Friday, August 7, 2026
Friday, August 7, 2026
Home Blog Page 127

ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳ ಕೌಶಲ್ಯ ವೃದ್ದಿಸಲು ಪೂರಕ- ಬ್ರಹ್ಮಕುಮಾರಿ ಸ್ವಾತಿ

0

ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳು ಉತ್ತಮವಾಗಿ ಸಂವಹನ ನಡೆಸಲು ಹಾಗು ಆತ್ಮವಿಶ್ವಾಸದಿಂದ ಮುನ್ನಡೆಯಲು, ಸಾರ್ವಜನಿಕ ಭಾಷಣ, ಸೃಜನಶೀಲ ಬರವಣಿಗೆ, ನೃತ್ಯ, ಕ್ರೀಡೆಗಳ ಬಗ್ಗೆ ಜ್ಞಾನ ಹೆಚ್ಚಿಸಿದೆ ಎಂದು ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ, ರಾಜಯೋಗಿನಿ, ಬ್ರಹ್ಮಕುಮಾರಿ ಸ್ವಾತಿ ಹೇಳಿದರು.

ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸರ್ಟಿಫಿಕೇಟ್ ನೀಡಿ ಮಾತನಾಡಿ, ಪ್ರತಿ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಸಹಕಾರಿಯಾಗಿದೆ. ಸಂವಹನಕಾರರು ಮತ್ತು ವಾಗ್ಮಿಗಳು ಕಲಿಕೆಯನ್ನು ಆಕರ್ಷಕವಾಗಿಸಿ ಹಂತ ಹಂತವಾಗಿ ಆತ್ಮವಿಶ್ವಾಸವನ್ನು ಬೆಳೆಸಲು ವ್ಯಕ್ತಿತ್ವ ವಿಕಸನ ಶಿಬಿರ ವಿನ್ಯಾಸಗೊಳಿಸಲಾಗಿತ್ತು ಎಂದು ತಿಳಿಸಿದರು.

ಮಕ್ಕಳಿಗೆ ಸವಾಲಿನ ಸನ್ನಿವೇಶಗಳನ್ನು ಎದುರಿಸುವ ಬಗ್ಗೆ, ಅವರಲ್ಲಿ ಕೌಶಲ್ಯ ವೃದ್ಧಿಸಲು ಪೂರಕವಾದ ಚಟುವಟಿಕೆಗಳನ್ನು ನಡೆಸಲಾಯಿತು. ವೈಯಕ್ತಿಕ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ದಿಗೆ ನೆರವಾಗಿದೆ. ಶಿಬಿರವು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮನೋಭಾವ ಬೆಳೆಸಿದೆ. ಮುಂದಿನ ದಿನಗಳಲ್ಲೂ ಇಂತಹ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಸ್ಥೆಯು ನೀಡಿದ ಬೇಸಿಗೆ ವ್ಯಕ್ತಿತ್ವ ವಿಕಸನ ಶಿಬಿರ ಮಕ್ಕಳಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಲು, ವೈಯಕ್ತಿಕ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಮತ್ತು ಕಡಿಮೆ ಒತ್ತಡದ ವಾತಾವರಣದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಸ್ವಾತಂತ್ರö್ಯ ಒದಗಿಸಿದೆ. ಬೇಸಿಗೆ ವ್ಯಕ್ತಿತ್ವ ವಿಕಸನ ಶಿಬಿರ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಈ ಶಿಬಿರದ ಸಮಯದಲ್ಲಿ ನೀವು ಗಳಿಸಿದ ಕೌಶಲ್ಯಗಳು ಸಕಾರಾತ್ಮಕ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಕ್ರಿಯವಾಗಿ ಸಿದ್ಧರಾಗಿರಿಸಲು ಸಹಾಯ ಮಾಡುತ್ತದೆ. ಕಲಿಕೆಗೆ ಹೆಚ್ಚು ಹೊಂದಿಕೊಳ್ಳುವ ವಿಧಾನವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ತೆರಿಗೆ ಸಲಹೆಗಾರ ಆರ್.ಮನೋಹರ, ಬ್ರಹ್ಮಕುಮಾರಿ ಕಾವ್ಯ, ಈಶ್ವರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Klive special Article “ಶಂಕರಂ ಲೋಕ ಶಂಕರಂ” ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ

0

Klive special Article ಶ್ರೀಶಂಕರಾಚಾರ್ಯ ಗುರುಗಳು (ಶ್ರೀಶಂಕರಜಯಂತಿಯ ಸಂದರ್ಭದಲ್ಲಿ)

ಪ್ರತಿವರ್ಷ ವೈಶಾಖಮಾಸದ ಶುಕ್ಲಪಕ್ಷದ ಪಂಚಮಿಯಂದು ಶ್ರೀಶಂಕರಭಗವತ್ಪಾದರ ಜಯಂತಿಯನ್ನು ಆಚರಿಸಲಾಗುತ್ತದೆ.
ಶ್ರೀಶಂಕರಾಚಾರ್ಯರು ಅದ್ವೈತಮತ ಸಿದ್ಧಾಂತದ ಸ್ಥಾಪಕರು. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶ್ರೀಶಂಕರಾಚಾರ್ಯರು ಮೊದಲಿಗರು.
ಇವರು ಕೇರಳ ರಾಜ್ಯದ ಕಾಲಟಿ ಎನ್ನುವ ಹಳ್ಳಿಯಲ್ಲಿ ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು.
ತಂದೆ ಶಿವಗುರು,ತಾಯಿ ಆರ್ಯಾಂಬೆ ಎನ್ನುವ ಹೆಸರಿನವರು.
ತಂದೆಯನ್ನು ಬಹಳ ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡರು.ತಾಯಿಯ ಆರೈಕೆಯಲ್ಲಿ ಬೆಳೆದವರು.ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ತಳೆದ ಇವರು ಸನ್ಯಾಸ ಜೀವನದ ಕಡೆಗೆ ಒಲವು ತೋರಿದರು. ಆದರೆ
ಒಬ್ಬನೇ ಮಗನಾಗಿದ್ದ ಶಂಕರರನ್ನು ಸನ್ಯಾಸಿಯಾಗಿ ನೋಡಲು ತಾಯಿಗೆ ಮನಸ್ಸಿರಲಿಲ್ಲ. ಹಾಗಾಗಿ ತಾಯಿಯ ಮನವೊಲಿಸಲು ಬಹಳ ಕಷ್ಟ ಪಡಬೇಕಾಯಿತು.ತಾಯಿಗೆ ಅವರ ಅಂತಿಮ ಕ್ಷಣದಲ್ಲಿ
ತಾನು ಎಲ್ಲಿದ್ದರೂ ಬರುವುದಾಗಿ ಮಾತು ಕೊಟ್ಟು, ಶಂಕರರು ಸೂಕ್ತ ಗುರುವನ್ನು ಹುಡುಕುತ್ತಾ ಹೊರಡುತ್ತಾರೆ.ತಾಯಿಗೆ ಕೊಟ್ಟ ಮಾತಿನಂತೆ ಆಕೆಯ ಅಂತಿಮ ಕಾಲದಲ್ಲಿ ಕಾಲಟಿಗೆ ಹಿಂದಿರುಗಿ ತಾಯಿಯ
ಅಂತಿಮ ವಿಧಿಗಳನ್ನು ಪೂರೈಸುತ್ತಾರೆ.ನರ್ಮದಾ ನದೀ ತೀರದಲ್ಲಿದ್ದ ಶ್ರೀಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತಮ್ಮ ಗುರುಗಳನ್ನಾಗಿ ಪಡೆಯುತ್ತಾರೆ. ಅವರಿಂದಲೇ ಸನ್ಯಾಸದೀಕ್ಷೆಯನ್ನೂ ಪಡೆಯುತ್ತಾರೆ.ಗುರುಗಳಿಂದ ವೇದಾಂತ ಶಾಸ್ತ್ರಗಳನ್ನು ಅಭ್ಯಾಸಮಾಡಿದ ನಂತರ
ಕಾಶಿ ಕ್ಷೇತ್ರಕ್ಕೆ ತೆರಳಿ ಅಲ್ಲಿ ಕೆಲವರು ತಮ್ಮ ಶಿಷ್ಯರನ್ನಾಗಿ ಪಡೆದು ಅವರಿಗೆ ವೇದಾಂತದ ಪಾಠವನ್ನು ಹೇಳಿಕೊಟ್ಟರು.ಶ್ರೀಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಪ್ರತಿಪಾದಕರು.ಇವರ ಸಿದ್ಧಾಂತದ ಪ್ರಕಾರ
ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ
ಪರಮಾತ್ಮನು,ಪರಮಾತ್ಮನೇ ಆತ್ಮನು.
ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಆಧ್ಯಾತ್ಮಿಕ ವಿಚಾರದಮೇಲಿನ ವಾದದಲ್ಲಿ ಸೋಲಿಸಿದರು.ಮಂಡನಮಿಶ್ರರೆಂಬ ದೊಡ್ಡ ವಿದ್ವಾಂಸರನ್ನು ವೇದಾಂತ ಚರ್ಚೆಯಲ್ಲಿ ಸೋಲಿಸಿದ ಘಟನೆ ಬಹು ಮುಖ್ಯವಾದುದು.ಮುಂದೆ ಮಂಡನ ಮಿಶ್ರರೇ ಶ್ರೀಸುರೇಶ್ವರಾಚಾರ್ಯ ಎಂಬ ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕುಪೀಠಗಳನ್ನು ಸ್ಥಾಪಿಸಿ ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ
ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿದರು. ಹಲವಾರು ಪಂಡಿತರನ್ನೂ,ಶಾಸ್ತ್ರವೇತ್ತರನ್ನೂ ಜಯಿಸಿ,ಸರ್ವಜ್ಞಪೀಠವನ್ನೇರಿದರು.
ಕಾಶ್ಮೀರದ ಪಂಡಿತರುಗಳನ್ನು ವಾದದಲ್ಲಿ ಜಯಿಸಿ,ಅವರು ಸೋಲೊಪ್ಪುವಂತೆ ಮಾಡಿದರು.
Klive special Article ಶ್ರೀಶಂಕರಾಚಾರ್ಯರು ಉತ್ತರದಲ್ಲಿ ಬದರೀಪೀಠ, ದಕ್ಷಿಣದಲ್ಲಿ ಶೃಂಗೇರಿಪೀಠ,ಪೂರ್ವದಲ್ಲಿ ಪುರಿಪೀಠ ಮತ್ತು ಪಶ್ಚಿಮದಲ್ಲಿ ದ್ವಾರಕಾಪೀಠ.ಈ ನಾಲ್ಕು ಮಠಗಳೂ ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.ಶಂಕರರು ಬಾದರಾಯಣರ ಬ್ರಹ್ಮಸೂತ್ರ(ವೇದಾಂತಸೂತ್ರ/ಶಾರೀರಿಕ ಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು.ಉಪನಿಷತ್ತುಗಳಿಗೆ ಮತ್ತು ಶ್ರೀ ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು.ಇವರು ರಚಿಸಿದ ಭಜಗೋವಿಂದಮ್ ಸ್ತೋತ್ರ ಪ್ರಸಿದ್ಧವಾಗಿದೆ.
ಹಲವಾರು ಇತರೆ ಸ್ತೋತ್ರಗಳನ್ನೂ ಶಂಕರ ಭಗವತ್ಪಾದರು ರಚಿಸಿದ್ದಾರೆ.ಕನಕಧಾರ ಸ್ತೋತ್ರ ಎನ್ನುವ ಶ್ರೇಷ್ಠವಾದ ಸ್ತೋತ್ರವನ್ನೂ ರಚಿಸಿದ್ದಾರೆ. ಇಂತಹ ಮಹಿಮರಾದ ಶ್ರೀಶಂಕರಾಚಾರ್ಯರು ತಮ್ಮ 32ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಶ್ರೀಶಂಕರಾಚಾರ್ಯರ ಜಯಂತಿಯ ದಿನವಾದ ಇಂದುಗುರುಗಳನ್ನು ಭಕ್ತಿಯಿಂದ ಸ್ಮರಿಸಿ,ನಮ್ಮ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

RM Manjunath Gowda ಹುಲಿಕಲ್ ಘಾಟಿ ಪ್ರಕರಣ.ಇಂಜಿನಿಯರುಗಳೇ ಹೊಣೆ. ಎಫ್ ಐ ಆರ್ ದಾಖಲಿಸಲು ಎಸ್ ಪಿ.ಅವರಿಗೆ ಮನವಿ ಮಾಡುವೆ- ಆರ್.ಎಂ.ಮಂಜುನಾಥ ಗೌಡ.

0

RM Manjunath Gowda ಹುಲಿಕಲ್ ಘಾಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮಕೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ
ಆರ್ ಎಂ ಮಂಜುನಾಥ್ ಗೌಡ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪ್ರಕರಣ ವಿವರಿಸಿ
ಆಕ್ರೋಶ ವ್ಯಕ್ತಪಡಿಸಿದ ಆರ್ ಎಂ ಮಂಜುನಾಥ್ ಗೌಡರು
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ದುರಂತ ನಡೆದ ಸ್ಥಳಕ್ಕೆ ನಾನು ಕೂಡ ಬೇಟಿ ನೀಡಿದ್ದೇನೆ
ಅಂದು ನಾನು ಹೇಳಿದ್ದೇನೆ ಇದು ತಾಂತ್ರಿಕ ದೋಷದಿಂದ ಆದಂತಹ ಎಡವಟ್ಟು
ಇದಕ್ಕೆ ಪಿ ಡಬ್ಲ್ಯು ಡಿ ಎಂಜಿನಿಯರಿಗಳೆ ನೇರ ಹೊಣೆ
ತಾಂತ್ರಿಕವಾಗಿ ಸ್ಥಳವನ್ನು ಪರಿಶೀಲನೆ ಮಾಡದೆ ಇರುವುದು ಘಟನೆಗೆ ಕಾರಣ
ಈ ಘಟನೆಗೆ ಕಾರಣವಾಗಿದ್ದು ಏನು ಎನ್ನುವುದರ ತನಿಖೆ ಸಂಗಡ ಕಾಮಗಾರಿ ಕೆಲಸ ಕೂಡ ಜೊತೆಗೆ ಮುಂದುವರೆಯಬೇಕು

ಇದರಲ್ಲಿ ಇಂಜಿನಿಯರ್ ಅವರ ಬೇಜವಾಬ್ದಾರಿತನ ಎದ್ದು ಕಾಣುತ್ತದೆ
ಮಹತ್ವದ ಕಾಮಗಾರಿ ನಡೆಯುವಾಗ ಇಂಜಿನಿಯರ್ ಗಳು ಸ್ಥಳದಲ್ಲಿ ಇರಲೇಬೇಕು
ಆದರೆ ಯಾಕೆ ಆ ಸಮಯದಲ್ಲಿ ಇಂಜಿನಿಯರ್ ಗಳು ಸ್ಥಳದಲ್ಲಿ ಇರಲಿಲ್ಲ?

ಆಗುಂಬೆ ಘಾಟಿಗಿಂತ ಸ್ವಲ್ಪ ಸುಲಭವಾಗಿ ಏರಬಹುದಾದ ಘಾಟಿ ಹುಲಿಕಲ್ ಘಾಟಿ
ಕಾರ್ಮಿಕರನ್ನ ಬಳಸಿಕೊಳ್ಳುವಾಗ ಬಹಳ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿತ್ತು
ಸಂಪೂರ್ಣವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ

ಸಣ್ಣ ಸಣ್ಣ ಕೇಸ್ಗಳಿಗೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಈ ಪ್ರಕರಣದಲ್ಲಿ ಯಾಕೆ ಎಫ್ಐಆರ್ ಮಾಡುತ್ತಿಲ್ಲ?
ಮೂರು ಜನ ಈಗಾಗಲೇ ಇದರಿಂದ ಸತ್ತಿದ್ದಾರೆ ಹಾಗೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ

ಹಾಗಾಗಿ ನಾನು ಶಿವಮೊಗ್ಗದ ಎಸ್ ಪಿ ಅವರಿಗೆ ಎಫ್ ಐ ಆರ್ ದಾಖಲಿಸುವಂತೆ ಮನವಿ ಮಾಡುತ್ತೇನೆ

RM Manjunath Gowda ಕಾರ್ಮಿಕ ಇಲಾಖೆ ಇದರಲ್ಲಿ ಮೌನವಹಿಸಿದೆ ಎಂಬ ಬಗ್ಗೆಯೂ ಕೂಡ ಯೋಚನೆ ಮಾಡಬೇಕು
ಅವರು ಕೂಡ ಅಸಂಘಟಿತ ಕಾರ್ಮಿಕರ ಸಾವಿನ ಬಗ್ಗೆ ದೂರನ್ನ ಸಲ್ಲಿಸಬಹುದಿತ್ತು
ಆದರೆ ಇದುವರೆಗೂ ಯಾರು ಕೂಡ ಅಲ್ಲಿಗೆ ಬಾರದಿದ್ದು ವಿಷಾಧಕರ
ಪೊಲೀಸ್ ಇಲಾಖೆ ಕಾರ್ಮಿಕ ಇಲಾಖೆ ಹಾಗೂ ಪಿಡಬ್ಲ್ಯೂ ಇಲಾಖೆ 3 ಇಲಾಖೆ ಕೂಡ ನಿರ್ಲಕ್ಷವಹಿಸಬಾರದು

ಕೂಡಲೇ ಈ ಪ್ರಕರಣದ ಬಗ್ಗೆ ದೂರು ದಾಖಲಾಗಿ ಎಫ್ ಐ ಆರ್ ಆಗಬೇಕು

ಇದರಿಂದ ಮುಂದೆ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳಬಹುದು
ಕಾರ್ಮಿಕ ಇಲಾಖೆಯವರು ಕೂಡ ಈ ಬಗ್ಗೆ ದೂರ ನೀಡಬಹುದು ಆದರೆ ಯಾಕೆ ಮುಂದೆ ಬರುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಮಂಜುನಾಥ್ ಗೌಡರು
ಆಕ್ರೋಶ ವ್ಯಕ್ತಪಡಿಸಿದರು.

Graduation Day ಮ್ಯಾನೇಜ್ಮೆಂಟ್ ಪದವೀಧರರು ಶೈಕ್ಷಣಿಕ ಮತ್ತು ಔದ್ಯಮಿಕ ರಂಗದ ನಡುವಿನ ಸೇತುವೆ- ವಿನಯ್ ಪಾಟೀಲ್.

0

Graduation Day “ಜ್ಞಾನವು ಕೌಶಲ್ಯವಾಗದಿದ್ದಲ್ಲಿ ನಿರರ್ಥಕ”

-ಬಾಪೂಜಿ ಎಂಬಿಎ ಪದವಿ ಪ್ರದಾನದಲ್ಲಿ ವಿನಯ್ ಪಾಟೀಲ್-

ದಾವಣಗೆರೆ.ಏ.18. ಪದವಿ ಮೂಲಕ ಪಡೆದ ಶೈಕ್ಷಣಿಕ ಜ್ಞಾನವು ಕೌಶಲ್ಯವಾಗಿ ಪರಿವರ್ತನೆಯಾಗದಿದ್ದಲ್ಲಿ ನಿರರ್ಥಕ ಎಂದು ನಾಯಕತ್ವ ತರಬೇತುದಾರ ವಿನಯ್ ಪಾಟೀಲ್ ಅಭಿಪ್ರಾಯಪಟ್ಟರು.

ಅವರಿಂದು ಸಂಜೆ ನಗರದ ಲೇಕ್ ವ್ಯೂನ ಬಾಪೂಜಿ ಎಂಬಿಎ ಪದವಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಮ್ಯಾನೇಜ್ಮೆಂಟ್ ಪದವೀಧರರು ಶೈಕ್ಷಣಿಕ ಮತ್ತು ಔದ್ಯಮಿಕ ರಂಗದ ನಡುವಿನ ಸೇತುವೆಯಂತೆ ಕಾರ್ಯಗೈಯಬೇಕಿದ್ದು ಸಮಾಜದೊಂದಿಗೆ ಬೆರೆತು ಔದ್ಯಮಿಕರಂಗದ ವೈವಿಧ್ಯತೆಗಳ ಅರಿವು ಪಡೆದು ನಿರ್ಧಾರಗಳನ್ನು ಕೈಗೊಳ್ಳಬೇಕು, ಇದಕ್ಕೆ ಆತ್ಮವಿಶ್ವಾಸವೇ ಬಂಡವಾಳವೆಂದು ಭಾವಿಸಬೇಕು ಎಂದರು. ವೇತನದ ಮೊತ್ತ ನೋಡಿ ನೌಕರಿಗಳಿಗೆ ಹೋಗದೆ ಕಲಿಯಲು ಅವಕಾಶ ಎಷ್ಟಿದೆ ಎಂಬುದನ್ನು ಪರಿಗಣಿಸಬೇಕು ಎಂದರಲ್ಲದೇ ಯುದ್ಧ ಯಾವುದೇ ರಾಷ್ಟ್ರಗಳ ಮಧ್ಯೆ ನಡೆದರೂ ಯಾರೂ ನಿಶ್ಚಿಂತೆಯಿಂದ ಕೂರುವಂತಿಲ್ಲ, ಉಂಟಾಗುವ ಪರಿಣಾಮಗಳಿಗೆ ಸಾಧ್ಯ ಪರಿಹಾರ ಏನೆಂಬುದನ್ನು ಆಲೋಚಿಸಲೇಬೇಕು ಎಂದರು.

ಅಧ್ಯಕ್ಷೀಯ ನುಡಿಗಳ ನಾಡಿದ ಸಂಸ್ಥೆಯ ಗೌರವಾಧ್ಯಕ್ಷ ಅಥಣಿ ಎಸ್ ವೀರಣ್ಣನವರು ಪದವೀಧರರಿಗೆ ವಿಶಾಲ ವಿಶ್ವವು ತೆರೆದಿದೆ, ಅದರಲ್ಲಿ ಛಾಪು ಮೂಡಿಸಲು ಅವಕಾಶವಿದೆ, ಇದಕ್ಕಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳ ಅರಿವನ್ನು ನಿರಂತರ ಹೊಂದುತ್ತಿರಬೇಕು ಎಂದು ನಿರ್ವಹಣಾ ಪದವೀಧರರಿಗೆ ಕಿವಿಮಾತು ಹೇಳಿದರು.

Graduation Day ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಸ್ವಾಗತ ಕೋರಿದರು. ವರದಿ ವಾಚನವನ್ನು ಸಹಾಯಕ ಅಧ್ಯಾಪಕಿ ಸರೋಜಾ ಎಸ್ ಮಾಡಿದರೆ ಸಹಾಯಕ ಅಧ್ಯಾಪಕ ಡಾ. ವಿಜಯ್ ಕೆ ಎಸ್ ಪದವಿ ಪ್ರದಾನದ ವಿನಂತಿ ನೆರವೇರಿಸಿದರು. ವಿಭಾಗ ಮುಖ್ಯಸ್ಥ ಡಾ ಸುಜಿತ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ. ಶ್ರುತಿ ಮಾಕನೂರು ಮುಂತಾಗಿ ಬೋಧಕ ವರ್ಗದ ಉಪಸ್ಥಿತಿಯಲ್ಲಿ ರಾಂಕ್ ವಿಜೇತರನ್ನು ಪುರಸ್ಕರಿಸಲಾಯಿತು. ಪ್ರಾಂಶುಪಾಲ ಡಾ. ಪ್ರಕಾಶ್ ಎಸ್ ಅಳಲಗೇರಿ ವಂದನೆ ಸಮರ್ಪಿಸಿದರು.

-ಚಿತ್ರ ಹಾಗೂ ವರದಿ:
ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು

Department of Labour ಕಾರ್ಮಿಕರಿಗೆ,ಆರ್ಥಿಕ ಹಿಂದುಳಿದವರಿಗೆ ಉಚಿತ ಕಿಡ್ನಿ, ಲಿವರ್ ,ಚಿಕಿತ್ಸೆ ನೀಡಲಾಗುತ್ತದೆ- ಡಾ.ಚಂದ್ರಶೇಖರ್.

0

Department of Labour ಭದ್ರಾವತಿಯ ಬೈಪಾಸ್ ಆಂಜನೇಯ ದೇವಸ್ಥಾನ ಆವರಣದಲ್ಲಿ ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಆರ್‌ಪಿಎಲ್ ಸುರಕ್ಷಿತ ಕಿಟ್‌ಗಳ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭದ್ರಾವತಿ ಶಾಸಕ ಮತ್ತು ಕೆಆರ್‌ಐಡಿಎಲ್ ಅಧ್ಯಕ್ಷ ಬಿ.ಕೆ. ಸಂಗಮೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತೃಪ್ತಿ ಹೆಲ್ತ್ ಕೇರ್ ಸಂಸ್ಥಾಪಕ ಡಾ. ಚಂದ್ರ ಶೇಖರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಸೆಂಟರ್‌ನಲ್ಲಿ ಕಾರ್ಮಿಕರಿ, ಆರ್ಥಿಕ ಹಿಂದುಳಿ ದವರಿಗೆ, ವಾಹನ ಚಾಲಕರುಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಉಚಿತ ವಾಗಿ ಕಿಡ್ನಿ, Department of Labour ಲಿವರ್ ಮತ್ತು ಮೂತ್ರಕೋಶದ ಚಿಕಿತ್ಸೆ ಮತ್ತು ಇದರ ಆರೋಗ್ಯ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಕಾರ್ಮಿಕರ ಸಂಘದ ಅಧ್ಯಕ್ಷ ಸಂಜಯ್ ಮತ್ತು ಕಾರ್ಯದರ್ಶಿ ಸುಂದರೇಶ್ ಇನ್ನಿತರರಿದ್ದರು.

B.Y. Raghavendra ಸ್ತ್ರೀ ಸ್ವಾತಂತ್ರ್ಯಕ್ಕೆ ಬಸವಣ್ಣನವರ ಆದ್ಯತೆ. ಕಾಂಗ್ರೆಸ್ ನೇತೃತ್ವದ ವಿಪಕ್ಷಗಳುನಾರಿ ಶಕ್ತಿ ಮಸೂದೆ ಬೀಳಿಸುವ ಮೂಲಕ ಅಣ್ಣವನರಿಗೆ ಅಗೌರವ ತೋರಿದ್ದಾರೆ- ಬಿ.ವೈ.ರಾಘವೇಂದ್ರ.

0

B.Y. Raghavendra ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸಂಸದ ರಾಘವೇಂದ್ರ ಸುದ್ದಿಗೋಷ್ಟಿ

ಸುದ್ದಿಗೋಷ್ಟಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಬಸವಣ್ಣನವರು ಮಹಿಳಾ ಸ್ವಾತಂತ್ರ್ಯಕ್ಕೆ ‌ನೀಡಿದ್ದ ಮಹತ್ವವನ್ನ ಕೊಂಡಾಡಿದರು.

ಸ್ತ್ರೀ ಸ್ವಾತಂತ್ರ್ಯಕ್ಕೆ ಬಸವಣ್ಣರ ಅನುಭವ ಮಂಟಪದಲ್ಲಿ ಜಯ ಸಿಕ್ಕಿತ್ತು
ಲಿಂಗ ಸಮಾನತೆ, ಅಣ್ಣ ಬಸವಣ್ಣರ ವಿಚಾರಗಳು ಪ್ರಪಂಚಕ್ಕೆ ದಾರಿದೀಪವಾಗಿವೆ.

ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳಿಂದ ಈಗ
ಬಸವಣ್ಣರ ವಿಚಾರ, ಸ್ತ್ರೀ ಸ್ವಾತಂತ್ರ್ಯಕ್ಕೆ ತಣ್ಣೀರು ಎರಚುವ ಕೆಲಸ ಆಗಿದೆ.

ನಾರಿಶಕ್ತಿ ವಂದನಾ ನಿಯಮ್ ಜಾರಿ ಮಾಡಲು ಕೇಂದ್ರ ಮುಂದಾಗಿತ್ತು
ಸಂವಿಧಾನ 131ನೇ ತಿದ್ದುಪಡಿ, ಕ್ಷೇತ್ರ ಮರು ವಿಂಗಡಣೆ, ಕೇಂದ್ರಾಡಳಿತ ಪ್ರದೇಶ ತಿದ್ದುಪಡಿ ಮಸೂದೆ,
ಮಹಿಳಾ ಮೀಸಲಾತಿಗೆ ಪೂರಕವಾದ ಮೂರು ಮಸೂದೆ ತರಲಾಗಿತ್ತು ಎಂದು ನುಡಿದರು.

ಮಲೆನಾಡಿನ ಸಮಸ್ಯೆಗಳು ಅದರಲ್ಲಿ ಪ್ರಮುಖವಾಗಿರುವ ಹೊಸ ನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಬಗ್ಗೆ ಮಾತನಾಡುತ್ತಾ ನನಗೂ ಸಂಸತ್ತಿನಲ್ಲಿ ವುಚಾರ ಮಂಡಿಸಲು ಅವಕಾಶ ಸಿಕ್ಕಿತ್ತು.
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವಿಶೇಷವಾಗಿ ಜನಸಂಖ್ಯೆ ಪರಿಗಣಿಸಬಾರದು
ಹೊಸನಗರ ಜನರ ಪರವಾಗಿ ಅವರ ಧ್ವನಿಯನ್ನ ಮುಟ್ಟಿಸಿದ್ದೇನೆ

ಕಾಂಗ್ರೆಸ್ ಸುಳ್ಳು ವಿಚಾರವಿಟ್ಟು, ತಡೆಯುವ ಷಡ್ಯಂತ್ರ ಮಾಡಿದೆ.
ಮುಸ್ಲಿಂ ಗೆ ಅವಕಾಶ ಇಲ್ಲ ಎಂದು ಹೇಳ್ತಾರೆ
ಧರ್ಮಾಧಾರಿತ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ.

ದೇಶವನ್ನ ವಿಭಜನೆ ಮಾಡ್ತಾರೆ ಅಂತ ಷಡ್ಯಂತ್ರ ಮಾಡಿದ್ರು.
ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಕ್ಕಿಂತ ಹೆಚ್ಚು ಜನಸಂಖ್ಯೆಯ ಶಿಸ್ತನ್ನ ಕಾಪಾಡಿಕೊಂಡಿವೆ.

ದಕ್ಷಿಣ ಭಾರತ ವಿಚಾರಕ್ಕೆ ಅನ್ಯಾಯವಾಗುತ್ತೇ ಎಂದು ಹೇಳಿದ್ರು..
ಇದೇ ಕಾರಣಕ್ಕೆ ಪ್ರಸ್ತುತ ಕ್ಷೇತ್ರಗಳ ಜೊತೆ ಶೇ.50 ರಷ್ಟು ಹೆಚ್ಚಳ ಮಾಡುವುದಾಗಿ ಸರ್ಕಾರ ಹೇಳಿತ್ತು
ಸಾಮಾಜಿಕ ನ್ಯಾಯದ ಮಸೂದೆಯನ್ನ ದುರುದ್ದೇಶದಿಂದ ವಿರೋಧಿಸಿದ್ದಾರೆ.

B.Y. Raghavendra ಮಹಿಳೆಯರಿಗಾದ ಅವಮಾನವನ್ನ ಮರೆಯಲು ಸಾಧ್ಯವಿಲ್ಲ.
ಮಸೂದೆ ಬಿದ್ದಾಗ ಕಾಂಗ್ರೆಸ್ ನವರು ವಿಜಯೋತ್ಸವದ ಸಂಭ್ರಮಾಚರಣೆ ಮಾಡ್ತಾರೆ..
ಇವರು ಯಾವ ನೈತಿಕತೆ ಇಟ್ಟು ಮಹಿಳಾ ಸಬಲೀಕರಣ, ಸ್ವಾತಂತ್ರ್ಯದ ಬಗ್ಗೆ ಮಾತಾಡ್ತಾರೆ..?
ಕಾಂಗ್ರೆಸ್ ನ ಈ ನಡೆ ನಿಜಕ್ಕೂ ಶೋಚನೀಯ.

ಡಿಜಿಟಲ್ ಯುಪಿಐ, ಜನ ಧನ್, ಜಿಎಸ್ಟಿ ಸೇರಿದಂತೆ ಎಲ್ಲದ್ದಕ್ಕೂ ವಿರೋಧ ಮಾಡಿದ್ದರು.
ಸುಳ್ಳು ಹೇಳಿ ಜನರನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಕಾಂಗ್ರೆಸ್ ಮಾಡಿದೆ
ಕಾಂಗ್ರೆಸ್ ಪಕ್ಷವನ್ನ ಈ ದೇಶದ ಮಹಿಳೆಯರು ಕ್ಷಮಿಸಲ್ಲ

ದೇಶದ ಪಾಲಿಗೆ ಏಪ್ರಿಲ್ -16 ಕರಾಳ ದಿನವಾಯಿತು.
ದೇಶದ ಪ್ರತಿ ಮನೆ- ಮನೆಗೂ ಈ ವಿಷಯ ಮುಟ್ಟಿಸುವ ಕೆಲಸವನ್ನ ನಾವು ಮಾಡ್ತೇವೆ

ಶಿವಮೊಗ್ಗದಲ್ಲೂ ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಛೀಮಾರಿ ಹಾಕಿಸ್ತೇವೆ

ಮೋದಿಯವರು ಹಿಂದೇಟು ಹಾಕಲ್ಲ. ಮತ್ತೊಮ್ಮೆ ಪ್ರಯತ್ನ ಮುಂದುವರೆಸ್ತಾರೆ ಎಂದು ಬಿ.ವೈ‌.ರಾಘವೇಂದ್ರ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

Basava Jayanti “ಅರಿವಿನ ಮೇರು..ಅಣ್ಣ”

0

ಲೇ: ಎನ್.ಎನ್.ಕಬ್ಬೂರ.

Basava Jayanti  ಬಸವಣ್ಣನವರನ್ನು (1131-1196) ಬಸವೇಶ್ವರ ಮತ್ತು ಬಸವ ಎಂದೂ ಕರೆಯುತ್ತಾರೆ, ಒಬ್ಬ ಭಾರತೀಯ ತತ್ವಜ್ಞಾನಿ, ಕವಿ, ಶಿವ-ಕೇಂದ್ರಿತ ಭಕ್ತಿ ಚಳುವಳಿಯಲ್ಲಿ ಲಿಂಗಾಯತ ಸಮಾಜ ಸುಧಾರಕ ಮತ್ತು ಕಲ್ಯಾಣಿ ಚಾಲುಕ್/ಕಲಚೂರಿ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಹಿಂದೂ ಶೈವ ಸಮಾಜ ಸುಧಾರಕ. ಬಸವ ಎರಡೂ ರಾಜವಂಶಗಳ ಆಳ್ವಿಕೆಯಲ್ಲಿ ಸಕ್ರಿಯರಾಗಿದ್ದರು, ಆದರೆ ಭಾರತದಲ್ಲಿ ಕರ್ನಾಟಕದಲ್ಲಿ 2ನೇ ರಾಜ ಬಿಜ್ಜಳರ ಆಳ್ವಿಕೆಯಲ್ಲಿ ಅವರ ಪ್ರಭಾವದ ಉತ್ತುಂಗವನ್ನು ತಲುಪಿತ್ತು.

ಬಸವಣ್ಣನವರು ತಮ್ಮ ಕಾವ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಹರಡಿದರು, ಇದನ್ನು ವಚನಗಳು ಎಂದು ಕರೆಯಲಾಗುತ್ತದೆ. ಅವರು ಲಿಂಗ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಯ ಆಚರಣೆಗಳನ್ನು ತಿರಸ್ಕರಿಸಿದರು. ಆದರೆ ಲಿಂಗದ ಚಿತ್ರವಿರುವ ಇಷ್ಟಲಿಂಗ ಹಾರವನ್ನು ಪರಿಚಯಿಸಿದರು, ಪ್ರತಿಯೊಬ್ಬ ವ್ಯಕ್ತಿಗೆ ಅವರ ಜನ್ಮವನ್ನು ಲೆಕ್ಕಿಸದೆ, ಒಬ್ಬರ ಭಕ್ತಿ ಶಿವನಿಗೆ ನಿರಂತರ ಜ್ಞಾಪನೆಯಾಗಲು ಅಹಿಂಸೆಯು ಪ್ರಬಲ ಪ್ರವರ್ತಕವಾಗಿದೆ. ಅವರು ಮಾನವ ಮತ್ತು ಪ್ರಾಣಿ ಬಲಿಗಳನ್ನು ಖಂಡಿಸಿದರು, ಅವರ ರಾಜ್ಯ ಮಂತ್ರಿಯಾಗಿ ಅನುಭವ ಮಂಟಪದಂತಹ ಹೊಸ ಸಾರ್ವಜನಿಕ ಸಂಸ್ಥೆಗಳನ್ನು ಪರಿಚಯಿಸಿದರು, (ಆಧ್ಯಾತ್ಮಿಕ ಅನುಭವದ ಸಭಾಂಗಣ) ಇದು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಚರ್ಚಿಸಲು ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷರು ಮತ್ತು ಮಹಿಳೆಯರನ್ನು ಸ್ವಾಗತಿಸಿತು.

ಹಲವು ಸಾಂಪ್ರದಾಯಿಕ ದಂತಕಥೆಗಳು ಮತ್ತು ಹಗಿಯೋಗ್ರಾಫಿಕ್ ಪಠ್ಯಗಳು ಬಸವಣ್ಣನನ್ನು ಲಿಂಗಾಯತ ಸ್ಥಾಪಕ ಎಂದು ಹೇಳುತ್ತವೆ. ಆದಾಗ್ಯೂ ಕಲಚೂರಿ ಶಾಸನಗಳಂತಹ ಐತಿಹಾಸಿಕ ಪುರಾವೆಗಳನ್ನು ಅವಲಂಬಿಸಿರುವ ಆಧುನಿಕ ಪಾಂಡಿತ್ಯವು ಈಗಾಗಲೇ ಅಸ್ತಿತ್ವದಲ್ಲಿರುವ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿ ಪರಿಷ್ಕರಿಸಿದ ಮತ್ತು ಶಕ್ತಿ ತುಂಬಿದ ಕವಿ ತತ್ವಜ್ಞಾನಿ ಬಸವಣ್ಣ ಎಂದು ಹೇಳುತ್ತದೆ. ಕನ್ನಡ ಕವಿ ಹರಿಹರ (1180) ರ ಬಸವರಾಜದೇವರ ರಗಳೆ ಸಮಾಜ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಆರಂಭಿಕ ದಾಖಲೆಯಾಗಿದೆ, ಮತ್ತು ಲೇಖಕರ ಕಾರಣದಿಂದಾಗಿ ಇದನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಬಸವಣ್ಣನ ಜೀವನ ಮತ್ತು ವಿಚಾರಗಳ ಸಂಪೂರ್ಣ ಖಾತೆಯನ್ನು 13 ನೇ ಶತಮಾನದ ಪವಿತ್ರ ತೆಲುಗು ಪಠ್ಯದಲ್ಲಿ ವಿವರಿಸಲಾಗಿದೆ. ಬಸವಣ್ಣನ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿವೆ. ಅವರನ್ನು ಭಕ್ತಿಭಂಡಾರಿ ಮತ್ತು ಬಸವಣ್ಣ ಎಂದೂ ಕರೆಯಲಾಗುತ್ತದೆ.

●ಆರಂಭಿಕ ಜೀವನ:- ಉತ್ತರ ಭಾಗದ ಬಸವನ ಬಾಗೇವಾಡಿ ಪಟ್ಟಣದಲ್ಲಿ ಹಿಂದೂ ದೇವತೆ ಶಿವನಿಗೆ ಪೂಜಿಸಲ್ಪಡುವ ಕನ್ನಡ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಬಸವಣ್ಣನವರು ಜನಿಸಿದರು. ಅವರನ್ನು ಬಸವ ಎಂದು ಹೆಸರಿಸಲಾಯಿತು, ಇದು ನಂದಿ ಬುಲ್ (ಶಿವನ ವಾಹಕ) ಮತ್ತು ಸ್ಥಳೀಯ ಶೈವ ಸಂಪ್ರದಾಯದ ಗೌರವಾರ್ಥವಾಗಿ ಸಂಸ್ಕೃತ ವೃಷಭದ ಕನ್ನಡ ರೂಪವಾಗಿದೆ.

ಬಸವ ಬೆಳೆದದ್ದು ಕೂಡಲಸಂಗಮದಲ್ಲಿ, ಕೃಷ್ಣಾ ಮತ್ತು ಅದರ ಉಪನದಿ ಮಲಪ್ರಭಾ ನದಿಗಳ ದಡದ ಬಳಿ, ಬಸವ ಹನ್ನೆರಡು ವರ್ಷಗಳ ಕಾಲ ಕೂಡಲಸಂಗಮ ಪಟ್ಟಣದಲ್ಲಿರುವ ಹಿಂದೂ ದೇವಾಲಯದಲ್ಲಿ ಅಧ್ಯಯನ ಮಾಡಿದರು, ಬಸವಣ್ಣನು ತನ್ನ ತಾಯಿಯ ಕಡೆಯ ಸೋದರ ಸಂಬಂಧಿ ಗಂಗಾಂಬಿಕೆಯನ್ನು ವಿವಾಹವಾದನು. ಆಕೆಯ ತಂದೆ ಕಲಚೂರಿ ರಾಜ ಬಿಜ್ಜಳನ ಪ್ರಾಂತೀಯ ಪ್ರಧಾನ ಮಂತ್ರಿಯಾಗಿದ್ದರು, ಅವರು ರಾಜನ ಆಸ್ಥಾನಕ್ಕೆ ಲೆಕ್ಕಪರಿಶೋಧಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವನ ತಾಯಿಯ ಚಿಕ್ಕಪ್ಪ ತೀರಿಕೊಂಡಾಗ, ರಾಜನು ಅವನನ್ನು ಮುಖ್ಯಮಂತ್ರಿಯಾಗಲು ಆಹ್ವಾನಿಸಿದನು.

● ಅನುಭವ ಮಂಟಪ:- ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಶೈವ ಧರ್ಮವನ್ನು ಪುನರುಜ್ಜೀವನಗೊಳಿಸುವ, ಜಂಗಮರು ಎಂದು ಕರೆಯಲ್ಪಡುವ ತಪಸ್ವಿಗಳನ್ನು ಗುರುತಿಸುವ ಮತ್ತು ಅಧಿಕಾರ ನೀಡುವ ಮೂಲಕ ಸಾಮಾಜಿಕ ಸುಧಾರಣೆಗಳು ಮತ್ತು ಧಾರ್ಮಿಕ ಚಳವಳಿಯನ್ನು ಪ್ರಾರಂಭಿಸಿದರು, ಅವರು 12 ನೇ ಶತಮಾನದಲ್ಲಿ ಪ್ರಾರಂಭಿಸಿದ ನವೀನ ಸಂಸ್ಥೆಗಳಲ್ಲಿ ಒಂದಾದ ಅನುಭವ ಮಂಟಪ ಎಂಬುದು ಸಾರ್ವಜನಿಕ ಸಭೆಯಾಗಿದ್ದು, ಇದು ಜೀವನದ ಆಧ್ಯಾತ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ದೂರದ ದೇಶಗಳಿಂದ ಜೀವನದ ವಿವಿಧ ಹಂತಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಆಕರ್ಷಿಸಿತ್ತು. ಬಸವಣ್ಣನವರ ಅನುಭವ ಮಂಟಪದಲ್ಲಿ ಎರಡೂ ಲಿಂಗಗಳ ಸಮಾಜದ ಯಾವುದೇ ಸದಸ್ಯರು ಆಧ್ಯಾತ್ಮಿಕ ವಿಚಾರಗಳ ಸಭೆ ಮತ್ತು ಚರ್ಚೆಗಾಗಿ ಸಭಾಂಗಣದಲ್ಲಿ ಭಾಗವಿಸಬಹುದಾಗಿತ್ತು. ಅಲ್ಲಿ ಶಿವನ ಉತ್ಕಟ ಭಕ್ತರು ತಮ್ಮ ಸಾಧನೆಗಳು ಮತ್ತು ಆಧ್ಯಾತ್ಮಿಕ ಕಾವ್ಯಗಳನ್ನು ಸ್ಥಳೀಯ ಭಾಷೆಯಲ್ಲಿ ಹಂಚಿಕೊಂಡರು. ಅವರು ಆಚರಣೆಗಳು, ದ್ವಂದ್ವತೆ ಮತ್ತು ದೇವರ ಬಾಹ್ಯೀಕರಣವನ್ನು ಪ್ರಶ್ನಿಸಿದರು ಮತ್ತು ನಿಜವಾದ ದೇವರು “ಸ್ವಯಂ ಜನ್ಮತಃ” ಎಂದು ಹೇಳಿದರು.

● ಕಾಯಕವೇ ಕೈಲಾಸ:- ಬಸವಣ್ಣನವರು ಸ್ಥಳೀಯ ಭಾಷೆಯಲ್ಲಿ ಕವನ ರಚಿಸಿದರು ಮತ್ತು ಜನಸಾಮಾನ್ಯರಿಗೆ ತಮ್ಮ ಸಂದೇಶವನ್ನು ಹರಡಿದರು. ಅವರ ಬೋಧನೆಗಳು ಮತ್ತು ಶ್ಲೋಕಗಳಾದ ಕಾಯಕವೇ ಕೈಲಾಸ (ಕೆಲಸವು ಕೈಲಾಸಕ್ಕೆ ಮಾರ್ಗವಾಗಿದೆ, ಅಥವಾ ಕೆಲಸವೇ ಪೂಜೆ) ಜನಪ್ರಿಯವಾಯಿತು. ವೀರಶೈವ ಲಿಂಗಾಯತ ಸಮುದಾಯದಲ್ಲಿ ಪೂಜನೀಯವಾಗಿರುವ ಬಸವಣ್ಣನವರಿಗೆ ಹಲವಾರು ಕೃತಿಗಳು ಸಲ್ಲುತ್ತವೆ. ಇವುಗಳಲ್ಲಿ ಷಟ್ -ಸ್ಥಳ-ವಚನ (ಮೋಕ್ಷದ ಆರು ಹಂತಗಳ ಪ್ರವಚನಗಳು), ಕಾಲ-ಜ್ಞಾನ-ವಚನ (ಭವಿಷ್ಯದ ಮುನ್ಸೂಚನೆಗಳು), ಮಂತ್ರ-ಗೋಪ್ಯ , ಘಟಚಕ್ರ-ವಚನ ಮತ್ತು ರಾಜ-ಯೋಗ-ವಚನಗಳಂತಹ ವಿವಿಧ ವಚನಗಳು ಸೇರಿವೆ.

● ತತ್ವಶಾಸ್ತ್ರ:- ಬಸವಣ್ಣ ಶೈವ ಕುಟುಂಬದಲ್ಲಿ ಬೆಳೆದ, ನಾಯಕರಾಗಿ ಅವರು ವೀರಶೈವಗಳು ಅಥವಾ “ಶಿವನ ಉತ್ಕಟ, ವೀರ ಆರಾಧಕರು” ಎಂಬ ಹೊಸ ಭಕ್ತಿ ಚಳುವಳಿಯನ್ನು ಅಭಿವೃದ್ಧಿಪಡಿಸಿದರು ಮತ್ತು ಪ್ರೇರೇಪಿಸಿದರು. ಬಸವ ನಿರಂತರ ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಯನ್ನು ಆಳವಾದ ಜ್ಞಾನದ ಮಾರ್ಗವಾಗಿ ಒತ್ತಿಹೇಳಿದರು. ಅವರು ಎಲ್ಲಾ ಆಧ್ಯಾತ್ಮಿಕ ಚರ್ಚೆಗಳಲ್ಲಿ ಸ್ಥಳೀಯ ಭಾಷೆಯಾದ ಕನ್ನಡದ ಬಳಕೆಯನ್ನು ಪ್ರತಿಪಾದಿಸಿದರು. ಅವರ ತತ್ತ್ವಶಾಸ್ತ್ರವು ಒಬ್ಬರ ಸ್ವಂತ ದೇಹ ಮತ್ತು ಆತ್ಮವನ್ನು ದೇವಾಲಯವಾಗಿ ಪರಿಗಣಿಸುವುದರ ಸುತ್ತ ಸುತ್ತುತ್ತದೆ, ದೇವಾಲಯವನ್ನು ಮಾಡುವ ಬದಲು, ನಮ್ಮ ದೇಹವೇ ದೇವಾಲಯ ಎಂದು ಸೂಚಿಸುತ್ತಾರೆ. ಅವರ ತ್ರಿಮೂರ್ತಿಗಳು ಗುರು (ಶಿಕ್ಷಕ), ಲಿಂಗ (ಶಿವನ ವೈಯಕ್ತಿಕ ಚಿಹ್ನೆ) ಮತ್ತು ಜಂಗಮ (ನಿರಂತರವಾಗಿ ಚಲಿಸುವುದು ಮತ್ತು ಕಲಿಯುವುದು) ಒಳಗೊಂಡಿತ್ತು.

● ಪರಂಪರೆ ಮತ್ತು ಪ್ರಭಾವ:- ಕಲಚೂರಿ ಶಾಸನಗಳಂತಹ ಐತಿಹಾಸಿಕ ಪುರಾವೆಗಳನ್ನು ಅವಲಂಬಿಸಿರುವ ಆಧುನಿಕ ಪಾಂಡಿತ್ಯವು ಈಗಾಗಲೇ ಅಸ್ತಿತ್ವದಲ್ಲಿರುವ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ ಮತ್ತು ಶಕ್ತಿ ತುಂಬಿದ 12 ನೇ ಶತಮಾನದ ಕವಿ-ತತ್ತ್ವಜ್ಞಾನಿ ಬಸವಣ್ಣ ಎಂದು ಹೇಳುತ್ತದೆ. ಅವರು ರೂಪಿಸಿ ಸಹಾಯ ಮಾಡಿದ ಸಮುದಾಯವನ್ನು ಶರಣರು ಎಂದೂ ಕರೆಯುತ್ತಾರೆ, ಈ ಸಮುದಾಯವು ಹೆಚ್ಚಾಗಿ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿದೆ, ಆದರೆ ಅವರು ಭಾರತದ ಇತರ ರಾಜ್ಯಗಳಿಗೆ ಮತ್ತು ಸಾಗರೋತ್ತರಕ್ಕೆ ವಲಸೆ ಹೋಗಿದ್ದಾರೆ. 20 ನೇ ಶತಮಾನದ ಅಂತ್ಯದ ವೇಳೆಗೆ ಮೈಕೆಲ್ ಅಂದಾಜಿನ ಪ್ರಕಾರ “ಕರ್ನಾಟಕ ರಾಜ್ಯದ ಜನಸಂಖ್ಯೆಯ ಆರನೇ ಒಂದು ಭಾಗ ಅಥವಾ ಸುಮಾರು 10 ಮಿಲಿಯನ್ ಜನರು ವೀರಶೈವ ಲಿಂಗಾಯತ ಅಥವಾ ಬಸವಣ್ಣನಿಂದ ಪ್ರತಿಪಾದಿಸಿದ ಸಂಪ್ರದಾಯವನ್ನು ಅನುಸರಿಸಿದ್ದಾರೆ, ವೀರಶೈವ ಲಿಂಗಾಯತವು ಕರ್ನಾಟಕದ ಜನಸಂಖ್ಯೆಯ ಸುಮಾರು 17% ರಷ್ಟಿದೆ ಎಂದು ಅಂದಾಜಿಸಲಾಗಿದೆ”

● ಸಾಮಾಜಿಕ ಸುಧಾರಣೆ:- ಜಾತಿ ಬೇಧವಿಲ್ಲದೆ ಪ್ರತಿಯೊಬ್ಬ ಮನುಷ್ಯನೂ ಸಮಾನ ಎಂದು ಬಸವ ಬೋಧಿಸಿದ್ದು, ಎಲ್ಲ ರೀತಿಯ ದುಡಿಮೆಯೂ ಅಷ್ಟೇ ಮುಖ್ಯ. ಬಸವ ಮತ್ತು ಶರಣ ಸಮುದಾಯದ ದೃಷ್ಟಿಯಲ್ಲಿ ನಿಜವಾದ ಸಂತ ಮತ್ತು ಶೈವ ಭಕ್ತನನ್ನು ನಿರ್ಧರಿಸುವ ನಡವಳಿಕೆಯೇ ಜನ್ಮವಲ್ಲ ಎಂದು ಮೈಕೆಲ್ ಹೇಳುತ್ತಾನೆ. ಶರಣರು ಯಾರೇ ಆಗಲಿ, ಅವರು ಅಥವಾ ಅವಳು ಯಾವುದೇ ಉದ್ಯೋಗದಲ್ಲಿ ಜನಿಸಿದರೂ, ಶಿವಭಕ್ತರ ದೊಡ್ಡ ಕುಟುಂಬಕ್ಕೆ ಮತಾಂತರಗೊಳ್ಳಲು ಮತ್ತು ಮರುಜನ್ಮ ಪಡೆಯಲು ಮತ್ತು ನಂತರ ಅವರು ಬಯಸಿದ ಯಾವುದೇ ಉದ್ಯೋಗವನ್ನು ಅಳವಡಿಸಿಕೊಳ್ಳಲು ಸ್ವಾಗತಿಸುತ್ತಾರೆ. ಬಸವ ಅಹಿಂಸೆಯನ್ನು ಒತ್ತಾಯಿಸಿದರು ಮತ್ತು ಮಾನವ ಅಥವಾ ಪ್ರಾಣಿಗಳ ಎಲ್ಲಾ ರೀತಿಯ ತ್ಯಾಗಗಳನ್ನು ಕಟುವಾಗಿ ಖಂಡಿಸಿದರು.

● ಲಿಂಗಾಯತ ಧರ್ಮ:- ಇದು ಶೈವ ಧರ್ಮವನ್ನು ಆಧರಿಸಿದ ಹಿಂದೂ ಪಂಗಡವಾಗಿದೆ, ಆರಂಭದಲ್ಲಿ ವೀರಶೈವರು ಎಂದು ಕರೆಯಲಾಗುತ್ತಿತ್ತು, ಏಕೆಂದರೆ 12 ನೇ ಶತಮಾನದ ಈ ನಂಬಿಕೆಯ ಅನುಯಾಯಿಗಳನ್ನು ಲಿಂಗಾಯತರು ಎಂದು ಕರೆಯಲಾಗುತ್ತದೆ. ಲಿಂಗಾಯತವಾದವು ಇಷ್ಟಲಿಂಗ ಪೂಜೆಯ ವಿಶಿಷ್ಟ ಆಚರಣೆಗೆ ಹೆಸರುವಾಸಿಯಾಗಿದೆ, ಅಲ್ಲಿ ಅನುಯಾಯಿಗಳು ಶಿವನೊಂದಿಗೆ ನಿರಂತರ, ನಿಕಟ ಸಂಬಂಧವನ್ನು ಸಂಕೇತಿಸುವ ವೈಯಕ್ತಿಕ ಲಿಂಗವನ್ನು ಒಯ್ಯುತ್ತಾರೆ. ಲಿಂಗಾಯತ ಧರ್ಮದ ಒಂದು ಮೂಲಭೂತ ಲಕ್ಷಣವೆಂದರೆ ಜಾತಿ ವ್ಯವಸ್ಥೆಗೆ ಅದರ ದೃಢವಾದ ವಿರೋಧ ಮತ್ತು ಸಾಮಾಜಿಕ ಸಮಾನತೆಯ ಪ್ರತಿಪಾದನೆ, ಆ ಕಾಲದ ಸಾಮಾಜಿಕ ನಿಯಮಗಳಿಗೆ ಸವಾಲಾಗಿದೆ. ಇದರ ತಾತ್ವಿಕ ತತ್ವಗಳು ಭಕ್ತಿ ಕಾವ್ಯದ ಒಂದು ರೂಪವಾದ ವಚನಗಳಲ್ಲಿ ಅಡಕವಾಗಿವೆ, ಸಂಪ್ರದಾಯವು ಕಾಯಕ (ಕೆಲಸ) ಮತ್ತು ದಾಸೋಹ (ಸೇವೆ) ಯನ್ನು ಆರಾಧನೆಯ ರೂಪಗಳಾಗಿ ಒತ್ತಿಹೇಳುತ್ತದೆ, ಶ್ರಮ ಮತ್ತು ಇತರರಿಗೆ ಸೇವೆಯ ಪವಿತ್ರತೆಯನ್ನು ಒತ್ತಿಹೇಳುತ್ತದೆ. ಮುಖ್ಯವಾಹಿನಿಯ ಹಿಂದೂ ಧರ್ಮಕ್ಕಿಂತ ಭಿನ್ನವಾಗಿ, ಲಿಂಗಾಯತ ಧರ್ಮವು ವೇದಗಳು ಮತ್ತು ಪುರಾಣಗಳ ಧರ್ಮಗ್ರಂಥದ ಅಧಿಕಾರವನ್ನು ತಿರಸ್ಕರಿಸುತ್ತದೆ, ಧಾರ್ಮಿಕ ಆಚರಣೆಗಳು ಮತ್ತು ಪುನರ್ಜನ್ಮದ ಪರಿಕಲ್ಪನೆ, ದೈವಿಕತೆಯ ನೇರ, ವೈಯಕ್ತಿಕ ಅನುಭವವನ್ನು ಉತ್ತೇಜಿಸುತ್ತದೆ.

ಲಿಂಗಾಯತತ್ವವನ್ನು ಸಾಮಾನ್ಯವಾಗಿ ಹಿಂದೂ ಪಂಥವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವರ ನಂಬಿಕೆಗಳು ಅನೇಕ ಹಿಂದೂ ಅಂಶಗಳನ್ನು ಒಳಗೊಂಡಿವೆ. ಆರಾಧನೆಯು ಇಷ್ಟಲಿಂಗದ ಪ್ರತಿಮಾರೂಪದ ರೂಪದಲ್ಲಿ ಸಾರ್ವತ್ರಿಕ ದೇವರಾಗಿರುವ ಶಿವನ ಮೇಲೆ ಕೇಂದ್ರೀಕೃತವಾಗಿದೆ, ಲಿಂಗಾಯತ ಧರ್ಮವು ಅರ್ಹವಾದ ಏಕತಾವಾದವನ್ನು ಒತ್ತಿಹೇಳುತ್ತದೆ, 11-12 ನೇ ಶತಮಾನದ ದಕ್ಷಿಣ ಭಾರತೀಯ ತತ್ವಜ್ಞಾನಿ ರಾಮಾನುಜರಂತಹ ತಾತ್ವಿಕ ಅಡಿಪಾಯಗಳೊಂದಿಗೆ ಸಮಕಾಲೀನ ಲಿಂಗಾಯತ ಧರ್ಮವು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರಭಾವಶಾಲಿಯಾಗಿದೆ, ಲಿಂಗಾಯತರು ತಮ್ಮ ಪಂಗಡದ ಪ್ರಮುಖ ಧಾರ್ಮಿಕ ಮುಖಂಡರ ವಾರ್ಷಿಕೋತ್ಸವಗಳನ್ನು (ಜಯಂತಿ) ಆಚರಿಸುತ್ತಾರೆ, ಹಾಗೆಯೇ ಶಿವರಾತ್ರಿ ಮತ್ತು ಗಣೇಶ ಚತುರ್ಥಿಯಂತಹ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ, ಲಿಂಗಾಯತ ಧರ್ಮವು ತನ್ನದೇ ಆದ ಯಾತ್ರಾ ಸ್ಥಳಗಳು, ದೇವಾಲಯಗಳು ಮತ್ತು ಶಿವನನ್ನು ಆಧರಿಸಿದ ಧಾರ್ಮಿಕ ಕಾವ್ಯಗಳನ್ನು ಹೊಂದಿದೆ. ಇಂದು ಲಿಂಗಾಯತರು, ಶೈವ ಸಿದ್ಧಾಂತದ ಅನುಯಾಯಿಗಳು, ನಾಥರು , ಪಾಶುಪತರು , ಕಾಪಾಲಿಕರು ಮತ್ತು ಇತರರು ಶೈವ ಜನಸಂಖ್ಯೆಯನ್ನು ಹೊಂದಿದ್ದಾರೆ.

Basava Jayanti  ● ಸ್ಮಾರಕಗಳು ಮತ್ತು ಗುರುತಿಸುವಿಕೆ:-
1) ಅಂದಿನ ಭಾರತದ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 28 ಏಪ್ರಿಲ್ 2003 ರಂದು ಭಾರತದ ಸಂಸತ್ತಿನಲ್ಲಿ ಬಸವೇಶ್ವರರ ಪ್ರತಿಮೆಯನ್ನು ಉದ್ಘಾಟಿಸಿದರು.

2) ಬಸವೇಶ್ವರರ ಗೌರವಾರ್ಥವಾಗಿ ಅವರ ಸಮಾಜ ಸುಧಾರಣೆಗಳನ್ನು ಗುರುತಿಸಿ ಸ್ಮರಣಾರ್ಥ ನಾಣ್ಯವನ್ನು ಮುದ್ರಿಸಿದ ಮೊದಲ ಕನ್ನಡಿಗ. ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ನಾಣ್ಯಗಳನ್ನು ಬಿಡುಗಡೆ ಮಾಡಲು ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬಂದಿದ್ದರು.

3) 14 ನವೆಂಬರ್ 2015 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಂಡನ್‌ನ ಲ್ಯಾಂಬೆತ್‌ನಲ್ಲಿ ಥೇಮ್ಸ್ ನದಿಯ ದಂಡೆಯ ಉದ್ದಕ್ಕೂ ಬಸವೇಶ್ವರ ಪ್ರತಿಮೆಯನ್ನು ಉದ್ಘಾಟಿಸಿದರು.

4) ಬಸವ ಧರ್ಮ ಪೀಠವು ಬಸವಕಲ್ಯಾಣದಲ್ಲಿ 108 ಅಡಿ (33 ಮೀ) ಎತ್ತರದ ಬಸವನ ಪ್ರತಿಮೆಯನ್ನು ನಿರ್ಮಿಸಿದೆ.

● ಅಂಚೆ ಚೀಟಿ ಮತ್ತು ನಾಣ್ಯ:-
1) 11ನೇ ಮೇ 1967 ರಂದು ಗುರು ಬಸವಣ್ಣವರ 800 ನೇಯ ಲಿಂಗೈಕ್ಯ ದಿನಾಚರಣೆ ನಿಮಿತ್ತ ಭಾರತ ಸರಕಾರದ ಅಂಚೆ ಇಲಾಖೆಯು 15 ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು.

2) 1997 ರಲ್ಲಿ 2 ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಅಂಚೆ ಇಲಾಖೆಯು ಮತ್ತೆ ಮುದ್ರಿಸಿತು.

3) ಗುರು ಬಸವಣ್ಣವರ ಭಾವಚಿತ್ರವುಳ್ಳ 5 ರೂಪಾಯಿ ಮತ್ತು 100 ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.

4) ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಪ್ರಥಮ ಕನ್ನಡಿಗರಾಗಿದ್ದಾರೆ.

5) ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ 28 ನೇ ಎಪ್ರಿಲ್ 2003 ರಲ್ಲಿ ಅನಾವರಣಗೊಳಿಸಲಾಯತು.

ಹೀಗೆ ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಅರಿವು ದೊಡ್ಡದಲ್ಲ ಆಚಾರ ದೊಡ್ಡದು, ಎಂಬ ವಿಚಾರಗಳನ್ನು ಸಾರಿದ ವಿಶ್ವ ಗುರು ಬಸವಣ್ಣನವರು 12 ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಸಂಸತ್ತಿನ ಕಲ್ಪನೆ ಮೂಡಿಸಿ, ಸಾಮಾಜಿಕ ಪಿಡುಗುಗಳನ್ನು ಹೊಡೆದೊಡಿಸಲು ಪ್ರಯತ್ನಪಟ್ಟರು, ಇವರ ತತ್ವಶಾಸ್ತ್ರ ಮತ್ತು ವಚನಗಳು ಇಂದಿಗೂ ಪ್ರಸ್ತುತವಾಗಿವೆ, ಇಂತಹ ಸಂದೇಶ ಮತ್ತು ನೀತಿ ಮಾರ್ಗಗಳನ್ನು ನಾವು ನೀವೆಲ್ಲ ಉಳಿಸಿ ಬೆಳೆಸಬೇಕಾಗಿದೆ, ಜೊತೆಜೊತೆಗೆ ಅನುಸರಣೆ ಮಾಡಬೇಕಾಗಿದೆ….

Basava Jayanti ಅಣ್ಣ.ಬಸವಣ್ಣನವರ ಸಾಮಾಜಿಕ ಕೊಡುಗೆ ನಮಗೆ ಸ್ಫೂರ್ತಿದಾಯಕ- ಹೆಚ್.ಪಿ.ಗಿರೀಶ್.

0

Basava Jayanti ನಮ್ಮೂರ ಬಳಗದಿಂದ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ ಆರೋಗ್ಯ ಶಿಬಿರ
ಸಮ ಸಮಾಜ ನಿರ್ಮಾಣಕ್ಕೆ ವಚನ ಕ್ರಾಂತಿ ಅನಿವಾರ್ಯ- ಹೆಚ್ ಪಿ ಗಿರೀಶ್

ನಮ್ಮೂರ ಬಳಗ ವತಿಯಿಂದ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಮತ್ತು ವಾಸನ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ವಿಶ್ವಗುರು ಸಾಂಸ್ಕೃತಿಕ ನಾಯಕ “ಬಸವ ಜಯಂತಿಯ” ಅಂಗವಾಗಿ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು ನಡೆಸುವ ಮುಖಾಂತರ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿ ಆಚರಿಸಲಾಯಿತು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮ್ಮೂರ ಬಳಗದ ಸಂಚಾಲಕ ಹೆಚ್ ಪಿ ಗಿರೀಶ್ 12ನೇ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕೆ ಅನುಭವ ಮಂಟಪದ ಮೂಲಕ ಸಂವಿಧಾನದ ಪರಿಕಲ್ಪನೆ , ಶಿಕ್ಷಣ, ದಾಸೋಹ ಸೇವೆ ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿದಾಯಕ ವಚನ ಬಂಡಾರದ ಮುಖಾಂತರ ವಿಶ್ವ ಗುರು ಬಸವಣ್ಣನವರು ಮೂಡಿಸಿದ ವಚನ ಕ್ರಾಂತಿಯು ಇಡೀ ಪ್ರಪಂಚಕ್ಕೆ ಅತ್ಯವಶ್ಯಕವಾಗಿದೆ ಎಂದರು

Basava Jayanti ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ನಾಗರಾಜ್ ರಾವ್ ಅವರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ, ಮೇಲು-ಕೀಳು ಎಂಬ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅವಿರತವಾಗಿ ಶ್ರಮಿಸಿದ ಕಾಯಕ ಯೋಗಿ, ಬಸವಣ್ಣನವರ ಕಾರ್ಯ ಹಾಗೂ ಆದರ್ಶಗಳು ನಮಗೆ ಸದಾ ಸ್ಪೂರ್ತಿ. ಅದರಂತೆ ನಮ್ಮೂರ ಬಳಗದಿಂದ ಬಸವೇಶ್ವರ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕಾರಿ, ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ರಾಜೇಶ್ ಮಂದಾರ ,ಟಿ ಗುರುಪ್ರಸಾದ್, ಆರ್ ಕಿರಣ್, ಎಂ ರಾಕೇಶ್, ಕೇಬಲ್ ಲೋಕೇಶ್, ರಾಘವೇಂದ್ರ ರಾವ್, ಸುಬ್ರಮಣಿ, ಎಸ್ ಬಸವರಾಜ್,ಮನ್ವಿಕ್ ಜೈನ್, ಎಮ್ ಸುಹಾಸ್, ಜಯಪ್ರಕಾಶ್, ಮುರಳಿ ಸಣ್ಣಕ್ಕಿ, ಕೇಶವಮೂರ್ತಿ, ಶಿ ವಿ ಯೋಗೀಶ್,ಭವಾನಿರಾವ್, ನಂದನ್, ಕೇಶವ ಸಿಗೆಹಟ್ಟಿ, ಸಂದೇಶ್ ಇತರರು ಇದ್ದರು

Cricket ಓದಿನ ಜೊತೆ ಕ್ರೀಡೆಗೂ ಹೆಚ್ಚನ ಆಸಕ್ತಿ ತೋರಿಸಿ- ಬಿ.ಆರ್.ಜಯಂತ್.

0

Cricket ಕಾಲೇಜು ಜೀವನದ ಓದಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ದೈಹಿಕ ಶಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಮಾನಸಿಕವಾಗಿಯೂ ಕೂಡ ಓದಲು ಅನುಕೂಲವಾಗುತ್ತದೆ. ಬೇರೆ-ಬೇರೆ ರಾಷ್ಟçಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ನಾವೂ ಕೂಡಾ ಕ್ರೀಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ನಮ್ಮ ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ನಡೆಯಲು ಹೆಚ್ಚಿನ ಪ್ರೋತ್ಸಾಹ ನೀಡುತ್ತೇವೆ ಇಂದು ಈ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಅವಕಾಶ ನಿಮ್ಮದಾಗಿದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಪರಿಗಣಿಸಿ, ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದು ಸಂತೋಷವಾಗಿದೆ. ಈಗಾಗಲೇ ನಮ್ಮ ಕಾಲೇಜಿನ ಕ್ರಿಕೆಟ್ ಮೈದಾನವು ನೆಕ್ಸ್÷್ಟ ಜೆನ್ ಸ್ಪೋರ್ಟ್ಸ್ & ಕಲ್ಚರಲ್ ಟ್ರಸ್ಟ್ (ರಿ.), ಸಂಸ್ಥೆಯ ಶ್ರೀ ಶಶಾಂಕ ಎಲ್.ಜಿ. ಇವರ ನೇತೃತ್ವದಲ್ಲಿ ರಾಜ್ಯ ಕ್ರಿಕೆಟ್ ಕ್ರೀಡಾಂಗಣ ಮಾದರಿಯಲ್ಲಿ ರೂಪುಗೊಳ್ಳುತ್ತಿದೆ. ಈ ಮೈದಾನವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕೆಂದು ಎಲ್.ಬಿ. ಕಾಲೇಜು ಚಾಂಪಿಯನ್ ಶಿಪ್ ಟ್ರೋಫಿ ಪಂದ್ಯಾವಳಿಯನ್ನು ಎಂ.ಡಿ.ಎಫ್.ನ ಅಧ್ಯಕ್ಷರಾದ ಬಿ.ಆರ್. ಜಯಂತ್‌ರವರು ಉದ್ಘಾಟಿಸಿ ಮಾತನಾಡಿದರು. ಮೊದಲು ಶ್ರೀ ವಿನಯ, ಉಪನ್ಯಾಸಕರು ಸ್ವಾಗತಿಸಿದರು. ಒಟ್ಟು ೮ ತಂಡಗಳು ಎರಡು ದಿನಗಳ ಕಾಲ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ. ಈ ೨ ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ನ್ಯೂ ಕಾಮಾಕ್ಷಿ ಜುವೆರ‍್ಸ್, ಸಾಗರ, ಮೆಣಸಗಾರ್ ಟೆಕ್ಸ್ಟೈಲ್ಸ್ ತಾಳಗುಪ್ಪ, ರತನ್ ಬೋರ್ವೆಲ್ಸ್, ಆವಿನಹಳ್ಳಿ, ರಾಘವೇಂದ್ರ ಡಿಸ್ಟಿçಬ್ಯೂರ‍್ಸ್, ಸಾಗರ, Cricket ಸಿದ್ಧಿವಿನಾಯಕ ಕೆಟರ‍್ಸ್, ಸಾಗರ, ಪರಿಶ್ರಮ ಡೆಕೋರೆರ‍್ಸ್, ಮನ್ಮನೆ, ಗಿರ್ವಾಣ ಭಾರತಿ ಟ್ರöಸ್ಟ್ (ರಿ.) ಎನ್.ಜಿ.ಒ. ಸಾಗರ, ವಿಜಯ್ ಎಲೆಕ್ಟಿçಕಲ್ ಇಂಫ್ರ (ಲಿ.) ಬೆಂಗಳೂರು, ಆಯುರ್ವೇದಿಕ್ ಫಾರ್ಮಸಿಟಿಕಲ್ ಡಿಸ್ಟಿçಬ್ಯೂರ‍್ಸ್ ಸಾಗರ, ಶ್ರೀ ಪ್ರತಿಷ್ಠಾನಮ್ (ರಿ.), ಹೊರಬೈಲು, ಸೊರಬ ಇವರುಗಳು ಪ್ರಾಯೋಜಕತ್ವನ್ನು ವಹಿಸಿದ್ದರು. ಕ್ರಿಕೆಟ್ ಉದ್ಘಾಟನೆಯಲ್ಲಿ ಅತಿಥಿಗಳಾಗಿ ಡಾ. ಹೆಚ್.ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ, ಮ.ಅ.ಪ್ರ., ಶ್ರೀ ಕೆ. ವೆಂಕಟೇಶ್, ಕೋಶಾಧ್ಯಕ್ಷರು, ಮ.ಅ.ಪ್ರ., ಶ್ರೀ ಎಮ್.ಆರ್. ಸತ್ಯನಾರಾಯಣ, ಸಹಕಾರ್ಯದರ್ಶಿ, ಮ.ಅ.ಪ್ರ., ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷಿö್ಮÃಶ ಎ.ಎಸ್., ಶ್ರೀ ಭರತ್‌ರಾಜ್, ದೈಹಿಕ ನಿರ್ದೇಶಕರು, ಎಲ್.ಬಿ. ಮತ್ತು ಎಸ್.ಬಿ. ಎಸ್. ಕಾಲೇಜು, ಶ್ರೀ ಶಶಾಂಕ ಎಲ್.ಜಿ., ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Bike Accident ಜಂಬಳ್ಳಿ ತಿರುವಿನಲ್ಲಿ ಬೈಕ್‌ಗಳ ನಡುವೆ ಅಪಘಾತ : ಇಬ್ಬರಿಗೆ ಗಂಭೀರ ಗಾಯ.

Bike Accident ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಹೆದ್ದಾರಿಪುರ ಸಮೀಪದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಬೈಕ್‌ಗಳ ನಡುವೆ ನಡೆದ ಭೀಕರ ಡಿಕ್ಕಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆದ್ದಾರಿಪುರ ಸಮೀಪದ ಜಂಬಳ್ಳಿ ತಿರುವಿನಲ್ಲಿ ನಡೆದಿದೆ. ಜಂಬಳ್ಳಿ ಗ್ರಾಮದ ಕಡೆಯಿಂದ ಬರುತ್ತಿದ್ದ ಟಿವಿಎಸ್ ಎಕ್ಸೆಲ್ ಬೈಕ್ ಹಾಗೂ ಗರ್ತಿಕೆರೆ ಕಡೆಯಿಂದ ರಿಪ್ಪನ್ ಪೇಟೆ ಕಡೆಗೆ ಸಾಗುತ್ತಿದ್ದ ಬಜಾಜ್ ಪಲ್ಸರ್ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಟಿವಿಎಸ್ ಎಕ್ಸೆಲ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಜಂಬಳ್ಳಿ ನಿವಾಸಿ ಸೋಮಶೇಖರ್ ಅವರಿಗೆ ಎಡಗಾಲು ಮುರಿದು ತೀವ್ರ ರಕ್ತಸ್ರಾವವಾಗಿದೆ. ಮತ್ತೊಬ್ಬರಾದ ಸತೀಶ್ ಅವರ ಕಾಲಿಗೂ ಗಂಭೀರವಾಗಿ ಗಾಯವಾಗಿ ಮುರಿತ ಉಂಟಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

Bike Accident ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ವೇಳೆ ಬಜಾಜ್ ಪಲ್ಸರ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ತಿಕೆರೆ ನಿವಾಸಿಗಳಾದ ಶ್ರೇಯಸ್ ಹಾಗೂ ಪ್ರಜ್ವಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಘಟನೆಯ ಮಾಹಿತಿ ತಿಳಿದು ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿದು ಬರಬೇಕಿದೆ.

ಈ ಕುರಿತು ಪ್ರಕರಣವನ್ನ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.