Thursday, April 9, 2026
Thursday, April 9, 2026
Home Blog Page 1288

Shivamogga ಲಿಂಗಬೇಧವಿಲ್ಲದೇ ವ್ಯಕ್ತಿತ್ವದಿಂದ ವ್ಯಕ್ತಿಯನ್ನ ಗುರುತಿಸಿ-ನ್ಯಾ.ಮಲ್ಲಿಕಾರ್ಜುನ ಗೌಡ

0

Shivamogga ಹೆಣ್ಣು ಮತ್ತು ಗಂಡು ಸಮಾನರಾಗಿದ್ದು, ವ್ಯಕ್ತಿತ್ವದಿಂದ ಅಥವಾ ಆತ್ಮದಿಂದ ವ್ಯಕ್ತಿಯನ್ನು ಗುರುತಿಸಬೇಕು. ಲಿಂಗದಿಂದಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನೂ ಸೇವೆಗಳ ಪಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಯತ್, ಜಿಲ್ಲಾ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಿಎಆರ್ ಸಭಾಂಗಣದಲ್ಲಿ ಇಂದು ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಅನಾದಿ ಕಾಲದಿಂದ ತನ್ನ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದ್ದಾಳೆ. 12 ನೇ ಶತಮಾನದ ಅನುಭವ ಮಂಟಪದಲ್ಲಿ ಹೆಣ್ಣಿಗೆ ಸಮಾನತೆ ಇತ್ತು. ಇಂತಹ ಸಮಾನತೆಗಾಗಿ ಮಹಿಳೆಯರು ಇಂದಿಗೂ ಹೋರಾಡುತ್ತಿದ್ದಾರೆ. ಮನುಕುಲ ತನ್ನಂತೆ ಪರರು ಎಂದು ಬಗೆಯಬೇಕು. ಆಗ ಮಾತ್ರ ಇತರರ ಸಮಸ್ಯೆ ಅರಿಯಲು ಸಾಧ್ಯ ಎಂದರು.

ಸರ್ಕಾರ ಮಹಿಳೆಯರ ಸಂರಕ್ಷಣೆಗಾಗಿ, ಏಳ್ಗೆಗಾಗಿ ಅನೇಕ ಕಾಯ್ದೆ, ಕಾನೂನುಗಳನ್ನು ಜಾರಿಗೊಳಿಸಿದೆ. ಪ್ರಸ್ತುತ ಮಹಿಳೆ ರಕ್ಷಣಾ ವಲಯದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಎಲ್ಲ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ದುಡಿಯುತ್ತಿದ್ದಾರೆ. ಹೆಣ್ಣುಮಕ್ಕಳು ತಮ್ಮ ಹಕ್ಕುಗಳ ರಕ್ಷಣೆಯೊಂದಿಗೆ ಕರ್ತವ್ಯವನ್ನು ಕೂಡ ಸಮರ್ಪಕವಾಗಿ ಮಾಡಿ ಒಳ್ಳೆಯ ಹೆಸರನ್ನು ತರುವ ವ್ಯಕ್ತಿಗಳಾಗಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಎಲ್ಲಿಯವರೆಗೆ ಸಮುದಾಯದಲ್ಲಿ ಹೆಣ್ಣು ಪ್ರಬಲಳು ಎಂಬ ಮನೋಭಾವ ಬರುವುದಿಲ್ಲವೋ ಅಲ್ಲಿಯವರೆಗೆ ಈ ಅಸಮಾನತೆ ಹೋಗುವುದಿಲ್ಲ. ಆದ್ದರಿಂದ ಹೆಣ್ಣು ಕೀಳು, ಗಂಡು ಮೇಲು ಎಂಬುದನ್ನು ಬಿಟ್ಟು, ಹೆಣ್ಣು ಸದೃಢಳು ಎಂಬುದನ್ನು ಹೆಣ್ಣುಮಕ್ಕಳೇ ಪ್ರತಿಪಾದಿಸಬೇಕೆಂದರು.

ಜೈವಿಕವಾಗಿ ಯಾವುದೇ ಹೆಣ್ಣು ಪ್ರಬೇಧಗಳು ಪ್ರಬಲವಾಗಿರುತ್ತವೆ. ಅದೇ ರೀತಿ ನಾಗರೀಕತೆಗೆ ಮೊದಲು ಮಹಿಳಾ ವರ್ಗ ಪ್ರಬಲವಾಗಿತ್ತು. ನಾಗರೀಕತೆ ಬೆಳೆಯುತ್ತಾ ಬಂದಂತೆ ಸಮಾಜದಲ್ಲಿ ಗಂಡು-ಹೆಣ್ಣು ತಾರತಮ್ಯ, ಹೆಣ್ಣಿನ ವಿರುದ್ದ ಶೋಷಣೆ ಶುರುವಾಯಿತು. ಆನಂತರದಲ್ಲಿ ಈ ತಾರತಮ್ಯ, ಅಸಮಾನತೆ ಹೋಗಲಾಡಿಸಲು ಅನೇಕ ಕಾಯ್ದೆ, ಕಾನೂನುಗಳು ಬಂದವು.

ಸಮ ಸಮಾಜ ನಿರ್ಮಾಣವಾಗಬೇಕಾದರೆ ಗಂಡು ಪ್ರಬಲ, ಹೆಣ್ಣು ಕೀಳೆಂಬ ತಪ್ಪು ಕಲ್ಪನೆ ದೂರವಾಗಬೇಕು. ಅದಕ್ಕೆ ಮೊದಲು ಹೆಣ್ಣುಮಕ್ಕಳು ತಾವು ಸಬಲರೆಂದು ಒಪ್ಪಿಕೊಂಡು ಮುಂದೆ ಬರಬೇಕೆಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಹೆಣ್ಣುಮಕ್ಕಳು ದುರ್ಬಲರಲ್ಲ. ಅವರು ಏಕಕಾಲದಲ್ಲಿ ಬಹುಕಾರ್ಯಗಳನ್ನು ಮಾಡಬಲ್ಲ ನಿಪುಣರು. ಕುಟುಂಬ ನಿರ್ವಹಣೆ, ಅಡುಗೆ, ಮಕ್ಕಳು-ಮನೆಯ ಪಾಲನೆ, ಪೋಷಣೆಯೊಂದಿಗೆ ಹೊರಗಡೆ ಸಹ ವೃತ್ತಿಯನ್ನು ನಿರ್ವಹಿಸುವಲ್ಲಿ ಸಮರ್ಥರು. ಆದರೆ ವಿಪರ್ಯಾಸವೆಂದರೆ ಇಷ್ಟೊಂದು ಸಮರ್ಥಳಾದ ಹೆಣ್ಣನ್ನು ಶೋಷಣೆಗೆ ಒಳಪಡಿಸುತ್ತಾ ಬರಲಾಗಿದೆ.

Shivamogga  ಸಮಾಜದಲ್ಲಿ ಗಂಡು-ಹೆಣ್ಣೆಂಬ ತಾರತಮ್ಯ ಮತ್ತು ಅಸಮಾನತೆ ಹೋಗಬೇಕೆಂದರೆ ಮೊದಲು ಕುಟುಂಬದಲ್ಲಿ ಮಕ್ಕಳನ್ನು ಸಮಾನತೆಯಿಂದ ಬೆಳೆಸಬೇಕು. ಗಂಡು ಮತ್ತು ಹೆಣ್ಣು ಸಮಾನರು ಎಂಬಂತಹ ಸಂಸ್ಕೃತಿ ನೀಡಿ ಬೆಳೆಸಿದಾಗ ಮಾತ್ರ ಸಮಾನತೆ ಸಾಧ್ಯವಾಗುತ್ತದೆ. ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಎಲ್ಲೋ ಒಂದು ಕಡೆ ಕುಟುಂಬ ಮತ್ತು ಸಮಾಜವೂ ಕಾರಣವಾಗುತ್ತದೆ. ಆದ್ದರಿಂದ ಮನೆಯಿಂದಲೇ ಸಮಾನತೆಯ ಅಭ್ಯಾಸವಾದಲ್ಲಿ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಸ್ವಾಗತಿಸಿದರು. ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಸಿಡಿಪಿಓ ಚಂದ್ರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲೆ ಕವಿತಾ ಹೆಚ್ ಎಲ್ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ.ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಹಿಳಾ ಕಾನೂನುಗಳ ಕುರಿತು ಮಾತನಾಡಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Araga Jnanendra ಗೃಹ ಸಚಿವರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣ್ ಪ್ರಸಾದ್ ಮನವಿ ಪತ್ರ

0

Araga Jnanendra ಗೃಹ ಸಚಿವರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣ್ ಪ್ರಸಾದ್ ಅವರು ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ
ಮಲೆನಾಡಿನ ಒಂಟಿಮನೆಗಳಿಗೆ ಭದ್ರತೆ ಒದಗಿಸುವ ಕಾಳಜಿಯಿದೆ.

ಮಾನ್ಯ ಗೃಹ ಮಂತ್ರಿಗಳಾದ ಶ್ರೀ ಆರಗ ಜ್ಞಾನೇಂದ್ರ ಅವರಿಗೆ.

ಮಾನ್ಯರೆ,

ವಿಷಯ: ಮಲೆನಾಡಿನ ಒ೦ಟಿ ಮನೆಗಳ ಸುರಕ್ಷತೆಗಾಗಿ.

ಮಲೆನಾಡಿನ ಒಂಟಿ ಮನೆಗಳು ಕಳ್ಳಕಾಕರಿಗೆ ಸುಲಭ ಗುರಿಗಳಾಗಿ ಅನೇಕ ದರೋಡೆ ಕೊಲೆಗಳು ಆಗುತ್ತಿರುವುದು ನಿಮ್ಮ ಗಮನದಲ್ಲಿದೆ.

ಹಳ್ಳಿಗಳ ಒಂಟಿ ಮನೆಗಳಲ್ಲಿ ವಯಸ್ಸಾದ ತಂದೆ ತಾಯಿಗಳು ವಾಸ ಮಾಡುತ್ತಿದ್ದಾರೆ ಅವರ ಮಕ್ಕಳು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದು ಒಂದು ಕಾರಣ.

ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬಗಳು ಈಗಿಲ್ಲ ಮತ್ತು ನಾಯಿಗಳೂ ಸಾಕುವುದಿಲ್ಲ ಈ ಎಲ್ಲಾ ಕಾರಣದಿಂದ ಮಲೆನಾಡಿನ ಒಂಟಿ ಮನೆಗಳಲ್ಲಿ ಸುರಕ್ಷಿತವಾಗಿ ಜೀವನ ಮಾಡುವುದು ಕಷ್ಟವಾಗಿದೆ.

ಸರ್ಕಾರಕ್ಕೆ ಆರ್ಥಿಕ ಹೊರೆ ಇಲ್ಲದ ಈ ಕೆಳಕಂಡ ಅಂಶಗಳನ್ನು ತಾವು ಪರಿಶೀಲಿಸಿ ಜಾರಿ ತಂದರೆ ಮಲೆನಾಡಿನ ವಾಸಿಗಳಿಗೆ ದೊಡ್ಡ ಉಪಕಾರವಾಗಲಿದೆ.

1. ಮಲೆನಾಡಿನ ಒಂಟಿ ಮನೆಗಳಿಗೆ ಕಡ್ಡಾಯ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ಸಹಯೋಗದಿಂದ ಪೋಲಿಸ್ ಇಲಾಖೆ ಜನ ಜಾಗೃತಿ ಮಾಡಿ ಸಿಸಿ ಕ್ಯಾಮೆರಾ ಆಯಾ ಮನೆಯವರು ಅವರ ಸ್ವಂತ ಹಣದಿಂದ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು.

2. ಹಳ್ಳಿಗಳ ಪ್ರಮುಖ ಜಂಕ್ಷನ್ ಗಳಲ್ಲಿ ಸ್ಥಳೀಯ ದಾನಿಗಳ ಗ್ರಾಮ ಪಂಚಾಯತ್ ಗಳ ಮತ್ತು ಸ್ಥಳಿಯ ಸಂಘ ಸಂಸ್ಥೆಗಳಿಂದ ಸಿಸಿ ಕ್ಯಾಮೆರಾ ಅಳವಡಿಸಲು ಪೋಲಿಸ್ ಇಲಾಖೆ ಪ್ರೇರೇಪಿಸಬೇಕು (ಸಾಗರದಲ್ಲಿ ಎ.ಎಸ್.ಪಿ ಆಗಿದ್ದ ನಿಶಾ ಜೇಮ್ಸ್ ಇದನ್ನ ಯಶಸ್ವಿಗೊಳಿಸಿದ್ದರು)

3. ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಹೈ ಮಾಸ್ಕ್ ದೀಪ ಅಳವಡಿಸುತ್ತಾರೆ ಅದೇ ಕಂಬಕ್ಕೆ 360° ಸಿಸಿ ಕ್ಯಾಮೆರಾ ಅಳವಡಿಕೆಯ ಅನಿವಾರ್ಯತೆ ಅವರುಗಳಿಗೆ ಗೃಹ ಇಲಾಖೆಯಿಂದ ಮನವರಿಕೆ ಮಾಡಿ ಅದರ ಅಳವಡಿಕೆ ವೆಚ್ಚ ಅವರಿಂದಲೇ ಹೈ ಮಾಸ್ಕ್ ದೀಪದ ಜೊತೆ ಸೇರಿಸುವಂತೆ ಮಾಡಬೇಕು.

4. ಒಂಟಿ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಒಳ್ಳೆಯ ತಳಿಯ ನಾಯಿಗಳನ್ನು ಸಾಕಲು ಪೋಲಿಸ್ ಇಲಾಖಾ ಅಧಿಕಾರಿಗಳು ಜನಸ್ಪಂದನಾ ಸಭೆಗಳ ಮೂಲಕ ಪ್ರೇರೇಪಿಸಬೇಕು.

5. ಮಲೆನಾಡಿನಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಪಟ್ಟಣಗಳಲ್ಲಿ ಉದ್ಯೋಗ ಮಾಡುವ ಮಕ್ಕಳಿಗೆ ಪೋಲಿಸ್ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸಿ ಅವರ ಸೆಲ್ ಫೋನ್ ಗಳಲ್ಲಿ ಮಾನಿಟರಿಂಗ್ ಮಾಡುವ ಬಗ್ಗೆ ಏನಾದರೂ ಅಪಾಯವಾದರೆ ತಕ್ಷಣ ಯಾರನ್ನ ಸಂಪರ್ಕಿಸಬೇಕೆಂಬ ಮಾಹಿತಿ ಸಾಮಾಜಿಕ ಜಾಲ ತಾಣದ ಮೂಲಕ ಪೋಲಿಸ್ ಪ್ರಕಟನೆಗಳು ನಿರಂತರವಾಗಿ ನೀಡುತ್ತಿರಲಿ.

Araga Jnanendra 6. ಮಲೆನಾಡಿನ ಹಳ್ಳಿಗಳಲ್ಲಿ ಆಸಕ್ತ ಯುವ ಜನಾಂಗದವರಿಗೆ ತರಬೇತಿ ನೀಡಿ ಗ್ರಾಮ ರಕ್ಷಕ ಪಡೆ ರಚಿಸಿ ಸ್ಥಳಿಯ ಪೋಲಿಸರಿಗೆ ಸಹಕರಿಸಲು, ಗುಪ್ತ ಮಾಹಿತಿ ಹಂಚಿಕೊಳ್ಳುವ ಮೂಲಕ ಅನೇಕ ಅನುಕೂಲ ಪೋಲಿಸ್ ಇಲಾಖೆ ಪಡೆಯಬಹುದು ಸಾಂಗ್ಲಿಯಾನ ಸಾಗರ ತಾಲ್ಲೂಕಿನಲ್ಲಿ ಅವರ ಅವದಿಯಲ್ಲಿ ಇದನ್ನು ಮಾಡಿದ್ದರು.

7. ಪೋಲಿಸ್ ಇಲಾಖೆ ಬಂದೂಕು ತರಬೇತಿ ನೀಡಿ ಒಂಟಿ ಮನೆಗಳಿಗೆ ಸುಲಭವಾಗಿ ಗನ್ ಹೊಂದಲು ಗನ್ ಲೈಸೆನ್ಸ್ ಕೊಡಿಸಬೇಕು.

8. ಚುನಾವಣೆಗಳಲ್ಲಿ ಬಂದೂಕು ಪೋಲಿಸ್ ಇಲಾಖೆಗೆ ಸರೆಂಡರ್ ಮಾಡುವ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು.

ಇದಕ್ಕೆಲ್ಲ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲವಾದ್ದರಿಂದ ಜಿಲ್ಲೆಯವರೇ ಆದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.

ಇತಿ ವಿಶ್ವಾಸಗಳೊಂದಿಗೆ.

ಕೆ.ಅರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ
ಆನಂದಪುರಂ – ಸಾಗರ ತಾಲ್ಲೂಕ್

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Power Cut in Shivamogga ಮಾಚೇನಹಳ್ಳಿ ಮೆಸ್ಕಾಂ ಎಫ್ 3 ಮಾರ್ಗದ ದುರಸ್ತಿಯ ಕಾರಣ ವಿದ್ಯುತ್ ವ್ಯತ್ಯಯ

0

Power Cut in Shivamogga  ಮೆಸ್ಕಾಂ ಮಾಚೇನಹಳ್ಳಿ ವಿವಿ ಕೇಂದ್ರದ ಎಫ್-3ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಮಾರ್ಚ್ 9 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಬಿದರೆ, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ,

Power Cut in Shivamogga ಶುಗರ್ ಕಾಲೋನಿ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sagara ಸಾಗರ ಶಾಸಕರು ವಸತಿಯಿರುವ ವಾರ್ಡ್ ನಲ್ಲೇ ಚರಂಡಿ ದುರವಸ್ಥೆ

0

Sagara  ಸಾಗರದ ಶಾಸಕ ಹೆಚ್.ಹಾಲಪ್ಪನವರು ವಾಸವಿರುವ ಸಾಗರದ ಎಸ್.ಆರ್.ಎಸ್ ಲೇಔಟ್ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರುತ್ತಿರುವ ಅಘಾತಕಾರಿ ಘಟನೆ ಶಾಸಕರ ಜನ್ಮ ದಿನದಂದೆ ವರದಿಯಾಗಿರುವುದು ವಿಶೇಷವಾಗಿದೆ.

ಸಾಗರ ನಗರಸಭೆ ವ್ಯಾಪ್ತಿ ವಾರ್ಡ್ ನವೆಂಬರ್ 14 ರಲ್ಲಿ ಕಳೆದ 15 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಎಸ್.ಆರ್.ಎಸ್ ಬಡಾವಣೆಯ ಚರಂಡಿಗಳು ಸಂಪೂರ್ಣ ಮಣ್ಣಿನಿಂದ ಮುಚ್ಚಿ ಹೋಗಿದ್ದರೂ ಇದುವರೆಗೂ ಚರಂಡಿ ಸರಿಪಡಿಸದೆ ಇರುವ ಕಾರಣ ಸದರಿ ಬಡಾವಣೆಯ ನೂರಾರು ಮನೆಗಳ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.

ಎಸ್.ಆರ್.ಎಸ್ ಬಡಾವಣೆಯ ತ್ಯಾಜ್ಯ ಮಲೀನ ನೀರು ಶಿಲ್ಟು ಇಲ್ಲಿನ ಖಾಸಗಿ ಭಾವಿಗಳಲ್ಲಿ ಸೀಪೇಜ್ ಆಗುವ ಮೂಲಕ ಬಾವಿಗಳ ನೀರು ಸಂಪೂರ್ಣ ದುರ್ವಾಸನೆಯಿಂದ ಕೂಡಿದೆ. ಸದರಿ ನೀರಿನಿಂದ ನೊರೆಬುಗ್ಗೆಗಳು ಬರುತ್ತಿದ್ದು,ಮೂಗುಮುಚ್ಚಿಕೊಂಡು ಸದರಿ ನೀರನ್ನು ಗಿಡಗಳಿಗೆ ಬಿಡಬೇಕಾದಂತಹ ದುಸ್ಥಿತಿ ನಿರ್ಮಾಣವಾಗಿದೆ.
ಶಾಸಕರೇ ನಿಮ್ಮ ಜೊತೆ ವಾಸವಿದ್ದಾರಲ್ಲ.ನೀವೆಲ್ಲ ಬಿಜೆಪಿ ಮತದಾರರಿದ್ದೀರಿ.ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಹಾಲಪ್ಪನವರನ್ನು ಗೆಲ್ಲಿಸಲೇಬೇಕು ಎಂದು ಓಡಾಡಿದ್ದರೂ ಇಂತಹ ದುಸ್ಥಿತಿ ಯಾಕೇ? ಇಲ್ಲಿನ ಬಾವಿ ಕಲುಷಿತ ನೀರಿನಿಂದ ಆರೋಗ್ಯ ಹದಗೆಟ್ಟು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ದಾಖಲಾಗಿ ಲಕ್ಷಾಂತರ ರೂಗಳನ್ನು ಚಿಕಿತ್ಸೆಗೆ ವೆಚ್ಚಮಾಡಿದ ನಂತರ ನಿಮ್ಮ ಅಭಿಪ್ರಾಯವೇನು?ಎಂದು ಪ್ರಶ್ನಿಸಿದಾಗ ಸ್ಥಳಿಯರು ಪ್ರತಿಕ್ರಿಯಿಸಿದ್ದಾರೆ.
ಸ್ಥಳಿಯ ನಿವಾಸಿ ಲಲಿತಾ ಪ್ರಕಾಶ್ ಮಾತನಾಡಿ ಕಳೆದ 12 ವಷ್ಗಳಿಂದ ಈ ಲೇಔಟ್‌ನಲ್ಲಿ ವಾಸಿಸುತ್ತಿರುವ ನಮಗೆ ಕನಿಷ್ಠ ಚರಂಡಿ ನಿರ್ಮಿಸಿಕೊಟ್ಟಿದ್ದರೇ ನಮ್ಮ ಬಾವಿಗಳ ನೀರು ಕಲುಷಿತಗೊಳ್ಳುತ್ತಿರಲಿಲ್ಲ.ನಗರಸಭೆಯವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.ಆರೋಗ್ಯ ಹದಗೆಟ್ಟು ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದೇವೆ.ಕ್ಯಾನ್‌ಗಟ್ಟಲೇ ಬಿಸಿಲಿರಿ ನೀರು ಖರೀದಿಸಿ ಕುಡಿಯಲು ಮತ್ತು ಅಡುಗೆ ಹಾಗೂ ಸ್ನಾನ ಮತ್ತು ಪಾತ್ರೆ ತೊಳೆಯಲು ಬಳಸುವಂತಹ ಅನಿವಾರ್ಯ ಪರಿಸ್ಥಿತಿ ನಮ್ಮದಾಗಿದೆ ಎಂದು ಅಳಲು ತೋಡಿಕೊಂಡರು.
ಸ್ಥಳಿಯ ನಿವಾಸಿ ರವೀಂದ್ರಭಟ್ ಮಾತನಾಡಿ ನಗರಸಭೆ ಸದಸ್ಯರು ಅಧ್ಯಕ್ಷರು,ಅಧಿಕಾರಿಗಳು ನಮ್ಮ ಬಡಾವಣೆಯ ಯಾವ ಅಬಿವೃದ್ಧಿ ಕಾಮಗಾರಿಯನ್ನು ಮಾಡುತ್ತಿಲ್ಲ.ಚರಂಡಿ ಹಾಗೂ ಕುಡಿಯುವ ನೀರು ಬೀದಿ ದೀಪಗಳಂತಹ ಮೂಲಭೂತ ಸವಲಭ್ಯ ಕಲ್ಪಿಸುವಲ್ಲಿ ದಿವ್ಯ ನಿರ್ಲಕ್ಯ ವಹಿಸುತ್ತಿರುವುದೇ ಅಭಿವೃದ್ಧಿ ಪರ್ವವೇ?ಮಾಧ್ಯಮಗಳಲ್ಲಿ ಅಬಿವೃದ್ಧಿಯ ಹರಿಕಾರಾರು,ನಿರಂತರ ಅಬಿವೃದ್ಧಿಗಾಗಿ ತುಡಿತ ದುಡಿತ ಎಂಬ ಪ್ರಕಟಣೆಯನ್ನು ನೋಡಿದರೇ ಇದೇನಾ ನಮ್ಮ ಬಡಾವಣೆಯ ದುಸ್ಥಿತಿಯೇ ಇವರ ಅಬಿವೃದ್ಧಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ನಿವಾಸಿ ಪ್ರಕಾಶ್‌ಕುಂಠೆ ಪ್ರತಿಕ್ರಿಯಿಸಿ ನಗರಸಭೆಗೆ ನೂರಾರು ಅರ್ಜಿ ಸಲ್ಲಿಸಿದರೂ ಎಸ್‌ಆರ್‌ಎಸ್ ಬಡಾವಣೆಯ ಮೂಲಭೂತ ಸಮಸ್ಯೆ ನಿವಾರಿಸದ ಕಾರಣ ಸ್ಥಳಿಯ ನಿವಾಸಿಗಳೇ ಹಣ ಷೇರ್ ಮಾಡಿಕೊಂಡು ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಚರಂಡಿಯಲ್ಲಿ ಪಿಯುಸಿ ಪೈಪ್‌ಗಳನ್ನು ಅಳವಡಿಸಿ ಮನೆಗಳ ಕೊಳಚೆ ತ್ಯಾಜ್ಯದ ನೀರು ರಾಜಾಕಾಲುವೆಗೆ ಸೇರಿಸುವ ಕಾಮಗಾರಿ ಮಾಡಿಸಿಕೊಳ್ಳುತ್ತಿದ್ದೇವೆ.ಇದು ಶಾಸಕರು ವಾಸವಿರುವ ನಮ್ಮ ಬಡಾವಣೆಯ ಅಬಿವೃದ್ಧಿಯಾಗಿದ್ದು,ನಾವು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ನಂತರ ಇಲ್ಲಿನ ಮನೆ ಜಾಗ ಮಾರಾಟ ಮಾಡಿ ಊರುಬಿಡಬೇಕೆಂಬಷ್ಟು ಬೇಸರವಾಗಿದೆ ಎಂದರು.

Sagara  ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಮಂಜಪ್ಪ ಪ್ರತಿಕ್ರಿಯಿಸಿ ಇಲ್ಲಿನ ವಾರ್ಡ್ ಸದಸ್ಯೆ ಲಲಿತಮ್ಮನವರಿಗೆ ಚರಂಡಿ ಅವ್ಯವಸ್ಥೆ ಕುರಿತು ಗಮನಕ್ಕೆ ತಂದರೇ ಏನು ಮಾಡುವುದು ನಮ್ಮ ಮನೆಯ ಎದುರು ಚರಂಡಿ ಸರಿಯಿಲ್ಲ.ಸುಧಾರಿಸಿಕೊಳ್ಳಿ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕರೇ ವಾಸವಿರುವ ಬಡಾವಣೆಯ ಗತಿ ಅಧೊಗತಿಯಾದರೇ ಶಾಸಕರು ಆಡಳಿತ ನಡೆಸುವ ಕ್ಷೇತ್ರದ ಕಥೆ ಹೇಗಿರಬೇಡ ಎಂದು ಪ್ರಶ್ನಿಸುವಂತಹ ಪ್ರಕರಣ ಇದಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯಂತಹ ಅನಿಷ್ಟ ಪದ್ಧತಿ ತೊಲಗಬೇಕು-ನ್ಯಾ.ರಾಜಣ್ಣ ಸಂಕಣ್ಣನವರ್

0

Shivamogga ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯಂತಹ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಲು ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜಣ್ಣ ಸಂಕಣ್ಣನವರ್ ತಿಳಿಸಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳಿಗೆ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆಯು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ. ಮಹಿಳ ಮತ್ತು ಮಕ್ಕಳು ಈ ರೀತಿ ಅಪಾಯದಲ್ಲಿರುವುದು ಕಂಡು ಬಂದಲ್ಲಿ ದೂರು ನೀಡುವ ಮತ್ತು ಅವರ ಸಹಾಯಕ್ಕೆ ಬರುವ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸಬೇಕೆಂದರು.

ಮತದಾನ ನಮ್ಮೆಲ್ಲರ ಹಕ್ಕು. ಮತದಾನದ ಮಹತ್ವದ ಕುರಿತು ಜಾಗೃತಿ ಬಹಳ ಮುಖ್ಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಮಹಿಳಾ ರಕ್ಷಣೆ ಸಮಾಜದಲ್ಲಿ ದೊಡ್ಡ ಪ್ರಶ್ನೆಯಾಗಿದೆ ಮಹಿಳಾ ರಕ್ಷಣೆ ಮಾಡುವ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸುವುದರಿಂದ ಮಾತ್ರ ಮಹಿಳೆಯರ ರಕ್ಷಣೆ ಸಾಧ್ಯ ಎಂದ ಅವರು ಉತ್ತಮ ಸಮಾಜ ಸೃಷ್ಠಿಸುವಲ್ಲಿ ಮಹಿಳೆಯರ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಅತ್ಯಂತ ಅನಿಷ್ಟ ಪದ್ಧತಿಯಾಗಿದ್ದು ಇದನ್ನು ತೊಡೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.

Shivamogga ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಾನ್ಸಿ ಲವೀನ್ ಪಿಂಟೊ ಹಾಗೂ ಮಹಾನಗರಪಾಲಿಕೆ ಸಹಾಯಕ ನಿರ್ದೇಶಕಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಸುಪ್ರಿಯ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಜಿ.ಜಿ.ಸುರೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,  ಪೋಲಿಸ್ಇ ಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ವಾಧಾರ ಸಾಂತ್ವನ ಕೇಂದ್ರ, ಉಜ್ವಲ ಕೇಂದ್ರ ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆಯ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Mescom Shikaripura ಶಿಕಾರಿಪುರದ ಮೆಸ್ಕಾಂ ಉಪವಿಭಾಗೀಯ ಕಛೇರಿಯಲ್ಲಿ ಜನಸಂಪರ್ಕ ಸಭೆ

0

Mescom Shikaripura ಮೆಸ್ಕಾಂ ಶಿಕಾರಿಪುರ ಉಪವಿಭಾಗ ಕಚೇರಿಯಲ್ಲಿ ಮಾ.09 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.

Mescom Shikaripura ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಿ ಸಂಬಂಧಪಟ್ಟ ಪ್ರದೇಶದ ಅಹವಾಲುಗಳನ್ನು ಸ್ವೀಕರಿಸುವ ಕಾರಣ ಗ್ರಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೆಸ್ಕಾಂ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9448289519 ನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shri Yogi Narayana ಜೀವಪರ ಮತ್ತು ನಡೆದಂತೆ ನುಡಿದ ಶ್ರೀಯೋಗಿ ನಾರೇಯಣರೇ ನಮಗೆ ಆದರ್ಶ- ಎನ್.ಕುಮಾರ್

0

Shri Yogi Narayana ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಸೇರಿದಂತೆ ಎಲ್ಲ ಮಹಾನ್ ಪುರುಷರ ಮನ ಮಿಡಿದಿದ್ದು, ಮನುಜ ಕುಲದ ಒಳಿತಿಗಾಗಿ ಎಂದು ಭದ್ರಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಕುಮಾರ್ ಎನ್ ನುಡಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಯತೀಂದ್ರ ಶ್ರೀ ಯೋಗಿನಾರೇಯಣ ಯತೀಂದ್ರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಕುವೆಂಪು ರಂಗಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಬಸವಣ್ಣ, ಕನಕದಾಸ, ಪುರಂದರ ದಾಸ, ಅಕ್ಕಮಹಾದೇವಿ, ವಿವೇಕಾನಂದ, ಕೈವಾರ ತಾತಯ್ಯ ಹೀಗೆ ಈ ಎಲ್ಲ ಮಹಾನ್ ಪುರುಷರು ಮನು ಕುಲದ ಒಳಿತಿಗಾಗಿ ಬದುಕಿದವರು. ಇವರ್ಯಾರೂ ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತರಾದವರಲ್ಲ. ಇಡೀ ಮನು ಕುಲಕ್ಕೆ ದಾರಿದೀಪ ಆದವರು.

ಕೈವಾರ ತಾತತ್ಯನವರು ಕೈವಾರದಲ್ಲಿ ಮುದ್ದಮ್ಮ ಮತ್ತು ಕೊಂಡಪ್ಪ ದಂಪತಿಗೆ ಜನಿಸಿದರು. ಇವರದು ದೈವಭಕ್ತರ ಕುಟುಂಬವಾಗಿದ್ದು, ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರು. ಮುನಿಯಮ್ಮನನ್ನು ಮದುವೆಯಾದ ಇವರು ಬಳೆ ಮಾರುವ ವೃತ್ತಿಯಲ್ಲಿ ತೊಡಗಿದ್ದರು. ಆಧ್ಯಾತ್ಮಿಕತೆ, ಧ್ಯಾನದಲ್ಲಿ ಹೆಚ್ಚಾಗಿ ನಿರತರಾಗಿರುತ್ತಿದ್ದ ಇವರು ಪವಾಡ ಪುರುಷರು ಸಹ ಆಗಿದ್ದರೆಂಬುದಕ್ಕೆ ಅನೇಕ ದಂತ ಕಥೆಗಳು ಇವೆ.
ತಾತತ್ಯನವರು ಹಸಿದು ಬಂದವರ ಹಸಿವು ನೀಗಿಸುತ್ತಿದ್ದ, ಕಲ್ಲನ್ನು ಕಲ್ಲು ಸಕ್ಕರೆಯಾಗಿಸುತ್ತಿದ್ದ, ಧ್ಯಾನಾಸಕ್ತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಂತಹ ಅನೇಕ ಉಲ್ಲೇಖಗಳನ್ನು ನಾವು ಕಾಣಬಹುದು. ಇವರು ನಾರಾಯಣನ ಸಾಕ್ಷಾತ್ಕಾರದಿಂದ 90 ನೇ ವಯಸ್ಸಿನಿಂದ 110 ವರ್ಷವಾಗುವವರೆಗೆ ಮನುಕುಲದ ಒಳಿತಿಗಾಗಿ ಕಾಲಜ್ಞಾನವನ್ನು ಬರೆದರು ಎಂದರು.

Shri Yogi Narayana ಸದಾ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು. ಜೀವ ಪರ ಚಿಂತನೆ, ನಡೆದಂತೆ ನುಡಿ ಮತ್ತು ಸಜ್ಜನವರ ಸಹವಾಸದಿಂದ ಆನಂದಮಯ ಜೀವನ ನಡೆಸಬಹುದೆಂದು ತಿಳಿಸಿಕೊಟ್ಟರು. ಇವರ ಕೆಲವಾರು ತತ್ವಗಳನ್ನು ನಾವು ಅಳವಡಿಸಿಕೊಂಡಿರೆ ಅದೇ ಸಮಾಜಕ್ಕೆ ನಾವು ಕೊಡುವ ನಿಜವಾದ ಕಾಣಿಕೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ತಹಶೀಲ್ದಾರರು ಗ್ರೇಡ್-2 ಆದ ಗಣೇಶ್ ಉದ್ಘಾಟಿಸಿ ಕೈವಾರ ತಾತತ್ಯ ಜಯಂತಿಯ ಶುಭ ಕೋರಿದರು. ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷ ಜಿ.ರಾಘವೇಂದ್ರ, ಮುಖ್ಯ ಕಾರ್ಯದರ್ಶಿ ಶಿವಕುಮಾರ್, ಬಲಿಜ ಸಮೂಹ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಪ್ಪ, ಆದಿಲಕ್ಷ್ಮಿ ಬಲಿಜ ಸಮಾಜದ ಸ್ಮಿತಾ ಶಿವಕುಮಾರ್, ಬಲಿಜ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಶೀವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪುಟ್ಟರಾಜ ಗವಾಯಿಗಳ 109 ನೇ ಜಯಂತಿ

0

Shivamogga ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠಶಾಲೆಯಲ್ಲಿ ಆಯೋಜಿಸಿದ್ದ ಡಾ. ಪಂ|ಪುಟ್ಟರಾಜ ಗವಾಯಿಗಳ 109ನೇ ಜನ್ಮ ದಿನದ ಸಮಾರಂಭ ಆಯೋಜಿಸಲಾಗಿತ್ತು.

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾ ನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು.

Shivamogga ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸೇರಿದಂತೆ ಹಲವರಿದ್ದರು. ಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹುಮಾಯೂನ್ ಹರ್ಲಾಪುರ ನಿರ್ವಹಿಸಿದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Breaking News ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಷರತ್ತು ಬದ್ಧ ಜಾಮೀನು

Breaking News  ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ‌ ಕಾರ್ಖಾನೆ ಅಧ್ಯಕ್ಷ
ಮಾಡಾಳ್ ವಿರೂಪಾಕ್ಷಪ್ಪ ಈಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ದಾವಣಗೆರೆಯಲ್ಲಿ ಅವರ ಬೆಂಬಲಿಗರು ಹಾರ ತುರಾಯಿ ನೀಡಿ
ಕೇಕೆ ಹಾಕಿ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ. ಅವರಿಗೀಗ ಷರತ್ತುಬದ್ಧ ಜಾಮೀನು‌ಸಿಕ್ಕಿದೆ.
ನಲ್ವತ್ತೆಂಟು ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕಿದೆ.

ಜನಜಂಗುಳಿಯಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ನನ್ನ ತಾಯಿ‌ ಇದ್ದಹಾಗೆ .ಅದಕ್ಕೆ ನಾನು ದ್ರೋಹ ಮಾಡಿಲ್ಲ.
ಮನೆಯಲ್ಲಿ ಸಿಕ್ಕ ಹಣ ಅಡಿಕೆ ಬೆಳೆ ಮಾರಿ‌ ಬಂದ ಹಣ.
ಮುಂದಿನ ಚುನಾವಣೆ ಬಗ್ಗೆ ನನ್ನ ತಾಲ್ಲೂಕಿ ಜನ ನಿರ್ಧರಿಸುತ್ತಾರೆ
ಎಂದು ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ಕರ್ನಾಟಕ ಬಿಜೆಪಿ ಸರ್ಕಾರ ನಲವತ್ತು ಪರ್ಸೆಂಟ್ ಆರೋಪದಲ್ಲಿ ಸಿಲುಕಿದೆ. ಇಂತಹ ಸನ್ನಿವೇಶದಲ್ಲಿ ಅದ್ಧೂರಿಯ ಮೆರವಣಿಗೆ ಬೇಕಿತ್ತ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Breaking News ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು
ಸ್ವಗ್ರಾಮ ಮಾಡಾಳಿನ ತಮ್ಮ ಸ್ವಗೃಹಕ್ಕೆ ತೆರಳಿಲಿದ್ದಾರೆ ಎಂದು ತಿಳಿದು ಬಂದಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Social Service ಸಮಾಜ ಸೇವೆಯಲ್ಲಿನ ವೈದ್ಯರನ್ನ ಗುರುತಿಸಿ ಗೌರವ ಅರ್ಪಿಸುವುದು ಸಂಘಸಂಸ್ಥೆಗಳ ಹೊಣೆ

0

Shivamogga : ಸಮಾಜದಲ್ಲಿ ವೈದ್ಯರ ಸೇವೆ ತುಂಬಾ ಮಹತ್ತರವಾಗಿದೆ. ನಿರಂತರವಾಗಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವ ವೈದ್ಯರ ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಹಿರೇಮಠ್ ಹೇಳಿದರು.

ಅಂತರಾಷ್ಟ್ರೀಯ ದಂತ ವೈದ್ಯರ ದಿನಾಚರಣೆ ಪ್ರಯುಕ್ತ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯ ನಿಯೋಜಿತ ಅಧ್ಯಕ್ಷ ಡಾ. ಭರತ್ ಅವರಿಗೆ ಸನ್ಮಾನಿಸಿ ಮಾತನಾಡಿದರು.

ವೈದ್ಯರು ವೃತ್ತಿಯ ಜೊತೆಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಸಾರ್ವಜನಿಕರ ಆರೋಗ್ಯ ಶಿಬಿರಗಳಲ್ಲಿ ಸೇವೆ ಒದಗಿಸುತ್ತಾರೆ. ಸಾರ್ವಜನಿಕರ ಸೇವೆಯಲ್ಲಿ ಗುರುತಿಸಿಕೊಂಡಿರುವ ವೈದ್ಯರ ಸೇವೆ ಗುರುತಿಸಿ ಜೆಸಿಐ ಗೌರವಿಸುವ ಕೆಲಸ ನಡೆಸುತ್ತಿದೆ ಎಂದು ತಿಳಿಸಿದರು.

Shivamogga  ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ದಂತ ವೈದ್ಯರ ದಿನಾಚರಣೆಯ ಮಹತ್ವ ತಿಳಿಸಿದರು. ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ವೈದ್ಯರ ಕೊಡುಗೆ ಅಪಾರ ಎಂದು ಹೇಳಿದರು.
ಇದೇ ಸಂದರ್ಭದಲಿ ಭಾರತ ದಂತ ವೈದ್ಯಕೀಯ ಸಂಘದ ರಾಜ್ಯ ನಿಯೋಜಿತ ಅಧ್ಯಕ್ಷ ಡಾ. ಭರತ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಆಗಿದ್ದು, ತಂತ್ರಜ್ಞಾನದ ನೆರವಿನಿಂದ ಪರಿಣಾಮಕಾರಿ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗುತ್ತಿದೆ. ಉತ್ತಮ ಆರೋಗ್ಯ ಸೇವೆ ಜನರಿಗೆ ನೀಡಬಹುದಾಗಿದೆ ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ, ಜೆಸಿಐ ಸಂತೋಷ್, ಕಿಶೋರ್, ಸತೀಶ್‌ಚಂದ್ರ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.