Chikmagalur Jail ಪ್ರತಿನಿತ್ಯ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಧಿಕಾರಿಗಳ ತಂಡ ಬಂಧಿಗಳ ದಾಖ ಲಾತಿ ತಪಾಸಣೆ, ಗದ್ದಲ ಹಾಗೂ ರಾಜೀ ಸಂಧಾನಕ್ಕೆ ನಿರತರಾಗಿರುವ ಸಂದರ್ಭದಲ್ಲಿ ಕಾರಾಗೃಹ ಇಲಾಖೆಯ ಮಹಿಳಾ ಪೇದೆಗೆ ಸೀಮಂತ ನಡೆಸುವ ಮೂಲಕ ಅಪರೂಪ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸುತ್ತಿರುವುದು ಋಷಿ ತಂದಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲಾ ಎಸ್. ಮೇಟಿ ಅವರು ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕುಟುಂಬ ಕಲ್ಯಾಣ ದಿನಾಚರಣೆ ಪ್ರಯುಕ್ತ ಇಲಾಖೆಯ ಮಹಿಳಾ ಪೇದೆ ಜಿ.ಲಾವಣ್ಯ ಅವರಿಗೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸದಾ ಕಾಲ ಗದ್ದಲ, ದೂರು- ಪ್ರತಿ ದೂರು, ರಾಜೀ ಸಂಧಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮಹಿಳಾ ಪೊಲೀಸ್ ಪೇದೆ ಲಾವಣ್ಯ ಅವರಿಗೆ ಸಹೋದ್ಯೋಗಿ ಸಿಬ್ಬಂದಿಗಳು ಆರತಿ ಬೆಳಗಿ, ಮಡಿಲು ತುಂಬುವುದರೊಂದಿಗೆ ಮನದುಂಬಿ ಹರಸಿ, ಬೀಳ್ಕೊಟ್ಟ ಅಪರೂಪದ ಸೀಮಂತ ಕಾರ್ಯಕ್ರಮ ರಾಜ್ಯಾದ್ಯಂತ ಪ್ರಥಮ ಬಾರಿಗೆ ಕಾರಾಗೃಹದಲ್ಲಿ ಆಚರಿಸಿರುವುದು ಸಂತಸದ ವಿಷಯ ಎಂದರು.
ಕಾರಾಗೃಹದಲ್ಲಿ ಉತ್ತಮ ವಾತಾವರಣ ನಿರ್ಮಾಣದ ಜೊತೆಗೆ ಸಹೋದ್ಯೋಗಿ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಅಧಿಕಾರಿ, ಸಿಬ್ಬಂದಿ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದೇ ಕುಟುಂಬ ಎಂದು ಕಾರ್ಯನಿರ್ವಹಿಸಿದರೆ ಸಾರ್ವಜನಿಕವಾಗಿ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.
ಇದೇ ವೇಳೆ ಮಹಿಳಾ ಸಿಬ್ಬಂದಿ, ಅರಿಶಿಣ, ಕುಂಕುಮ ನೀಡುವುದರೊಂದಿಗೆ ತಲೆಗೆ ಹೂ ಮುಡಿಸಿ, ಮಡಿಲು ತುಂಬಿದರು. ನೆರೆದಿದ್ದ ಸಹೋದ್ಯೋಗಿ ಮಿತ್ರರು, ಶುಭವಾಗಲಿ ಎಂದು ಹಾರೈಸಿದರು.
Chikmagalur Jail ಮಹಿಳಾ ಪೇದೆಯೊಬ್ಬರಿಗೆ ಸೀಮಂತ ಮಾಡುವ ಮೂಲಕ ಕಾರಾಗೃಹದಲ್ಲಿ ಕೌಟುಂಬಿಕ ಸಂಭ್ರಮದ ವಾತಾವರಣ ನಿರ್ಮಾಣಕ್ಕೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಸಹಕರಿಸಿದರು.
ಈ ಸಂದರ್ಭದಲ್ಲಿ ಕಾರಾಗೃಹದ ಜೈಲರ್ ಎಂ.ಕೆ.ನೆಲಧರಿ, ಅಧಿಕಾರಿಗಳಾದ ಅಲೀಮುದ್ದಿನ್, ವನಖಂಡೆ, ಬೊಂಗಾಳೆ, ಸಿಬ್ಬಂದಿಗಳಾದ ವಿನಾಯಕ ಮತ್ತಿತರರು ಉಪಸ್ಥಿತರಿದ್ದರು.
ook Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.