Sunday, August 23, 2026
Sunday, August 23, 2026

Shri Yogi Narayana ಜೀವಪರ ಮತ್ತು ನಡೆದಂತೆ ನುಡಿದ ಶ್ರೀಯೋಗಿ ನಾರೇಯಣರೇ ನಮಗೆ ಆದರ್ಶ- ಎನ್.ಕುಮಾರ್

Date:

Shri Yogi Narayana ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಸೇರಿದಂತೆ ಎಲ್ಲ ಮಹಾನ್ ಪುರುಷರ ಮನ ಮಿಡಿದಿದ್ದು, ಮನುಜ ಕುಲದ ಒಳಿತಿಗಾಗಿ ಎಂದು ಭದ್ರಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಕುಮಾರ್ ಎನ್ ನುಡಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಯತೀಂದ್ರ ಶ್ರೀ ಯೋಗಿನಾರೇಯಣ ಯತೀಂದ್ರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಕುವೆಂಪು ರಂಗಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಬಸವಣ್ಣ, ಕನಕದಾಸ, ಪುರಂದರ ದಾಸ, ಅಕ್ಕಮಹಾದೇವಿ, ವಿವೇಕಾನಂದ, ಕೈವಾರ ತಾತಯ್ಯ ಹೀಗೆ ಈ ಎಲ್ಲ ಮಹಾನ್ ಪುರುಷರು ಮನು ಕುಲದ ಒಳಿತಿಗಾಗಿ ಬದುಕಿದವರು. ಇವರ್ಯಾರೂ ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತರಾದವರಲ್ಲ. ಇಡೀ ಮನು ಕುಲಕ್ಕೆ ದಾರಿದೀಪ ಆದವರು.

ಕೈವಾರ ತಾತತ್ಯನವರು ಕೈವಾರದಲ್ಲಿ ಮುದ್ದಮ್ಮ ಮತ್ತು ಕೊಂಡಪ್ಪ ದಂಪತಿಗೆ ಜನಿಸಿದರು. ಇವರದು ದೈವಭಕ್ತರ ಕುಟುಂಬವಾಗಿದ್ದು, ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರು. ಮುನಿಯಮ್ಮನನ್ನು ಮದುವೆಯಾದ ಇವರು ಬಳೆ ಮಾರುವ ವೃತ್ತಿಯಲ್ಲಿ ತೊಡಗಿದ್ದರು. ಆಧ್ಯಾತ್ಮಿಕತೆ, ಧ್ಯಾನದಲ್ಲಿ ಹೆಚ್ಚಾಗಿ ನಿರತರಾಗಿರುತ್ತಿದ್ದ ಇವರು ಪವಾಡ ಪುರುಷರು ಸಹ ಆಗಿದ್ದರೆಂಬುದಕ್ಕೆ ಅನೇಕ ದಂತ ಕಥೆಗಳು ಇವೆ.
ತಾತತ್ಯನವರು ಹಸಿದು ಬಂದವರ ಹಸಿವು ನೀಗಿಸುತ್ತಿದ್ದ, ಕಲ್ಲನ್ನು ಕಲ್ಲು ಸಕ್ಕರೆಯಾಗಿಸುತ್ತಿದ್ದ, ಧ್ಯಾನಾಸಕ್ತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಂತಹ ಅನೇಕ ಉಲ್ಲೇಖಗಳನ್ನು ನಾವು ಕಾಣಬಹುದು. ಇವರು ನಾರಾಯಣನ ಸಾಕ್ಷಾತ್ಕಾರದಿಂದ 90 ನೇ ವಯಸ್ಸಿನಿಂದ 110 ವರ್ಷವಾಗುವವರೆಗೆ ಮನುಕುಲದ ಒಳಿತಿಗಾಗಿ ಕಾಲಜ್ಞಾನವನ್ನು ಬರೆದರು ಎಂದರು.

Shri Yogi Narayana ಸದಾ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು. ಜೀವ ಪರ ಚಿಂತನೆ, ನಡೆದಂತೆ ನುಡಿ ಮತ್ತು ಸಜ್ಜನವರ ಸಹವಾಸದಿಂದ ಆನಂದಮಯ ಜೀವನ ನಡೆಸಬಹುದೆಂದು ತಿಳಿಸಿಕೊಟ್ಟರು. ಇವರ ಕೆಲವಾರು ತತ್ವಗಳನ್ನು ನಾವು ಅಳವಡಿಸಿಕೊಂಡಿರೆ ಅದೇ ಸಮಾಜಕ್ಕೆ ನಾವು ಕೊಡುವ ನಿಜವಾದ ಕಾಣಿಕೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ತಹಶೀಲ್ದಾರರು ಗ್ರೇಡ್-2 ಆದ ಗಣೇಶ್ ಉದ್ಘಾಟಿಸಿ ಕೈವಾರ ತಾತತ್ಯ ಜಯಂತಿಯ ಶುಭ ಕೋರಿದರು. ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷ ಜಿ.ರಾಘವೇಂದ್ರ, ಮುಖ್ಯ ಕಾರ್ಯದರ್ಶಿ ಶಿವಕುಮಾರ್, ಬಲಿಜ ಸಮೂಹ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಪ್ಪ, ಆದಿಲಕ್ಷ್ಮಿ ಬಲಿಜ ಸಮಾಜದ ಸ್ಮಿತಾ ಶಿವಕುಮಾರ್, ಬಲಿಜ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಮುಂದಿನ ಎರಡುವರ್ಷಗಳಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣದ ಉದ್ದೇಶವಿದೆ- ಮಧು ಬಂಗಾರಪ್ಪ.

Madhu Bangarappa ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ...

Breaking News ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಬಸ್ ಮತ್ತು ಗೂಡ್ಸ್ ವಾಹನ ಢಿಕ್ಕಿ:ಚಾಲಕ ಗಾಯಾಳು

Breaking News ತೀರ್ಥಹಳ್ಳಿ - ಉಡುಪಿ ಮಾರ್ಗ ಮಧ್ಯೆಯ ಘಂಟೆಹಕ್ಲು...

B.Y. Raghavendra ಶಿವಮೊಗ್ಗ ಗ್ರಾಮಾಂತರ ರೈತರ ನೀರಿನ ಬವಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಿ- ಬಿ.ವೈ.ರಾಘವೇಂದ್ರ.

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದ...