Friday, August 7, 2026
Friday, August 7, 2026
Home Blog Page 128

Breaking News ಕಚ್ಚಾ ಬಾಂಬ್ ಬಳಸಿ ಕಾಡು ಪ್ರಾಣಿಗಳ ಶಿಕಾರಿ.45 ಜೀವಂತ ಬಾಂಬ್ ಪತ್ತೆ.

0

Breaking News ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ
ವನ್ಯಜೀವಿ ಶಿಕಾರಿ ನಡೆಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆ ದಾಳಿ ಮಾಡಿದೆ.ಅರಣ್ಯ ಇಲಾಖೆ ಸಿಬ್ಬಂದಿ
ಒಬ್ಬರನ್ನು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಕೋಟೆತಾರಿಗಾದಿಂದ ಹರತಾಳು ಕಡೆಗೆ ಸಾಗುವ ಮುಖ್ಯ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಶಿಕಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ‌ಮೇರೆ ಅರಣ್ಯ ದಾಳಿಮಾಡಲಾಗಿದೆ.

ಕಾರ್ಯಾಚರಣೆಗೆ ಇಳಿದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಕಾಲಿಕ ಕ್ರಮದಿಂದಾಗಿ
ಎಂ. ಡಾಕಪ್ಪ (55), ಕೆ ಹುಣಸವಳ್ಳಿ ಗ್ರಾಮದ ನಿವಾಸಿಯನ್ನು ಬಂಧಿಸಲಾಗಿದೆ.

ಇತರೆ ಆರೋಪಿಗಳಾದ ಭಾಸ್ಕರ (55) ಹಾಗೂ ನಾಗರಾಜ ಗೌಡ (53) ಸ್ಥಳದಿಂದ ಪರಾರಿಯಾಗಿದ್ದಾರೆ

ಈ ಕಾರ್ಯಾಚರಣೆಯ ವೇಳೆ 45 ಜೀವಂತ ಕಚ್ಚಾ ಬಾಂಬ್‌ಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿಮಾಡಲಾಗಿದೆ.

Breaking News ಈ ದಾಳಿಯಲ್ಲಿ ಹೊಸನಗರ ವಲಯದ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿ ಅನಿಲ್ ಬೆಳ್ಳೆನವರ್, ಹಾಗೂ ಗಸ್ತು ಅರಣ್ಯ ಪಾಲಕರಾದ ಭರತ್ ಕುಮಾರ್, ಮಂಜುನಾಥ ಡಿ., ಪ್ರಶಾಂತ ಜಿ., ಪುಟ್ಟಸ್ವಾಮಿ ಕೆ.ವಿ. ಸೇರಿದಂತೆ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಪರಾರಿಯಾದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ.

Klive Special Article ಅಕ್ಷಯ ಫಲಗಳ ಸಂಕೇತ,ಅಕ್ಷಯ ತೃತೀಯ

0

ಲೇ: ಎನ್.ಜಯಭೀಮ್ ಜೊಯ್ಸ್. ಶಿವಮೊಗ್ಗ.

Klive Special Article ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ
ದಿನ ಬರುವ ತೃತೀಯ ತಿಥಿಯನ್ನು “ಅಕ್ಷಯತೃತೀಯ”ಎಂದು ಕರೆಯಲಾಗುತ್ತದೆ.
ಅಕ್ಷಯ ತೃತೀಯ ವನ್ನು ಶುಭದ ಸಂಕೇತದ
ದಿನವನ್ನಾಗಿ ಪರಿಗಣಿಸಲಾಗಿದೆ.
ಇಂದಿನ ದಿನ ಮಾಡುವಯಾವುದೇಶುಭಕೆಲಸಗಳು
ಯಾವುದೇ ಅಡಚಣೆಯಿಲ್ಲದೇಸಿದ್ಧಿಯಾಗುವುವು ಎಂಬ ನಂಬಿಕೆ ಇದೆ.
ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಅನ್ಯೋನ್ಯತೆಯಿಂದಕೂಡಿರುತ್ತದೆ ಎಂಬುದು ಜನಜನಿತವಾಗಿದೆ.
ಹಿಂದೂ ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಈ ದಿನ ವೇದವ್ಯಾಸರು ವಿಘ್ನನಿವಾರಕನಾದ ಗಣೇಶನಿಂದ ಮಹಾಭಾರತ ವನ್ನು ಬರೆಸಿದರೆಂತ ಪ್ರತೀತಿಇದೆ.ಹಲವರನಂಬಿಕೆಯಪ್ರಕಾರಇಂದು
ಚಿನ್ನ,ಬೆಳ್ಳಿಅಥವಇತರೆಯಾವುದೇಅಮೂಲ್ಯವಾದವಸ್ತುಗಳನ್ನುಖರೀದಿಸಿದರೆಸಂಪತ್ತು”ಅಕ್ಷಯ”ವಾಗುತ್ತದೆಂಬ ನಂಬಿಕೆ ಬೇರೂರಿದೆ. ಬೆಳ್ಳಿ,ಬಂಗಾರವನ್ನು ಕೊಂಡುಕೊಳ್ಳವುದರಿಂದ ಮಾತ್ರವೇ ಸಂಪತ್ತು ಅಕ್ಷಯವಾಗುತ್ತೆ ಎಂತ ಯಾಕೆ ತಿಳಿದುಕೊಳ್ಳಬೇಕು?.ಈ ದಿನ ಒಳ್ಳೆಯ ಪುಸ್ತಕ ಗಳನ್ನುಖರೀದಿಮಾಡಿಜ್ಞಾನಸಂಪತ್ತನ್ನೂಹೆಚ್ಚುಮಾಡಿಕೊಳ್ಳಬಹುದಾಗಿದೆ
.ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡು
ವುದರಿಂದಲೂಪುಣ್ಯವನ್ನುಸಂಚಯಮಾಡಿಕೊಳ್ಳಬಹುದು.
ದೇಹ ಸಂಪತ್ತಿರುವವರು ಸಹಾಯದ ಅಗತ್ಯ
ವಿರುವವರಿಗೆ ಕೈಲಾದ ಸಹಾಯವನ್ನುಮಾಡಿ ಮನಸ್ಸಂತೋಷವನ್ನು”ಅಕ್ಷಯ”ಮಾಡಿಕೊಳ್ಳ
ಬಹುದು.
ತಾವು ಆರಾಧಿಸುವದೇವರಿಗೆಭಕ್ತಿಯಿಂದಪ್ರಾರ್ಥನೆ
ಮಾಡಿಕೊಂಡರೆ ದೇವರು ಕರುಣೆಯನ್ನು ಅಕ್ಷಯ
ವಾಗಿಅನುಗ್ರಹಿಸುತ್ತಾನೆಂದುತಿಳಿದುಕೊಂಡರೆ ಅಕ್ಷಯ ತೃತೀಯದ ದಿನಕ್ಕೆ ಹೆಚ್ಚಿನ ಮಹತ್ವ ಬರುತ್ತದೆ.
ಪಾಂಡವರಿಗೂಅಕ್ಷಯತೃತೀಯದಿನಕ್ಕೂನಂಟಿದೆ.ಪಾಂಡವರು ಸೂರ್ಯದೇವರಿಂದ ಅಕ್ಷಯ
ಪಾತ್ರೆಪಡೆದದಿನ.
ಕೃಷ್ಣ-ಸುಧಾಮರುಗುರುಕುಲದಲ್ಲಿಒಟ್ಟಿಗೇಕಲಿತವರು.ಅವರಿಬ್ಬರೂ ಆತ್ಮೀಯ ಗೆಳೆಯರಾಗಿದ್ದರು.ಅವರಿಬ್ಬರ ಸ್ನೇಹ ಎಷ್ಟು ಗಾಡವಾಗಿತ್ತೆಂಬುದನ್ನು ನಾವೆಲ್ಲರೂ ಕೇಳಿದ್ದೇವೆ.
Klive Special Article ತೀವ್ರ ಬಡತನ ಅನುಭವಿಸುತ್ತಿದ್ದ ಸುಧಾಮನಿಗೆ ಅವನ ಹೆಂಡತಿ ಸ್ನೇಹಿತ ಶ್ರೀಕೃಷ್ಣನ ಬಳಿಗೆ ಹೋಗಿ ಏನಾದರೂ ಕೆಲಸ ಸಿಗುವುದೇನೋ, ಕೇಳಿಕೊಂಡು ಬರಲು ಕಳಿಸುತ್ತಾಳೆ.
ಸ್ನೇಹಿತನನ್ನುನೋಡಲುಬರಿಗೈಯಲ್ಲಿಹೋಗಲಾರದೇ,ಮನೆಯಲ್ಲಿ ಇದ್ದ ಒಂದು ಹಿಡಿಅವಲಕ್ಕಿಯನ್ನೇ ಒಂದು ಬಟ್ಟೆಯಲ್ಲಿ ಗಂಟುಕಟ್ಟಿಕೊಂಡು ಕೈಯಲ್ಲಿ ಹಿಡಿದುಕೊಂಡುಹೋಗುತ್ತಾನೆ.ಶ್ರೀಕೃಷ್ಣನುಸುಧಾಮನನ್ನುನೋಡಿದಕೂಡಲೇಬಂದು ಪ್ರೀತಿಯಿಂದ ಆಲಿಂಗನ ಮಾಡುತ್ತಾನೆ.ಸುಧಾಮನ ಕೈಯಲ್ಲಿರುವ ಅವಲಕ್ಕಿ ಗಂಟನ್ನು ತಾನೇ ಬಿಚ್ಚಿತಿಂದು ಬಹಳ
ಸಂತೋಷಪಡುತ್ತಾನೆ.
ಬಹಳ ದಿನಗಳ ಬಳಿಕ ಭೆಟ್ಟಿಯಾದ ಸ್ನೇಹಿತರು ಒಟ್ಟಿಗೇ ಕಾಲಕಳೆಯುತ್ತಾರೆ.ಸುಧಾಮನು ಶ್ರೀಕೃಷ್ಣನಿಂದ ಬೀಳ್ಕೊಂಡು ಮನೆಗೆ ಹಿಂದಿರುಗಿ
ಬರುವಾಗಲೇ ಶ್ರೀಕೃಷ್ಣನ ಅನುಗ್ರಹದಿಂದ ಅವನ ಬಡತನ ನಿವಾರಣೆಯಾಗಿರುತ್ತದೆ.ಇದು ನಡೆದದ್ದೂ ಅಕ್ಷಯತೃತೀಯ ದಿನದಂದೇ.
ಶ್ರೀಮನ್ನಾರಾಯಣನುನೆಲೆಸಿರುವಬದರೀಕ್ಷೇತ್ರದಲ್ಲಿ ಅಕ್ಷಯತೃತೀಯದಂದುಯಾತ್ರಾರ್ಥಿಗಳಿಗೆ ಪ್ರವೇಶಮಾಡಲು ದ್ವಾರವನ್ನುತೆಗೆಯುವದಿವಸವೂ ಹೌದು.
ಶ್ರೀಶಂಕರಭಗವತ್ಪಾದಕರು”ಶ್ರೀಕನಕಧಾರಸ್ತೋತ್ರ”ವನ್ನು ರಚಿಸಿದ್ದೂ ಅಕ್ಷಯತೃತೀಯ ದಿನವೇ ಆಗಿರುತ್ತೆ.
ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೊಳಗಿಸಿದ ಜಗಜ್ಯೋತಿ ಬಸವಣ್ಣನವರು ಜನಿಸಿದ್ದೂ ಸಹ ಈ ದಿನವೇ ಆಗಿದೆ.
ಈ ದಿನದಂದು ಪೂಜೆ,ಜಪ,ತಪ,ಹವನ ಹೋಮಗಳನ್ನುನೆರವೇರಿಸುವುದರಿಂದದೊರೆಯುವ ಪುಣ್ಯ ಅಕ್ಷಯವಾಗುತ್ತದೆಂಬ ನಂಬಿಕೆ ಇದೆ.
ಈ ದಿನ ಒಂದು ಪಟ್ಟು ದಾನ ಮಾಡಿದರೆಅದರ ಹತ್ತು ಪಟ್ಟು ಫಲ ಬರುವುದೆಂದುತಿಳಿದವರು ಹೇಳುತ್ತಾರೆ.ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ “ಅನ್ನದಾನ”.ಈದಿನಅನ್ನದಾನ ಮಾಡುವದರಿಂದ ಬಹಳ ಪುಣ್ಯಲಭಿಸುತ್ತದೆ ಎಂಬ ಪ್ರತೀತಿ ಇದೆ.ತಾವು ಕಲಿತಿರುವ ವಿದ್ಯೆಯನ್ನು ,ವಿದ್ಯಾರ್ಥಿಗಳಿಗೆ ಯಾವುದೇ ಫಲಾಪೇಕ್ಷೆಯನ್ನು ಬಯಸದೇಹೇಳಿಕೊಡುವವಿದ್ಯೆಯೂ”ವಿದ್ಯಾದಾನ”ವೆನಿಸುತ್ತದೆ.ಇದರಿಂದಲೂಪುಣ್ಯಸಂಚಯನವಾಗುತ್ತದೆ.
ಸಂಕಷ್ಟದಸಂದರ್ಭದಲ್ಲಿ ತಮ್ಮಕೈಲಾಗುವಸೇವೆ
ಯನ್ನುಕಷ್ಟದಲ್ಲಿರುವ ಬಂಧುಗಳಿಗೆ ಮಾಡಿದರೆ
ಅಕ್ಷಯತೃತೀಯ ದಿನದ ಆಚರಣೆ ಅರ್ಥಪೂರ್ಣವಾಗುವುದರಲ್ಲಿ ಸಂದೇಹವಿಲ್ಲ

Shree Galidurga Devi ಜವಾಗಟ್ಟಿ ಶ್ರೀಗಾಳಿ ದುರ್ಗಾದೇವಿ ನೂತನ ದೇವಸ್ಥಾನದ ಲೋಕಾರ್ಪಣೆ.

0

Shree Galidurga Deviಶಿಕಾರಿಪುರ ತಾಲ್ಲೂಕಿನ ಜವಾಗಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಗಾಳಿ ದುರ್ಗಾದೇವಿ.

ಶ್ರೀದೇವಿಯ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಪೂರ್ವಕ ನಮನಗಳನ್ನು ಸಂಸದ ಬಿ.ವೈ‌.ರಾಘವೇಂದ್ರ ಅವರು ಸಲ್ಲಿಸಿದರು.

ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಕುಂಭಾಭಿಷೇಕ, ದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಹೋಮ-ಹವನಗಳಲ್ಲಿ ಭಾಗಿಯಾಗಿ ನಾಡಿನ ಸುಖ-ಶಾಂತಿಗಾಗಿ ಪ್ರಾರ್ಥಿಸಲಾಯಿತು.

Shree Galidurga Devi ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ತೊಗರ್ಸಿಯ ಮಲೆಹಿರೇಮಠದ ಶ್ರೀ ಷ|| ಬ್ರ|| ಮಹಾಂತದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚವಣ್ಣಿಗೆಮಠದ ಶ್ರೀ ಷ|| ಬ್ರ|| ಚನ್ನವೀರದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಹಲವು ಪೂಜ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅವಾಸ್ತವಿಕ ಗ್ಯಾರಂಟಿಗಳು ಸಾಲದ ಹೊರೆ ಹೆಚ್ಚಿಸುತ್ತಿವೆ. ರಾಜ್ಯದ ಅರ್ಥವ್ಯವಸ್ಥೆ ನೆಲಕಚ್ಚುವ ಮುನ್ನ ಸರಿದೂಗಿಸಿ ಇಲ್ಲವೇ ಅಧಿಕಾರ ತ್ಯಜಿಸಿ- ಆರ್.ಅಶೋಕ್

0

ಹೇಗಾದರೂ ಮಾಡಿ ಅಧಿಕಾರಕ್ಕೆ ಏರಬೇಕೆಂದು ಚುನಾವಣೆಗೂ ಮೊದಲು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ತತಕ್ಷಣವೇ ತಮ್ಮ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಟಾನದ ಹೆಸರಿನಲ್ಲಿ ಕನ್ನಡಿಗರ ಮೇಲೆ ದಿನನಿತ್ಯ ತೆರಿಗೆ ಬರೆಯನ್ನು ಎಳೆಯಲಾರಂಭಿಸಿತು ಎಂದು ಆರ್.ಅಶೋಕ್ ನವರು ತಿಳಿಸಿದ್ದಾರೆ.

ಒಂದು ಕಡೆ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಸೊರಗಿ ಹೋಗಿದ್ದರೆ, ಮತ್ತೊಂದು ಕಡೆ ಗೃಹಜ್ಯೋತಿಯಿಂದ ವಿದ್ಯುತ್‌ ಕಂಪನಿಗಳು ₹43,000 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿ ಅಧ:ಪತನದ ಹಾದಿ ಹಿಡಿದಿವೆ. ಎಸ್ಕಾಂಗಳಿಗೆ ಬರಬೇಕಾದ ಗೃಹಜ್ಯೋತಿ ಯೋಜನೆಯ ₹12,500 ಕೋಟಿ ಬಾಕಿ ಉಳಿಸಿಕೊಂಡಿರುವುದೇ ರಾಜ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ಅವಾಸ್ತವಿಕ ಗ್ಯಾರಂಟಿಗಳು ಸಾಲದ ಹೊರೆಯನ್ನು ಹೆಚ್ಚಿಸುತ್ತಿವೆ. ಆರ್ಥಿಕ ದಿವಾಳಿತನದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಅನುದಾನಕ್ಕಾಗಿ ಬೀದಿ ರಂಪಾಟ ಮಾಡುತ್ತಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ರಾಜ್ಯದ ಅರ್ಥವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚುವ ಮುನ್ನ ಸರಿದೂಗಿಸಿ ಇಲ್ಲವೇ ಅಧಿಕಾರ ತ್ಯಜಿಸಿ, ಸರ್ಕಾರ ವಿಸರ್ಜಿಸಿ ಎಂದಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ33 ಮೀಸಲಾತಿ ನೀಡಿದ್ದು‌ ಕಾಮಗ್ರೆಸ್ ಪಕ್ಷ- ಸಿದ್ಧರಾಮಯ್ಯ

0

ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷ ಪ್ರಾರಂಭದಿಂದಲೂ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಮೀಸಲಾತಿ ನೀಡಲು ಬದ್ಧವಾಗಿದೆ. ನಮ್ಮ ಪಕ್ಷ ಅಧಿಕಾರದಲ್ಲಿರಲಿ, ಇರದೆ ಇರಲಿ ಸತತವಾಗಿ ಮಹಿಳಾ ಮೀಸಲಾತಿ ಪರವಾದ ನಿಲುವು ತೆಗೆದುಕೊಂಡಿದೆ. ಶ್ರೀಮತಿ ಇಂದಿರಾಗಾಂಧಿ ಮತ್ತು ಶ್ರೀಮತಿ ಸೋನಿಯಾ ಗಾಂಧಿಯವರಂತಹ ಜಗಮೆಚ್ಚಿದ ನಾಯಕಿಯರನ್ನು ಪಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕತ್ವದ ಮಹತ್ವ ಗೊತ್ತಿದೆ.

1992ರಲ್ಲಿ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ (ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು) ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡವರು ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಎನ್ನುವುದನ್ನು ಈಗ ಮಹಿಳೆಯರ ಪರ ಹುಸಿ ಪ್ರೀತಿ ತೋರಿಸುತ್ತಿರುವ ಬಿಜೆಪಿ ನಾಯಕರಿಗೆ ನೆನಪಿಸಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಬಸವ ಜಯಂತಿ ವಿಶೇಷವಾಗಿ ಆರೋಗ್ಯ ತಪಾಸಣಾ ಶಿಬಿರ- ಕೆ .ರಂಗನಾಥ್.

0

ರ ಬಳಗ ಶಿವಮೊಗ್ಗ ವತಿಯಿಂದ ದಿನಾಂಕ 20-04-2026ನೇ ಸೋಮವಾರದಂದು ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಸಹಯೋಗದೊಂದಿಗೆ “ಬಸವ ಜಯಂತಿಯ” ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳಗ್ಗೆ 7:00 ಯಿಂದ ಗಂಟೆಯಿಂದ ಹಮ್ಮಿಕೊಂಡಿದ್ದು, ನಂತರ 8 ಗಂಟೆಗೆ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಸವ ಜಯಂತಿ ಆಚರಿಸಲಾಗುವುದು

ಸೇವೆ,ಸಾಮಾಜಿಕ ಹೊಣೆ,ಕಲೆ ಸಂಸ್ಕೃತಿಯ ಅರಿವು, ಸಹಭೋಜನ,ಸಹಭಾಗಿತ್ವ .ಎನ್ ಎಸ್ಎಸ್ ಕಲಿಸುವ ಮುಖ್ಯ ಅಭ್ಯಾಸಗಳು- ಎಸ್.ರುದ್ರೇಗೌಡ

0

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸಿ ಪರಿಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ರಾಷ್ಟಿçÃಯ ಸೇವಾ ಯೋಜನೆ (ಎನ್‌ಎಸ್‌ಎಸ್) ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಶಾಸಕ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ತಿಳಿಸಿದರು.

ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಏ.17ರಿಂದ 23ರವರೆಗೆ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಏ.17ರ ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಓದು, ಬರಹ ಕಲಿಸಿ ಪುಸ್ತಕದ ಜ್ಞಾನ ನೀಡುತ್ತದೆ. ಪಠ್ಯ ಶಿಕ್ಷಣ ಜತೆ ಸಮುದಾಯದ ಪರಿಚಯ, ಸೇವೆ, ಸಾಮಾಜಿಕ ಜವಾಬ್ದಾರಿ, ಕಲೆ, ಸಂಸ್ಕೃತಿಯ ಅರಿವು, ಸಹ ಭೋಜನ, ಸಹಭಾಗಿತ್ವ, ಸೌಹಾರ್ದತೆಯನ್ನು ಎಸ್‌ಎಸ್ ಎಸ್‌ನಿಂದ ಕಲಿಯಬಹುzಯಿಂತಹ ಸಮಗ್ರತೆಯ ಪರಿಕಲ್ಪನೆಯ ಸಾಕಾರಕ್ಕಾಗಿ ನಡೆಯುವ ಎಸ್‌ಎಸ್‌ಎಸ್ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಶಿಕ್ಷಣದ ಮೂಲ ಉದ್ದೇಶವೇ ಸಾಮಾಜಿಕ ಒಳಿತು ಮತ್ತು ಮಾನವೀಯತೆಯ ಬದುಕನ್ನು ಕಟ್ಟಿಕೊಳ್ಳಲು ಅವಶ್ಯವಾದ ಜ್ಞಾನವನ್ನು ನೀಡುವುದಾಗಿದೆ. ಶಿಕ್ಷಣದ ಮೌಲ್ಯಗಳು ಸಾಮಾಜಿಕ ಪರಿವರ್ತನೆಯ ದೊಡ್ಡ ಸಾಧನವಾಗಿವೆ ಎಂದರು.

ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಚೇತನ್ ಗೌಡ ಮಾತನಾಡಿ ಕಲಿಕೆ ವಿದ್ಯಾರ್ಥಿ, ಶಿಕ್ಷಕರ ನಡುವಿನ ಕೊಂಡಿ ಅಷ್ಟೇ ಅಲ್ಲದೆ ಸಮುದಾಯದ ನಡುವೆಯೂ ರಚನಾತ್ಮಕ ಸಂಬAಧ ಏರ್ಪಡಬೇಕು ಎನ್ನುವ ಆಶಯದೊಂದಿಗೆ ಎನ್‌ಎಸ್‌ಎಸ್ ಶಿಬಿರ ನಡೆಸಲಾಗುತ್ತದೆ. ಗ್ರಾಮದ ಸ್ವಚ್ಛತೆ, ಕೆಲಸದ ಜತೆ ಗ್ರಾಮೀಣರಲ್ಲಿ ಆರೋಗ್ಯ ಅರಿವು, ಮೌಢ್ಯತೆ ಹೋಗಲಾಡಿಸುವುದು, ಕಂದಾಚಾರಕ್ಕೆ ವಿರುದ್ಧವಾಗಿ ಯುವಕರ ಪ್ರೇರಣೆ ಹೀಗೆ ಹಲವು ಮಾರ್ಗದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ಅಶಿತ್, ಹೆಚ್.ಬಿ. ರಾಮಣ್ಣ ಹರಳೆಣ್ಣೆ, ಕೆ.ಆರ್. ಸಂಜೀವಪ್ಪ, ರಾಜೇಶ್ವರಿ ತಿಮ್ಮೇಶ್, ಗಿರೀಶ್ ಸ್ವಾಮಿ, ಜಿಪಂ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಎಸ್. ನಾಗರಾಜ್, ಕುವೆಂಪು ಕನ್ನಡ ಸಂಘದ ಅಧ್ಯಕ್ಷ ಸತೀಶ್, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಧು ಜಿ., ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎನ್.ಜೆ. ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

ರಮ್ಯಾ ಮತ್ತು ತಂಡ ಪ್ರಾರ್ಥಿಸಿ, ಡಾ. ಮಧು ಜಿ. ಸ್ವಾಗತಿಸಿ, ಪ್ರಶಿಕ್ಷಣಾರ್ಥಿಗಳಾದ ಚಂದನ ಕೆ. ನಿರೂಪಿಸಿ, ಸೃಷ್ಟಿ ವಂದಿಸಿದರು

ರೋಟರಿ ಸಂಸ್ಥೆಯ ಸದಸ್ಯರು ಹೆಚ್ಚಿನ ದೇಣಿಗೆ ನೀಡುವ ಮೂಲಕ ಸಂಸ್ಥೆಯನ್ನ ಉನ್ನತ ಮಟ್ಟಕ್ಕೆ ಒಯ್ಯಬೇಕು- ಎಂ.ಬಿ.ಲಕ್ಷ್ಮಣಗೌಡ

0

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಜತೆಯಲ್ಲಿ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ರೋಟರಿ ಸಹಾಯಕ ಗವರ್ನರ್ ಎಂ.ಬಿ.ಲಕ್ಷಣಗೌಡ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ ಅಧಿಕೃತ ಭೇಟಿ ಹಾಗೂ ಕ್ಲಬ್ ಅಸೆಂಬ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಯ ಸದಸ್ಯರು ಹೆಚ್ಚಿನ ದೇಣಿಗೆ ನೀಡುವ ಮೂಲಕ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದರು.

ವಲಯ ಸೇನಾನಿ ಕಿರಣ್ ಕುಮಾರ್ ಮಾತನಾಡಿ, ಸಂಸ್ಥೆಯು ಹೆಚ್ಚು ಹೆಚ್ಚು ಕೆಲಸ ಮಾಡುವುದರ ಜೊತೆಗೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ. ಈ ಸಂಸ್ಥೆ ಎಲ್ಲಾ ಹಿರಿಯರನ್ನು ಒಳಗೊಂಡಿರುವ ಹಾಗೂ ಇತಿಹಾಸ ಇರುವ ಸಂಸ್ಥೆ ಆಗಿದೆ ಎಂದು ಹೇಳಿದರು.

ವಲಯ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿ, ಸಂಸ್ಥಯು ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಯಶಸ್ವಿ ಆಗಿದ್ದು, ಇನ್ನೂ ಕೂಡ ಅನೇಕ ಕೆಲಸಗಳನ್ನು ಮಾಡುವುದರ ಜೊತೆಗೆ ರೋಟರಿ ಅಂತರಾಷ್ಟ್ರೀಯ ಫೌಂಡೇಶನ್‌ಗೆ ಹೆಚ್ಚಿನ ದೇಣಿಗೆ ನೀಡಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯನ್ನು ಸದೃಢಗೊಳಿಸಬೇಕೆಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ್ ಮಾತನಾಡಿ, ಸಂಸ್ಥೆಯ ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಬಯೋ ಡೈವರ್ಸಿಟಿ ಪಾರ್ಕಿಗೆ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವದ ಪರವಾಗಿ ಸದಸ್ಯರಾದ ಅರುಣ್ ದೀಕ್ಷಿತ್ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದರಿಂದ ಸಭೆಯಲ್ಲಿ ಸನ್ಮಾನಿಸಲಾಯಿತು.

ಶ್ರೀಕಾಂತ್, ನಿಯೋಜಿತ ವಲಯ ಸೇನಾನಿ ಎ.ಒ.ಮಹೇಶ್, ರವಿಶಂಕರ್, ಗಂಗಪ್ಪ, ಜಗದೀಶ್, ಗಣೇಶ್, ಶ್ರೀನಿವಾಸ್ ಗೌಡ, ಸುರೇಶ್ ಕುಮಾರ್, ಮಧು, ಚಂದ್ರಶೇಖರಯ್ಯ, ಅರುಣ್ ದೀಕ್ಷಿತ್, ರವಿಶಂಕರ್, ಗಿರಿಜಾ ಧನಂಜಯ, ವಿಜಯವಾಣಿ, ವೀಣಾ ಕಿಶೋರ್ ಹಾಗೂ ಇತರ ಸದಸ್ಯರು ಹಾಜರಿದ್ದರು.

ಅಧಿಕಾರ ದುರುಪಯೋಗ & ಭ್ರಷ್ಟಾಚಾರದ ವಿರುದ್ಧದ ಹೋರಾಡದಲ್ಲಿ ಲೋಕಾಯುಕ್ತ ಆಶಾಕಿರಣವಾಗಿದೆ- ನ್ಯಾಯಮೂರ್ತಿ ಸೂರ್ಯಕಾಂತ್

0

ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ದೇಶಕ್ಕೇ ಮಾದರಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಅಭಿಪ್ರಾಯಪಟ್ಟರು.

ವಿಧಾನಸೌಧದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಲೋಕಾಯುಕ್ತ ಸಂಸ್ಥೆಗೆ ನಲವತ್ತರ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಯು ಕಳೆದ 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಈ ಸಂಸ್ಥೆಯು ನಾಗರಿಕರ ಆಶಾಕಿರಣವಾಗಿದೆ ಎಂದು ಅವರು ಬಣ್ಣಿಸಿದರು.

ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಲೋಕಾಯುಕ್ತದಂತಹ ಸಂಸ್ಥೆಗಳ ಪಾತ್ರ ದೊಡ್ಡದಿದೆ. ತಳಮಟ್ಟದ ಜನರಿಗೂ ನ್ಯಾಯ ಸಿಗುವಂತಾಗಲು ಈ ಸಂಸ್ಥೆಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಲೋಕಾಯುಕ್ತ ಸಂಸ್ಥೆಯು ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಮತ್ತಷ್ಟು ಬಲಗೊಳ್ಳಬೇಕಿದೆ. ತನಿಖಾ ಪ್ರಕ್ರಿಯೆಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು ನ್ಯಾಯದಾನದ ದೃಷ್ಟಿಯಿಂದ ಅತಿ ಅಗತ್ಯ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಲೋಕಾಯುಕ್ತ ಸಂಸ್ಥೆಯು ಅತ್ಯಂತ ಪ್ರಬಲವಾದ ಮತ್ತು ಸ್ವಾಯತ್ತವಾದ ಇತಿಹಾಸವನ್ನು ಹೊಂದಿದೆ. ಇದನ್ನು ಕಾಪಾಡಿಕೊಂಡು ಹೋಗುವುದು ಕೇವಲ ಸರ್ಕಾರದ ಜವಾಬ್ದಾರಿಯೂ ಅಲ್ಲ, ಸಮಾಜದ ಹೊಣೆಗಾರಿಕೆಯೂ ಆಗಿದೆ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರ ಎಂಬ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಕೇವಲ ಶಿಕ್ಷೆಯೊಂದೇ ಸಾಲದು, ನೈತಿಕ ಮೌಲ್ಯಗಳ ಜಾಗೃತಿಯೂ ಆಗಬೇಕು. ಲೋಕಾಯುಕ್ತ ಸಂಸ್ಥೆಯು ಕೇವಲ ದಂಡಿಸುವ ಸಂಸ್ಥೆಯಾಗದೆ, ಜನರಲ್ಲಿ ಜಾಗೃತಿ ಮೂಡಿಸುವ ವೇದಿಕೆಯೂ ಆಗಲಿ ಎಂದು ಆಶಯ ವ್ಯಕ್ತಪಡಿಸಿ, ಸಂಸ್ಥೆಯ ಭವಿಷ್ಯದ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.

ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವುದೇ ಲೋಕಾಯುಕ್ತದ ಪರಮ ಗುರಿ : ಲೋಕಾಯುಕ್ತ ಬಿ.ಎಸ್. ಪಾಟೀಲ್
ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ ತರುವುದು ಮತ್ತು ಆಡಳಿತ ಯಂತ್ರದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವುದೇ ಲೋಕಾಯುಕ್ತ ಸಂಸ್ಥೆಯ ಮೂಲ ಉದ್ದೇಶ ಎಂದು ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್ ಅವರು ಪ್ರತಿಪಾದಿಸಿದರು.

“ಲೋಕಾಯುಕ್ತ ಸಂಸ್ಥೆಗೆ ನಲವತ್ತರ ಸಂಭ್ರಮ” ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕರ್ನಾಟಕ ಲೋಕಾಯುಕ್ತ ಸಂಸ್ಥೆಯು 1984ರಲ್ಲಿ ಸ್ಥಾಪನೆಯಾದಾಗಿನಿಂದಲೂ ಭ್ರಷ್ಟಾಚಾರದ ವಿರುದ್ಧ ರಾಜಿ ಇಲ್ಲದ ಹೋರಾಟ ನಡೆಸುತ್ತಾ ಬಂದಿದೆ. ಇಂದು ಈ ಸಂಸ್ಥೆಯು 40 ವರ್ಷಗಳನ್ನು ಪೂರೈಸಿರುವುದು ಅದರ ಸ್ಥಿರತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಸ್ಮರಿಸಿದರು.

ಜಿಲ್ಲಾ ಪ್ರವಾಸಗಳು ಮತ್ತು ಲೋಕ್ ಅದಾಲತ್‍ಗಳ ಮೂಲಕ ನಾವು ಹಳ್ಳಿಗಾಡಿನ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪದಿದ್ದಾಗ ಅಥವಾ ವಿಳಂಬವಾದಾಗ ಹಸ್ತಕ್ಷೇಪ ಮಾಡಿದವರ ಮೇಲೆ ಕ್ರಮಕೈಗೊಂಡು ಜನರಲ್ಲಿ ನಂಬಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಭ್ರಷ್ಟಾಚಾರ ಕೇವಲ ಹಣದ ವ್ಯವಹಾರವಲ್ಲ, ಸಾರ್ವಜನಿಕ ಕೆಲಸಗಳನ್ನು ವಿಳಂಬ ಮಾಡುವುದು ಕೂಡ ಒಂದು ರೀತಿಯ ಭ್ರಷ್ಟಾಚಾರವೇ ಆಗಿದೆ. ಅಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಲೋಕಾಯುಕ್ತಕ್ಕೆ ದೂರುಗಳು ಬರುವ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಲೋಕಾಯುಕ್ತ ಸಂಸ್ಥೆಗೆ ಪೋಲೀಸ್ ವಿಭಾಗದ ಮರುಸೇರ್ಪಡೆಯಾದ ನಂತರ ತನಿಖೆಗಳು ಹೆಚ್ಚು ವೇಗ ಪಡೆದುಕೊಂಡಿವೆ. ಈ ಶಕ್ತಿಯನ್ನು ಬಳಸಿಕೊಂಡು ಸಮಾಜದಲ್ಲಿನ ಅನ್ಯಾಯದ ವಿರುದ್ಧ ನಿರಂತರವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.

ನಾವು ಕೇವಲ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಸಂಸ್ಥೆಯಾಗದೆ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮಾರ್ಗದರ್ಶಕನಾಗಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬ ಸರ್ಕಾರಿ ನೌಕರನು ತಾನು ಜನರ ಸೇವಕ ಎಂಬ ಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಲೋಕಾಯುಕ್ತದ ಆಶಯ ಈಡೇರಲು ಸಾಧ್ಯ ಎಂದು ಬಿ.ಎಸ್. ಪಾಟೀಲ್ ಅವರು ಕರೆ ನೀಡಿದರು.

ನ್ಯಾಯಮೂರ್ತಿ ಎ.ಡಿ. ಕೋಶಲ್ ಅವರು ಮೊದಲ ಲೋಕಾಯುಕ್ತರಾಗಿದ್ದರು. ನ್ಯಾಯಮೂರ್ತಿ ಎನ್. ವೆಂಕಟಾಚಲ ಮತ್ತು ನ್ಯಾಯಮೂರ್ತಿ ಎನ್. ಸಂತೋμï ಹೆಗ್ಡೆ ಅವರ ಅವಧಿಯಲ್ಲಿ ಸಂಸ್ಥೆಯು ಸಾರ್ವಜನಿಕರಲ್ಲಿ ಹೆಚ್ಚಿನ ನಂಬಿಕೆ ಗಳಿಸಿತು.

ಲೋಕಾಯುಕ್ತ ಸ್ಥಾಪನೆಯಾದ 1986 ರಿಂದ ಈವರೆಗೆ ಈ ಸಂಸ್ಥೆಯಲ್ಲಿ ದಾಖಲಾದ ಒಟ್ಟು 1,75,126 ಪ್ರಕರಣಗಳಲ್ಲಿ 1,51,233 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ ಲೋಕಾಯುಕ್ತದಲ್ಲಿ ಒಟ್ಟು 40,648 ಪ್ರಕರಣಗಳು ಬಾಕಿ ಇವೆ ಎಂದರು.

ಪ್ರಸ್ತುತ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಸೇರಿ ಇತ್ತೀಚಿನ ಅವಧಿಯಲ್ಲಿ 24,085 ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಹೆಚ್ಚಿನ ವೇಗ ನೀಡಲಾಗುತ್ತಿದೆ. ಲೋಕಾಯುಕ್ತದ ಕ್ರಮದ ಮೂಲಕ ರಾಜ್ಯದ ಸುಮಾರು 40,299 ಕೆರೆಗಳ ಸಮೀಕ್ಷೆ ನಡೆಸಲಾಗಿದ್ದು, 9,825 ಕೆರೆಗಳ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ಕಲುಷಿತ ನೀರು ಸೇವನೆಯಿಂದ ಸಂಭವಿಸಿದ ಸಾವುಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

ಯಾದಗಿರಿ ಮತ್ತು ಕಲಬುರಗಿಯಲ್ಲಿ ಸ್ಥಗಿತಗೊಂಡಿದ್ದ ನೂರಾರು ಆರ್.ಒ ಘಟಕಗಳನ್ನು ದುರಸ್ತಿ ಮಾಡಿಸಲು ಸರ್ಕಾರದಿಂದ 14.50 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. 43 ಉಪ ನೋಂದಣಾಧಿಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಲೋಪಗಳನ್ನು ಪತ್ತೆಹಚ್ಚಲಾಗಿದೆ ಹಾಗೂ ಆರ್.ಟಿ.ಓ ಚೆಕ್‍ಪೆÇೀಸ್ಟ್‍ಗಳಲ್ಲಿ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಕ್ಟೋರಿಯಾ ಮತ್ತು ಕಿದ್ವಾಯಿ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಲಾಗಿದೆ.

ಸರ್ಕಾರಿ ಕೆಲಸದಲ್ಲಿ ಅಧಿಕಾರಿಗಳ ದಕ್ಷತೆ ಹೆಚ್ಚಿಸಲು ‘ಸಿಸ್ಟಮಿಕ್ ಟ್ರಾನ್ಸ್‍ಫರ್ಮೇಷನ್’ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ನಿಯತಕಾಲಿಕವಾಗಿ ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುತ್ತಿದ್ದಾರೆ ಎಂದರು.

ಉಪ ಲೋಕಾಯುಕ್ತ ಕೆ ಎನ್ ಪಣೀಂದ್ರ ಅವರು ಸ್ವಾಗತ ಮಾಡಿ ಮಾತನಾಡಿ ನಾವು ಇಂದು ಕೇವಲ 40 ವರ್ಷದ ಆಚರಣೆ ಮಾಡುತ್ತಿಲ್ಲ. ಬದಲಾಗಿ, ನ್ಯಾಯಾದ ಪರವಾಗಿ ಹೋರಾಡುತ್ತಿರುವ ಸಂಸ್ಥೆ ಹುಟ್ಟಿ-ಬೆಳೆದ ಪರಿಯನ್ನು ಮೆಲುಕು ಹಾಕುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಲೋಕಾಯುಕ್ತದವತಿಯಿಂದ ಹೊರತರಲಾಗುತ್ತಿರುವ ಮ್ಯಾಗಜೀನ್ ಬಿಡುಗಡೆ ಮಾಡಲಾಯಿತು.

ಜನಪ್ರತಿನಿದಿಗಳ ಆಸ್ತಿ ಘೋಷಣೆಯ ವ್ಯವಸ್ಥೆಯನ್ನು ಆನ್-ಲೈನ್ ಮಾಡಲಾಗಿದ್ದು, ಈ ನೂತನ ವ್ಯವಸ್ಥೆಗೆ ಸಹ ಚಾಲನೆ ನೀಡಲಾಯಿತು. ಲೋಕಾಯುಕ್ತ ಸಂಸ್ಥೆ ಹುಟ್ಟಿನಿಂದ ಈವರೆಗೆ ಲೋಕಯುಕ್ತರಾಗಿ ಹಾಗೂ ಉಪ ಲೋಕಯುಕ್ತರಾಗಿ ಸೇವೆ ಸಲ್ಲಿಸಿದ ಹಲವರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅರವಿಂದ ಕುಮಾರ್, ಉಪ ಲೋಕಾಯುಕ್ತ ಬಿ ವೀರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಡಾ ಶಾಲಿನಿ ರಜನೀಶ್ ಅವರು ಉಪಸ್ಥಿತರಿದ್ದರು.

ಕಾರಾಗೃಹ ಮತ್ತು ಸುಧಾರಣಾ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೀಕ್ಷಕರ ನೇಮಕಾತಿ

0

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ಖಾಲಿಯಿರುವ ವೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ 11 ತಿಂಗಳ ಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಆಸಕ್ತ ಮಾಜಿ ಸೈನಿಕರು ಸ್ವಯಂ ವಿವರಗಳನ್ನೊಳಗೊಂಡ ಲಿಖಿತ ಅರ್ಜಿಯನ್ನು ಏಪ್ರಿಲ್ 24 ರೊಳಗಾಗಿ ಉಪ ನಿರ್ದೇಶಕರ ಕಛೇರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಖುದ್ದಾಗಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಎ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈಮೇಲ್ soldiersshimoga@gmail.com ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.