Tuesday, April 7, 2026
Tuesday, April 7, 2026
Home Blog Page 1290

Klive Article ಮನಸ್ಸಿನಿಂದ ಮನಸ್ಸಿಗೆ -18

0

Klive Article  ಭ್ರಷ್ಟಾಚಾರದ ಮೂಲ ಹಣವಲ್ಲ ನಮ್ಮ ಮನಸ್ಸು……….

ಸುಮಾರು 7 ವರ್ಷಗಳ ಹಿಂದೆ ನೋಟು ರದ್ದು ಮಾಡಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಾಂತಿಕಾರಿ ಕ್ರಮ ಕೈಗೊಳ್ಳಲಾಯಿತು ಎಂದು ಹೇಳಲಾಗುತ್ತದೆ. ನಂತರದಲ್ಲಿ ನಗದು ಹಣದ ಚಲಾವಣೆಯ ಮೇಲೆ ನಿಯಂತ್ರಣ ಹೇರಿ ಸಂಪೂರ್ಣ ಡಿಜಿಟಲೀಕರಣಕ್ಕೆ ಒತ್ತು ನೀಡಲಾಯಿತು……..

ಆದರೆ 2023 ರ ಈ ಸಮಯದಲ್ಲೂ ಕಂತೆ ಕತೆಗಳಲ್ಲಿ ಭ್ರಷ್ಟ ನಗದು ಹಣ ಈಗಲೂ ದೊರೆಯುತ್ತದೆ ಎಂದಾದರೆ ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿ ಬೇರೂರಿರಬಹುದು ಎಂದು ಊಹಿಸಲೂ ಸಾಧ್ಯವಾಗುತ್ತಿಲ್ಲ………

ಇದಕ್ಕೆ ಕಾರಣ ಭ್ರಷ್ಟಾಚಾರ ವಸ್ತು ರೂಪಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸುಗಳಲ್ಲಿ ಅಡಗಿದೆ. ನಮ್ಮ ಬದುಕಿನ ಭಾಗವಾಗಿದೆ. ನಮ್ಮ ದಿನನಿತ್ಯದ ಅನಿವಾರ್ಯವಾಗಿದೆ. ಜೊತೆಗೆ ಭ್ರಷ್ಟಾಚಾರ ನಿಯಂತ್ರಿಸಲು ಪ್ರಯತ್ನಿಸುವವರು ಪ್ರಾಮಾಣಿಕವಾಗಿರದೆ ಪಕ್ಷಪಾತಿಗಳಾಗಿದ್ದಾರೆ ಮತ್ತು ಭ್ರಷ್ಟಾಚಾರ ಬಹುತೇಕ ಎಲ್ಲರಿಗೂ ಒಪ್ಪಿತವಾಗಿದೆ……..

ಭ್ರಷ್ಟಾಚಾರ ಸರ್ಕಾರಿ ಕಚೇರಿಗಳಲ್ಲಿ ಪ್ರಾರಂಭವಾಗಿ ಇಡೀ ವ್ಯವಸ್ಥೆಯನ್ನು ಆಕ್ರಮಿಸಿದೆ. ಆದರೆ ಮೂಲ ರಾಜಕೀಯದಲ್ಲಿ ಅಡಗಿದೆ. ಹಣ, ಅಧಿಕಾರ, ಪ್ರಚಾರ, ಪ್ರಶಸ್ತಿ, ಜಮೀನು, ಕಟ್ಟಡ, ಚಿನ್ನ, ಧರ್ಮ, ಜಾತಿ, ಪ್ರಭಾವ ಹೀಗೆ ನಾನಾ ರೂಪದಲ್ಲಿ ವ್ಯಾಪಿಸಿದೆ……

ಲೋಕಾಯುಕ್ತ ದಾಳಿಯಂತ ಪ್ರಕರಣಗಳು ಕೇವಲ ಸಿಕ್ಕವನು ಮಾತ್ರ ಕಳ್ಳ ಎಂಬಂತಾಗಿದೆ. ಆದರೆ ಒಟ್ಟು ವ್ಯವಸ್ಥೆಯೇ ಕಳ್ಳರ ಸಂತೆ. ಬಹುತೇಕ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕುಕ್ಕರ್ ಲಿಕ್ಕರ್ ಗಿಫ್ಟ್ ಕವರುಗಳು ಸೇರಿದಂತೆ ಹಣದ ಹೊಳೆಯೇ ಹರಿಯುತ್ತಿದೆ……

ಹಣ ಸಂಪಾದನೆಯ ಬಗ್ಗೆ ಯಾರಿಗೂ ಯಾವುದೇ ಅಭ್ಯಂತರವಿಲ್ಲ. ಆದರೆ ಕೆಟ್ಟ ಹಣದ, ಭ್ರಷ್ಟ ಹಣದ ನಿಯಂತ್ರಣ ಮಾಡುವ ಅವಶ್ಯಕತೆ ಇದೆ……..

ಸದ್ಯದ ಪರಿಸ್ಥಿತಿಯಲ್ಲಿ ಹಣಕ್ಕೆ ಅತ್ಯಂತ ಹೆಚ್ಚು ಮಹತ್ವವಿದೆ. ಪ್ರತಿ ಕ್ಷಣ ಪ್ರತಿ ವಿಷಯದ ಮಾತುಗಳಲ್ಲೂ ಹಣದ ಪ್ರಸ್ತಾಪ ಇದ್ದೇ ಇರುತ್ತದೆ. ಇಡೀ ಬದುಕು ಹಣದ ಸುತ್ತಲೇ ಕೇಂದ್ರೀಕೃತವಾಗಿದೆ……..

Klive Article  ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ ಜೀವವನ್ನೇ ತೆಗೆದು ಬಿಡುವ ಸುಫಾರಿ ಹಂತಕರು ಇದ್ದಾರೆ.
ಅಮಾಯಕ ಜನರ ಗುಂಪಿನ ಮೇಲೆ ಬಾಂಬ್ ಹಾಕ್ತಾರೆ. ದುಡ್ಡಿಗೆ ದೇಹಾನು ಮಾರಿಕೊಳ್ತಾರೆ ಓಟು ಮಾರಿಕೊಳ್ತಾರೆ ಮಹತ್ವದ ಶಾಸಕ ಸ್ಥಾನವನ್ನು ಮಾರಿಕೊಳ್ತಾರೆ……….

ದುಡ್ಡಿಗಾಗಿ ಏನ್ ಕೆಲ್ಸ ಬೇಕಾದರೂ ಮಾಡ್ತಾರೆ. ಎಂತ ದೇವರು ಧರ್ಮ ಕಾನೂನೇ ಇರಲಿ ದುಡ್ಡಿಗಾಗಿ ಅದನ್ನು ದಿಕ್ಕರಿಸುತ್ತಾರೆ. ಯಾವ‌ ಸಂಬಂಧಗಳನ್ನು ಬೇಕಾದರೂ ಹಿಂಸಿಸುತ್ತಾರೆ. ಇಡೀ ಬದುಕಿನ ಎಲ್ಲಾ ಆಲೋಚನೆಗಳಲ್ಲೂ ದುಡ್ಡೇ ತುಂಬಿರುತ್ತದೆ. ಬಹಳಷ್ಟು ಜನರ ಬದುಕಿನ ಗುರಿಯೇ ದುಡ್ಡು ಮಾಡುವುದು. ಅವರ ಪ್ರತಿ ನಡೆಯೂ ದುಡ್ಡಿಗಾಗಿಯೇ ಇರುತ್ತದೆ…….

ದುಡ್ಡಿನಿಂದ ಪ್ರಾಣ ಬಿಟ್ಟು ಎಲ್ಲಾ ಸಿಗುತ್ತೆ. ಮಾನ ಮರ್ಯಾದೆ ಅಧಿಕಾರ ಸುಖ ಜನಪ್ರಿಯತೆ ಐಷಾರಾಮಿ ಊಟ ಬಟ್ಟೆ ಮನೆ ಕಾರು ಗೆಳೆಯ ಗೆಳತಿಯರು ಎಲ್ಲವೂ ನಿಮ್ಮ ಕಾಲ ಬುಡಕ್ಕೆ ಬರುತ್ತದೆ. ಯಥೇಚ್ಛ ಹಣ ಇದ್ದರೆ ರಕ್ತ ಸಂಬಂಧಗಳು ಸೇರಿ ಎಲ್ಲವೂ ಪ್ರೀತಿ ಆತ್ಮೀಯತೆಯಿಂದಲೇ ಇರುತ್ತದೆ……..

ಈ ರೀತಿಯ ಮನೋಭಾವದ ಸಮಾಜ ನಿರ್ಮಿಸಿ ಭ್ರಷ್ಟಾಚಾರ ಇದೆ ಕಳ್ಳತನ ಇದೆ ವಂಚನೆ ಮೋಸ ಇದೆ ಕೊಲೆ ಇದೆ ದರೋಡೆ ಇದೆ ಅಂತ ಬಾಯಿ ಬಾಯಿ ಬಡಿದುಕೊಂಡರೆ ಏನು ಪ್ರಯೋಜನ……..

ಹೌದು, ದುಡ್ಡು ಮಾಡಲಿಕ್ಕೆ ನ್ಯಾಯ ನೀತಿ ಧರ್ಮ ಕಾನೂನಿನ ಮಾರ್ಗಗಳು ಇಲ್ಲವೇ ಎಂಬ ನಿಮ್ಮ ಮನಸ್ಸಿನ ಪ್ರಶ್ನೆ ನನಗೆ ಕೇಳಿಸಿತು. ಆ ಮಾರ್ಗಗಳು ಸರಿಯಾಗಿ ಪಾಲನೆಯಾಗಿದ್ದರೆ ಇದನ್ನು ಬರೆಯುವ ಅವಶ್ಯಕತೆಯೇ ಇರಲಿಲ್ಲ………..

ಶ್ರಮಕ್ಕೆ ತಕ್ಕ ಫಲ, ಪ್ರತಿಭೆಗೆ ತಕ್ಕಂತೆ ಹಣ ಅಧಿಕಾರ, ಸಾಮರ್ಥ್ಯಕ್ಕೆ ತಕ್ಕಂತೆ ಗೌರವ ಘನತೆ, ಒಳ್ಳೆಯತನಕ್ಕೆ ಸಿಗಬೇಕಾದ ಬೆಲೆ ಸಿಕ್ಕಿದ್ದರೆ ಇವತ್ತು ಹಣ ಕೇವಲ ಒಂದು ಪೇಪರ್ ಮಾತ್ರ ಆಗಿರುತ್ತಿತ್ತು. ಅದಕ್ಕಿಂತ ಹೆಚ್ಚಿನ ಮಹತ್ವ ಇರುತ್ತಿರಲಿಲ್ಲ………

ಆದರೆ ಬಹಳಷ್ಟು ಕಡೆ ತಂದೆ ತಾಯಿ ಮಕ್ಕಳು ಅಣ್ಣ ತಂಗಿ ತಮ್ಮ ಅಕ್ಕ ಅಜ್ಜ ಅಜ್ಜಿ ಎಲ್ಲರೂ ದುಡ್ಡಿಗಾಗಿ ಮಾಡುವ ಅತ್ಯಂತ ಕೀಳುಮಟ್ಟದ ವರ್ತನೆಯನ್ನು ಕಣ್ಣಾರೆ ಕಾಣಬಹುದು. ಸರ್ಕಾರದ ಅಧಿಕಾರಿಗಳಿಗೆ ದುಡ್ಡು ಕೊಟ್ಟು ಬದುಕಿದ್ದಾಗಲೇ ಡೆತ್ ಸರ್ಟಿಫಿಕೇಟ್ ಪಡೆಯಬಹುದು. ಹೆಣ ಸುಡುವುದಕ್ಕೂ ಲಂಚ ಕೊಡಬೇಕು. ಅದೊಂದು ಪ್ರತಿ ಕ್ಷಣದ ಅಸಹ್ಯಕರ ಬ್ರಹ್ಮಾಂಡ ಭ್ರಷ್ಟಾಚಾರ………

ನೋಡಿ ದುಡ್ಡು ಬೇಕು ನಿಜ. ಅದೊಂದು ವ್ಯಾವಹಾರಿಕ ಮಾಧ್ಯಮ ಅಷ್ಟೆ. ಈಗ ಆಸ್ಪತ್ರೆ ಇದೆ, ಶಾಲೆ ಇದೆ, ಪೋಲೀಸ್ ಇದೆ, ನ್ಯಾಯಾಲಯ ಇದೆ, ಬ್ಯಾಂಕಿಂಗ್ ವ್ಯವಸ್ಥೆ ಇದೆ, ಸರ್ಕಾರ ಇದೆ ಹಾಗೆ ದುಡ್ಡು ಸಹ. ಇದರಲ್ಲಿ ಯಾವೂದೋ ಒಂದು ಎಲ್ಲವೂ ಅಲ್ಲ. ಆದರೆ ದುಡ್ಡು ಈ ಎಲ್ಲವನ್ನೂ ಆಕ್ರಮಿಸಿಕೊಂಡಿದೆ. ಸಂಬಂಧಗಳನ್ನು ನಾಶಪಡಿಸಿದೆ, ಪ್ರಕೃತಿಯನ್ನೇ ಆಪೋಷಣೆ ತೆಗೆದುಕೊಂಡಿದೆ, ಮಾನವೀಯ ಮೌಲ್ಯಗಳು ಬಿಡಿ ನಗೆಪಾಟಲಿಗೆ ಈಡಾಗಿದೆ…….

ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ತೊಂದರೆ, ಕಾರ್ಮಿಕರಿಗೆ ತೊಂದರೆ, ಬಡವರಿಗೆ ತೊಂದರೆ, ಅವರಿಗೆ ತೊಂದರೆ ಇವರಿಗೆ ತೊಂದರೆ ಭ್ರಷ್ಟಾಚಾರ ಜಾಸ್ತಿ ಅಂತ ಹೇಳುವ ಯಾವ ನೈತಿಕತೆ ನಮಗಿದೆ.‌…….

ನಮ್ಮಪ್ಪ ಒಳ್ಳೆಯವರು, ನಮ್ಮಮ್ಮ ದೇವತೆ, ನನ್ನ ಮಗ ರಾಜಕುಮಾರ, ನನ್ನ ಮಗಳು ಚಿನ್ನ, ನನ್ನ ಹೆಂಡತಿ ಮುಗ್ದೆ, ನನ್ನ ಗಂಡ ಪ್ರಾಮಾಣಿಕ ಎಂದು ಹೇಳಿಕೊಂಡು ತಿರುಗಾಡಿದರೆ ಮತ್ತೆ ಕೆಟ್ಟವರು ಯಾರು, ಭ್ರಷ್ಟರು ಯಾರು, ಅವರು ಬೇರೆ ಲೋಕದಿಂದ ಬಂದವರೆ………

ಕೌಟುಂಬಿಕ ವ್ಯವಸ್ಥೆಯಲ್ಲಿ ಇರುವ ಯಾರೇ ಜವಾಬ್ದಾರಿ ವ್ಯಕ್ತಿಗಳು ನಮ್ಮ ಉದ್ಯೋಗ ಏನು ನಮ್ಮ ಆಸ್ತಿ ಏನು ನಮ್ಮ ಆದಾಯ ಏನು ಖರ್ಚು ಏನು ನಮ್ಮ ಉಳಿತಾಯ ಏನು ಆದಾಯದ ಮೂಲಗಳು ಯಾವುವು ಎಂಬುದರ ಅರಿವು ಇದ್ದೇ ಇರುತ್ತದೆ. ಆ ಮಿತಿ ಮೀರಿ ಹಣ ಆಸ್ತಿ ಒಡವೆಗಳು ಸಂಗ್ರಹವಾಗುತ್ತಿದ್ದರೆ ಅದನ್ನು ಪ್ರಶ್ನೆ ಮಾಡಬೇಕಲ್ಲವೇ. ಗಂಡನೋ, ಹೆಂಡತಿಯೋ, ಮಗನೋ, ಮಗಳೋ ಎಷ್ಟೇ ಹಣ ಬಂದರೂ ಅದನ್ನು ಅನುಮಾನಿಸದೆ ತಿಜೋರಿ ತುಂಬಿಸಿಕೊಂಡು ಮಜಾ ಉಡಾಯಿಸಿ ಎಲ್ಲರೂ ಒಳ್ಳೆಯವರೆ ಅನ್ನುವುದು ಆತ್ಮವಂಚನೆಯಲ್ಲವೇ….

ಮದುವೆಗಳಲ್ಲಿ ಮೈ ತುಂಬಾ ಒಡವೆ ಧರಿಸಿ ಪ್ರದರ್ಶನ ಮಾಡುವಾಗ ಅದು ಶ್ರಮದ ಸಂಪಾದನೆಯಾಗಿದ್ದರೆ ಸಂತೋಷ. ಆದರೆ ಅದು ಭ್ರಷ್ಟ ಸಂಪಾದನೆಯಾಗಿದ್ದರೆ ನಾಚಿಕೆಯಾಗಬೇಕಲ್ಲವೇ,
ಮದುವೆ ಮನೆಯಲ್ಲಿ ವರದಕ್ಷಿಣೆ ರೂಪದ ದುಬಾರಿ ಕಾರನ್ನು ಸ್ವಾಗತ ತೋರಣದ ಮುಂದೆ ನಿಲ್ಲಿಸಿ ಪ್ರದರ್ಶಿಸುವ ಗಂಡುಗಳಿಗೆ ಏನೆಂದು ಕರೆಯಬೇಕು. ನಾಗರಿಕ ಸೇವಾ ಅಧಿಕಾರಿಗಳು ದೊಡ್ಡ ಹುದ್ದೆಯಲ್ಲಿ ಇದ್ದಾಗಲೂ ಲಂಚದ ಹಣವನ್ನು ಸ್ವತಃ ಎಣಿಸಿಕೊಂಡಿರುವುದನ್ನು ನೋಡಿದ್ದೇನೆ……..

ಇಷ್ಟೊಂದು ದುಡ್ಡಿಗೆ ಮಹತ್ವ ಕೊಟ್ಟು ಈಗ ದುಡ್ಡಿಗಾಗಿಯೇ ಸಮಾಜ ಬಡಿದಾಡುತ್ತಿರುವಾಗ, ಸಂಬಂಧಗಳೇ ಶಿಥಲವಾಗುತ್ತಿರುವಾಗ, ಪರಿಸರವೇ ನಾಶವಾಗುತ್ತಿರುವಾಗ ವ್ಯವಸ್ಥೆಯನ್ನು ಸರಿಪಡಿಸುವುದು ಹೇಗೆ……..

Klive Article  ದುಡ್ಡೇ ಅರ್ಹತೆ, ದುಡ್ಡೇ ಅಧಿಕಾರ, ದುಡ್ಡೇ ನಿಮ್ಮ ಸರ್ವಸ್ವವೂ ಆಗಿರುವಾಗ ಎಲ್ಲರೂ ದುಡ್ಡಿಗಾಗಿ ಹಾತೊರೆಯುವಾಗ ಅದನ್ನು ಹೊರತುಪಡಿಸಿ ಯಾವುದೇ ಸುಧಾರಣೆ ಹೇಗೆ ಸಾಧ್ಯ……..

ಮೊದಲು ಕೆಟ್ಟ ದುಡ್ಢಿನ ಮಹತ್ವ ಕಡಿಮೆ ಮಾಡಬೇಕು. ದುಡ್ಡು ಪ್ರತಿಫಲ ಆಗಬಾರದು. ದುಡ್ಡು ವ್ಯಕ್ತಿತ್ವ ನಿರ್ಧರಿಸಬಾರದು.
ದುಡ್ಡು ಅಳತೆ ಗೋಲಾಗಬಾರದು.
ದುಡ್ಡು ಒಂದು ವ್ಯಾವಹಾರಿಕ ಸಾಧನ ಮಾತ್ರ. ಹೇಗೆ ಅಕ್ಷರಗಳು ಕಲಿಕೆಯ ಸಾಧನವೋ ಹಾಗೆ. ಅಕ್ಷರಗಳೇ ವಿದ್ಯೆಯಲ್ಲ……..

ಸಮಾಜ ತೀರಾ ಹದಗೆಡಲು ದುಡ್ಡಿನ ಮೋಹವೇ ಕಾರಣ. ಅದಕ್ಕೆ ಈಗಲಾದರೂ ಕಡಿವಾಣ ಹಾಕಬೇಕಿದೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Power Cut in Shivamogga ಶಿವಮೊಗ್ಗ ಮಂಡ್ಲಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

Power Cut in Shivamogga ಶಿವಮೊಗ್ಗ ನಗರ ಉಪವಿಭಾಗ-2 ಮಂಡ್ಲಿ ಭಾಗದಲ್ಲಿ ವ್ಯಾಪ್ತಿಯ ಘಟಕ-5 ಮತ್ತು 6 ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಇರುವ ಕಾರಣ ದಿನಾಂಕ: 5/3/2023 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Power Cut in Shivamogga ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಮಂಡ್ಲಿ ವೃತ್ತ, ಶಂಕರ ಕಣ್ಣಿನ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಶಾರದ ನಗರ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ಸವಾಯಿ ಪಾಳ್ಯ, ಕರುಬರ ಪಾಳ್ಯ, ಇಲಿಯಾಜ್ ನಗರ 1ನೇ ಕ್ರಾಸ್‌ನಿಂದ ೪ನೇ ಕ್ರಾಸ್, 1000ಅಡಿ ರಸ್ತೆ, ಎಫ್-5 ಗಾಜನೂರು ಗ್ರಾಮಾಂತರ ಪ್ರದೇಶ, ಎಫ್-8ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಎಫ್-18 ಹೊಸಳ್ಳಿ, ಎಫ್-6 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಎಫ್-17 ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್ ಹಾಗೂ ಹನುಂತಾಪುರ, ಶರಾವತಿ ನಗರ, ಶಾರದ ಕಾಲೋನಿ ಸುತ್ತಮುತ್ತಲಿನ ಐಪಿ ಲಿಮಿಟ್‌ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Taxi Driver ಟ್ಯಾಕ್ಸಿ ಚಾಲಕರು ಪ್ರಯಾಣಿಕರೊಂದಿಗೆ ಉತ್ತಮ ಒಡನಾಟ ಹೊಂದಿರಬೇಕು- ನಿವೃತ್ತ ಯೋಧ ನಾಗಾರಾಜ್

0

Taxi Driver  ಟ್ಯಾಕ್ಸಿ ಚಾಲಕರು ವೃತ್ತಿ ಜೀವನದಲ್ಲಿ ಪ್ರಯಾಣಿಕರೊಂದಿಗೆ ಉತ್ತಮ ಒಡನಾಟ ಹಾಗೂ ಬಾಂಧವ್ಯವನ್ನು ಹೊಂದಿದರೆ ಮಾತ್ರ ಚಾಲನೆ ವೃತ್ತಿಯಲ್ಲಿ ಮುಂದುವರೆದು ಯಶಸ್ಸುಗಳಿಸಲು ಸಾಧ್ಯ ಎಂದು ನಿವೃತ್ತ ಯೋಧ ನಾಗರಾಜ್ ತೋರಣಮಾವು ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ ಜಿಲ್ಲಾ ಘಟಕದ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯ ಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Taxi Driver  ದೇಶಕ್ಕಾಗಿ ಹೋರಾಡುವ ಸೈನಿಕನ ಶಿಸ್ತನ್ನು ಚಾಲಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಯಾಣಿಕರೊಂದಿಗೆ ಚಾಲಕರು ಸನ್ನಡತೆ, ಸದ್ಬುಧಿ ಹಾಗೂ ಉತ್ತಮ ವ್ಯವಹಾರಗಳನ್ನು ಮಾಡಿಕೊಂಡಲ್ಲಿ ಮಾತ್ರ ಮುಂದಿನ ವೃತ್ತಿ ಜೀವನದಲ್ಲಿ ಹೆಸರು ಸಂಪಾದಿಸಬಹುದು ಎಂದು ಕಿವಿಮಾತು ಹೇಳಿದರು.

ಚಾಲನೆ ವೃತ್ತಿಯಲ್ಲಿರುವವರು ಪ್ರಯಾಣಿಕರಲ್ಲಿ ಯಾವುದೇ ಜಾತಿ, ಬೇಧ ಮಾಡದೇ ಕಾರ್ಯನಿರ್ವ ಹಿಸಬೇಕು. ಆಗ ಮಾತ್ರ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಚಾಲಕರು ತಮ್ಮ ವೃತ್ತಿಯನ್ನು ಗೌರವಿ ಸಿದಂತೆ ಪ್ರತಿಯೊಬ್ಬ ಪ್ರಯಾಣಿಕರನ್ನು ಗೌರವಿಸಿದಾಗ ಮಾತ್ರ ಯಶಸ್ಸು ಕಾಣಬಹುದು ಎಂದು ತಿಳಿಸಿದರು.

ಅರ್ಗನೈಜೇಷನ್ ರಾಜ್ಯಾಧ್ಯಕ್ಷ ರಮೇಶ್‌ಕುಮಾರ್ ಕುಂದಾಪುರ ಮಾತನಾಡಿ ಟ್ಯಾಕ್ಸಿ ಚಾಲಕರ ಬಳಗವು ಈಗಾಗಲೇ ರಾಜ್ಯಾದ್ಯಂತ ಸ್ಥಾಪನೆಯಾಗಿ ಅಧಿಕೃತವಾಗಿ 13 ಜಿಲ್ಲೆಗಳಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಂಘದಲ್ಲಿ ನೊಂದಣಿಯಾದ ಚಾಲಕರಿಗೆ ತುರ್ತು ಸಂದರ್ಭ ಎದುರಾದಲ್ಲಿ ಆಯಾ ಜಿಲ್ಲಾವಾರು ಸಂಘಗಳು ಸಹಾಯಕ್ಕೆ ಧಾವಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಿವೆ ಎಂದು ತಿಳಿಸಿದರು.

ಇದೀಗ ವೈಟ್‌ಬೋರ್ಡ್ ಟ್ಯಾಕ್ಸಿಗಳ ಹಾವಳಿಗಳು ಪ್ರತಿಯೊಂದು ಜಿಲ್ಲೆಗಳಲ್ಲೂ ಹೆಚ್ಚಾಗಿರುವ ಕಾರಣ ಮುಂದಿನ ದಿನಗಳಲ್ಲಿ ನ್ಯಾಯಬದ್ಧ ಹೋರಾಟ ಮಾಡಲಾಗುತ್ತದೆ ಎಂದ ಅವರು ಎಲ್ಲಾ ಟ್ಯಾಕ್ಸಿ ಚಾಲಕರುಗಳು ಒಗ್ಗಟ್ಟಾಗಿ ಕೈಜೋಡಿಸಿದರೆ ವೈಟ್‌ಬೋರ್ಡ್ ಹಾವಳಿಯ ವಾಹನಗಳನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರ್ಗನೈಜೇಷನ್ ಜಿಲ್ಲಾಧ್ಯಕ್ಷ ಹೆಚ್.ಕೆ.ಪ್ರಕಾಶ್ ಕೆಟಿಡಿಓದಲ್ಲಿ ನೊಂದಣೀಯಾದಂತಹ ಚಾಲಕರಿಗೆ ಆಕಸ್ಮಿಕವಾಗಿ ಅಪಘಾತ ಅಥವಾ ಅಂಗವೈಫಲ್ಯಗಳಂತಹ ಸಮಸ್ಯೆ ಕಂಡು ಬಂದಲ್ಲಿ ಸರ್ವ ಸದಸ್ಯರುಗಳ ಸಹಕಾರದೊಂದಿಗೆ ಪರಿಹಾರ ವಿತರಣೆ ಮಾಡಲಾಗುತ್ತದೆ. ಜೊತೆಗೆ ಆರೋಗ್ಯ ಶಿಬಿರ, ನೇತ್ರ ತಪಾಸಣೆಯನ್ನು ನಡೆಸಿ ಚಾಲಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೆಟಿಡಿಓ ಚಾಲಕರ ಕುಟುಂಬದವರಿಗೆ ಮನರಂಜನೆಯ ಸಲುವಾಗಿ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.

ಇದೇ ವೇಳೆ ಟ್ಯಾಕ್ಸಿ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ ನೂತನ ಅಧ್ಯಕ್ಷರಾಗಿ ಪ್ರಕಾಶ್, ಉಪಾಧ್ಯಕ್ಷರಾಗಿ ಪಿಲಿಕ್ಸ್ ಪಿಂಟೋ, ಉಮೇಶ್, ಗೌರವಾಧ್ಯಕ್ಷ ಸುಂದ್ರೇಶ್, ಕಾರ್ಯದರ್ಶಿ ಗಿರೀಶ್, ಸಹ ಕಾರ್ಯದರ್ಶಿಗಳಾಗಿ ಆರ್.ರವಿ, ಹರ್ಷದ್, ಕೋಶಾಧಿಕಾರಿ ಕಿಶೋರ್, ಸಹ ಕೋಶಾಧಿಕಾರಿ ಮಂಜು, ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಡಿಸೋಜ, ಕ್ರೀಡಾ ಕಾರ್ಯದರ್ಶಿ ಉಮೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಮೇಶ್ ಶೃಂಗೇರಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ರೇವಣ್ಣ, ಅರ್ಗನೈಜೇಷನ್ ಗೌರವಾಧ್ಯಕ್ಷ ಸುಂದ್ರೇಶ್, ಕಾರ್ಯದರ್ಶಿ ಗಿರೀಶ್, ಕೋಶಾಧಿಕಾರಿ ಕಿಶೋರ್ ಹಾಗೂ ಹಾಸನ ಮತ್ತು ಉಡುಪಿ ಜಿಲ್ಲಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagalur ಪ್ರತಿಯೊಂದು ಗ್ರಾಮಗಳಲ್ಲಿ ರಂಗಮಂದಿರ ಅವಶ್ಯಕತೆಯಿದೆ-_ಡಾ.ಸುಂದರ ಗೌಡ

0

Chikmagalur  ಕಲಾವಿದರು ಭರತನಾಟ್ಯ, ಜಾನಪದ ಸಂಗೀತ, ಚಿತ್ರಕಲೆ ಮುಂತಾದ ಹಲವಾರು ಕಲಾಪ್ರಕಾರಗಳ ಪ್ರದರ್ಶನ ಅನಾವರಣಗೊಳಿಸಲು ಪ್ರತಿಯೊಂದು ಗ್ರಾಮಗಳಲ್ಲಿ ರಂಗಮಂದಿರ ಅವಶ್ಯವಿದೆ ಎಂದು ಜಿಲ್ಲಾ ಯುವರೆಡ್ ಕ್ರಾಸ್ ಆರೋಗ್ಯ ಸಮಿತಿ ಅಧ್ಯಕ್ಷ ಡಾ. ಕೆ.ಸುಂದರ ಗೌಡ ಅವರು ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ತೊಂಗರಿ ಹಂಕಲ್ ನ ಹಿರೇಬಿದರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಹುಲ್ಲೇಕಲ್ಲೇಶ್ವರ ರಂಗಮಂದಿರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕಲಾವಿದರಿಗೆ ನಾಟಕ, ಸಂಗೀತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಭ್ಯಾಸಿಸಲು ಹಾಗೂ ಪ್ರದರ್ಶನಗೊಳಿಸಲು ರಂಗಮಂದಿರ ಅವಶ್ಯವಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಹಕಾರ ಹಾಗೂ ಸ್ವಾಮೀಜಿಯವರ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಲಾವಿದರ ಕನಸನ್ನು ನನಸು ಮಾಡಲು ಮುಂದಾಗಿದೆ ಎಂದರು.

ಪ್ರಸ್ತುತ ಗ್ರಾಮೀಣ ಪ್ರದೇಶದ ಜನರನ್ನು ಒಗ್ಗೂಡಿಸಲು ರಂಗಮಂದಿರ ಪ್ರಮುಖ ಪಾತ್ರ ವಹಿಸುತ್ತಿದೆ. ಕಲಾವಿದರಿಂದ ಪ್ರದರ್ಶನಗೊಳ್ಳುವ ನಾಟಕ, ಜಾನಪದ ಸಂಗೀತದಿಂದ ಮಾತ್ರ ಗ್ರಾಮಸ್ಥರನ್ನು ಒಂದೆಡೆ ಸೆಳೆಯಲು ಸಾಧ್ಯ ಎಂದ ಅವರು ಕಲಾವಿದರಿಗೆ ಹೆಚ್ಚು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗುತ್ತಿರುವುದು ಸಂತಸ ಸಂಗತಿ ಎಂದರು.

Chikmagalur  ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾ ಚಾರ್ಯ ಸ್ವಾಮೀಜಿ ಗ್ರಾಮೀಣ ಭಾಗದಲ್ಲಿ ಕಲಾಸಕ್ತಿ ಹೊಂದಿರುವ ಅನೇಕ ಪ್ರತಿಭೆಗಳಿದ್ದು ,ಅವುಗಳನ್ನು ಅನಾವರ ಣಗೊಳಿಸಲು ರಂಗವೇದಿಕೆ ಅವಶ್ಯವಿದೆ. ಆ ನಿಟ್ಟಿನಲ್ಲಿ ಗ್ರಾಮದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಹುಲ್ಲೇಕಲ್ಲೇಶ್ವರ ದೇವಾಲ ಯದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಣ್ಣ, ಹಾಸ್ಯ ನಟ ಹುಲೀಕೆರೆ ಪುಲಕೇಶಿ, ಗ್ರಾಮದ ಕಲ್ಲೇಶಪ್ಪ, ಜಯಣ್ಣ, ದಾಸಪ್ಪ ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಹಲ್ಲೇಕಲ್ಲೇಶ್ವರ ಕಲಾಸಂಘದಿಂದ ಏಕದಾರಿ ತತ್ವಪದಗಳ ಗಾಯನ ನಡೆಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga City Corporation ಬೀದಿ ನಾಯಿಗಳ ಕಾಟ ತಪ್ಪಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಸೂಕ್ತ ಕ್ರಮ

0

Shivamogga City Corporation  ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದೆಲ್ಲೆಡೆ ಹೆಚ್ಚಾಗಿರುವ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕಾ ಕಾರ್ಯಕ್ರಮಗಳನ್ನು ಮಾರ್ಚ್ 4ರಿಂದ 6 ತಿಂಗಳವರೆಗೆ ಪ್ರತಿ ಭಾನುವಾರದಂದು ನಗರದ ರಾಜೀವ್‌ಗಾಂಧಿ ಬಡಾವಣೆಯಲ್ಲಿರುವ ಮಹಾವೀರ್ ಗೋಶಾಲೆಯ ಪಕ್ಕದಲ್ಲಿ ಆಯೋಜಿಸಿದೆ.

ಮಾನವೀಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ಶ್ವಾನಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು, ರೇಬಿಸ್ ಇತ್ಯಾದಿ ಪ್ರಾಣಿ ಜನ್ಯ ರೋಗಗಳಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವುದು ಹಾಗೂ ಬೀದಿನಾಯಿಗಳಿಂದ ಸಾರ್ವಜನಿಕರಿಗಾಗುವ ತೊಂದರೆಗಳಿಂದ ಮುಕ್ತಗೊಳಿಸುವುದು ಈ ಶಸ್ತ್ರ ಚಿಕಿತ್ಸೆಯ ಉದ್ದೇಶ. ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ರೇಬಿಸ್ ವಿರುದ್ಧ ಲಸಿಕೆ ಹಾಕಿ ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಪೂರ್ಣವಾದ ನಂತರ ಅವುಗಳನ್ನು ಹಿಡಿದ ಸ್ಥಳಗಳಲ್ಲಿ ಬಿಡಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Shivamogga City Corporation  ಹೆಚ್ಚಿನ ಮಾಹಿತಿಗಾಗಿ ಡಾ. ರೇಖಾ ಎಸ್.ಟಿ., ಪಶುವೈದ್ಯಾಧಿಕಾರಿಗಳು, ಮಹಾನಗರ ಪಾಲಿಕೆ- 98863268, ಹಾಗೂ ಬಸವಪ್ರಸಾದ್ (ಎಸ್‌ಎಆರ್‌ಸಿ) -9964239695 ಇವರುಗಳನ್ನು ಸಂಪರ್ಕಿಸಬಹುದು…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Online Application ಸಶಸ್ತ್ರಪಡೆಯಲ್ಲಿ ಅಗ್ನಿವೀರ್ ನೇಮಕಾತಿಗೆ ಮಾರ್ಚ್ 15 ರ ತನಕ ಆನ್ ಲೈನ್ ನೋಂದಣಿ

Online Application 2023-24 ನೇ ಸಾಲಿಗೆ ಭಾರತ ಸರ್ಕಾರವು ಅಗ್ನಿವೀರ್ ನೇಮಕಾತಿ ಯೋಜನೆಯಡಿ ಸಶಸ್ತ್ರ ಪಡೆಗೆ ನೇಮಕಾತಿ ಮಾಡಿಕೊಳ್ಳಲು ಆನ್‍ಲೈನ್ ನೋಂದಣಿಯನ್ನು ಆರಂಭಿಸಿದೆ. ಮಾರ್ಚ್ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

ಅಗ್ನಿವೀರ್ ನೇಮಕಾತಿಯ ಪರೀಕ್ಷೆಗಳು ಏಪ್ರಿಲ್ 17 ರಿಂದ ಆರಂಭವಾಗಲಿದ್ದು ಫೇಸ್-1 ರಲ್ಲಿ ಆನ್‍ಲೈನ್ ಕಂಪ್ಯೂಟರ್ ಆಧಾರಿತ ಸಾಮಾನ್ಯ ಪ್ರವೇಶ ಪರೀಕ್ಷೆ(ಆನ್‍ಲೈನ್ ಸಿಇಇ) ಮತ್ತು ಫೇಸ್-2 ರಲ್ಲಿ ನೇಮಕಾತಿ ರ್ಯಾಲಿ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.

Online Application ಆನ್‍ಲೈನ್ ನೋಂದಣಿ ಮತ್ತು ಪರೀಕ್ಷೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ www.joinindianarmy.nic.in ಗೆ ಭೇಟಿ ನೀಡಿ ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Home Minister Araga Jnanendra ಅರ್ಹ ಫಲಾನುಭವಿಗಳನ್ನ ಗುರುತಿಸಿ ಭೂಮಿ ಹಕ್ಕುಪತ್ರ ನೀಡಲಾಗಿದೆ- ಆರಗ ಜ್ಞಾನೇಂದ್ರ

0

Home Minister Araga Jnanendra ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ಸುಮಾರು 3250ಕೋ. ರೂ.ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಅನೇಕ ಮಹತ್ವದ ಹಾಗೂ ಜನರ ನಿರೀಕ್ಷೆಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗಜ್ಞಾನೇಂದ್ರ ಅವರು ಹೇಳಿದರು.

ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ರೈತರಿಗೆ ಭೂಮಾಲೀಕತ್ವದ ಹಕ್ಕುಪತ್ರ ವಿತರಿಸಿ ಮಾತನಾಡುತ್ತಿದ್ದರು. ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಯಂತೆ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಪಕ್ಷಾತೀತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದವರು ನುಡಿದರು.

ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಗರ್‌ಹುಕುಂ ಸಮಿತಿಯನ್ನು ಹೆಚ್ಚುವರಿಯಾಗಿ ಹೋಬಳಿ ಮಟ್ಟದಲ್ಲಿ ರಚಿಸಲು ಸರ್ಕಾರದಿಂದ ಅನುಮತಿ ಕೊಡಿಸಿ, ಸುತ್ತಮುತ್ತಲ ಪ್ರದೇಶದ 5-6 ಗ್ರಾಮಗಳ ಸದಸ್ಯರನ್ನೊಳಗೊಂಡತೆ ಸಮಿತಿಯನ್ನು ರಚಿಸಿ, ಅವರ ಮೂಲಕ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ, ದಾಖಲೆಗಳನ್ನು ಪರಿಶೀಲಿಸಲಾಗಿದೆ. ನಂತರ ಅರ್ಹರಾದ 73ಜನ ಫಲಾನುಭವಿಗಳಿಗೆ ಹಕ್ಕುಪತ್ರದೊಂದಿಗೆ ತಹಶೀಲ್ದಾರರ ಕಚೇರಿಯಿಂದ ನೀಡಬಹುದಾದ ಎಲ್ಲಾ ಅಧಿಕೃತ ದಾಖಲೆಗಳನ್ನು ನೀಡಲಾಗಿದೆ ಎಂದರು.

ಹಸಿದವನಿಗೆ ಅನ್ನ ಉಣಿಸುವ, ದೇಶದ ಬೆನ್ನೆಲುಬಾಗಿರುವ ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು. ಅಂತಹ ರೈತರಿಗೆ ಹಕ್ಕುಪತ್ರ ವಿತರಿಸುತ್ತಿರುವು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ರೈತರಿಗೆ ಭೂಮಿ ಎಂಬ ವಿಷಯವೇ ಭಾವನಾತ್ಮಕ ಸಮಾಧಾನವನ್ನು ನೀಡಲಿದೆ. ರೈತರಿಗೆ ಸಂತೋಷ ನೀಡುವ, ಬದುಕಿಗೆ ಶಕ್ತಿ ನೀಡುವ, ನೆಮ್ಮದಿಯ ವಾತಾವರಣ ನಿರ್ಮಿಸುವ ಕಾರ್ಯದಲ್ಲಿ ಭಾಗವಹಿಸಿರುವುದು ನನಗೆ ಸಂತೃಪ್ತಿ ಹಾಗೂ ರೈತರನ್ನು ಭೂಮಾಲೀಕರನ್ನಾಗಿ ಮಾಡಿದ ಸಾರ್ಥಕಭಾವ ಇದೆ ಎಂದರು.
ಈ ಹಿಂದೆಯೂ ಅನೇಕ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿತ್ತು. ಇನ್ನು ಉಳಿದ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ, ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದ ಅವರು, ಹಕ್ಕು ಪತ್ರ ವಿತರಿಸುವಲ್ಲಿ ಅನೇಕ ತೊಡಕುಗಳನ್ನು ನಿವಾರಿಸಿ, ಕಂದಾಯ ಇಲಾಖಾ ಅಧಿಕಾರಿಗಳ ಸಹಕಾರ ಪಡೆದು, 73 ಜನರಿಗೆ ಹಕ್ಕುಪತ್ರ ವಿತರಿಸಲು ಸಹಕಾರಿಯಾಗಿರುವ ಸಮಿತಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಮುಂದಿನ ಒಂದು ವಾರದೊಳಗಾಗಿ 400ಜನರಿಗೆ 94ಸಿ ಯೋಜನೆಯಡಿ ಮನೆಯ ಹಕ್ಕುಪತ್ರ ನೀಡಲು ಸೂಚಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸೃಜಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Home Minister Araga Jnanendra ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ತಹಶೀಲ್ದಾರ್ ಗಣೇಶ್, ಶಿವನಂಜಪ್ಪ, ಶಿವಮೂರ್ತಿ, ಈಶ್ವರಪ್ಪ, ಶ್ರೀಮತಿ ರೇವತಿ, ಸುರೇಶ್‌ಹೊಸಕೊಪ್ಪ ಸೇರಿದಂತೆ ಗ್ರಾಮದ ಹಲವು ಮುಖಂಡರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಬಿಜೆಪಿಯ ಗೋಪ್ರೀತಿಯನ್ನ ಗೋವುಗಳ ಜೊತೆ ಟೀಕಿಸಿದ ವಿಪಕ್ಷ ಪ್ರತಿಭಟನೆ

Shivamogga 2018ರಲ್ಲಿ ಗೋ ಸಂರಕ್ಷಣೆ ಯೋಜನೆ ಜಾರಿಗೆ ತರುತ್ತೇವೆ ಎಂದು ಬಿಜೆಪಿ ಶಿವಮೊಗ್ಗ ಮಹಾನಗರ ಪಾಲಿಕೆ ಭರವಸೆಯನ್ನು ನೀಡಿತ್ತು. 2018 -2023ರವರೆಗೆ ಐದು ವರ್ಷಗಳ ಬಜೆಟ್ ನಲ್ಲಿ 50 ಲಕ್ಷಗಳನ್ನು ಗೋ ಸಂರಕ್ಷಣಾ ಯೋಜನೆಗೆ ಅನುದಾನವನ್ನ ಘೋಷಿಸಿತ್ತು. ಆದರೆ ಈ ಯೋಜನೆ ಅಡಿಯಲ್ಲಿ ಮೇಲ್ಕಂಡ ಯೋಜನೆಗೆ ಒಂದು ಪೈಸವನ್ನು ವಿನಿಯೋಗಿಸಲ್ಲ. ಗೋಮಾತೆಗೆ ಅವಮಾನ ಮಾಡಿರುತ್ತಾರೆ. ಗೋಮಾತೆಗೆ ಅವಮಾನ ಮಾಡಿದ ಬಿಜೆಪಿ ಮಹಾನಗರ ಪಾಲಿಕೆಯ ಆಡಳಿತ ವಿರುದ್ಧ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರದ ಶ್ರೀಮತಿ ರೇಖಾ ರಂಗನಾಥ್ ಅವರು ಪ್ರತಿಭಟನೆ ನಡೆಸಿದರು.

Shivamogga  ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಘೋಷಣೆಕೂಗಿದರು.
ಎರಡು ಹಸುಗಳ ಬೆನ್ನಿಗೆ ಬ್ಯಾನರ್ ತೊಡಿಸಿ ಮೇಯರ್ ಆಫೀಸಿನ‌ ಮುಂದೆ
ಸಾಂಕೇತಿಕ ಪ್ರತಿಭಟನೆ ನಡೆಸಿದ ಘಟನೆ ಎಲ್ಲರ ಗಮನ ಸೆಳೆದಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Public Reaction on Airport Shivamogga | ಮುಗಿಲ ಹಕ್ಕಿ ಮನದ ಹಕ್ಕಿ

0

https://youtu.be/_9lBzpYAD8kBook Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Protest on not spending funds for Gosamraksha | ಗೋಸಂರಕ್ಷಣೆಗೆ ಖರ್ಚು ಮಾಡದ ಶಿಮಪಾ ವಿರುದ್ಧ ಪ್ರತಿಭಟನೆ

0

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.