Saturday, April 11, 2026
Saturday, April 11, 2026
Home Blog Page 1267

World Theatre Day ಪ್ರಪಂಚದ ಎಲ್ಲಾ ನಾಗರಿಕತೆಗಳಲ್ಲಿ ನಾಟಕ ಆರಂಭದ ಹಂತದಲ್ಲೇ ಬೆಳೆದ ಕಲೆ-ಪ್ರೊ.ಬಿ.ಎಂ.ಕುಮಾರಸ್ವಾಮಿ

0

World Theatre Day ಭಾವನೆಗಳನ್ನು ಇತರಿಗೆ ವ್ಯಕ್ತಪಡಿಸುವುದಕ್ಕೆ ಪಳಗಿಸಿಕೊಂಡಂತಹ ಅತ್ಯಂತ ಪುರಾತನ ಹಾಗೂ ಸಹಜವಾದ ಮಾಧ್ಯಮವೆಂದರೆ ಅದು ರಂಗಭೂಮಿ ಎಂದು ಹಿರಿಯ ರಂಗಕರ್ಮಿ ಗಳಾದ ಪ್ರೊ. ಬಿ ಎಂ. ಕುಮಾರಸ್ವಾಮಿಯವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಕೆ ಲೈವ್ ನ್ಯೂಸ್ ಮಾಧ್ಯಮ ಹಾಗೂ ಕಟೀಲ್ ಅಶೋಕ್ ಪೈ. ಸ್ಮಾರಕ ಕಾಲೇಜಿನ ಸಹಯೋಗದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆಯ ಪ್ರಯುಕ್ತ ರಂಗ ಮಂಚ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಪಂಚದ ಎಲ್ಲಾ ನಾಗರಿಕತೆಗಳಲ್ಲಿ ಪ್ರಾರಂಭದ ಹಂತದಲ್ಲಿ ನಾಟಕ ಅಥವಾ ರಂಗಭೂಮಿ ಬಹಳ ಮುಖ್ಯವಾದದ್ದು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ‌ ತಿಳಿಸಿದರು.

ಹಿಂದಿನ ಕಾಲದಲ್ಲಿ ಯಾವುದೇ ಆಧುನಿಕ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ನಾಟಕವು ಪ್ರಮುಖವಾದಂತಹ ಮಾಧ್ಯಮವಾಗಿತ್ತು. ಸಂಸ್ಕೃತಿಯನ್ನು ಸಾವಿರಾರು ವರ್ಷಗಳ ಕಾಲ ನಿರಂತರವಾಗಿ, ಜೀವಂತವಾಗಿ ಪ್ರಸಾರ ಮಾಡಿದ ಕೀರ್ತಿ ನಮ್ಮ ನಾಟಕಗಳಿಗೆ ತಲುಪಬೇಕು ಎಂದರು.

ಮುಖ್ಯ ಅತಿಥಿಗಳಾದ ಹಿರಿಯರಂಗ ಸಂಘಟಕರು, ರಂಗ ಸಮಾಜದ ಮಾಜಿ ಸದಸ್ಯರಾದ ಎಸ್ ಆರ್ ಹಾಲಸ್ವಾಮಿ ಅವರು ಮಾತನಾಡಿ, ರಂಗಭೂಮಿಯಲ್ಲಿ ನಟರೆಲ್ಲರೂ ಒಂದೇ. ವೈಯಕ್ತಿಕ ಜೀವನದಲ್ಲಿ ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ರಂಗಭೂಮಿಯಲ್ಲಿ ನಟರೆಲ್ಲರೂ ಒಂದೇ ಎಂದು ತಿಳಿಸಿದರು.

ರಂಗ ಭೂಮಿಯಲ್ಲಿ ಒಬ್ಬ ನಟ ತನ್ನ ಸಂಭಾಷಣೆಯನ್ನ ಮರೆತರೆ, ಇನ್ನೊಬ್ಬ ನಟ ಸಂಭಾಷಣೆಯನ್ನು ಸರಿದೂಗಿಸಿಕೊಂಡು ಹೋಗಬೇಕು. ರಂಗಭೂಮಿಯಲ್ಲಿ ನಟರಿಗೆ ಹಾಗೂ ಪ್ರೇಕ್ಷಕರಿಗೆ ನೇರವಾದ ಸಂಬಂಧವಿರುತ್ತದೆ ಎಂದರು.

World Theatre Day ಕೆ ಲೈವ್ ನ್ಯೂಸ್ ಪ್ರಧಾನ ಸಂಪಾದಕರಾದ ಡಾ. ಸುಧೀಂದ್ರ ಅವರು ಮಾತನಾಡಿ,
ಆಡಿಟೋರಿಯಂ ನಲ್ಲಿ ಕುಳಿತು ನಾಟಕವನ್ನು ವೀಕ್ಷಿಸುವ ನಾಟಕಗಳು ಬೇರೆ, ಒಬ್ಬರೇ ಕುಳಿತು ನಾಟಕಗಳನ್ನ ಕೇಳುವುದೇ ಬೇರೆ. ಕೇಳುಗ, ಕಥೆಯನ್ನು ಕೇಳುವ ಮುಖಾಂತರ ತನ್ನ ಕಲ್ಪನೆಯಲ್ಲಿ ತನ್ನದೇ ಆದ ದೃಶ್ಯಗಳನ್ನ ಕಲ್ಪಿಸಿಕೊಳ್ಳುತ್ತಾನೆ. ರಂಗಭೂಮಿಯಲ್ಲಿ ಒನ್ ಸ್ಮೋರ್ ಗೆ ಅವಕಾಶವಿರುತ್ತದೆ. ಆದರೆ ಸಿನಿಮಾ ರಂಗದಲ್ಲಿ ವನ್ಸ್ ಮೋರ್ ಗೆ ಅವಕಾಶವಿರುವುದಿಲ್ಲ ಎಂದು ಸಿನಿಮಾ, ಮಾಧ್ಯಮ ಹಾಗೂ ರೇಡಿಯೋ  ರಂಗಭೂಮಿಗೆ ಇರುವ ವ್ಯತ್ಯಾಸವನ್ನು ತಿಳಿಸಿದರು.

ಕೆ ಲೈವ್ ನ್ಯೂಸ್ ಕೇವಲ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆ
ಸಮುದಾಯದ ,ಯುವ ಜನತೆಯ ಆಶೋತ್ತರಗಳನ್ನ ಬಿಂಬಿಸುವಲ್ಲಿಯೂ ತನ್ನದೇ ವಿಶಿಷ್ಟ ಪ್ರಯತ್ನ ಮಾಡುತ್ತಿದೆ ಎಂದು ಡಾ.ಸುಧೀಂದ್ರ ಅವರು ತಿಳಿಸಿದರು.

ನಂತರದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ, ವಿದ್ಯಾರ್ಥಿಗಳು ನಾಟಕಗಳನ್ನ ಹೆಚ್ಚು ಹೆಚ್ಚು ನೋಡಬೇಕು. ನಾಟಕವನ್ನು ಬಳಸಿ ಇತರರಿಗೆ ಅರಿವನ್ನ ಉಂಟು ಮಾಡಬಹುದು. ನಾಟಕವು ನೋಡುಗನಿಗೆ ಮಾನಸಿಕ ಚಿಕಿತ್ಸೆಯನ್ನು ಕೊಡುವ ಕೆಲಸ ಕೂಡ ನಾಟಕ ಮಾಡುತ್ತದೆ ಎಂದರು.

ರಂಗ ಕಲಾವಿದರಾದ ಕು.ನಾದ ಅವರು ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ನಾಟಕದ ಹೃದಯಂಗಮ ಭಾಗವನ್ನ ಏಕಪಾತ್ರಾಭಿನಯದಲ್ಲಿ ಪ್ರಸ್ತುತ ಪಡಿಸಿದರು. ಅವರ ಅಭಿನಯ ವೀಕ್ಷಕರ ಮನಗೆದ್ದಿತು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಂದ ಜನರಲ್ಲಿ ಅರಿವು ಮೂಡಿಸುವ ಕಾನ್ಸರ್ ಕುರಿತು ಕಿರು ನಾಟಕ ಪ್ರದರ್ಶನ ಗೊಂಡಿತು.

ಈ ಸಂದರ್ಭದಲ್ಲಿ ಶ್ರೀ. ಬೇಲೂರು ರಘುನಂದನ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬೋಧಕ, ಬೋಧಕೇತರು, ವಿದ್ಯಾರ್ಥಿಗಳು, ಕೆ ಲೈವ್ ನ್ಯೂಸ್ ಮಾಧ್ಯಮ ಮಿತ್ರರು ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

World Theater Day ಪ್ರಪಂಚದ ಎಲ್ಲಾ ನಾಗರಿಕತೆಗಳಲ್ಲಿ ನಾಟಕ ಆರಂಭದ ಹಂತದಲ್ಲೇ ಬೆಳೆದ ಕಲೆ-ಪ್ರೊ.ಬಿ.ಎಂ.ಕುಮಾರಸ್ವಾಮಿ

0

World Theater Day ಭಾವನೆಗಳನ್ನು ಇತರಿಗೆ ವ್ಯಕ್ತಪಡಿಸುವುದಕ್ಕೆ ಪಳಗಿಸಿಕೊಂಡಂತಹ ಅತ್ಯಂತ ಪುರಾತನ ಹಾಗೂ ಸಹಜವಾದ ಮಾಧ್ಯಮವೆಂದರೆ ಅದು ರಂಗಭೂಮಿ ಎಂದು ಹಿರಿಯ ರಂಗಕರ್ಮಿ ಗಳಾದ ಪ್ರೊ. ಬಿ ಎಂ. ಕುಮಾರಸ್ವಾಮಿಯವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಕೆ ಲೈವ್ ನ್ಯೂಸ್ ಮಾಧ್ಯಮ ಹಾಗೂ ಕಟೀಲ್ ಅಶೋಕ್ ಪೈ. ಸ್ಮಾರಕ ಕಾಲೇಜಿನ ಸಹಯೋಗದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆಯ ಪ್ರಯುಕ್ತ ರಂಗ ಮಂಚ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಪಂಚದ ಎಲ್ಲಾ ನಾಗರಿಕತೆಗಳಲ್ಲಿ ಪ್ರಾರಂಭದ ಹಂತದಲ್ಲಿ ನಾಟಕ ಅಥವಾ ರಂಗಭೂಮಿ ಬಹಳ ಮುಖ್ಯವಾದದ್ದು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ‌ ತಿಳಿಸಿದರು.

ಹಿಂದಿನ ಕಾಲದಲ್ಲಿ ಯಾವುದೇ ಆಧುನಿಕ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ನಾಟಕವು ಪ್ರಮುಖವಾದಂತಹ ಮಾಧ್ಯಮವಾಗಿತ್ತು. ಸಂಸ್ಕೃತಿಯನ್ನು ಸಾವಿರಾರು ವರ್ಷಗಳ ಕಾಲ ನಿರಂತರವಾಗಿ, ಜೀವಂತವಾಗಿ ಪ್ರಸಾರ ಮಾಡಿದ ಕೀರ್ತಿ ನಮ್ಮ ನಾಟಕಗಳಿಗೆ ತಲುಪಬೇಕು ಎಂದರು.

ಮುಖ್ಯ ಅತಿಥಿಗಳಾದ ಹಿರಿಯರಂಗ ಸಂಘಟಕರು, ರಂಗ ಸಮಾಜದ ಮಾಜಿ ಸದಸ್ಯರಾದ ಎಸ್ ಆರ್ ಹಾಲಸ್ವಾಮಿ ಅವರು ಮಾತನಾಡಿ, ರಂಗಭೂಮಿಯಲ್ಲಿ ನಟರೆಲ್ಲರೂ ಒಂದೇ. ವೈಯಕ್ತಿಕ ಜೀವನದಲ್ಲಿ ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ರಂಗಭೂಮಿಯಲ್ಲಿ ನಟರೆಲ್ಲರೂ ಒಂದೇ ಎಂದು ತಿಳಿಸಿದರು.

ರಂಗ ಭೂಮಿಯಲ್ಲಿ ಒಬ್ಬ ನಟ ತನ್ನ ಸಂಭಾಷಣೆಯನ್ನ ಮರೆತರೆ, ಇನ್ನೊಬ್ಬ ನಟ ಸಂಭಾಷಣೆಯನ್ನು ಸರಿದೂಗಿಸಿಕೊಂಡು ಹೋಗಬೇಕು. ರಂಗಭೂಮಿಯಲ್ಲಿ ನಟರಿಗೆ ಹಾಗೂ ಪ್ರೇಕ್ಷಕರಿಗೆ ನೇರವಾದ ಸಂಬಂಧವಿರುತ್ತದೆ ಎಂದರು.

ಕೆ ಲೈವ್ ನ್ಯೂಸ್ ಪ್ರಧಾನ ಸಂಪಾದಕರಾದ ಡಾ. ಸುಧೀಂದ್ರ ಅವರು ಮಾತನಾಡಿ,
ಆಡಿಟೋರಿಯಂ ನಲ್ಲಿ ಕುಳಿತು ನಾಟಕವನ್ನು ವೀಕ್ಷಿಸುವ ನಾಟಕಗಳು ಬೇರೆ, ಒಬ್ಬರೇ ಕುಳಿತು ನಾಟಕಗಳನ್ನ ಕೇಳುವುದೇ ಬೇರೆ. ಕೇಳುಗ, ಕಥೆಯನ್ನು ಕೇಳುವ ಮುಖಾಂತರ ತನ್ನ ಕಲ್ಪನೆಯಲ್ಲಿ ತನ್ನದೇ ಆದ ದೃಶ್ಯಗಳನ್ನ ಕಲ್ಪಿಸಿಕೊಳ್ಳುತ್ತಾನೆ. ರಂಗಭೂಮಿಯಲ್ಲಿ ಒನ್ ಸ್ಮೋರ್ ಗೆ ಅವಕಾಶವಿರುತ್ತದೆ. ಆದರೆ ಸಿನಿಮಾ ರಂಗದಲ್ಲಿ ವನ್ಸ್ ಮೋರ್ ಗೆ ಅವಕಾಶವಿರುವುದಿಲ್ಲ ಎಂದು ಸಿನಿಮಾ, ಮಾಧ್ಯಮ ಹಾಗೂ ರಂಗಭೂಮಿಗೆ ಇರುವ ವ್ಯತ್ಯಾಸವನ್ನು ತಿಳಿಸಿದರು.

ಕೆ ಲೈವ್ ನ್ಯೂಸ್ ಕೇವಲ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆ
ಸಮುದಾಯದ ,ಯುವ ಜನತೆಯ ಆಶೋತ್ತರಗಳನ್ನ ಬಿಂಬಿಸುವಲ್ಲಿಯೂ ತನ್ನದೇ ವಿಶಿಷ್ಟ ಪ್ರಯತ್ನ ಮಾಡುತ್ತಿದೆ ಎಂದು ಡಾ.ಸುಧೀಂದ್ರ ಅವರು ತಿಳಿಸಿದರು.

ನಂತರದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ, ವಿದ್ಯಾರ್ಥಿಗಳು ನಾಟಕಗಳನ್ನ ಹೆಚ್ಚು ಹೆಚ್ಚು ನೋಡಬೇಕು. ನಾಟಕವನ್ನು ಬಳಸಿ ಇತರರಿಗೆ ಅರಿವನ್ನ ಉಂಟು ಮಾಡಬಹುದು. ನಾಟಕವು ನೋಡುಗನಿಗೆ ಮಾನಸಿಕ ಚಿಕಿತ್ಸೆಯನ್ನು ಕೊಡುವ ಕೆಲಸ ಕೂಡ ನಾಟಕ ಮಾಡುತ್ತದೆ ಎಂದರು.

ರಂಗ ಕಲಾವಿದರಾದ ಕು.ನಾದ ಅವರು ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ನಾಟಕದ ಹೃದಯಂಗಮ ಭಾಗವನ್ನ ಏಕಪಾತ್ರಾಭಿನಯದಲ್ಲಿ ಪ್ರಸ್ತುತ ಪಡಿಸಿದರು. ಅವರ ಅಭಿನಯ ವೀಕ್ಷಕರ ಮನಗೆದ್ದಿತು.

World Theater Day ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಂದ ಜನರಲ್ಲಿ ಅರಿವು ಮೂಡಿಸುವ ಕಾನ್ಸರ್ ಕುರಿತು ಕಿರು ನಾಟಕ ಪ್ರದರ್ಶನ ಗೊಂಡಿತು.

ಈ ಸಂದರ್ಭದಲ್ಲಿ ಶ್ರೀ. ಬೇಲೂರು ರಘುನಂದನ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬೋಧಕ, ಬೋಧಕೇತರು, ವಿದ್ಯಾರ್ಥಿಗಳು, ಕೆ ಲೈವ್ ನ್ಯೂಸ್ ಮಾಧ್ಯಮ ಮಿತ್ರರು ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Massive Protest Outside BS Yediyurappa’s Home Over Reservation | ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರಿಂದ ಪ್ರತಿಭಟನೆ ಪರಿಸ್ಥಿತಿ ನಿಯಂತ್ರಣದಲ್ಲಿದೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kannada Sahitya Parishat ಸಹಜ ಸಾತ್ವಿಕ ಬದುಕೇ ಶರಣ ಸಂಸ್ಕೃತಿ- ಎಚ್.ಬಿ.ಮಂಜುನಾಥ್

0

Kannada Sahitya Parishat ಸಹಜ ಸಾತ್ವಿಕ ಬದುಕೇ ಶರಣ ಸಂಸ್ಕೃತಿಯಾಗಿದ್ದು ಇದರ ವಾಚಿಕ ಅಭಿವ್ಯಕ್ತಿಯೇ ವಚನ ಸಾಹಿತ್ಯವಾಗಿದೆ. ವಚನ ಸಾಹಿತ್ಯವನ್ನು ಕೇವಲ ಅಧ್ಯಯನ ಮಾಡುವುದಕ್ಕಿಂತ ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳುವುದು ಅವಶ್ಯಕ ಎಂದು ಹಿರಿಯ ಪತ್ರಕರ್ತ, ಚಿಂತಕ ಎಚ್. ಬಿ ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಗನೂರು ಬಸಪ್ಪ ಸಂಯುಕ್ತ ಶಾಲೆ ಬಸವ ಮಂಟಪ, ಹಿರಿಯ ನಾಗರೀಕರ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಾಡಾಗಿದ್ದ ಶಾಲಾ ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ ಮಾಲಿಕೆ ಅಂಗವಾಗಿ “ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಅರ್ಥ ಕಾಮಗಳಿಗೆ ಆದ್ಯತೆ ಇಲ್ಲದ ಸಾಮಾಜಿಕ ಪ್ರಜ್ಞೆಯ ಸಮಾನತಾ ಮನೋಭಾವದ ವಚನ ಸಾಹಿತ್ಯವು ಸಾಧನ ಮೌಲ್ಯಗಳಿಗಿಂತ ಸಾಧ್ಯ ಮೌಲ್ಯಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದು ಸಾರ್ವಕಾಲಿಕ ಸತ್ಯದ ವಚನಕಾರರು ನಮ್ಮ ಪರಂಪರೆಯಿಂದ ಬಂದ ವೇದ, ಆಗಮ, ಪುರಾಣ, ಇತಿಹಾಸ, ಮಹಾಕಾವ್ಯಗಳ ವಿರೋಧಿಗಳಾಗಿರದೆ ಅವುಗಳ ಅಧ್ಯಯನವನ್ನು ಮಾಡಿದವರಾಗಿದ್ದರು. ಆದರೆ ವೇದ ಪುರಾಣ ಆಗಮಾದಿಗಳನ್ನು ಮುಂದಿಟ್ಟುಕೊಂಡು ಸಮಾಜದ ದಿಕ್ಕು ತಪ್ಪಿಸುವವರ ವಿರೋಧಿಗಳಾಗಿದ್ದರು. ನಮ್ಮ ಸನಾತನ ಸಾಹಿತ್ಯದ ಎಲ್ಲ ಮೌಲ್ಯಯುತ ಅಂಶಗಳನ್ನು ಸರಳ ಕನ್ನಡ ಭಾಷೆಯಲ್ಲಿ ಶ್ರೀಸಾಮಾನ್ಯರಿಗೂ ಅರ್ಥವಾಗುವಂತೆ ಕೊಟ್ಟವರು ನಮ್ಮ ವಚನಕಾರರು ಹಾಗೂ ಕೀರ್ತನಕಾರರು, ಹೀಗಾಗಿಯೇ ಕನ್ನಡ ಸಾಹಿತ್ಯ ಲೋಕದ ಅಷ್ಟೇ ಅಲ್ಲ ಆಧ್ಯಾತ್ಮಿಕ ಚಿಂತನೆಯ ಎರಡು ಕಣ್ಣುಗಳಂತೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳು ಸಾರ್ವಕಾಲಿಕ ಮೌಲ್ಯಗಳನ್ನು ಪಡೆದಿವೆ ಎಂದು ಎಚ್ ಬಿ ಮಂಜುನಾಥ್ ಉದಾಹರಣೆಗಳ ಸಹಿತ ಪ್ರತಿಪಾದಿಸಿದರು.

Kannada Sahitya Parishat ಅನ್ಯಭಿನ್ನವಿಲ್ಲದ ಜ್ಞಾನಮಾರ್ಗವೇ ವಚನ ಸಾಹಿತ್ಯವಾಗಿದ್ದು “ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ” ಎಂಬ ನುಡಿಗಟ್ಟು ಇವರ ಧ್ಯೇಯವಾಗಿತ್ತು, ಬಹಿರಂಗ ಶುದ್ದಿಯು ನಾಗರಿಕತೆಯಾಗಿ ಕಂಡರೆ ಅಂತರಂಗ ಶುದ್ದಿಯು ಸಂಸ್ಕೃತಿಯಾಗುತ್ತದೆ, ಅಂತರಂಗ ಬಹಿರಂಗ ಶುದ್ದಿಗಳೆರಡಕ್ಕೂ ಮಾರ್ಗ ತೋರಿಸಿರುವುದು ವಚನ ಸಾಹಿತ್ಯವಾಗಿದೆ ಎಂದೂ ಮಂಜುನಾಥ್ ಹೇಳಿದರು. ರಸಾಸ್ವಾದನೆಯು ಕಾವ್ಯಗಳ ಆಶಯವಾದರೆ ಮೌಲ್ಯ ಪ್ರತಿಪಾದನೆಯ ವಚನಗಳ ಆಶಯವಾಗಿದೆ, ವಚನ ಸಾಹಿತ್ಯಕ್ಕಾಗಲಿ ದಾಸ ಸಾಹಿತ್ಯಕ್ಕಾಗಲಿ ಪ್ರಚಾರದ ಅವಶ್ಯಕತೆಯಿಲ್ಲ, ಜೀವನದಲ್ಲಿ ಅದರ ಪ್ರಯೋಗ ಅವಶ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಗನೂರು ಬಸಪ್ಪ ಶಾಲಾ ಆಡಳಿತಾಧಿಕಾರಿ ಎಸ್ ಆರ್ ಶಿರಗುಂಬಿ ಅವರು ಕೀರ್ತಿಶೇಷ ಮಾಗನೂರು ಬಸಪ್ಪನವರ ಜೀವನ ಮೌಲ್ಯಗಳ ಬಗ್ಗೆ ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡುತ್ತ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ ಅವರು ಬಡತನದಲ್ಲಿ ಹುಟ್ಟು ತಪ್ಪಲ್ಲ , ಬಡತನದಲ್ಲೇ ಸಾಯ ಬೇಕೆಂದೇನೂ ಇಲ್ಲ, ಈ ದತ್ತಿ ದಾನಿಗಳು ಬಡತನದಿಂದ ಶ್ರೀಮಂತಿಕೆಗೆ ಬಂದವರು ಸತ್ಕಾರ್ಯಕ್ಕೆ ಕೊಡುವ ಉದಾರತೆಯನ್ನೂ ಹೊಂದಿದ್ದರು ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟಿನ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡರು ಶ್ರೇಷ್ಠ ಕನಿಷ್ಠವೆಂಬ ಭೇದವಿಲ್ಲದೆ ಜ್ಞಾನ ಎಲ್ಲಿಂದ ಬಂದರೂ ಸ್ವೀಕರಿಸಿ ಅನುಷ್ಠಾನಗೊಳಿಸಿಕೊಳ್ಳಬೇಕು ಎಂದರು.

ಶಿಕ್ಷಕಿ ಲೀಲಾವತಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವೇದವತಿ ಸ್ವಾಗತ ಕೋರಿದರು. ಭಾಗ್ಯಶ್ರೀ ವಂದನೆಗಳನ್ನು ಸಲ್ಲಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಹೆಚ್.ಕೆ. ಪಾಲಾಕ್ಷಪ್ಪ, ನಿರ್ದೇಶಕ ಷಡಕ್ಷರಪ್ಪ ಬೇತೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಬಿ ಪರಮೇಶ್ವರಪ್ಪ, ಪ್ರಾಚಾರ್ಯರಾದ ಎ.ಎಸ್. ಕುಸುಮ, ಶರಣ ಸಾಹಿತ್ಯ ಪರಿಷತ್ತಿನ ಸಿರಿಗೆರೆ ಪರಮೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು. ಮಾಗನೂರು ರಾಜಶೇಖರ ಗೌಡ್ರು ಸುಲೋಚನಮ್ಮ ಮತ್ತು ಮಕ್ಕಳು, ಸರ್ವ ಮಂಗಳಮ್ಮ ಮಾಗನೂರು ಬಸಪ್ಪ, ಮಾಗನೂರು ಸಂಗಮೇಶ್ವರ ಗೌಡ್ರು, ಲೋಕಸಭಾ ಸದಸ್ಯರಾಗಿದ್ದ ಕೀರ್ತಿಶೇಷ ಜಿ ಮಲ್ಲಿಕಾರ್ಜುನಪ್ಪ, ಭೀಮಸಮುದ್ರ ದಿವಂಗತ ಲಿಂಗಮ್ಮ ಶರಣಪಟೇಲ್ ಈಶ್ವರಪ್ಪ ಇವರುಗಳ ದತ್ತಿಯಿಂದ ನೆರವೇರಿದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್ ಬಿ ಮಂಜುನಾಥರನ್ನು ಸನ್ಮಾನಿಸಿ ಗೌರವಿಸಲಾಯಿತು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Job Vacancy Apply now ವಾಯು ಪಡೆಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಶಿವಮೊಗ್ಗ ಉದ್ಯೋಗ ವಿನಿಮಯ ಕಚೇರಿಯಿಂದ ಮಾಹಿತಿ

0

Job vacancy apply now ಭಾರತೀಯ ವಾಯುಪಡೆಯ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಭಾರತೀಯ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ನೊಂದಾಯಿಸಲು ಅಧಿಸೂಚನೆ ಹೊರಡಿಸಿದೆ.

ಅರ್ಜಿ ಸಲ್ಲಿಸಲು ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಡಿಪ್ಲೊಮೊ ವಿಭಾಗದ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‍ಸ್ಟ್ರುಮೆಂಟ್ ಟೆಕ್ನಾಲಜಿ, ಇನ್‍ಫಾರ್ಮೇಷನ್ ಟೆಕ್ನಾಲಜಿಯಲ್ಲಿ) ಶೇ.50% ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ವಯಸ್ಸು ( 26-12-2002 ರಿಂದ 26-06-2006) 17.5 ರಿಂದ 21 ವರ್ಷಗಳನ್ನು ಒಳಗೊಂಡಿರುವ ಅವಿವಾಹಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Job vacancy apply now ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರಗಳಿಗೆ ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಗಾಗಿ https://agnipathvayu.cdac.in ಜಾಲತಾಣಕ್ಕೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಮಾ.31 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ನೇರವಾಗಿ ಅಥವಾ ದೂರವಾಣಿ ಸಂಖ್ಯೆ : 08182-255293, 9380663606 ಮೂಲಕ ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Internal Reservation Protest | ರಸ್ತೆಯ ಮಧ್ಯದಲ್ಲಿ ಟೈರ್ ಸುಟ್ಟು ಪ್ರತಿಭಟನೆ – Shivamogga News

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sadhaka Ratna Award ಶಿವಮೊಗ್ಗದ ಮೂವರಿಗೆ ಸಾಧಕ ರತ್ನ ಪ್ರಶಸ್ತಿ

0

Sadhaka Ratna Award  ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯ ಶ್ರೀ ಗುರುಪಾದೇಶ್ವರ ವಿರಕ್ತಮಠದ 25 ನೇ ಪಟ್ಟಾಧಿಕಾರ ಹಾಗೂ ರಜತಮಹೋತ್ಸವದ ಸಂತರ ವೇದಿಕೆಯಲ್ಲಿ ಶ್ರೀ ಮ.ನಿ.ಪ್ರ ಶಿವಯೋಗಿ ಮಹಾಸ್ವಾಮಿಗಳಿಂದ ಶಿವಮೊಗ್ಗದ ಮೂವರು ಸಾಧಕ ರತ್ನ ಪ್ರಶಸ್ತಿ ಗೌರವವನ್ನು ಸ್ವೀಕರಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪತ್ರಕರ್ತನಾಗಿ, ಸಾಹಿತ್ಯಾತ್ಮಕವಾಗಿ, ಜನಪರ ಲೇಖನಗಳನ್ನು ಪ್ರಸ್ತುತಪಡಿಸುತ್ತಲಿ ಸೇವಾಮುಖಿಯಲ್ಲಿಯು ಮುಂಚೂಣಿಯಲ್ಲಿರುವ ಪತ್ರಕರ್ತರಾದ ಗಾರಾ.ಶ್ರೀನಿವಾಸ್, ಹಾಗೂ ಕೋವಿಡ್ ಸಂದರ್ಭದಲ್ಲಿ ನಾಗರೀಕರಿಗೆ ಪುಡ್ ಹಾಗೂ ಸ್ಯಾನಿಟೈಸರ್, ಮಾಸ್ಕ್‌ಗಳನ್ನು ವಿತರಿಸಿದ್ದಲ್ಲದೆ ಸೇವೋನ್ಮುಖಿಯಾಗಿ ಜನಪರ ದನಿಯಾಗಿರುವ ಜ್ಯೋತಿ ಅರಳಪ್ಪ, ನೂರಾರು ಕೋವಿಡ್ ಪೀಡಿತ ಶವಗಳ ಅಂತ್ಯ ಸಂಸ್ಕಾರಗಳನ್ನು ನಡೆಸಿ ಹಸಿವಿನ ಜನತೆಗೆ ಪುಡ್ ಕಿಟ್‌ಗಳನ್ನು ನಿರಂತರವಾಗಿ ನೀಡಿದ ಜಿರಂಜೀವಿ ಬಾಬು ರವರ ಸಮಾಜಮುಖಿ ಕರ್ತವ್ಯವನ್ನು ಗುರುತಿಸಿ ಸಾವಿರಾರು ಸಧ್ಬಕ್ತರ ನಡುವೆ ಶರಣ ಸಂತರಿಂದ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ, ಒಟ್ಟು ರಾಜ್ಯದ ವಿವಿದೆಡೆಯಿಂದ ೨೫ ಸಾಧಕರಿಗೆ ಆಹ್ವಾನಿಸಲಾಗಿದೆ ಈ ಪ್ರಶಸ್ತಿ ಪ್ರತಿ ವರುಷ ಶ್ರೀ ಗುರುಪಾದೇಶ್ವರ ಮಠದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.

Sadhaka Ratna Award  ಹೊರಜಿಲ್ಲೆಯ ವೇದಿಕೆಯಲ್ಲಿ ಸನ್ಮಾನಿಸುವುದು ಶಿವಮೊಗ್ಗದ ಜನತೆಗೆ ಸಂದ ಗೌರವವಾಗಿದೆ ಎಂದು ಅನೇಕರು ಉವಾಚಿಸಿದ್ದು ಬರಪೂರವಾಗಿ ಮೂವರಿಗೂ ಅಭಿನಂದನೆಗಳನ್ನು ಸಲ್ಲಿಸಿ ಶ್ರೀ ಮಠದ ಸ್ವಾಮೀಜಿಗಳಾದ ಶ್ರೀ ಮ.ನಿ.ಪ್ರ ಶಿವಯೋಗಿ ಮಹಾಸ್ವಾಮಿಗಳಿಗೆ ಈ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. 

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sandalwood Sapling ಶ್ರೀಗಂಧದ ಸಸಿ ಬೆಳೆಸಲು ರೈತರಿಂದ ಬೇಡಿಕೆ ಬಂದರೆ ಪೂರೈಸಲಾಗುವುದು- ಸಿಎಫ್ಓ ಸಿದ್ರಾಮಪ್ಪ

0

Sandalwood Sapling ಶ್ರೀಗಂಧ ಮರವು ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಇತಿಹಾಸ ಹಾಗೂ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಅನಾದಿ ಕಾಲದಿಂದಲೂ ಹಿರಿಯರು ಶ್ರೀಗಂಧ ವೃಕ್ಷವನ್ನು ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷ ಣಾಧಿಕಾರಿ ಸಿದ್ರಾಮಪ್ಪ ಹೇಳಿದರು.

ಅರಣ್ಯ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಆಶ್ರಯದಲ್ಲಿ ತಾಲ್ಲೂಕಿನ ಮತ್ತಾವರದ ಪ್ರಕೃತಿ ನಿರೂಪಣಾ ಕೇಂದ್ರದಲ್ಲಿ ಶ್ರೀಗಂಧ ವೈಜ್ಞಾನಿಕ ಬೇಸಾಯ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿರಿಯರು ಮುಂದಿನ ಪೀಳಿಗೆಗೆ ಅನುಕೂಲಕ್ಕಾಗಿ ಶ್ರೀಗಂಧವೃಕ್ಷವನ್ನು ಬೆಳೆಸುವಲ್ಲಿ ಮುಂದಾಗಿದ್ದರು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಶ್ರೀಗಂಧ ಮರವು ನಶಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಜಿಲ್ಲೆಯ ಅತಿಹೆಚ್ಚು ಪ್ರದೇಶಗಳಲ್ಲಿ ಶ್ರೀಗಂಧ ಸಸಿಗಳನ್ನು ಬೆಳೆಸಿ ಪೋಷಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Sandalwood Sapling ರೈತರು ಆರ್ಥಿಕವಾಗಿ ಸದೃಢರಾಗಲು ಶ್ರೀಗಂಧ ಬೆಳೆಸಲು ಮುಂದಾಗಬೇಕು. ಅರಣ್ಯ ಇಲಾಖೆಯಿಂದ ರೈತ ರಿಗಾಗಿ ಇಂತಿಷ್ಟು ಸಸಿಗಳ ಅವಶ್ಯಕತೆಯಿದೆ ಎಂದಾದರೆ ಸಸಿಗಳನ್ನು ಒದಗಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ಸೂಕ್ತ ರೀತಿಯಲ್ಲಿ ಸಸಿಗಳ ನಿರ್ವಹಣೆಯನ್ನು ರೈತರು ಮಾಡಿದ್ದಲ್ಲಿ ಮಾತ್ರ ಪರಿಸರಕ್ಕೆ ಪೂರಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
ಜಿಲ್ಲೆಯು ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಶ್ರೀಗಂಧ ಬೆಳೆಗಳಿಗೆ ಉತ್ತಮ ವಾತಾವರಣವಿದೆ. ಫಲವತ್ತತೆಯಿಂದ ಕೂಡಿರುವ ಮಣ್ಣಿನ ಸವಕಳಿಯನ್ನು ಒಳಗೊಂಡಿದೆ. ರೈತರು ಇಂತಹ ಭೂಮಿಯಲ್ಲಿ ಶ್ರೀಗಂಧ ಹಾಗೂ ಬಿದಿರಿನ ವಿವಿಧ ಜಾತಿಗಳ ಸಸಿಗಳನ್ನು ಪೋಷಿಸಿ ಬೆಳೆಸಿದರೆ ರಾಜ್ಯವು ಮತ್ತೊಮ್ಮೆ ಶ್ರೀಗಂಧದ ನಾಡೆಂದು ರೂಪುಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎ.ಎಸ್.ಈಶ್ವರಪ್ಪ ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಯಥೆಚ್ಚವಾಗಿ ಶ್ರೀಗಂಧವನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ನಿಲ್ಲಬೇಕೆಂಬ ನಿಟ್ಟಿನಲ್ಲಿ ಸಂಘವು ರಾಜ್ಯಾದ್ಯಂತ ಸಂಚರಿಸಿ ವಿಶೇಷ ಆಂದೋಲನವನ್ನು ಮಾಡಲಾಗುತ್ತಿದೆ ಎಂದರು.

ಶ್ರೀಗಂಧ ಬೆಳೆಗಳಿಗೆ ವಿವಿಧ ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸರ್ಕಾರ, ಅರಣ್ಯ ಹಾಗೂ ರಕ್ಷಣಾ ಇಲಾಖೆಗಳು ರೈತರೊಂದಿಗೆ ನಿಕಟ ಸಂಪರ್ಕ ಹೊಂದಿದರೆ ರಾಜ್ಯ ಹಾಗೂ ದೇಶದಲ್ಲಿ ಶ್ರೀಗಂಧ ಸೂಕ್ತ ಬೆಳೆ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ. ಕೆ.ಸುಂದರಗೌಡ ನಾಡಿನ ರೈತರು ಪ್ರತಿ ಜಿಲ್ಲಾವಾರುಗಳಲ್ಲಿ ಸಾವಿರ ಶ್ರೀಗಂಧ ಸಸಿಗಳನ್ನು ಬೆಳೆಸಿ ಪೋಷಿಸಿದರೆ ಮಾತ್ರ ಜನ್ಮಿಸಿದಂತಹ ಭೂಮಿಗೆ ಋಣ ತೀರಿಸಿದಂತಾಗುತ್ತದೆ. ಹಾಗೂ ರೈತರು ಬದುಕು ಹಸನಾಗುವುದರಲ್ಲೇ ಸಂಶಯವಿಲ್ಲ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಮುಂದಿನ ಜನಾಂಗಕ್ಕೆ ಸುಂದರ ಪರಿಸರವನ್ನು ನೀಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿರುವ ಕಾರಣ ಅತಿಹೆಚ್ಚು ಕಡೆಗಳಲ್ಲಿ ಹಸಿರುಮಯವಾದ ವಾತಾವರಣ ನಿರ್ಮಾಣವಾಗಬೇಕು. ಈ ಭೂಮಿಯನ್ನು ಹಚ್ಚ ಹಸಿರಿನಿಂದ ಕೂಡಿಸಿದಾಗ ಮಾತ್ರ ಪ್ರಪಂಚ ಉಳಿಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಜ್ಞಾನಿ ಡಾ. ಸುಂದರ ರಾಜ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಸಿ.ಪರಮೇಶ್ವರಪ್ಪ, ಮುಖಂಡ ಪರಮೇಶ್, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ವೆಂಕಟ ಪೈ ಗೋಪಣ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ಅರಣ್ಯ ಪ್ರೇರಕ ಶ್ರೀಮತಿ ಮಮತ ಪ್ರಾರ್ಥಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಕೆ.ಆನಂದ್ ವಂದಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Protest in Shikaripura ಕುಂಚೇನಹಳ್ಳಿಯಲ್ಲಿ ಬಂಜಾರ ಸಮುದಾಯದಿಂದ ರಸ್ತೆ ತಡೆ ಬಸ್ ಸಂಚಾರ ಅಸ್ತವ್ಯಸ್ತ

0

Protest in Shikaripura ಶಿಕಾರಿಪುರದಲ್ಲಿ ಮೀಸಲಾತಿ ಅಸಮಾಧಾನ ಕುರಿತಂತೆ ನಡೆದ ಬಂಜಾರ ಸಮುದಾಯದ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಶಿವಮೊಗ್ಗದ ತಾಲೂಕಿನ ಕುಂಚೇನಹಳ್ಳಿ ಗ್ರಾಮದಲ್ಲೂ ಇಂದು ಟಯರ್ ಸುಟ್ಟು ರಸ್ತೆ ತಡೆ ನಡೆಸಲಾಗಿದೆ.

ಶಿಕಾರಿಪುರ ಮತ್ತು ಶಿವಮೊಗ್ಗ ನಡುವಿನ ರಸ್ತೆಯಲ್ಲಿ ಮೇಲಿನ ಮತ್ತು ಕೆಳಗಿನ ಕುಂಚೇನಹಳ್ಳಿಯ ಮಧ್ಯದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಟಯರ್ ಗಳನ್ನ ಸುಟ್ಟು ರಸ್ತೆ ತಡೆ ಮಾಡಲಾಗಿದೆ.

ಶಿವಮೊಗ್ಗದಿಂದ ಶಿಕಾರಿಪುರ ಮತ್ತು ಶಿಕಾರಿಪುರದಿಂದ ಶಿವಮೊಗ್ಗ ಕಡೆ ಹೋಗುವ ವಾಹನಗಳು ಈ ರಸ್ತೆ ರೋಕೋದಿಂದ ಜ್ಯಾಮ್ ಆಗಿವೆ.

Protest in Shikaripura  ಮೀಸಲಾತಿ ಅಸಮಾಧಾನ ಕುರಿತು ಬಂಜಾರ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಮದ್ಯದಲ್ಲಿ ಟಯರ್ ಸುಟ್ಟು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shri Gurupadeshwar Virakta Math : ಶ್ರೀ ಗುರುಪಾದೇಶ್ವರ ವಿರಕ್ತಮಠ ವೇದಿಕೆಯಿಂದ ಸಾಧನೆಯ ಹಾದಿ ಪ್ರಶಸ್ತಿ

0

Shri Gurupadeshwar Virakta Math ಹಾವೇರಿ ಜಿಲ್ಲೆಯ ಶ್ರೀ ಗುರುಪಾದೇಶ್ವರ ವಿರಕ್ತಮಠದ 25ನೇ ಪಟ್ಟಾಧಿಕಾರ ಹಾಗೂ ರಜತಮಹೋತ್ಸವದ ಸಂತರ ವೇದಿಕೆಯಲ್ಲಿ ಶ್ರೀ ಮ.ನಿ.ಪ್ರ.ಶಿವಯೋಗಿ ಮಹಾಸ್ವಾಮಿಗಳಿಂದ ವಿಶೇಷ ಸನ್ಮಾನ ಸ್ವೀಕರಿಸಿದರು.

Shri Gurupadeshwar Virakta Math ಶಿವಮೊಗ್ಗ ನಗರ ವಾಸಿಯ ಸೇವೆ ಕಾರ್ಯಗಳನ್ನು ಗುರುತಿಸಿ, ಉತ್ತರ ಕರ್ನಾಟಕದ ಹೆಬ್ಬಾಗಿಲಿನಲಿ ಸಾವಿರಾರು ಸಧ್ಬಕ್ತರ ನಡುವೆ ಸಂತರ ಆಶೀರ್ವಾದೊಂದಿಗೆ ಸಾಧನೆಯ ಹಾದಿಯ ಪ್ರಶಸ್ತಿ ಗೌರವ ನೀಡಿ ಸನ್ಮಾನಿಸಿದೆ, ಜ್ಯೋತಿ ಅರಳಪ್ಪ ಅವರ ಸ್ನೇಹಿತರು ಶುಭಕೋರಿದ್ದಾರೆ.