Thursday, April 9, 2026
Thursday, April 9, 2026
Home Blog Page 1286

Scouts and Guides ಮಕ್ಕಳ ಪ್ರತಿಭೆ ಗುರುತಿಸಲು ಸ್ಕೌಟ್ ಸಹಕಾರಿ-ಸುಶೀಲಾ ಶೆಟ್ಟಿ

0

Scouts and Guides ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆಯಾಗಿದ್ದು, ಮಕ್ಕಳಿಗೆ ಶಿಸ್ತನ್ನು ಕಲಿಸುತ್ತದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತೆಗೆಯುವಲ್ಲಿ ಸಂಸ್ಥೆಯ ಮುಖ್ಯ ಪಾತ್ರವಾಗಿದೆ ಎಂದು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತೀರ್ಥಹಳ್ಳಿ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್, ರ‍್ಯಾಲಿ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಮಕ್ಕಳು ಭಾಗವಹಿಸಿ ತೀರ್ಥಹಳ್ಳಿಗೆ ಒಳ್ಳೆ ಹೆಸರನ್ನು ತಂದುಕೊಟ್ಟಿದ್ದಾರೆ. ಇದರಿಂದ ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕುರಿಯಕೋಸ್ ಸಿ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಕೇವಲ ಪಠ್ಯ ಪುಸ್ತಕದಿಂದ ಸಂಪೂರ್ಣ ಕಲಿಕೆ ಸಾಧ್ಯವಿಲ್ಲ ಪಠ್ಯೇತರ ಚಟುವಟಿಕೆಗಳಲ್ಲು ಮಗು ಮುಂದಿರಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉತ್ತಮ ಸೇವೆ ಸಲ್ಲಿಸುತ್ತಿರುವುದರಿಂದ ಮಕ್ಕಳಲ್ಲಿ ಸಂಘಟನಾ ಮನೋಭಾವ, ಶಿಸ್ತು, ಸಂಯಮ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿ ಸಮಾಜದ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶ್ರಮ ವಹಿಸುತ್ತಿರುವುದು ಶ್ಲಾಘನಿಯ ಎಂದರು.

ಜಿಲ್ಲಾ ಆಯುಕ್ತರಾದ ಕೆ.ಪಿ.ಬಿಂದುಕುಮಾರ ಹಾಗೂ ಶಕುಂತಲಾ ಚಂದ್ರಶೇಖರ್, ಅಕ್ಷರದಾಸೋಹ ತಾಲ್ಲೂಕಾಧಿಕಾರಿ ಪ್ರವೀಣ್ ಅವರು ಮಕ್ಕಳಿಗೆ ಶುಭಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್ ಮಾತನಾಡಿ, ಮಕ್ಕಳಲ್ಲಿ ವಿನಯ, ಶಿಸ್ತು ಮತ್ತು ಸಹೋದರತ್ವ ಪುಸ್ತಕ ಓದುವುದರಿಂದ ಬರುವುದಿಲ್ಲ. ಮಕ್ಕಳು ಸಮಾಜದಲ್ಲಿ ಬೆರೆಯಬೇಕು ಒಳಿತು ಕೆಡುಕುಗಳನ್ನು ಅವಲೋಕಿಸಬೇಕು. ಸರಿಯಾದ ಮಾರ್ಗದಲ್ಲಿ ನಡೆದು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ನಡೆಸುವಂತಾಗಬೇಕು ಎಂದರು.

ಎಲ್.ಎ.ಕಾರ್ಯದರ್ಶಿ ಎ.ಎಸ್.ಮಂಜುನಾಥ, ಸುಜಾತಾ, ಎ.ಎಸ್.ಒ.ಸಿ ಭಾರತಿ ಡಾಯಸ್, ಉಪಾಧ್ಯಕ್ಷ ಪ್ರಭಾವತಿ ಶ್ಯಾಮಣ್ಣ, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಎಡಿಸಿಗಳಾದ ಜಸ್ಸಿಬಾಯಿ, ಎ.ಎಂ.ಗಿರೀಶ, ರತ್ನಾಕರ, ಪಿಆರ್‌ಒ ವಿಜಯಕುಮಾರ, ಶಿವಶಂಕರ, ಬಿಇಒ ಕಚೇರಿಯ ಸಿಬ್ಬಂದಿ, ತಾಲೂಕಿನ ವಿವಿಧ ಶಾಲೆಯ 250 ಸ್ಕೌಟ್ಸ್ ಗೈಡ್ಸ್ ಗಳು ಭಾಗವಹಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Power Cut in Shivamogga ಶಿವಮೊಗ್ಗ ಆಲ್ಕೊಳ ಮೆಸ್ಕಾಂ ಫೀಡರ್ ಎಎಫ್ 11 ರಲ್ಲಿ ಕಾಮಗಾರಿ ಪ್ರಯುಕ್ತ ಮಾರ್ಚ 10 ರಂದು ವಿದ್ಯುತ್ ವ್ಯತ್ಯಯ

0

Power Cut in Shivamogga  ಮಾರ್ಚ್ 10ರಂದು ಶಿವಮೊಗ್ಗದ
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ
ಫೀಡರ್ ಎ.ಎಫ್.11 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ
ಹಮ್ಮಿಕೊಂಡಿರುವುದರಿAದ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ
ವಿನೋಬನಗರ ಶಿವಾಲಯ ಹತ್ತಿರ ಮತ್ತು ಹಿಂಭಾಗ,
ಮೇದಾರಕೇರಿ ವೃತ್ತ, 60 ಅಡಿರಸ್ತೆ, ಭಾಗ್ಯಾರಾಮ್ ಆಸ್ಪತ್ರೆ,
Power Cut in Shivamogga  ಶುಭಮಂಗಳಾ ಮುಂಭಾಗ, ಸಾಯಿಬಾಬಾ ದೇವಸ್ಥಾನ, ಲಕ್ಷ್ಮೀ
ಚಿತ್ರಮಂದಿರ ಮುಂಭಾಗ ಮತ್ತು ಸುತ್ತಮುತ್ತಲಿನ
ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ
ಪ್ರಕಟಣೆ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Environmentalists ಶಿವಮೊಗ್ಗ ರಾಗಿಗುಡ್ಡ ಉಳಿಸಿ ಬಗ್ಗೆ ಪರಿಸರಾಸಕ್ತರ ಸಭೆಗೆ ಆಮಂತ್ರಣ

0

Environmentalists  ಶಿವಮೊಗ್ಗ ನಗರದ ಶ್ವಾಸಕೋಶದಂತಿರುವ ಅಂತರ್ಜಲ ಹಾಗೂ ಜೀವವೈವಿಧ್ಯತೆಗೆ ಜೀವನಾಡಿಯಾಗಿರುವ ಏಕೈಕ ರಾಗಿಗುಡ್ಡಕ್ಕೆ ಗಂಡಾಂತರ ಮತ್ತು ಕುತ್ತು ಬಂದೊದಗಿದೆ.

ರಾಗಿಗುಡ್ಡ ಉಳಿಸುವುದು ಶಿವಮೊಗ್ಗದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ,

“Environmentalists ರಾಗಿಗುಡ್ಡ ಉಳಿಸಿ ಆಂದೋಲನ “ಕುರಿತು ಪೂರ್ವಭಾವಿ ಸಭೆಯನ್ನು ದಿನಾಂಕ 11,03, 2023,ರ ಶನಿವಾರ ನವ್ಯಶ್ರೀ ಅನ್ನಪೂರ್ಣ ಸಭಾಂಗಣದಲ್ಲಿ ಸಂಜೆ 5:30ಕ್ಕೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ನಗರದ ಎಲ್ಲಾ ಪರಿಸರಾಸಕ್ತರು ಆಗಮಿಸಬೇಕೆಂದು ಈ ಮೂಲಕ ಕೋರಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

International Women’s Day ಮಹಿಳೆ ಕೇವಲ ಅಡುಗೆಮನೆಗೆ ಸೀಮಿತವಾಗಿರದೇ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರುತ್ತಿದ್ದಾಳೆ- ಶ್ರೀಶೈಲಾ ಎಸ್.ಮೇಟಿ

0

International Women’s Day ಮಹಿಳೆ ಕೇವಲ ಅಡುಗೆ ಮನೆಯಲ್ಲಿ ಸೀಮಿತರಾಗಿರದೇ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಅಪ್ರತಿಮೆ ಸಾಧನೆ ಮಾಡಿ ಯಶಸ್ಸು ಗಳಿಸುವ ಮೂಲಕ ಗಂಡಿನ ಸರಿಸಮಾನವಾಗಿ ಬೆಳೆಯುತ್ತಿದ್ದಾರೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿ ಅವರು ಹೇಳಿದರು.

ಚಿಕ್ಕಮಗಳೂರು ನಗರ ಹೊರವಲಯದ ಜಿಲ್ಲಾ ಕಾರಾಗೃಹದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು
ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಹಿಳೆಯು ದೇಶದ ಪ್ರಧಾನಿ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಯಶಸ್ಸನ್ನು ಗಳಿಸಿದ್ದಾರೆ.

ಕಾರಾಗೃಹದ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ತಮ್ಮ ಸಾಂಸರಿಕ ಜೀವನದಲ್ಲಿ ಗಂಡ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಎರಡಲ್ಲೂ ವೃತ್ತಿಯನ್ನು ಶಕ್ತಿಯುತವಾಗಿ ನಿಭಾಯಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ಪ್ರತಿಯೊಬ್ಬರ ಗಂಡಿನ ಜೀವನದಲ್ಲಿ ಹೆಣ್ಣು ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಡದಿಯಾಗಿ, ಸ್ನೇಹಿತೆಯಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಜೊತೆಗೆ ಸಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಗಂಡಿನ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.

International Women’s Day ಜೈಲರ್ ಎಂ.ಕೆ.ನೆಲಧರಿ ಮಾತನಾಡಿ ಮಹಿಳೆಯು ಸಂಸಾರ ಜೀವನದಲ್ಲಿ ಗಂಡನ ಜೊತೆ ಸಹಪಾಠಿಯಾಗಿ ನಿಲ್ಲುವ ಪರಿಣಾಮವೇ ಇಂದು ಅತಿಎತ್ತರಕ್ಕೆ ಗಂಡ ಮತ್ತು ಮಕ್ಕಳು ಬೆಳೆಯಲು ಸಾಧ್ಯ. ತನ್ನ ಸುಖವನ್ನು ಮಕ್ಕಳು ಗಂಡಿನಿಗೆ ಸೀಮಿತಗೊಳಿಸಿ ಮಹಾತ್ಯಾಗಿಯಾಗಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆಯ ಸಹಾಯಕ ಜೈಲರ್‌ಗಳಾದ ಅಲೀಮುದ್ದಿನ್, ಬೊಂಗಾಳೆ, ಮುಖ್ಯ ಮಹಿಳಾ ಪೇದೆ ಉಷಾ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

JDS ಮಲ್ಲೇನಹಳ್ಳಿಯಲ್ಲಿ ಉಚಿತ ಸೀರೆ ವಿತರಣೆ ಮಾಡಲಾಗಿದೆ ಎಂದು ಬಿಜೆಪಿ ಮೇಲೆ ಜೆಡಿಎಸ್ ಆರೋಪ

0

JDS ಚಿಕ್ಕಮಗಳೂರು, ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಯುಗಾದಿ ಹಬ್ಬದ ಪ್ರಯುಕ್ತ ಸೀರೆ ವಿತರಿಸಿದ್ದು, ಅಲ್ಲಿನ ಗ್ರಾಮಸ್ಥರು ಸೀರೆಯನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಜೆಡಿಎಸ್ ನಗರ ಮಹಾಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಹಣದ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಜೆಪಿಯನ್ನು ಜಿಲ್ಲೆಯ ಜನತೆ ಈ ಬಾರಿ ತಿರಸ್ಕರಿಸಲು ಮುಂದಾಗಿದ್ದಾರೆ. ಸತತವಾಗಿ 20 ವರ್ಷಗಳ ಕಾಲ ಶಾಸಕರಾಗಿ ಕಾರ್ಯನಿರ್ವಹಿಸಿದ್ದರೂ ಕೂಡಾ ಅಭಿವೃದ್ದಿ ಕಾರ್ಯ ಮರೀಚಿಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಶಾಸಕ ಸಿ.ಟಿ.ರವಿ ಅವರು ಪ್ರಸ್ತುತ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕ್ಷೇತ್ರವನ್ನು ಇಷ್ಟು ದಿನಗಳ ಆಳಿದ ಶಾಸಕರು ಮಾದರಿ ಕ್ಷೇತ್ರವನ್ನಾಗಿ ರೂಪಿಸಿಲ್ಲ. ಕೇವಲ ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ಸೀರೆ, ಹಣ, ಹೆಂಡದ ಮೂಲಕ ಚುನಾವಣೆ ಎದುರಿಸಲು ಸಾಧ್ಯ ಎಂಬುವ ಮನಸ್ಥಿತಿಯನ್ನು ತಕ್ಷಣವೇ ಬದಲಾಯಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

JDS ಈ ಬಾರಿ ಕ್ಷೇತ್ರದಲ್ಲಿ ಮತದಾರರು ಯಾವುದೇ ಆಮಿಷಕ್ಕೊಳಗಾಗದೇ ಚುನಾವಣೆ ಎದುರಿಸಲು ಸಿದ್ದರಾಗಿದ್ದಾರೆ. ಪ್ರತಿ ಬಾರಿಯು ಮೋದಿ, ಯಡಿಯೂರಪ್ಪ ಹಾಗೂ ಹಿಂದುತ್ವದ ಹೆಸರಿನಲ್ಲಿ ಚುನಾವಣೆ ಎದುರಿಸುವುದನ್ನು ಮೊದಲು ನಿಲ್ಲಿಸಬೇಕು. ಶಾಸಕರು ಅಭಿವೃದ್ದಿ ವಿಚಾರದಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದರೆ ಜನತೆ ತಾವಾಗಿಯೇ ಮತ ನೀಡುತ್ತಾರೆ. ಅಭಿವೃದ್ದಿ ಶೂನ್ಯವಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಈ ಬಾರಿ ಬಿಜೆಪಿಯನ್ನು ತಿರಸ್ಕರಿಸಿ ಜೆಡಿಎಸ್‌ನತ್ತ ಒಲವು ಹೊಂದಲಿದ್ದಾರೆ ಎಂದಿದ್ದಾರೆ.

ರಾಜ್ಯ ಹಾಗೂ ಜಿಲ್ಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ದಿ ಯನ್ನು ಜನತೆ ಮನಸ್ಸಿನಲ್ಲಿಟ್ಟುಕೊಂಡು ಮುಂದೆ ಜೆಡಿಎಸ್‌ಗೆ ಬೆಂಬಲ ಸೂಚಿಸಲಿದ್ದಾರೆ. ಇನ್ನೂ ಮುಂದಾದರೆ ಶಾಸಕರು ಇರುವಷ್ಟು ದಿನಗಳ ಕಾಲ ಯಾವುದೇ ಧೀಮಂತ ನಾಯಕರನ್ನು ಟೀಕಿಸುವುದು ಬಿಟ್ಟು ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಚಿಂತಿಸಿ ಎಂದು ಹೇಳಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Health Check up ಚಿಕ್ಕಮಗಳೂರು ಜಿಲ್ಲೆ ಚಿಕ್ಕಗೌಜದಲ್ಲಿ ಉಚಿತ ಕಣ್ಣು ಕಿವಿ ಮೂಗು ಗಂಟಲು ಮತ್ತು ದಂತಕ್ಷಯ ತಪಾಸಣಾ ಶಬಿರ

0

Health Inspection Camp ಉಡುಪಿ ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಎಎಪಿ ಜಿಲ್ಲಾ ಘಟಕ, ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಬಿಕ್ಕೇಮನೆ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಚಿಕ್ಕಗೌಜ ಗ್ರಾಮದ ಕನಕ ಸಮುದಾಯ ಭವನದಲ್ಲಿ ಮಾ.12 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ನೇತ್ರಾ, ಕಿವಿ, ಮೂಗು, ಗಂಟಲು ಹಾಗೂ ದಂತ ಕ್ಷಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದಲ್ಲಿ ನೇತ್ರ ತಜ್ಞ ಡಾ. ಪ್ರಮೋದ್ ಪಾಂಡುರಂಗ ತಪಾಸಣೆ ನಡೆಸಲಿದ್ದಾರೆ. ಶಿಬಿರಕ್ಕೆ ಆಗಮಿಸುವ ವ್ಯಕ್ತಿಗಳು ಗುರುತಿನ ಚೀಟಿ ಕಡ್ಡಾಯವಾಗಿ ತರತಕ್ಕದ್ದು. ಕಾರ್ಯಕ್ರಮದಲ್ಲಿ ಚಿಕ್ಕಗೌಜ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಭಾಗವಹಿಸಲಿದ್ದಾರೆ,

Health Inspection Camp ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 7065015858, 9448186237 ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ ಎಂದು ಎಎಪಿ ರಾಜ್ಯ ಸಹ ಕಾರ್ಯದರ್ಶಿ ಡಾ. ಕೆ.ಸುಂದರಗೌಡ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Thirthahalli ಕಷ್ಟಕರ ಸನ್ನಿವೇಶದಿಂದ ಪಾರುಮಾಡುವುದೇ ನಮ್ಮ ಧರ್ಮಕಾರ್ಯಗಳ ಫಲ-ಶ್ರೀವಿಧುಶೇಖರ ಭಾರತಿ ಸ್ವಾಮೀಜಿ

0

Thirthahalli : ದೇವಸ್ಥಾನಗಳ ಸಂರಕ್ಷಣೆ ಮಾಡುವುದು ಹಾಗೂ ಪೂಜಾ ವಿಧಿ ವಿಧಾನಗಳು ನಿರಂತರವಾಗಿ ನಡೆಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಭಗವಂತ ಪ್ರಸನ್ನವಾಗಿದ್ದರೆ ನಮ್ಮೆಲ್ಲರ ಶ್ರೇಯಸ್ಸು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.


ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಅಂಚೆ ವ್ಯಾಪ್ತಿಯ ಕೊಡಿಗೆಬೈಲು ದೇವಾಲೇಕೊಪ್ಪದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಪುನರ್ ಪ್ರತಿಷ್ಠಾಪನಾ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಒಳ್ಳೆಯ ಕೆಲಸಗಳು ಮಾಡುವುದೇ ಧರ್ಮ, ಪಾಪದ ಕೆಲಸಗಳನ್ನು ಮಾಡಿದರೆ ಅಧರ್ಮ ಅನುಸರಿಸಿದಂತೆ ಆಗುತ್ತದೆ. ಧರ್ಮ ಅಧರ್ಮದ ಫಲಗಳು ನಮ್ಮ ಬದುಕಿನಲ್ಲಿ ಎದುರಾಗುತ್ತವೆ. ನಾವು ಮಾಡಿದ ಒಳ್ಳೆಯ ಕೆಲಸಗಳೇ ನಮಗೆ ಉತ್ತಮ ಫಲವನ್ನು ಸಿಗುವಂತೆ ಮಾಡುತ್ತವೆ. ಜೀವನದಲ್ಲಿ ಕಷ್ಟಕರ ಸನ್ನಿವೇಶದಿಂದ ಪಾರಾದ ಸಂದರ್ಭದಲ್ಲಿ ಅನುಭವಿಸುವ ಆಶ್ಚರ್ಯಕರ ಸಂಗತಿಯೇ ನಾವು ಮಾಡಿದ ಧರ್ಮಕಾರ್ಯಗಳ ಫಲ ಎಂದು ತಿಳಿಸಿದರು.


ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ. ಭಕ್ತರ ಫಲ ಸಿದ್ಧಿಸುವ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ನಿರಂತರ ಪೂಜಾ ವಿಧಿ ವಿಧಾನಗಳು ನಡೆಯುವಂತೆ ಆಗಬೇಕು ಎಂದರು.


ಪುನರ್ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಧಾರ್ಮಿಕ ಪೂಜಾ ವಿಧಿ ವಿಧಾನ ಆರಂಭಗೊಂಡಿದೆ.3 ದಿನಗಳ ಕಾರ್ಯಕ್ರಮಗಳು ನಡೆಯಲಿವೆ. 2ನೇ ದಿನವಾದ ಗುರುವಾರ ಶೃಂಗೇರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.


ಭಕ್ತಾಧಿಗಳಿಗೆ 3 ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜೀಣೋದ್ಧಾರ ಸಮಿತಿ ಹಾಗೂ ದೇವಾಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.


ಶೃಂಗೇರಿ ಶ್ರೀಗಳಿಂದ ಫಲಮಂತ್ರಾಕ್ಷತೆ
ಗುರುವಾರ ಬೆಳಗಿನ ಜಾವದಿಂದಲೇ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಮತ್ತು ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನಾ, ಅಷ್ಟಬಂಧ ಸಂಯೋಜನೆ, ಪ್ರತಿಷ್ಠಾ ಹೋಮ, ಜೀವಕುಂಭ ಸ್ಥಾಪನಾ, ಪ್ರಾಣಪ್ರತಿಷ್ಠೆ, ತತ್ವಕಲಶಾಭಿಷೇಕ, ಪಂಚವಿಂಶತಿ, ದ್ರವ್ಯಕಲಶಾಧಿವಾಸ ಪೂಜೆ ಹೋಮ ನಡೆಯಿತು. ಬೆಳಗ್ಗೆ 11ಕ್ಕೆ ಶೃಂಗೇರಿ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

Thirthahalli ವಿವಿಧ ವಾದ್ಯ ತಂಡಗಳು ಪಾಲ್ಗೊಂಡಿದ್ದವು. ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಅಮೃತಹಸ್ತದಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನಾ, ಮಹಾಕುಂಭಾಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಸಭಾ ಕಾರ್ಯಕ್ರಮದಲ್ಲಿ ಜಗದ್ಗುರುಗಳಿಗೆ ಫಲ ಸಮರ್ಪಣೆ ಹಾಗೂ ಶ್ರೀಗಳು ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿದರು.


ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಅಂಚೆ ವ್ಯಾಪ್ತಿಯ ಕೊಡಿಗೆಬೈಲು ದೇವಾಲೇಕೊಪ್ಪದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಪುನರ್ ಪ್ರತಿಷ್ಠಾಪನಾ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ಮಾ. 10ರ ಬೆಳಗ್ಗೆ 9.45ಕ್ಕೆ ಮೇಷ ಲಗ್ನದಲ್ಲಿ ನಾಗ ಪ್ರತಿಷ್ಠಾಪನೆ ಕಲಶಾಭಿಷೇಕ, ಮಲ್ಲಿಕಾರ್ಜುನ ದೇವರಿಗೆ ಶತರುದ್ರಾಭಿಷೇಕ, ಮಹಾಪೂಜೆ ಹಾಗೂ ಮಹಾಪ್ರಸಾದ ವಿನಿಯೋಗ ಇರಲಿದೆ. ಮಾ. 10ರ ಸಂಜೆ 7ಕ್ಕೆ ರೂಪಕಲಾ ಕುಂದಾಪುರ ಬಾಲಕೃಷ್ಣ ಪೈ ( ಕುಳ್ಳಪ್ಪು ) ಅರ್ಪಿಸುವ “ಮೂರು ಮುತ್ತು” ಕಲಾವಿದರಿಂದ ಹಾಸ್ಯ ನಗೆ ನಾಟಕ ನಡೆಯಲಿದೆ. 

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Canara Bank ಧಾರವಾಡದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಲಘುವಾಹನ ಚಾಲನಾ ತರಬೇತಿ

0

Canara Bank ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ-ಹಳಿಯಾಳ ಹಾಗೂ ಟಾಟಾ ಮೋಟಾರ್ಸ್- ಧಾರವಾಡ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಲಘು ವಾಹನ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. 20-45 ವರ್ಷ ವಯೋಮಿತಿಯೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಏಪ್ರಿಲ್ 10 ರೊಳಗಾಗಿ ಕೆನರ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325 ವಿಳಾಸಕ್ಕೆ ಕಳುಹಿಸುವುದು.

Canara Bank  ಅಥವಾ ಮೊ.ಸಂ.: 08284-298547 /9449782425/ 9692143217ಗಳಿಗೆ ವಾಟ್ಸ್ಪ್ ಮೂಲಕ ಕಳುಹಿಸುವುದು.

ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Women’s Day ಮುತ್ತಿಗೆಹಳ್ಳಿಯಲ್ಲಿ ಮಹಿಳಾ ದಿನಾಚರಣೆ

0

Women’s Day ಐ.ಸಿ.ಎ.ಆರ್. – ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ವತಿಯಿಂದ ಶಿಕಾರಿಪುರ ತಾಲೂಕಿನ ಹೊಸ ಮುತ್ತಿಗೆ ಹಳ್ಳಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕೆ. ವಿ. ಕೆ.,ಯ ವಿಜ್ಞಾನಿ (ಗೃಹ ವಿಜ್ಞಾನ) ಡಾ. ಜ್ಯೋತಿ ಎಂ. ರಾಠೋಡ್, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ, ವಿಶೇಷತೆ ಮತ್ತು ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

Women’s Day ಕಾರ್ಯಕ್ರಮದಲ್ಲಿ ಕೆ. ವಿ. ಕೆ., ವಿಜ್ಞಾನಿ (ಮಣ್ಣು ವಿಜ್ಞಾನ) ಡಾ. ಅಂಜಲಿ ಎಂ. ಸಿ., ಹಿರಿಯ ಸಹಾಯಕ ಸಂಶೋಧಕಿ(ಆರ್ಯ ಯೋಜನೆ) ಡಾ. ಪೂಜಾ ಜಿ. ಕೆ., ಮತ್ತು ಮಹಿಳೆಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Cricket Tournament ಮಾರ್ಚ್ 11 ರಿಂದ ಶಿವಮೊಗ್ಗದಲ್ಲಿ ಪವರ್ ಕಪ್ ಕ್ರಿಕೆಟ್ ಟೂರ್ನಿ

0

Cricket Tournament  ಆಕಸ್ಮಿಕವಾಗಿ ವಿದ್ಯುತ್ ಅಪಘಾತದಿಂದ ನಿಧನ ಹೊಂದಿದ ಮೆಸ್ಕಾಂ ಪವರ್ ಮ್ಯಾನ್ ಹಾಗೂ ಗುತ್ತಿಗೆ ನೌಕರರ ಸರಣಾರ್ಥ ಅವರ ಆತ್ಮಕ್ಕೆ ಶಾಂತಿ ಕೋರುವ ಉದ್ದೇಶದಿಂದ ಇಲ್ಲಿನ ಹೆಚ್. ಬಿ. ಈರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಎಜುಕೇಶನ್ ಟ್ರಸ್ಟ್ “ಪವರ್ ಕಪ್” ಕ್ರಿಕೆಟ್ ಪಂದ್ಯಾವಳಿಯನ್ನು ಬರುವ ಮಾರ್ಚ್ 11 ರಿಂದ ಎರಡು ದಿನಗಳ ಕಾಲ ಶಿವಮೊಗ್ಗ ಜೆಎನ್ ಸಿಸಿ ಕಾಲೇಜ್ ಆವರಣದ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ತುಂಗಾ ತರಂಗ ದಿನಪತ್ರಿಕೆ ಸಹ ಆಶ್ರಯದಲ್ಲಿ ನಡೆಯುತ್ತಿರುವ ಈ ಕ್ರಿಕೆಟ್ ಪಂದ್ಯಾವಳಿಯ ಆರಂಭದ ಹಾಗೂ ಅಂತಿಮ ಹಂತದ ಸಮಾರಂಭಗಳಲ್ಲಿ ಮೃತ ಪವರ್ ಮ್ಯಾನ್ ಗಳ ಕುಟುಂಬದವರನ್ನು ಗೌರವಿಸುವ ಹಾಗೂ ಅವರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆಯೋಜಿತ ಸುಮಾರು 18 ತಂಡಗಳು ಶಿವಮೊಗ್ಗ ಜಿಲ್ಲೆಯ ಎಲ್ಲಾ ವಲಯಗಳ ಮೆಸ್ಕಾಂ ವಿಭಾಗದಿಂದ ಆಗಮಿಸಲಿದೆ. ಪ್ರಥಮ ಬಹುಮಾನ 15001 ಹಾಗೂ ಟ್ರೋಪಿ, ದ್ವಿತೀಯ ಬಹುಮಾನ 10000 ಹಾಗೂ ಟ್ರೋಫಿ, ತೃತೀಯ ಬಹುಮಾನ 5000 ನಗದನ್ನು ಹೊಂದಿದ್ದು ಸರಣಿ ಶ್ರೇಷ್ಠ, ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್ಮನ್, ಉತ್ತಮ ಪೀಲ್ಡರ್ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಶಿವಮೊಗ್ಗ ವೃತ್ತ ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿ, ನೌಕರರಿಗೆ ಮತ್ತು ಅಧಿಕೃತ ಗುತ್ತಿಗೆದಾರರಿಗೆ ಆಟವಾಡುವ ಅವಕಾಶವಿದ್ದು ಪ್ರತಿ ಉಪ ವಿಭಾಗದ ಒಂದು ತಂಡಕ್ಕೆ ಅವಕಾಶ ನೀಡಲಾಗಿದೆ.

ಒಂದು ತಂಡದಲ್ಲಿ ಆಡಿದ ಆಟಗಾರ ಮತ್ತೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಸಮಯದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಪ್ರಸಕ್ತ 15 ವರ್ಷಗಳಿಂದ ಈರಪ್ಪ ಟ್ರಸ್ಟ್ ರಕ್ತದಾನ, ಆರೋಗ್ಯ ಶಿಬಿರ, ನೇತ್ರದಾನ ಶಿಬಿರ, ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ಹಂಚಿಕೆ, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಂತಹ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.

Cricket Tournament  ಬರುವ ಮಾರ್ಚ್ ಹನ್ನೊಂದರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಪವರ್ ಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಮೆಸ್ಕಾಂನ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ಸುರೇಶ್ – 9901632506 ಸಂಪರ್ಕಿಸಬಹುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.