Chikmagalur ಕಲಾವಿದರು ಭರತನಾಟ್ಯ, ಜಾನಪದ ಸಂಗೀತ, ಚಿತ್ರಕಲೆ ಮುಂತಾದ ಹಲವಾರು ಕಲಾಪ್ರಕಾರಗಳ ಪ್ರದರ್ಶನ ಅನಾವರಣಗೊಳಿಸಲು ಪ್ರತಿಯೊಂದು ಗ್ರಾಮಗಳಲ್ಲಿ ರಂಗಮಂದಿರ ಅವಶ್ಯವಿದೆ ಎಂದು ಜಿಲ್ಲಾ ಯುವರೆಡ್ ಕ್ರಾಸ್ ಆರೋಗ್ಯ ಸಮಿತಿ ಅಧ್ಯಕ್ಷ ಡಾ. ಕೆ.ಸುಂದರ ಗೌಡ ಅವರು ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ತೊಂಗರಿ ಹಂಕಲ್ ನ ಹಿರೇಬಿದರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಹುಲ್ಲೇಕಲ್ಲೇಶ್ವರ ರಂಗಮಂದಿರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕಲಾವಿದರಿಗೆ ನಾಟಕ, ಸಂಗೀತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಭ್ಯಾಸಿಸಲು ಹಾಗೂ ಪ್ರದರ್ಶನಗೊಳಿಸಲು ರಂಗಮಂದಿರ ಅವಶ್ಯವಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಹಕಾರ ಹಾಗೂ ಸ್ವಾಮೀಜಿಯವರ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಲಾವಿದರ ಕನಸನ್ನು ನನಸು ಮಾಡಲು ಮುಂದಾಗಿದೆ ಎಂದರು.
ಪ್ರಸ್ತುತ ಗ್ರಾಮೀಣ ಪ್ರದೇಶದ ಜನರನ್ನು ಒಗ್ಗೂಡಿಸಲು ರಂಗಮಂದಿರ ಪ್ರಮುಖ ಪಾತ್ರ ವಹಿಸುತ್ತಿದೆ. ಕಲಾವಿದರಿಂದ ಪ್ರದರ್ಶನಗೊಳ್ಳುವ ನಾಟಕ, ಜಾನಪದ ಸಂಗೀತದಿಂದ ಮಾತ್ರ ಗ್ರಾಮಸ್ಥರನ್ನು ಒಂದೆಡೆ ಸೆಳೆಯಲು ಸಾಧ್ಯ ಎಂದ ಅವರು ಕಲಾವಿದರಿಗೆ ಹೆಚ್ಚು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗುತ್ತಿರುವುದು ಸಂತಸ ಸಂಗತಿ ಎಂದರು.
Chikmagalur ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾ ಚಾರ್ಯ ಸ್ವಾಮೀಜಿ ಗ್ರಾಮೀಣ ಭಾಗದಲ್ಲಿ ಕಲಾಸಕ್ತಿ ಹೊಂದಿರುವ ಅನೇಕ ಪ್ರತಿಭೆಗಳಿದ್ದು ,ಅವುಗಳನ್ನು ಅನಾವರ ಣಗೊಳಿಸಲು ರಂಗವೇದಿಕೆ ಅವಶ್ಯವಿದೆ. ಆ ನಿಟ್ಟಿನಲ್ಲಿ ಗ್ರಾಮದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಹುಲ್ಲೇಕಲ್ಲೇಶ್ವರ ದೇವಾಲ ಯದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಣ್ಣ, ಹಾಸ್ಯ ನಟ ಹುಲೀಕೆರೆ ಪುಲಕೇಶಿ, ಗ್ರಾಮದ ಕಲ್ಲೇಶಪ್ಪ, ಜಯಣ್ಣ, ದಾಸಪ್ಪ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಹಲ್ಲೇಕಲ್ಲೇಶ್ವರ ಕಲಾಸಂಘದಿಂದ ಏಕದಾರಿ ತತ್ವಪದಗಳ ಗಾಯನ ನಡೆಯಿತು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.