Thursday, April 9, 2026
Thursday, April 9, 2026
Home Blog Page 1287

World Kidney Day ರಕ್ತ ಶುದ್ಧಿಕಾಯಕದ ಕಿಡ್ನಿಯ ಬಗ್ಗೆ ಜಾಗೃತವಾಗಿರಿ

0

World Kidney Day  ವ್ಯಕ್ತಿಯೊಬ್ಬನ ಒಟ್ಟಾರೆ ಆರೋಗ್ಯದಲ್ಲಿ ಆತನ ಕಿಡ್ನಿ ಪಾತ್ರ ಅತ್ಯಂತ ಪ್ರಮುಖವಾದದ್ದು. ಕಿಡ್ನಿ ಅಂದರೆ ಮೂತ್ರಪಿಂಡ.

ಕಿಡ್ನಿ ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧ ಮಾಡುವಂತಹ ಕೆಲಸ ಮಾಡುತ್ತದೆ. ಕಿಡ್ನಿಯ ಕಾರ್ಯಗಳಲ್ಲಿ ಸ್ವಲ್ಪ ಲೋಪ ದೋಷಗಳಾದರೂ, ಸಹಾ ಮನುಷ್ಯನಲ್ಲಿ ಅನೇಕ ಆರೋಗ್ಯ ಸಮಸ್ಯೆ ಕಾಣಿಸಲಾರಂಭಿಸುತ್ತದೆ.


ಆದ್ದರಿಂದ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಕಿಡ್ನಿ ಆರೋಗ್ಯ, ನಮ್ಮ ಜೀವನ ಶೈಲಿ ಪದ್ಧತಿಗಳಿಂದ ಹಾಳಾಗುತ್ತಿದೆ.


ಕಿಡ್ನಿ ಸಮಸ್ಯೆ ಏಕೆ ಉಂಟಾಗುತ್ತದೆ ಎಂಬ ಪ್ರಶ್ನೆಗೆ ಸರಳವಾಗಿ ಉತ್ತರಿಸುವುದಾದರೆ…

ನಮ್ಮ ಜೀವನ ಶೈಲಿ ಪದ್ಧತಿ.


ನಮ್ಮ ದೇಹದಲ್ಲಿ ಮೆದುಳು, ಹೃದಯ ಈ ಅಂಗಗಳು ಹೇಗೆ ಮುಖ್ಯವೋ ಕಿಡ್ನಿಯು ಕೂಡ ಪ್ರಮುಖವಾದಂತಹ ದೇಹದ ಒಂದು ಅಂಗ. ಕಿಡ್ನಿಯನ್ನು ಆರೋಗ್ಯವಾಗಿ ಇಡುವುದು ನಮ್ಮ ಜವಾಬ್ದಾರಿ.

 

ಮನುಷ್ಯನ ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ. ಇವೆರಡು ದಿನವಿಡೀ ಕೆಲಸ ಮಾಡುತ್ತಿರುತ್ತವೆ. ಕಿಡ್ನಿ ನಮ್ಮ ದೇಹದ ಫಿಲ್ಟರ್ ಇದ್ದಂತೆ. ನಮ್ಮ ಶರೀರದ ಕೆಲಸಗಳಿಗೆ ಪೂರಕವಾದ ರಾಸಾಯನಿಕಗಳನ್ನ ಬಳಸಿಕೊಂಡು ಬೇಡವಾದ ವಸ್ತುಗಳನ್ನು ದೇಹದಿಂದ ಹೊರ ತಳ್ಳುವ ಕೆಲಸ ಕಿಡ್ನಿ ನಿರಂತರವಾಗಿ ಮಾಡ್ತಾ ಇರುತ್ತವೆ. ಹಾಗಾದ್ರೆ ಈ ಕಿಡ್ನಿಯ ತೂಕವೆಷ್ಟು ಎಂದು ನೋಡೋದಾದ್ರೆ… ಕೇವಲ 150 ಗ್ರಾಂ. ಇದರ ಗಾತ್ರ ಚಿಕ್ಕದಾದರೂ ಮಾಡುವ ಕೆಲಸ ಮಾತ್ರ ಊಹೆಗೂ ಮೀರಿದ್ದು. ಹೃದಯದ ಶ್ರೀ ಪ್ರಮುಖವಾದ ಇನ್ನೊಂದು ಅಂಗವೆಂದರೆ ಅದು ಕಿಡ್ನಿ. ಕಿಡ್ನಿಯ ಕೆಲಸದಲ್ಲಿ ಸ್ವಲ್ಪ ಏರುಪೇರುಗಳಾದರೂ ಸಹ ದೇಹದ ಎಲ್ಲಾ ಆಂತರಿಕ ವ್ಯವಸ್ಥೆಗಳು ಅಲ್ಲೋಲಕಲ್ಲೋಲವಾಗುತ್ತದೆ.

ಕಿಡ್ನಿ ಸಂಬಂಧಿ ರೋಗಗಳ ಲಕ್ಷಣಗಳನ್ನು ತಿಳಿದುಕೊಳ್ಳುವುದಾದರೆ, ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದಾಗ ದೇಹದಲ್ಲಿ ಕಲ್ಮಶಗಳು ಹೆಚ್ಚಾಗಿ ವಿಪರೀತ ಸುಸ್ತು, ಹಸಿವಾಗದಿರುವುದು, ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು, ಮೊಣಕಾಲುಗಳು ಊದುಕೊಳ್ಳುವುದು. ರಾತ್ರಿ ಹೊತ್ತು ಹೆಚ್ಚು ಮೂತ್ರ ಬರುವುದು. ಕಾಣಿಸಿಕೊಳ್ಳುವುದು. ನಿದ್ರಾ ಹೀನತೆ ಇನ್ನು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಕಿಡ್ನಿ, ಆರೋಗ್ಯವಾಗಿರಲು ಈ ಟಿಪ್ಸ್ ಗಳನ್ನ ಪಾಲಿಸಿದರೆ ಒಳಿತು ಎಂದು ಅನೇಕ ವೈದ್ಯರು ತಿಳಿಸಿದ್ದಾರೆ.

ನಮ್ಮ ಒತ್ತಡದ ವೃತ್ತಿ ಜೀವನದಲ್ಲಿ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಹೀಗಿರುವಾಗ ಕೆಲವೊಂದು ಕಿಡ್ನಿ ಆರೋಗ್ಯ ಕಾಪಾಡಲು ಸರಳ ಟಿಪ್ಸ್ ಗಳು ಇಲ್ಲಿವೆ…

* ನೀರನ್ನು ಹೆಚ್ಚು ಕುಡಿಯಬೇಕು. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಸೇವಿಸಿದ್ದಲ್ಲಿ ಕಿಡ್ನಿಯಲ್ಲಿನ ಲವಣಾಂಶ ಮತ್ತು ವಿಷಕಾರಕ ತ್ಯಾಜ್ಯಗಳು ಸೊಸಿ ಹೋಗುತ್ತದೆ. ಕಿಡ್ನಿಯಲ್ಲಿ ನೀರಿನ ಅಂಶ ಕಡಿಮೆಯಾದಂತೆ ಕಿಡ್ನಿಯಲ್ಲಿ ಕಲ್ಲುಗಳು ಮತ್ತು ರೋಗ ಬರುವ ಸಾಧ್ಯತೆಗಳಿರುತ್ತದೆ.

*ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. (ಧೂಮಪಾನ, ಮಧ್ಯಪಾನ)

*ಅತಿಯಾದ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬಾರದು.

* ನಮ್ಮ ಆಹಾರದ ಪದ್ಧತಿಯಲ್ಲಿ ಪೌಷ್ಟಿಕ ಆಹಾರದ ಸೇವನೆ.

*ನಿರಂತರವಾಗಿ ಕಾಲಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ.

*ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಂಡು ಡಯಾಬಿಟಿಸ್ ನಿಂದ ಮುಕ್ತವಾದಲ್ಲಿ ಕಿಡ್ನಿಯ ಸಮಸ್ಯೆಗಳು ಕಡಿಮೆಯಾಗುತ್ತದೆ.


*ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವಂಥ ಯೋಗವನ್ನು ಮಾಡಬೇಕು

ಈ ಟಿಪ್ಸ್ ಗಳು ನಮ್ಮ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಮಾರ್ಗ.


World Kidney Day  ಕಿಡ್ನಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮನುಷ್ಯನ ಸಾವಿಗೆ ಇದು ಕಾರಣವಾಗುತ್ತೆ. ಆದ್ದರಿಂದ ಜನರಿಗೆ ಕಿಡ್ನಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 9 ರಂದು “ವಿಶ್ವ ಕಿಡ್ನಿ ದಿನ” ಎಂದು ಆಚರಿಸಲಾಗುತ್ತದೆ.


ವಿಶ್ವ ಕಿಡ್ನಿ ದಿನ ಎಂಬುದು ಒಂದು ಜಾಗತಿಕ ಆರೋಗ್ಯ ಅಭಿಯಾನವಾಗಿದೆ. ಇದರಿಂದ ಜನರಿಗೆ ಕಿಡ್ನಿಯ ಮಹತ್ವವನ್ನು ತಿಳಿಸುವುದು ಇದರ ಧ್ಯೇಯವಾಗಿದೆ…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

International Women’s Day ಮಹಿಳೆ ಅಪಾರ ಶಕ್ತಿಯುಳ್ಳ ಚೇತನ-ಡಾ.ಶುಭಾ ಮರವಂತೆ

0

International Women’s Day ಪದಾರ್ಥಗಳನ್ನು ರುಚಿಕರ ಅಡಿಗೆಯಾಗಿ , ಮನೆಯನ್ನು ಗೃಹವಾಗಿ , ಒಂದು ಜೀವವನ್ನು ಶಕ್ತಿಯಾಗಿ ಮಾರ್ಪಡಿಸುವ ಅಪಾರ ಶಕ್ತಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗು ಪ್ರಬಲ ವಾಗ್ಮಿಯಾದ ಡಾ .ಶುಭಾ ಮರವಂತೆಯವರು ಹೇಳಿದರು.

ಮಾರ್ಚ್ 8 ರಂದು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ ) ಶಿವಮೊಗ್ಗ ಶಾಖೆಯ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಮಹಿಳೆ ವಿಷಯ ಮಂಡಿಸುತ್ತಾ , ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಶಿವಮೊಗ್ಗೆಯ ಬಹಳಷ್ಟು ಮಹಿಳಾ ವೈದ್ಯರ ಸಮಯ ಪಾಲನೆಯಿಂದ ವಿಸ್ಮಯ ಹುಟ್ಟಿಸುತ್ತಿದ್ದಾರೆ . ಮಹಿಳಾ ವೈದ್ಯರೆಂದರೆ ದಶಭುಜ ಸ್ವರೂಪ ದೇವಿ ಸಮಾನರಾಗಿ ಕಾಣುತ್ತೀರ ಎಂದು ಹೇಳುತ್ತಾ , ನಮ್ಮ ದೇಶದ ಮೊದಲ ಮಹಿಳಾ ವೈದ್ಯರಾದ ಡಾ. ಆನಂದಿ ಬಾಯಿ , ಡಾ . ಕದಂಬಿನಿ ಗಂಗೂಲಿಯವರ ಜೀವನ ಚರಿತ್ರೆಯನ್ನು ಮೆಲುಕು ಹಾಕಿದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಪ್ರಸೂತಿ ಹಾಗು ಸ್ತ್ರೀರೋಗ ತಜ್ಞೆ ಡಾ . ಉಷಾ ರಮೇಶ್ ಅವರು ಮಹಿಳಾ ವೈದ್ಯರ ಕೆಲಸ-ಮನೆ ನಿರ್ವಹಣೆ ಗೆ ಸುಲಭ ಸೂತ್ರಗಳ ಬಗ್ಗೆ ಮಾತನಾಡುತ್ತ ಮಹಿಳಾ ವೈದ್ಯರ ಸವಾಲುಗಳು , ಮಕ್ಕಳು ಹಾಗು ಕುಟುಂಬ ಮತ್ತು ವೈಯುಕ್ತಿಕ ಬದುಕಿನ ಒತ್ತಡವನ್ನು ಸರಿಯಾದ ಶಿಸ್ತಿನ ಬದುಕು , ಸಮಯದ ಯೋಜನೆಯಿಂದ ಯಶಸ್ವಿಯಾಗಿ ಎದುರಿಸಿ ಸುಖಕರ ಬಾಳ್ವೆ ಮಾಡಿ , ಇತರ ಹವ್ಯಾಸಗಳ ಕೃಷಿಗೂ ಅವಕಾಶ ಕಲ್ಪಿಸಿಕೊಳ್ಳಬಹುದೆಂದು ಹುರಿದುಂಬಿಸಿದರು .

ಐಎಂಎ ಸದಸ್ಯರಾದ ಡಾ . ಜಯಕುಮಾರ್ ಶೆಟ್ಟಿಯವರ ಪತ್ನಿ ಶ್ರೀಮತಿ ಶ್ರೀಕಲಾ ಶೆಟ್ಟಿಯವರು ತಮ್ಮ ಆಪ್ತರಿಗೆ ಯಕೃತ್ತು ಅಂಗಾಂಗ ದಾನ ಮಾಡಿ ಹೃದಯತೆ ಮೆರೆದಿದ್ದಕ್ಕೆ ಗೌರವಿಸಲಾಯಿತು .

ಐಎಂಎ ಅಧ್ಯಕ್ಷರಾದ ಡಾ. ಅರುಣ್ ಎಂ .ಎಸ್ ಮಾತನಾಡಿ ಕಟ್ಟು ಪಾಡುಗಳು , ಸಾಮಾಜಿಕ ನಿರೀಕ್ಷೆಗಳಿಂದ ನಮ್ಮ ಸಮಾಜ ಮಹಿಳೆಯರನ್ನು ಶೋಷಣೆ ದೌರ್ಜನ್ಯಗಳಿಗೆ ಗುರಿಪಡಿಸುತ್ತಲೇ ಇದೆ . ಮಹಿಳಾ ಶಿಕ್ಷಣ , ಬದಲಾದ ಹಕ್ಕುಗಳು , ಲಿಂಗ ಸಮತೋಲನ ಇವೆಲ್ಲವುಗಳ ಬಗ್ಗೆ ನಾವಿಂದು ಮಾತನಾಡುತ್ತಿರುವುದು ಸ್ವಾಗತಾರ್ಹ ಅನಿಸಿದರೂ , ನಿಜವಾದ ಬದಲಾವಣೆ ಅವಳನ್ನು ಇದ್ದ ಹಾಗೆ ಒಪ್ಪಿಕೊಂಡು , ಯಾವುದೇ ಸ್ವಾರ್ಥ -ಅಹಂಕಾರಕ್ಕೆ ಬಳಸದೆ , ಸಹಜೀವಿ ತರಹ ನೋಡುವುದರಿಂದ ಶುರುವಾಗಲಿ ಎಂಬ ಸಂದೇಶ ನೀಡಿದರು .

International Women’s Day ಐಎಂಎ ಮಹಿಳಾ ವೈದ್ಯರ ವಿಭಾಗದ ಅಧ್ಯಕ್ಷೆ ಡಾ . ವಿನಯಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಖಜಾಂಚಿ ಡಾ. ಶಶಿಧರ್ , ಹಿರಿಯ ವೈದ್ಯರಾದ ಡಾ . ನಂದಿನಿ , ಡಾ . ನಿರ್ಮಲ , ಡಾ . ಚಿತ್ರಾ ಶ್ರೀನಿವಾಸ್ , ಡಾ. ವಿಮಲಬಾಯಿ ಹಾಗೂ ಹಲವಾರು ಮಹಿಳಾ ವೈದ್ಯರು , ಐಎಂಎ ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Women’s Day ವೃದ್ಧಾಪ್ಯದಲ್ಲಿ ಬಹಳ ಪೋಷಕರು ಒಂಟಿಯಾಗಿರುವುದು ದುರಾದೃಷ್ಟಕರ- ರವೀಂದ್ರನಾಥ್ ಐತಾಳ್

0

Women’s Day ಶಿವಮೊಗ್ಗ: ಪ್ರಪಂಚದಲ್ಲಿ ಹೆಚ್ಚಿನ ಮನೆಯಲ್ಲಿ ತಂದೆ ತಾಯಿಯರು ವೃದ್ಧಾಪ್ಯದಲ್ಲಿ ಒಂಟಿಯಾಗಿರುವುದು ದುರದೃಷ್ಟಕರ ಎಂದು ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ ಐತಾಳ್ ಹೇಳಿದರು.

ಕೆನರಾ ಬ್ಯಾಂಕ್ ನಿವೃತ್ತರ ಅಸೋಸಿಯೇಷನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ನಗರದ ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಹಿರಿಯರನ್ನು ಗೌರವಿಸುವ, ಪ್ರೀತಿಸುವ ಮನೋಭಾವ ಇರಬೇಕು. ಉತ್ತಮ ಕೆಲಸಗಳನ್ನು ಜೀವನದಲ್ಲಿ ಮಾಡಬೇಕು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಪ್ರಯುಕ್ತ ಕೆನರಾ ಬ್ಯಾಂಕ್ ನಿವೃತ್ತರ ರಾಜ್ಯ ಅಸೋಸಿಯೇಷನ್ ಮುಖಂಡರು 30,000 ರೂ. ದೇಣಿಗೆ ನೀಡಿದರು.

ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಎನ್.ಚಂದ್ರಶೇಖರ್ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಹಣಕಾಸು ಒದಗಿಸುವ ಉದ್ದೇಶ ವಿವರಿಸಿದರು.

ರಾಜ್ಯ ಅಸೋಸಿಯೇಷನ್ ಕಾರ್ಯದರ್ಶಿ ಉಮಾ ವಿ.ಕುಮಾರ್ ಮಾತನಾಡಿ, ಇವತ್ತು ನಾವು ನೀಡುವ ದೇಣಿಗೆ ಅಲ್ಪವಾಗಿದ್ದರೂ ಸಂದರ್ಭೋಚಿತ ನ್ಯಾಯಸಮ್ಮತ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪಲಾನುಭವಿಗಳು ಇರುವುದು ಆಚರಣೆಗೆ ಶಕ್ತಿ ಬಂದಿದೆ ಎಂದು ಹೇಳಿದರು.

Women’s Day ಎಲ್ಲರ ಬದುಕಿಗೆ ಆಧಾರ ಸ್ತಂಭ ಮಹಿಳೆ. ಮಗುವಾಗಿ, ಮಗಳಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಮತ್ತು ಮಡದಿಯಾಗಿ ಶಕ್ತಿಯನ್ನು ಹೊಂದಿರುವ ದೇವತೆ ಮಹಿಳೆ. ನನ್ನ ಬಯಕೆ ಅನಾಥಾಶ್ರಮದಲ್ಲಿ ಸೇರುವ ಜನರ ಸಂಖ್ಯೆ ಕಮ್ಮಿಯಾಗಬೇಕು. ಅವರವರ ಮನೆಯಲ್ಲಿ ಹಿರಿಯರಲ್ಲಿ ಪ್ರೀತಿ ಗೌರವ ವಿಶ್ವಾಸ ಜಾಸ್ತಿಯಾಗಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘಟನೆಯ ಪ್ರಮುಖರಾದ ಸುಬ್ಬಲಕ್ಷ್ಮೀ ಪ್ರಮೀಳಾ ಹಾಗೂ ನವೀನ ಕುಮಾರವರು ಸಮಸ್ತ ನಾರಿಶಕ್ತಿಗೆ ಶುಭ ಹಾರೈಸಿದರು. ಆರೈಕೆ ಕೇಂದ್ರದ ಶಿವಪ್ಪ ಗೌಡರು ಎಲ್ಲರನ್ನು ಸ್ವಾಗತಿಸಿದರು.

ಆರೈಕೆ ಕೇಂದ್ರದ ಕಾರ್ಯದರ್ಶಿ ಹಿರೇಮಠ ಅವರು ಚಂದ್ರಶೇಖರ ಹಾಗೂ ನಿರ್ದೇಶಕರಾದ ಜಯಾ ಸುರೇಶ್, ಉಮಾ ವಿ.ಕುಮಾರ್ ಅವರನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಕೆನರಾ ಬ್ಯಾಂಕ್‌ನ ಅನೇಕ ನಿವೃತ್ತ ನೌಕರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Power Cut in Shivamogga ಮಾರ್ಚ್ 10 ರಂದು ಶಿವಮೊಗ್ಗದ ಎಂ ಆರ್ ಎಸ್ ಮತ್ತು ಹೊಳಲೂರು ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

Power Cut in Shivamogga 220 ಕೆವಿ ಎಂ.ಆರ್.ಎಸ್ ಕವಿಪ್ರನಿನಿ ಶಿವಮೊಗ್ಗ ಇವರು 110/11 ಕೆವಿ ವಿ.ವಿ.ಕೇಂದ್ರ, ಎಂಆರ್‍ಎಸ್ ಶಿವಮೊಗ್ಗ ಇಲ್ಲಿ ಮಾರ್ಚ್ 10 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಪ್ರಯುಕ್ತ 11 ಕೆವಿ ಎಫ್-5 ಫೀಡರ್‍ನ ಎಂಆರ್‍ಎಸ್ ವಾಟರ್ ಸಪ್ಲೈ, ಎಂಆರ್‍ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಜೌಟ್, ಪ್ರಿಯಾಂಕ ಲೇಔಟ್ ಹಾಗೂ 11 ಕೆವಿ ಎಫ್-3 ಫೀಡರ್‍ನ ಜ್ಯೋತಿನಗರ, ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ, ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Power Cut in Shivamogga ಹಾಗೆಯೇ , ಹೊಳಲೂರು ಗ್ರಾಮದಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಮಾರ್ಚ್ 10ರ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಮಾರ್ಚ್ 10 ರಂದು ಪ್ರಧಾನಮಂತ್ರಿ ಉದ್ಯೋಗ ಸೃಜನೆ ಅರಿವು ಕಾರ್ಯಕ್ರಮ

0

Shivamogga ಶಿವಮೊಗ್ಗ ಜಂಟಿ ನಿರ್ದೇಶಕರ ಕಚೇರಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಪ್ಪ ನಾಯಕ ಕಚೇರಿ ಸಂಕೀರ್ಣ, ನೆಹರು ರಸ್ತೆ, ಶಿವಮೊಗ್ಗ ಇಲ್ಲಿ ದಿ: 10-03-2023 ರಂದು ಬೆಳಿಗ್ಗೆ 10:30 ಕ್ಕೆ ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಸಕ್ತ ಅಭ್ಯರ್ಥಿಗಳು/ಉದ್ದಿಮೆದಾರರು/ನಿರುದ್ಯೋಗಿ ಯುವಕ ಯುವತಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆಯಬಹುದಾಗಿದೆ.

Shivamogga ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ದೂ.ಸಂಖ್ಯೆ-08182-222802 ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

k Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Aam Aadmi Party ಲಂಚಪ್ರಕರಣದ ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಜಾಮೀನು ಆಮ್ ಆದ್ಮಿ ಪಕ್ಷ ದಿಂದ ಖಂಡನೆ

0

Aam Aadmi Party ಬಿಜೆಪಿಯ ಕಳಂಕಿತ ಶಾಸಕ ಮಾಡಾಲ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಖಂಡಿಸಿ ಜಿಲ್ಲಾ ಆಮ್‌ಆದ್ಮಿ ಪಕ್ಷದ ಮುಖಂಡರುಗಳು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ನಲ್ಲಿ ಸಂಜೆ ಪ್ರತಿಭಟನೆ ನಡೆಸಿದರು.

ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಸ್.ಹೇಮಂತ್ ಕುಮಾರ್ ಮಾತನಾಡಿ ಬಿಜೆಪಿಯ ಶಾಸಕರ ಮನೆಯಲ್ಲಿ ಸುಮಾರು 8 ಕೋಟಿಯಷ್ಟು ಹಣ ವಶಪಡಿಸಿಕೊಂಡು ಅವರನ್ನು ಬಂಧಿಸಿ ನಂತರ ಕೆಲವೇ ದಿನಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿ ಹೊರತಂದಿರುವುದು ದುರಾದೃಷ್ಟಕರ. ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಡೆಯಾ ಗಿರುವ ಶಾಸಕ ವಿರೂಪಾಕ್ಷಪ್ಪ ಅವರನ್ನು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರವು ಇಡಿ ಹಾಗೂ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಎಎಪಿ ನಾಯಕರಾದ ಸಿಸೋಡಿಯಾ ಅವರ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲದಿದ್ದರೂ ಅವರನ್ನು ಬಂಧಿಸಿದೆ. ಆದರೆ ರಾಜ್ಯದಲ್ಲಿ ಶಾಸಕ ವಿರೂಪಾಕ್ಷಪ್ಪ ಅವರಿಗೆ ತನಿಖೆ ವೇಳೆಯಲ್ಲಿ ಕೋಟಿಗಟ್ಟಲೇ ಹಣ ದೊರೆತಿದ್ದರೂ ಬಂಧಿಸಿ ನಂತರ ಜಾಮೀನು ನೀಡಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಸೋಡಿಯಾ ಅವರಿಂದ ತೊಂದರೆಯಾಗಲಿದೆ ಎಂದು ಅರಿತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಈ ರೀತಿಯ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಆಟವಾಡುತ್ತಿದೆ. ಕೂಡಲೇ ಗುರುತರ ಆರೋಪ ಹೊಂದಿರದ ಎಎಪಿ ನಾಯಕರನ್ನು ಬಿಡುಗಡೆಗೊಳಿಸಬೇಕು. ಬಿಜೆಪಿಯ ಶಾಸಕ ವಿರೂಪಾಕ್ಷಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಕೆ.ಸುಂದರಗೌಡ ಮಾತನಾಡಿ ಬಹಿರಂಗವಾಗಿ ಭಾರೀ ಭ್ರಷ್ಟಾ ಚಾರವನ್ನು ಹೊತ್ತಿರುವ ಬಿಜೆಪಿಗರ ವಿರುದ್ಧ ಕೂಡಲೇ ರಾಜ್ಯಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದ್ದಲ್ಲಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ದೆಹಲಿಯ ಉತ್ತಮ ನಾಯಕರೆನ್ನಿಸಿಕೊಂಡಿರುವ ಸಿಸೋಡಿಯಾ ಅವರನ್ನು ಬಂಧಿಸಿ ಜಾಮೀನು ಸಹ ನೀಡಿ ರುವುದಿಲ್ಲ. ಆದರೆ ರಾಜ್ಯದಲ್ಲಿ ತದ್ವಿರುದ್ಧವಾಗಿ ಶಾಸಕರ ಮನೆಯಲ್ಲಿ ಕೋಟಿಗಟ್ಟಲೇ ಹಣ ಸಿಕ್ಕರೂ ಕೂಡಾ ಅವರಿಗೆ ಜಾಮೀನು ನೀಡಿರುವುದು ಸರಿಯಾದ ವಿಚಾರವಲ್ಲ. ಕೂಡಲೇ ಶಾಸಕ ವಿರೂಪಾಕ್ಷಪ್ಪ ಅವರನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

Aam Aadmi Party ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪಕ್ಷದ ಮುಖಂಡರುಗಳು ಶಾಸಕ ಮಾಡಾಲ್ ವಿರೂ ಪಾಕ್ಷಪ್ಪ ಅವರನ್ನು ಬಂಧಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಸೈಯದ್ ಜಮೀಲ್ ಅಹ್ಮದ್, ಮೋಹನ್, ಸಲ್ಮಾನ್, ಲಿಂಗಾರಾಧ್ಯ, ರಂಗನಾಥ್, ರಾಜೇಶ್ವರಿ, ಫಿಲೋಮೀನಾ, ಹರ್ಷದ್, ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagalur ಸೇವಾದಳವು ಮಕ್ಕಳಲ್ಲಿ ದೇಶಪ್ರೇಮ ಬೆಳೆಸುತ್ತಿದೆ- ಎಸ್.ಆರ್.ಮಂಜುನಾಥ್

0

Chikmagalur  ಮಕ್ಕಳಲ್ಲಿ ದೇಶವನ್ನು ಪ್ರೀತಿಸುವ, ದೇಶಪ್ರೇಮ ಬೆಳೆಸುವ ಶಿಕ್ಷಣವನ್ನು ಭಾರತ ಸೇವಾದಳ ನೀಡುತ್ತಿದೆ. ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಹೇಳಿದರು.

ಚಿಕ್ಕಮಗಳೂರು
ತಾಲ್ಲೂಕಿನ ಬೀಕನಹಳ್ಳಿ ಸಮೀಪದ ಸಂತ ಝೇವಿರ‍್ಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾ.ಸು.ಹರ್ಡಿಕರ್ ಅವರ ಭಾರತ ಸೇವಾದಳ ನೂತನ ಶಾಖೆಯನ್ನು ಸ್ಥಾಪಿಸಿ ಅವರು ಮಾತನಾಡುತ್ತಿದ್ದರು.

ಶಾಲೆಗಳಲ್ಲಿ ಭಾರತ ಸೇವಾದಳ ಘಟಕಗಳು ಸ್ಥಾಪನೆಯಾಗುವುದರಿಂದ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ಶಾಲೆಗಳಲ್ಲಿಯೂ ಭಾರತ ಸೇವಾದಳ ಘಟಕಗಳು ಪ್ರಾರಂಭವಾಗಿ ಉತ್ತಮ ನಡಾವಳಿ ಶಿಸ್ತು ಬೆಳೆಸುವಂತಾಗುತ್ತದೆ ಎಂದು ತಿಳಿಸಿದರು.

ಪ್ರತಿಯೊಬ್ಬರು ರಾಷ್ಟಧ್ವಜ, ಚಿಹ್ನೆ, ರಾಷ್ಟçಲಾಂಛನಗಳನ್ನು ಗೌರವಿಸಬೇಕು. ಸೇವಾಮನೋಭಾವನೆ ಎನ್ನುವುದು ಸೇವಾದಳದ ಮುಖ್ಯ ಧೇಯ್ಯೋದ್ಧೇಶವಾಗಿದೆ. ಶಿಕ್ಷಕರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವತ್ತ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯನ್ನು ಬೀಕನಹಳ್ಳಿ ಸಮೀಪದ ಬೆಟ್ಟ ಗುಡ್ಡಗಳು ಹಾಗೂ ನದಿಗಳ ಸಮೀಪದಲ್ಲಿ ನಿರ್ಮಿಸಲಾಗಿದೆ. ಉತ್ತಮ ಗಾಳಿ ಹಾಗೂ ಪರಿಸರವನ್ನು ಹೊಂದಿರುವ ಶಾಲೆಯು ಮುಂದಿನ ದಿನ ಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

Chikmagalur  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಝೇವಿಯರ್ ಶಾಲೆಯ ಸ್ಥಾಪಕ ರೋಷನ್ ಸಿಕ್ವೇರಾ ಮಕ್ಕಳ ಅನುಕೂಲಕ್ಕಾಗಿ ಭಾರತ ಸೇವಾದಳ ಸಂಸ್ಥೆ ವತಿಯಿಂದ ಇಂದು ಶಾಲೆಯಲ್ಲಿ ಶಾಖೆಯನ್ನು ಸ್ಥಾಪಿಸಿ ರುವುದು ಅತ್ಯಂತ ಖುಷಿಯ ಸಂಗತಿ. ವಿದ್ಯಾರ್ಥಿಗಳು ಸೇವಾದಳದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಶೀಲರಾ ಗಬೇಕು ಎಂದು ತಿಳಿಸಿದರು.
ಸೇವಾದಳ ಕಾರ್ಯದರ್ಶಿ ಹಂಪಯ್ಯ ಮಾತನಾಡಿ ವಿದ್ಯಾರ್ಥಿಗಳಿಗೆ ಸೇವಾದಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಶಾಖೆಯನ್ನು ಪ್ರಾರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಸೇವಾದಳದ ದೈಹಿಕ ಶಿಕ್ಷಣಾಧಿಕಾರಿ ಜ್ಞಾನಮೂರ್ತಿ, ತಾಲ್ಲೂಕು ಶಿಕ್ಷಣ ಪರಿವೀಕ್ಷಕ ಛಲವಾದಿ, ಜಿಲ್ಲಾ ಸಂಘಟಕರಾದ ಚಂದ್ರಕಾಂತ್, ಕುಮಾರ್, ರಾಜಶೇಖರಪ್ಪ, ಕುಮಾರಸ್ವಾಮಿ, ಶಿವಪ್ಪ, ಪಾಂಡು, ಶ್ರೀನಿವಾಸ್, ಪ್ರಕಾಶ್, ರಶ್ಮಿ, ಮೀನಾಕ್ಷಿ ಶಾಲೆಯ ಶಿಕ್ಷಕರಾದ ರೇಷ್ಮಾ, ಸೌಮ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Women’s Day ಹೆಣ್ಣುಮಕ್ಕಳಿಗೆ ವಿಪುಲ ಅವಕಾಶಗಳನ್ನ ಇಂದಿನ ನಮ್ಮ ಪ್ರಜಾಪ್ರಭುತ್ವ ಸಾಧ್ಯಮಾಡಿದೆ- ನ್ಯಾ.ರಾಜಣ್ಣ ಸಂಕಣ್ಣನವರ್

0

Women’s Day  ಇಂದಿನ ದಿನದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ನಮ್ಮ ಪ್ರಜಾಪ್ರಭುತ್ವವೇ ಕಾರಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಸಹಯೋಗದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇಷವಾದ ಹಕ್ಕುಗಳನ್ನು ಕಲ್ಪಿಸಲಾಗಿದೆ. ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯುತ್ತಿವೆ.ದಶಕಗಳ ಹಿಂದೆ ಮಹಿಳೆಯರನ್ನ ನಮ್ಮ ಸಮಾಜ ನಡೆಸಿಕೊಳ್ಳುತ್ತಿದ್ದ ರೀತಿಗೂ ಇಂದಿನ ಸಮಾಜ ಮಹಿಳೆಯರನ್ನ ಕಾಣುವ ರೀತಿಗೂ ಸಾಕಷ್ಟು ಬದಲಾವಣೆಗಳಾಗಿವೆ ಎಂದು ತಿಳಿಸಿದರು.

ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಆಯ್ಕೆಯ ಸಮಸ್ಯೆಗಳು ಸೇರಿದಂತೆ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಆತ್ಮಾವಲೋಕನ ಮಾಡಲು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉತ್ತಮ ವೇದಿಕೆ ಎಂದರು.

ನಾವು ಮಹಿಳಾ ದಿನಾಚರಣೆಯ ಒಂದು ದಿನ ಮಾತ್ರ ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವುದಲ್ಲ. ಪ್ರತಿದಿನವೂ ಮಹಿಳೆಯರನ್ನ ಗೌರವದಿಂದ ಕಾಣುವುದು ಮುಖ್ಯವೆಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಹಾಗೂ ಸುರಭಿ ಮಹಿಳಾ ಮಂಡಳಿ ನಿರ್ದೇಶಕಿ ಜಿ.ಎಂ. ರೇಖಾ ಅವರು ತಿಳಿಸಿದರು.

ದೌರ್ಜನ್ಯಕ್ಕೆ ಒಳಗಾದ ಒಬ್ಬ ಮಹಿಳೆಯನ್ನಾದರೂ ಒಂದು ವರ್ಷದಲ್ಲಿ ಸಮಾಜದ ಮುಖ್ಯ ವಾಹಿನಿಗೆ ತರುತ್ತೇವೆ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕೆಂದರು.

ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕಾಗಿ ಕೌಟುಂಬಿಕ ಸಂಬಂಧಗಳು ಹಾಳಾಗುತ್ತಿವೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕು , ಎಲ್ಲ ಇದು ಕೊರಗುವ ಸ್ತ್ರೀಯರೂ ಇದ್ದಾರೆ. ಹಾಗೆಯೇ ಸಮಾಜದಲ್ಲಿ ತಮಗಾಗಿ ಒಂದು ಅವಕಾಶವನ್ನ ಕಲ್ಪಿಸಿಕೊಳ್ಳಬೇಕು ಎಂದುಕೊಳ್ಳುವ ಮಹಿಳೆಯರೂ ಇದ್ದಾರೆ ಎಂದರು.

ಮಹಿಳೆಯರಿಗೆ ಭಾವುಕತೆ ಮತ್ತು ಸೂಕ್ಷ್ಮತೆ ಹೆಚ್ಚು ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಅದನ್ನ ಪರಿಸ್ಥಿತಿಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರಿಗೆ ಭಾವನೆಗಳೇ ಸಾಮರ್ಥ್ಯವಾಗಬೇಕೆಂದು ಕಟೀಲ್ ಅಶೋಕ್ ಪೈ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ತಿಳಿಸಿದರು.

ದೌರ್ಜನಕ್ಕೆ ಒಳಗಾದ ಮಹಿಳೆಯರನ್ನ ರಕ್ಷಿಸಿ, ಅವರೊಂದಿಗೆ ಸಂವಹನ ನಡೆಸುವುದು ನಿಜಕ್ಕೂ ಕಷ್ಟಕರವಾದ ವಿಷಯ. ಹೆಚ್ಚಿನ ಸಮಯದಲ್ಲಿ ಭಯಪಟ್ಟು ದೌರ್ಜನ್ಯಕ್ಕೋಳಗಾದ ಮಹಿಳೆಯರು ಸುಳ್ಳುಗಳನ್ನೇ ಹೇಳಬಹುದು.. ತಮ್ಮ ಮನಸ್ಸಿನ ಉದ್ವೇಗವನ್ನು ಸಿಟ್ಟಿನ ಮೂಲಕ, ಮೌನವಾಗಿ , ತಿಳಿಸಲು ಇಚ್ಚಿಸುತ್ತಾರೆ. ಅಂತಹ ಸಮಯದಲ್ಲಿ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರನ್ನ ಸಂತೈಸುವ ಕೆಲಸ ನಮ್ಮಿಂದಾಗಬೇಕು. ದೌರ್ಜನ್ಯಕ್ಕೆ ಒಳಗಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

Women’s Day  ಸಂಪನ್ಮೂಲ ವ್ಯಕ್ತಿಗಳೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿ ಪ್ರೋಕ್ಸೋ, ಅಪ್ರಾಪ್ತೆಯರ ಮೇಲಿನ ದೌರ್ಜನ್ಯ,ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತಂತೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾನಸ ಟ್ರಸ್ಟ್ ನ ಅಧ್ಯಕ್ಷೆ ಡಾ. ರಜನಿ ಪೈ, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಭಟ್, ಸ್ನಾತಕೋತ್ತರ ಮನುಶಾಸ್ತ್ರ ವಿಭಾಗದ ಸಮನ್ವಯಕಾರರಾದ ಸಿಸ್ಟರ್ ಮಾರಿಯ ಎವ್ಲಿನ್, ವಿಜಯವಾಣಿ ಶಿವಮೊಗ್ಗ ಆವೃತ್ತಿ ಮುಖ್ಯಸ್ಥ ಎನ್.ಡಿ ಶಾಂತಕುಮಾರ್, ಕಾಲೇಜಿನ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kuvempu University ಸರಿ ತಪ್ಪುಗಳ ಆಯ್ಕೆಯ ಬಗ್ಗೆ ಬೇಕಿರುವ ವಿವೇಕವನ್ನ ಸಾಹಿತ್ಯದ ಮೂಲಕ ಲೇಖಕ ಲಂಕೇಶ್ ಮಾಡಿದರು-ಡಾ.ನಟರಾಜ್ ಹುಳಿಯಾರ್

0

Kuvempu University  ಹಲವು ತಲ್ಲಣಗಳ ಜೊತೆ ಬದುಕುತ್ತಿರುವ ಯುವ ಸಮುದಾಯ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವ ಮೊದಲು ತಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ಖ್ಯಾತ ಲೇಖಕ ಹಾಗೂ ಬೆಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಹಾಗೂ ಹೊಂಗಿರಣ, ಶಿವಮೊಗ್ಗ ಸಹಯೋಗದಲ್ಲಿ ‘ಹೊಸ ತಲೆಮಾರಿಗೆ ಲಂಕೇಶ್’ ಸಾಹಿತ್ಯಾನುಸಂಧಾನ’ ಕುರಿತ ಒಂದು ದಿನದ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

ಎಲ್ಲವನ್ನು ವಿರೋಧಿಸಲು ಅಥವಾ ಎಲ್ಲವನ್ನು ಒಪ್ಪುವ ದಾರಿಯನ್ನು ಹಿಡಿಯದೇ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳುವ ವಿವೇಕವನ್ನು ಬೆಳೆಸಿಕೊಳ್ಳಬೇಕು. ಆಗ ವ್ಯಕ್ತಿಯಿಂದ ಆರಂಭವಾಗುವ ಪ್ರಗತಿ ಸಮಾಜಮುಖಿಯಾಗಿ ಚಲಿಸಲು ಸಾಧ್ಯ. ಲಂಕೇಶರ ತಮ್ಮ‌ ಸಾಹಿತ್ಯದ ಮೂಲಕ ಕನ್ನಡ ಜಾಣಜಾಣೆಯರಿಗೆ ಕಲಿಸಲು ಪ್ರಯತ್ನಿಸಿದ್ದು ಇದೇ ವಿವೇಕವನ್ನು‌ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸಮಕಾಲೀನ ಸಂದರ್ಭದ ಹಲವು ಸಮಸ್ಯೆಗಳಿಗೆ ಲಂಕೇಶ್ ಸಾಹಿತ್ಯವು ಪರಿಹಾರ ಸೂಚಿಸುತ್ತದೆ ಎಂದರಲ್ಲದೆ ನಾವೆಲ್ಲ ಇಂದು ಲಂಕೇಶ್ ಸಾಹಿತ್ಯಾಧ್ಯಯನದತ್ತ ಮುಖಮಾಡಬೇಕಿದೆ ಎಂದರು.

Kuvempu University  ಕನ್ನಡ ಭಾರತಿಯ ಪ್ರಾಧ್ಯಾಪಕ ಪ್ರೊ. ಜಿ ಪ್ರಶಾಂತ ನಾಯಕ್ ಮಾತನಾಡಿ, ಯುವಜನತೆ ಅರ್ಥಹೀನ ಇಸಮ್ ಗಳಿಂದ ಹೊರಬಂದು ಜಗತ್ತನ್ನು ಮುಕ್ತವಾಗಿ ನೋಡಲು ಲಂಕೇಶರ ಸಾಹಿತ್ಯ ನಮಗೆ ರಹದಾರಿ ಎಂದರು. ಶಿಬಿರದ ಸಂಚಾಲಕ ಡಾ. ಸಾಸ್ವೆಹಳ್ಳಿ ಸತೀಶ್, ಅಂಕಣಕಾರ ಚಂದ್ರೇಗೌಡ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ವಿಭಾಗಗಳ ಅಧ್ಯಾಪಕರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಶಿವಮೊಗ್ಗ ಮುಸ್ಲೀಂ ಕಾಲೋನಿಗಳಲ್ಲಿ ಶಾಸಕ ಈಶ್ವರಪ್ಪನವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

0

Shivamogga ಶಾಸಕ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ನಗರದ ವಿವಿಧ ಮುಸ್ಲಿಂ ಕಾಲೋನಿಗಳಿಗೆ ಭೇಟಿ ನೀಡಿದ್ದರು. ಶಿವಮೊಗ್ಗ ನಗರಕ್ಕೆ ಬಂದಿರುವ 2 ಕೋಟಿ ರೂಪಾಯಿ ಅನುದಾನದಲ್ಲಿ ಮುಸ್ಲಿಂ ಕಾಲೋನಿಗಳಲ್ಲಿನ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು.


ಮದಾರಿ ಪಾಳ್ಯ ಆರ್ ಎಂ ಎಲ್ ನಗರ್ ಖಾಜಿನಗರ್ ರಾಗಿಗುಡ್ಡ ವಾದಿಹುದಾ ಕಾಲೋನಿಗಳಿಗೆ ಅನುದಾನ ನೀಡಲಾಗಿದೆ.


Shivamogga ಈ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರಾದ ಈಶ್ವರಪ್ಪ ಹಾಗೂ ಸೂಡ ಅಧ್ಯಕ್ಷರಾದ ನಾಗರಾಜ್ ಮಹಾಪೌರರಾದ ಶಿವಕುಮಾರ್ ಉಪಮಹಾಪೌರರು ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರದ ಜ್ಞಾನೇಶ್ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೊಹಮ್ಮದ್ ಶಫಿವುಲ್ಲಾ ಉಪಾಧ್ಯಕ್ಷರಾದ ಸೈಯದ್ ಜಮೀಲ್ ಅಹ್ಮದ್ ಜಮೀರ್ ಅಹ್ಮದ್ ಅಲ್ಲಾ ಬಕಶ್ ಸದಸ್ಯರಾಗಿ ಫಕ್ರುದ್ದೀನ್ ಸಿದ್ದಿಕಿ ದಾದಾಪೀರ್ ಶಿವಮೊಗ್ಗ ನಗರ ಅಲ್ಪಸಂಖ್ಯಾತರ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಯಾಸ್ಮಿನ್ ತಾಜ್ ಹಾಗೂ ಉಪಾಧ್ಯಕ್ಷರಾದ ಡಿ ಎಸ್ ಶಫಿವುಲ್ಲಾ ಇನ್ನೂ ಅನೇಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿ ತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.