Tuesday, April 29, 2025
Tuesday, April 29, 2025

Chikmagalur ಕನ್ನಡ ದ ಕಟ್ಟಾಳು ಶ್ರೀದೇವಿ ಮೋಹನ್ ಅವರಿಗೆ ನುಡಿ ಶ್ರದ್ಧಾಂಜಲಿ

Date:

Chikmagalur ಸಮಾಜದಲ್ಲಿ ಶ್ರೀದೇವಿ ಮೋಹನ್ ಅವರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಉತ್ತಮ ಮನ್ನಣೆ ಗಳಿಸಿರುವ ಸಾಧಕ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಹಿರೇಮಗಳೂರಿನಲ್ಲಿ ಶ್ರೀದೇವಿ ಯುವಕರ ಸಂಘ, ಜಿಲ್ಲಾ ಸಾಂಸ್ಕೃತಿಕ ಸಂಘ, ಹಲಸಿಂಗ ವೇದಿಕೆ, ಜಿಲ್ಲಾ ಕಸಾಪ, ಜಿಲ್ಲಾ ಆಜಾದ್‌ಪಾರ್ಕ್ ಗಣಪತಿ ಸೇವಾ ಸಮಿತಿ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಹಲಸಿಂಗ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀದೇವಿ ಮೋಹನ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದ ಧರ್ಮದರ್ಶಿಗಳಾಗಿ ಮೋಹನ್ ಅವರು ಕಾರ್ಯನಿರ್ವ ಹಿಸುವ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಹಿರೇಮಗಳೂರು ಗ್ರಾಮದ ಯುವಕರನ್ನು ಬೆಳೆಸುವ ನಿಟ್ಟಿನಲ್ಲಿ ಶ್ರೀದೇವಿ ಯುವಕರ ಸಂಘವನ್ನು ಸ್ಥಾಪಿಸಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿ ಸುವ ಮೂಲಕ ಸ್ಪಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು ಎಂದರು.

ಮೋಹನ್‌ನವರು ಜೀವನದಲ್ಲಿ ಎಂದಿಗೂ ಜಾತಿ, ಬೇಧ ಮಾಡದೇ ಎಲ್ಲರೊಂದಿಗೆ ಉತ್ತಮ ಒಡನಾಟ ವನ್ನು ಹೊಂದುವುದವರೊಂದಿಗೆ ಸದೃಢ ಸಮಾಜ ಕಟ್ಟುವಲ್ಲಿ ಕಾರ್ಯನಿರ್ವಹಿಸಿದ್ದರು.

ಹಿರೇಮಗಳೂರು ಗ್ರಾಮ ದಲ್ಲಿ ಕೆಸರುಗದ್ದೆ ಓಟ, ಕುಸ್ತಿ, ಹೊನಲು ಬೆಳಕಿನ ಕ್ರೀಡಾಕೂಟಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿದವರು ಎಂದು ತಿಳಿಸಿದರು.

ಇಂದಿನ ಯುವಪೀಳಿಗೆಯು ಅವರ ಮಾರ್ಗದರ್ಶನದಲ್ಲಿ ಸಾಗಬೇಕಿದೆ. ಮನುಷ್ಯನ ಬದುಕು ಎಂದು ಕೊನೆಗೊಳ್ಳುವುದು ಯಾರಿಗೂ ತಿಳಿಯದು. ಇರುವಷ್ಟು ದಿನಗಳಲ್ಲಿ ಸತ್ಕಾರ್ಯಗಳನ್ನು ಮಾಡುವುದರೊಂದಿಗೆ ಹುಟ್ಟಿದ ಊರಿಗೂ ಹಾಗೂ ಜಿಲ್ಲೆಗೂ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಶ್ರೀದೇವಿಯವರು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.

ಯಾರೊಂದಿಗೂ ಏರುಧ್ವನಿಯಲ್ಲಿ ಮಾತನಾಡದೇ ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದ ಮಾತುಗಳನ್ನಾಡಿ ಮೃದು ಸ್ವಭಾವವನ್ನು ಹೊಂದಿದ್ದರು ಎಂದು ತಿಳಿಸಿದರು.

ಮನುಷ್ಯ ಜೀವನದಲ್ಲಿ ಹುಟ್ಟಿದ ನಂತರ ಸಾವು ಎಂಬುದು ಖಚಿತವಾಗಿರುತ್ತದೆ. ಆದರೆ ಇರುವಷ್ಟು ದಿನಗಳು ಮಾಡಿರುವ ಸಾಮಾಜಿಕ ಕಾರ್ಯಗಳೇ ನಂತರದ ದಿನಗಳಲ್ಲಿ ನೆನಯಲಾಗುತ್ತದೆ. ಆ ಸಾಲಿನಲ್ಲಿ ಶ್ರೀದೇವಿ ಮೋಹನ್ ಅವರ ಜೀವನ ನಮಗೆಲ್ಲಾ ಮಾದರಿಯಾಗಿದ್ದು ಪ್ರತಿಯೊಬ್ಬರು ಸಾಮಾಜಿಕ ಕಾರ್ಯಗಳನ್ನು ಮಾಡು ವಲ್ಲಿ ಮುಂದಾದರೆ ನಂತರ ದಿನಗಳಲ್ಲಿ ಉನ್ನತ ಹೆಸರು ಸಂಪಾದಿಸಲು ಸಾಧ್ಯ ಎಂದು ತಿಳಿಸಿದರು.

Chikmagalur ಚಿಕ್ಕಮಗಳೂರು ನಗರಸಭಾ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ಕೆಲವೊಂದು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರನ್ನು ಸೇರಿಸುವುದು ಬಹಳ ಕಷ್ಟಕರವಾಗಿರುತ್ತದೆ. ಆದರೆ ಶ್ರೀದೇವಿ ಮೋಹನ್ ಅವರ ಜನಪರ ಕಾಳಜಿ ಹಾಗೂ ಸಾಮಾಜಿಕ ಸೇವೆ ಸಲ್ಲಿಸಿರುವ ಪರಿಣಾಮ ಅವರ ನುಡಿನಮನ ಕಾರ್ಯಕ್ರಮಕ್ಕೆ ಅತಿಹೆಚ್ಚು ಮಂದಿ ಆಗಮಿಸಿ ಅವರನ್ನು ನೆನೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಕನ್ನಡಪರ ಹೋರಾಟ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೋಹನ್ ಅವರಿಗೆ ಆಹ್ವಾನಿಸಿದರೆ ತಮ್ಮ ವೈಯಕ್ತಿಕ ಎಷ್ಟೇ ಕೆಲಸಗಳಿದ್ದರೂ ಅವುಗಳನ್ನು ಬದಿಗೊತ್ತಿ ಯುವಮುಂದಾಳಾಗಿ ತಕ್ಷಣವೇ ಧಾವಿಸುತ್ತಿದ್ದರು. ಜೊತೆಗೆ ಶ್ರೀದೇವಿ ಯುವಕರ ಸಂಘದಿಂದ ಸಾಮಾಜಿಕ ಸೇವೆ ಜೊತೆಗೆ ಶಾಶ್ವತ ಕೆಲಸವನ್ನು ನಿಭಾಯಿಸಿ ಸೈ ಎನಿಸಿ ಕೊಂಡವರು ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಹಳ್ಳಿಕಾರ ಯುವಕರ ಸಂಘದ ಕೋಟೆ ಸೋಮಣ್ಣ, ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ, ಕಸಾಪ ತಾಲ್ಲೂಕು ಸೋಮಶೇಖರ್, ದೇವಿ ಯುವಕರ ಸಂಘದ ಸಂಚಾಲಕ ಹೆಚ್.ಎಂ.ಓಂಕಾರಮೂರ್ತಿ, ಪ್ರಧಾನ ಕಾರ್ಯದರ್ಶಿ ಹೆಚ್.ವೈ.ಮೋಹನ್‌ಕುಮಾರ್, ಟೌನ್ ಕೋ ಆಪರೇಟಿವ್ ಮಾಜಿ ಅಧ್ಯಕ್ಷ ಗಿರಿಧರ್ ಯತೀಶ್, ಕಾಂಗ್ರೆಸ್ ಮುಖಂಡ ಹಿರೇಮಗಳೂರು ರಾಮಚಂದ್ರ, ಸಾಹಿತಿ ನಾಗರಾಜ್ ರಾವ್ ಕಲ್ಕಟ್ಟೆ, ಮುಖ್ಯಶಿಕ್ಷಕ ಅಶೋಕ್, ಲಯನ್ಸ್ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಎಲ್.ವಿ.ಕೃಷ್ಣಮೂರ್ತಿ, ಆಟೋ ಮೋಹನ್, ಬಿಜೆಪಿ ಮುಖಂಡ ಬಸವರಾಜ್, ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...