Thursday, April 9, 2026
Thursday, April 9, 2026
Home Blog Page 1285

Shivamogga ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವ್ಯಕ್ತಿಯ ಚಹರೆ ಮಾಹಿತಿ

0

Shivamogga  ಶಿವಮೊಗ್ಗ, ನಗರದ ಸಾಗರ ರಸ್ತೆ, ಶರಾವತಿ ನಗರ ಗೇಟ್ ಹತ್ತಿರ ಸುಮಾರು 55 ವರ್ಷದ ಅನಾರೋಗ್ಯ ಪೀಡಿತ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗಿದೆ ಮಾ. 7 ರಂದು ಮೃತಪಟ್ಟಿರುತ್ತಾರೆ. ಈ ವ್ಯಕ್ತಿಯು ಡಾಕ್ಯ ನಾಯ್ಕ ಬಿನ್ ಲಿಂಗನಾಯ್ಕ ಎಂದು ತಿಳಿದು ಬಂದಿದೆ. ಇವರ ಸರಿಯಾದ ವಿಳಾಸ ಪತ್ತೆಯಾಗಿರುವುದಿಲ್ಲ. ಇವರ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Shivamogga  ಮೃತರು 5.9 ಅಡಿ ಎತ್ತರವಿದ್ದು ಕೋಲು ಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ತಲೆಕೂದಲು ಮತ್ತು ಗಡ್ಡ ಬಿಟ್ಟಿರುತ್ತಾರೆ. ಮೃತನ ಬಲಗೈ ಮುಂಗೈನ ಒಳಭಾಗದಲ್ಲಿ ಶ್ರೀ ಸೇವಾಲಾಲ್ ಹಾಗೂ ಎಡಗೈ ಮುಂಗೈ ಮೇಲೆ ಮಂಜು ಎಂಬ ಹಜ್ಜೆ ಗುರುತು ಇರುತ್ತದೆ. ಮೈಮೇಲೆ ಕೆಂಪು ಬಣ್ಣದ ತುಂಬು ತೋಲಿನ ಸ್ವೆಟರ್, ಬಿಳಿ ಮಾಸಲು ಬಣ್ಣದ ಟೀಶರ್ಟ್ ಹಾಗೂ ಕಂದು ಬಣ್ಣದ ಚಡ್ಡಿ ಧರಿಸಿರುತ್ತಾನೆ. ಈ ಅಪರಿಚಿತ ಮೃತರು ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ. ಸಂಖ್ಯೆ 08182-261414/ 9644761255ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dhruva Narayana ಮೃದುಭಾಷಿ ಹಸನ್ಮುಖಿ ರಾಜಕಾರಣಿ ಧ್ರುವನಾರಾಯಣ ಅಸ್ತಂಗತ

0

Dhruva Narayana ಕೆಪಿಸಿಸಿ ಕಾರ್ಯಧ್ಯಕ್ಷ ಮಾಜಿ ಸಂಸದ ಧ್ರುವನಾರಾಯಣ ಅವರು ಹೃದಯಘಾತದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ.

ರಂಗಸ್ವಾಮಿ ಧ್ರುವನಾರಾಯಣ ಅವರು ಲೋಕಸಭೆಯ ಮಾಜಿ ಸಂಸದರು. ಭಾರತದ 15 ಮತ್ತು 16ನೇ ಲೋಕಸಭೆಯ ಸದಸ್ಯರಾಗಿದ್ದರು. ಕರ್ನಾಟಕದ ಚಾಮರಾಜನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಇವರು ಮೂಲತಃ ಅವರು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹಗ್ಗವಾಡಿ ಗ್ರಾಮದವರು.

ಯಾವುದೇ ರೀತಿಯ ಆರೋಗ್ಯ ಸಮಸ್ಯೆ ದ್ರುವ ನಾರಾಯಣ ಅವರಿಗೆ ಇರಲಿಲ್ಲ. ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇವರ ಸಾವಿಗೆ ಅನೇಕ ಗಣ್ಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ನಗುಮುಖದ ಗೆಳೆಯ, ನಮ್ಮ ನಾಯಕ ಮತ್ತು ಕಾಂಗ್ರೆಸ್ನ ಅತ್ಯಂತ ಸಮರ್ಪಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಧ್ರುವನಾರಾಯಣ ಅವರ ನಿಧನ ಸರಿಪಡಿಸಲಾಗದಷ್ಟು ನಷ್ಟವನ್ನು ಮಾಡಿದೆ. ಇದನ್ನು ವಿವರಿಸಲು ಯಾವುದೇ ಪದಗಳಿಲ್ಲ ಎಂದು ಟ್ವೀಟ್ ಮಾಡುವ ಮುಖಾಂತರ ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು , ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಆರ್ ದ್ರುವ ನಾರಾಯಣ್ ಅವರ ಹಠ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಾ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Dhruva Narayana ಧ್ರುವ ನಾರಾಯಣ ಅವರ ಸಾವಿಗೆ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಮಾಜಿ ಸಂಸದರು ಮತ್ತು ಕೆಪಿಸಿಸಿಯ ಕಾರ್ಯಧ್ಯಕ್ಷರಾಗಿದ್ದ ಶ್ರೀ ಧ್ರುವನಾರಾಯಣ ಅವರ ನಿಧನದ ವಿಷಯ ಅತ್ಯಂತ ಬೇಸರವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Job fair at Shivamogga ಕೆಲಸ ಬೇಕೆ? ಮಾರ್ಚ್14 ರಂದು ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಬನ್ನಿ

0

Job fair at Shivamogga  ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.14 ರ ಬೆಳಗ್ಗೆ 10ಕ್ಕೆ ಪತ್ರಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 14 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.

ಉಚಿತ ಪ್ರವೇಶ ಇರುತ್ತದೆ.

Job fair at Shivamogga   ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ : 08182-255293,9380663606 ಮತ್ತು 9482023412 ಮೂಲಕ ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Emergency Treatment ಪ್ರಥಮ ಚಿಕಿತ್ಸೆ ಅರಿವಿದ್ದರೆ ತಕ್ಷಣ ವ್ಯಕ್ತಿಯ ಪ್ರಾಣವುಳಿಸಬಹುದು- ಡಾ.ಕೆ.ಸುಂದರ ಗೌಡ

0

Emergency Treatment ಅಪಘಾತದ ತುರ್ತು ಸಂದರ್ಭದಲ್ಲಿ ದೊರೆಯುವ ಸೂಕ್ತ ಪ್ರಥಮ ಚಿಕಿತ್ಸೆ ಯಿಂದಾಗಿ ಜೀವವನ್ನು ಉಳಿಸಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಾಥಮಿಕ ಜ್ಞಾನ ಹೊಂದಿರಬೇಕು ಎಂದು ರೆಡ್‌ಕ್ರಾಸ್ ರಾಜ್ಯ ಸಮಿತಿ ನಿರ್ದೇಶಕ ಡಾ. ಕೆ.ಸುಂದರಗೌಡ ಹೇಳಿದರು.

ಚಿಕ್ಕಮಗಳೂರು ನಗರದ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅಪಘಾತಗಳು ಸಂಭವಿಸಿದಲ್ಲಿ ತುರ್ತು ಚಿಕಿತ್ಸೆ ಜೀವರಕ್ಷಣೆಗೆ ಸಹಕಾರಿ. ಆದರೆ, ಹಲವಾರು ಅಡ್ಡಿ, ಆತಂಕ ಗಳಿಂದ ಜನಸಾಮಾನ್ಯರು ದೂರ ಸರಿಯುತ್ತಾರೆ. ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಯಾರು ಹಿಂಜರಿಯಬಾರದು. ಇದಕ್ಕೆ ಯಾವುದೇ ಕಾನೂನು ತೊಡಕು ಬರಲಾರದು ಎಂದು ಕಿವಿಮಾತು ಹೇಳಿದರು.

ಪ್ರಥಮ ಚಿಕಿತ್ಸೆಯ ಮುಖ್ಯ ಅಂಶಗಳೆಂದರೆ ರಸ್ತೆ ಅಪಘಾತಗಳಂತಹ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದರೆ ಅವರನ್ನು ದೂರವಿರಿಸಿ ಉತ್ತಮ ಗಾಳಿ ದೊರೆಯುವಂತೆ ಮಾಡಬೇಕು. ರಕ್ತಸೋರಿಕೆ ಕಂಡುಬಂದಲ್ಲಿ ಕೂಡಲೇ ವಸ್ತçದ ಮೂಲಕ ಗಟ್ಟಿಯಾಗಿ ಒತ್ತಿಕೊಂಡು ಗಾಯದ ಜಾಗಕ್ಕೆ ಕಟ್ಟುವುದರಿಂದ ರಕ್ತಸ್ರಾವ ಕಡಿಮೆಯಾ ಗಲಿದೆ ಎಂದು ಮಾಹಿತಿ ನೀಡಿದರು.

1859 ರಲ್ಲಿ ಯುದ್ಧಭೂಮಿಯ ಭಯಾನಕತೆಯನ್ನು ಕಂಡು ಹೆನ್ರಿ ಡ್ಯುನಾಂಟ್ ಎಂಬುವವರು ರೆಡ್‌ಕ್ರಾಸ್ ಸಂಸ್ಥೆಯನ್ನು ಆರಂಭಿಸಿ ಪ್ರಥಮ ಚಿಕಿತ್ಸೆಯ ಮಹತ್ವವನ್ನು ತಿಳಿಸಿದರು.

ಪ್ರಥಮ ಚಿಕಿತ್ಸೆಯ ಸರಿಯಾದ ಜ್ಞಾನವಿಲ್ಲ ದೇ ಹೋದರೆ ಗಾಯಾಳು ವ್ಯಕ್ತಿ ಅಕಾಲಿಕ ಮರಣವೂ ಸಂಭವಿಸಲಿದೆ ಎಂದು ಎಚ್ಚರಿಸಿದರು.

ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ ಪ್ರಥಮ ಚಿಕಿತ್ಸೆ ಎಂದರೆ ಯಾವುದೇ ರೀತಿಯ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂದು ಹೇಳಲಾಗಿದೆ.

Emergency Treatment ಆಸ್ಪತ್ರೆಗೆ ಕರೆದೊಯುವ ಮೊದಲು ಜನಸಾಮಾನ್ಯರು ಮಾಡುವ ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಉಪಕರಣಗಳ ಅಥವಾ ಅತ್ಯಾಧುನಿಕ ವೈದ್ಯಕೀಯ ಬಳಕೆಗೆ ಇರುವುದಿಲ್ಲ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಕಾರ್ಯದರ್ಶಿ ರಸೂಲ್‌ಖಾನ್, ನಿರ್ದೇಶಕ ವಿಲಂ ಪಿರೇರಾ, ಶಾಲೆಯ ಮುಖ್ಯಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagalur ಕನ್ನಡ ದ ಕಟ್ಟಾಳು ಶ್ರೀದೇವಿ ಮೋಹನ್ ಅವರಿಗೆ ನುಡಿ ಶ್ರದ್ಧಾಂಜಲಿ

0

Chikmagalur ಸಮಾಜದಲ್ಲಿ ಶ್ರೀದೇವಿ ಮೋಹನ್ ಅವರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಉತ್ತಮ ಮನ್ನಣೆ ಗಳಿಸಿರುವ ಸಾಧಕ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಹಿರೇಮಗಳೂರಿನಲ್ಲಿ ಶ್ರೀದೇವಿ ಯುವಕರ ಸಂಘ, ಜಿಲ್ಲಾ ಸಾಂಸ್ಕೃತಿಕ ಸಂಘ, ಹಲಸಿಂಗ ವೇದಿಕೆ, ಜಿಲ್ಲಾ ಕಸಾಪ, ಜಿಲ್ಲಾ ಆಜಾದ್‌ಪಾರ್ಕ್ ಗಣಪತಿ ಸೇವಾ ಸಮಿತಿ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಹಲಸಿಂಗ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀದೇವಿ ಮೋಹನ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದ ಧರ್ಮದರ್ಶಿಗಳಾಗಿ ಮೋಹನ್ ಅವರು ಕಾರ್ಯನಿರ್ವ ಹಿಸುವ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಹಿರೇಮಗಳೂರು ಗ್ರಾಮದ ಯುವಕರನ್ನು ಬೆಳೆಸುವ ನಿಟ್ಟಿನಲ್ಲಿ ಶ್ರೀದೇವಿ ಯುವಕರ ಸಂಘವನ್ನು ಸ್ಥಾಪಿಸಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿ ಸುವ ಮೂಲಕ ಸ್ಪಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು ಎಂದರು.

ಮೋಹನ್‌ನವರು ಜೀವನದಲ್ಲಿ ಎಂದಿಗೂ ಜಾತಿ, ಬೇಧ ಮಾಡದೇ ಎಲ್ಲರೊಂದಿಗೆ ಉತ್ತಮ ಒಡನಾಟ ವನ್ನು ಹೊಂದುವುದವರೊಂದಿಗೆ ಸದೃಢ ಸಮಾಜ ಕಟ್ಟುವಲ್ಲಿ ಕಾರ್ಯನಿರ್ವಹಿಸಿದ್ದರು.

ಹಿರೇಮಗಳೂರು ಗ್ರಾಮ ದಲ್ಲಿ ಕೆಸರುಗದ್ದೆ ಓಟ, ಕುಸ್ತಿ, ಹೊನಲು ಬೆಳಕಿನ ಕ್ರೀಡಾಕೂಟಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿದವರು ಎಂದು ತಿಳಿಸಿದರು.

ಇಂದಿನ ಯುವಪೀಳಿಗೆಯು ಅವರ ಮಾರ್ಗದರ್ಶನದಲ್ಲಿ ಸಾಗಬೇಕಿದೆ. ಮನುಷ್ಯನ ಬದುಕು ಎಂದು ಕೊನೆಗೊಳ್ಳುವುದು ಯಾರಿಗೂ ತಿಳಿಯದು. ಇರುವಷ್ಟು ದಿನಗಳಲ್ಲಿ ಸತ್ಕಾರ್ಯಗಳನ್ನು ಮಾಡುವುದರೊಂದಿಗೆ ಹುಟ್ಟಿದ ಊರಿಗೂ ಹಾಗೂ ಜಿಲ್ಲೆಗೂ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಶ್ರೀದೇವಿಯವರು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.

ಯಾರೊಂದಿಗೂ ಏರುಧ್ವನಿಯಲ್ಲಿ ಮಾತನಾಡದೇ ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದ ಮಾತುಗಳನ್ನಾಡಿ ಮೃದು ಸ್ವಭಾವವನ್ನು ಹೊಂದಿದ್ದರು ಎಂದು ತಿಳಿಸಿದರು.

ಮನುಷ್ಯ ಜೀವನದಲ್ಲಿ ಹುಟ್ಟಿದ ನಂತರ ಸಾವು ಎಂಬುದು ಖಚಿತವಾಗಿರುತ್ತದೆ. ಆದರೆ ಇರುವಷ್ಟು ದಿನಗಳು ಮಾಡಿರುವ ಸಾಮಾಜಿಕ ಕಾರ್ಯಗಳೇ ನಂತರದ ದಿನಗಳಲ್ಲಿ ನೆನಯಲಾಗುತ್ತದೆ. ಆ ಸಾಲಿನಲ್ಲಿ ಶ್ರೀದೇವಿ ಮೋಹನ್ ಅವರ ಜೀವನ ನಮಗೆಲ್ಲಾ ಮಾದರಿಯಾಗಿದ್ದು ಪ್ರತಿಯೊಬ್ಬರು ಸಾಮಾಜಿಕ ಕಾರ್ಯಗಳನ್ನು ಮಾಡು ವಲ್ಲಿ ಮುಂದಾದರೆ ನಂತರ ದಿನಗಳಲ್ಲಿ ಉನ್ನತ ಹೆಸರು ಸಂಪಾದಿಸಲು ಸಾಧ್ಯ ಎಂದು ತಿಳಿಸಿದರು.

Chikmagalur ಚಿಕ್ಕಮಗಳೂರು ನಗರಸಭಾ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ಕೆಲವೊಂದು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರನ್ನು ಸೇರಿಸುವುದು ಬಹಳ ಕಷ್ಟಕರವಾಗಿರುತ್ತದೆ. ಆದರೆ ಶ್ರೀದೇವಿ ಮೋಹನ್ ಅವರ ಜನಪರ ಕಾಳಜಿ ಹಾಗೂ ಸಾಮಾಜಿಕ ಸೇವೆ ಸಲ್ಲಿಸಿರುವ ಪರಿಣಾಮ ಅವರ ನುಡಿನಮನ ಕಾರ್ಯಕ್ರಮಕ್ಕೆ ಅತಿಹೆಚ್ಚು ಮಂದಿ ಆಗಮಿಸಿ ಅವರನ್ನು ನೆನೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಕನ್ನಡಪರ ಹೋರಾಟ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೋಹನ್ ಅವರಿಗೆ ಆಹ್ವಾನಿಸಿದರೆ ತಮ್ಮ ವೈಯಕ್ತಿಕ ಎಷ್ಟೇ ಕೆಲಸಗಳಿದ್ದರೂ ಅವುಗಳನ್ನು ಬದಿಗೊತ್ತಿ ಯುವಮುಂದಾಳಾಗಿ ತಕ್ಷಣವೇ ಧಾವಿಸುತ್ತಿದ್ದರು. ಜೊತೆಗೆ ಶ್ರೀದೇವಿ ಯುವಕರ ಸಂಘದಿಂದ ಸಾಮಾಜಿಕ ಸೇವೆ ಜೊತೆಗೆ ಶಾಶ್ವತ ಕೆಲಸವನ್ನು ನಿಭಾಯಿಸಿ ಸೈ ಎನಿಸಿ ಕೊಂಡವರು ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಹಳ್ಳಿಕಾರ ಯುವಕರ ಸಂಘದ ಕೋಟೆ ಸೋಮಣ್ಣ, ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ, ಕಸಾಪ ತಾಲ್ಲೂಕು ಸೋಮಶೇಖರ್, ದೇವಿ ಯುವಕರ ಸಂಘದ ಸಂಚಾಲಕ ಹೆಚ್.ಎಂ.ಓಂಕಾರಮೂರ್ತಿ, ಪ್ರಧಾನ ಕಾರ್ಯದರ್ಶಿ ಹೆಚ್.ವೈ.ಮೋಹನ್‌ಕುಮಾರ್, ಟೌನ್ ಕೋ ಆಪರೇಟಿವ್ ಮಾಜಿ ಅಧ್ಯಕ್ಷ ಗಿರಿಧರ್ ಯತೀಶ್, ಕಾಂಗ್ರೆಸ್ ಮುಖಂಡ ಹಿರೇಮಗಳೂರು ರಾಮಚಂದ್ರ, ಸಾಹಿತಿ ನಾಗರಾಜ್ ರಾವ್ ಕಲ್ಕಟ್ಟೆ, ಮುಖ್ಯಶಿಕ್ಷಕ ಅಶೋಕ್, ಲಯನ್ಸ್ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಎಲ್.ವಿ.ಕೃಷ್ಣಮೂರ್ತಿ, ಆಟೋ ಮೋಹನ್, ಬಿಜೆಪಿ ಮುಖಂಡ ಬಸವರಾಜ್, ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kuvempu University ರೀಸರ್ಚ್ ಡಾಟ್ ಕಾಂ ಕರ್ತೃ ಡಾ.ಬಿ.ಜೆ.ಗಿರೀಶ್ ಅವರಿಗೆ ಉತ್ತಮ ಸಂಶೋಧಕ ಮನ್ನಣೆ

0

Kuvempu University ಅಂತಾರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್‌ತಾಣವು ಬಿಡುಗಡೆಗೊಳಿಸಿರುವ ಉತ್ತಮ ಸಂಶೋಧಕರ ವರದಿಯಲ್ಲಿ ಶಂಕರಘಟ್ಟ ಕುವೆಂಪು ವಿವಿಯ ಡಾ. ಬಿ ಜೆ ಗಿರೀಶ್ ಭಾರತದಲ್ಲಿಯೇ ಅಗ್ರ 8ನೇ ಸ್ಥಾನ ಪಡೆದಿದ್ದಾರೆ.

ರಿಸರ್ಚ್ ಡಾಟ್ ಕಾಂ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿಜ್ಞಾನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುವ ಖ್ಯಾತ ತಾಣವಾಗಿದೆ. ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿರುವ ವರದಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಜೆ. ಗಿರೀಶ್ ಭಾರತದ ಉತ್ತಮ ಸಂಶೋಧಕರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದಾರೆ.

238 ಸಂಶೋಧನಾ ಲೇಖನ ಪ್ರಕಟಿಸಿದೆ. 6000ಕ್ಕೂ ಅಧಿಕ ಬಾರಿ ಅವು ಸಂಶೋಧಕರುಗಳಿಂದ ಮರು ಉಲ್ಲೇಖ, ಪರಾಮರ್ಶನ ಕಂಡಿವೆ. ಒಟ್ಟು ಡಿ-ಇಂಡೆಕ್ಸ್ನಲ್ಲಿ 43 ಅಂಕಗಳನ್ನು ಗಳಿಸಿದ್ದಾರೆ.

ಜಾಗತಿಕವಾಗಿ 942ನೇ ಸ್ಥಾನದಲ್ಲಿರುವ ಅವರು ಭಾರತದ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನ ಪಡೆದಿದ್ದಾರೆ.

Kuvempu University ಥರ್ಮೊಡೈನಾಮಿಕ್ಸ್, ಮೆಕ್ಯಾನಿಕ್ಸ್, ಶಾಖ ಪ್ರಸರಣೆ ವಿಷಯ ಮತ್ತು ಉಪವಿಷಯಗಳಲ್ಲಿನ ಅವರ ಸಂಶೋಧನಾ ಪ್ರಖರತೆಯನ್ನು ಗಮನಿಸಿ ಈ ಸ್ಥಾನವನ್ನು ನೀಡಿರುವುದಾಗಿ ರಿಸರ್ಚ್ ಡಾಟ್ ಕಾಂ ತಿಳಿಸಿದೆ.

ಸಂಸ್ಥೆಯು ಸಂಶೋಧನೆಯ ಗುಣಮಟ್ಟ ಮತ್ತು ಪರಾಮರ್ಶನವನ್ನು ಗಮನಿಸಿ ರ‍್ಯಾಂಕಿಂಗ್ ಹಾಗೂ ಡಿ-ಇಂಡೆಕ್ಸ್ ನೀಡುತ್ತದೆ. ಕಳೆದ ಹಲವು ವರ್ಷಗಳಿಂದ ವಿವಿಯು ಸಂಶೋಧನೆಯಲ್ಲಿ ಉತ್ತಮ ಸಾಧನೆಗೈಯುತ್ತಿದ್ದು, ಡಾ. ಗಿರೀಶ್ ಬಿ .ಜೆ ಸಾಧನೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿನಂದಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

National Dewoming Programme ಮಾರ್ಚ್ 13 ರಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ

0

National Deworming Programme ಮಾರ್ಚ್ 13 ರಿಂದ 25 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಮಾ.13 ರ ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗದ ಗುರುಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ನೇರವೇರಿಸಲಾಗುತ್ತದೆ.

National Deworming Programme ಶಿವಮೊಗ್ಗ ಜಿಲ್ಲೆಯಲ್ಲಿರುವ 01 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ಅಂಗನವಾಡಿ, ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು, ಐಟಿಐ ಕಾಲೇಜ್, ಟೆಕ್ನಿಕಲ್ ಕಾಲೇಜ್(ಡಿಪ್ಲೊಮಾ, ಬಿಇ), ನರ್ಸಿಂಗ್ ಕಾಲೇಜ್, ಪ್ರಥಮ ಬಿ.ಎ. ಕಾಲೇಜ್, ಮೆಡಿಕಲ್ ಕಾಲೇಜ್ ಮತ್ತು ಆಯುರ್ವೇದಿಕ್ ಕಾಲೇಜುಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ, ಸದರಿ ವಯಸ್ಸಿನ ಶಾಲೆ ಬಿಟ್ಟ ಮಕ್ಕಳಿಗೆ ಸಂಬಂಧಪಟ್ಟ ಅಂಗನವಾಡಿಗಳಲ್ಲಿ ಆಲ್ಬೆಂಡಝೋಲ್ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಇದರ ಉಪಯೋಗವನ್ನು ಜಿಲ್ಲೆಯ ಎಲ್ಲಾ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಪೋಷಕರು ಕೊಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಕೋರಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Women’s Achievement ಹೆಣ್ಣಿನ ಸಾಧನೆಗಳನ್ನ ಸದಾ ಗೌರವಿಸಬೇಕು- ಕೆ.ಇ.ಕಾಂತೇಶ್

0

Women’s Achievement  ಶಿವಮೊಗ್ಗ: ಸಮಯಕ್ಕೆ ತಕ್ಕಂತೆ ನಿರ್ಧಾರ, ಸಮಯಕ್ಕೆ ಆದ್ಯತೆ, ಜೊತೆಗೆ ಮನೆಗೆ ಆದ್ಯತೆ ನೀಡುವ ಮಹಿಳೆಯರು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಜಿ.ಪಂ. ಮಾಜಿ ಸದಸ್ಯರು ಮತ್ತು ಸ್ಟೈಲ್ ಡಾನ್ಸ್ ಗ್ರೂಪ್ ಸಂಸ್ಥೆಯ ಅಧ್ಯಕ್ಷರು ಕೆ.ಇ.ಕಾಂತೇಶ್ ಅವರು ಹೇಳಿದರು.

ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ ನೃತ್ಯ ಸಂಸ್ಥೆಯ ವತಿಯಿಂದ “ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ” ನೃತ್ಯ ತರಗತಿಯ ವಿದ್ಯಾರ್ಥಿಗಳ ಮಹಿಳಾ ಪೋಷಕರೊಂದಿಗೆ ಸೇರಿ “ಸ್ಟೈಲ್ ಕುಟುಂಬ ಅವಾರ್ಡ್ 2023” ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿಯಿಂದಲೇ ಸೃಷ್ಟಿಯಾಗಿರುವ ನಾವುಗಳು, ಮನುಷ್ಯ ಜನ್ಮವನ್ನು ಪಡೆದುಕೊಂಡು ಬಂದಿದ್ದೇವೆ. ಹೆಣ್ಣಾಗಲೀ, ಗಂಡಾಗಲೀ ಹೆಣ್ಣಿನ ಸಾಧನೆಯನ್ನು ಸದಾ ಗೌರವಿಸಬೇಕು. ಕೇವಲ ಹೆಣ್ಣನ್ನು ಪೂಜಿಸುವುದಷ್ಟೇ,ಅಲ್ಲದೇ, ಆಕೆಯನ್ನು ಗೌರವದಿಂದ ಕಂಡಾಗ ಮಾತ್ರ ಈ ದಿನಾಚರಣೆಗೆ ಅರ್ಥ ಬರುವಂತಾಗುತ್ತದೆ. ಹೆಣ್ಣು ಸಮಾಜದ ಕಣ್ಣಾಗಿದ್ದಾಳೆ. ಸಮಾಜದಲ್ಲಿ ಹೆಣ್ಣನ್ನು ಉನ್ನತ ಸ್ಥಾನದಲ್ಲಿ ಕಾಣುತ್ತಿದ್ದೇವೆ ಎಂದರು.

ಸ್ಟೈಲ್ ಡ್ಯಾನ್ಸ್ ನೃತ್ಯ ಸಂಸ್ಥೆಯಲ್ಲಿರುವ ಮಹಿಳಾ ಪೋಷಕರು, ಯುವತಿಯರಿಗೆ ನಮ್ಮ ಸಾಧಕರು ಎಂಬ ಪ್ರಶಸ್ತಿ ಕೊಟ್ಟು ಸಂಸ್ಥೆಯ ಮೂಲಕ ಗುರುತಿಸುತ್ತಿರುವುದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯ ಎಂದು ಹೇಳಿದರು.

“ಯುವ ಸಾಧಕ ಅವಾರ್ಡ್ ಮತ್ತು “ನಮ್ಮ ಸಾಧಕರು” ಎಂಬ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ಸಂಸ್ಥೆಯ ಅಧ್ಯಕ್ಷ ಕೆ .ಈ ಕಾಂತೇಶ್ ಅವರು ನೀಡಿ ಗೌರವಿಸಿದರು.

Women’s Achievement  ಮಹಿಳೆಯರ ಆತ್ಮರಕ್ಷಣೆಗಾಗಿ ” ಸೆಲ್ಫ್ ಡಿಫೆನ್ಸ್” ತರಗತಿಯನ್ನು ಅಂತರಾಷ್ಟೀಯ ಕರಾಟೆ ಪಟು “ಮೀನಾ” ಅವರು ನಡೆಸಿ ಮಹಿಳಾ ಆತ್ಮರಕ್ಷಣೆಯ ಕೆಲವು ಕೌಶಲ್ಯತೆ ಮತ್ತು ಭಂಗಿಯನ್ನು ಕಲಿಸಿಕೊಟ್ಟರು.
ಈ ಮೂಲಕ ಪ್ರಶಸ್ತಿ ಪಡೆದ ಫಿಟ್ನೆಸ್ ವಿಭಾಗದ ವಿದ್ಯಾರ್ಥಿನಿಯರಿಗೆ , ಡಾನ್ಸ್ ವಿಭಾಗ ವಿದ್ಯಾರ್ಥಿನಿಯರಿಗೆ ಮತ್ತು ಭಾಗವಹಿಸಿದ ಪ್ರತಿಯೊಬ್ಬ ಪೋಷಕಿಯರು ಸಂಸ್ಥೆಯ ಅಧ್ಯಕ್ಷರಾದ ಕೆ ಈ ಕಾಂತೇಶ್ ಮತ್ತು ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಎನ್ ಅವರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನೃತ್ಯ ನಿರ್ದೇಶಕರುಗಳಾದ ವಿನಯ್ , ಜೀತೇಂದ್ರ, ದರ್ಶನ್ ಮತ್ತು ಅಕ್ಷಯ್ ಕುಮಾರ್ , ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga News – ಮಡಿವಾಳ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮನ್ನಣೆ ನೀಡಲು ಹಕ್ಕೊತ್ತಾಯ

0

Shivamogga News : ಡಾ.ಅನ್ನಪೂರ್ಣಮ್ಮ ರವರ ವರದಿಯನ್ನು ಜಾರಿಗೊಳಿಸಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡುತ್ತೇವೆಂದು ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸದಾಶಿವಪ್ಪ ಆಗ್ರಹಿಸಿದರು.

ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದರೇ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ. ಇದನ್ನು ಅರಿತು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.

ಮಡಿವಾಳ ಸಮಾಜ ರಾಜಕೀಯ ಬೆಳವಣಿಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯದ ಕನಿಷ್ಠ 5 ಅಭ್ಯರ್ಥಿಗಳಿಗೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಗ್ರಾಮೀಣ ಪ್ರದೇಶದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ನಗರದಲ್ಲಿ ಹಾಸ್ಟೆಲ್ ನಿರ್ಮಾಣಕ್ಕಾಗಿ ರೂ. ಕೋಟಿ ಅನುದಾನ ಹಣವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

Shivamogga News ನಮ್ಮ ಸಮುದಾಯವರು ಎಲ್ಲಾ ಮುಂಚೂಣಿ ರಾಜಕೀಯ ನಾಯಕರು ನಮ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಹೊರತು ಅದನ್ನು ಬಿಟ್ಟು ಸಮುದಾಯ ಚಟುವಟಿಕೆ ವಿರುದ್ಧ ಇಲ್ಲಸಲ್ಲದನ್ನು ಮಾತನಾಡುವುದು, ಸಮಾಜದ ಹೆಸರು ಹೇಳಿಕೊಂಡು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸಮಾಜ ಬಾಂಧವರ ವಿರುದ್ದ ಇಲ್ಲಸಲ್ಲದನ್ನು ಸೃಷ್ಟಿ ಮಾಡಿಕೊಂಡು ಪಿತೂರಿ ಮಾಡುವುದು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸಂದರ್ಭದಲ್ಲಿ ವೃತ್ತಿಪರ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾದ ಚೌಡಪ್ಪ, ಉಪಾಧ್ಯಕ್ಷರಾದ ಸುಧೀರ್, ಹನುಮಂತಪ್ಪ ಭದ್ರಾವತಿ, ಸಂಚಾಲಕರಾದ ಚಂದ್ರುಶೇಖರ್, ಕುಮಾರ್, ತನುಜ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Blood Donation ರಕ್ತದಾನದಿಂದ ಹೃದಾಯಾಘಾತ ಸಂಭವ ಕಡಿಮೆ-ಡಾ.ವೀಣಾ ಹೇಮಂತ್

0

Blood Donation  ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ ಕೆಲಸವಾಗಿದ್ದು, ರಕ್ತದಾನ ಮಾಡುವುದರಿಂದ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಸೇವೆ ಸಲ್ಲಿಸಿದಂತಾಗುತ್ತದೆ. ಕಾಲ ಕಾಲಕ್ಕೆ ರಕ್ತದಾನದ ಅಭ್ಯಾಸ ಮಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮೆಗ್ಗಾನ್ ಭೋದನಾ ಜಿಲ್ಲಾ ಆಸ್ಪತ್ರೆಯ ರಕ್ತಕೇಂದ್ರದ ವೈದ್ಯೆ ಡಾ. ವೀಣಾ ಹೇಮಂತ್ ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಒಕ್ಕಲಿಗರ ವೇದಿಕೆ ವತಿಯಿಂದ ಪಂಪಾ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಹಾಗೂ ನೇತ್ರದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಾಂಶ ಕಡಿಮೆಯಾಗಿ ಉತ್ತಮ ಆರೋಗ್ಯ ಹೊಂದಲು ಸಹಕಾರಿ ಆಗುತ್ತದೆ. ರಕ್ತದಾನದಿಂದ ಹೃದಯಾಘಾತ ಸಂಭವ ಕಡಿಮೆ ಹಾಗೂ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇತರರ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಸುಪ್ರಿಯಾ ರಾಮಪ್ಪ ಮಾತನಾಡಿ, ಪ್ರತಿಯೊಬ್ಬರು ನೇತ್ರದಾನ ಮಾಡುವ ಸಂಕಲ್ಪ ಮಾಡಬೇಕು. ಇದರಿಂದ ಇನ್ನೊಬ್ಬರ ಬದುಕಿಗೆ ಬೆಳಕು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Blood Donation  ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನೇತ್ರದಾನ ಮತ್ತು ರಕ್ತದಾನದ ಜಾಗೃತಿ ಮೂಡಿಸುವ ಮೂಲಕ ಆಚರಿಸುತ್ತಿರುವುದು ಅತ್ಯಂತ ಅಭಿನಂದನೀಯ. ಯುವಜನತೆ ಕಾಲ ಕಾಲಕ್ಕೆ ರಕ್ತದಾನ ಮಾಡಬೇಕು ಎಂದು ತಿಳಿಸಿದರು.

ಕಾರ್ಯದರ್ಶಿ ರಚನಾ ಸಂತೋಷ್, ಖಜಾಂಚಿ ಮಹಿಮಾ ಪ್ರಶಾಂತ್, ಗೌರವಾಧ್ಯಕ್ಷೆ ಅಂಜು ಸುರೇಶ್, ಶೃತಿ ಗೌತಮ್, ಅರ್ಚನಾ, ಸಿಂಧು ಕಿಶೋರ್, ಕಾವ್ಯಾ ಸತೀಶ್, ಜ್ಯೋತಿ ಸುಬ್ಬೇಗೌಡ, ಸುರಭಿ, ಶೈಲಾ ವಾಸುದೇವ್, ಛಾಯಾ ಜಯಂತ್, ರಚನಾ ಪ್ರೀತಮ್, ರಂಜಿತಾ ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಯೂನಿಟ್ ರಕ್ತದಾನ ಮಾಡಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.