Saturday, April 11, 2026
Saturday, April 11, 2026
Home Blog Page 1266

Public Properties Work ಶಿವಮೊಗ್ಗದ ಶಾರದಮ್ಮ ಲೇ ಔಟ್ ನ ವಿವಿಧ ಕಾಮಗಾರಿಗೆ ₹40 ಲಕ್ಷ ಮಂಜೂರು

0

Public Properties Work ಶಿವಮೊಗ್ಗ ನಗರದ ಶಾರದಮ್ಮ ಲೇ-ಔಟ್‌ನಲ್ಲಿ ಸಂಸದರ ಅನುದಾನದಡಿಯಲ್ಲಿ ಬಾಕ್ಸ್ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ 40ಲಕ್ಷ ರೂ ಬಿಡುಗಡೆಯಾಗಿದೆ.

Public Properties Work ಇದೇ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ವಾರ್ಡ್ ಸದಸ್ಯೆ ಆಶಾ ಚಂದ್ರಪ್ಪ ಹಾಗೂ ಬಿಜೆಪಿ ಪ್ರಮುಖರಾದ ಚಂದ್ರಪ್ಪ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Karnataka Election Dates 2023 ಮೇ 10 ರಂದು ರಾಜ್ಯ ವಿಧಾನಭಾ ಚುನಾವಣೆ ಚುನಾವಣಾ ಆಯೋಗ ಘೋಷಣೆ

0

Karnataka Election Dates 2023 ಈಗ ಬಹಳ ದಿನಗಳಿಂದ ರಾಜ್ಯದ ಜನತೆ ಕುತೂಹಲ
ತಾಳಿದ್ದ ವಿಧಾನ ಸಭಾ ಚುನಾವಣಾ ದಿನಾಂಕ ಪ್ರಕಟಗೊಂಡಿದೆ.

ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಶ್ರೀ ರಾಜೀವ್ ಕುಮಾರ್ ಈಗ ಸ್ವಲ್ಪಹೊತ್ತಿಗೆ ಮುಂಚೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಮೇ10 ರಂದು ಚುನಾವಣೆ ನಡೆಸಲು
ಆಯೋಗ ದಿನಾಂಕವನ್ನು ಫಿಕ್ಸ್ ಮಾಡಿದ ಸಂಗತಿಯನ್ನ ತಿಳಿಸಿದರು.

ಒಂದೇ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
ಪ್ರಸ್ತುತ ರಾಜ್ಯ ವಿಧಾನ ಸಭೆ ಅವಧಿಯು ಏಪ್ರಿಲ್ 24 ಕ್ಕೆ ಮುಗಿಯಲಿದೆ.

Karnataka Election Dates 2023 ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ .ಅವುಗಳಲ್ಲಿ 36 ಪ.ಜಾತಿ ಮತ್ತು 16 ಪ.ವರ್ಗಗಳಿಗೆ ಮೀಸಲಾಗಿವೆ.
ರಾಜ್ಯದಲ್ಲಿ ಈಗ 5.21 ಕೋಟಿ ಅರ್ಹ ಮತದಾರರಿದ್ದಾರೆ.
( ಪುರುಷರು 2.62 ಕೋಟಿ ಮತ್ತು ಮಹಿಳೆಯರು 2.59 ಕೋಟಿ)
ಮೇ10 ಚುನಾವಣೆ ಪ್ರಕ್ರಿಯೆ. ಮೇ13 ಮತಗಳ ಎಣಿಕೆ ಮತ್ತು ಫಲಿತಾಂಶ ನಡೆಯಲಿದೆ.
ಏಪ್ರಿಲ್ 13 ನಾಮ ಪತ್ರ ಸಲ್ಲಿಕೆ ಆರಂಭ.
ಏಪ್ರಿಲ್ 20 ನಾಮಪತ್ರ ಸಲ್ಲಿಕೆ ಕೊನೇದಿನ.
ಏಪ್ರಿಲ್ 21 ನಾಮಪತ್ರ ಪರಿಶೀಲನೆ. ನಾಮಪತ್ರ ವಾಪಸ್ ಏಪ್ರಿಲ್24.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣಾ ನೀತಿ ಸಂಹಿತೆ ತಮ್ಮ ಪ್ರಕಟಣೆಯ ತಕ್ಷಣ ಜಾರಿಗೆ ಬರುವುದಾಗಿ ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Right to Health Bill ಚಿಕ್ಕಮಗಳೂರು ಐಎಂಎ ನಿಂದ ರಾಜಾಸ್ಥಾನದಲ್ಲಿ ಆರೋಗ್ಯ ಹಕ್ಕು ಮಸೂದೆ ಅಂಗೀಕಾರದ ಬಗ್ಗೆ ವಿರೋಧ

0

Right to Health Bill ರಾಜಸ್ಥಾನ ವಿಧಾನಸಭೆಯಲ್ಲಿ ಅಂಗೀಕರಿಸಿರುವ ಅಸಾಂವಿಧಾನಿಕ ಆರ್.ಬಿ.ಹೆಚ್. ಬಿಲ್ 2023ಅನ್ನು ಕೈಬಿಡಲು ಒತ್ತಾಯಿಸಿ ಜಿಲ್ಲಾ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮೂಲಕ ರಾಜಸ್ಥಾನ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿ ಸಿದರು.

ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಚೈತನ್ಯ ಸವೂರ್ ಕಾನೂನು ಖಾಸಗೀ ವಲಯದ ಆಸ್ಪತ್ರೆಗಳು ಸಹ ತುರ್ತು ಸಂದರ್ಭಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಯನ್ನು ಒದಗಿಸುವುದನ್ನು ಒಳಗೊಂಡಿದೆ. ಆದರೆ ತುರ್ತು ಪರಿಸ್ಥಿತಿ ಎಂದರೆ ಏನೆಂದು ವ್ಯಾಖ್ಯಾನ ನೀಡುವಲ್ಲಿ ಈ ಪ್ರಸ್ತುತ ಕಾನೂನು ವಿಫಲವಾಗಿದೆ. ಇದರಿಂದಾಗಿ ರಾಜಸ್ಥಾನದ ವೈದ್ಯಕೀಯ ವೃತ್ತಿಯು ಮತ್ತು ಸಾರ್ವಜನಿಕ ಆರೋಗ್ಯವು ಆತಂಕಕ್ಕೊಳಗಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರ ಆರೋಗ್ಯದ ಹಕ್ಕು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಯಾಗಿದೆ. ಇದರ ಹೊಣೆ ಸರ್ಕಾರಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳು ಹೊರಬೇಕಾಗಿದೆ. ಈ ಹೊಣೆಗಾರಿಕೆಯನ್ನು ಖಾಸಗೀಯವರಿಗೆ ವರ್ಗಾ ಯಿಸುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ. ಇದೊಂದು ಕೆಟ್ಟ ಕಾನೂನಾ ಗಿದೆ ಎಂದು ಹೇಳಿದರು.

Right to Health Bill ಈಗಾಗಲೇ ದುರ್ಬಲವಾಗಿರುವ ಖಾಸಗೀ ಆರೋಗ್ಯ ವ್ಯವಸ್ಥೆಯು ಕುಸಿತ ಸೇರಿದಂತೆ ಅನೇಕ ಅನಿರೀಕ್ಷಿತ ಪರಿಣಾಮಗಳನ್ನು ಉಂಟು ಮಾಡಲಿದೆ. ಭಾರತ ಶೇ.70-80 ಆರೋಗ್ಯ ಸೇವಾಸೌಲಭ್ಯಗಳ ಹೊಣೆ ಹೊತ್ತು ರಾಷ್ಟ್ರ ನಿರ್ಮಾಣ ಮತ್ತು ಆರೋಗ್ಯ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಖಾಸಗೀ ಕ್ಷೇತ್ರಕ್ಕೆ ಮಾರಕವಾಗಿ ರುವ ಈ ಕ್ರಮವು ರಾಷ್ಟ್ರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಿರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಕಾರ್ತಿಕ್ ವಿಜಯ್, ವೈದ್ಯರಾದ ಡಾ. ಶುಭ ವಿಜಯ್, ಡಾ. ಮೀರಾಕುಚೇಂದ್ರ ಉಪಸ್ಥಿತರಿದ್ದರು.

Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

BJP Leaders Left the Party in Chikmagalur

0

ಚಿಕ್ಕಮಗಳೂರಿನಲ್ಲಿ 80 ಕ್ಕು ಹೆಚ್ಚುಮಂದಿ ಕಮಲ ತೊರೆದು ಕೈ ಪಕ್ಷಕ್ಕೆ

ಚಿಕ್ಕಮಗಳೂರು,ತಾಲ್ಲೂಕಿನ ಮಲ್ಲೇನಹಳ್ಳಿ, ತೊಗರಿಹಂಕಲ್ ಹಾಗೂ ದಾಸರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಮಾರು 80ಕ್ಕೂ ಹೆಚ್ಚು ಮಂದಿ ಬಿಜೆಪಿ ಮುಖಂಡರುಗಳು ಪಕ್ಷ ತೊರೆದು ಕಾಂಗ್ರೆಸ್ ತತ್ವ, ಸಿದ್ದಾಂತವನ್ನು ಒಪ್ಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೂಲಿ ಕಾರ್ಮಿಕರು, ಬಡವರು, ರೈತರು, ದೀನದಲಿತರು ಬಳಸುವ ದಿನನಿತ್ಯ ಪದಾರ್ಥಗಳ ಬೆಲೆಯನ್ನು ಗಗನಕೇರಿಸಿ ಹಾಗೂ ಕಳಪೆ ಕಾಮಗಾರಿಯ ನಡೆಸಿರುವ ಪರಿಣಾಮ ಬಿಜೆಪಿಯ ವಿರುದ್ಧ ಇಂದು ಕ್ಷೇತ್ರದ ಅತಿಹೆಚ್ಚು ಯುವಕರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.

ಹಿರಿಯ ಮುಖಂಡ ಕೆ.ಮಹಮ್ಮದ್ ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪ್ರತಿಯೊಬ್ಬ ಮುಖಂಡರು ಶ್ರಮವಹಿಸಿ ಕೆಲಸ ಮಾಡಿದರೆ ರಾಜ್ಯದಲ್ಲಿ ಸದೃಢ ಸರ್ಕಾರ ರಚನೆಗೊಂಡು ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತಿಳಿಸಿದರು.

ಪಕ್ಷದ ಆಕಾಂಕ್ಷಿ ಹೆಚ್.ಡಿ.ತಮ್ಮಯ್ಯ ಮಾತನಾಡಿ ಬಿಜೆಪಿಯ ಶಾಸಕರು ಭಾವನೆಗಳ ಬಗ್ಗೆ ಮಾತನಾಡು ತ್ತಿದ್ದಾರೆ. ಆದರೆ ಜನರಿಗೆ ಬದುಕು ಮುಖ್ಯ. ಆ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿಯವರಿಗೆ ಈ ಬಾರಿ ಸೋಲಿನ ಭೀತಿ ಎದ್ದು ಕಾಣುತ್ತಿದೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಮುಂಡಾಳ ಸಮಾಜದ ತಾಲೂಕು ಅಧ್ಯಕ್ಷ ವಾಸು, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಂತೋಷ್ ಹಾಗೂ ಮುಖಂಡರಾದ ಮಲ್ಲೇನಹಳ್ಳಿ ಶಿವಣ್ಣ, ಸೋಮಶೇಖರ್, ಮಹೇಶ್, ಸಂದೀಪ್, ಮೋಹನ್, ಅರುಣ್ ಸೇರಿದಂತೆ 80 ಮಂದಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಶಿವಾನಂದ್, ಕುಮಾರ್‌ಸ್ವಾಮಿ, ಅಶೋಕ, ಲೋಕೇಶ್ ಕಲ್ಲೇಶ್, ಸುರೇಶ್, ವಲ್ಲಿ ಪನ್ನೀರ್, ಜಗದೀಶ್, ಧರ್ಮಯ್ಯ, ಸುರೇಶ್, ಹಿರೇಮಗಳೂರು ನಾಗೇಶ್, ತಿಮ್ಮಯ್ಯ ಸಚಿನ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

VISL closure deferred – by raghavendra | ವಿ ಐ ಎಸ್ ಎಲ್ ಸದ್ಯಕ್ಕೆ ಸ್ಥಗಿತವಿಲ್ಲ : ಬಿ.ವೈ. ರಾಘವೇಂದ್ರ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Summer Camp in Shivamogga ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಬೇಸಿಗೆ ಶಿಬಿರ

Summer Camp in Shivamogga  ಶಿವಮೊಗ್ಗ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಪ್ರತಿಯೊಂದು ಅಥ್ಲೆಟಿಕ್ ಕ್ರೀಡೆಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.ಶಿಬಿರಾರ್ಥಿಗಳಿಗೆ ಸಾವಯವ ಸತ್ವಯುತ ಪಾನೀಯವನ್ನು ನೀಡಲಾಗುತ್ತದೆ. ಅಲ್ಲದೇ ಮೆಡಿಟೇಷನ್, ರಿಲ್ಯಾಕ್ಷೇಷನ್ ಬಗ್ಗೆ ವಿಶೇಷ ತರಬೇತಿಯನ್ನು ಕೊಡಲಾಗುತ್ತದೆ. ಇದರ ಜೊತೆಗೆ ಎಂಡ್ಯೂರೆನ್ಸ್ ಸ್ಟ್ರೆಂಥ್ ಬ್ಯಾಲೆನ್ಸ್ ಫ್ಲೆಕ್ಸಿಬಿಲಿಟಿ ಹಾಗೂ ಪ್ರತಿಯೊಂದು ಕ್ರೀಡೆಯ ಬಗ್ಗೆ ಸಮಯದ ತರಬೇತಿಯನ್ನು ಹೇಳಿಕೊಡಲಾಗುತ್ತದೆ.
ಬೆಳಿಗ್ಗೆ 6.30 ರಿಂದ 8.30 ರವರೆಗೆ ಹಾಗೂ ಸಂಜೆ 4.30 ರಿಂದ 6.30ರವರೆಗೆ 2 ಅವಧಿಯಲ್ಲಿ ತರಬೇತಿ ಹಾಗೂ ಶಿಬಿರ ನಡೆಯಲಿದೆ.

Summer Camp in Shivamogga   ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ತರಬೇತುದಾರ ಶಿವಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8892325558 ಅಥವಾ 6366400936 ಗೆ ಸಂಪರ್ಕಿಸಬಹುದಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

PAN Card and Aadhaar Linking ಪಾನ್ ಕಾರ್ಡ್ ಮತ್ತು ಆಧಾರ್ ಜೋಡಣೆ ತಪ್ಪಿದರೆ ದಂಡ ವಿಧಿಸಬೇಡಿ- ಎನ್ ಎಸ್ ಯು ಐ ಆಗ್ರಹ

0

PAN Card and Aadhaar Linking ಪ್ಯಾನ್ ಮತ್ತು ಆಧಾರ್ ಜೋಡಿಸಲು 1000 ರೂ. ಎನ್ ಎಸ್ ಯುಐ ರಾಜ್ಯ ,ಕೇಂದ್ರ ಸರ್ಕಾರದ ದಂಡದ ವಿರುದ್ಧ ಕಾರ್ಯದರ್ಶಿ ಎಚ್.ಎಸ್. ಬಾಲಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಸ್ತುತ ಲಿಂಕ್ ನ ಬೆಲೆ 1000 ರೂ. ದಂಡ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಒಂದು ಸಾವಿರ ರೂ. ದಂಡ ಪಾವತಿಸುವುದು ತುಂಬಾ ಕಷ್ಟಕರದ ಸಂಗತಿ. ಬಡವರು ಮತ್ತು ಮಧ್ಯಮ ವರ್ಗದವರು ಆರ್ಥಿಕ ವಹಿವಾಟು ನಡೆಸುವುದು ಕಷ್ಟಕರವಾಗಿದೆ. ಪಾನ್, ಆಧಾರ್ ಲಿಂಕ್ ಪರವಾಗಿ ಸಾರ್ವಜನಿಕರಿಂದ ಒಂದು ಸಾವಿರ ರೂ. ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಅತ್ಯಂತ ಖಂಡನೀಯ. ಕೆಲವರು ಹೆಚ್ಚುವರಿ 5,000 ರೂ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಶಿಕ್ಷ ಣ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

PAN Card and Aadhaar Linking ಪ್ಯಾನ್, ಆಧಾರ್ ನಕ್ಷೆಗಳಲ್ಲಿ ದೋಷವಿದ್ದರೆ, ಲಿಂಕ್ ಮಾಡಲು ಸಾಧ್ಯವಿಲ್ಲ. ಇದು ಸಂವಹನ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಹೆಚ್ಚಿನ ಸಮಯವನ್ನು ನೀಡಬೇಕು ಮತ್ತು ಯಾವುದೇ ದಂಡವನ್ನು ವಿಧಿಸಬಾರದು. ಎನ್ ಎಸ್ ಯುಐ ರಾಜ್ಯ ಕಾರ್ಯದರ್ಶಿ ಎಚ್.ಎಸ್. ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕೆಂದು ಬಾಲಾಜಿ ಒತ್ತಾಯಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Election boycott | ಚುನಾವಣಾ ಬಹಿಷ್ಕಾರ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Press Conference by ECI | ಮುಖ್ಯ ಚುನಾವಣಾ ಆಯುಕ್ತರು ಭಾರತೀಯ ಚುನಾವಣಾ ಆಯೋಗ