Saturday, April 11, 2026
Saturday, April 11, 2026
Home Blog Page 1265

Kuvempu University Shivamogga ಉನ್ನತ ಶಿಕ್ಷಣದ ಪದವಿಗಳು ಉದ್ಯೋಗ ಪಡೆಯುವ ಸಾಧನ ಎಂಬ ಆಲೋಚನಾ ಕ್ರಮ ಬದಲಾಗಬೇಕು – ಪ್ರೊ.ಪೂರ್ಣಾನಂದ

0

Kuvempu University Shivamogga ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್.ಇ.ಪಿ.) ಬಹಳಷ್ಟು ಮಹತ್ವದ ಶೈಕ್ಷಣಿಕ ವಿಚಾರಗಳ ಕುರಿತು ಮೌನವಹಿಸುತ್ತದೆ. ಸಮರ್ಪಕತೆಯ ಕೊರತೆಯಿಂದ ಕೂಡಿರುವ ಅದನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವುದು ಉನ್ನತ ಶಿಕ್ಷಣಕ್ಕೆ ಹೊಡೆತ ನೀಡಲಿದೆ ಎಂದು ಕುವೆಂಪು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಡಿ. ಎಸ್. ಪೂರ್ಣಾನಂದ ಆತಂಕ ವ್ಯಕ್ತಪಡಿಸಿದರು.

ಶಂಕರಘಟ್ಟ, ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ‘ಮಾಧ್ಯಮ ಶಿಕ್ಷಣ ಪಠ್ಯಕ್ರಮ ಪುನರಚನೆ’ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವು ಹಲವು ವಿಚಾರಗಳಲ್ಲಿ ವೈರುಧ್ಯಗಳನ್ನು ಅಪ್ಪಿಕೊಳ್ಳುತ್ತಿದೆ. ಶಿಕ್ಷಕರು ಮತ್ತು ಸಂಸ್ಥೆಗಳಿಗೆ ಪಠ್ಯಕ್ರಮ ರಚನೆಯ ಸ್ವಾಯತ್ತತೆ ನೀಡಲಾಗುವುದು ಎಂದು ನೀತಿ ಹೇಳುತ್ತದೆ ಆದರೆ ಇಡೀ ರಾಜ್ಯದ ಎಲ್ಲ ವಿವಿಗಳಿಗೆ ಒಂದೇ ಸಮಿತಿಯಿಂದ ಪಠ್ಯಕ್ರಮ ರಚನೆಗೆ ಇಲಾಖೆ ಆದೇಶ ನೀಡುತ್ತದೆ. ಸಾಮಾಜಿಕ-ಆರ್ಥಿಕ ದುರ್ಬಲವರ್ಗಗಳನ್ನು ಒಳಗೊಳ್ಳುವ ಕುರಿತು ಮಾತನಾಡುವ ಶಿಕ್ಷಣ ನೀತಿಯು, ಸರ್ಕಾರಗಳಿಂದ ಕಾಲೇಜು-ವಿವಿಗಳು ಅನುದಾನ ನಿರೀಕ್ಷಿಸದೇ ಆರ್ಥಿಕ ಸ್ವಾವಲಂಬನೆ ಸಾಧಿಸಲು ಹೇಳುತ್ತದೆ ಎಂದರು.

ಕಾರ್ಪೋರೇಟ್ ಜಗತ್ತಿನ ಅವಶ್ಯಕತೆಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣದಲ್ಲಿ ಕೇವಲ ಕೌಶಲ್ಯಪೂರ್ಣ ಯುವಜನಾಂಗ ನಿರ್ಮಿಸಿದಲ್ಲಿ, ಮಾಧ್ಯಮದಲ್ಲಿನ ಉನ್ನತ ಶಿಕ್ಷಣದ ಉದ್ದೇಶವು ಮುಕ್ತಚಿಂತನೆ, ವಿಚಾರಶೀಲತೆ, ವಿಶ್ವಮಾನವತ್ವವುಳ್ಳ ನಾಗರೀಕರು ಮತ್ತು ಪತ್ರಕರ್ತರನ್ನು ಸೃಷ್ಟಿಸುವುದಾಗಿರುತ್ತದೆ. ಆದರೆ ಕಾರ್ಪೋರೇಟ್ ಜಗತ್ತು ಕೇವಲ ತಾಂತ್ರಿಕ ಕೌಶಲಗಳುಳ್ಳ ಕೆಲಸಗಾರರನ್ನು ಬೇಡುತ್ತಿದೆ. ಎನ್.ಇ.ಪಿ. ಕೂಡಾ ಕೌಶಲಗಳ ಪೂರೈಕೆಗೆ ಮಹತ್ವ ನೀಡಿದೆ. ವಿಶೇಷವಾಗಿ ಉನ್ನತ ಶಿಕ್ಷಣದ ಪದವಿಗಳನ್ನು ಉದ್ಯೋಗ ಪಡೆಯಲಿರುವ ಸಾಧನ ಎಂಬ ಆಲೋಚನಾಕ್ರಮದಿಂದ ಬೇರ್ಪಡಿಸುವ ತುರ್ತು ಇದೆ ಎಂದರು.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ವಿಶೇಷ ವರದಿಗಾರ ರಾಮಚಂದ್ರ ಗುಣಾರಿ ಮಾತನಾಡಿ, ಪತ್ರಿಕೋದ್ಯಮವು ವೃತ್ತಿಯಾಧರಿತ ಕೋರ್ಸ್ ಆಗಿದ್ದು, ಉತ್ತಮ ಮೌಲ್ಯವುಳ್ಳ ಶಿಕ್ಷಣದ ಜೊತೆಗೆ ಹೆಚ್ಚೆಚ್ಚು ಮಾಧ್ಯಮ ಸಲಕರಣೆಗಳ ಬಳಕೆಯ ತರಬೇತಿ ನೀಡಬೇಕು. ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಬಲ್ಲ ಕಾಶಲ್ಯಗಳನ್ನು ಕಲಿಸಬೇಕು. ಇದು ಸಾರ್ವಜನಿಕರ ಹಿತಕಾಯುವ ಪತ್ರಿಕೋದ್ಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯಕವಾಗುತ್ತದೆ ಎಂದು ಸಲಹೆಯಿತ್ತರು.

ಕನ್ನಡ ಮಿಡಿಯಂ ನ್ಯೂಸ್ ಚಾನೆಲ್‌ನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಮಾಧ್ಯಮವು ಪ್ರತಿನಿತ್ಯವೂ ವೇಗವಾಗಿ ಬದಲಾಗುತ್ತಿರುವ ಕ್ಷೇತ್ರವಾಗಿದೆ. ಪತ್ರಕರ್ತರು ಜಾತಿ, ಧರ್ಮ, ಪ್ರಾಂತ್ಯ, ರಾಷ್ಟ್ರೀಯತೆ, ವೈಭವೀಕೃತ ಇತಿಹಾಸಗಳಿಂದ ಹೊರತಾಗಿ ವೈಚಾರಿಕತೆ, ಬಂಧುತ್ವ, ಮಾನವತ್ವಗಳನ್ನು ಒಳಗೊಂಡವರಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮ ಮತ್ತು ಎಲ್ಲ ವಿಷಯಗಳ ಶಿಕ್ಷಣ ಪಠ್ಯಕ್ರಮದ ರಚನೆಯಾಗಬೇಕು ಎಂದು ತಿಳಿಸಿದರು.

Kuvempu University Shivamogga ಈ ಸಂದರ್ಭದಲ್ಲಿ ವಿಭಾಗದ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಎಂ. ಆರ್. ಪಠ್ಯಕ್ರಮ ಸಮಿತಿಯ ಅಧ್ಯಕ್ಷ ಡಾ. ಸತೀಶ್‌ಕುಮಾರ್, ಡಾ. ವರ್ಗೀಸ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ವಿವಿಯ ಡಾ. ಸಿ. ಕೆ. ಪುಟ್ಟಸ್ವಾಮಿ, ಕರ್ನಾಟಕ ವಿವಿಯ ಡಾ. ಸಂಜಯ್ ಮಾಲಗತ್ತಿ, ಬೆಂಗಳೂರು ವಿವಿಯ ಡಾ. ವಾಹಿನಿ, ಡಾ. ವಿನಯ್ ಎಂ. ಹಾಗೂ ವಿವಿಧ ವಿವಿಗಳ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರುಗಳು, ಸಂಶೋಧನಾರ್ಥಿಗಳು ಹಾಜರಿದ್ದರು.

ಕಾರ್ಯಾಗಾರದಲ್ಲಿ ಪಠ್ಯಕ್ರಮದಲ್ಲಿ ಪ್ರಯೋಗಾಲಯ ತರಬೇತಿಯ ಅವಶ್ಯಕತೆ, ಇತ್ತೀಚಿನ ಮಾಧ್ಯಮ ಪ್ರವೃತ್ತಿಗಳ ಒಳಗೊಳ್ಳುವಿಕೆ, ಎನ್.ಇ.ಪಿ. ಅಳವಡಿಯ ಸಾಧಕ-ಬಾಧಕಗಳು, ಮಾಧ್ಯಮ ವಿಭಾಗ ಮತ್ತು ವೃತ್ತಿಕ್ಷೇತ್ರದ ಸಂಬಂಧಗಳ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Election Preparations in Shivamogga ವಿಧಾನ ಸಭಾ ಚುನಾವಣೆ ಶಿವಮೊಗ್ಗ ಜಿಲ್ಲೆಯಲ್ಲಿ ಪೂರ್ವಸಿದ್ಧತೆಗಳು

0

Election Preparations in Shivamogga ಭಾರತೀಯ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದೆ. ಇಂದಿನಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಕಟುನಿಟ್ಟಿನಿಂದ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.

ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರರು ನೋಂದಾಯಿಸಿಕೊಂಡಿದ್ದಾರೆ. 7,22,080 ಪುರುಷ, 7,36,574 ಮಹಿಳೆ, 14,773 ಪಿಡಬ್ಲ್ಯುಡಿ(ಪರ್ಸನ್ಸ್ ವಿತ್ ಡಿಸ್‍ಎಬಿಲಿಟಿ) 26 ಇತರೆ ಮತದಾರರಿದ್ದಾರೆ.

ಚುನಾವಣಾ ವೇಳಾಪಟ್ಟಿ : ದಿನಾಂಕ: 13-04-2023 ಚುನಾವಣಾ ಅಧಿಸೂಚನೆ ದಿನಾಂಕ. ದಿ: 20-04-2023 ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನ. ದಿ: 21-04-2023 ಉಮೇದುವಾರಿಕೆ ಪರಿಶೀಲನೆ ದಿನ.

ದಿ: 24-04-2023 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ.

ದಿ: 10-05-2023 ಮತದಾನದ ದಿನ. ದಿ: 13-05-2023 ಮತ ಎಣಿಕೆ ದಿನ. ದಿ: 15-05-2023 ಮತದಾನ ಮುಕ್ತಾಯ ದಿನ.

ಮತಗಟ್ಟೆಗಳ:
ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ.

ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ.

ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ.

ತೀರ್ಥಹಳ್ಳಿ-114 ಯುಆರ್ ಅನಂತಮೂರ್ತಿ ಕಾಲೇಜು

ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ.

ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ.

ಸಾಗರ-117 ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ.

ಜಿಲ್ಲೆಯಲ್ಲಿ 2023 ರ ವಿಧಾನ ಸಭಾ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ಬಳಸಿ ನಿರ್ವಹಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 3350 ಬ್ಯಾಲೆಟ್ ಯೂನಿಟ್‍ಗಳು, 2352 ಕಂಟ್ರೋಲ್ ಯುನಿಟ್ ಹಾಗೂ 2417 ವಿವಿ ಪ್ಯಾಟ್ ಲಭ್ಯವಿರುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ದಿನದಂದು ಚುನಾವಣಾ ಕಾರ್ಯ ನಿರ್ವಹಿಸಲು 8520 ಅಧಿಕಾರಿ/ಸಿಬ್ಬಂದಿಗಳ ಅವಶ್ಯಕತೆ ಇದೆ. ಈಗಾಗಲೇ 10700 ಸಿಬ್ಬಂದಿಗಳ ಮಾಹಿತಿ ಸಂಗ್ರಹಿಸಲಾಗಿದೆ.

ಉಮೇದುವಾರಿಕೆ ಸಲ್ಲಿಕೆಯ ಅವಧಿಯವರೆಗೆ ಅಂದರೆ ಏಪ್ರಿಲ್ 20 ರವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಹಾಗೂ ನಮೂನೆ 8 ರಲ್ಲಿ ತಿದ್ದುಪಡಿಗೆ ಅವಕಾಶವಿರುತ್ತದೆ.

Election Preparations in Shivamogga ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 36 ಕಡೆ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. 7 ಚೆಕ್‍ಪೋಸ್ಟ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಚುನಾವಣೆಗೆ 6 ಸಿಆರ್‍ಪಿಎಫ್ ತಂಡಗಳು ಬರಲಿವೆ. ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ 55 ಜನರಿಗೆ ಗಡೀಪಾರು ಆದೇಶ ಮತ್ತು ಕಳೆದ 5-6 ತಿಂಗಳಿಂದ 6 ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

S P Office Shivamogga ಕೈಗಾರಿಕಾ ಸುರಕ್ಷತೆ ದೃಷ್ಟಿಯಿಂದ ಉದ್ಯಮಿಗಳು ಎಲ್ಲಾ ಕ್ರಮಗಳನ್ನ ಅನುಸರಿಸಬೇಕು- ಮಿಥುನ್ ಕುಮಾರ್

0

S P Office Shivamogga  ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ದೃಷ್ಠಿಯಿಂದ ಉದ್ಯಮಿಗಳು ಎಲ್ಲ ರೀತಿ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಪೊಲೀಸ್‌ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಅವರು ಹೇಳಿದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಕೈಗಾರಿಕೋದ್ಯಮಿಗಳ ಸಂವಾದ “ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೈಗಾರಿಕಾ ಪ್ರದೇಶವು ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡುವ ಮೂಲಕ ಜೀವನ ರೂಪಿಸಿಕೊಳ್ಳುವಂತೆ ಮಾಡಿದೆ. ಎಲ್ಲ ಉದ್ಯಮಿಗಳ ಸೇವೆಯು ಸಾರ್ಥಕತೆಯಿಂದ ಕೂಡಿದೆ. ಶಿವಮೊಗ್ಗ ಜಿಲ್ಲೆಯ ಆರ್ಥಿಕ ಶಕ್ತಿ ಸಾಮಾರ್ಥ್ಯ ವೃದ್ಧಿಸುವಲ್ಲಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೊಡುಗೆ ಇದೆ ಎಂದು ತಿಳಿಸಿದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ದೃಷ್ಠಿಯಿಂದ ಯಾವುದೇ ಮಾಹಿತಿ, ಘಟನೆ ನಡೆದರೂ ಪೊಲೀಸ್‌ ಇಲಾಖೆ ಗಮನಕ್ಕೆ ತರಬೇಕು. ತುರ್ತು ಸಂದರ್ಭಗಳಲ್ಲಿ ಹತ್ತಿರದ ಠಾಣೆಯ ಸಂಖ್ಯೆ ಅಥವಾ 112 ಕ್ಕೆ ಕರೆ ಮಾಡಿ ಕೂಡಲೇ ಮಾಹಿತಿ ನೀಡಬೇಕು. ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ದೃಷ್ಠಿಯಿಂದ ಪೊಲೀಸ್‌ ಇಲಾಖೆ ಸಂಪೂರ್ಣ ಕ್ರಮ ವಹಿಸಲಿದೆ ಎಂದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಸಂಸ್ಥೆಯ ಅಧ್ಯಕ್ಷ ಎಂ.ಎ.ರಮೇಶ್‌ ಹೆಗ್ಡೆ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕೆಲಸಗಾರರು ಓಡಾಟ ಮಾಡುವುದರಿಂದ ಪೊಲೀಸ್‌ ಔಟ್‌ ಪೋಸ್ಟ್‌ ಅವಶ್ಯಕತೆ ಇದೆ. ಈ ಬಗ್ಗೆ ಗೃಹ ಸಚಿವರ ಗಮನಕ್ಕೂ ತರಲಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರ ಪೊಲೀಸ್‌ ಔಟ್‌ ಪೋಸ್ಟ್‌ ತೆರೆಯಲು ಕ್ರಮ ವಹಿಸಬೇಕು ಎಂದು ಹೇಳಿದರು.

S P Office Shivamogga  ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಕೈಗಾರಿಕಾ ಪ್ರದೇಶದ ಚಲನವಲನಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ಅಪರಾಧ ಕೃತ್ಯಗಳ ನಿಯಂತ್ರಣ ದೃಷ್ಠಿಯಿಂದ ಸಿಸಿ ಕ್ಯಾಮೆರಾ ಅಳವಡಿಸಿರುವುದು ಉಪಯುಕ್ತವಾಗಲಿದೆ. ಕೈಗಾರಿಕಾ ಉದ್ಯಮಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಸಂಸ್ಥೆಯ ಕಾರ್ಯದರ್ಶಿ ಕಿರಣ್‌ ಕುಮಾರ್‌, ನಿರ್ದೇಶಕ ಕೆ.ವಿ.ನಾರಾಯಣ, ಡಿ.ಜಿ.ಬೆನಕಪ್ಪ, ಪರಮಶೇಖರ್‌, ಎಂ.ರಾಜು, ಎಂ.ಎನ್‌.ಸುರೇಶ್‌, ಡಿ.ಬಿ.ಅಶೋಕ್‌, ವಿಶ್ವೇಶ್ವರಯ್ಯ, ನಂದನ್‌, ಜೈಕರ್‌, ಶಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

DC Dr. Selvamani ವಿಧಾನಸಭಾ ಚುನಾವಣೆ 2023

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

KPSC Exam 2023 ಕೆಪಿಎಸ್ ಸಿ ಸಾಂಖ್ಯಿಕ ಮತ್ತು ಕಾರ್ಮಿಕ ಇಲಾಖೆಯ ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಗೆ ಪೂರ್ವ ಸಿದ್ಧತೆ

0

KPSC Exam 2023 ಕರ್ನಾಟಕ ಲೋಕ ಸೇವಾ ಆಯೋಗವು ಏಪ್ರಿಲ್ 1 ಮತ್ತು 2 ರಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ ಮತ್ತು ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರ ಹುದ್ದೆಗಳಿಗೆ ನಡೆಸಲಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಿಲ್ಲೆಯ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳ 18 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಏಪ್ರಿಲ್ 1 ಬೆಳಿಗ್ಗೆ 10 ರಿಂದ 12 ರವರೆಗೆ ಶಿವಮೊಗ್ಗ ಮತ್ತು ಭದ್ರಾವತಿ ಅವಳಿ ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 4216ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.

ಏಪ್ರಿಲ್ 2 ರಂದು 10 ರಿಂದ 11.30ರವರೆಗೆ ಪರೀಕ್ಷೆಗಳು ನಡೆಯುತ್ತಿದೆ. ಅಂದು ಒಟ್ಟು 4560 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಈ ಪರೀಕ್ಷೆಗಳು ಸುಗಮವಾಗಿ ನಡೆಯುವಲ್ಲಿ ಪ್ರತಿ ಕೇಂದ್ರಕ್ಕೆ ಓರ್ವರಂತೆ ಗ್ರೂಫ್ ಬಿ. ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಮಾರ್ಗಾಧಿಕಾರಿ, ವೀಕ್ಷಕರು ಹಾಗೂ ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ.

ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಪರೀಕ್ಷಾ ಮಾರ್ಗಸೂಚಿಯಂತೆ ಪರೀಕ್ಷಾ ದಿನದಂದು ತಮ್ಮ ಜವಾಬ್ದಾರಿಯರಿತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದವರು ತಿಳಿಸಿದರು.

* ಈ ಪರೀಕ್ಷೆಗಳು ಪೂರ್ವಯೋಜನೆಯಂತೆ ನಿಗಧಿಪಡಿಸಿದ ದಿನಾಂಕದಂದು ಸೂಚಿತ ಅವಧಿಯಲ್ಲಿ ನಡೆಯಲಿವೆ. ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಪರೀಕ್ಷಾರ್ಥಿಗಳು ಸಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಪರೀಕ್ಷೆಯಲ್ಲಿ ಭಾಗವಹಿಸಿ ಎಂದು ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಈ ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಅವಧಿಯಲ್ಲಿ ಪರೀಕ್ಷಾರ್ಥಿಗಳು ಪರೀಕ್ಷೆ ನಡೆಯುವ ಒಂದು ಗಂಟೆ ಮೊದಲೇ ಕೇಂದ್ರದಲ್ಲಿ ಹಾಜರಿರುವಂತೆ ಹಾಗೂ ಅನವಶ್ಯಕವಾಗಿ ಗುಂಪುಗೂಡದಂತೆ ಸೂಚಿಸಲಾಗಿದೆ. ಪರೀಕ್ಷೆಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯಲು ಪೊಲೀಸ್ ಸೇರಿದಂತೆ ಅಗತ್ಯ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್, ಲ್ಯಾಪ್‌ಟಾಪ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ವಿದ್ಯುನ್ಮಾನ ಉಪಕರಣಗಳು, ಸ್ಮಾರ್ಟ್ವಾಚುಗಳನ್ನು ಕೊಂಡೊಯ್ಯದಂತೆ ಸೂಚಿಸಲಾಗಿದೆ.ಕೇಂದ್ರದ ಮೇಲ್ವಿಚಾರಕರು ನೀರು, ಶೌಚಾಲಯ, ಶುದ್ಧ ಗಾಳಿ, ಬೆಳಕು ಸೇರಿದಂತೆ ಕೇಂದ್ರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

KPSC Exam 2023 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಶೈಲ ಬಿರಾದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರ್, ಜಿಲ್ಲಾ ಖಜಾನಾಧಿಕಾರಿ ಹೆಚ್.ಎಸ್.ಸಾವಿತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯ ಅಧಿಕ್ಷಕರು, ನಿರೀಕ್ಷಣಾಧಿಕಾರಿಗಳು ಹಾಗೂ ವೀಕ್ಷಕರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

k.b. ashok naik| ಶಾಸಕ ಕೆ.ಬಿ.ಅಶೋಕ್ ನಾಯಕ್ ಪತ್ರಿಕಾಗೋಷ್ಠಿ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sweda Women’s Organization ಆತ್ಮವಿಶ್ವಾಸದಿಂದ ಮಹಿಳೆ ಮುನ್ನಡೆದರೆ ಉದ್ಯಮದಲ್ಲಿ ಯಶಸ್ವಿ- ಎನ್.ಗೋಪಿನಾಥ್

0

Sweda Women’s Organization ಆತ್ಮವಿಶ್ವಾಸ ಹಾಗೂ ಶ್ರದ್ಧೆಯಿಂದ ಮುನ್ನಡೆದರೆ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗುವ ಜತೆಯಲ್ಲಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್‌.ಗೋಪಿನಾಥ್‌ ಅವರು ಹೇಳಿದರು.

ಶಿವಮೊಗ್ಗದ ಮಥುರಾ ಪಾರಾಡೈಸ್‌ ಸಭಾಂಗಣದಲ್ಲಿ ಸ್ವೇದ ಮಹಿಳಾ ಸಂಘಟನೆ ಮತ್ತು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಶಿವಮೊಗ್ಗ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲಾಭಿವೃದ್ಧಿ ಕಾರ್ಯಕ್ರಮ ಮತ್ತು ಕ್ಯಾನ್ಸರ್‌ ಉಚಿತ ತಪಾಸಣಾ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸ್ವೇದ ಮಹಿಳಾ ಸಂಸ್ಥೆಯು ಮಹಿಳೆಯರಿಗೆ ಕೌಶಲ್ಯಯುತ ತರಬೇತಿ ನೀಡುವ ಜೊತೆಯಲ್ಲಿ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಹಿಳೆಯರು ಮನೆಗಳಲ್ಲಿ ತಯಾರಿಸುವ ಆಹಾರ, ತಿನಿಸು, ಕರಕುಶಲ ವಸ್ತುಗಳ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದೆ. ಮಹಿಳೆಯರು ಸರ್ಕಾರದ ಆರ್ಥಿಕ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರೆಡ್‌ ಕ್ರಾಸ್‌ ಸಂಸ್ಥೆಯು ತುರ್ತು ಸಂದರ್ಭಗಳಲ್ಲಿ ಅಪಾರ ಸೇವೇಗಳನ್ನು ಸಲ್ಲಿಸುವ ಕಾರ್ಯ ನಡೆಸುತ್ತಿದೆ. ದೇಶಾದ್ಯಂತ ಲಕ್ಷಾಂತರ ಜನರ ಸೇವೆಯಿಂದ ಹೆಚ್ಚು ಜನರಿಗೆ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ಸ್ವೇದ ಮಹಿಳಾ ಸಂಘಟನೆ ಅಧ್ಯಕ್ಷೆ ಲಕ್ಷ್ಮೀದೇವಿ ಗೋಪಿನಾಥ್‌ ಮಾತನಾಡಿ, ಮಹಿಳೆಯರು ಸಬಲೀಕರಣಗೊಳ್ಳಲು ಮತ್ತು ಉದ್ಯಮಶೀಲತೆ ಮಾದರಿ ಮೂಲಕ ಸಂಪೂರ್ಣ ಸಾಮಾರ್ಥ್ಯ ಅರಿತುಕೊಳ್ಳಲು ವೇದಿಕೆ ಒದಗಿಸುವ ಕೆಲಸವನ್ನು ಸ್ವೇದ ಸಂಘಟನೆ ಮಾಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ, ಸ್ವಂತ ಸಾಮಾರ್ಥ್ಯದಿಂದ ದುಡಿದು ಜೀವನ ರೂಪಿಸಿಕೊಳ್ಳಲು ಆಸಕ್ತಿ ಇರುವ ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಸ್ವೇದ ಮಹಿಳಾ ಸಂಘಟನೆ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್‌ ಮಾತನಾಡಿ, ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ವೇದಿಕೆಯಾಗಿ ಸ್ವೇದ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಹೆಚ್ಚು ಹೆಚ್ಚು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

Sweda Women’s Organization ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ‌, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಶಿವಮೊಗ್ಗ ಜಿಲ್ಲಾ ಘಟಕದ ಅಜೀವ ಸದಸ್ಯ ಜಿ.ವಿಜಯ್‌ಕುಮಾರ್‌ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಮಹಾದೇವ್‌ ಅವರು ವಿಶೇಷ ಉಪನ್ಯಾಸ ನೀಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ, ಕೌಶಲ್ಯಾಭಿವೃದ್ಧಿ ಚೇರ್ಮನ್ ಗಣೇಶ್‌ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Aadhaar Link to PAN Card ಪಾನ್ ಕಾರ್ಡಿಗೆ ಆಧಾರ್ ಲಿಂಕ್ ಸಾರ್ವಜನಿಕರ ಸುಲಿಗೆ-ರಘುವೀರ್ ಸಿಂಗ್

0

Aadhaar Link to PAN Card ಕೇಂದ್ರ ಸರ್ಕಾರ ಪಾನ್ ಕಾರ್ಡ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸುವ ನೆಪದಲ್ಲಿ ಸಾರ್ವಜನಿಕರಿಂದ ಸುಲಿಗೆಗೆ ಇಳಿದಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ. ರಘುವೀರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ಪಾನ್‍ಕಾರ್ಡ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಲು ಆದೇಶ ಹೊರಡಿಸಿರುವುದು ಸರಿಯಷ್ಟೆ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ತಪ್ಪಲಿದೆ. ಆದರೆ, ಇದೇ ನೆಪದಲ್ಲಿ ಸಾರ್ವಜನಿಕರಿಂದ ಸುಲಿಗೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಮಾರ್ಚ್ 30ಕ್ಕೆ ಆಧಾರ್ ಲಿಂಕ್ ಮಾಡಿಸಲು ಕೊನೆ ದಿನ ಎಂದು ಹೇಳಿತ್ತು. ಈಗ ಅದನ್ನು ಜೂನ್ 30ರ ವರೆಗೆ ವಿಸ್ತರಿಸಿದ್ದರೂ ಲಿಂಕ್ ಮಾಡಿಸದೇ ಇರುವವರು ಲಿಂಕ್ ಮಾಡಿಸಲು ಹೋದಾಗ 1 ಸಾವಿರ ರೂ.ಗಳನ್ನು ದಂಡವಾಗಿ ತೆರಬೇಕಾಗಿದೆ. ಪಾನ್ ಕಾರ್ಡ್ ಅನ್ನು ಬಹುತೇಕ ಎಲ್ಲರೂ ಪಡೆದಿರುತ್ತಾರೆ. 2018ಕ್ಕೆ ಮುಂಚೆ ಪಾನ್ ಕಾರ್ಡ್ ಮಾಡಿಸುವಾಗ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯುತ್ತಿರಲಿಲ್ಲ. ಬ್ಯಾಂಕ್ ಖಾತೆಯನ್ನು ತೆರೆಯಲೋ, ಲೋನ್ ಮಾಡಿಸಲೆಂದೇ ಸಾರ್ವಜನಿಕರು ಪಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೀಗೆ ಪಾನ್ ಕಾರ್ಡ್ ಪಡೆದವರೆಲ್ಲರೂ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದಕ್ಕೆ ಸರ್ಕಾರದ ವಿನಾಯ್ತಿ ಸಹ ಇದೆ.
Aadhaar Link to PAN Card ಆದರೆ ಇದೀಗ ಪಾನ್‍ಕಾರ್ಡ್‍ಗೆ ಆಧಾರ್ ಸಂಖ್ಯೆ ಜೋಡಿಸಲು ಸಮಯ ನಿಗಧಿಪಡಿಸಿ, ಅದಕ್ಕೆ ದಂಡವನ್ನೂ ತೆರುವಂತೆ ಸಾರ್ವಜನಿಕರನ್ನು ಒತ್ತಾಯ ಪಡಿಸುತ್ತಿರುವುದು ಸರಿಯಲ್ಲ. ಅಲ್ಲದೆ, ಏಪ್ರಿಲ್ 1ರ ನಂತರ ದಂಡದ ಮಿತಿಯನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸುವುದಾಗಿ ಹೇಳಿರುವ ಕೇಂದ್ರ ಸರ್ಕಾರದ ಹೇಳಿಕೆ ನೀಡಿರುವುದರಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರು, ಆದಾಯ ತೆರೆಗೆ ಪಾವತಿಸಲು ಶಕ್ತರಲ್ಲದಿದ್ದರೂ ಆಧಾರ್ ಸಂಖ್ಯೆ ಜೋಡಣೆಗೆ ಅನವಶ್ಯಕವಾಗಿ 1 ಸಾವಿರ ದಂಡ ತೆರಬೇಕಾಗಿದೆ. ಇದು ಸರ್ಕಾರದಿಂದಲೇ ಹಗಲು ದರೋಡೆ ಅಲ್ಲದೇ ಮತ್ತೇನು ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಕೂಡಲೇ ಈ ದಂಡವನ್ನು ಹಿಂಪಡೆಯಬೇಕು. ದಂಡರಹಿತವಾಗಿ ಸಾರ್ವಜನಿಕರು ಆಧಾರ್ ಸಂಖ್ಯೆ ಜೋಡಣೆಗೆ ಅವಕಾಶ ಮಾಡಿಕೊಡಬೇಕು. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಿಕೊಳ್ಳಲು, ಬೇಡದ ವಿಷಯಗಳಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುವಂತೆ ವಿವಿಧೆಡೆ ಅನಕ್ಷರಸ್ಥ ಮತ್ತು ಮಾಹಿತಿ ಕೊರತೆ ಇರುವವರ ಪಾನ್‍ಕಾರ್ಡ್‍ಗಳಿಗೆ ಆಧಾರ್ ಜೋಡಣೆ ಮಾಡಿಸುವ ಅಭಿಯಾನ ಮಾಡಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Congress message to Opposition parties ಸಾಮೂಹಿಕ ರಾಜೀನಾಮೆಗೆ ಕೈ ಸಂಸದರ ಪ್ರಸ್ತಾವನೆ

0

Congress message to Opposition parties ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ನಂತರ ಸುಧೀರ್ಘ ರಾಜಕೀಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.

ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ಅನರ್ಹಗೊಳಿಸುವುದನ್ನು ಖಂಡಿಸಿ ಪಕ್ಷದ ಎಲ್ಲಾ ಸಂಸದರು ರಾಜೀನಾಮೆ ನೀಡಬೇಕು ಎಂಬ ಸಲಹೆಯನ್ನ ಕೆಲವು ಯುವ ಸಂಸದರು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.

ಅಧಿಕೃತ ನಿವಾಸ ತೆರವುಗೊಳಿಸಲು ಲೋಕಸಭಾ ಕಾರ್ಯಾಲಯವು ನೀಡಿದ ನೋಟಿಸ್ ಅನ್ನು ಪಾಲಿಸಲಾಗುತ್ತದೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ.

Congress message to Opposition parties ರಾಹುಲ್ ಗಾಂಧಿ ಅವರನ್ನು ಅವಮಾನಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರ ಕೈಗೊಂಡ ಕ್ರಮ ಇದು ಎಂದು ಕಾಂಗ್ರೆಸ್ ಟೀಕಿಸಿದೆ. ರಾಹುಲ್ ಗಾಂಧಿ ಅವರು ಬಂದರೆಯನ್ನು ಏಪ್ರಿಲ್ 22ಕ್ಕೆ ಮೊದಲು ತೆರವು ಮಾಡಬೇಕಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Health Festival on April 2 ಏಪ್ರಿಲ್2 ರಂದು ಆರೋಗ್ಯ ಉತ್ಸವ -ಡಾ.ಬಿ.ಸಿ.ಪೃಥ್ವಿ

0

Health Festival on April 2 ಮಣಿಪಾಲ ಆಸ್ಪತ್ರೆ ಬೆಂಗಳೂರು ವತಿಯಿಂದ ನಗರದಲ್ಲಿ ಏ. ೦೨ರಂದು ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿರುವ ಆರೋಗ್ಯ ಉತ್ಸವಃ ಅಧ್ಯಾಯ-2 ಕಾರ್ಯಕ್ರಮದ ಪೂರ್ವಭಾವಿಯಾಗಿ ಮಾ. 30ರ ಗುರುವಾರ ಬೆಳಿಗ್ಗೆ 10.30ಕ್ಕೆ “ಆರೋಗ್ಯ ಜನಜಾಗೃತಿ ಅರಿವು ಜಾಥಾ ನಡೆಯಲಿದೆ.

ಗೋಪಿ ವೃತ್ತದಿಂದ ರಾಮಣ್ಣ ಶ್ರೇಷ್ಟಿ ಪಾರ್ಕ್ವರೆಗೆ ನಡೆಯುವ ಈ ಜಾಥಾವನ್ನು ಜಿಲ್ಲಾ ರಕ್ಷಣಾಽಕಾರಿ ಜಿ. ಕೆ. ಮಿಥುನ್ ಕುಮಾರ್ ಚಾಲನೆಗೊಳಿಸಲಿದ್ದಾರೆ.

Health Festival on April 2 ಈ ಜಾಥಾದಲ್ಲಿ ಸಮಾನ ಮನಸ್ಕ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ – ವಿದ್ಯಾರ್ಥಿನಿಯರು, ನರ್ಸಿಂಗ್ ವೃತ್ತಿಯಲ್ಲಿ ತೊಡಗಿರುವವರು, ತಜ್ಞ ವೈದ್ಯರುಗಳು ಪಾಲ್ಗೊಳ್ಳಲಿದ್ದಾರೆ.

ಸಾರ್ವಜನಿಕರೂ ಸಹ ಈ ಜಾಥಾದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಮೆಟ್ರೋ ಯುನೈಟೆಡ್ ಹೆಲ್ತ್ಕೇರ್‌ನ ವೈದ್ಯಕೀಯ ನಿರ್ದೇಶಕರು, ವಿನ್‌ಲೈನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಬಿ. ಸಿ. ಪೃಥ್ವಿ ಕೋರಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.