Thursday, April 9, 2026
Thursday, April 9, 2026
Home Blog Page 1283

Deworming Pill ಜಂತುಹುಳು ಮಾತ್ರೆ ಉಚಿತವಾಗಿ ವಿತರಿಸಲಾಗುತ್ತದೆ- ಡಾ.ರಾಜೇಶ್ ಸುರಗಿಹಳ್ಳಿ

0

Deworming Pill  ಜಂತು ಹುಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆಯ ಕುಂಠಿತಕ್ಕೆ ಕಾರಣವಾಗುತ್ತದೆ ಆದ್ದರಿಂದ ಇದನ್ನು ಗುರುತಿಸಿ, ನಿಯಮಿತವಾಗಿ ಜಂತುಹುಳು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಹೇಳಿದರು.

ಶಿವಮೊಗ್ಗ ನಗರದ ಗುರುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೂ ಆಲ್ಬೆಂಡಜೋಲ್ ಮಾತ್ರೆಯನ್ನು ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಉಚಿತವಾಗಿ ವಿತರಿಸಲಾಗುವುದು. ಈ ವಯಸ್ಸಿನ ಶಾಲೆ ಬಿಟ್ಟ ಮಕ್ಕಳಿಗೂ ಸಹ ಅಂಗನವಾಡಿಗಳಲ್ಲಿ ಉಚಿತವಾಗಿ ಮಾತ್ರೆಯನ್ನು ನೀಡಲಾಗುವುದು ಎಂದರು.

ಆಲ್ಬೆಂಡಜೋಲ್ ಮಾತ್ರೆಗಳನ್ನು ಮಕ್ಕಳಿಗೆ 6 ತಿಂಗಳಿಗೆ ಒಂದು ಸಲ ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು4,552,0754 ಮಕ್ಕಳಿಗೆ ನೀಡಲಾಗಿದೆ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

Deworming Pill  ಬೆಳೆಯುವ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಾಣುತ್ತದೆ. ಶೇ.80 ರಷ್ಟು ರಕ್ತಹೀನತೆ ಜಂತು ಹುಳುಗಳಿಂದ ಉಂಟಾಗುತ್ತದೆ. ಹಾಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬರು ಮಾತ್ರೆಯನ್ನು ತೆಗೆದುಕೊಳ್ಳಬೇಕು. ಮಾರ್ಚ್ ತಿಂಗಳ ಒಳಗೆ ಹಿಮೋಗ್ಲೋಬಿನ್ ಟೆಸ್ಟ್ ಮಾಡಲಾಗುತ್ತದೆ ಎಂದು ತಿಳಿಸಿದ ಅವರು ಸುರಕ್ಷತಾ ಕ್ರಮಗಳ ಕುರಿತು ಹೇಳಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಆರ್.ಪರಮೇಶ್ವರಪ್ಪ, ಆರ್‌ಸಿಹೆಚ್ ಅಧಿಕಾರಿ ಡಾ.ನಾಗರಾಜ ನಾಯ್ಕ, ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಶಾಲಾ ಮುಖ್ಯೋಪಾಧ್ಯರಾದ ಮಂಜುನಾಥ ಸ್ವಾಮಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kannada literature ಮನುಷ್ಯನಿಗೆ ಸಾಹಿತ್ಯದ ಅಭಿರುಚಿ ಇದ್ದರೆ ಕೆಟ್ಟಮಾರ್ಗ ಹಿಡಿಯಲಾರ- ಗೋಪಾಲ್ ಯಡಗೆರೆ

0

Kannada literature ಶಿವಮೊಗ್ಗ ಯಾವ ದೇಶದಲ್ಲಿ ಸಾಹಿತ್ಯದ ಕೊರತೆ ಇರುತ್ತದೆಯೋ ಆ ದೇಶ ಎಂದೂ ಕೂಡ ಅಭಿವೃದ್ದಿ ಕಾಣದೆ ವಿನಾಶದ ಅಂಚಿಗೆ ಸಾಗುತ್ತದೆ. ಇದಕ್ಕೆ ಅಫ್ಘಾನಿಸ್ತಾನವೇ ಸಾಕ್ಷಿ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಗೋಪಾಳ, ವನಸಿರಿ ಉದ್ಯಾನವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ವನಸಿರಿ ಗೋಪಾಳ ನಿವಾಸಿಗಳ ಸಂಘ ವತಿಯಿಂದ ಆಯೋಜಿಸಿದ್ದ ‘ಸಾಹಿತ್ಯ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಲಲಿತ ಕಲೆಗಳು, ಹಾಗೂ ಸಾಹಿತ್ಯವನ್ನು ಕಡೆಗಣಿಸಿ, ಅಲ್ಲಿ ಯಾವುದೇ ಅಭಿವೃದ್ಧಿ ಸಾಧಿಸದೆ ವಿನಾಶದ ಅಂಚಿಗೆ ತಲುಪಿದೆ ಎಂದ ಅವರು, ಒಬ್ಬ ಮನುಷ್ಯನಲ್ಲಿ ಸಾಹಿತ್ಯದ ಅಭಿರುಚಿ ಇದ್ದರೆ ಆತ ಕೆಟ್ಟ ಮಾರ್ಗದಲ್ಲಿ ಸಾಗುವುದಿಲ್ಲ ಎಂದರು.

ಸಾಹಿತ್ಯ ಜ್ಞಾನ ಬೆಳೆಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬರೂ ಕೂಡ ನಮ್ಮವರೆ. ಜಾತಿ, ಧರ್ಮ ತೊರೆದು ಅವರಿಗೆ ಗೌರವ ಸಲ್ಲಿಸುವ ಕಾಯಕ ನಮ್ಮದಾಗಬೇಕು. ಆದರೆ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಜನ್ಮ ದಿನ ಆಚರಿಸಲು ಒಕ್ಕಲಿಗ ಸಂಘಕ್ಕೆ ಹೇಳಿ ಕಳಿಸುವಂತಾಗಿದೆ. ಅದೇ ರೀತಿ ಸರ್ವಜ್ಞ ಜಯಂತಿ ಆಚರಿಸಲು ಕುಂಬಾರ ಸಂಘ, ಕನಕ ದಾಸರ ಜಯಂತಿಯನ್ನು ಕುರುಬರು ನೆರೆವೇರಿಸುತ್ತಾರೆ. ದ.ರಾ ಬೇಂದ್ರೆ ಅವರ ಜಯಂತಿಯನ್ನು ಬ್ರಾಹ್ಮಣರು ಆಚರಿಸುತ್ತಾರೆ. ನಾವು ಎಂತಹ ಕೆಟ್ಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದರೆ ಜಿಲ್ಲಾಡಳಿತ, ಸರ್ಕಾರ ಈ ರೀತಿ ಕಾರ್ಯಕ್ರಮ ಆಯೋಜಿಸಿದಾಗ ಹೋಗಲೂ ಕೂಡ ನಮಗೆ ಸೋಮರಿತನ ತಡೆಯುತ್ತದೆ ಎಂದು ಬೇಸರವ್ಯಕ್ತ ಪಡಿಸಿದರು.

ಸಮಾಜ ಜಾತಿಯ ವ್ಯವಸ್ಥೆಯಲ್ಲಿ ಬೆಂದು ಹೋಗುತ್ತಿದೆ. ಸಾಹಿತ್ಯದಿಂದ ಜಾತಿ ತೊಲಗಿಸಲು ಸಾಹಿತ್ಯವನ್ನು ಓದುವ ಜನರಿಂದ ಮಾತ್ರ ಸಾಧ್ಯ. ಸಾಮಾಜದ ಬಂದುಗಳು ಓದುವ ಹವ್ಯಾಸ ಬೇಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಮನೆಯಲ್ಲಿ ಪೋಷಕರು ಓದುವ ಹವ್ಯಾಸ ಬೆಳೆಸಿಕೊಂಡರೆ ಮಕ್ಕಳು ಅದನ್ನೆ ಪಾಲಿಸುತ್ತಾರೆ. ಹರಟೆ ಕೂಡ ಸಾಹಿತ್ಯದ ಒಂದು ಭಾಗ. ಆದರೆ ಅನಾವಶ್ಯಕ ಹರಟೆಯಲ್ಲಿ ಕಾಲ ಕಳೆಯುವುದು ಬೇಡ ಎಂದು ಸಲಹೆ ನೀಡಿದರು.

ವನಸಿರಿ ಗೋಪಾಳ ನಿವಾಸಿಗಳ ಸಂಘ ಅಧ್ಯಕ್ಷ ಡಾ.ಶ್ರೀನಿವಾಸ್ ರೆಡ್ಡಿ ಅವರು ಮಾತನಾಡಿ, ಈ ರೀತಿಯ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಸಾಹಿತ್ಯಾಸಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯ ಎಂದ ಅವರು, ಮುಂದಿನ ದಿನದಲ್ಲಿ ಸಮಾಜದ ಬಾಂದವರೆ ಒಟ್ಟಾಗಿ ಈ ರೀತಿಯ ವೇದಿಕೆ ನಿರ್ಮಾಣಕ್ಕೆ ಸಾಕ್ಷಿ ಆಗಲಿ ಎಂದರು.

Kannada literature ಶ್ರೀ ಆದಿ ರಂಗನಾಥ ಕಲಾ ಬಳಗ ಮತ್ತು ಗೋಪಾಳ, ಶ್ರೀನಿಕೇತನ ಭಜನಾ ಮಂಡಳಿ, ಶ್ರೀ ರಾಗರಂಜನಿ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಿತು. ತುಂಗಾನಗರ ಎನ್.ಜೆ ಮೆಲೋಡೀಸ್ ನವಜ್ಯೋತಿ ಅಂದರ ಸಂಸ್ಥೆ ಕೆ.ಆರ್. ಬಸವರಾಜ್ ಹಾಗೂ ದೀಪ್ತಿ ಶಿವಕುಮಾರ್ ಅವರಿಂದ ಹಾಡು, ರಾಜಲಕ್ಷ್ಮಿ ಮತ್ತು ತಂಡದಿಂದ ವೃಂದಗಾನ, ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಚ್.ಆರ್. ಕೃಷ್ಣ ಮೂರ್ತಿ, ಲೇಖಕಿ ದೀಪಾ ಕುಬ್ಸದ್, ಚಾಲುಕ್ಯನಗರ ಭಾರತಿ ಅವರಿಂದ ಕವನ ವಾಚನ ಹಾಗೂ ಕುಂಸಿ ಪ್ರಶಾಂತ್ ಅವರಿಂದ ಹನಿಗವನ ವಾಚನ ನೆರೆವೇರಿತು. ಈ ಸಂದರ್ಭದಲ್ಲಿ ಹೋಳಿ ಹುಣ್ಣಿಮೆ ಹಾಗೂ ಮಹಿಳಾ ದಿನವನ್ನು ಆಚರಿಸಲಾಯಿತು.

ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಸ್ ಮಂಜುನಾಥ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್, ವನಸಿರಿ ಗೋಪಾಳ ನಿವಾಸಿಗಳ ಸಂಘ ಕಾರ್ಯದರ್ಶಿ ಉಮೇಶ್ ಬಾಪಟ್, ಆದಿ ರಂಗನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್. ಜಿ ಆನಂದರಾವ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಮಹಾದೇವಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಲತಾ ಶುಭಕರ್, ಸಾಹಿತಿ ಡಾ. ಶುಭಮರವಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

National Women’s Day ಮಹಿಳೆಗೆ ಇಡೀ ಕುಟುಂಬವನ್ನೇ ತಿದ್ದುವ ಸಾಮರ್ಥ್ಯವಿದೆ- ನ್ಯಾ.ಮಲ್ಲಿಕಾರ್ಜುನ ಗೌಡ

0

National Women’s Day  ಸರ್ವ ರೀತಿಯಲ್ಲಿ ಸಮರ್ಥಳಾದ, ಕುಟುಂಬದ ಬೆನ್ನೆಲುಬಾದ ಮಹಿಳೆಯರನ್ನು ನಾವೆಲ್ಲಾ ಸದಾ ಗೌರವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ನುಡಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯ್ ಸರ್ವಿಸ್ ಸೊಸೈಟಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಲ್ಕೊಳದ ಚೈತನ್ಯದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆ ಪುರುಷರಿಗಿಂತ ಹೆಚ್ಚು ಶಕ್ತಿವಂತಳು, ಇಡೀ ಕುಟುಂಬವನ್ನು ತಿದ್ದಿ ತೀಡಿ ದಾರಿಗೆ ತರುವ ಸಾಮಥ್ರ್ಯ ಮತ್ತು ಹೊಣೆಗಾರಿಕೆ ಉಳ್ಳವಳು. ಇಂತಹ ಮಹಿಳೆಯನ್ನು ನಾವೆಲ್ಲರೂ ಸದಾ ಗೌರವಿಸಬೇಕು.

ಹಿಂದೆ ಹೆಣ್ಣು-ಗಂಡು ಎಂಬ ತಾರತಮ್ಯ ಬಹಳ ಇತ್ತು. ದೈಹಿಕವಾಗಿ ಮಹಿಳೆ ದುರ್ಬಲಳು, ಗಂಡಿಗೆ ಸಮಾನವಾಗಿ ದುಡಿಯಲಾರಳು ಹಾಗೂ ಹೆರಿಗೆ, ಇತರೆ ಆರೋಗ್ಯ ಸಮಸ್ಯೆಗಳ ಕಾರಣ ಸಂಬಳ ಮತ್ತು ರಜೆಯಲ್ಲಿ ಸಹ ತಾರತಮ್ಯ ಮಾಡಲಾಗುತ್ತಿತ್ತು. ಸುಮಾರು 1911 ರಿಂದ ಈ ಬಗ್ಗೆ ಹೋರಾಟ ನಡೆಸಿದ ಫಲವಾಗಿ 1976 ರಲ್ಲಿ ಇದಕ್ಕೆ ಮುಕ್ತಿ ದೊರಕಿ ಸಮಾನ ಸಂಬಳ, ಇತರೆ ಸೌಲಭ್ಯ ದೊರೆತವು.

ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಮಹಿಳೆ ಪುರುಷರಿಗೆ ಸರಿಸಮಾನ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾಳೆ. ಒಂದು ಉತ್ತಮ ಕುಟುಂಬದ ಹಿಂದೆ ಹೆಣ್ಣಿನ ಪಾತ್ರ ಮಹತ್ವದ್ದಾಗಿದೆ. ಮೇಲು-ಕೀಲು ಎನ್ನದೆ ಹೊಂದಾಣಿಕೆಯಿಂದ ನಡೆದರೆ ಸಾಮರಸ್ಯ ಸಾಧ್ಯವಾಗುತ್ತದೆ ಎಂದರು.

ಆದರೆ, ಇಂದು ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ಈಡಾಗುತ್ತಿರುವುದುನ್ನು ಕಾಣುತ್ತಿದೇವೆ. ಅದಕ್ಕೆ ಕಾರಣ ಮೊದಲಿನ ರೀತಿಯಲ್ಲಿ ಕುಟುಂಬ ವ್ಯವಸ್ಥೆಗಳು ಇಲ್ಲದಿರುವುದು. ಹಿರಿಯರು ಕಿರಿಯರು ಒಂದೆಡೆ ಕಲೆತು ಆಟ, ಇತರೆ ಚಟುವಟಿಕೆಗಳಲ್ಲಿ ತೊಡಗದೇ ಇರುವುದು. ಇಂದು ಮಕ್ಕಳಿಗೆ ಊಟ ಮಾಡಿಸಲು ಸಹ ಮೊಬೈಲ್ ಬೇಕು ಅನ್ನುವಂತೆ ಮೊಬೈಲ್ ಮೊರೆ ಹೋಗುತ್ತಿರುವುದು ಸರಿಯಲ್ಲ. ಓದುವ ಹವ್ಯಾಸ ಹೆಚ್ಚಬೇಕು. ಅದರಿಂದ ಮಾನಸಿಕ ಆರೋಗ್ಯ ಮತ್ತು ಜ್ಞಾನ ಕೂಡ ಹೆಚ್ಚುತ್ತದೆ. ಆದ್ದರಿಂದ ಈ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‍ಎಂಎಸ್‍ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಮಾತನಾಡಿ, ಛಲ ಮತ್ತು ವಿಶ್ವಾಸದಿಂದ ಮುನ್ನುಗ್ಗುವ ಮನಸ್ಸಿನವರು ಏನನ್ನಾದರೂ ಸಾಧಿಸುತ್ತಾರೆ. ಇದಕ್ಕೆ ಅನೇಕ ಉದಾಹರಣೆಗಳು ಇವೆ. ಐಪಿಎಸ್ ಅಧಿಕಾರಿ ಎನ್.ಅಂಬಿಕಾ ಅವರ ಜೀವನವೂ ಅದಕ್ಕೆ ಸಾಕ್ಷಿಯಾಗಿದೆ. ಬಾಲ್ಯ ವಿವಾಹವಾದ ಈಕೆ ಹೇಗೆ ಚಿಕ್ಕಮಕ್ಕಳು ಮತ್ತು ಸಂಸಾರವನ್ನು ಸರಿದೂಗಿಸಿಕೊಂಡು ಐಪಿಎಸ್ ಪಾಸ್ ಆಗಿ ಅಧಿಕಾರಿಯಾದರು ಎಂದು ವಿವರಿಸಿದ ಅವರು ಆತ್ಮವಿಶ್ವಾಸವಿದ್ದರೆ ನಾವು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬಹುದೆಂದು ತಿಳಿಸಿದರು.

ಸಮಾಜದಲ್ಲಿ ಶೋಷಣೆಗೆ ಒಳಗಾದ ಕುಟುಂಬಗಳಿಗೆ ನಾವು ಹೇಗೆ ಆತ್ಮವಿಶ್ವಾಸ ತುಂಬಿ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಅವಲೋಕಿಸಿಕೊಂಡು ಕರ್ತವ್ಯ ನಿರ್ವಹಿಸಿದಾಗ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬಂತೆ ನಮ್ಮ ಸೇವೆ ಸಾಗಬೇಕೆಂದು ಆಶಿಸಿದರು.

National Women’s Day  ಕಾರ್ಯಕ್ರಮದಲ್ಲಿ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ರಕ್ಷಿತಾ ಹಾಗೂ ಸಿಂಧು ಸೆಬಾಸ್ಟಿನ್, ಸಮಾಜ ಸೇವೆಯಲ್ಲಿ ಅನಿತಾ ಮೇರಿ, ಉದ್ಯಮ ಕ್ಷೇತ್ರದಲ್ಲಿ ಸೌಮ್ಯ ಗುರುರಾಜ್ ಮತ್ತು ವಿಶೇಷಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೇಮ ಕೆ.ವಿ ಇವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆ ತೊದಲಬಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ, ಸಿಡಿಪಿಓ ಗಳಾದ ಚಂದ್ರಪ್ಪ, ಶಶಿರೇಖಾ, ಇತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga News ಮಹಿಳೆ ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು- ಸುಮತಿ ಕುಮಾರಸ್ವಾಮಿ

0

Shivamogga News ಶಿವಮೊಗ್ಗ: ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಬೇಕು. ಆರ್ಥಿಕವಾಗಿ ಸದೃಢರಾಗಲು ಸಂಪೂರ್ಣ ಪ್ರಯತ್ನಿಸಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ ನಗರದ ಸಾಯಿ ಗೃಹ ನಿರ್ಮಾಣ ಸಹಕಾರ ಸಂಘದ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸೆ ಹಾಗೂ ಸಾಯಿ ಗೃಹ ನಿರ್ಮಾಣ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಅಡುಗೆ ಮನೆ ಗೆ ಸೀಮಿತರಾಗದೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ತಂತ್ರಜ್ಞಾನದ ನೆರವಿನ ಜೊತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವಕಾಶವಿರುವ ಉದ್ಯೋಗಗಳನ್ನು ಆರಂಭಿಸಿ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ತಿಳಿಸಿದರು.

ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಸರ್ಕಾರಗಳು ಮಹಿಳೆಯರಿಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ವಿವಿಧ ಆರ್ಥಿಕ ಯೋಜನೆಗಳ ಅನುಷ್ಠಾನ ಮಾಡುತ್ತಿದ್ದು, ಸೂಕ್ತ ಮಾರ್ಗದರ್ಶನ ತೆಗೆದುಕೊಂಡು ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ರೋಟರಿ ಸಂಸ್ಥೆಗಳ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.

Shivamogga News ಇದೇ ಸಂದರ್ಭದಲ್ಲಿ ಸಾಯಿ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಫಲಾನುಭವಿಗಳು ಅನಿಸಿಕೆಗಳನ್ನು ಹಂಚಿಕೊಂಡರು.
ಸಮುದಾಯ ಸೇವೆಗಳ ನಿರ್ದೇಶಕ ಎಸ್.ಗಣೇಶ್, ಕಾರ್ಯದರ್ಶಿ ಕುಮಾರಸ್ವಾಮಿ, ಜಿ.ವಿಜಯ್‌ಕುಮಾರ್, ಸಾಯಿಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕಿ ಶಶಿಕಲಾ, ವನಜಾಕ್ಷಿ, ರತ್ನಮ್ಮ ಹಾಗೂ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kuvempu University ಜೀವ ವೈವಿಧ್ಯ ರಕ್ಷಣೆ ಮತ್ತು ಅಭಿವೃದ್ಧಿ ನಡುವೆ ಸಮತೋಲನ ಅಗತ್ಯ- ಪ್ರೊ.ಎಂ ವೆಂಕಟೇಶ್ವರಲು

0

Kuvempu University  ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳಂತಹ ಮಾನವ ನಿರ್ಮಿತ ದುರಂತಗಳನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

 

ವನ್ಯಜೀವಿ ಅಧ್ಯಯನದ ಪ್ರಾಯೋಗಿಕ ತಂತ್ರಗಳ ಕುರಿತು ಶಂಕರಘಟ್ಟ ,ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗ ಆಯೋಜಿಸಿರುವ ಒಂದು ವಾರದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.


2021ರ ಅಂತ್ಯದ ವೇಳೆಗೆ ಭಾರತದ ಅರಣ್ಯ ವ್ಯಾಪ್ತಿ 2,261 ಚದುರ ಕಿ.ಮೀ ಇದೆ. ಒಟ್ಟಾರೆ ಭೂಭಾಗದ ಶೇ. 24.62ರಷ್ಟಿದೆ ಎಂದು ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸಮೀಕ್ಷೆಯ ವರದಿ ತಿಳಿಸಿರುವುದು ಸಂತಸದ ವಿಷಯ. ಆದರೆ, ಸರ್ಕಾರಗಳು ನದಿ ಜೋಡಣೆ, ಬಹು ಉದ್ದೇಶಿತ ಬೃಹತ್ ಅಣೆಕಟ್ಟುಗಳ ನಿರ್ಮಾಣ, ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳ ನಿರ್ಮಾಣ, ಹೀಗೆ ಬೃಹತ್ ಯೋಜನೆಗಳ ಬಗೆಗೇ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಪರಿಸರ ಸಂರಕ್ಷಣೆಗೆ ವ್ಯತಿರಿಕ್ತವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ. ಟಿ. ಪುಟ್ಟಯ್ಯ ಮಾತನಾಡಿ, ಗಣ ಗಾರಿಕೆ, ಕಳ್ಳಬೇಟೆ, ನೈಸರ್ಗಿಕ ವಿಕೋಪಗಳ ಜೊತೆಗೆ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, ಬಡಾವಣೆಗಳ ನಿರ್ಮಾಣ, ಬೃಹತ್ ಅಣೆಕಟ್ಟುಗಳು, ಹೀಗೆ ವಿವಿಧ ಮೂಲಸೌಕರ್ಯಗಳ ಯೋಜನೆಗಳು ಜೀವವೈವಿಧ್ಯತೆಯ ಸಂರಕ್ಷಣೆಗೆ ಸವಾಲಾಗಿ ಪರಿಣಮಿಸಿದೆ. ಇಂಥಹಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಿಂದ ಒಂದೆಡೆ ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳು, ಮತ್ತು ಗ್ರಾಮಸ್ಥರು ನಿರಾಶ್ರಿತರಾದರೆ, ಇನ್ನೊಂದೆಡೆ ಆ ಭಾಗದ ಜೀವ ಸಂಕುಲ ಮತ್ತು ಅರಣ್ಯ ಪ್ರದೇಶವೇ ನಾಶವಾಗುತ್ತದೆ. ಹೀಗಾಗಿ ಅಭಿವೃದ್ಧಿ ಯೋಜನೆಗಳನ್ನು ಸುಸ್ಥಿರ ಪರಿಕಲ್ಪನೆಯಡಿ ಮರುವ್ಯಾಖ್ಯಾನಿಸುವ ಅನಿವಾರ್ಯತೆಯಿದೆ. ಹೀಗಾದಾಗ ಮಾತ್ರ ಜೀವವೈವಿಧ್ಯತೆ, ಮತ್ತು ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂದರು.

ವಿಭಾಗದ ಅಧ್ಯಕ್ಷ ಪ್ರೊ. ವಿಜಯಕುಮಾರ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಒಟ್ಟಾರೆ ಅರಣ್ಯ ಪ್ರದೇಶದ ಉಳಿವಿಗೆ ನೇರವಾಗಿ ಸಂಬಂಧಪಟ್ಟಿದೆ. ಪರಿಸರದ ಆಡಿಟಿಂಗ್, ಪರಿಣಾಮಗಳ ಅಧ್ಯಯನಗಳನ್ನು ಕೈಗೊಳ್ಳದೆ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ರೀತಿಯ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Kuvempu University  ವಿಭಾಗದ ಅಧ್ಯಕ್ಷ ಪ್ರೊ. ವಿಜಯಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಪ್ರೊ. ಸಿ. ಗೀತಾ, ಪ್ರೊ. ನಾಗರಾಜ್, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಮಹದೇವನ್, ಪ್ರೊ. ಬಿ. ತಿಪ್ಪೇಸ್ವಾಮಿ, ಡಾ. ಪ್ರಮೋದ್, ಡಾ. ಹರೀಶ್, ಡಾ. ರಾಘವೇಂದ್ರ ಗೌಡ, ಡಾ. ಸೌಮ್ಯ, ಇತರೆ ವಿಭಾಗದ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬೆಂಗಳೂರಿನ ವೈಲ್ಡ್ ಸೋನಿಕ್ ಸಂಸ್ಥೆಯ ಅಭಿ ಮಂಡೇಲಾ, ಹೈದರಾಬಾದ್‌ನ ಪರಿಸರ ತಜ್ಞ ಸಚಿನ್ ಶ್ರೀಧರ ಕಾರ್ಯಾಗಾರ ನಡೆಸಿಕೊಟ್ಟರು. ಮಣ ಪಾಲ ಸಂಸ್ಥೆಯ ಡಾ. ಗುರುರಾಜ ಕೆ.ವಿ, ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ಡಾ. ಸಿ. ಕೆ. ತಮ್ಮಯ್ಯ, ಚಾಮರಾಜನಗರದ ಎಟಿಆರ್‌ಇಇ ಸಂಸ್ಥೆಯ ಡಾ. ಶ್ರೀನಿವಾಸ್. ಕೆ. ಆರ್, ವಾರಪೂರ್ತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Karnataka Sangha Shivamogga ಕರ್ನಾಟಕ ಸಂಘ ಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕರಕುಶಲ ವಸ್ತುಗಳ ಪ್ರದರ್ಶನ

0

Karnataka Sangha Shivamogga ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಮಾರ್ಚ್ 25, 26 ರಂದು ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಎರಡು ದಿನ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮಾಡಲು ಸಂಘದ ಆವರಣದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

ಇವುಗಳಿಗೆ ಯಾವುದೇ ಬಾಡಿಗೆ ಇರುವುದಿಲ್ಲ. ಆಸಕ್ತರು ತಮ್ಮ ಹೆಸರುಗಳನ್ನು ಕರ್ನಾಟಕ ಸಂಘದ ಕಚೇರಿಯಲ್ಲಿ ಖುದ್ದಾಗಿ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಬಹುದಾಗಿದೆ.

Karnataka Sangha Shivamogga  ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೂ. ಸಂಖ್ಯೆ:08182-277406 / 9980159696 ಸಂಪರ್ಕಿಸಬಹುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sarji Foundation Shimogga ಕೆರೆಕಟ್ಟೆಗಳನ್ನ ಉಳಿಸುವುದೇ ದೊಡ್ಡ ಯಾಗ ಯಜ್ಞ-ಡಾ.ಶ್ರೀಬಸವ ಮರುಳಸಿದ್ಧ ಸ್ವಾಮೀಜಿ

0

Sarji Foundation Shimogga ಶಿವಮೊಗ್ಗ , ಸರ್ಜಿ ಫೌಂಡೇಶನ್‌, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್‌ ಅಕಾಡೆಮಿ ಮತ್ತು ಪರಿಸರಾಸಕ್ತರು ಒಡಗೂಡಿ ಬಿದರೆ ಮಲ್ನಾಡ್‌ ಕ್ಯಾನ್ಸರ್‌ ಆಸ್ಪತ್ರೆ ಎದುರಿನ ಶ್ರೀ ಸಾಯಿಬಾಬಾ ಮಂದಿರ ಬಳಿ ನೂತನ ಕೆರೆಯನ್ನು ನಿರ್ಮಿಸಿ ಭಾನುವಾರ ಬಸವಕೇಂದ್ರದ ಡಾ. ಶ್ರೀಬಸವ ಮರುಳಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬಸವಕೇಂದ್ರದ ಡಾ. ಶ್ರೀಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಯಜ್ಞ ಯಾಗದಿಂದ ಮಳೆ ಬರುತ್ತದೆ ಎನ್ನುವುದು ಹಿಂದಿನ ಕಾಲದ ಮಾತು. ಅದೀಗ ಪರಿಸರಕ್ಕೆ ಹಾನಿಯೇ ಉಂಟು ಮಾಡುತ್ತದೆ ಎಂದು ಹೇಳಬಹುದು. ಮೊದಲೆಲ್ಲಾ ಕೃತಜ್ಞಾತಾ ಪೂರ್ವಕವಾಗಿ ಪಂಚಭೂತಗಳಿಗೆ ಯಾಗ ಯಜ್ಞ ಮಾಡುತ್ತಿದ್ದರು. ಈಗ ನಾವು ಕೆರೆ ಕಟ್ಟೆಗಳನ್ನು ಉಳಿಸುವುದೇ ದೊಡ್ಡ ಯಾಗ ಯಜ್ಞವಾಗಿದೆ. ಮೊದಲು ಪ್ರಜೆಗಳಿಗೆ, ಗುರುಗಳಿಗೆ, ತಂದೆ ತಾಯಿಗಳಿಗೆ ಕೃತಜ್ಞತೆಗಾಗಿ ಯಾಗವನ್ನುಮಾಡುವ ಪದ್ಧತಿ ಇತ್ತು. ಈಗ ಭೂತ ಯಜ್ಞದ ಅವಶ್ಯವಿದೆ. ಭೂಮಿ, ಗಾಳಿ, ನೀರು, ಬೆಂಕಿ, ಬಯಲನ್ನು ಹಾಳು ಮಾಡದೇ ಇರುವುದು ಭೂತ ಯಜ್ಞ. ಪಂಚಭೂತಗಳನ್ನು ಸುಸ್ಥಿರವಾಗಿಡುವುದೇ ನಾವು ಮಾಡುವ ಯಜ್ಞ. ಕೆರೆಗಳಿಗೆ ಮರುಜೀವ ಕೊಟ್ಟರೆ ಅಪರೂಪದ ಆಸ್ತಿಯಾಗುತ್ತದೆ. ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ, ಶಿವಮೊಗ್ಗಕ್ಕೆ ಪರಿಸರ ಪ್ರೇಮಿಗಳ ಕೊಡುಗೆ ಬಹು ದೊಡ್ಡದಿದೆ. ಪರೋಪಕಾರಂ ಇರಬಹುದು, ಪರ್ಯಾವರಣ ಟ್ರಸ್ಟ್‌, ಪರೋಪಕಾರಣ ಇರಬಹುದು, ಎಲ್ಲರೂ ಸೇರಿಕೊಂಡು ತುಂಬಾ ಪರಿಸರ ಪೂರಕ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮನುಷ್ಯ ಬಾಳಬೇಕಾದರೆ ಪರಿಸರವನ್ನು ಉಳಿಸುವುದು ತುಂಬಾ ಅಗತ್ಯವಿದೆ. ನೀರಿನ ಸಂಗ್ರಹಣೆ ತುಂಬಾ ಅಗತ್ಯವಿದೆ. ಭಗವಂತನ ಸೃಷ್ಟಿ ಇದು, ಕರ್ನಾಟಕ ನೀರಿನ ಲೆವೆಲ್‌ 4 ರಿಂದ 5 ಮೀಟರ್‌ಗೆ ಬಂದಿದೆ, ಸುಮಾರು 4 ಸಾವಿರ ಬಿಲಿಯನ್‌ ಕ್ಯೂಬಿಕ್‌ ಮೀಟರ್‌ ಮಳೆಯಿಂದ ಲಭ್ಯವಾಗುತ್ತದೆ. ಈ ಪೈಕಿ 3ನೇ ಒಂದು ಭಾಗದಷ್ಟು ನೀರು ವಿವಿಧ ಕೆರೆ, ಕಟ್ಟೆ, ಜಲಾಶಯ ಸೇರಿದಂತೆ ನೀರು ಸಂಗ್ರಹವಾಗುತ್ತದೆ. ಉಳಿದೆಲ್ಲಾ ನೀರು ಸಮುದ್ರದ ಪಾಲು ಆಗುತ್ತದೆ. ಭೂಮಿಯು ನೀರನ್ನು ಹೀರಿಕೊಂಡಷ್ಟು ನೀರಿನ ಸೆಲೆ ಹೆಚ್ಚಾಗುತ್ತ ಹೋಗುತ್ತದೆ. ಇಲ್ಲವಾದರೆ ಭೂಕುಸಿತ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ನೀರಿನ ಸಂಗ್ರಹ ಮತ್ತು ನೀರನ್ನು ಉಳಿಸುವಲ್ಲಿ ಕೆರೆ ಕಟ್ಟೆಗಳು ಅಭಿವೃದ್ಧಿ ಅತಿ ಮುಖ್ಯ. ಒಟ್ಟು ನೀರಿನ ಪ್ರಮಾಣದಲ್ಲಿ ಶೇ.70 ರಷ್ಟು ಕೃಷಿಗೆ ಬಳಕೆಯಾದರೆ, ಶೇ.8 ರಿಂದ 9 ರಷ್ಟು ನೀರು ಗೃಹ ಬಳಕೆ ಇತ್ಯಾದಿಗೆ ಹೋಗುತ್ತದೆ. 2 ರಷ್ಟು ಕೈಗಾರಿಕೆಗಳಿಗೆ ಹೋಗುತ್ತದೆ, ಇತ್ತೀಚಿನ ಎರಡು ವರ್ಷಗಳಲ್ಲಿ ಮಳೆ ಪ್ರಮಾಣ ಇಳಿಕೆ ಆಗಿತ್ತು.ಮಳೆ ಹೆಚ್ಚಾದ್ದರಿಂದ ಶೇ. 14 ರಿಂದ 15 ರಷ್ಟು ಏರಿಕೆ ಕಂಡಿದೆ. ಕೆರೆ -ಕಟ್ಟೆಗಳ ನಿರ್ಮಾಣದಂತಹ ಕೆಲಸಗಳು ನಮಗೆ ಪೂರಕವಾಗುತ್ತವೆ. ಇಲ್ಲದಿದ್ದರೆ ಕುಡಿಯಲಿಕ್ಕೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ, ಮಳೆ ನೀರನ್ನು ಉಳಿಸಬೇಕಾದರೆ ಕೆರೆ ಕಟ್ಟೆಗಳ ಜೀರ್ಣೋದ್ಧಾರ ಅತೀ ಅವಶ್ಯ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಕೆರೆಯಲ್ಲಿ ಗಂಗಾ ಪೂಜೆಯನ್ನು ಡಾ.ಧನಂಜಯ ಸರ್ಜಿ ಮತ್ತು ನಮಿತಾ ಸರ್ಜಿ ದಂಪತಿ ನೀರನ್ನು ಕೆರೆಗೆ ಸಮರ್ಪಿಸುವ ಮೂಲಕ ಕೆರೆಯನ್ನು ಲೋಕಾರ್ಪಣೆ ಮಾಡಿದರು.

Sarji Foundation Shimogga ಈ ಸಂದರ್ಭ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಯೇಸು ಪ್ರಕಾಶ್‌ ಅವರಿಗೆ ಸರ್ಜಿ ಫೌಂಡೇಶನ್‌ ವತಿಯಿಂದ ನೀವು ನಮ್ಮ ಹೆಮ್ಮೆ ಸ್ಮರಣಿಕೆ ನೀಡಿ ಡಾ.ಧನಂಜಯ ಸರ್ಜಿ ಅವರು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭ ವಿಧಾನ ಪರಿಷತ್‌ ಸದಸ್ಯರಾದ ಡಿ. ಎಸ್‌. ಅರುಣ್‌, ಪರಿಸರ ಪ್ರೇಮಿಗಳಾದ ಪ್ರೊ.ಬಿ.ಎಂ.ಕುಮಾರ ಸ್ವಾಮಿ, ತ್ಯಾಗರಾಜ್‌ ಮಿತ್ಯಾಂತ , ಬಾಲುನಾಯ್ಡು, ಮಾಜಿ ನಗರ ಸಭಾಧ್ಯಕ್ಷ ಎಂ.ಶಂಕರ್‌, ಸೂಡಾ ಮಾಜಿ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿ ಪ್ರಕಾಶ್‌ ,ಅಡ್ವೋಕೇಟ್‌ ಅಶೋಕ್‌ಭಟ್‌, ಡಾ.ಬಾಲಕೃಷ್ಣ ಹೆಗಡೆ, ದಿನೇಶ್‌ ಹಾಗೂ ಸಾಯಿಬಾಬಾ ಮಂದಿರದ ಸಮಿತಿಯ ಪ್ರಮುಖರು, ಪದಾಧಿಕಾರಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Corona Emergency ದೇಶದಲ್ಲಿ ಈಗ ಕೊರೋನಾ ಅಲ್ಪಪ್ರಮಾಣದಲ್ಲಿ ಹೆಚ್ಚಳ

0

Corona Emergency ದೇಶದಲ್ಲಿ ಮತ್ತೆ ಕೊರೋನಾ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 524 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ.

ದೇಶದಲ್ಲಿ ಅನೇಕ ದಿನಗಳ ನಂತರ ಒಂದೇ ದಿನ ಕೊರೋನಾ 19, ದೃಢಪಟ್ಟ 524 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿಯಲ್ಲಿ ತಿಳಿಸಿದೆ.

ಸುಮಾರು ಮೂರು ತಿಂಗಳ ನಂತರ ಒಂದೇ ದಿನಕ್ಕೆ 500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಮತ್ತೆ ,ಕೊರೋನಾ ವಾಗುವ ಸಾಧ್ಯತೆಗಳು ಹೆಚ್ಚುವೆ ಎಂದು ಆರೋಗ್ಯ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.

Corona Emergency
ಆದ್ದರಿಂದ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಒಳಿತು. ಸಾರ್ವಜನಿಕ ಸ್ಥಳಗಳಲ್ಲಿ ಅಂತರವನ್ನ ಕಾಯ್ದುಕೊಳ್ಳುವುದು. ಮಾಸ್ಕ್ ಬಳಕೆ ಕಡ್ಡಾಯ. ಸ್ಯಾನಿಟೈಸರ್ ಗಳನ್ನು ಬಳಸುವುದು ಒಳಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagalur ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲಾ ಕಸಾಪ ಅತಿ ಹೆಚ್ಚು ದತ್ತಿ ಕಾರ್ಯಕ್ರಮ ನಡೆಸುತ್ತಿದೆ

0

Chikmagalur ಚಿಕ್ಕಮಗಳೂರು, ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಕರ್ನಾಟಕದಲ್ಲಿ ಮೊದಲ ಸ್ಥಾನವನ್ನು ಜಿಲ್ಲಾ ಕಸಾಪವು ಪಡೆದುಕೊಂಡು ಕನ್ನಡದ ಕಂಪನ್ನು ಎಲ್ಲೆಡೆ ಹರಡಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್ ಹೇಳಿದರು.

ಚಿಕ್ಕಮಗಳೂರು ನಗರದ ಡಿ.ಎಸ್.ಎಂ.ಎಸ್. ಕಚೇರಿಯ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪ ಡಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಸಾಪ ವತಿಯಿಂದ ಜಿಲ್ಲೆಯ ವಿವಿದ ಭಾಗಗಳಲ್ಲಿ ಮಹಿಳಾ ಹಾಗೂ ಜನಪದ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಸಲಹೆ ಮಾಡಿದರು.

‘ಜನಪದ ಸಾಹಿತ್ಯದಲ್ಲಿ ಮಹಿಳೆ’ ವಿಷಯ ಕುರಿತು ಸಾಹಿತಿ ಡಾ. ಹೆಚ್.ಎಸ್.ಸತ್ಯನಾರಾಯಣ ಮಾತನಾಡಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಮೊದಲ ಬಾರಿಗೆ ಮಾಸ್ತಿ ಅವರು ಪ್ರಾರಂಭಿಸಿ ನಾಡಿನೆಲ್ಲೆಡೆ ಪಸರಿಸಿದವರು. ಅವರ ಅನನ್ಯ ಸೇವೆಯಿಂದ ಇಂದು ದತ್ತಿ ಕಾರ್ಯಕ್ರಮವು ಯಶಸ್ವಿಯಾಗಿ ಎಲ್ಲೆಡೆ ಹರಿದಾಡುತ್ತಿದೆ ಎಂದು ತಿಳಿಸಿದರು.
ಜನಪದ ಗೀತೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಿಳೆಯು ಜನಪದ ಕೇಂದ್ರದ ಶಕ್ತಿಯಾಗಿ ದ್ದಾಳೆ. ಜನಪದ ಗೀತೆಗಳೆಂದರೆ ದೈನಂದಿನ ಚಟುವಟಿಕೆಗಳಲ್ಲಿ ಕಂಡಿರುವ ದೃಶ್ಯಗಳನ್ನು ಗೀತೆಗಳ ಮೂಲಕ ಅಂದಿನ ಕಾಲದವರು ಹೊರಹೊಮ್ಮಿಸಿದ್ದಾರೆ ಎಂದು ತಿಳಿಸಿದರು.

Chikmagalur ಹಿಂದಿನ ಕಾಲದಲ್ಲಿ ಜಂಗಮರು ಮನೆಗೆ ಆಗಮಿಸುತ್ತಿದ್ದ ದೃಶ್ಯಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಮಹಿ ಳೆಯು ಗೀತೆಗಳ ಮೂಲಕ ಜನಪದ ಗೀತೆ ರಚನೆ ಮಾಡುತ್ತಿದ್ದರು. ಹಾಲುಂಡ ತವರಿಗೆ ಏನೆಂದು ಹಾಡಲಿ ಎಂಬ ಗೀತೆಯೊಂದಿಗೆ ಹಿರಿಯ ಜೀವಿಗಳು ಪದ ಕಟ್ಟುವ ಜೊತೆಗೆ ತಮ್ಮ ಕಾಯಕದ ಶ್ರಮವನ್ನು ಮರೆಯಲಿಕ್ಕೆ ಗೀತೆಗ ಳನ್ನು ತಾವಾಗಿಯೇ ರಚಿಸಿಕೊಂಡು ಹಾಡುತ್ತಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜನೆ ಮಾಡುವ ಮೂಲಕ ಯಶಸ್ವಿ ಗೊಳಿಸಲಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚುಚ್ಚು ಭಾಗವಹಿಸಿ ದತ್ತಿ ಉಪನ್ಯಾಸವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಡಿಎಸ್‌ಎಂಎಸ್ ಅಧ್ಯಕ್ಷ ಪ್ರಭು ಸೂರಿ, ಉಪಾಧ್ಯಕ್ಷ ಅಶೋಕ್, ನಿರ್ದೇಶಕ ಭಗವತಿ ಹರೀಶ್, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಲೋಕೇಶ್, ಸಂಚಾಲಕ ಪರಮೇಶ್, ಪ್ರಧಾನ ಸಂಚಾಲಕ ಗುರುವೇಶ್, ಕಡೂರು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬಲಿಜ ಸಂಘದ ತಾಲ್ಲೂಕು ಅಧ್ಯಕ್ಷ ದೇವರಾಜ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವೀಣಾ ಮಲ್ಲಿಕಾರ್ಜುನ್ ನಿರೂಪಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಸ್ವಾಗತಿಸಿದರು. ವೀರೇಶ್ ಕೌಲಗಿ ವಂದಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Nari Shakthi Award ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಕುಮುದಾ ಸುಶೀಲ್ ಆಯ್ಕೆ

0

Nari Shakthi  award ಅಂತರಾಷ್ಟ್ರೀಯ ಮಹಿಳಾ ಶಕ್ತಿ ಶಿರೋಮಣಿ ಅವಾರ್ಡ್ 2023
ದೆಹಲಿಯಲ್ಲಿ ನಡೆದಿದೆ. ಇಂಡೋ ನೇಪಾಳ ಸಮರಸ್ತ್ ಆರ್ಗನೈಜೇಷನ್ ಮಂಚ್ ವತಿಯಿಂದ ನಡೆದಿದೆ.

ಅಂತರಾಷ್ಟ್ರೀಯ ಮಹಿಳಾ ಪುರಸ್ಕಾರವು ಕುಮುದಾ ಅವರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ನೇಪಾಳದ ಉಪ ಪ್ರಧಾನಮಂತ್ರಿ ಯಿಂದ ರಾಷ್ಟ್ರಪತಿಗಳಾದ ಶ್ರೀಮಾನ್ ರಾಮಚಂದ್ರ ಪೊಡಲ್ಜಿ ಅವರಿಂದ ಪ್ರಧಾನ ಮಾಡಲಾಗುತ್ತದೆ.

Nari Shakthi  award  ಕುಮುದಾ ಅವರು ಪ್ರಸ್ತುತ ತರೀಕೆರೆ ಮೆಸ್ಕಾಂ ಉಪ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ನಮ್ಮ ಕೆ ಲೈವ್ ಮಾಧ್ಯಮವು ಅಭಿನಂದಿಸುತ್ತದೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.