Wednesday, June 25, 2025
Wednesday, June 25, 2025

Namma Halli Theatre ಮಕ್ಕಳಲ್ಲಿ ರಂಗಭೂಮಿ ಅಭಿರುಚಿ ಬೆಳೆಸಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ-ಸಂದೇಶ್ ಜವಳಿ

Date:

Namma Halli Theatre  ನಮ್ಮ ಹಳ್ಳಿ ಥಿಯೇಟರ್ ತಂಡಕ್ಕೆ ಇಂದು 10 ವರ್ಷದ ಸಂಭ್ರಮ. 10 ವರ್ಷದಲ್ಲಿ ಒಂದು ರಂಗ ಕಲಾ ತಂಡ ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ್ಯಂತ ಹೆಸರು ಮಾಡಿದೆ ಎಂದರೇ ಅದು ಸಾಮಾನ್ಯ ವಿಷಯವಲ್ಲ ಎಂದು ನಮ್ಮ ಹಳ್ಳಿ ಥಿಯೇಟರ್ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಎಸ್ ಹಾಲ್ಮತ್ತೂರು ತಿಳಿಸಿದರು.

ಶಿವಮೊಗ್ಗದ ಸ್ವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ನಮ್ಮ ಹಳ್ಳಿ ಥಿಯೇಟರ್ ತಂಡದ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಅಮರ ಪುತ್ರರು ಚೆನ್ನಬೈರಾ ದೇವಿ, 10 ಮೂಡಿದ ಹೊತ್ತು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

Namma Halli Theatre  ಆರು ಜನ ಸಮಾನ ವಯಸ್ಕರ ಸೇರಿ ತಂಡ ಕಟ್ಟಿಕೊಂಡು ರಂಗ ಪಯಣಕ್ಕೆ ನಾಂದಿ ಹಾಡಿದ್ದಾರೆ ಎಂದರು.

ನಮ್ಮ ಹಳ್ಳಿ ಥಿಯೇಟರ್ ತಂಡದಿಂದ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದಂತ ವೈದ್ಯ ಡಾ. ವಿ ಎಲ್ ಎಸ್ ಕುಮಾರ್ ಅವರು, ಕೋವಿಡ್ ಸಂದರ್ಭದಲ್ಲಿ ನಾವೆಲ್ಲ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ. ಅಂತಹ ಸ್ಥಿತಿ ಮುಂದಿನ ದಿನದಲ್ಲಿ ಎದುರಾಗುವುದು ಬೇಡ. ನಿಮ್ಮ ಕೈಲಾದ ಸಹಾಯವನ್ನು ಮಾಡಿ
ಮಾನವೀಯತೆ ಮರೆಯಿರಿ ಎಂದು ಕಿವಿ ಮಾತನ್ನಾಡಿದರು.

ರಂಗಸಾದಕ ಪ್ರಶಸ್ತಿ ಸ್ವೀಕರಿಸಿದ ರಂಗಕರ್ಮಿಗಳಾದ ಶ್ರೀಮತಿ ದಾಕ್ಷಾಯಿಣಿ ಭಟ್ ಅವರು , ಇಲ್ಲಿಯವರೆಗೆ ವಿವಿಧ ಕಡೆಗಳಲ್ಲಿ ಅನೇಕ ಪ್ರಶಸ್ತಿಗಳು ದೊರೆತಿವೆ. ಆದರೆ ನಮ್ಮ ತವರು ಜಿಲ್ಲೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವ ಸಂತೋಷಕ್ಕೆ ಪಾರವೇ ಇಲ್ಲ. ನನ್ನ ರಂಗಭೂಮಿ ಪಯಣದಲ್ಲಿ ಈ ಪ್ರಶಸ್ತಿ ಮರೆಯಲು ಸಾಧ್ಯವಿಲ್ಲ. ನಮ್ಮ ಹಳ್ಳಿ ಥಿಯೇಟರ್ ತಂಡವು ಈ ರೀತಿ ರಂಗಕರ್ಮಿಗಳನ್ನ ಗುರುತಿಸಿ ಪ್ರಶಸ್ತಿ ನೀಡುವುದು ನಿಜಕ್ಕೂ ಶ್ಲಾಘನೀಯ ಎಂದರು.

ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳಿಗೆ ರಂಗಭೂಮಿ ಬಗ್ಗೆ ಅರಿವು ಮೂಡಿಸಲು ನೂತನ ಶಿಕ್ಷಣ ನೀತಿಯಿಂದ ಅನೇಕ ಬದಲಾವಣೆಗಳು ಆಗಿವೆ. ಮುಂದಿನ ದಿನಗಳಲ್ಲಿ ರಂಗಭೂಮಿ ಬಗ್ಗೆ ಮಕ್ಕಳಲ್ಲಿ ಹೊಸ ಅಭಿರುಚಿ ಬೆಳೆಯಲಿದೆ ಎಂದರು.

ಶ್ರೀಪಾದ ತೀರ್ಥಹಳ್ಳಿ ಮತ್ತು ಶಿವಕುಮಾರ್ ತೀರ್ಥಹಳ್ಳಿಯವರ ಸಹ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಇರುವ ರಾಜ್ಯ ಪ್ರಶಸ್ತಿ ಪಡೆದ ತುರುಬು ಕಟ್ಟುವ ಹದನ ನಾಟಕ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ
ನಮ್ಮ ಹಳ್ಳಿ ಥಿಯೇಟರ್ ರಂಗ ಸಮಾಜ ಸದಸ್ಯರಾದ ಡಾಕ್ಟರ್ ಗುರುಪ್ರಸಾದ್ ಟಿ ಆರ್, ಪ್ರಮುಖರಾದ ಸ್ಪೂರ್ತಿ ಪ್ರಸಾದ್, ಸಂಧ್ಯಾ ಕಾವೇರಿ, ವಿನಯ್, ಸಂದೇಶ್ ಭಟ್, ನಮ್ಮ ಹಳ್ಳಿ ಥಿಯೇಟರ್ ಕಲಾವಿದರು, ರಂಗಾಸಕ್ತರು ಹಾಗೂ ಇನ್ನಿತರರು ಭಾಗಿಯಾಗಿದ್ದರು‌

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Gurudatta Hegde ಅತ್ಯಾಧುನಿಕ ತಂತ್ರಾಂಶವನ್ನು ಅರಿತು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಿ : ಗುರುದತ್ತ ಹೆಗಡೆ

Gurudatta Hegde ನಾಗಾಲೋಟದಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರವು ಸುಗಮ ಆಡಳಿತಕ್ಕೆ...

MESCOM ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ.26 ರಂದು ಬೆಳಿಗ್ಗೆ...

Backward Classes Welfare Department ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ...

Department of Horticulture ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Horticulture ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ...