Thursday, April 9, 2026
Thursday, April 9, 2026
Home Blog Page 1284

Nitin Gadkari ದಶಪಥ ರಸ್ತೆಯಿಂದ ಬೆಂಗಳೂರಿಂದ ಮೈಸೂರಿಗೆ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ

0

Nitin Gadkari  ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಹಳೆ ರಸ್ತೆಗಳನ್ನು ದುರಸ್ತಿಗೊಳಿಸುವ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತಮಿಳುನಾಡಿನವರೆಗೂ ಹೆದ್ದಾರಿ ನಿರ್ಮಾಣವಾಗಲಿದೆ. ಎಂಟು ಕಿಲೋಮೀಟರ್ ಎಲಿವೇಟೆಡ್ ನಿರ್ಮಾಣ ಮಾಡಿದ್ದೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ನೂತನವಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಗೊಳಿಸಿದ್ದಾರೆ.8, 476 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ 118 ಕಿಲೋಮೀಟರ್ ಉದ್ದದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Nitin Gadkari ಈ ಹೊಸ ರಸ್ತೆಯಿಂದ ಬೆಂಗಳೂರಿನಿಂದ ಮೈಸೂರಿಗೆ ಒಂದು ಗಂಟೆಯಲ್ಲಿ ಪ್ರಯಾಣ ಸಾಧ್ಯವಾಗಲಿದೆ. ಬೆಂಗಳೂರಿನಲ್ಲಿ 17000 ಕೋಟಿ ರೂಪಾಯಿಗಳು ರಸ್ತೆ ನಿರ್ಮಾಣವಾಗಿದೆ. ಇದು ಮೈಸೂರಿಗೆ ನೇರ ಪ್ರಯಾಣಕ್ಕೆ ನೆರವಾಗಲಿದೆ ಎಂದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Klive Article ಮನಸ್ಸಿನಿಂದ ಮನಸ್ಸಿಗೆ-19

0

Klive Article ಅನಿರೀಕ್ಷಿತ ರೋಗಗಳು ಮತ್ತು ಸಾವುಗಳ ಸುತ್ತಾ ನಿಜ ಬದುಕಿನ ಹುಡುಕಾಟ………..

ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು…..

ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು. ನಂತರದಲ್ಲಿ 70 ರ ಆಸುಪಾಸಿನ ವಯಸ್ಸು, ತದನಂತರ 60 ರ ಸುತ್ತಮುತ್ತಲಿನ ವಯಸ್ಸು, ಇತ್ತೀಚಿನ ವರ್ಷಗಳಲ್ಲಿ 40/50 ರ ವಯಸ್ಸಿನಲ್ಲಿಯೇ ಅನಾರೋಗ್ಯ ಮತ್ತು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಕೆಲವೊಮ್ಮೆ 30/40 ರ ನಡುವೆಯೂ ಪ್ರಕರಣಗಳು ಹೆಚ್ಚಾಗುತ್ತಿವೆ…..

ಇದು ಅನಿರೀಕ್ಷಿತವಲ್ಲ. ಬಹುತೇಕ ನಿರೀಕ್ಷಿತವೇ. ಕಳೆದ 15/20 ವರ್ಷಗಳ ಜೀವನ ಶೈಲಿಯ ದುಷ್ಪರಿಣಾಮ ಈಗ ನಿಧಾನವಾಗಿ ನಮ್ಮ ಮೇಲೆ ಪ್ರಭಾವ ಬೀರತೊಡಗಿದೆ. ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಆದರೆ ಸಮಸ್ಯೆಯ ಮೂಲವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಅತ್ಯಂತ ಮೂಲಭೂತ ಸಮಸ್ಯೆ ಎಂದರೆ ಮನುಷ್ಯ ಹೆಚ್ಚು ಶಿಕ್ಷಣ ಪಡೆದು ಅಕ್ಷರಸ್ಥನಾದಷ್ಟು ಸಾಮಾಜಿಕ ಸ್ಪಂದನೆ ತುಂಬಾ ಕಡಿಮೆಯಾಗಿದೆ. ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಸಂದರ್ಭದಲ್ಲೂ ನೇರ ಪ್ರತಿಕ್ರಿಯೆ ಬಹುತೇಕ ನಾಶವಾಗಿದೆ. ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಒಂದಷ್ಟು ಉಡಾಫೆ ಅಭಿಪ್ರಾಯ ವ್ಯಕ್ತಪಡಿಸುವುದು ಬಿಟ್ಟರೆ ಸಮಗ್ರ ಚಿಂತನೆಯ ಒಳನೋಟ ಮಾಯವಾಗಿ ಸಂಕುಚಿತ ಮನೋಭಾವ ಬೆಳೆದಿದೆ……..

ಆರ್ಥಿಕ ಗುಲಾಮಿತನದ ಸುಳಿಗೆ ಸಿಲುಕಿ ತಾನು ತನ್ನ ಕುಟುಂಬ ಎಂಬುದಷ್ಟೇ ಆತನ ಆದ್ಯತೆಯಾಗಿದೆ. ಅದರ ಪರಿಣಾಮ ಒಂದು ಸ್ವಂತ ಮನೆ, ಕಾರು, ನಿಶ್ಚಿತ ತಿಂಗಳ ಆದಾಯ ಗಳಿಸಲು ತನ್ನ ಬದುಕಿನ ಗುರಿಯನ್ನು ನಿಗದಿಪಡಿಸಿಕೊಂಡಿದ್ದಾನೆ. ಸಮಯದ ಮಿತಿ ಇಲ್ಲದೇ ಬಹುತೇಕ ಕುಟುಂಬದ ಎಲ್ಲಾ ವಯಸ್ಕರು ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಪರಿಣಾಮ ಸುತ್ತಮುತ್ತಲಿನ ಒಟ್ಟು ಆಗುಹೋಗುಗಳಿಗೆ ಆತ ಹೆಚ್ಚು ಕಡಿಮೆ ಕುರುಡಾಗಿದ್ದಾನೆ.

ಇದರ ಲಾಭ ಪಡೆಯಲು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸರ್ಕಾರಗಳು ಅಭಿವೃದ್ಧಿ ಎಂಬ ಬಲೆ ಬೀಸಿದರು. ಶಿಕ್ಷಣ ದುಬಾರಿಯಾಯಿತು, ಗ್ಯಾಸ್ ವಿದ್ಯುತ್ ನೀರು ಮನೆ ಬಾಡಿಗೆ ಜೀವ ವಿಮೆ ಮೊಬೈಲ್ ಇಂಟರ್ನೆಟ್ ಬೆಲೆ ಹೆಚ್ಚು ಮತ್ತು ಅನಿವಾರ್ಯಿತು, ಸಿಮೆಂಟ್ ಕಬ್ಬಿಣ, ಫರ್ನೀಚರ್, ಲೈಟ್ಸ್, ಇಂಟೀರಿಯರ್ ಮುಂತಾದ ಮನೆ ನಿರ್ಮಾಣ ಗಗನಕ್ಕೇರಿತು. ತೆರಿಗೆ, ಆರೋಗ್ಯ, ಮದುವೆ ಖರ್ಚುಗಳು ಎಲ್ಲವೂ ಹೆಚ್ಚಾಗುತ್ತಲೇ ಇದೆ. ಇದೆಲ್ಲದರ ಪರಿಣಾಮ ಸಮಯದ ಒತ್ತಡಕ್ಕೆ ಸಿಲುಕಿದ. ಸಾಮಾಜಿಕ ಸೂಕ್ಷ್ಮತೆ ಕಳೆದುಕೊಂಡು ಬಹುತೇಕ ನಿರ್ವೀರ್ಯನಾದ…..

ಯಾವಾಗ ಆತ ತನ್ನ ಸಂವೇದನಾ ಶೀಲತೆಯನ್ನು ಕಳೆದುಕೊಂಡು ಹಣ ಕೇಂದ್ರಿತ ಮನಸ್ಥಿತಿ ಬೆಳೆಸಿಕೊಂಡನೋ ಆಗಲೇ ಅವನ ದೈಹಿಕ ಮತ್ತು ಮಾನಸಿಕ ಅಧೋಗತಿ ಪ್ರಾರಂಭವಾಯಿತು….

ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ವಿಷಯುಕ್ತವಾಯಿತು. ಶ್ವಾಸ ಕೋಶ, ರಕ್ತನಾಳಗಳು, ನರಮಂಡಲ, ಕರುಳು, ಹೃದಯ ಸೇರಿ ಎಲ್ಲವೂ ಶಿಥಿಲವಾಗತೊಡಗಿತು. ತಂತ್ರಜ್ಞಾನದ ಅಭಿವೃದ್ಧಿ ದೇಹದ ಚಲನೆಯನ್ನು ನಿಯಂತ್ರಿಸಿತು. ಒತ್ತಡ ದೇಹದ ತೂಕವನ್ನು ಹೆಚ್ಚಿಸಿತು. ಹಣ ನಮ್ಮನ್ನೇ ಖರೀದಿ ಮಾಡಿತು. ದುರ್ಬಲಗೊಂಡ ದೇಹ ಮತ್ತು ಮನಸ್ಸು ರೋಗಗಳ ಗೂಡಾಯಿತು……

ಹಳೆ ಖಾಯಿಲೆಗಳ ಜೊತೆ ಹೊಸ ಖಾಯಿಲೆಗಳು ಸೃಷ್ಟಿಯಾದವು. ವೈದ್ಯಕೀಯ ಕ್ಷೇತ್ರ ಹೆಚ್ಚು ಮುಂದುವರಿದಷ್ಟು ಆರೋಗ್ಯವಂತರ ಸಂಖ್ಯೆ ಕಡಿಮೆಯಾಯಿತು. ( Medical science is so advanced that only few healthy people is living in this earth.)

ಮೆಟ್ರೋ, ಫ್ಲೈ ಓವರ್, ದಶಪಥ ರಸ್ತೆ, ಡಿ ಮಾರ್ಟ್, ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ, ಅದ್ಬುತ ಕಟ್ಟಡಗಳು, ವೇಗದ ವಾಹನಗಳು, ಹೈಟೆಕ್ ಆಸ್ಪತ್ರೆಗಳು, ಶಾಪಿಂಗ್ ಮಾಲ್ ಗಳು ಮುಂತಾದ ಕೆಲಸಗಳನ್ನು ಅತ್ಯಂತ ಸಂಭ್ರಮಿಸುವ ಜನಗಳು, ಮನುಷ್ಯ ದೇಹವನ್ನು ಅತ್ಯಂತ ಕಾಡುತ್ತಿರುವ ಆಹಾರದ ಕಲಬೆರಕೆ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಆರೋಗ್ಯ ವಿಮೆ ಮತ್ತು ಆಸ್ಪತ್ರೆಗಳ ಖರ್ಚಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ತೀರಾ ವಿಚಿತ್ರವೆಂದರೆ,
ಸ್ವಂತ ಮನೆಯಲ್ಲಿ ವಾಸಿಸುವ ಜೀತದಾಳುಗಳು, ಕಾರಿನಲ್ಲಿ ಓಡಾಡುವ ಜೀತದಾಳುಗಳು, ಅತ್ಯಧಿಕ ಸಂಬಳ ಪಡೆಯುವ ಜೀತದಾಳುಗಳು, ದೊಡ್ಡ ಅಧಿಕಾರದಲ್ಲಿ ಇರುವ ಜೀತದಾಳುಗಳು, ಡಾಕ್ಟರೇಟ್ ಮಾಡಿಯೂ ಜೀತದಾಳುಗಳಾಗಿರುವವರು ಇತ್ಯಾದಿ ಇತ್ಯಾದಿ ಆಧುನಿಕ ಜೀತದಾಳು ಸಮುದಾಯಗಳು ಸೃಷ್ಟಿಯಾಗಿವೆ. ಅವು ಎಲ್ಲಾ ಕ್ಷೇತ್ರಗಳಲ್ಲೂ ಇದೆ…..

ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಜೀವಂತ ಶವಗಳಂತೆ ಬದುಕುತ್ತಿರುವ ಅಸಂಖ್ಯಾತ ಮನುಷ್ಯ ಪ್ರಾಣಿಗಳು ಈಗ ಅನಿರೀಕ್ಷಿತ ರೋಗ ಸಾವುಗಳಗೆ ಆತಂಕ ಎದುರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ತನ್ನ ವಾಹನದ ಸುರಕ್ಷತೆ ಮತ್ತು ಇಂಧನದ ಉಳಿತಾಯದಲ್ಲಿ ಸುಖ ಬಯಸುವ, ಫ್ಲೈ ಓವರ್ ಕೆಳಗೆ ನಾಶವಾಗುತ್ತಿರುವ ತನ್ನ ಅನ್ನದಾತನ ಬದುಕಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುವ ದುರಹಂಕಾರಿ ಮನುಷ್ಯ ಪ್ರಜ್ಞೆ, ಬದಲಾದ ಸುಖದ ಸ್ಪರ್ಶದ ಕಲ್ಪನೆ, ಆತನ ‌ಪಂಚೇಂದ್ರಿಯಗಳ ಕಾರ್ಯವಿಧಾನದ ಬಗ್ಗೆಯೇ ಅನುಮಾನ ಮೂಡಿಸಿದೆ…..

ನಿಜವಾದ ಅಭಿವೃದ್ಧಿ ಆರೋಗ್ಯವಂತ‌ ದೇಹ, ಸ್ವಸ್ಥ ಮನಸ್ಸು, ನೆಮ್ಮದಿ ಸಂತೋಷದ ಬದುಕು, ಪ್ರೀತಿಯ ಸಂಬಂಧಗಳು, ಸುರಕ್ಷತೆಯ ಭಾವ, ಬದುಕಿನ ಸಾರ್ಥಕತೆಯ ಕ್ಷಣಗಳ ಹೆಚ್ಚಳವೇ ಹೊರತು ಸ್ವಾತಂತ್ರ್ಯ ಕಳೆದುಕೊಂಡ ನಿದ್ರೆಯ ಕ್ಷಣಗಳು, ಊಟದ ಅವಧಿಗಳು, ಮೈಥುನದ ಸಮಯಗಳು, ವಿಶ್ರಾಂತಿಯ ಸನ್ನಿವೇಶಗಳು…..

Klive Article ಯೋಚಿಸುವ ಸರದಿ ನಮ್ಮದು. ಸಮೂಹ ಸನ್ನಿಗೆ ಒಳಗಾಗಿ ಮರೆಯಾಗುವ ಮುನ್ನ ಮತ್ತೊಮ್ಮೆ ನಮ್ಮನ್ನು ನಾವು ಹುಡುಕಿಕೊಳ್ಳೋಣ.
ಸಾಮಾಜಿಕ ಸನ್ನಿವೇಶಗಳಿಗೆ ನೇರವಾಗಿ ಪ್ರತಿಕ್ರಿಯಿಸೋಣ. ವ್ಯಾವಹಾರಿಕ ಜಗತ್ತಿನಲ್ಲಿ ಇದ್ದೂ ನಮ್ಮ ಮೇಲೆ ನಾವು ನಿಯಂತ್ರಣ ಪಡೆಯೋಣ. ಜೀತದಾಳು ಬದುಕಿಗೆ ಮುಕ್ತಿ ನೀಡಿ ಸ್ವಾತಂತ್ರ್ಯದ ತಂಗಾಳಿಗೆ ಮೈ ಮನಸ್ಸು ತೆರೆದು ಕೊಳ್ಳೋಣ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

B.S Yediyurappa ಪ್ರಧಾನಿ ಮೋದೀಜಿ ದೇಶಕ್ಕಾಗಿ ಅವಿಶ್ರಾಂತ ದುಡಿಯುತ್ತಿದ್ದಾರೆ- ಬಿ.ಎಸ್.ಯಡಿಯೂರಪ್ಪ

0

B.S Yediyurappa  ಭಾರತದಲ್ಲಿ ದೀನ- ದಲಿತರು, ಬಡವರು, ಮಹಿಳೆಯರ ಅಭಿವೃದ್ಧಿಗೆ ಕೇಂದ್ರ ರಾಜ್ಯ ಸರ್ಕಾರಗಳು ಬದ್ಧತೆಯಿಂದ ಕಾರ್ಯ ಮಾಡುತ್ತಿವೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತಮಾತೆಯ ಸೇವೆಯನ್ನು ರಜೆಪಡಿಯದೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರ ಪರಿಣಾಮ ದೇಶ ಪ್ರಪಂಚ ಮುಂದುವರಿದ ದೇಶದಲ್ಲಿ ಸಾಲಿನಲ್ಲಿ ಬಂದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

B.S Yediyurappa  ಲಿಂಗಸುಗೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಗಳ ಯೋಜನೆಗಳು ದೇಶದ ಪ್ರತಿ ಮನೆಯ ಪ್ರಜೆಗೂ ತಲುಪಿಸಲಾಗಿದೆ. ಬಿಜೆಪಿಗೆ ಇರುವ ಪದ್ಧತಿ ಎಂದು ಶ್ಲಾಘಿಸಿದರು ಶ್ಲಾಘಿಸಿದ್ದಾರೆ.

ಈ ಸಂದರ್ಭದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು, ಸಂಸದ ಅರಮರೇಶ್ವರ ನಾಯಕ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Ragi Gudda Shivamogga ಶಿವಮೊಗ್ಗ ಜಿಲ್ಲಾಡಳಿತವೇ ಇತ್ತ ಆಲಿಸಿ ರಾಗಿಗುಡ್ಡ ಉಳಿಸಿ

0

Ragi Gudda Shivamogga ರಾಗಿಗುಡ್ಡ ಉಳಿಸಿ ಆಂದೋಲನ ಕುರಿತು ಪೂರ್ವಭಾವಿ ಸಭೆಯನ್ನು ಶಿವಮೊಗ್ಗದ ನವ್ಯಶ್ರೀ ಅನ್ನಪೂರ್ಣ ಸಭಾಂಗಣದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಅನೇಕ ಪರಿಸರಾಸಕ್ತರು ಆಗಮಿಸಿದ್ದರು.

ಶಿವಮೊಗ್ಗ ನಗರದ ಶ್ವಾಸಕೋಶದಂತಿರುವ ಅಂತರ್ಜಲ ಮತ್ತು ಜೀವವೈವಿಧ್ಯತೆಯ ಜೀವನಾಡಿಯಾಗಿರುವ ರಾಗಿ ಗುಡ್ಡಕ್ಕೆ ಗಂಡಾಂತರ ಒದಗಿ ಬಂದಿದೆ. ಈ ನಿಟ್ಟಿನಲ್ಲಿ ಅನೇಕ ಪರಿಸರಾಸಕ್ತರು ರಾಗಿ ಗುಡ್ಡ ಉಳಿಸುವುದು ಶಿವಮೊಗ್ಗದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ತಮ್ಮ ಅಭಿಪ್ರಾಯಗಳನ್ನು ನಮ್ಮ ಕೆ ಲೈವ್ ನೊಂದಿಗೆ ಹಂಚಿಕೊಂಡರು.

ಶ್ರೀ. ನವ್ಯಶ್ರೀ ನಾಗೇಶ್, ನವ್ಯಶ್ರೀ ಈಶ್ವರ ವನ ಅವರ ಮಾತನಾಡಿ, ಶಿವಮೊಗ್ಗದ ರಾಗಿಗುಡ್ಡ ಜೀವ ವೈವಿಧ್ಯತೆಯ ತಾಣವಾಗಿದೆ. ರಾಗಿ ಗುಡ್ಡದಲ್ಲಿ ಸುಮಾರು 28ಕ್ಕೂ ಅಧಿಕ ಸಸ್ಯ ಪ್ರಭೇದಗಳಿವೆ. 18 ರಿಂದ 19 ಕ್ಕೂ ಹೆಚ್ಚು ಪ್ರಾಣಿ ಪ್ರಭೇದದ ವಾಸಸ್ಥಾನ ಇದಾಗಿದೆ. ಇಡೀ ರಾಗಿಗುಡ್ಡ,ಶಿವಮೊಗ್ಗಕ್ಕೆ ಆಮ್ಲಜನಕವನ್ನು ಸರಬರಾಜು ಮಾಡುವಂತಹ ಕೇಂದ್ರವಾಗಿದೆ. ಇಂತಹ ತಾಣವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಒದಗಿ ಬಂದಿದೆ ಎಂದರು.

ಡಾ. ನಾಗರಾಜ್ ಪರಿಸರ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಭಾಗದ ಮುಖ್ಯಸ್ಥರು ಮಾತನಾಡಿ, ರಾಗಿಗುಡ್ಡ
ಜೀವ ವೈವಿಧ್ಯತೆಯ ತಾಣ. ಇದನ್ನು ನಮ್ಮ ಸರ್ಕಾರ ಬೇರೆ ಬೇರೆ ಸಂಘ ಸಂಸ್ಥೆಗಳಿಗೆ ಹಂಚಿತ್ತಿರುವುದು ವಿಷಾದ ಸಂಗತಿ. ಇದನ್ನು ನಾವೆಲ್ಲರೂ ವಿರೋಧಿಸಬೇಕು. ಏಕೆಂದರೆ ಇರುವ ಪ್ರಾಕೃತಿಕ ಸಂಪತ್ತನ್ನ ಉಳಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.

ರಾಗಿ ಗುಡ್ಡದಿಂದ ಸುತ್ತಮುತ್ತಲು ಇರುವ ಎಲ್ಲಾ ಜನರಿಗೂ ನೈಸರ್ಗಿಕ ಸೌಲಭ್ಯಗಳು ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತವಾಗಿ ರಾಗಿ ಗುಡ್ಡವನ್ನು ಉಳಿಸಿಕೊಳ್ಳಬೇಕು. ನಮ್ಮ ನಮ್ಮ ಊರಿನ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಆದ್ದರಿಂದ ನಮ್ಮ ನಮ್ಮ ಊರಿನ ಮರ-ಗಿಡಗಳನ್ನ ಉಳಿಸಿಕೊಳ್ಳೋಣ ಎಂದರು.

Ragi Gudda Shivamogga ಪರಿಸರ ಸಂಸ್ಥೆಯ ಸದಸ್ಯರಾದ ಸತೀಶ್ ಅವರು ಮಾತನಾಡಿ, ಜನರ ಮೂಲಭೂತ ಹಕ್ಕುಗಳಲ್ಲಿ ಶುದ್ಧ ಗಾಳಿ, ನೀರು ಮುಖ್ಯವಾದುದ್ದು. ಶಿವಮೊಗ್ಗದ ಸುತ್ತಮುತ್ತಲಿನ ಜನರಿಗೆ ರಾಗಿ ಗುಡ್ಡವು ಈ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದ ನೈಸರ್ಗಿಕ ಸಂಪನ್ಮೂಲಗಳು ಕ್ಷೀಣಿಸುತ್ತಿದೆ. ಆದ್ದರಿಂದ ಸರ್ಕಾರ ಅಭಿವೃದ್ಧಿ ಯೋಜನೆಗಳ ಜೊತೆ ಜೊತೆಗೆ ಇಂತಹ ಗುಡ್ಡಗಳನ್ನ ಉಳಿಸಿಕೊಳ್ಳಬೇಕು ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ವಿನಂತಿ ಎಂದರು.

ಒಟ್ಟಿನಲ್ಲಿ ನೈಸರ್ಗಿಕ ಸಂಪನ್ಮೂಲದ ತಾಣವಾಗಿರುವ ರಾಗಿ ಗುಡ್ಡವನ್ನು ಉಳಿಸಿಕೊಳ್ಳಬೇಕು ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ವಿನಂತಿಯಾಗಿದೆ. ಇನ್ನಾದರೂ ಸರ್ಕಾರ ಅಭಿವೃದ್ಧಿ ಪಥದ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಉಳಿವಿನ ಕಡೆಗೂ ಲಕ್ಷ್ಯ ವಹಿಸಲಿ ಎಂಬುವುದು ನಮ್ಮ ಆಶಯ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

BJP Yuva Morcha ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಹುಲ್ ಗಾಂಧಿ ತ್ರಿವರ್ಣಧ್ವಜ ಹಾರಿಸಲು ಅವಕಾಶ ಮಾಡಿದ್ದು ಮೋದಿ ಸರ್ಕಾರ- ಬಿ.ವೈ.ವಿಜಯೇಂದ್ರ

0

BJP Yuva Morcha ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದಿಂದ ಯುವ ಸಂಕಲ್ಪ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು, ರಕ್ತದೊಕುಳಿ ನಡೆಯುತ್ತಿದ್ದ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದು ಬಿಜೆಪಿ ಸರ್ಕಾರ. ಭಾರತ ಏಕತಾ ಯಾತ್ರೆ ಮಾಡಿ ಕಾಶ್ಮೀರದ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ನೆಮ್ಮದಿಯಿಂದ ದೇಶದ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಎಂದರೆ ಅದಕ್ಕೆ ಮೋದಿ ಸರ್ಕಾರ ಕಾರಣ ಎಂದರು.

ಅಲ್ಪಸಂಖ್ಯಾತರನ್ನ ಒಲೈಸುವ ಕಾಂಗ್ರೆಸ್ನ ಸಿದ್ಧಾಂತದಿಂದಲೇ ಅದಕ್ಕೆ ಇಂತಹ ದುಸ್ಥಿತಿ ಬಂದಿದೆ. ಇಂತಹ ನಾವು ಭ್ರಷ್ಟಾಚಾರಿಗಳಿಂದ ಪಾಠ ಕಲಿಯಬೇಕಿಲ್ಲ ಎಂದರು.

BJP Yuva Morcha ಜನರ ಮುಂದೆ ಕೊಂಡೊಯ್ದು ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಭದ್ರಾವತಿ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದೇವೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಶಾಸಕರಾದ ಕೆ ಬಿ ಅಶೋಕ್ ನಾಯ್ಕ, ಕೆ.ಈ ಕಾಂತೇಶ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagalur ಚಿಕ್ಕಮಗಳೂರು ಬಸವನಹಳ್ಳಿಕೆರೆ ರಿಯಲ್ ಎಸ್ಟೇಟ್ ಸಂಸ್ಥೆಗೆ ವಹಿಸಬೇಡಿ

0

Chikmagalur  ಚಿಕ್ಕಮಗಳೂರು, ಜಿಲ್ಲೆಯ ಸೊಬಗನ್ನು ಹೆಚ್ಚಿಸುವ ಬಸವನಹಳ್ಳಿ ಕೆರೆಯನ್ನು ರಿಯಲ್ ಎಸ್ಟೇಟ್ ಮಾಡುವ ಉದ್ದೇಶದಿಂದ ಖಾಸಗೀ ಸಂಸ್ಥೆಗೆ ನೀಡಿ ಮೂಲಸೌಂದರ್ಯವನ್ನು ಹಾಳುಗೆಡವಲಾಗುತ್ತಿದೆ. ಈ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ಹೋರಾಟ ನಡೆಸಲು ಮುಂದಾಗಲಾಗಿದೆ ಎಂದು ವಕೀಲೆ ಟಿ.ಶ್ರೀದೇವಿ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ಕೆರೆಯನ್ನು ಬೆಂಗಳೂರು ಮಾದರಿಯ ಪ್ರಾಪರ್ಟಿ ಡೆವರ‍್ಸ್ಗಳಿಗೆ ಹಸ್ತಾಂತರ ಮಾಡಲಾಗಿದೆ. ಕೆರೆಯ ನ್ನು ಪುನರುಜ್ಜೀವನ ಮಾಡಹುದೇ ಹೊರತು ಡೆವಲಪ್ ಮಾಡಲು ಅವಕಾಶವಿಲ್ಲ. ಕೆರೆಕಟ್ಟೆಗಳನ್ನು ಅವುಗಳ ಪಾಡಿಗೆ ಬಿಡುವುದು ಸೂಕ್ತ ಎಂದು ಹೇಳಿದ್ದಾರೆ.

ಇಂದಿನ ಬಿರು ಬೇಸಿಗೆಯಲ್ಲಿ ನೀರಿನ ಮೂಲವನ್ನೇ ಮುಚ್ಚುತ್ತಿರುವುದನ್ನು ಎಲ್ಲರು ಪ್ರಶ್ನಿಸಬೇಕು. ಕೆರೆ, ಕಾಡು, ಹಾಗೂ ನದಿಗಳನ್ನು ಅಭಿವೃದ್ದಿಪಡಿಸುವುದು ಹೇಗೆ ಎಂದು ಜಿಲ್ಲಾಡಳಿತ ವಿವರಿಸಬೇಕು. ಕೆರೆಯ ಮೂಲ ಸ್ವರೂಪ ವನ್ನು ಉಳಿಸಿಕೊಂಡು ಹೋಗುವುದೇ ಅಭಿವೃದ್ದಿ. ಈಗಾಗಲೇ ಕೋಟೆಕೆರೆ ಅವನತಿಯತ್ತ ಸಾಗಿದ್ದು ಅದೇ ರೀತಿ ಯಲ್ಲಿ ಬಸವನಹಳ್ಳಿಕೆರೆಯನ್ನು ಅವನತಿಯತ್ತ ತೂಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂದೆ ರಾಜರು ಮತ್ತು ಬ್ರಿಟಿಷ್ ಆಡಳಿತದಲ್ಲಿಯೂ ಕೆರೆಕುಂಟೆಗಳ ನಿರ್ವಹಣೆ ಬಿಗಿಯಾಗಿರುತ್ತಿತ್ತು. ಹಾಗೂ ಜಲಮೂಲಗಳಿಗೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಆದರೆ ಇಂದು ಭಾರತೀಯ ಸಂಸ್ಕೃತಿಯ ಹರಿಕಾರರು ಎಂದು ಹೇಳಿಕೊಳ್ಳುವವರು ಕೋಟೆಕೆರೆ, ಅಯ್ಯನಕೆರೆ ಸೇರಿದಂತೆ ಇದೀಗ ಬಸವನಹಳ್ಳಿ ಕೆರೆಯನ್ನು ನುಂಗಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

Chikmagalur ಬಸವನಹಳ್ಳಿ ಕೆರೆಯ ಮೂಲ ಸ್ವರೂಪವನ್ನೇ ಈಗಾಗಲೇ ಅರ್ಧ ಬದಲಾಯಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿರುವುದನ್ನು ಗಮನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮೂಲಕ ಕೆರೆಯ ಅನವತಿಯನ್ನು ತಡೆಯುವಂತೆ ಹಾಗೂ ಮುಚ್ಚದಂತೆ ದಾವಾ ದಾಖಲಿಸಲಾಗಿದೆ ಎಂದಿದ್ದಾರೆ.

ಕೆರೆಯ ವಿಚಾರದಲ್ಲಿ ಮುಂದಾದರೂ ಜಿಲ್ಲೆಯ ಜನತೆ ಸಹಕಾರ ನೀಡಿ ಕೆರೆ ಉಳಿಸುವ ಪ್ರಯತ್ನಕ್ಕೆ ಕೈಜೋಡಿ ಸುವುದು ಸೂಕ್ತ ಹಾಗೂ ಮುಂದಿನ ದಿನಗಳಲ್ಲಿ ನ್ಯಾಯಯುತ ಹೋರಾಟಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagalur news ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ಸಿಬ್ಬಂದಿಯನ್ನ ಖಾಯಂಗೊಳಿಸಲು ಒತ್ತಾಯ

0

Chikmagalur news ರಾಷ್ಟ್ರೀಯ ಆರೋಗ್ಯದ ಅಭಿಯಾನದಡಿ ಒಳಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರು ಶಾಸಕ ಸಿ.ಟಿ.ರವಿ ಅವರಿಗೆ ಸ್ವಗೃಹದಲ್ಲಿ ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಒಳಗುತ್ತಿಗೆ ನೌಕರರಾದ ನಿತ್ಯಾಸ್ಪೂರ್ತಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಒಳಗುತ್ತಿಗೆ ನೌಕರರಾಗಿ ಕಳೆದ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕೋವಿಡ್‌ ನಂತರ ಮಾರಕ ಕಾಯಿಲೆ ಬಂದಾಗಲೂ ಒಳಗುತ್ತಿಗೆ ನೌಕರರು ತಮ್ಮ ಕರ್ತವ್ಯದ ಜೊತೆ ಸೋಂಕಿತರ ಆರೈಕೆ, ವ್ಯಾಕ್ಸಿನ್ ನೀಡುವ ಜೊತೆಯಲ್ಲಿ ಎಲ್ಲಾ ಸೇವೆಗಳನ್ನು ಮಾಡಲಾಗಿದೆ. ಆದರೂ, ಕೂಡಾ ರಾಜ್ಯ ಸರ್ಕಾರ ನೌಕರರ ಸೇವೆಯನ್ನು ಪರಿಗಣಿಸಿಲ್ಲ. ಸಾರ್ವಜನಿಕ ಆರೋಗ್ಯ ಕಾಪಾಡುವವರ ಬಗ್ಗೆ ಸರ್ಕಾರ ನಿರ್ಲಕ್ಸ್ಯ ವಹಿಸಿದ್ದು ಕೂಡಲೇ ನೌಕರರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

Chikmagalur news ಅಲ್ಪಮೊತ್ತದ ವೇತನದಲ್ಲಿ ಒಳಗುತ್ತಿಗೆ ನೌಕರರು ಕೌಟುಂಬಿಕ ಜೀವನ ನಡೆಸಲು ಕಷ್ಟರಕವಾಗಿದೆ. ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದ್ದರೂ ಕೂಡಾ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ. ಆ ನಿಟ್ಟಿನಲ್ಲಿ ರಾಜ್ಯ ಸಂಘವು ಫೆ.13 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ವನ್ನು ನಡೆಸುತ್ತಿದೆ ಎಂದು ತಿಳಿಸಿದರು.

ಒಡಿಸ್ಸಾ, ರಾಜಸ್ಥಾನ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಸರ್ಕಾರಗಳು ಈಗಾಗಲೇ ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸಿವೆ. ಅದೇ ರೀತಿ ರಾಜ್ಯದಲ್ಲೂ ಕೂಡಾ ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಳಗುತ್ತಿಗೆ ನೌಕರರ ಪದಾಧಿಕಾರಿಗಳಾದ ಚೇತನ್, ಪ್ರೇಮ, ಅಂಜು, ಅಶ್ವಿನಿ, ಗೀತಾ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga News ಶಿವಮೊಗ್ಗ ಆಯುಷ್ ವಿವಿಯ ವಿಶೇಷ ಅಧಿಕಾರಿಯಾಗಿ ಡಾ.ಎಸ್.ವಿ.ಲೋಕೇಶ್ ನೇಮಕ

0

Shivamogga News  ಶಿವಮೊಗ್ಗ ಆಯುಷ್ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯಾಗಿ ನೇಮಕಗೊಂಡ ಡಾ.ಎಸ್.ವಿ.ಲೋಕೇಶ್ ಅವರನ್ನು ಆಯುಷ್ ಫೇರ್ಡರೇಷನ್ ಆಫ್ ಇಂಡಿಯಾ (ಎ.ಎಫ್.ಐ).ಶಿವಮೊಗ್ಗ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು.

Shivamogga News  ಸಂಘದ ಅಧ್ಯಕ್ಷರು ಡಾ. ಶಶಿಕಾಂತ, ಕಾರ್ಯದರ್ಶಿ ಡಾ. ಸಂತೋಷ ಕುಮಾರ್, ಡಾ. ಶ್ರೀನಿವಾಸ ರೆಡ್ಡಿ, ಡಾ. ಸುರೇಶ್, ಡಾ. ಶಿಶಿರ, ಡಾ.ಚಿತ್ರಲೇಖಾ, ಡಾ.ಮರುಳಾರಾಧ್ಯ, ಡಾ.ವಿನೋದ, ಡಾ. ರಾಫವೇಂದ್ರಚಾರ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಕಣ್ಮನ ಸೆಳೆದ ಆಟೋಮೋಟಿವ್ ಶೋ

0

Shivamogga ಬೆಂಗಳೂರಿನ ಖ್ಯಾತ ಆಟೋ ಎಕ್ಸ್‌ಪೋ ಆಯೋಜಕರಾದ ಆರ್‌ಪಿಎಂ ಕಂಪನಿಯಿಂದ ಮಾ.12 ರವರೆಗೆ ಶಿವಮೊಗ್ಗದ ಹಳೆ ಜೈಲ್ ಆವರಣದ ಫ್ರೀಡಂ ಪಾರ್ಕ್ ನಲ್ಲಿ ಆರ್‌ಪಿಎಂ ಆಟೋಮೋಟಿವ್ ಶೋ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದಲ್ಲಿ 2014 ಮತ್ತು 2017 ರಲ್ಲಿ ಆಟೋಮೋಟಿವ್ ಶೋ ಆಯೋಜಿಸಿ ಅಭೂತಪೂರ್ವ ಯಶಸ್ವಿಯ ಬಳಿಕ ಈಗ 3ನೇ ಬಾರಿ ಆಯೋಜಿಸಲಾಗಿದೆ. ಈ ಶೋನಲ್ಲಿ ಪ್ರಸಿದ್ಧ ಕಂಪನಿಗಳ ಕಾರು ಹಾಗೂ ಬೈಕ್‌ಗಳ ಪ್ರದರ್ಶನ ಹಾಗೂ ಮಾರಾಟವಿದ್ದು, ಲಕ್ಸುರಿ ಕಾರ್‌ಗಳಾದ ಮರ್ಸಿಡಿಸ್ ಬೆಂಜ್ಸ್, ಬಿಎಂಡಬ್ಲ್ಯೂ, ಆಡಿ, ಜಾಗ್ವಾರ್, ರೇಂಜ್ ರೋವರ್, ಎಂ.ಜಿ.ಹೆಕ್ಟಾರ್, ಟೊಯೋಟಾ, ಮಾರುತಿ ಸುಜುಕಿ, ಸ್ಕೋಡಾ ನೆಕ್ಸಾ, ಟಾಟಾ, ಕಿಯಾ ಕಾರುಗಳು ಮತ್ತು ಸೂಪರ್ ಬೈಕ್ಗಳಾದ , ಬೆನೆಲಿ, ಕೆ.ಟಿ.ಎಂ. ಯಮಹಾ, ಏತರ್ ಮತ್ತು ವಿನೂತನ ಮತ್ತು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ವೈವಿಧ್ಯ ಎಲೆಕ್ಟ್ರಿಕ್ ಕಾರ್ ಹಾಗೂ ಬೈಕ್‌ಗಳು ಕಣ್ಮನ ಸೆಳೆದವು.

Shivamogga ಮಹಿಳೆಯರಿಗೆ ಮತ್ತು ಮಕ್ಕಳಿಗೆ ಏರ್ಪಡಿಸಿರುವ ಲೈಫ್ಸ್ಟೈಲ್ ಎಕ್ಸಿಬಿಷನ್ ನಲ್ಲಿ ಸೀರೆ, ಕುರ್ತಿ, ಬೆಳ್ಳಿ ಮತ್ತು ಇಮಿಟೇಷನ್ ಆಭರಣ, ಬ್ಯಾಗ್ಗಳು ದೊರೆಯಲಿದೆ. ವಿಧ ವಿಧವಾದ ತಿನಿಸುಗಳನ್ನು ಸವಿಯುವ ಅವಕಾಶವಿದೆ. ಶಾಖಾಹಾರ, ಮಾಂಸಾಹಾರ, ಚಾಟ್ಸ್, ಐಸ್ಕ್ರೀಂ, ಜ್ಯೂಸ್ ಲಭ್ಯವಿದೆ. ಪ್ರವೇಶ ಶುಲ್ಕ 50 ರೂ.ಇದ್ದು, ಟಿಕೇಟ್‌ನ್ನು ಅಲ್ಲೇ ಕೌಂಟರ್‌ನಲ್ಲಿ ತೆಗೆದುಕೊಳ್ಳಬಹುದಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ಇಂಟರ್ಯಾಕ್ಟ್ ಕ್ಲಬ್ ಸಹಕಾರಿ- ಎಂ.ಚಂದ್ರಶೇಖರಯ್ಯ

0

Shivamogga ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಇಂಟರ‍್ಯಾಕ್ಟ್ ಕ್ಲಬ್ ಚಟುವಟಿಕೆಗಳು ಸಹಕಾರಿ ಆಗುತ್ತವೆ. ಇಂಟರ‍್ಯಾಕ್ಟ್ ಕ್ಲಬ್‌ಗಳು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಚಂದ್ರಶೇಖರಯ್ಯ ಹೇಳಿದರು.

ಶಿವಮೊಗ್ಗದ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಟರ‍್ಯಾಕ್ಟ್ ಕ್ಲಬ್ ಸಮಾರೋಪ ಹಾಗೂ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಬಿಳ್ಕೊಡುಗೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಟರಿಯ ಇಂಟರ‍್ಯಾಕ್ಟ್ ಕ್ಲಬ್ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಒದಗಿಸುವ ಜತೆಯಲ್ಲಿ ಸಮಾಜಮುಖಿ ಚಿಂತನೆ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆಯು ತಿಳವಳಿಕೆ ಮೂಡಿಸುತ್ತದೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾಂವ್ ಮಾತನಾಡಿ, ಮಕ್ಕಳು ಪರೀಕ್ಷೆಗೆ ಹೆದರಬಾರದು. ಸೂಕ್ತ ರೀತಿಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ತಂತ್ರಜ್ಞಾನದ ನೆರವಿನಿಂದ ಪರಿಣಾಮಕಾರಿಯಾಗಿ ಅಧ್ಯಯನ ನಡೆಸಬೇಕು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಿರಂತರ ಪರಿಶ್ರಮ ವಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷರು ಅನುಭವಗಳನ್ನು ಹಂಚಿಕೊಂಡರು.

Shivamogga ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಗುರುಕಾಣಿಕೆ ನೀಡಿದರು. ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಜಿ.ಕುಮಾರಸ್ವಾಮಿ, ಖಜಾಂಚಿ ಜಿ.ವಿಜಯ್‌ಕುಮಾರ್, ಸಹ ಕಾರ್ಯದರ್ಶಿ ನಾಗವೇಣಿ ಎಸ್.ಆರ್., ಪ್ರಾಚಾರ್ಯ ಸೂರ್ಯನಾರಾಯಣ, ಮುಖ್ಯಶಿಕ್ಷಕಿ ಜಯಶೀಲಾಬಾಯಿ, ಪಾರ್ವತಿ, ಅಜಯ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.