Sunday, April 5, 2026
Sunday, April 5, 2026
Home Blog Page 1313

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ನೇಮಕಾತಿ

0

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ಸ್ರ್ತೀರೋಗ ತಜ್ಞರು, 02 ಮಕ್ಕಳ ತಜ್ಞರು ಹಾಗೂ 03 ಅರವಳಿಕೆ ತಜ್ಞರ ಒಟ್ಟು 07 ತಜ್ಞ ವೈದ್ಯರ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ & ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲು ಅರ್ಹ ತಜ್ಞ ವೈದ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಫೆ. 10 ರಂದು ಬೆಳಗ್ಗೆ 11:೦೦ರಿಂದ ಮ.01.೦೦ ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ ಶಿವಮೊಗ್ಗ ಇಲ್ಲಿ ತಮ್ಮ ವಿದ್ಯಾರ್ಹತೆಯ/ತರಬೇತಿಯ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ ಪ್ರತಿಗಳು ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08152-22238

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭದ್ರಾವತಿ ವಿಐಎಸ್ಎಲ್ ನಷ್ಟಕ್ಕೆ ಕೇಂದ್ರದ ಬಿಜೆಪಿ ಸರ್ಕಾರವೇ ಹೊಣೆ ಎನ್ಎಸ್ ಯುಐ ಆರೋಪ

0

ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಒತ್ತಾಯಿಸಿ ಎನ್ ಎಸ್ ಯು ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು

ಆಧುನಿಕ ಮೈಸೂರು ನಿರ್ಮಾತೃಗಳಲ್ಲೊಬ್ಬರಾದ ಸರ್ ಎಂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಸ್ಥಾಪನೆಯಾಗಿದ್ದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನ ಕೇಂದ್ರ ಸರ್ಕಾರ ಮುಚ್ಚಲು ಹುನ್ನಾರ ನಡೆಸುತ್ತಿದೆ ಎಂದು ಜಿಲ್ಲಾ ಎನ್ಎಸ್ ಯು ಸಂಘಟನೆ ತಿಳಿಸಿದೆ.

ವಿಐಎಸ್‌ಎಲ್ ಕಾರ್ಖಾನೆ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಭದ್ರಾವತಿ ಭಾಗದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಲೇ ಬಂದಿದೆ.
ಆದರೆ, ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಗಣಿ ಒದಗಿಸುವಲ್ಲಿ, ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಕಾರಣವಾಗಿದೆ. ಇದೀಗ ಕಾರ್ಖಾನೆಯನ್ನು ಮುಚ್ಚುವ ಪ್ರಯತ್ನ ನಡೆಸುತ್ತಿದ್ದು, ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಜಿಲ್ಲೆಯ ಆರ್ಥಿಕ ಚಟುವಟಿಕೆಯೂ ಕುಸಿಯುತ್ತಿದೆ. ಇದಕ್ಕೆಲ್ಲ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಎನ್ ಎಸ್ ಯು ಐ ಸಂಘಟನೆ ತಿಳಿಸಿದೆ.

ಜಿಲ್ಲೆಯ ಮತ್ತೊಂದು ಕೈಗಾರಿಕೆ ಎಂಪಿಎಂ ಸಹ ಬಿಜೆಪಿ ಸರ್ಕಾರದ ಹೊಣೆಗೇಡಿತನದಿಂದಾಗಿ ಮುಚ್ಚಲಾಗಿದೆ. ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿ ಉದ್ಯೋಗ ಸೃಜಿಸುವ ಬದಲು, ಸರ್ಕಾರಿ ಸ್ವಾಮ್ಯದ ಒಂದೊಂದೇ ಉದ್ಯಮಗಳನ್ನು ಮುಚ್ಚುತ್ತಾ ಮತ್ತಷ್ಟು ನಿರುದ್ಯೋಗ ಸೃಷ್ಟಿಗೆ ಕಾರಣವಾಗಿದೆ.

ಗೌರವಾನ್ವಿತ ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ, ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರೆಸುವಂತೆ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಜಿಲ್ಲಾ ಎನ್ಎಸ್ ಯುಐ ಒತ್ತಾಯಿಸಿದೆ.

ಹಾಗೆಯೇ ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೂ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸುತ್ತಿದೆ.
ವಿಐಎಸ್‌ಎಲ್ ಉಳಿವಿಗೆ ಹೋರಾಡುತ್ತಿರುವ ಕಾರ್ಮಿಕರ ಜೊತೆ ಎನ್.ಎಸ್.ಯು.ಐ. ಸದಾ ಇರಲಿದೆ. ಕೂಡಲೇ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ, ಎನ್.ಎಸ್.ಯು.ಐ. ವತಿಯಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ತಿಳಿಸಿದೆ.

ಪ್ರತಿಭಟನೆಯಲ್ಲಿ ಎನ್ ಎಸ್ ಯು ಐ ನ ರವಿ ಕಾಟಿಕೆರೆ, ಚರಣ್, ರ‍್ಷಿತ್ ,ವಿಕ್ರಂ, ರವಿ,ಚಂದ್ರು ಜಿ ರಾವ್ ,ತೌಫಿಕ್, ಹೇಮಂತ್, ಚರಣ್, ದೀಕ್ಷಿತ್ ಪ್ರದೀಪ್ ,ವರುಣ್ ವಿ ಪಂಡಿತ್, ನಾಗೇಂದ್ರ, ಸಾಗರ್, ಹಾಗೂ ಯುವ ಕಾಂಗ್ರೆಸ್ ನ , ಬಸವರಾಜ್, ಮಲಗಪ್ಪ ಶಿವು, ಅಬ್ದುಲ್, ಗಿರೀಶ್, ಆಕಾಶ್, ಗೌತಮ್ ನೂರಾರು ಯುವಕರು ಪಾಲ್ಗೊಂಡಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತರಬೇತಿ ಪಡೆದ ಸಿಬ್ಬಂದಿಗಳು ಸಹಕಾರಿ ಸಂಸ್ಥೆಗಳ ಆಸ್ತಿಯಾಗಬೇಕು-ಎ.ಆರ್. ಪ್ರಸನ್ನಕುಮಾರ್

0

ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಎರಡು ದಿನದ “ಆಡಳಿತ ಪರಿಣ ತಿ ಅಭಿವೃದ್ಧಿ ತರಬೇತಿಯನ್ನು” ದಿನಾಂಕ 4,5, ಫೆಬ್ರವರಿ 2023 ರಂದು ಶ್ರೀ ಕ್ಷೇತ್ರ ಹೊಂಬುಜ, ಹುಂಚ, ಹೊಸನಗರ ತಾಲೂಕಿನಲ್ಲಿ ಜರುಗಿಸಲಾಯಿತು.

ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳು ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಬೇಕು.
ಸಹಕಾರ ಸಂಸ್ಥೆಗಳ ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳು ತರಬೇತಿಯಿಂದ ಪಡೆದ ಜ್ಞಾನದ ಮೂಲಕ ತಮ್ಮ ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಿ ರೂಪುಗೊಳ್ಳಬೇಕೆಂದು ಶ್ರೀ ಎ ಆರ್ ಪ್ರಸನ್ನಕುಮಾರ್ ರವರು ತಿಳಿಸಿದರು.

ಸಂಯುಕ್ತ ಸಹಕಾರಿ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರ ಸಂಯುಕ್ತಾಶ್ರಯದಲ್ಲಿ ನಡೆಸುತ್ತಿರುವ ಡಿಸಿಬಿಎಂ ಕೋರ್ಸ್ಗೆ ಸಹಕಾರಿಯ ಸಿಬ್ಬಂದಿಗಳು ಸೇರಿ ಸಹಕಾರ ಕ್ಷೇತ್ರ ಹೆಚ್ಚಿನ ಅರಿವನ್ನು ಪಡೆದು ಸಹಕಾರಿಯನ್ನು ಲಾಭದಾಯಕವಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.

ಸಹಕಾರಿಗಳಲ್ಲಿ ಸುಸ್ತಿಯಾದ ಸಾಲಗಳನ್ನು ಕಾನೂನು ಮೂಲಕ ವಸೂಲಿ ಮಾಡಿ ಸಹಕಾರಿಯನ್ನು ಲಾಭದಾಯಕವಾಗಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಸಹ್ಯಾದ್ರಿ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ಶಿವಮೊಗ್ಗದ ವತಿಯಿಂದ ಸಾಲ ವಸೂಲಾತಿಗೆ ಮಾರಾಟಾಧಿಕಾರಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಮಾರಾಟಾಧಿಕಾರಿಯ ಸೇವೆಯನ್ನು ಜಿಲ್ಲೆಯ ಸೌಹಾರ್ದ ಸಹಕಾರಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಸಂಯುಕ್ತ ಸಹಕಾರಿಯು ಸದಸ್ಯ ಸಹಕಾರಿಗಳ ಅಧ್ಯಕ್ಷರು, ನಿರ್ದೇಶಕರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ವಿಭಿನ್ನವಾದ ಸಹಕಾರ ಕ್ಷೇತ್ರದ ಕುರಿತು, ಹಣಕಾಸು ಕ್ಷೇತ್ರದ ಕುರಿತು ತರಬೇತಿಗಳನ್ನು ಆಯೋಜನೆ ಮಾಡುಲಾಗುತ್ತದೆ. ಈ ರೀತಿಯ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಉಪಾಧ್ಯಕ್ಷರಾದ ಶ್ರೀ ಪ್ರಸನ್ನಕುಮಾರ್ ರವರು ತರಬೇತಿಗೆ ಸ್ಥಳಾವಕಾಶವನ್ನು ಕಲ್ಪಿಸಿದ ಶ್ರೀ ಪದ್ಮಾಂಬಾ ಪ್ರೌಢಶಾಲೆ, ಹುಂಚ, ಹೊಸನಗರ ಈ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಾಲಾ ಕೊಠಡಿಗೆ ಎರಡು ಗ್ರೀನ್ ಬೋರ್ಡ್ನ್ ಅನ್ನು ನೆನಪಿನ ಕಾಣ ಕೆಯಾಗಿ ನೀಡಲಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಕೋಡಚಾದ್ರಿ ಅಡಿಕೆ ಸೌಹಾರ್ದದ ನಿರ್ದೇಶಕರಾದ ಜಗದೀಶ್ ಹೆಚ್ ಪಿ, ಭದ್ರಾ ಬಸವೇಶ್ವರ ಸೌಹಾರ್ದದ, ಯಡೇಹಳ್ಳಿ ಇದರ ಮುಖ್ಯಕಾರ್ಯನಿರ್ವಾಹಕರಾದ ಶ್ರೀಮತಿ ಸುಮಾ ಕಿರಣ್‌ರವರು ರವರು ಎರಡು ದಿನದ ತರಬೇತಿಯ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಸಮಾರೋಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹಾಸ್ಯ ಕಲಾವಿದರಾದ ಶ್ರೀ ವೈ ವಿ ಗುಂಡುರಾವ್‌ರವರು, ಸನ್ನದ್ದು ಲೆಕ್ಕಪರಿಶೋಧಕರಾದ ಶ್ರೀ ಮಧುಕರ ಹೆಗಡೆಯವರು, ಸಹ್ಯಾದ್ರಿ ಒಕ್ಕೂಟದ ನಿರ್ದೇಶರಾದ ಶ್ರೀ ಕಿರಣ್ ಜೆ ಪಿಯವರು, ಶಾಲೆಯ ಸಹ ಶಿಕ್ಷಕರಾದ ಶ್ರೀ ಪ್ರಶಾಂತ್‌ರವರು ಹಾಗೂ ಪ್ರಾಂತೀಯ ವ್ಯವಸ್ಥಾಪಕರಾದ ಶ್ರೀ ಸಂಜಯ್ ಕೋಟಕರ್‌ರವರು ಭಾಗವಹಿಸಿದ್ದರು.

ಎರಡು ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಮತ್ತು ವ್ಯವಸ್ಥೆಯನ್ನು ಸೌಹಾರ್ದ ಜಿಲ್ಲಾ ಸಂಯೋಜಕರಾದ ಶ್ರೀ ಶಶಿಕುಮಾರ್‌ರವರು ನಿರ್ವಹಿಸಿದರು.

ಸಮಾರೋಪದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ಎ.ಆರ್ ಪ್ರಸನ್ನಕುಮಾರ್ ರವರು ಭಾಗವಹಿಸಿದ್ದರು.

ರೋಟರಿ ಸಂಸ್ಥೆಯಿಂದ ಬಡ ಮಹಿಳೆಯರಿಗೆ 500 ಹೊಲಿಗೆ ಯಂತ್ರ ವಿತರಣೆ

0

ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ
ನೀಡುವುದರಿಂದ ಕುಟುಂಬದ ಆರ್ಥಿಕ ವ್ಯವಸ್ಥೆಯ ಸದೃಢ
ಸಾಧ್ಯವಾಗಲಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ
ಮುಂಚೂಣಿಯಲ್ಲಿದ್ದಾರೆ ಎಂದು ರೋಟರಿ ಜಿಲ್ಲಾ ಗವರ್ನರ್ ಡಾ.
ಜಯಗೌರಿ ಹಾದಿಗಲ್ ಹೇಳಿದರು.

ರಾಜೇಂದ್ರ ನಗರದ ರೋಟರಿ ಶಾಲೆ ಸಭಾಂಗಣದಲ್ಲಿ ರೋಟರಿ
ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ಮಾತನಾಡಿದರು.

ನಾಲ್ಕು ಜಿಲ್ಲೆಯಿಂದ ಆರ್ಥಿಕವಾಗಿ ಹಿಂದುಳಿದ ಬಡಮಹಿಳೆಯರಿಗೆ 500
ಕ್ಕೂ ಹೆಚ್ಚು ಹೊಲಿಗೆ ಯಂತ್ರ ವಿತರಿಸುವ ಕಾರ್ಯ
ನಡೆಸುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಒದಗಿಸುವ
ಸಮಾಜಮುಖಿ ಚಟುವಟಿಕೆಗಳನ್ನು ರೋಟರಿ ಸಂಸ್ಥೆ ನಿರಂತರವಾಗಿ
ಮುನ್ನಡೆಸುತ್ತಿದೆ ಎಂದು ತಿಳಿಸಿದರು.

ರೊಟರಿ ವಲಯ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ
ಮಾತನಾಡಿ, ರೋಟರಿ ಸಂಸ್ಥೆಯು ಆರೋಗ್ಯ ಮತ್ತು ಶಿಕ್ಷಣ
ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದು, ವಿಶ್ವಾದ್ಯಂತ
ಸದಸ್ಯರನ್ನು ಹೊಂದಿರುವ ಸೇವಾ ಸಂಸ್ಥೆಯಾಗಿದೆ. ಹೆಚ್ಚು
ಹೆಚ್ಚು ಸದಸ್ಯರನ್ನು ಸೇರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ
ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ,
ಆರ್ಥಿಕವಾಗಿ ಹಿಂದುಳಿದ ಬಡಮಹಿಳೆಯರಿಗೆ ಈ ವರ್ಷ 15 ಕ್ಕೂ ಹೆಚ್ಚು
ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು ಎಂದು
ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ರೋಟರಿ
ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ವಲಯ
ಸೇನಾನಿ ರವಿ ಕೋಟೋಜಿ, ನಾಗವೇಣಿ, ಬಿಂದು ವಿಜಯ್‌ಕುಮಾರ್,
ವಿಜಯ ರಾಯ್ಕರ್, ಮಧುರಾ ಮಹೇಶ್, ರೋಟರಿ ಸದಸ್ಯರು,
ಇನ್ನರ್‌ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜ್ಞಾನವಿಲ್ಲದೇ ಬದುಕಲು ಸಾಧ್ಯವಿಲ್ಲ- ಹೆಚ್.ಬಿ.ಮಂಜುನಾಥ್

0

ಸಮಾಜದಲ್ಲಿ ಬದುಕು ಸಾಗಿಸಲು ಪದವಿ ಪರೀಕ್ಷೆಗಳಿಗಿಂತ ವ್ಯವಹಾರ ಜ್ಞಾನ ಹಾಗೂ ಲೋಕಜ್ಞಾನ ಮುಖ್ಯ, ಇವು ಪಠ್ಯದಿಂದ ಸಿಗುವುದಲ್ಲ, ಭಾಗವಹಿಸುವಿಕೆಯಿಂದ ಸಿಗುವುದು ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್ ಹೇಳಿದರು.

ದಾವಣಗೆರೆಯ ರಿಷಿ ಸಮೂಹ ಸಂಸ್ಥೆಗಳ ಲಿಟಲ್ ಚಾಂಪ್ ಗುರುಕುಲಮ್ ನ ಆವರಣದಲ್ಲಿ ಏರ್ಪಾಡಾಗಿದ್ದ ಪುಟ್ಟ ಮಕ್ಕಳೇ ನಿರ್ವಹಿಸುವ ಚಿಣ್ಣರ ಸಂತೆ ಸಂಭ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ, ದಶಕಗಳ ಹಿಂದೆ ಪೋಷಕರು ಮಾರುಕಟ್ಟೆ, ಸಂತೆ, ಅಂಗಡಿಗಳಿಗೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿದ್ದರು, ಆದರೆ ಈಗ ಮಕ್ಕಳನ್ನು ಕರೆದುಕೊಂಡು ಹೋಗುವುದಿರಲಿ, ಪೋಷಕರೇ ಮಾರುಕಟ್ಟೆಗೆ, ಅಂಗಡಿಗೆ ಹೋಗುವ ಪ್ರಮೇಯವಿಲ್ಲ, ಫೋನ್ ಮಾಡಿ ಹೇಳಿದರೆ ಸಾಕು ಮನೆ ಬಾಗಿಲಿಗೇ ವಸ್ತುಗಳು ಬರುವಂತಾಗಿದ್ದು ಮಕ್ಕಳಿಗಂತೂ ಮಾರುಕಟ್ಟೆಯ ಜ್ಞಾನವೇ ದೊರೆಯುತ್ತಿಲ್ಲ, ಹಣ್ಣು, ತರಕಾರಿ, ಸೊಪ್ಪು, ದವಸ ಧಾನ್ಯಗಳು, ಕಿರಾಣಿ ವಸ್ತುಗಳು ಯಾವುದರ ಪರಿಚಯವಾಗಲಿ,ಹೆಸರುಗಳಾಗಲೀ, ಬೆಲೆ ಮತ್ತು ಮೌಲ್ಯವಾಗಲೀ ಈಗಿನ ಮಕ್ಕಳ ಅರಿವಿಗೆ ಬರುತ್ತಲೇ ಇಲ್ಲ, ಶಾಲೆಗಳಲ್ಲಿ ಏರ್ಪಾಡಾಗುವ ಇಂತಹ ಚಿಣ್ಣರಸಂತೆ ಸಂಭ್ರಮದಲ್ಲಿ ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳು ಭಾಗವಹಿಸುವುದರಿಂದ ವಸ್ತುಗಳ ಪರಿಚಯ, ಪರೀಕ್ಷೆ, ದರ ನಿರ್ಧರಣೆ ಹಾಗೂ ಕೊಡುಕೊಳ್ಳುವ ವ್ಯವಹಾರಗಳ ಮೂಲ ಪಾಠಗಳು ಸಹ ಪ್ರಾಯೋಗಿಕವಾಗಿ ಮಕ್ಕಳಿಗೆ ಸಿಗುತ್ತದೆ ಎಂದರು.

ದುಡ್ಡಿನ ಆವಿಷ್ಕಾರ ವಾಗುವ ಮೊದಲು ಮಾರುಕಟ್ಟೆಯು ವಸ್ತುಗಳ ವಿನಿಮಯದಿಂದಲೇ ನಡೆಯುತ್ತಿತ್ತು, ಈಗಲೂ ಸಹ ವಿದೇಶಗಳೊಂದಿಗೆ ಆಮದು ರಫ್ತು ವ್ಯವಹಾರ ನಡೆಯುವಲ್ಲಿ ದುಡ್ಡಿಗಿಂತ ವಸ್ತು ವಿನಿಮಯ ರೂಪವೇ ಪ್ರಧಾನವಾಗಿದೆ, ವಸ್ತು ವಸ್ತುಗಳ ನಡುವಿನ ಮೌಲ್ಯ ವ್ಯತ್ಯಾಸಗಳ ಜ್ಞಾನ ಇದಕ್ಕೆ ಅವಶ್ಯ,ಈ ನಿಟ್ಟಿನಲ್ಲಿ ಸಹ ಇಂತಹ ಚಿಣ್ಣರ ಸಂತೆಯಿಂದ ಪುಟ್ಟ ಮಕ್ಕಳಿಗೂ ಪ್ರಾಯೋಗಿಕ ಜ್ಞಾನ ಬರುತ್ತದೆ ಎಂದು ತಿಳಿಸಿದರು.

ಪೋಷಕರ ಮಾರ್ಗದರ್ಶನದಲ್ಲಿ ಪುಟ್ಟ ಮಕ್ಕಳು ಶಾಲೆಯ ಆವರಣದಲ್ಲಿ ಹಣ್ಣು, ಹೂವು, ಸೊಪ್ಪು, ತರಕಾರಿ, ತಿಂಡಿ ತಿನಿಸುಗಳು, ಪಾನೀಯಗಳು ಹೀಗೆ ಬಹುವಿಧ ಮಾರುಕಟ್ಟೆ ಸಂತೆಯನ್ನು ಸಂಭ್ರಮದಿಂದ ಮಾಡಿದರು.

ಶಿಕ್ಷಣ ಸಂಸ್ಥೆಯ ಶ್ರೀಮತಿ ಜ್ಯೋತಿ ದರ್ಶನ್ ಮಾರ್ಗದರ್ಶನದಲ್ಲಿ ಕಿಶನ್, ಲಕ್ಷ್ಮೀ, ವಿಕ್ರಮ್ ಜೋಶಿ ಮುಂತಾದವರ ಸಹಯೋಗದಲ್ಲಿ ಈ ಚಿಣ್ಣರ ಸಂತೆ ಸಂಭ್ರಮ ನೆರವೇರಿತು. ಅರ್ಚನಾ, ದೀಪಾ, ಮಧುರಾ, ಕಲಾಭಿಮಾನಿ, ರುಚಿತಾ, ಪ್ರಾಪ್ತಿ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪಂಚರತ್ನ ಪಂಕ್ಚರ್ ಪ್ರಜಾಧ್ವನಿ ಬ್ರೇಕ್ ಫೇಲ್- ನಳಿನ್ ಕುಮಾರ್ ಕಟೀಲ್ ಕಟಕಿ

0

ಶಿವಮೊಗ್ಗದಲ್ಲಿ ಪೇಜ್ ಪ್ರಮುಖ್ ಸಮಾವೇಶ ನಡೆಯುತ್ತಿದೆ. ಈ ಸಮಾವೇಶಕ್ಕೆ
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಆಗಮಿಸಿದ್ದಾರೆ.

ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಸುಡುವ ಬಿಸಿಲಿನಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ.
ಕೆಲವರ ಹೊಟ್ಟೆಯಲ್ಲೂ ಬಿಸಿಮುಟ್ಟಿದ್ದೆ. ಹಾಗಾಗಿ ಪಂಚರತ್ನಯಾತ್ರೆ ಹೊರಟಿದೆ.
ಪಂಚರತ್ನ ಪಂಚರ್ ಆಗಿದೆ. ಪ್ರಜಾಧ್ವನಿ ಬ್ರೇಕ್ ಫೇಲ್ ಆಗಿದೆ.
ನಾನೂ ಪೇಜ್ ಪ್ರಮುಖರಿಗೆ ಪ್ರೇರಣೆ ನೀಡಲು ಬಂದಿಲ್ಲ.
ಬಿಜೆಪಿಯ ಶಕ್ತಿಕೇಂದ್ರ ಶಿವಮೊಗ್ಗ
ನಾನೂ ನಿಮ್ಮಿಂದ ಪ್ರೇರಣೆ ಪಡೆಯಲು ಬಂದಿದ್ದೇನೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಅವರು ತಿಳಿಸಿದರು.

ಬೂತ್ ಗೆದ್ದಾಗ ಮಾತ್ರ ಬಿಜೆಪಿ ಗೆದ್ದಹಾಗೆ ಆಗುತ್ತದೆ.ಗುಜರಾತ್ ನಲ್ಲಿ 7ನೇ ಬಾರಿಗೆ ಬಿಜೆಪಿಗೆ ಗೆಲ್ಲಲು ಕಾರಣ ಪೇಜ್ ಪ್ರಮುಖರಿಂದ ಆಗುತ್ತದೆ.
ರಾಜ್ಯದಲ್ಲಿ ಪೇಜ್ ಪ್ರಮುಖರ ಮೊದಲ ಸಮಾವೇಶ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ಎರಡು ಕಡೆ ಮಾತ್ರ ಉಳಿದಿದೆ. ಒಂದು ಡಿಕೆಶಿ ಮನೆಯಲ್ಲಿ ಇನ್ನೊಂದು ಸಿದ್ದರಾಮಯ್ಯ ಮನೆಯಲ್ಲಿ ಇದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮೂರು ತುಂಡಾಗುತ್ತದ್ದೆ.
ನಮ್ಮ ಮುಂದಿನ ಕಾರ್ಯ ಅಂತ್ಯೋದಯ
ಕಾಂಗ್ರೆಸ್ ಪೇಜ್ ಪ್ರಮುಖ ಸಭೆ ಮಾಡೋದು ಬಿಡಿ, ರಾಜ್ಯದ ಕಮಿಟಿ ಇಲ್ಲ.ಕಾಂಗ್ರೆಸ್ ಒಂದು ಡಾಕೋಟಾ ಬಸ್ ಎಂದು ಹೇಳಿದರು.

ರಾಷ್ಟ್ರೀಯ ಅಧ್ಯಕ್ಷ ಕೇರಳದ ಒಂದು ಗ್ರಾಮದ ಕಾರ್ಯಕರ್ತರ ಮನೆಗೆ ಬಂದು ಸಭೆ ಮಾಡುತ್ತಾರೆ.
ಅಲ್ಲಿಯ ವರೆಗೂ ಕೇರಳದ ಕಮ್ಯುನಿಸ್ಟ್ ಪಕ್ಷಕ್ಕೆ ಗೊತ್ತಿರಲ್ಲ.
ಅಮಿತ್ ಷಾ ಬಂದು ಹೋದ ನಂತರ ಬಿಸಿ ಮುಟ್ಟಿದೆ.
ಶಿವಮೊಗ್ಗದ ಪೇಜ್ ಪ್ರಮುಖರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಭಾರತದಲ್ಲಿ ಮಾತ್ರ ಅಲ್ಲ. ಅಮೇರಿಕಾದಲ್ಲಿ ಮೋದಿ ಪರ ಘೋಷಣೆ ಕೂಗುತ್ತಿದ್ದಾರೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಭಾರತ್ ಮಾತಾಕೀ ಜೈ ಎನ್ನುವ ಘೋಷಣೆ ಕೂಗುವ ಸಮಯ ಬಂದಿದೆ.
ಕಾಶ್ಮೀರದಲ್ಲಿ ಭಾರತ್ ಮಾತಕೀ ಜೈ ಎಂದು ಘೋಷಣೆ ಕೂಗುವ ಹಾಗೆ ಇರಲ್ಲಿಲ್ಲ.
ಅಷ್ಟೇ ಅಲ್ಲ ಹುಬ್ಬಳ್ಳಿಯ ಈದ್ಗ ಮೈದಾನದಲ್ಲಿ ಭಾರತ ಬಾವುಟ ಹಾರಿಸಲು ಬಿಟ್ಟಿರಲಿಲ್ಲ.
ಉಕ್ರೇನ್ ನಲ್ಲಿ ಭಾರತದ ಧ್ವಜ ಹಾರುತ್ತಿದೆ.ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಹೇಳಿದ್ರು ಲಸಿಕೆ ತೆಗೆದುಕೊಳ್ಳಬೇಡಿ,
ಲಸಿಕೆ ತೆಗೆದುಕೊಂಡರೇ ಮಕ್ಕಳಾಗುವುದಿಲ್ಲ ಎಂದು.
ಹೀಗೆ ಹೇಳಿ ಬೆಳಗ್ಗೆ ಹೋಗಿ ಲಸಿಕೆ ತೆಗೆದುಕೊಂಡರು.
ಪ್ರಧಾನಿ ಮೋದಿ, ಮೊದಲು ಲಸಿಕೆ ತೆಗೆದು ಕೊಂಡಿಲ್ಲ ವೈದ್ಯರು ಪೊಲೀಸರು ದಾದಿಯರು ಹಾಗೂ ಆಶಾಕಾರ್ಯಕರ್ತರಿಗೆ ನೀಡಿ ದೇಶ ಉಳಿಸಿದರು ಎಂದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ, ಮೊದಲು ಸೋನಿಯಾ ಗಾಂಧಿಗೆ ನೀಡುತ್ತಿದ್ದರು.
ನಂತರ ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡುತ್ತಿದ್ದರು.
ಲಸಿಕೆ ಉಳಿದರೆ ಸಿದ್ದರಾಮಯ್ಯ, ಖರ್ಗೆಗೆ ನೀಡುತ್ತಿದ್ದರು.
ಬಿಜೆಪಿಗೆ ಹೊಸಬರು ಬರಬೇಕು, ನಾವು 60 ವರ್ಷ ಮೇಲ್ಪವರು ರಿಟೈಲ್ ಆಗಬೇಕು.
ಭಾರತ್ ಜೋಡೋ ಮಾಡಿದ್ದು ನರೇಂದ್ರ ಮೋದಿ.
ರಾಹುಲ್ ಗಾಂಧಿ ಮಾಡಿದ್ದು ಪಾದಯಾತ್ರೆ ಮಾತ್ರ ಮಾಡಿದ್ದಾರೆ.
ಗರೀಬಿ ಹಾಟಾವೋ ಘೋಷಣೆ ಕಾಂಗ್ರೆಸ್ ಘೋಷಣೆ ಆಗಿತ್ತು.
ಅದು ಸೋನಿಯಾ ಗಾಂಧಿ ಕುಟುಂಬದ ಗರೀಭಿ ಹಾಟಾವೋ ಆಯ್ತು, ಸಿದ್ದರಾಮಯ್ಯ ಖರ್ಗೆ ಹಾಗೂ ಶಿವಕುಮಾರ್ ಮನೆ ಗರೀಬಿ ಹಾಟಾವೋ ಆಗಿದೆ.
ಮೀಸಲಾತಿ ನೀಡಿದ್ದು ಸಿಎಂ ಬೊಮ್ಮಾಯಿ,
ಸಮಾಜವನ್ನು ಒಡೆದು ಹಾಕಿದ್ದು ಸಿದ್ದರಾಮಯ್ಯ.
ಟಿಪ್ಪು ಜಯಂತಿ ಹೆಸರಲ್ಲಿ ಹತ್ಯೆಯಾದಗ ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬಂದಿಲ್ಲ.
ಪಿಎಫ್ ಐ ಬ್ಯಾನ್ ಮಾಡ್ದಾಗ, 2000 ಕಾರ್ಯಕರ್ತರನ್ನು ಎಫ್ ಐ ಆರ್ ಮಾಡ್ದಾಗ ಕಣ್ಣೀರು ಬಂತು.
ನಿಮ್ಮ ತೀರ್ಥಹಳ್ಳಿಯವರು ಒಬ್ಬರು ಕುಕ್ಕರ್ ಹಿಡಿದು ಕೊಂಡು ಬಂದರು.
ಇದರಿಂದ ಮಂಗಳೂರಿನಲ್ಲಿ ಭಯಭಿತಾರಾದರು.
ಆಗ ಡಿಕೆಶಿಗೆ ಎರಡು ಕುಕ್ಕರ್ ಮೇಲೆ ಪ್ರೀತಿ ಬಂತು.
ಒಂದು ಬೆಳಗಾಂನಿ ಕುಕ್ಕರ್ ಇನ್ನೊಂದು ತೀರ್ಥಹಳ್ಳಿಯ ಕುಕ್ಕರ್ ಮೇಲೆ ಪ್ರೀತಿ ಬಂತ್ತು.
ಮುಂದಿನ ಮುಖ್ಯಮಂತ್ರಿ ಎಂದು ನಾಲ್ಕು ನಾಲ್ಕು ಶರ್ಟ್ ಹಾಗೂ ಶೂಟ್ ಹೊಲೆಸಿಕೊಂಡಿದ್ದಾರೆ ಎಂದು ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾಗರ ಮಾರಿಕಾಂಬೆ ಜಾತ್ರೆಯ ಧಾರ್ಮಿಕ ಪೂಜಾಕಾರ್ಯಗಳಿಗೆ ಚಾಲನೆ

0

ಮಂಗಳವಾರದಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಭಾನುವಾರ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ವಿವಿಧ ಧಾರ್ಮಿಕ ಪೂಜೆಗಳು ನಡೆದವು.

ಭಾನುವಾರ ಬೆಳಗ್ಗೆ ಕಂಚಿಗಾರ್ ಸಮಾಜದ ವತಿಯಿಂದ ಶ್ರೀ ಮಾರಿಕಾಂಬ ದೇವಿಗೆ ಬಾಗಿನ ಸಮರ್ಪಿಸಲಾಯಿತು. ನಂತರ ದೇವರ ಗರ್ಭಗುಡಿಗೆ ಬಾಗಿನ ತರಲಾಯಿತು. ನಗರದ ಅಶೋಕ ರಸ್ತೆಯಲ್ಲಿ ಇರುವ ಗೋವಿಂದಪ್ಪ ಅವರ ಮನೆಯಿಂದ ಉತ್ಸವ ಮೂರ್ತಿಗೆ ಸೀರೆ ತರಲಾಯಿತು.
ಅಮ್ಮನವರ ಉತ್ಸವ ಮೂರ್ತಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆ ಮತ್ತು ದೈವಜ್ಞ ಬ್ರಾಹ್ಮಣ ಸಮಾಜ ಒಟ್ಟಾಗಿ ಸೇರಿ 672 ಗ್ರಾಂ ಬಂಗಾರದ ತಾಳಿಯನ್ನು ದೇವಸ್ಥಾನದ ಸುಪರ್ದಿಗೆ ವಹಿಸಲಾಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಪ್ರಯುಕ್ತ ಅಮ್ಮನವರ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಜಯಲಕ್ಷ್ಮೀ ಜ್ಯೂವೆಲ್ಲರಿ ವರ್ಕ್ಸ್ ವತಿಯಿಂದ ಪಾಲಿಶ್ ಮಾಡಿ ದೇವಸ್ಥಾನಕ್ಕೆ ಹಿಂದಿರುಗಿಸಲಾಯಿತು.

ಗುಡಿಗಾರ್ ಸಮಾಜದ ಮುಖಂಡ ದಿ. ಗುಡಿಗಾರ್ ದೇವಪ್ಪ ಅವರ ಮನೆಯಿಂದ ಅಮ್ಮನವರಿಗೆ ಬಾಸಿಂಗ ತರಲಾಯಿತು. ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯು ಎಲ್ಲ ಸಮಾಜದ ಪಾಲ್ಗೊಳ್ಳುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ಜರುಗಲಿದೆ.
ಪ್ರತಿ ದಿನವು ಶ್ರೀ ಮಾರಿಕಾಂಬ ದೇವರ ಸನ್ನಿಧಿಯಲ್ಲಿ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೂ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ನಡೆಯಲಿದೆ.
ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಅತ್ಯಂತ ಅದ್ಧೂರಿಯಾಗಿ ಒಂಬತ್ತು ದಿನಗಳ ಕಾಲ ಧಾರ್ಮಿಕ ಪೂಜಾ ವಿಧಿ ವಿಧಾನಗಳು, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವೈಶಿಷ್ಯತೆಗಳೊಂದಿಗೆ ಸಾಗರದ ಶ್ರೀ ಮಾರಿಕಾಂಬ ಜಾತ್ರೆಯು ನಡೆಯಲಿದೆ.

ಜಾನಪದ ಕಲಾತಂಡಗಳು ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್ ಸಿಂಗ್, ವಿ.ಶಂಕರ್, ರಾಮಪ್ಪ, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ, ವಿವಿಧ ಸಮಿತಿ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಎಲ್ಲ ಜಿಲ್ಲೆಗಳ ಪತ್ರಿಕಾ ವಿತರಕರ ಸಂಘಟನೆಗಳು ಪತ್ರಕರ್ತರ ಸಂಘಕ್ಕೆ ಬೆಂಬಲ ನೀಡಿದರೆ ಸಮಸ್ಯೆ ಪರಿಹಾರ- ಶಿವಕುಮಾರ್

0

ಸಂಘಟಿತರಾಗದ ಹೊರತು ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಪ್ರತೀ ಸಂಘಟನೆಯೂ ಕೂಡಾ ಒಂದು ಸವಾಲು ಎಂದು ಮಾಧ್ಯಮ ಅಕಾಡೆಮಿ ಸದಸ್ಯರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರೂ ಅದ ಕೆ. ವಿ. ಶಿವಕುಮಾರ್ ವಿಶ್ಲೇಷಿಸಿದರು.

ವಿಜಯಪುರದ ಕಂದಗಲ್ಲ ಹಣುಮಂತರಾಯ ರಂಗಮಂದಿರದಲ್ಲಿ ಆಯೋಜನೆಗೊಂಡ 32ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದ ಎರಡನೇ ದಿನದ ಸುದ್ದಿ ಮನೆ ಮತ್ತು ಪತ್ರಿಕಾ ವಿತರಕರು ಕುರಿತ ವಿಚಾರಗೋಷ್ಟಿಯಲ್ಲಿ, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದಿಂದ ಹಲವು ಬಾರಿ, ಸೌಲಭ್ಯಗಳು ಘೋಷಣೆಯಾಗುತ್ತಿದ್ದರೂ, ನಿಜವಾಗಿ ಆ ಸೌಲಭ್ಯಗಳು ತಲುಪುವುದು ಸುಲಭವಾಗುವುದಿಲ್ಲ. ಇದಕ್ಕೆ ಸಂಘಟನೆಗಳು ಕೂಡಾ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿಯೂ ನಿರ್ಲಕ್ಷ್ಯ ತೋರಿರುವುದು ಸಹ ಸಮರ್ಥನೀಯ ಅಲ್ಲ ಎಂದರು.

ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಗೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕಾಲದಲ್ಲಿ ಎರಡು ಕೋಟಿ ರೂ ಬಿಡುಗಡೆಯಾಗಿದ್ದು, ಆದರೆ, ಅದು ನಾನಾ ಕಾರಣಗಳಿಂದ ಈವರೆಗೆ ಬಳಕೆಯಾಗದೇ, ಖಜಾನೆಗೆ ಹಿಂತಿರುಗಿದೆ. ಇದಕ್ಕೆ ಬಹಳ ಮುಖ್ಯವಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಒಂದೆಡೆಯಾದರೆ, ನಿಯಮ-ರೂಪುರೇಷೆಗಳನ್ನು ಸಿದ್ಧಪಡಿಸದಿರುವುದೂ ಕೂಡ ಕಾರಣ ಎಂದ ಅವರು, ಈಗ ಅದನ್ನು ಮತ್ತೆ ಪಡೆಯುವುದು ಕಷ್ಟ ಸಾಧ್ಯ. ಆದರೆ, ಹೋರಾಟಗಳಿಂದ ವಿಮುಖರಾಗದೇ, ಎಲ್ಲಾ ಹದಿನೆಂಟು ಜಿಲ್ಲೆಗಳಲ್ಲಿ ಇರುವ ವಿತರಕರ ಸಂಘಟನೆಗಳು ಒಕ್ಕೂಟ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕೈಜೋಡಿಸಬೇಕಾಗಿದೆ. ಆಗ ಸಮಸ್ಯೆಗಳಿಗೈ ಪರಿಹಾರ ಕಂಡುಕೊಳ್ಳಲು ಸಾಧು ಎಂದರು.

ಹಲವು ಸಂಘಟನೆಗಳು, ಸಂಘಟನಾತ್ಮಕ ಪ್ರಯತ್ನ ನಡೆಸಿದಾಗ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದ ಅವರು, ಪತ್ರಕರ್ತರು ಕೂಡಾ, ತಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಕೇವಲ ತಮ್ಮ ಬರವಣಿಗೆ, ಕೇವಲ ಪತ್ರಿಕಾಗೋಷ್ಟಿಗಳಿಗಷ್ಟೇ ಮೀಸಲಾಗದೇ, ಸಮಸ್ಯೆಗಳ ಕಡೆ ಗಮನ ಹರಿಸಬೇಕು. ಯಾವುದೇ ಸರ್ಕಾರ ಅಽಕಾರದಲ್ಲಿರಲಿ, ಪ್ರತೀ ಪತ್ರಕರ್ತನೂ ಕೂಡಾ ವಿರೋಧ ಪಕ್ಷಗಳಂತೆ ಕೆಲಸ ಮಾಡಬೇಕೇ ವಿನಃ ಆಡಳಿತ ಪಕ್ಷದ ಜೊತೆ ಶಾಮೀಲಾಗಬಾರದು ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಬುಲಿಂಗ ಮಾತನಾಡಿ, ಪತ್ರಿಕಾ ವಿತರಕರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಸೌಲಭ್ಯಗಳು ಸಿಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 70 ಸಾವಿರ ಪತ್ರಿಕಾ ವಿತರಕರಿದ್ದು, ಉಚಿತ ಶಿಕ್ಷಣ, ಆರೋಗ್ಯ, ವಿಮೆ, ಪಿಂಚಣಿಯಂತಹ ಸೌಲಭ್ಯಗಳು ಸಿಗಬೇಕು. ವಿತಕರ ಒಕ್ಕೂಟವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ಎಲ್ಲ ಚಟುವಟಿಕೆಗಳೊಂದಿಗೆ ಕೈಜೋಡಿಸಲಾಗುವುದು ಎಂದರು.

ವಿಚಾರಗೋಷ್ಟಿಯನ್ನು ಬಿ. ವಿ. ಮಲ್ಲಿಕಾರ್ಜುನಯ್ಯ ಉದ್ಘಾಟಿಸಿ ಮಾತನಾಡಿದರು.

ಮಾಧ್ಯಮ ಅಕಾಡೆಮಿ ಸದಸ್ಯರಾದ ಸಿ. ಕೆ. ಮಹೇಂದ್ರ, ದೇವೇಂದ್ರಪ್ಪ ಕಪಣೂರ, ಜಗನ್ನಾಥ ಶೇಟ್ಟಿ ಬಾಳ ವಿಷಯ ಮಂಡಿಸಿದರು.

ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್ (ಟೆಲೆಕ್ಸ್) ನಿರೂಪಿಸಿದರು.

ನಿಜವಾದ ರಾಷ್ಟ್ರ ನಿರ್ಮಾಣವಾಗುವುದು ಯುವಕರ ಜಾಗೃತಿಯಿಂದ- ಡಾ.ಶಿವಪ್ರಸಾದ್

0

ನಿಜವಾದ ರಾಷ್ಟ್ರ ನಿರ್ಮಾಣವನ್ನು ಪಾರ್ಲಿಮೆಂಟು ಅಸೆಂಬ್ಲಿಗಳಿಂದ ನಿರೀಕ್ಷಿಸದೆ ಯುವಶಕ್ತಿಯಿಂದ ನಿರೀಕ್ಷಿಸಬೇಕಾಗಿದೆ, ಇದಕ್ಕಾಗಿ ಪೂರಕವಾದ ಆಲೋಚನಾ ಶಕ್ತಿ ವಿದ್ಯಾರ್ಥಿಗಳಲ್ಲಿ ಜಾಗೃತ ವಾಗುವಂತಹ ಶಿಕ್ಷಣವು ಶಾಲಾ-ಕಾಲೇಜುಗಳಿಂದ ಒದಗಿಸಬೇಕಾದ ಅಗತ್ಯವಿದೆಯೆಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಹಿರಿಯ ವಿಜ್ಞಾನಿ ಮತ್ತು ಪ್ರಾಧ್ಯಾಪಕ ಡಾ.ಎಸ್.ಎಮ್.ಶಿವಪ್ರಸಾದ್ ಅಭಿಪ್ರಾಯಪಟ್ಟರು.

ಬಾಪೂಜಿ ಅಕಾಡೆಮಿ ಆಫ್ ಮೇನೇಜ್ಮೆಂಟ್ ಅಂಡ್ ರಿಸರ್ಚ್ ನ ಸಂಸ್ಥಾಪನಾ ದಿನ ‘ಅನಾವರಣ’2023 ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಅತ್ಯಾಧುನಿಕವಾದ ನ್ಯಾನೋ, ಬಯೋ ಹಾಗೂ ಆರ್ಟಿಫಿಶಿಯಲ್ ಇಂಟಲಿಜನ್ಸ್ ಅಂದರೆ ಕೃತಕ ಬುದ್ಧಿಮತ್ತೆ ಈ ಮೂರು ತಂತ್ರಜ್ಞಾನಗಳೇ ಮುಂದಿನ ಜಾಗತಿಕ ಭವಿಷ್ಯ ನಿರ್ಧರಿಸುವಂತಿದ್ದು ಇದರಿಂದಾಗಿ ದೇಶದಲ್ಲಿ ಸಾಂಪ್ರದಾಯಿಕವಾದ 85 ಮಿಲಿಯನ್ ನಷ್ಟು ಉದ್ಯೋಗಗಳು ಹೋದರೂ 97 ಮಿಲಿಯನ್ ನಷ್ಟು ಹೊಸ ಉದ್ಯೋಗಗಳು ಸೃಷ್ಟಿ ಆಗಲಿವೆ. ಇದಕ್ಕಾಗಿ ವಿದ್ಯಾರ್ಥಿಗಳು ಬೌದ್ಧಿಕವಾಗಿ ಸಜ್ಜುಗೊಳ್ಳಬೇಕಿದೆ, ಈ ತಂತ್ರಜ್ಞಾನಗಳಿಂದಾಗಿ ಮುಂದಿನ ದಿನಮಾನಗಳಲ್ಲಿ ಕೃತಕ ಅಂಗಾಂಗಗಳ ತಯಾರಿಕೆಯಾಗಿ ಅಂಗಡಿಯಲ್ಲಿ ಮಾರಾಟಕ್ಕೆ ಬರುವ ಕಾಲ ದೂರವಿಲ್ಲ, ಇದರಿಂದ ಮನುಷ್ಯರು ಸಾವನ್ನೇ ಸಾಯಿಸಿ ದೀರ್ಘಾಯುಷಿಗಳಾಗ ಬಹುದಾಗಿದ್ದು ಈ ಸವಾಲುಗಳನ್ನು ಎದುರಿಸಲು ಸಹಾ ಶಿಕ್ಷಣದಲ್ಲಿ ತಿಳಿದುಕೊಳ್ಳುವುದಕ್ಕಿಂತ ಆಲೋಚಿಸುವ ಬಗ್ಗೆ, ಆಲೋಚಿಸಿದ್ದನ್ನು ತಿಳಿಸುವ ಸಾಮರ್ಥ್ಯದ ಬಗ್ಗೆ ಒತ್ತು ಕೊಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶಿಕ್ಷಣ ಸಂಸ್ಥೆಯ ಚೇರ್ಮನ್ ಅಥಣಿ ಎಸ್.ವೀರಣ್ಣನವರು 21ನೇ ಶತಮಾನದ ಪ್ರಬಲ ರಾಷ್ಟ್ರ ಎನಿಸಿಕೊಳ್ಳಲು ಹೊರಟಿದ್ದ ಚೀನಾ ದೇಶವನ್ನು ಅನೇಕ ರೀತಿಯಲ್ಲಿ ನಮ್ಮ ದೇಶ ಹಿಂದಟ್ಟಿ ಮುಂದುವರೆಯುತ್ತಿದೆ, ಜಾಗತಿಕ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗುವಂತಹ ಶಿಕ್ಷಣ, ಜ್ಞಾನ ಹಾಗೂ ಕೌಶಲ್ಯ ಇಂದಿನ ಅವಶ್ಯವಾಗಿದ್ದು ನೆರೆಹೊರೆಯ ದೇಶಗಳ ಹಾಗೂ ಜಾಗತಿಕ ಸ್ಥಿತಿಗತಿಗಳನ್ನು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಂತೂ ತಿಳಿದುಕೊಳ್ಳಲೇಬೇಕು ಎಂದರು.

ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದ ಸಮಾರಂಭದಲ್ಲಿ ಪ್ರಾಂಶುಪಾಲ ಡಾ. ನವೀನ್ ನಾಗರಾಜ್,ಡಾ. ಸುಜಿತ್ ಕುಮಾರ್,ರಾಯ್ಕರ್, ವಿಶೇಷ ಆಹ್ವಾನಿತರಾಗಿದ್ದ ಸುರೇಂದ್ರ ಕುಮಾರ್ ನಿಶಾನಿಮಠ ಉಪಸ್ಥಿತರಿದ್ದು ಮಾನಸ ಹಾಗೂ ವರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ವಿಕಾಸ್ ಪ್ರಾರ್ಥನಾ ಗೀತೆ ಹಾಡಿದರು, ಕಾಲೇಜಿನ ದೃಶ್ಯ ಪರಿಚಯ, ಮುಖ್ಯ ಅತಿಥಿಗಳ ಪರಿಚಯವನ್ನು ಅಸ್ಗರ್, ಅರುಣ್, ಸುನಯಾ, ಸರ್ಪ ರಾಜ್ ಹಾಗೂ ನಯನ ಮಾಡಿದರು. -ಚಿತ್ರ ಹಾಗೂ ವರದಿ ಎಚ್.ಬಿ.ಮಂಜುನಾಥ-

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ ಟೂರಿಸಂ ಹಬ್ ಮಾಡುವಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ-ಬಿ.ವೈ.ರಾಘವೇಂದ್ರ

0

ಶಿವಮೊಗ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರದ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಅವರು ತಿಳಿಸಿದ್ದಾರೆ.

ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಸಮ್ಮೇಳನ, ನೌಕರರಿಗೆ ಪ್ರಜಾ ಸ್ನೇಹಿ ಆಡಳಿತ ಕಾರ್ಯಗಾರ, ನೌಕರರ ಫ್ಯಾಮಿಲಿ ಮಾರ್ಟ್ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿದ್ದರೂ ಮೂಲ ಸೌಲಭ್ಯಗಳಿಲ್ಲದೆ ಪ್ರವಾಸಿಗರಿಂದ ದೂರ ಉಳಿದಿದೆ. ಆದ್ದರಿಂದ ಅವುಗಳ ಸಮರ್ಥವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರ ಮಾಡುವ ಸಲುವಾಗಿ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರು ಜಿಲ್ಲೆಯ 30 ಪ್ರಸಿದ್ಧ ತಾಣಗಳನ್ನು ಗುರುತಿಸಿ ಟೂರಿಸಂ ಹಬ್ ಮಾಡುವ ಭರವಸೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ದೇಶದ ಪ್ರಮುಖ ಪ್ರವಾಸಿ ಗೈಡ್ಗಳನ್ನು ಶಿವಮೊಗ್ಗಕ್ಕೆ ಕರೆಸಿ ಕಾರ್ಯಗಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿ ವೈ ರಾಘವೇಂದ್ರ ಅವರು ಹೇಳಿದರು.

ಸರ್ಕಾರಿ ನೌಕರರ ಶ್ರಮದಿಂದಾಗಿ ಅಭಿವೃದ್ಧಿ ಯೋಜನೆಗಳ ಸಮರ್ಥ ಅನುಷ್ಠಾನ ಸಾಧ್ಯವಾಗಿದೆ. ಜಿಎಸ್‌ಟಿ ಸಂಗ್ರಹದಿಂದ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಅದಕ್ಕೆ ಕಾರಣ ಸರ್ಕಾರಿ ನೌಕರರು ಎಂದು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಅವರು ತಿಳಿಸಿದರು.

ಇಡೀ ದೇಶದಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಘಕ್ಕೆ ವಿಶೇಷವಾದ ಹೆಸರಿದೆ. ಸರ್ಕಾರದ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ಜನರಿಗೆ ತಲುಪಿಸುತ್ತಿರುವ ರಾಜ್ಯವೆಂದರೆ ಅದು ಕರ್ನಾಟಕ. ಕಳೆದ ಬಾರಿ ಸರ್ಕಾರವು 2.67 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಾಗಿತ್ತು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆಯನೂರು ಮಂಜುನಾಥ್, ಎಸ್ ಎಲ್ ಭೋಜೇಗೌಡ, ಅಶೋಕ ನಾಯ್ಕ, ಪದವೀಧರ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಪಿ. ದಿನೇಶ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.