Saturday, April 26, 2025
Saturday, April 26, 2025

ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ -03 ಭೀಮಾಶಂಕರ

Date:

ಭೀಮಾಶಂಕರ ಈ ಜ್ಯೋತಿರ್ಲಿಂಗದ ಬಗ್ಗೆ ಪ್ರಸ್ತಾಪಿಸುವಾಗ ಭೀಮನ ಪಾತ್ರ ಬರುತ್ತದೆ.

ಆದರೆ ಈ ಭೀಮ ಬೇರೆ ಮತ್ತು ಮಹಾಭಾರತದ ಭೀಮನೇ ಬೇರೆ.
ಇಲ್ಲಿ ನಿರೂಪಿಸುವ ಭೀಮ ಶಿವಪುರಾಣದ ಪ್ರಕಾರ ಒಬ್ಬ ರಕ್ಕಸ.

ಈತ ಕುಂಭಕರ್ಣನ ಮಗ.ತನ್ನ ತಂದೆಯನ್ನ ಸಂಹರಿಸಿದವರು ಶ್ರೀರಾಮನೆಂದು ಕೋಪಗೊಳ್ಳುತ್ತಾನೆ .ಶ್ರೀರಾಮಲಕ್ಷ್ಮಣರೊಂದಿಗೆ ಕಾದಾಡಲು ಬಲಕ್ಕಾಗಿ ಬ್ರಹ್ಮನನ್ನು ಕುರಿತು ದೀರ್ಘ ತಪಸ್ಸು ಮಾಡುತ್ತಾನೆ.

ಅವನ ಕಠಿಣ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಅತ್ಯಧಿಕ ಶಕ್ತಿ ಸಾಮರ್ಥ್ಯವನ್ನ ವರವಾಗಿ ನೀಡುತ್ತಾನೆ. ಜಗತ್ತನಲ್ಲಿ ತನ್ನನ್ನು ಸೋಲಿಸುವವರಿಲ್ಲ ಎಂದು
ಮದಗಜದಂತೆ ಅ ನಾಡಿನ ರಾಜನಾಗಿದ್ದ ಪ್ರಿಯಧರ್ಮನನ್ನೂ ಸೋಲಿಸಿ ಸೆರೆಯಲ್ಲಿಡುತ್ತಾನೆ.

ಸ್ವಯಂ ತಾನೇ ಎಲ್ಲರಿಗಿಂತ ಶ್ರೇಷ್ಠನು ಎಂದು ಪ್ರಜೆಗಳಿಗೆಲ್ಲಾ ಹಿಂಸೆ ಕೊಡಲಾರಂಭಿಸುತ್ತಾನೆ.ಏಳು ಲೋಕಗಳನ್ನೂ ಗೆದ್ದು ದೇವತೆಗಳನ್ನೂ ಪೀಡಿಸುತ್ತಾನೆ. ದೇವತೆಗಳು ಶಿವನನ್ನು ಪ್ರಾರ್ಥಿಸುತ್ತಾರೆ. ಶಿವನು ಪ್ರತ್ಯಕ್ಷನಾಗಿ
ಯೋಚಿಸದಿರಿ,ಭೀಮಾಸುರನಿಗೆ ಅಂತ್ಯಕಾಲ ಸನ್ನಿಹಿತವಾಗಿದೆ ಎಂದು ತಿಳಿಸುತ್ತಾನೆ.

ಇತ್ತ ಸೆರೆಯಲ್ಲಿದ್ದ ಪ್ರಿಯಧರ್ಮ ಮತ್ತು ಆತನ ಪತ್ನಿ ದಕ್ಷಿಣೆ ತಮ್ಮ ಬಿಡುಗಡೆಗಾಗಿ ಶಿವಪೂಜೆಯಲ್ಲಿ ನಿರತರಾಗಿರುತ್ತಾನೆ. ಸೆರೆಮನೆಯ ಸಿಬ್ಬಂದಿ
ಶಿವಪೂಜೆ ನಿಲ್ಲಿಸಲು ಪ್ರಯತ್ನಿಸುತ್ತಾರೆ.ಪ್ರಿಯಧರ್ಮ ಹಠಹಿಡಿದು ಶಿವಪೂಜೆ ಮುಂದುವರೆಸುತ್ತಾನೆ.

ಭೀಮಾಸುರನಿಗೆ ಈ ಸುದ್ದಿ ತಿಳಿಯುತ್ತದೆ.
ಅಲ್ಲಿಗೆ ಬಂದ ಭೀಮಾಸುರ ಶಿವನನ್ನು ಪೂಜೆಮಾಡದಿರಿ ಆವನಿಗಿಂತ ನಾನೇ ಶ್ರೇಷ್ಠ ಎಂದು ಶಿವಪೂಜೆಗೆ ಭಂಗವುಂಟುಮಾಡುವನು.
ಇಲ್ಲ ನಮಗೆಲ್ಲ ಶ್ರೇಷ್ಠನು ಶಿವ.ಅವನ ಕೃಪೆಯಿಂದ ನಮಗೆ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಪೂಜಿಸುತ್ತಿದ್ದೇವೆ ಎಂದು ಪ್ರಿಯಧರ್ಮ
ಉತ್ತರಿಸುತ್ತಾನೆ.

ಕ್ರೋಧಗೊಂಡ ಭೀಮಾಸುರ ಹರಿತ ಖಡ್ಗವೆತ್ತಿ ಪ್ರಿಯಧರ್ಮನನ್ನು ಕೊಲ್ಲಲು ಮುಂದಾಗುತ್ತಾನೆ.ಅಷ್ಟರಲ್ಲೇ ಪತ್ನಿ ದಕ್ಷಿಣೆ ಆರ್ತಳಾಗಿ ಧ್ವನಿಯೆತ್ತಿ ಅಳುತ್ತಾಳೆ.
ತಕ್ಷಣ ಅದೇನು ಮಾಯವೋ ಶಿವಲಿಂಗದಿಂದ ನಾಗಪಾಶವು ಬೀಸುತ್ತಾ ಹೊರಬಂದು ಭೀಮಾಸುರನ ಕರದಲ್ಲಿದ್ದ ಖಡ್ಗವನ್ನು ಪುಡಿಯಾಗುವಂತೆ ಮಾಡುತ್ತದೆ. ಅದಕ್ಕಂಜದ ಭೀಮಾಸುರ ತನ್ನ ಮಾಯೆಯಿಂದ ಅಸುರ ಪಡೆ ನಿರ್ಮಿಸುತ್ತಾನೆ.

ಆಗ ಶಿವನೂ ತನ್ನ ಗಣಗಳನ್ನ ಸೃಷ್ಟಿಸಿ ಯುದ್ಧಮಾಡಿಸುತ್ತಾನೆ. ಸಪ್ತಲೋಕಗಳು ಅಲ್ಲೋಲಕಲ್ಲೋಲವಾಗುವಂತೆ ಯುದ್ಧ ನಡೆಯುತ್ತದೆ. ದೇವತೆಗಳು ಶಿವನ ಸ್ತುತಿಮಾಡಿ ಈ ಕ್ರಿಮಿಯಂತಹ
ಭೀಮಾಸುರನನ್ನ ಸಂಹರಿಸಲು ಇಷ್ಟು ಸಾಹಸವೆ? ಎಂದು ಪ್ರಾರ್ಥಿಸುವರು.

ಯಕ್ಷಣ ಶಿವನು ಬೆಂಕಿಯ ರೂಪದಿಂದ ಬಂದು ಭೀಮಾಸುರನನ್ನ ಭಸ್ಮಮಾಡುವನು. ಹೀಗಾಗಿ ಅಲ್ಲಿನ ಲಿಂಗಕ್ಕೆ ಭೀಮಾಶಂಕರ ಎಂಬ ಅಭಿದಾನವಾಯಿತು. ಲಿಂಗದ ಮೇಲಿಂದ ಬಂದ ಬೆವರ ಹನಿಗಳು ನದಿಯರೂಪ ತಾಳಿ ಹರಿದವು. ಅದೇ ಭೀಮಾನದಿ ಎಂಬ ಹೆಸರಾಯಿತು.

ಪ್ರಸ್ತುತ ಈ ಜ್ಯೋತಿರ್ಲಿಂಗವು ಬೋವಾಗಿರಿಯೆಂಬ ಗುಡ್ಡಪ್ರದೇಶದಲ್ಲಿದೆ.
ಫಂಡರಾಪುರದ ಚಂದ್ರಭಾಗ ನದಿಗೆ ಭೀಮಾನದಿಯು ಮೂಲವಾಗಿದೆ.
ಪೂನಾದಿಂದ 95 ಕಿಮೀ ದೂರದಲ್ಲದೆ.

ಛತ್ರಪತಿ ಶಿವಅಜಿ ಕರೋಸಿ ಎಂಬ ಗ್ರಾಮವನ್ನು ಈ ದೇವಾಲಯಕ್ಕೆ ದಾನಮಾಡಿದ್ದಾರೆ.ಗೋಡೆಗಳ ಮೇಲೆ ರಾಮಾಯಣ,ಕೃಷ್ಣಲೀಲಾ,ಶಿವಲೀಲಾ ಚಿತ್ರಗಳನ್ನ ಬಿಡಿಸಲಾಗಿದೆ.

ಆದಿ ಶಂಕರಾಚಾರ್ಯರು ಈ ಜ್ಯೋತಿರ್ಲಿಂಗ ದರ್ಶನಮಾಡಿದ್ದರೆ.
ಅರಿರಿಂದ ರಚಿತವಾದ ಭೀಮಾಶಂಕರ ಸ್ತುತಿ.

ಯೋಡಾಕಿನೀ ಕಾಸಮಾಜೇ | ನಿಷ್ಯೇವಮಾಣಃ ಪಿಶಿತಾ ಶನೈಶ್ವ|
ಸದೈವ ಭೀಮಾದಿಪದ ಪ್ರಸಿದ್ಧರ | ತಂ ಶಂಕರಂ ಭಕ್ತಹಿತಂ ನಮಾಮಿ||

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...