾರ ಹಿಡಿದ ಪಕ್ಷಗಳು ಚುನಾವಣೆ ಘೋಷಣೆ ಮುನ್ನ ಪ್ರಣಾಳಿಕೆಯಲ್ಲಿ ಸೂಚಿಸಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತವೆ. ಸಂಪನ್ಮೂಲ ಕ್ರೋಢಿಕರಣ, ಹಂಚಿಕೆ ಕುರಿತು ಬಜೆಟ್‌ನಲ್ಲಿ ವಿವರಿಸಲಾಗುತ್ತದೆ ಎಂದು ತಿಳಿಸಿದರು.

ಲೆಕ್ಕ ಪರಿಶೋಧಕ ಶರತ್, ಲೆಕ್ಕ ಪರಿಶೋಧಕ ದೀಪಕ್ ಜೈನ್ ಅವರು 2023 ಬಜೆಟ್ ಕುರಿತು ವಿಶ್ಲೇಷಣೆ ಮಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಪರಮೇಶ್ವರ್, ಜಿ.ವಿಜಯ್‌ಕುಮಾರ್, ಶಂಕರಪ್ಪ, ಪ್ರದೀಪ್ ಎಲಿ, ಗಣೇಶ್ ಅಂಗಡಿ, ಬಿ.ಗೋಪಿನಾಥ್, ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಫೆ.8 ಶಿವಮೊಗ್ಗಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ಮಹತ್ವದ ಯೋಜನೆಗಳಿಗೆ ಚಾಲನೆ

0

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಫೆ.08 ರಂದು ಮಧ್ಯಾಹ್ನ 2 ಗಂಟೆಗೆ ಎನ್‍ಇಎಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕೆಳಕಂಡ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದ ಸಹಯೋಗದೊಡನೆ ರಾಜ್ಯ ಸರ್ಕಾರದ ವಸತಿ ಯೋಜನೆಗಳ ಸಂಯೋಜನೆಯಡಿ ನಿರ್ಮಿಸುತ್ತಿರುವ 3000 ಜಿ+2 ಗುಂಪು ಮನೆಗಳಲ್ಲಿ ಪೂರ್ಣಗೊಂಡಿರುವ 288 ಮನೆಗಳ ಉದ್ಘಾಟನೆ ಮತ್ತು 700 ಫಲಾನುಭವಿಗಳಿಗೆ ಅಂತಿಮ ಹಂಚಿಕೆ ಪತ್ರ ವಿತರಣೆ. ರೂ.348 ಲಕ್ಷ ಅಂದಾಜು ಮೊತ್ತದ ಶಿವಮೊಗ್ಗ ನಗರದಲ್ಲಿ 02 ಕೆರೆಗಳ ಲೋಕಾರ್ಪಣೆ ಮತ್ತು ಉದ್ಯಾನವನಗಳಲ್ಲಿ ಅಳವಡಿಸಿರುವ ಹೊರಾಂಗಣ ಜಿಮ್ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದ 2ನೇ ಅಂತಸ್ತಿನ ಕಟ್ಟಡ. ರೂ.2530 ಲಕ್ಷ ಮೊತ್ತದ ಶಿವಮೊಗ್ಗ ನಗರದ ಸಿಸಿ/ಕಾಂಕ್ರಿಟ್ ರಸ್ತೆ ಅಭಿವೃದ್ದಿ ಕಾಮಗಾರಿ. ರೂ.174 ಲಕ್ಷ ಮೊತ್ತದ ಸ್ಮಾರ್ಟ್ ಎಜುಕೇಷನ್ ಪ್ರಾಜೆಕ್ಟ್(23 ಶಾಲೆಗಳ) ಫೇಸ್-2.
ರೂ.5800 ಲಕ್ಷದ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಮತ್ತು ಪುರಲೆ ಗ್ರಾಮದ ಹತ್ತಿರ 5.13 ಎಂಎಲ್‍ಡಿ ಸಾಮಥ್ರ್ಯದ ಎಸ್‍ಬಿಆರ್ ತಂತ್ರಜ್ಞಾನದ ಮಲಿನ ನೀರು ಶುದ್ದೀಕರಣ ಘಟಕ. ರೂ.700 ಲಕ್ಷದ ಅಮೃತ್ ಯೋಜನೆಯಡಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಮತ್ತು ಕೋಟೆ ರಸ್ತೆಯ ಬಿಸಿ ಲೇಡಿಸ್ ಹಾಸ್ಟೆಲ್ ಹತ್ತಿರ ಕಾಮಗಾರಿ ವೆಟ್-ವೆಲ್‍ಕಮ್ ಪಂಪು ಮನೆ. ರೂ.115 ಲಕ್ಷ ವೆಚ್ಚದ ನಗರದ 3ನೇ ಹಂತದ ಸಮಗ್ರ ಒಳಚರಂಡಿ ಯೋಜನೆಯಡಿ ಆಟೋ ಕಾಂಪ್ಲೆಕ್ಸ್ ಹತ್ತಿರ ಮತ್ತು ಸೀಗೆಹಟ್ಟಿ ಹತ್ತಿರ ವೆಟ್-ವೆಲ್ ಕಮ್ ಪಂಪು ಮನೆ. ರೂ.420 ಲಕ್ಷ ವೆಚ್ಚದ ಕೇಂದ್ರ ಪುರಸ್ಕೃತ ಅಮೃತ್-1ಯೋಜನೆಯಡಿ ಶಿವಮೊಗ್ಗ ನಗರದ ನೀರು ಸರಬರಾಜು ವ್ಯವಸ್ಥೆ, ಪಂಪಿಂಗ್ ಮೆಷನರಿ ಅಳವಡಿಕೆ ಮತ್ತು ಹಳೇ ಶಿಥಿಲಾವಸ್ಥೆಯಲ್ಲಿರುವ 2 ಸಂಖ್ಯೆ ಟ್ಯಾಂಕ್ ತೆರವುಗೊಳಿಸುವ ಕಾಮಗಾರಿ. ರೂ.292 ಲಕ್ಷ ವೆಚ್ಚದ ಸರ್ಕಾರಿ ಪದವಿಪೂರ್ವ ಕಾಲೇಜು ಶಿವಮೊಗ್ಗ 12 ಕೊಠಡಿ ಮತ್ತು 04 ಶೌಚಾಲಯ. ರೂ. 700 ಲಕ್ಷದ ಶಿವಮೊಗ್ಗ ನಗರ, ಮಹಾಗಣಪತಿ ಸೇವಾ ಪ್ರತಿಷ್ಟಾನ ದೇವಾಲಯದಲ್ಲಿ ಪ್ರವಾಸಿ ತಾಣದ ಅಭಿವೃದ್ದಿ, ದ್ವಾದಶ ಜ್ಯೋತಿರ್ಲಿಂಗ ಮತ್ತು ಬಯಲು ರಂಗ ಮಂದಿರ ನಿರ್ಮಾಣ ಕಾಮಗಾರಿ.
ರೂ.1541.28 ಲಕ್ಷದ ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಮತ್ತು ಬೋಧನಾ ಆಸ್ಪತ್ರೆ, ಶಿವಮೊಗ್ಗ ಕಟ್ಟಡದ ಹೆಚ್ಚುವರಿ ಕಾಮಗಾರಿ ಹಾಗೂ ಇಲ್ಲಿನ ಮಹಿಳಾ ವಿದ್ಯಾರ್ಥಿಗಳ ವಸತಿ ನಿಲಯ. ರೂ.211 ಲಕ್ಷದ ಆರ್‍ಎಡಿಎಫ್-24 ಯೋಜನೆಯಡಿ ಮಂಜೂರಾಗಿರುವ ಪಶುಪಾಲನಾ ಇಲಾಖೆಯ ಕುವೆಂಪು ಬಡಾವಣೆಯಲ್ಲಿ ಪಾಲಿಕ್ಲಿನಿಕ್ ನೂತನ ಕಟ್ಟಡ ನಿರ್ಮಾಣ ಕಾಮಗಾರಿ. ರೂ.65 ಲಕ್ಷದ ನಗರದ ವಾರ್ಡ್ ನಂ 12, 17, 23, 24 ರಲ್ಲಿ ಉದ್ಘಾಟನೆಗೆ ಸಿದ್ದವಿರುವ ಅಂಗನವಾಡಿ ಕಟ್ಟಡಗಳು. ರೂ.405 ಲಕ್ಷ ಶಿವಮೊಗ್ಗ ನಗರದ ವಿವಿಧ ಭಾಗದಲ್ಲಿ ನಿರ್ಮಿಸಿದ ಸಮುದಾಯ ಭವನಗಳು. ರೂ.75 ಲಕ್ಷದ ಅಂಗನವಾಡಿ ಕಟ್ಟಡಗಳು, ರೂ.50 ಲಕ್ಷದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರದ ಕಟ್ಟಡ. ರೂ.350 ಲಕ್ಷ ವೆಚ್ಚದ ಶಿವಮೊಗ್ಗ ನಗರದ ಊರುಗಡೂರಿನಲ್ಲಿ ನಿರ್ಮಿಸಿರುವ ಜಿಲ್ಲಾ ವಾಲ್ಮೀಕಿ ಭವನ.
ಅಂದಾಜು 2160 ಲಕ್ಷ ವೆಚ್ಚದ ಶಿವಮೊಗ್ಗ ನಗರದಲ್ಲಿನ ಅಂಗನವಾಡಿ ಕಟ್ಟಡ/ ಸರ್ಕಾರಿ ಶಾಲೆಯ ಅಭಿವೃದ್ಧಿ/ ಸ್ಮಶಾನ ಕಾಂಪೌಂಡ್/ ರಸ್ತೆ ಮತ್ತು ಬಾಕ್ಸ್ ಚರಂಡಿ/ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ. 645.92 ಲಕ್ಷ ವೆಚ್ಚದ ಶಿವಮೊಗ್ಗ ನಗರದಲ್ಲಿನ ವಿವಿಧ ವಾರ್ಡ್ ಗಳಲ್ಲಿ ರಸ್ತೆ, ಚರಂಡಿ ಮತ್ತು ಪಾರ್ಕ್ ಅಭಿವೃದ್ಧಿ ಕಾಮಗಾರಿ. 107 ಲಕ್ಷ ವೆಚ್ಚದ ಶಿವಮೊಗ್ಗ ನಗರ ವಸತಿ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ಧಿ ಮತ್ತು ವ್ಯಾಯಾಮ ಸಾಮಾಗ್ರಿ ಅಳವಡಿಸುವ ಕಾಮಗಾರಿ. 1950 ಲಕ್ಷ ವೆಚ್ಚದ ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿ, ವಿದ್ಯಾರ್ಥಿ ನಿಲಯ ನಿರ್ಮಾಣ. 1515 ಲಕ್ಷ ವೆಚ್ಚದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಅನ್ವಯ ಶಿವಮೊಗ್ಗ ನಗರದ ತುಂಗಾ ನದಿಗೆ ಸೇರುತ್ತಿರುವ ಮಲಿನ ನೀರನ್ನು ಪ್ರತಿಬಂಧಿಸುವುದು ಮತ್ತು ತಿರುಗಿಸುವ ಕಾಮಗಾರಿ. 100 ಲಕ್ಷ ವೆಚ್ಚದ ಶಿವಮೊಗ್ಗ ನಗರದ ವಾರ್ಡ್ ನಂ: 06,08,12,27,30 ರಲ್ಲಿ ಅಂಗನವಾಡಿ ಕಟ್ಟಡ ಶಂಕು ಸ್ಥಾಪನೆ. 780.5 ಲಕ್ಷ ವೆಚ್ಚದ ಶಿವಮೊಗ್ಗ ನಗರ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣ. 785 ಲಕ್ಷ ವೆಚ್ಚದ ಬಯಲು ರಂಗಮಂದಿರ, ಸಮುದಾಯ ಭವನ, ಸಭಾ ಭವನ, ಸ್ಪೋಟ್ರ್ಸ್ ಕ್ಲಬ್ ನಿರ್ಮಾಣ ಕಾಮಗಾರಿ. 326.32 ಲಕ್ಷ ವೆಚ್ಚದ ಶ್ರೀಮತಿ ಇಂದಿರಾಗಾಂಧಿ ಮಹಿಳಾ ನಸಿರ್ಂಗ್ ವಿದ್ಯಾರ್ಥಿ ನಿಲಯದ ಸ್ವಂತ ಕಟ್ಟಡದ ಶಂಕುಸ್ಥಾಪನಾ ಸಮಾರಂಭ, ಸಾನ್ವಿ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ ಅಂದಾಜು. 150 ಲಕ್ಷ ವೆಚ್ಚದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ರಿಜಿನಲ್ ಲಸಿಕಾ ಉಗ್ರಾಣ ಕೇಂದ್ರದ ಕಟ್ಟಡ ನಿರ್ಮಾಣ. 1062.50 ಲಕ್ಷ ವೆಚ್ಚದ ಶಿವಮೊಗ್ಗ ನಗರದ ವಿವಿಧ ವಾರ್ಡ್‍ಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ.
ತುಂಗಾನಗರ 100 ಅಡಿ ರಸ್ತೆಗೆ ಮತ್ತು ತುಂಗಾ ಚಾನಲ್ ಸರ್ಕಲ್‍ಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ|| ಗಾಂಧಿ ಬಸ್ಪ ಇವರ ಹೆಸರು ನಾಮಕರಣ ಮಾಡುವ ಕಾರ್ಯಕ್ರಗಳಲ್ಲಿ ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಿಗಳ ಅಧ್ಯಕ್ಷರು, ಮಹಾನಗರಪಾಲಿಕೆ ಮಹಾಪೌರರು, ಉಪ ಮಹಾಪೌರರು, ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತಾಯಿ ಮಗ ನಾಪತ್ತೆ

0

ಶಿವಮೊಗ್ಗ :
ಸುಧಾ, 28 ವರ್ಷಗಳು, ಕುಂಸಿ ಗ್ರಾಮ ಇವರು ತನ್ನ ಮಗ 07 ವರ್ಷದ ನಿತಿನ್‍ನನ್ನು ಕರೆದುಕೊಂಡು ಮನೆಯಿಂದ ನಾಪತ್ತೆಯಾಗಿರುತ್ತಾಳೆ.
ಸುಧಾ ಸಾಧಾರಣ ಮೈಕಟ್ಟು ಕೋಲುಮುಖ, ಎಣ್ಣೆಗಪ್ಪು ಬಣ್ಣ, 5 ಅಡಿ ಎತ್ತರ ಇದ್ದು ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ವೇಳೆ ಗೋಲ್ಡ್ ಕಲರ್ ಟಾಪ್,ವೈಟ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ. ಮಗ ನಿತಿನ್ 3.5 ಅಡಿ ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು ಮಾತನಾಡುತ್ತಾನೆ. ಕಾಣೆಯಾದ ವೇಳೆ ಕೆಂಪು ಟೀಶರ್ಟ್, ನೀಲಿ ಚಡ್ಡಿ ಧರಿಸಿರುತ್ತಾನೆ.
ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಶಿವಮೊಗ್ಗ ಕಂಟ್ರೋಲ್ ರೂಂ ಸಂಖ್ಯೆ : 08182-261400, ಕುಂಸಿ ಪೊಲೀಸ್ ಠಾಣೆ ಪಿ ಐ ಸಂಖ್ಯೆ 9480803351 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

3000 ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಗೆಸಂಘಟನಕಾರರ ಹರ್ಷ

0

ಶಿವಮೊಗ್ಗ: ರಾಜ್ಯದ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರದ ನಿರ್ಧಾರಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳ ಮತ್ತು ನೌಕರರ ಸಂಘವು ಸ್ವಾಗತಿಸಿದೆ.

ಸಂಘದ ಬೇಡಿಕೆಯಂತೆ ಸ್ಥಳೀಯ ಸಂಸ್ಥೆಗಳಲ್ಲಿನ 3000ಕ್ಕೂ ಹೆಚ್ಚಿನ ಪೌರಕಾರ್ಮಿಕರ ನೇರ ನೇಮಕಾತಿ ಗೆ ಸರ್ಕಾರ ಆದೇಶಿಸಿದ್ದು, ಗುತ್ತಿಗೆ ಕಾರ್ಮಿಕರಾಗಿರುವ ಒಳಚರಂಡಿ ಕಾರ್ಮಿಕರು, ಕಾಮಗಾರಿ ವಿಭಾಗದ ಲೋರ‍್ಸ್, ಕ್ಲಿರ‍್ಸ್, ನೇರ ನೇರ ನೇಮಕಾತಿಗೆ ಪರಿಗಣಿಸುವ ದಿಕ್ಕಿನಲ್ಲಿ ಸರ್ಕಾರ ಒಪ್ಪಿದೆ.

ಇದರೊಂದಿಗೆ ನೌಕರರ ೭ನೇ ವೇತನ ಆಯೋಗವನ್ನು ರಚಿಸಿ ಅನುಷ್ಠಾನಕ್ಕೆ ಮುಂದಾಗಿರುವುದು ಅಭಿನಂದನೀಯವಾಗಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷರಾದ ಎನ್.ಗೋವಿಂದ ಪ್ರಧಾನ ಕಾರ್ಯದರ್ಶಿ ಡಿ.ಮೋಹನಕುಮಾರ್ ಅವರು ತಿಳಿಸಿದ್ದಾರೆ.

ಪೌರ ಕಾರ್ಮಿಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಹಾಗೂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ, ರಾಜ್ಯದಲ್ಲೆ ಮೊದಲನೇಯದಾಗಿ ಶಿವಮೊಗ್ಗ ನಗರದಲ್ಲಿ ಪೌರಕಾರ್ಮಿಕರ ಕಲ್ಯಾಣಭವನ ನಿರ್ಮಾಣಕ್ಕೆ ಕಾರಣಕರ್ತರಾದ ಶಿವಮೊಗ್ಗ ನಗರ ಶಾಸಕರು ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್ ಈಶ್ವರಪ್ಪ ಅವರುಗಳಿಗೆ ಫೆ. ೮ ಶಿವಮೊಗ್ಗ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಪರವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳ ಮತ್ತು ನೌಕರರ ಸಂಘದಿಂದ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಎನ್. ಗೋವಿಂದ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದ ಸ್ಟೈಲ್ ಡಾನ್ಸ್ ಕ್ರೀವ್ ಸಂಸ್ಥೆಗೆ ಸ್ವನಿಧಿ ಸರ್ಕಾರದ ಪ್ರಶಸ್ತಿಪತ್ರ

0

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಕತ್ವದ ಕಾರ್ಯಕ್ರಮದಲ್ಲಿ, ಮಹಾನಗರಪಾಲಿಕೆಯ ಆಯೋಜನೆಯ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಜಾನಪದ ನೃತ್ಯ ಮತ್ತು ದೇಶ ಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದ್ದರು.

ಇವರ ಕಲೆಯನ್ನು ಮೆಚ್ಚಿ ಕೇಂದ್ರ ಮತ್ತು ರಾಜ್ಯವು ತಂಡವನ್ನು ಪ್ರಶಂಸಿಸುವುದರ ಸಲುವಾಗಿ “ಸ್ವನಿಧಿ ಸರ್ಕಾರದ ಪ್ರಶಸ್ತಿಪತ್ರ”ವನ್ನು ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯ ವಿದ್ಯಾರ್ಥಿಗಳು ಇದೆ ಪ್ರಥಮಬಾರಿಗೆ ಪಡೆದಿರುತ್ತಾರೆ. ಈ ಮೂಲಕ ಭಾಗವಹಿಸಿದ ಎಲ್ಲಾ ನೃತ್ಯ ವಿದ್ಯಾರ್ಥಿಗಳಿಗೂ, ಅವರ ಕಲೆಯನ್ನು ಉತ್ತೇಜನ ನೀಡುತ್ತಿರುವ ಅವರ ಪೋಷಕರಿಗೆ, ಸಂಸ್ಥೆಯ ನೃತ್ಯ ನಿರ್ದೆಶಕರಿಗೆ , ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗದ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿರುತ್ತಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆದಿಚುಂಚನಗಿರಿ ಶಾಖಾಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ

0

ಶಿವಮೊಗ್ಗ:
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾಸಂಸ್ಥಾನದ ಪ್ರಧಾನಕಾರ್ಯದರ್ಶಿ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕನಸಿನಂತೆ 1998ರಂದು ನಿರ್ಮಿಸಿದ ಸಮುದಾಯ ಭವನ ಉದ್ಘಾಟನೆ ದಿನದಿಂದ ಆರಂಭಗೊಂಡ ವಿವಾಹ ಮಹೋತ್ಸವಕ್ಕೆ 25ನೇ ವರುಷ ತಲುಪಿದ್ದು, ಈ ಮಹೋತ್ಸವವು ನಗರದ ಶರಾವತಿ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದ್ದು, ಅಂದಿನಿಂದ ಉಚಿತ ಸಾಮೂಹಿಕ ವಿವಾಹದಲ್ಲಿ ಸಾವಿರಾರು ಜನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರತಿ ವಿವಾಹ ಮಹೋತ್ಸವದ ವಿಶೇಷತೆ ಎಂದರೆ ಮದುವೆಯಾಗುವ ವಧು ವರರಿಗೆ ವಿವಾಹಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಮಠವೇ ನೀಡುತ್ತದೆ. ಹೆಣ್ಣಿಗೆ ತಾಳಿ, ಕಾಲುಂಗುರ, ಬಟ್ಟೆ ನೀಡಿದರೆ. ಗಂಡಿಗೆ ಅಂಗಿ,ಪಂಚೆ, ಕಲ್ಪವೃಕ್ಷ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಶ್ರೀ.ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.

ಆಸಕ್ತ ವಧು ವರರು ತಮ್ಮ ಇತ್ತೀಚಿನ ಭಾವಚಿತ್ರ,ಆಧಾರ್ ಕಾರ್ಡ್, ಜಾತಿ ಹಾಗೂ ಜನನ ಪ್ರಮಾಣ ಪತ್ರ,ಗ್ರಾಮ ಪಂಚಾಯಿತಿ ಅಥವಾ ನಗರಸಭೆಯಿಂದ ಪಡೆದ ದೃಢೀಕರಣ ಪತ್ರದೊಂದಿಗೆ ತಾವು ಹಾಗೂ ತಮ್ಮ ಪೋಷಕರೊಂದಿಗೆ ಬಂದು, ದಿನಾಂಕ :25/3/23 ರೊಳಗೆ ತಮ್ಮ ಹೆಸರನ್ನು ಮೇಲ್ಕಂಡ ವಿಳಾಸದಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕೋರುತ್ತೇವೆ.
ಪ್ರತಿ ವರ್ಷದಂತೆ ವಿವಾಹವಾಗಿ 50 ವರ್ಷ ತುಂಬಿದ ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೊಂದಾಯಿಸಲು 08182-257958,254141,9742885628 ಗೆ ಸಂಪರ್ಕಿಸಿ ಎಂದು ಮಹಾಸಂಸ್ಥಾನ ಮಠದ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.